ಎಲ್ಲರನ್ನೂ ಮೆಚ್ಚಿಸಬೇಕೋ? ನಮ್ಮನ್ನು ಮೆಚ್ಚಿಸಿಕೊಂಡರೆ ಸಾಕೋ! 

Team Udayavani, Dec 25, 2018, 6:00 AM IST

ಕೆಲವು ಹುಡುಗರು ತನ್ನ ಪ್ರಿಯತಮೆಯನ್ನು ಮೆಚ್ಚಿಸಲು ಹಾಡು ಕಲಿತು ಅವಳ ಮುಂದೆ ಹಾಡುತ್ತಾರೆ. ಕೆಲವರು ಅವಳ ಜತೆಯಲ್ಲಿ ನರ್ತಿಸಬೇಕು ಎಂದು ನೃತ್ಯ ಕಲಿಯುತ್ತಾರೆ. ಜಿಮ್‌ಗೆ ಹೋಗಿ ದೇಹದಂಡನೆ ಮಾಡಿಕೊಳ್ಳುತ್ತಾರೆ. ತಮ್ಮ ಹೇರ್‌ ಸ್ಟೈಲ್‌ ಬದಲಿಸಿಕೊಳ್ಳುತ್ತಾರೆ. ಒಳ್ಳೆಯ ಬಟ್ಟೆ ಹಾಕಿಕೊಳ್ಳಲು ಪ್ರಾರಂಭಿಸುತ್ತಾರೆ. ಹಬ್ಬಗಳ ವಿಶೇಷ ದಿನಗಳಲ್ಲಿ ತನ್ನ ಪ್ರಿಯೆಗೆ ಏನಾದರೂ ಉಡುಗೊರೆ ನೀಡಿ ಅವಳನ್ನು ಮೆಚ್ಚಿಸಲು ನೋಡುತ್ತಾರೆ. ಹೀಗೆ ಒಬ್ಬ ಪ್ರೇಮಿ ತನ್ನ ಪ್ರಿಯತಮೆಯನ್ನು ಮೆಚ್ಚಿಸಲಿಕ್ಕೆ ನಾನಾ ವಿಧದಲ್ಲಿ ಪ್ರಯತ್ನಿಸುತ್ತಾನೆ. ಅದಕ್ಕಾಗಿ ಏನನ್ನು ಮಾಡಲೂ ತಯಾರಿರುತ್ತಾನೆ. ಎಲ್ಲರನ್ನೂ ದೂರಮಾಡಿ, ತನ್ನ ತಂದೆ, ತಾಯಿ, ಬಂಧು, ಬಾಂಧವರೊಂದಿಗೆ, ಎಲ್ಲ ಸ್ನೇಹಿತರೊಂದಿಗೆ ಜಗಳವಾಡಿದರೂ ಸರಿಯೇ ಅವಳನ್ನು ಮೆಚ್ಚಿಸಬೇಕೆನ್ನುವುದು ಅವನ ಮನದ ಇರಾದೆಯಾಗಿರುತ್ತದೆ. 

