ತಳಪಾಯದಲ್ಲಿ ತಾಕತ್ತಿಲ್ಲದೆ ಏನು ಮಾಡಿದರೂ ಅಲ್ಪಾಯಸ್ಸು!

Team Udayavani, Jun 27, 2017, 3:45 AM IST

ಒಬ್ಬ ವ್ಯಕ್ತಿಯ ವಿಕಸನಕ್ಕೆ ಅವನ ತಂದೆ-ತಾಯಿ ಜತೆಗೆ ಅವನು ಬೆಳೆದು ಬಂದ ವಾತಾವರಣವೇ ತಳಪಾಯವಾಗಿರುತ್ತದೆ. ಯಾವುದೇ ಶಾಲೆಯಲ್ಲಿ ಓದಿದರೂ, ಯಾವುದೇ ಊರಿನಲ್ಲಿ ಬೆಳೆದರೂ, ಯಾವುದು ಮಾತೃಭಾಷೆಯಾಗಿದ್ದರೂ ಒಂದು ವ್ಯಕ್ತಿತ್ವ ರೂಪುಗೊಳ್ಳುವುದು ಆ ವ್ಯಕ್ತಿಯ ಮೂಲಭೂತ ಸಂಸ್ಕಾರದಿಂದ.

ಹಿಂದೆ ತ್ರೇತಾಯುಗದಲ್ಲಿ ಶ್ರೀರಾಮನ ಪರಮಭಕ್ತ ಆಂಜನೇಯ ಮತ್ತು ಅವನ ವಾನರಸೇನೆ ಭಾರತದಿಂದ ಲಂಕೆಗೆ ಹೋಗಲು ಕಟ್ಟಿದ ಸೇತುವೆ ಇವತ್ತಿಗೂ ಮುರಿದು ಬಿದ್ದಿಲ್ಲ. ತ್ರೇತಾಯುಗದ ಅನಂತರ ದ್ವಾಪರ ಯುಗ ಬಂತು, ಅನಂತರ ಕಲಿಯುಗ ಬಂತು. ಪ್ರತೀ ಯುಗ ಬದಲಾಗುವಾಗ ಪ್ರಪಂಚ ಪ್ರಳಯವೂ ಆಯಿತು. ಈಗಲೂ ಆ ಸೇತುವೆ ಹಿಂದೂ ಮಹಾಸಾಗರದೊಳಗೆ ದೃಢವಾಗಿ ನಿಂತಿದೆ. ಸಾವಿರಾರು ವರ್ಷಗಳಾದರೂ, ಪ್ರಕೃತಿಯ ಹಲವು ವಿಕೋಪಗಳಿಗೆ ಎದುರಾದರೂ, ಯುಗ ಯುಗಗಳು ಕಳೆದರೂ ಭೂಮಿಯ ಮಟ್ಟದಿಂದ ಕುಸಿದು ನೀರಿನ ತಳ ಸೇರಿದೆಯೇ ಹೊರತು ಸೇತುವೆ ಮುರಿದು ಬಿದ್ದಿಲ್ಲ. ಏಕೆಂದರೆ ಅದು ತಳಪಾಯದ ತಾಕತ್ತು!

