ನಿಮ್ಮನ್ನು ಕಟ್ಟಿ ಹಾಕಿರುವ ಹಗ್ಗ ಯಾವುದು?

ಮೂರನೇ ಕತ್ತೆ ನಿಂತ ಜಾಗದಿಂದ ಮಿಸುಕಾಡಲಿಲ್ಲ

Team Udayavani, Aug 14, 2019, 5:17 AM IST

s-29

ಒಂದು ದಿನ ಯುವಕನೊಬ್ಬ ತನ್ನ ಮೂರು ಕತ್ತೆಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೊರಟಿದ್ದ. ಮಾರ್ಗ ಮಧ್ಯೆ ಎದುರಾದ ನದಿಯನ್ನು ನೋಡಿದ್ದೇ, ಅವನಿಗೆ ಅದರಲ್ಲೊಮ್ಮೆ ಈಜಬೇಕು ಎಂಬ ಆಸೆಯಾಯಿತು. ಆದರೆ ಒಂದು ಸಮಸ್ಯೆಯಿತ್ತು. ಅವನ ಬಳಿ ಕತ್ತೆಗಳನ್ನು ಕಟ್ಟಿಹಾಕಲು ಎರಡೇ ಹಗ್ಗಗಳಿದ್ದವು. ಅಂದರೆ ಎರಡು ಕತ್ತೆಗಳನ್ನು ಮಾತ್ರ ಮರಕ್ಕೆ ಕಟ್ಟಲು ಸಾಧ್ಯವಿತ್ತು. ಮೂರನೆಯ ಕತ್ತೆಯನ್ನೇನು ಮಾಡೋದು ಎಂದು ಅವನಿಗೆ ಗೊಂದಲವಾಯಿತು. ದಿಕ್ಕು ತೋಚದೆ ಸುತ್ತಲೂ ನೋಡಿದಾಗ, ಕಲ್ಲುಬಂಡೆಯೊಂದರ ಮೇಲೆ ಕುಳಿತು ನದಿಯಲ್ಲಿ ಗಾಳ ಹಾಕಿದ್ದ ವೃದ್ಧನೊಬ್ಬ ಯುವಕನ ಕಣ್ಣಿಗೆ ಬಿದ್ದ.

‘ಯಜಮಾನ್ರೇ, ಒಂದು ಹಗ್ಗ ಬೇಕಿತ್ತಲ್ಲ…’ ಎಂದು ವೃದ್ಧನನ್ನು ಸಮೀಪಿಸುತ್ತಾ ಕೇಳಿದ ಯುವಕ. ಆ ವೃದ್ಧನ ಬಳಿಯೂ ಹಗ್ಗವಿರಲಿಲ್ಲ, ಆದರೆ ಒಂದು ಅದ್ಭುತ ಐಡಿಯಾ ಇತ್ತು. ‘ನಿನ್ನ ಬಳಿ ಇರುವ ಎರಡು ಕತ್ತೆಗಳನ್ನು ಮೊದಲು ಮರಕ್ಕೆ ಕಟ್ಟು. ಅವುಗಳನ್ನು ಕಟ್ಟುತ್ತಿರುವುದನ್ನು ಮೂರನೇ ಕತ್ತೆ ನೋಡುವಂತೆ ಮಾಡು. ಆಮೇಲೆ ಮೂರನೆಯದನ್ನು ಮರದ ಬಳಿ ಒಯ್ದು, ಅದಕ್ಕೆ ಹಗ್ಗ ಕಟ್ಟಿದಂತೆ ನಟಿಸು’ ಅಂದ ವೃದ್ಧ. ಯುವಕನಿಗೆ ಈ ಸಲಹೆ ಬಾಲಿಶವೆನಿಸಿತಾದರೂ, ‘ನೋಡಿಯೇ ಬಿಡುವಾ’ ಎಂದು ವೃದ್ಧ ಹೇಳಿದ ಹಾಗೆ ಮಾಡಿ, ನಂತರ ನದಿಯತ್ತ ಸ್ನಾನ ಮಾಡಲು ಹೊರಟ.