ಜೀವನದಲ್ಲಿ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ಒಂದರಿಂದ ಒಂದು ಆಕರ್ಷಿಸಲ್ಪಡುತ್ತದೆ. ಮನುಷ್ಯ ಮಾತ್ರವೇ ಅಲ್ಲದೆ ಪ್ರಕೃತಿಯೂ ಸಹ ಹಾಗೆಯೇ. ಅಲ್ಲಿರುವ ಎಲ್ಲವೂ ಒಂದರಿಂದ ಒಂದು ಆಕರ್ಷಿಸಲ್ಪಡುತ್ತದೆ. ಸುಂದರವಾದ ಭೂಮಿಯನ್ನು ಹಸಿರಾಗಿಸಲು ಆಕಾಶ ಮಳೆ ಸುರಿಸುತ್ತದೆ. ದುಂಬಿಯೊಂದನ್ನು ಆಕರ್ಷಿಸುವ ಸಲುವಾಗಿ ಹೂವು ತಾನು ಹೊಸತನದಿಂದ ಅರಳಿ ನಿಲ್ಲುತ್ತದೆ. ಹುಣ್ಣಿಮೆಯಂದು ಸಮುದ್ರದ ಅಲೆಗಳು ಚಂದಿರನಿಗಾಗಿ ಎತ್ತರ ಎತ್ತರಕ್ಕೆ ಜಿಗಿಯುತ್ತವೆ. ಇಲ್ಲಿ ಎಲ್ಲವೂ ತಮ್ಮ ಸ್ವಭಾವವನ್ನು ವಿಶೇಷ ರೀತಿಯಲ್ಲಿ ತೋರ್ಪಡಿಸಿಕೊಂಡು ಇನ್ನೊಂದು ವಿಷಯ ವಸ್ತುವನ್ನು ಆಕರ್ಷಿಸುತ್ತವೆ. ಮನುಷ್ಯ ಎಲ್ಲದಕ್ಕೂ ಹಾಗೆ ಮಾಡುವುದು ಸಾಧ್ಯವಿಲ್ಲ. ಆದರೂ ತಮಗೆ ಬೇಕಾದವರನ್ನು ಬೇಕಾದ ಸಮಯದಲ್ಲಿ ಮೆಚ್ಚುಗೆ ಪಡಿಸುವುದಕ್ಕೆ ಮುಂದಾಗುತ್ತಾರೆ. 

ತಮಗೆ ಬೇಕಾದದ್ದನ್ನು ಪಡೆದುಕೊಳ್ಳುವ ಸಲುವಾಗಿ ಕೆಲವರು ಅತಿಯಾಗಿ ಮೆಚ್ಚುಗೆ ಸೂಚಿಸುತ್ತಾರೆ. ಕೆಲವು ಬಾರಿ ಈ ತಂತ್ರವು ಫ‌ಲಿಸುತ್ತದೆ. ಹಾಗೆಯೇ ಇನ್ನೂ ಕೆಲವು ಬಾರಿ ಅತಿಯಾದ ಮೆಚ್ಚುಗೆ ಸೂಚಿಸುವಿಕೆಯು ನಮ್ಮಲ್ಲಿನ ಟೊಳ್ಳುತನವನ್ನು ನಾಟಕೀಯತೆಯನ್ನೂ ತೋರಿಸುತ್ತದೆ. 

ನಾವು ಭಗವಂತನಿಗೆ ಹತ್ತಿರವಾಗುವ ಸಲುವಾಗಿ ಅವನು ನನ್ನ ಕಡೆ ನೋಡಲಿ ಎನ್ನುವ ಕಾರಣದಿಂದ ಅವನನ್ನು ಪೂಜಿಸಿ, ಭಜನೆ ಮಾಡಿ, ಅವನಿಗಾಗಿ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ನಮ್ಮ ಭಕ್ತಿಯನ್ನು ಭಗವಂತನು ಮೆಚ್ಚಿಕೊಂಡು ನಮ್ಮ ಪಾಪ ಕರ್ಮಗಳನ್ನು ಕ್ಷಮಿಸಿ, ನಮ್ಮನ್ನು ಕಾಪಾಡಲಿ, ನಮಗೆ ಅಂತಿಮ ಮೋಕ್ಷ ನೀಡಲಿ ಎನ್ನುವ ಕಾರಣಕ್ಕೆ ಭಕ್ತಿ ಮಾರ್ಗ, ಜ್ಞಾನಮಾರ್ಗ, ಕರ್ಮಮಾರ್ಗ ಎನ್ನುವ ನಾನಾ ಮಾರ್ಗಗಳಿಂದ ಭಗವಂತನನ್ನು ಮೆಚ್ಚಿಸಲು ನೋಡುತ್ತೇವೆ.