ಎಂಜಿನಿಯರಿಂಗೇ ಓದಿರಬೇಕಾ? ತಳಪಾಯ ಗಟ್ಟಿಯಾಗಿರ ಬೇಕೆಂದರೆ ನಾವು ಎಂಜಿನಿಯರೇ ಆಗಿರಬೇಕು ಅಂತ ಏನಿಲ್ಲ. ಶ್ರೀರಾಮನ ಸೇತುವೆ ಇಷ್ಟೇ ಸಾವಿರ ವರ್ಷಗಳ ಹಿಂದೆ ನಿರ್ಮಿತವಾಗಿದ್ದು ಎಂದು ವೈಜ್ಞಾನಿಕ ಸಂಶೋಧನೆಗಳು ಖಚಿತಪಡಿಸಿವೆ. ಲೆಕ್ಕಾಚಾರವನ್ನು ಹಿಂದೂ ಪಂಚಾಂಗಕ್ಕೆ ತಾಳೆ ಹಾಕಿದಾಗ, ಅದು ರಾಮ ಸೇತುವೆ ನಿರ್ಮಿಸಿ ಲಂಕೆಗೆ ಹೋದ ಸಮಯಕ್ಕೆ ಸರಿಯಾಗಿತ್ತು! ಒಬ್ಬ ಅತಿ ದೊಡ್ಡ ರಾಜಕಾರಣಿ ಇದನ್ನು ಹಾಸ್ಯಾಸ್ಪದವಾಗಿ ತೆಗೆದುಕೊಂಡು, “ಓ… ನೀಲ ಏನು ಎಂಜಿನಿಯರಿಂಗ್‌ ಓದಿದ್ದನಾ, ಅಷ್ಟು ದೊಡ್ಡ ಸೇತುವೆ ಕಟ್ಟಲಿಕ್ಕೆ?’ ಅಂತ ತಮ್ಮ ಭಾಷಣದಲ್ಲಿ ಹೇಳಿದ್ದರು! ಇಚ್ಛಾಶಕ್ತಿಯಿದ್ದ ವರಿಗೆ ಎಂಜಿನಿಯರಿಂಗ್‌ ಕಲಿಕೆಯೂ ದೊಡ್ಡದಲ್ಲ, ಸೇತುವೆ ನಿರ್ಮಾಣವೂ ದೊಡ್ಡದಲ್ಲ ಎಂದು ಆ ಮಂತ್ರಿಗೆ ತಿಳಿಯದೇ ಹೋಯಿತು.  

ನಾವು ಹಾಕುವ ತಳಪಾಯ ನಮಗೆ ಮಾತ್ರ ಉಪಯೋಗವಾಗಿರಲಿ ಎಂದಲ್ಲ, ನಮ್ಮ ಕೆಲಸ ಮುಗಿದ ಅನಂತರ ಅದು ಬೇರೆಯವರಿಗೂ ಉಪಯೋಗಕ್ಕೆ ಬರಬೇಕು. ಅದಕ್ಕಾಗಿ ಅದು ಪಾರದರ್ಶಕವಾಗಿರಬೇಕು ಮತ್ತು ದೀರ್ಘಾಯಸ್ಸೂ ಇರಬೇಕು. ಈ ಸೂತ್ರ ಎಲ್ಲದಕ್ಕೂ ಅನ್ವಯಿಸುತ್ತದೆ. ನಮ್ಮ ಬುದ್ಧಿ ಬೆಳವಣಿಗೆಯಾಗಿರಲಿ, ಸ್ನೇಹ ಸಂಬಂಧಗಳಾಗಿರಲಿ ಅಥವಾ ವ್ಯವಹಾರವೇ ಆಗಿರಲಿ; ನಮ್ಮತನದ ತಳಪಾಯ ಬಹಳ ಮುಖ್ಯ. ತಳಪಾಯವೇ ಭದ್ರವಾಗಿರದೆ, ಅತಿ ವೇಗವಾಗಿ ಎಲ್ಲರಿಗಿಂತ ಮುಂದೆ ಓಡಬೇಕೆಂದುಕೊಂಡರೆ ಅತಿ ಕಡಿಮೆ ಸಮಯದಲ್ಲಿ ಮುಗ್ಗರಿಸಿ ಬೀಳುತ್ತೇವೆ. ಕೆಲವರು ತಮ್ಮ ತಮ್ಮ ರಂಗದಲ್ಲಿ ಆಳವಾದ ಜ್ಞಾನವನ್ನು ಹೊಂದದೆ, ತಾವೇ ಬುದ್ಧಿವಂತರಂತೆ ಎಲ್ಲದರಲ್ಲೂ ತಲೆ ಹಾಕಿಕೊಂಡು ಹೋಗುತ್ತಾರೆ. ಹಾಗೆ ಎಲ್ಲ ವ್ಯವಹಾರಗಳಿಗೂ ಕೈ ಹಾಕುತ್ತಾರೆ. ಒಂದು ಚಾನ್ಸ್‌ ತಗೊಂಡು ನೋಡೋಣ, ಗೆಲ್ಲುತ್ತೇವೇನೋ ಅಂತ ಯೋಚಿಸುತ್ತಾರೆ. ಆದರೆ ಕೆಲವು ಸಲ ಅದೃಷ್ಟವಶಾತ್‌ ಗೆದ್ದರೂ, ತಳಪಾಯ ಟೊಳ್ಳಾಗಿರುತ್ತದೆ. ಮುಂದೊಂದು ದಿನ ಕೆಳಗೆ ಬೀಳಲೇಬೇಕಾಗುತ್ತದೆ.