ಸ್ನಾನ ಮುಗಿಸಿ, ನದಿಯ ದಿಬ್ಬವೇರಿ ಬಂದಾಗ ಸುದೈವವಶಾತ್‌ ಆ ಕತ್ತೆ ಅಲ್ಲಿಯೇ ನಿಂತಿತ್ತು. ಅವನು ಮೊದಲೆರಡು ಕತ್ತೆಗಳ ಹಗ್ಗ ಬಿಚ್ಚಿ ಅವುಗಳ ಬೆನ್ನು ತಡವಿದ. ಅವು ಮುಂದೆ ಹೊರಟವು, ಆದರೆ ಮೂರನೇ ಕತ್ತೆ ಮಿಸುಕಾಡಲಿಲ್ಲ. ಅವನು ಅದರ ಬೆನ್ನು ತಟ್ಟಿದ, ಮುಂದಕ್ಕೆ ತಳ್ಳಲು ಪ್ರಯತ್ನಿಸಿದ, ಅದರ ಕಿವಿಹಿಡಿದು ಎಳೆಯಲು ಪ್ರಯತ್ನಿಸಿದ..ಏನು ಮಾಡಿದರೂ ನಿಂತ ಜಾಗದಿಂದ ಅಲುಗಾಡಲಿಲ್ಲ ಕತ್ತೆ.

ಇದನ್ನು ನೋಡಿದ್ದೇ ಮುದುಕ ‘ಅಲ್ಲಯ್ನಾ, ಆ ಕತ್ತೆಯ ಹಗ್ಗ ಬಿಚ್ಚಿದೆಯಾ?’ ಎಂದು ಕೂಗಿ ಕೇಳಿದ‌.

‘ಬಿಚ್ಚೋದಾ, ಅದಕ್ಕೇ ಕಟ್ಟೇ ಇಲ್ಲವಲ್ಲ’ ಎಂದ ಯುವಕ.

‘ಕಟ್ಟಿಲ್ಲಾ ಅಂತ ನಿನಗೆ ಗೊತ್ತು, ಅದಕ್ಕೇನು ಗೊತ್ತು?’ ಎನ್ನುತ್ತಾ ನಕ್ಕ ಮುದುಕ.

ಯುವಕ ಕೂಡಲೇ ಕತ್ತೆಯ ಹಗ್ಗಬಿಚ್ಚುವಂತೆ ನಟಿಸಿ, ಅದರ ಬೆನ್ನು ತಟ್ಟಿದ. ಬಂಧಮುಕ್ತಗೊಳ್ಳುವುದಕ್ಕೆ ಕಾದಿದ್ದ ಕತ್ತೆ ಓಡುತ್ತಾ ತನ್ನಿಬ್ಬರು ಸ್ನೇಹಿತರನ್ನು ಸೇರಿಕೊಂಡಿತು!

ನಮ್ಮನ್ನೂ ಕೂಡ ಯಾವುದೋ ಹಗ್ಗಗಳು ಗುರಿ ತಲುಪದಂತೆ, ಮುಂದಡಿಯಿಡದಂತೆ ಮಾಡಿಬಿಟ್ಟಿರುತ್ತವಲ್ಲವೇ? ಆ ಅಂಶಗಳು ಯಾವುವು? ಸಂಪನ್ಮೂಲಗಳ ಕೊರತೆ, ಅವಕಾಶಗಳ ಕೊರತೆ ಎಂಬ ನಿಜವಾದ ಹಗ್ಗವೇ ಅಥವಾ ಹಿಂಜರಿಕೆ, ಆತ್ಮವಿಶ್ವಾಸದ ಕೊರತೆ, ಭಯ, ಅನುಮಾನ ಎಂಬ ಕಾಲ್ಪನಿಕ ಹಗ್ಗವೇ? ನಮ್ಮ ಈ ಕಾಲ್ಪನಿಕ ಹಗ್ಗವನ್ನು ಬಿಚ್ಚಲು ಯಾರೂ ಬರುವುದಿಲ್ಲ, ಯಾರಿಂದಲೂ ಇದನ್ನು ಬಿಚ್ಚಲಾಗದು. ಈ ಕಾಲ್ಪನಿಕ ಬಂಧನದಿಂದ ನಾವೇ ಮುಕ್ತರಾಗಿ ಮುನ್ನಡೆಯಬೇಕಲ್ಲವೇ?