ಪ್ರೀತಿಯಲ್ಲಿ ಮೆಚ್ಚುಗೆಯೆಂಬ ಹುಚ್ಚಾಟ 
ಪ್ರೇಮಿಗಳು ತಮ್ಮ ಪ್ರೀತಿಯನ್ನು ಪಡೆದುಕೊಳ್ಳುವ ಸಲುವಾಗಿ ಅನೇಕ ಬಗೆಯಲ್ಲಿ ಪ್ರಯತ್ನಿಸುತ್ತಾರೆ. ಕೆಲವರು ರಕ್ತದಲ್ಲಿ ಕಾಗದ ಬರೆಯುತ್ತಾರೆ, ಇನ್ನೂ ಕೆಲವರು ತಮ್ಮ ಕೈ ಮೇಲೆ ಪ್ರಿಯತಮೆಯ ಹೆಸರು ಬರೆದುಕೊಳ್ಳುತ್ತಾರೆ, ಪ್ರೇಮಿಯ ಜೊತೆ ಜಗಳವಾದರೆ ಬ್ಲೇಡಿನಿಂದ ಕೊಯ್ದುಕೊಳ್ಳುತ್ತಾರೆ, ಲವ್‌ ಫೇಲ್ಯೂರ್‌ ಆದರೆ ವಿಷ ತೆಗೆದುಕೊಳ್ಳುತ್ತಾರೆ, ಇನ್ನೂ ಏನೇನೋ ಮಾಡುತ್ತಾರೆ. ಇನ್ನು ಕೆಲವರು ಪ್ರತಿದಿನ ರಾತ್ರಿ ಅತಿಯಾಗಿ ಕುಡಿದು, ತಮ್ಮ ಪ್ರಿಯತಮೆಗೆ ಫೋನ್‌ ಮಾಡಿ ನೀನು ನನ್ನ ಪ್ರೀತಿನ ಒಪ್ಕೊಳಲ್ಲ ಅಂದ್ರೆ ನಾನು ಹೀಗೆ ಕುಡಿದು ಸತ್ತು ಹೋಗ್ತಿàನಿ ಐ ಲವ್‌ ಯೂ ಸೋ ಮಚ್‌ ಎಂದೆಲ್ಲಾ ಅವಳನ್ನು ಎಮೋಷನಲ್ಲಾಗಿ ಬ್ಲಾಕ್‌ವೆುಲ್‌ ಮಾಡುತ್ತಾರೆ. ಅವಳನ್ನು ಮೆಚ್ಚಿಸಲು ನೋಡುತ್ತಾರೆ.