ಮಹಾನ್‌ ಪಂಡಿತರಂತೆ ವಾದಿಸುತ್ತಾರೆ: ಕೆಲವಷ್ಟು ಜನ ತಮಗೇನೂ ಗೊತ್ತಿಲ್ಲದಿದ್ದರೂ ಎಲ್ಲವನ್ನೂ ತಿಳಿದಿರುವವರಂತೆ, ಮಹಾನ್‌ ಪಂಡಿತರಂತೆ ಎಲ್ಲ ವಿಚಾರಗಳಲ್ಲೂ ವಾದ ಮಾಡುತ್ತಾರೆ. ನಿಜವಾದ ವಿಚಾರಕ್ಕೆ ಬೇರೆ ರೂಪ ಕೊಟ್ಟು ವಾಸ್ತವವನ್ನೇ ಬದಲಾಯಿಸುತ್ತಾರೆ. ಕೊನೆಗೆ ತಾವು ಹೇಳಿದ್ದೇ ಸರಿ ಎಂದು ವಿತಂಡ ವಾದವನ್ನೂ ಮಂಡಿಸುತ್ತಾರೆ. ಎದುರಿರುವ ವ್ಯಕ್ತಿ ಪೆದ್ದನಾಗಿದ್ದರೆ ಹೌದು, ಸರಿ ಎಂದು ತಲೆಯಾಡಿಸಿ ಒಪ್ಪಿಕೊಳ್ಳುತ್ತಾನೆ. ಎದುರಿಗಿರುವ ವ್ಯಕ್ತಿಯ ವಿಚಾರಗಳ ತಳಪಾಯ ಗಟ್ಟಿಯಾಗಿದ್ದರೆ ಟೊಳ್ಳು ವಿಚಾರಗಳನ್ನು ಸರಿ ಎಂದು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಕೆಲವು ಸಲ ನಿಜ ಹೇಳಿ ಆತ್ಮೀಯ ಸ್ನೇಹಿತರನ್ನು ಕಳೆದುಕೊಳ್ಳಬೇಕಾಗಿ ಬರಬಹುದು. ಆದರೂ ಯಾವುದೇ ವಿಚಾರದ ಬಗ್ಗೆ ಆಳವಾದ ಅಧ್ಯಯನ ಮಾಡಿ, ಅದನ್ನು ಸರಿಯಾದುದನ್ನು ತಿಳಿಸುವುದೇ ಸ್ನೇಹದ ಧರ್ಮ. ಸ್ನೇಹ-ವ್ಯಾಪಾರ ಎಲ್ಲಿ ಹಾಳಾಗುತ್ತದೋ ಎಂದು ಟೊಳ್ಳುತನವನ್ನೇ ಸರಿ ಎಂದು ಒಪ್ಪಿಕೊಳ್ಳುವುದು ಸ್ನೇಹಕ್ಕಾಗಲೀ ವ್ಯಾಪಾರಕ್ಕಾಗಲೀ ಗೌರವವಲ್ಲ; ಅವಮಾನ ಮಾಡಿದಂತೆ. ಅದು ಕೊನೆಯ ತನಕ ಶಾಶ್ವತವಾಗಿ ಉಳಿಯುವುದೂ ಇಲ್ಲ. 