ಟೈಟಾನಿಕ್‌ ಹಡಗನ್ನು ದೇವರಿಗೂ ಮುಳುಗಿಸಲಾಗದು

ಟೈಟಾನಿಕ್‌ ಹಡಗಿನ ಬಗ್ಗೆ ನೀವೆಲ್ಲ ಕೇಳಿಯೇ ಇರುತ್ತೀರಿ. ಈ ಹಡಗು ಎಷ್ಟು ಅದ್ಭುತವಾಗಿತ್ತೆಂದರೆ, ಇದನ್ನು ನಿರ್ಮಿಸಿದವರು, ‘ಸ್ವತಃ ದೇವರಿಗೂ ಈ ಹಡಗನ್ನು ಮುಳುಗಿಸಲಾಗದು’ ಎಂದು ಹೇಳುತ್ತಿದ್ದರು. ಆದರೆ ತನ್ನ ಮೊದಲ ಪಯಣದಲ್ಲೇ ಟೈಟಾನಿಕ್‌ ಹಡಗು ಮುಳುಗಿಬಿಟ್ಟಿತು.

ಕೆಲವು ದಶಕಗಳ ಹಿಂದೆ ಮುಳುಗು ಪಡೆಗೆ ಸಾಗರದ ಆಳದಲ್ಲಿ ಟೈಟಾನಿಕ್‌ ಹಡಗಿನ ಅವಶೇಷಗಳು ಸಿಕ್ಕವು. ಈ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಜಗತ್ತಿನಾದ್ಯಂತ ಚರ್ಚೆಗಳು ಆರಂಭವಾದವು. ಈ ದುರಂತದಲ್ಲಿ ಬದುಕುಳಿದವರ ಸಂದರ್ಶನಗಳು ನಡೆದವು, ಪುಸ್ತಕಗಳನ್ನು ಬರೆಯಲಾಯಿತು, ಸಿನೆಮಾಗಳನ್ನು ಮಾಡಲಾಯಿತು…ಇದಷ್ಟೇ ಅಲ್ಲದೇ ಟೈಟಾನಿಕ್‌ನಲ್ಲಿ ಯಾವ್ಯಾವ ಅಡುಗೆ ಮಾಡಲಾಗಿತ್ತು, ಅವುಗಳ ರೆಸಿಪಿಯೇನು ಎನ್ನುವ ಅಡುಗೆ ಪುಸ್ತಕಗಳೂ ಪ್ರಕಟವಾದವು!

ಈ ಹಡಗಿನಲ್ಲಿದ್ದ ಪ್ರಯಾಣಿಕರಿಗಾಗಲೀ, ಕ್ಯಾಪ್ಟನ್‌ನಿಂದ ಹಿಡಿದು ಕೆಲಸಗಾರರವರೆಗಾಗಲೀ ಯಾರೊಬ್ಬರಿಗೂ ಕೂಡ ಈ ಹಡಗು ಮುಳುಗಬಲ್ಲದು ಎಂಬ ಅಂದಾಜೂ ಇರಲಿಲ್ಲ. ಆದರೆ ಏನಾಯಿತೋ ನೋಡಿ. ದುರ್ಘ‌ಟನೆಯಲ್ಲಿ ಸಾವಿರಾರು ಜನರು ಮೃತಪಟ್ಟರು.

ಈ ಘಟನೆಯಲ್ಲಿ ನಮಗೆಲ್ಲರಿಗೂ ಒಂದು ಪಾಠವಿದೆ. ಗರ್ವ ಅಥವಾ ಅಹಂಕಾರವೆನ್ನುವುದು ಅವಸಾನದ ಲಕ್ಷಣ. ನೀವು ಎಷ್ಟೇ ಪ್ರತಿಭಾನ್ವಿತರಾಗಿರಬಹುದು, ಯಶಸ್ವಿಯಾಗಿರಬಹುದು…ಆದರೆ ಅಹಂಕಾರ ಅಥವಾ ಗರ್ವ ಅತಿಯಾಯಿತೆಂದರೆ ದೇವರಿಗೆ ಅದನ್ನು ಪುಡಿಗಟ್ಟುವುದು ಹೇಗೆ ಎನ್ನುವುದು ತಿಳಿದಿರುತ್ತದೆ.