ಇನ್ನು ಕೆಲವು ಹುಡುಗರು ತನ್ನ ಪ್ರಿಯತಮೆಯನ್ನು ಮೆಚ್ಚಿಸಲು ಹಾಡು ಕಲಿತು ಅವಳ ಮುಂದೆ ಹಾಡುತ್ತಾರೆ. ಕೆಲವರು ಅವಳ ಜತೆಯಲ್ಲಿ ನರ್ತಿಸಬೇಕು ಎಂದು ನೃತ್ಯ ಕಲಿಯುತ್ತಾರೆ. ಜಿಮ್‌ಗೆ ಹೋಗಿ ದೇಹದಂಡನೆ ಮಾಡಿಕೊಳ್ಳುತ್ತಾರೆ. ತಮ್ಮ ಹೇರ್‌ ಸ್ಟೈಲ್‌ ಬದಲಿಸಿಕೊಳ್ಳುತ್ತಾರೆ. ಒಳ್ಳೆಯ ಬಟ್ಟೆ ಹಾಕಿಕೊಳ್ಳಲು ಪ್ರಾರಂಭಿಸುತ್ತಾರೆ. ಹಬ್ಬಗಳ ವಿಶೇಷ ದಿನಗಳಲ್ಲಿ ತನ್ನ ಪ್ರಿಯೆಗೆ ಏನಾದರೂ ಉಡುಗೊರೆ ನೀಡಿ ಅವಳನ್ನು ಮೆಚ್ಚಿಸಲು ನೋಡುತ್ತಾರೆ. ಹೀಗೆ ಒಬ್ಬ ಪ್ರೇಮಿ ತನ್ನ ಪ್ರಿಯತಮೆಯನ್ನು ಮೆಚ್ಚಿಸಲಿಕ್ಕೆ ನಾನಾ ವಿಧದಲ್ಲಿ ಪ್ರಯತ್ನಿಸುತ್ತಾನೆ. ಅದಕ್ಕಾಗಿ ಏನನ್ನು ಮಾಡಲೂ ತಯಾರಿರುತ್ತಾನೆ. ಎಲ್ಲರನ್ನೂ ದೂರಮಾಡಿ, ತನ್ನ ತಂದೆ, ತಾಯಿ, ಬಂಧು, ಬಾಂಧವರೊಂದಿಗೆ, ಎಲ್ಲ ಸ್ನೇಹಿತರೊಂದಿಗೆ ಜಗಳವಾಡಿದರೂ ಸರಿಯೇ ಅವಳನ್ನು ಮೆಚ್ಚಿಸಬೇಕೆನ್ನುವುದು ಅವನ ಮನದ ಇರಾದೆಯಾಗಿರುತ್ತದೆ. ಇದಕ್ಕಾಗಿ ಅವನು ತನ್ನದೆನ್ನುವ ಊರು, ಮನೆ ಮಾರುಗಳನ್ನು ತ್ಯಜಿಸಲೂ ಸಿದ್ಧನಿರುತ್ತಾನೆ. ತನ್ನ ಪ್ರೀತಿ ಜಗತ್ತಿನ ಎಲ್ಲಾ ಪ್ರೇಮಿಗಳ ಪ್ರೀತಿಗಿಂತಲೂ ದೊಡ್ಡದು. ಅದನ್ನು ಹೇಗೆ ನಿನಗೆ ತೋರಿಸಲಿ ಎಂದು ಚಡಪಡಿಸುತ್ತಾನೆ. ಪ್ರೇಮಿ ಅದು ಯಾವ ರೀತಿಯಲ್ಲಿ ತನ್ನ ಪ್ರಿಯೆಯನ್ನು ಮೆಚ್ಚಿಸಲು ತೊಡಗುವನೆನ್ನುವುದಕ್ಕೆ ಒಂದು ಕಥೆ ನೆನಪಾಗುತ್ತದೆ…