ಒಬ್ಬ ವ್ಯಕ್ತಿಯ ವಿಕಸನಕ್ಕೆ ಅವನ ತಂದೆ-ತಾಯಿ ಜತೆಗೆ ಅವನು ಬೆಳೆದು ಬಂದ ವಾತಾವರಣವೇ ತಳಪಾಯವಾಗಿರುತ್ತದೆ. ಯಾವುದೇ ಶಾಲೆಯಲ್ಲಿ ಓದಿದರೂ, ಯಾವುದೇ ಊರಿನಲ್ಲಿ ಬೆಳೆದರೂ, ಯಾವುದು ಮಾತೃಭಾಷೆಯಾಗಿದ್ದರೂ ಒಂದು ವ್ಯಕ್ತಿತ್ವ ರೂಪುಗೊಳ್ಳುವುದು ಆ ವ್ಯಕ್ತಿಯ ಮೂಲಭೂತ ಸಂಸ್ಕಾರದಿಂದ. ಕೆಲವು ಮಕ್ಕಳು ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದರೂ, ಉನ್ನತ ವಿದ್ಯಾಭ್ಯಾಸ ಪಡೆದಿಲ್ಲವಾದರೂ, ತಮ್ಮ ವ್ಯಕ್ತಿತ್ವಕ್ಕೆ ಕುಂದು-ಕೊರತೆ ಬಾರದಂತೆ ತಮ್ಮತನವನ್ನು ಗಟ್ಟಿ ಮಾಡಿಕೊಂಡಿರುತ್ತಾರೆ. ಜೀವನದಲ್ಲಿ ಯಾವುದೇ ಅಡಚಣೆಗಳು ಎದುರಾದರೂ, ಅತಿಯಾಗಿ ಆಕರ್ಷಣೆಗಳಿಗೆ ಒಳಗಾದರೂ ಯಾವುದಕ್ಕೂ ಬಗ್ಗದೆ, ಕೆಟ್ಟದಾರಿಗಳಲ್ಲಿ ಸಾಗದೆ ಸಕಾರಾತ್ಮಕ ನಂಬಿಕೆಗಳಿಂದ ಮುನ್ನಡೆಯುತ್ತಾರೆ. ಕೆಲವರು ಪ್ರೌಢ ವಯಸ್ಕರಾದ ಬಳಿಕ ತಮ್ಮ ತಂದೆ ತಾಯಿಯನ್ನು ದೂಷಿಸುತ್ತಾರೆ. ಅಪ್ಪ ಅಮ್ಮ ತಮ್ಮನ್ನು ಸರಿಯಾಗಿ ಬೆಳೆಸಲಿಲ್ಲ, ಸರಿಯಾಗಿ ಏನನ್ನೂ ಕಲಿಸಿಕೊಟ್ಟಿಲ್ಲ, ಸರಿಯಾದ ವಿಚಾರಗಳನ್ನು ತಮ್ಮ ತಲೆಗೆ ಹಾಕಿಲ್ಲ ಅಂತೆಲ್ಲ ಗೊಣಗುತ್ತಾರೆ. ಅಪ್ಪ-ಅಮ್ಮ ನಮ್ಮನ್ನು ಕಷ್ಟಪಟ್ಟು ವಿದ್ಯಾವಂತರನ್ನಾಗಿ ಮಾಡುವುದಕ್ಕೆ ಪ್ರಯತ್ನ ಪಟ್ಟಿರುತ್ತಾರೆ, ನಾವು ಪ್ರೌಢಾವಸ್ಥೆಗೆ ಬಂದ ಅನಂತರ ನಮ್ಮ ಬುದ್ಧಿಯನ್ನು ಬೆಳೆಸಿಕೊಳ್ಳುವುದು ನಮ್ಮ ಜವಾಬ್ದಾರಿ. ಅಪ್ಪ-ಅಮ್ಮ ಮಾಡಬೇಕಿತ್ತು, ಸಮಾಜ ಮಾಡಬೇಕಿತ್ತು, ಶಾಲಾ ಕಾಲೇಜು ಮಾಡಬೇಕಿತ್ತು ಅಂತ ಬೇರೆಯವರ ತಲೆಯ ಮೇಲೆ ತಪ್ಪನ್ನು ಹೇರುವುದು ಸರಿಯಲ್ಲ. ನಾವು ಸರಿಯಾಗಿ ಬೆಳೆದಿಲ್ಲ ಅಂದರೆ ಅದಕ್ಕೆ ನಾವೇ ಜವಾಬ್ದಾರರು. ಅಪ್ಪ- ಅಮ್ಮ ನಮ್ಮನ್ನು ಸಾವಿರ ಸಲ ತಿದ್ದಿದರೂ ನಾವು ಅವರ ಮಾತಿಗೆ ಗಮನವನ್ನೇ ಕೊಟ್ಟಿರುವುದಿಲ್ಲ. ಒಂದು ವಯಸ್ಸಿಗೆ ಬಂದ ಮೇಲೆ ನಮ್ಮ ಸುತ್ತಮುತ್ತಲಿರುವುದನ್ನು ನೋಡಿ ನಾವೇ ಕಲಿಯಬೇಕು. ಸರಿ-ತಪ್ಪು; ಸತ್ಯ-ಧರ್ಮಗಳ ಸ್ವಲ್ಪ ಜ್ಞಾನವಿದ್ದರೂ ಸಾಕು, ನಮ್ಮ ಸದೆºಳವಣಿಗೆಯ ತಳಪಾಯವನ್ನು ನಾವೇ ಹಾಕಿಕೊಳ್ಳಬಹುದು. 