ಸಂಬಂಧಗಳನ್ನು ಹಾಳು ಮಾಡಿಕೊಳ್ಳಬೇಡಿ

ಮಹಾರಾಜನೊಬ್ಬನ ಬಳಿ 10 ಬಲಿಷ್ಠ ನಾಯಿಗಳಿದ್ದವು. ಯಾರಾದರೂ ತಪ್ಪು ಮಾಡಿದರೆ ಅವರನ್ನು ಆ ನಾಯಿಗಳಿಂದ ಕಚ್ಚಿಸಿ ಸಾಯಿಸುತ್ತಿದ್ದ. ಒಂದು ದಿನ ಆತನ ಮಂತ್ರಿ ಯಾವುದೋ ತಪ್ಪು ಮಾಡಿಬಿಟ್ಟ. ಕೆರಳಿ ಕೆಂಡವಾದ ಮಹಾರಾಜ, ಅವನನ್ನು ನಾಯಿಗಳಿಗೆ ಎಸೆಯಿರಿ ಎಂದು ಆಜ್ಞೆಯಿತ್ತ. ಕಂಗಾಲಾದ ಮಂತ್ರಿ ರಾಜನೆದುರು ಮಂಡಿಯೂರಿ ಕುಳಿತು ಬೇಡಿಕೊಂಡ-‘ಮಹಾರಾಜ..ಇಷ್ಟು ವರ್ಷಗಳಿಂದ ನಿಮಗೆ ನಿಷ್ಠೆಯಿಂದ ದುಡಿದಿದ್ದೇನೆ, ನೀವು ಹೀಗೆ ಮಾಡುವುದು ಸರಿಯೇನು? ನಿಮ್ಮ ತೀರ್ಪೇ ಸರಿ ಎಂದು ನೀವು ಭಾವಿಸುತ್ತೀರಾದರೆ, ನಾನು ಸಾಯಲು ಸಿದ್ಧನಿದ್ದೇನೆ. ಆದರೆ ಅದಕ್ಕೂ ಮುನ್ನ ಒಂದು ಚಿಕ್ಕ ಸಹಾಯ ಮಾಡುತ್ತೀರಾ? ನನಗೆ 10 ದಿನ ಸಮಯಾವಕಾಶ ಕೊಡಿ. ಆ ಮೇಲೆ ಬೇಕಿದ್ದರೆ ನಿಮ್ಮ ನಾಯಿಗಳು ನನ್ನನ್ನು ಹರಿದು ಹಾಕಲಿ…’ ಎಂದ. ಮಹಾರಾಜ ಅರೆಮನಸ್ಸಿನಿಂದಲೇ ಮಂತ್ರಿಯ ಮನವಿಗೆ ಸಮ್ಮತಿಸುತ್ತಾ ಅಂದ, ‘ಆದರೆ ನೆನಪಿಟ್ಟುಕೋ, ನಾನು ನನ್ನ ನಿರ್ಧಾರ ಬದಲಿಸುವುದಿಲ್ಲ!’

ಮಂತ್ರಿ ರಾಜನಿಗೆ ವಂದಿಸಿ ನೇರವಾಗಿ ನಾಯಿಗಳಿದ್ದ ಜಾಗಕ್ಕೆ ಹೋಗಿ ಅವುಗಳ ದೇಖರೇಖೀ ನೋಡಿಕೊಳ್ಳುತ್ತಿದ್ದ ಕಾವಲುಗಾರನನ್ನು ಮಾತನಾಡಿಸಿದ.