ಒಂದು ಹೆಣ್ಣು ಪಾರಿವಾಳವು ಹೂ ತೋಟದಲ್ಲಿದ್ದ ಬಿಳಿ ಗುಲಾಬಿಯನ್ನು ನೋಡಿ ಇಷ್ಟಪಟ್ಟು ಗಂಡು ಪಾರಿವಾಳಕ್ಕೆ ಹೇಳಿತು ನಿನ್ನ ಪ್ರೀತಿ ನಿಜವಾದದ್ದಾದರೆ, ಅ ಬಿಳಿ ಗುಲಾಬಿ ನಾಳೆ ಬೆಳಗಾಗುವುದರೊಳಗೆ ಕೆಂಪು ಗುಲಾಬಿಯಾಗಿರಬೇಕು. ಆಗ ಗಂಡು ಪಾರಿವಾಳ ರಾತ್ರಿ ಎಲ್ಲಾ ಯೋಚಿಸಿ, ತನ್ನ ಪ್ರಿಯೆಗೆ ತನ್ನ ಪ್ರೀತಿಯ ಆಳವನ್ನು ತೋರಿಸಲೇಬೇಕು ಎಂದು ದೇಹವನ್ನು ಚುಚ್ಚಿಕೊಂಡು ರಕ್ತವನ್ನು ಆ ಬಿಳಿ ಗುಲಾಬಿಯ ಮೇಲೆ ಸುರಿಸಿ ಅದನ್ನು ಕೆಂಪು ಗುಲಾಬಿಯನ್ನಾಗಿ ಮಾಡುತ್ತದೆ. ಬೆಳಗ್ಗೆ ಹೆಣ್ಣು ಪಾರಿವಾಳ ತೋಟಕ್ಕೆ ಬಂದು ನೋಡಿದಾಗ ಬಿಳಿಯ ಗುಲಾಬಿ ಕೆಂಪು ಗುಲಾಬಿಯಾಗಿರುತ್ತದೆ ಪಾರಿವಾಳವು ತನ್ನ ಗೆಳೆಯನ ಪ್ರೀತಿಯನ್ನು ಮೆಚ್ಚಿ ಕುಣಿದಾಡುತ್ತದೆ. ಅದೇ ಸಮಯದಲ್ಲಿ ತನ್ನ ಕಾಲಿನ ಕೆಳಗೆ ಸತ್ತು ಬಿದ್ದದ್ದ ಗಂಡು ಪಾರಿವಾಳವನ್ನು ನೋಡಿ ಅಘಾತಗೊಂಡು ಒಂದು ಕೆಂಪು ಗುಲಾಬಿಯನ್ನು ಕೊಟ್ಟು ತನ್ನನ್ನು ಮೆಚ್ಚಿಸಲು ತನ್ನ ಪ್ರಾಣವನ್ನೇ ತೆತ್ತ ಪ್ರೇಮಿಯನ್ನು ಕಂಡು ತಾನೂ ಅಲ್ಲೆ ಪ್ರಾಣ ಬಿಡುತ್ತದೆ. ಇದೇ ಕಾರಣಕ್ಕೆ ಪಾರಿವಾಳಗಳನ್ನು ಲವ್‌ಬರ್ಡ್ಸ್‌ ಎನ್ನುವುದು. ಕೆಂಪು ಗುಲಾಬಿಯನ್ನು ನಾವು ಬಹಳ ಪ್ರೀತಿಸಿದವರಿಗೆ ಕೊಡುವುದೂ ಇದೇ ನಂಬಿಕೆಯಿಂದಾಗಿ. 