ಸ್ವಾಮೀಜಿಗೂ ಬೇಕು ತಳಪಾಯ: ಒಬ್ಬ ಸ್ವಾಮೀಜಿ ಯಾಗಬೇಕಾದರೂ ಅವನಿಗೆ ಅಧ್ಯಾತ್ಮದ ಆಳವಾದ ಜ್ಞಾನ, ಶರಣಾಗತಿಯ ಪರಿಪಕ್ವತೆ, ನಿಸ್ವಾರ್ಥತೆಯ ಯೋಗ್ಯತೆ ಇವೆಲ್ಲ ತಳಪಾಯವಾಗಿರಬೇಕು. ವಿಜ್ಞಾನಿಯಾಗುವವನು ಹೇಗೆ ಸಂಶೋಧನೆಯಲ್ಲಿ ನೂರು ಸಲ ಸೋತರೂ ಸತತ ಸಂಶೋಧನೆಯಿಂದ ತನ್ನ ವೈಜ್ಞಾನಿಕ ಜ್ಞಾನದ ತಳಪಾಯ ಭದ್ರಪಡಿಸಿಕೊಳ್ಳುತ್ತಾನೋ ಹಾಗೆಯೇ ಧರ್ಮಗುರುಗಳೂ. ಒಬ್ಬ ವ್ಯಕ್ತಿಯ ಫೌಂಡೇಷನ್‌ ಸರಿಯಾಗಿದ್ದರೆ, ಅವನು ಸಮಾಜದಲ್ಲಿ ಆಗುವ ಅವಮಾನ, ಸೋಲು, ಏರಿಳಿತ, ನಷ್ಟ ಇವುಗಳಿಗೆ ತಲೆಕೆಡಿಸಿಕೊಳ್ಳದೆ ತನ್ನತನದಲ್ಲಿ ದೃಢನಂಬಿಕೆಯಿಟ್ಟು ಎಲ್ಲವನ್ನೂ ಕಳೆದುಕೊಂಡು ರಸಾತಳದಲ್ಲಿ ಬಿದ್ದಾಗಲೂ ಕೂಡ ಮೇಲೆದ್ದು ಬರುತ್ತಾನೆ. ನಾವು ಬದುಕುವುದಕ್ಕೆ ಹೊರಗಿನಿಂದ ಗಟ್ಟಿಯಾಗಿ ಕಟ್ಟಿದ ಮನೆ ಸಾಕಾಗುವುದಿಲ್ಲ. ಮನಸ್ಸಿನೊಳಗೆ ಆತ್ಮವಿಶ್ವಾಸವನ್ನೂ ಗಟ್ಟಿಯಾಗಿ ಕಟ್ಟಿಕೊಳ್ಳಬೇಕು. ಮೊದಮೊದಲು ನಮ್ಮ ಫೌಂಡೇಷನ್‌ ಸಡಿಲವಾಗಿದ್ದರೂ ಅವರಿವರ ಮಾತಿಗೆ ಓಗೊಟ್ಟು ಅಡ್ಡದಾರಿ ಹಿಡಿದರೂ, ನಮ್ಮ ತಪ್ಪಿನ ಅರಿವಾದ ತತ್‌ಕ್ಷಣ ವಾಪಾಸ್‌ ಬಂದು ನಮ್ಮ ತಳಪಾಯವನ್ನು ದೃಢಪಡಿಸಬೇಕು. ಕೆಲವು ಕಡುಬಡವರು ವಿದ್ಯಾಪೀಠದಲ್ಲಿ ಓದುತ್ತಿದ್ದಾರೆ, ಹಾಗೆ ಕೆಲವು ಕಡುಬಡವರು ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಎರಡೂ ಕಡೆ ಇರುವವರೂ ಮಕ್ಕಳೇ. ಆದರೆ ವಿದ್ಯಾಪೀಠದಲ್ಲಿ ಓದುತ್ತಿರುವ ಮಕ್ಕಳು ಶಾಲೆ ಮುಗಿದ ಅನಂತರ ಕೆಲಸ ಮಾಡಿ ಸ್ವಲ್ಪ ಹಣವನ್ನು ದುಡಿಯುತ್ತಾರೆ. ಸಾಲಾಗಿ ನಿಂತು ಊಟಕ್ಕಾಗಿ ಸಹನೆಯಿಂದ ಕಾಯುತ್ತಿದ್ದು, ಉಣ್ಣುತ್ತಾರೆ. ಆದರೆ ಬೀದಿಯಲ್ಲಿರುವ ಕೆಲ ಮಕ್ಕಳು ಕಳ್ಳತನದ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಅವರನ್ನು ಕರೆದು ಶಾಲೆಗೆ ಸೇರಿಸುವ ಪ್ರಯತ್ನ ಮಾಡಿದರೂ ಅಲ್ಲಿಂದ ಮತ್ತೆ ಓಡಿ ಹೋಗಿ ಕಳ್ಳತನದಲ್ಲಿಯೇ ತೊಡಗುತ್ತಾರೆ. ಕಳವಿನ ಮಾರ್ಗ ಸುಲಭ, ಬೇಗನೆ ಹಣಗಳಿಕೆ ಸಾಧ್ಯ ಅಂದುಕೊಳ್ಳುತ್ತಾರೆ. ತಳಪಾಯ ಗಟ್ಟಿಯಿಲ್ಲದ್ದರಿಂದ ಹುಟ್ಟಿಕೊಳ್ಳುವ ಸಮಸ್ಯೆ ಇಂಥದು.