‘ಒಂದು ಹತ್ತು ದಿನ ನಾನು ಈ ನಾಯಿಗಳನ್ನು ನೋಡಿಕೊಳ್ಳುತ್ತೇನೆ.’ ಅಂದ ಮಂತ್ರಿ. ಮಹಾರಾಜರ ಆಜ್ಞೆಯ ಬಗ್ಗೆ ಅರಿವಿಲ್ಲದ ಆ ಕಾವಲುಗಾರನಿಗೆ ಅಚ್ಚರಿಯಾಯಿತು. ಅದೇಕೆ ಮಂತ್ರಿಮಹೋದಯರು ಇಂಥ ಚಿಲ್ಲರೆ ಕೆಲಸ ಮಾಡಲು ಬಯಸುತ್ತಿದ್ದಾರೆಂದು ತಲೆಕೆಡಿಸಿಕೊಂಡ. ಆದರೆ ಮಂತ್ರಿಗಳ ಮಾತನ್ನು ಮೀರಲು ಅವನಿಗೆ ಮನಸ್ಸು ಬರಲಿಲ್ಲ, ಅದಕ್ಕಿಂತಲೂ ಹೆಚ್ಚಾಗಿ, ಹತ್ತು ದಿನ ತನಗೆ ವಿರಾಮ ಸಿಗುತ್ತದೆಂಬ ಖುಷಿಗೆ ಒಪ್ಪಿಕೊಂಡ.

ನಾಯಿಗಳನ್ನು ಪೋಷಿಸಿ ಅನುಭವವಿದ್ದ ಮಂತ್ರಿಯು ಮುಂದಿನ ಹತ್ತು ದಿನ ಅವುಗಳನ್ನು ಬಹಳ ಜಾಗರೂಕತೆಯಿಂದ, ಪ್ರೀತಿಯಿಂದ ನೋಡಿಕೊಂಡ. ಅವುಗಳಿಗೆ ಸಮಯಕ್ಕೆ ಸರಿಯಾಗಿ ಊಟ ಹಾಕಿದ, ಪ್ರೀತಿಯಿಂದ ಸ್ನಾನ ಮಾಡಿಸಿದ.

ಹತ್ತು ದಿನಗಳಾದವು. ಮಹಾರಾಜನ ಮುನಿಸು ಕಡಿಮೆಯಾಗಿರಲಿಲ್ಲ. ತನ್ನ ಆಜ್ಞೆಯನ್ನು ಜಾರಿ ಮಾಡಬೇಕು, ಆ ಮಂತ್ರಿಯನ್ನು ನಾಯಿಗಳಿಗೆ ಎಸೆಯಬೇಕು ಎಂದು ಹೇಳಿದ. ವಧಾ ಸ್ಥಳಕ್ಕೆ ಮಂತ್ರಿಯನ್ನು ಕರೆತರಲಾಯಿತು. ಆದರೆ ಎಲ್ಲರಿಗೂ ಅಚ್ಚರಿಯಾಗುವಂತೆ, ಈ ನಾಯಿಗಳೆಲ್ಲ ಮಂತ್ರಿಯನ್ನು ಕಂಡದ್ದೇ ಉತ್ಸಾಹದಿಂದ ಓಡೋಡುತ್ತಾ ಬಂದು ಕಾಲು ನೆಕ್ಕಲಾರಂಭಿಸಿದವು.

ಅಚ್ಚರಿ, ಆಘಾತದಿಂದಲೇ ಮಹಾರಾಜ ‘ಈ ನಾಯಿಗಳಿಗೆ ಏನಾಗಿದೆ ಇವತ್ತು? ಅವನ ಮೇಲೇಕೆ ದಾಳಿ ಮಾಡುತ್ತಿಲ್ಲ?’ ಎಂದು ಕೇಳಿದ. ಕೂಡಲೇ ಮಂತ್ರಿ ಆ ನಾಯಿಗಳ ತಲೆ ಸವರುತ್ತಾ ಹೇಳಿದ, ‘ಮಹಾರಾಜರೇ, ನಾನು 10 ದಿನ ಮಾತ್ರ ಆ ನಾಯಿಗಳ ಸೇವೆ ಮಾಡಿದೆ. ನಾನು ಈ ಅಲ್ಪ ಸಮಯದಲ್ಲಿ ಮಾಡಿದ ಸೇವೆಯನ್ನು, ತೋರಿಸಿದ ಪ್ರೀತಿಯನ್ನು ಅವು ತೃಣವೆಂದು ಭಾವಿಸಲಿಲ್ಲ, ಮರೆಯಲಿಲ್ಲ. ಆದರೆ ನಿಮ್ಮ ಬಳಿ 10 ವರ್ಷ ಸೇವೆ ಮಾಡಿದೆ. ನೀವು ಆರಾಮಾಗಿ ಎಲ್ಲವನ್ನೂ ಮರೆತುಬಿಟ್ಟಿರಿ. ಒಂದೇ ಒಂದು ತಪ್ಪು ಮಾಡಿದೆನೆಂಬ ಕಾರಣಕ್ಕಾಗಿ ಈ ಶಿಕ್ಷೆ ವಿಧಿಸಿದ್ದೀರಲ್ಲ? ನಿಮಗೆ ಇಷ್ಟು ಹೇಳುವುದಕ್ಕಾಗಿ ಹೀಗೆ ಮಾಡಬೇಕಾಯಿತು. ನನ್ನನ್ನು ಸಾಯಿಸಲೇಬೇಕು ಎಂಬುದೇ ನಿಮ್ಮ ನಿಶ್ಚಯವಾಗಿದ್ದರೆ, ನನ್ನ ಶಿರಚ್ಛೇದನ ಮಾಡಿಬಿಡಿ. ಈ ನಾಯಿಗಳಂತೂ ನನ್ನನ್ನು ಸಾಯಿಸೋದಿಲ್ಲ” ಅಂದ.