ಇಂಪ್ರಸ್‌ ಮಾಡಲು ನಾನಾ ದಾರಿ
ಕೆಲಸದ ವಿಚಾರಕ್ಕೆ ಬಂದರೆ, ಅಲ್ಲಿ ಸುಮ್ಮಸುಮ್ಮನೆ ಇನ್ನೊಬ್ಬರನ್ನು ಮೆಚ್ಚಿಸಲು ಸಾಧ್ಯವಿಲ,ನಮ್ಮಲ್ಲಿ ಒಂದು ಗಟ್ಟಿ ವ್ಯಕ್ತಿತ್ವ ಇರಬೇಕು. ಹಾಗೆಯೇ ನಮ್ಮಲ್ಲಿ ಒಂದು ವಿಶೇಷ ವಿಚಾರವಿರಬೇಕು. ಅದೇನೂ ಇಲ್ಲದೆ, ಕೇವಲ ಬಾಯಿಮಾತಿನಲ್ಲಿ ಮೆಚ್ಚಿಸಲು ನೋಡಿದರೆ ಅದರಿಂದ ಕೆಲವೇ ದಿನಗಳಲ್ಲಿ ನಮಗೆ ಕೆಟ್ಟ ಹೆಸರು ಬರುತ್ತದೆ. ನಾವು ಯಾವುದಕ್ಕೂ ಲಾಯಕ್ಕಿಲ್ಲ ಎನ್ನುವುದನ್ನು ನಾವೇ ತೋರಿಸಿಕೊಟ್ಟಂತಾಗುತ್ತದೆ. ನಮ್ಮ ಜ್ಞಾನವನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಂಡಾಗ ಮಾತ್ರ ನಮ್ಮ ಪ್ರಯತ್ನಕ್ಕೆ ಒಂದು ಅರ್ಥವಿರುತ್ತದೆ. ಒಂದು ಸಂದರ್ಶನಕ್ಕೆ ಹೋದಾಗ ಅಲ್ಲಿ ಚೆನ್ನಾಗಿ ಮತನಾಡಿ, ಸರಿಯಾದ ರೀತಿಯಲ್ಲಿ ವರ್ತಿಸಿ ಅವರನ್ನು ಮೆಚ್ಚಿಸಬೇಕಾಗುತ್ತದೆ. ನಮ್ಮ ಕೆಲಸದ ಮೂಲಕ ನಮ್ಮ ಮೇಲಧಿಕಾರಿಗಳನ್ನು ಮೆಚ್ಚಿಸಬೇಕಾಗುತ್ತೆ. ಮನೆಯಲ್ಲಿ ಒಳ್ಳೆಯ ಮಕ್ಕಳೆನಿಸಿಕೊಳ್ಳಲು ತಂದೆ ತಾಯಿಯವರನ್ನು ಸಂಬಂಧಿಕರನ್ನು ಮೆಚ್ಚಿಸಬೇಕಾಗುತ್ತದೆ. ಕೆಲವು ಸಲ ನಾವು ನಾವಾಗಿದ್ದಲ್ಲಿ ನಮ್ಮ ವ್ಯಕ್ತಿತ್ವ ನಮ್ಮ ಮನೆಯವರಿಗೇ ಹಿಡಿಸಲಾರದು. ಅವರ ಮನಸ್ಸಿಗೆ ತಕ್ಕಂತೆ ನಾವು ಕೆಲಸ ಮಾಡಿ ಅವರನ್ನು ಮೆಚ್ಚಿಸಬೇಕು. 