– ರೂಪಾ ಅಯ್ಯರ್‌
roopaiyer.ica@gmail.com

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

 • ಲೇಖಕರ ಪರಿಚಯ ಅಮೆರಿಕದ ಶಿಕಾಗೋ ಮೂಲದ ರಿಚರ್ಡ್‌ ಸ್ಲಾéವಿನ್‌ ಆಧ್ಯಾತ್ಮದ ಹಾದಿ ಹಿಡಿದು ರಾಧಾನಾಥ ಸ್ವಾಮೀಜಿ  ಆದರು.ಇಸ್ಕಾನ್‌ನ ನಿರ್ದೇಶನ ಮಂಡಳಿಯ ಹಿರಿಯ...

 • ನಾನೀಗ ನಿಮಗೆ ಮೂವರು ಕಳ್ಳರ ಕಥೆಯನ್ನು ಹೇಳುತ್ತೇನೆ. ಮೊದಲ ಕಳ್ಳನ ಹೆಸರು ಇಮ್ಯಾನುವೆಲ್ ನಿಂಜರ್‌. ಈತನನ್ನು 'ಜಿಮ್‌, ದಿ ಪೆನ್‌ ಮ್ಯಾನ್‌' ಎಂದೂ ಕರೆಯಲಾಗುತ್ತಿತ್ತು. ಅದು...