ಮಹಾರಾಜ ಸಿಟ್ಟಾಗಲಿಲ್ಲ. ಮಂತ್ರಿಯ ಮಾತನ್ನು ತಾಳ್ಮೆಯಿಂದ ಮನದೊಳಕ್ಕೆ ಇಳಿಸಿಕೊಂಡು ಚಿಂತಿಸಿದ. ತನ್ನ ಬಗ್ಗೆ ತನಗೇ ನಾಚಿಕೆಯಾಯಿತು. ಶಿಕ್ಷೆಯನ್ನು ಹಿಂಪಡೆದ.

ಈ ವಿಷಯವನ್ನು ನಾವೀಗ ನಮ್ಮ ಜೀವನಕ್ಕೆ ಅನ್ವಯಮಾಡಿಕೊಳ್ಳೋಣವೇ? ಬಹುತೇಕ ಬಾರಿ ನಾವು ಮಂತ್ರಿಯ ಬದಲು, ರಾಜನ ಸ್ಥಾನದಲ್ಲಿ ಇರುತ್ತೇವೆ. ಯಾರಾದರೂ ಆಡುವ ಒಂದೇ ಒಂದು ಕೋಪದ ಮಾತುಗಳು, ತಪ್ಪುಗಳನ್ನು ನೋಡಿ…ಅವರು ನಮಗಾಗಿ ಮಾಡಿದ್ದ ಒಳ್ಳೆಯದ್ದನ್ನೆಲ್ಲ ಮರೆತುಬಿಡುತ್ತೇವೆ. ಅವರನ್ನು ಶಿಕ್ಷಿಸಲು ಮುಂದಾಗಿಬಿಡುತ್ತೇವೆ, ಅವರ ನಂಟುಕಡಿದುಕೊಂಡುಬಿಡುತ್ತೇವೆ. ‘ಕೃತಜ್ಞತೆ’ ಎನ್ನುವುದು ಎದುರಿನವರು ನಮಗಾಗಿ ಮಾಡಿದ ತ್ಯಾಗಗಳನ್ನು, ನಮಗೆ ತೋರಿಸಿದ ಪ್ರೀತಿಯನ್ನು ನೆನಪಿಟ್ಟುಕೊಂಡಾಗ ಮಾತ್ರ ಬರುತ್ತದೆ.

ಯಾವುದೋ ಒಂದು ತಪ್ಪು, ಚುಚ್ಚುಮಾತು ಅಥವಾ ಘಟನೆಯು ಅಷ್ಟು ವರ್ಷಗಳ ಸಂಬಂಧಗಳನ್ನು ಹಾಳು ಮಾಡಬಾರದು ಅಲ್ಲವೇ?

ಗೌರ್‌ ಗೋಪಾಲ್‌ದಾಸ್‌, ಆಧ್ಯಾತ್ಮ ಗುರು

ಟಾಪ್ ನ್ಯೂಸ್

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fsuion

Yugadi: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

6-uv-fusion

UV Fusion: ಯುಗಾದಿ ಸಂಭ್ರಮೋತ್ಸವ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

5-uv-fusion

Yugadi: ವರುಷದ ಆದಿ ಯುಗಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.