ಕೆಲವರನ್ನು ಮೆಚ್ಚಿಸಲು ಬೇರೆ ಬೇರೆ ದಾರಿಗಳಿವೆ. ಉದಾಹರಣೆಗೆ, ಕೆಲವರಿಗೆ ದುಡ್ಡು ಕೊಟ್ಟು ಕೆಲವರಿಗೆ ಸಮಯ ಕೊಟ್ಟು ಇನ್ನು ಕೆಲವರಿಗೆ ಪ್ರೀತಿ ಕೊಟ್ಟು ಮೆಚ್ಚಿಸಬೇಕಾಗುತ್ತದೆ. ಮತ್ತೂ ಕೆಲವರಿಗೆ ಅವರು ಹೇಳಿದುದಕ್ಕೆಲ್ಲಾ ಒಪ್ಪಿ ಹೂØಂ… ಎಂದರೆ ಸಾಕು. ಹೀಗೆ ಜೀವನ ಪರ್ಯಂತ ಎಲ್ಲರನ್ನೂ ಒಂದಲ್ಲಾ ಒಂದು ರೀತಿ ಮೆಚ್ಚಿಸಬೇಕಾಗುತ್ತದೆ. 

ಆದರೆ ಎಲ್ಲರೂ ನಮ್ಮನ್ನು ಮೆಚ್ಚಿಕೊಳ್ಳಬೇಕು ಎನ್ನುವುದು ತಪ್ಪು. ಹಾಗೆಯೇ ಎಲ್ಲರೂ ನಮ್ಮನ್ನು ಮೆಚ್ಚಿಕೊಳ್ಳುತ್ತಾರೆ ಎಂದು ಭಾವಿಸುವುದೂ ಸರಿಯಲ್ಲ. ಜಗತ್ತಿನಲ್ಲಿ ಒಬ್ಬೊಬ್ಬರ ಮನಸ್ಸೂ ಒಂದೊಂದು ಬಗೆ. ಅವರೆಲ್ಲರ ಆಸಕ್ತಿಗಳು ಬೇರೆ ಬೇರೆಯಾಗಿರುವುದರಿಂದ ನಾವು ಎಲ್ಲರನ್ನೂ ಮೆಚ್ಚಿಸುತ್ತೇವೆ ಎನ್ನುವುದು ಮೂರ್ಖತನವಾದೀತು! ಪ್ರತಿಯೊಂದು ವಿಚಾರಕ್ಕೂ ಪರ ವಿರೋಧ ಅಭಿಪ್ರಾಯವಿರುವಂತೆ ಪ್ರತಿಯೊಬ್ಬರಲ್ಲಿಯೂ ಇನ್ನೊಬ್ಬರ ಮೇಲೆ ವಿಭಿನ್ನವಾದ ಅಭಿಪ್ರಾಯವಿರುತ್ತದೆ. ಹೀಗಾಗಿ ಎಲ್ಲರೂ ಎಲ್ಲರನ್ನೂ ಮೆಚ್ಚಿಕೊಳ್ಳುವುದಿಲ್ಲ. ಯಾರೂ ನಮ್ಮನ್ನು ಮೆಚ್ಚಿಕೊಳ್ಳುವರೋ, ಇಲ್ಲವೋ ನಮ್ಮ ಪ್ರಯತ್ನವನ್ನು ನಾವು ಮಾಡುತ್ತಿರಬೇಕು. ಏಕೆಂದರೆ ಬೇರೆಯವರಿಗೆ ನಮ್ಮ ಪ್ರೀತಿಯ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿರುವುದಿಲ್ಲ. ಆದರೆ ನಮಗೆ ನಮ್ಮ ಜೀವನಕ್ಕೆ ಅವರ ಪ್ರೀತಿ ಸಹಕಾರ ಬೇಕಾಗಿರುತ್ತದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಒಂದು ಪುಟ್ಟ ಗ್ರಾಮದಲ್ಲಿ ವಾಸಿಸುತ್ತಿದ್ದ ಇಬ್ಬರು ಹುಡುಗರ ಕಥೆಯಿದು. ಅದರಲ್ಲಿ ಒಬ್ಬ ಹುಡುಗ ಆರು ವರ್ಷದವ. ಇನ್ನೊಬ್ಬ 10 ವರ್ಷದ ಹುಡುಗ. ಇಬ್ಬರೂ ಅತ್ಯಂತ ಖಾಸಾ...

  • ಒಂದು ದಿನ ಯುವಕನೊಬ್ಬ ತನ್ನ ಮೂರು ಕತ್ತೆಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೊರಟಿದ್ದ. ಮಾರ್ಗ ಮಧ್ಯೆ ಎದುರಾದ ನದಿಯನ್ನು ನೋಡಿದ್ದೇ, ಅವನಿಗೆ ಅದರಲ್ಲೊಮ್ಮೆ...

  • ಲೇಖಕರ ಪರಿಚಯ ಅಮೆರಿಕದ ಶಿಕಾಗೋ ಮೂಲದ ರಿಚರ್ಡ್‌ ಸ್ಲಾéವಿನ್‌ ಆಧ್ಯಾತ್ಮದ ಹಾದಿ ಹಿಡಿದು ರಾಧಾನಾಥ ಸ್ವಾಮೀಜಿ  ಆದರು.ಇಸ್ಕಾನ್‌ನ ನಿರ್ದೇಶನ ಮಂಡಳಿಯ ಹಿರಿಯ...

  • ನಾನೀಗ ನಿಮಗೆ ಮೂವರು ಕಳ್ಳರ ಕಥೆಯನ್ನು ಹೇಳುತ್ತೇನೆ. ಮೊದಲ ಕಳ್ಳನ ಹೆಸರು ಇಮ್ಯಾನುವೆಲ್ ನಿಂಜರ್‌. ಈತನನ್ನು 'ಜಿಮ್‌, ದಿ ಪೆನ್‌ ಮ್ಯಾನ್‌' ಎಂದೂ ಕರೆಯಲಾಗುತ್ತಿತ್ತು. ಅದು...

  • ನವರಸಗಳನ್ನು ವ್ಯಕ್ತಪಡಿಸುವ ಮಾಧ್ಯಮ ನಟನೆಯೇ ಆಗಿದ್ದರೂ ಅವು ವಾಸ್ತವದಲ್ಲಿ ನಮ್ಮೊಳಗೆ ಸಹಜವಾಗಿ ಅಡಗಿರುವ ಭಾವನೆಗಳು. ಆ ಭಾವನೆಗಳನ್ನು ಅದುಮಿಟ್ಟುಕೊಳ್ಳಬಾರದು....

ಹೊಸ ಸೇರ್ಪಡೆ