 • ನವರಸಗಳನ್ನು ವ್ಯಕ್ತಪಡಿಸುವ ಮಾಧ್ಯಮ ನಟನೆಯೇ ಆಗಿದ್ದರೂ ಅವು ವಾಸ್ತವದಲ್ಲಿ ನಮ್ಮೊಳಗೆ ಸಹಜವಾಗಿ ಅಡಗಿರುವ ಭಾವನೆಗಳು. ಆ ಭಾವನೆಗಳನ್ನು ಅದುಮಿಟ್ಟುಕೊಳ್ಳಬಾರದು....

 • ಅತಿಥಿ ದೇವೋಭವ ಎಂಬುದು ಭಾರತೀಯ ಪರಂಪರೆಯ ಘೋಷವಾಕ್ಯವಷ್ಟೇ ಅಲ್ಲ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯ ಕೂಡ. ಮನೆಗೆ ಬರುವ ಅತಿಥಿಗಳನ್ನು ದೇವರಂತೆ...

 • ಮಕ್ಕಳು ಹುಟ್ಟಿದಾಗ ಸಂಭ್ರಮಿಸಿ, ಮಗುವನ್ನು ಯಾವಾಗಲೂ ಕಂಕುಳಲ್ಲಿ ಎತ್ತಿಕೊಂಡು, ಮಡಿಲಲ್ಲಿ ಮಲಗಿಸಿಕೊಂಡು, ತಪ್ಪು ಮಾಡಿದರೂ ಮುತ್ತು ಕೊಡುತ್ತಾ ನಮ್ಮನ್ನು...

ಹೊಸ ಸೇರ್ಪಡೆ

 • ಸುರೇಶ ಯಳಕಪ್ಪನವರ ಹಗರಿಬೊಮ್ಮನಹಳ್ಳಿ: ಕಳೆದ ವರ್ಷ ತುಂಗಾಭದ್ರಾ ನದಿ ತುಂಬಿದ್ದರಿಂದ ತಾಲೂಕಿನ ಹಿನ್ನೀರು ಪಾತ್ರದ ರೈತರು ಹರ್ಷ ವ್ಯಕ್ತಪಡಿಸಿದ್ದರು. ಆದರೆ...

 • ಹುಬ್ಬಳ್ಳಿ: ಮಹಾನಗರ ಪಾಲಿಕೆ ಹಳೇ ಹುಬ್ಬಳ್ಳಿಯನ್ನು ನಿರ್ಲಕ್ಷಿಸಿದೆ ಎಂಬುದು ಇಲ್ಲಿನ ನಿವಾಸಿಗಳ ದೂರು. ಇಲ್ಲಿನ ರಸ್ತೆಗಳ ದುಸ್ಥಿತಿಯನ್ನು ಗಮನಿಸಿದರೆ ನಿವಾಸಿಗಳ...

 • •ವೆಂಕೋಬಿ ಸಂಗನಕಲ್ಲು ಬಳ್ಳಾರಿ: 'ಬಡವರ ಬಂಧು' ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗಿದ್ದ ಸಾಲ ಸಮರ್ಪಕವಾಗಿ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಯೋಜನೆಯನ್ನೇ...

 • ದಾವಣಗೆರೆ: ಕುಂದುವಾಡ ಕೆರೆಯನ್ನು ಪ್ರವಾಸಿ ತಾಣ....ಎಂದು ಘೋಷಣೆ ಮಾಡಬೇಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ...

 • ಹುಬ್ಬಳ್ಳಿ: ಬೇಂದ್ರೆ ಸಾರಿಗೆಯ ರಹದಾರಿ ಪರವಾನಗಿ ನವೀಕರಿಸದಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಶನ್‌ ನೇತೃತ್ವದಲ್ಲಿ...

 • ಜಗಳೂರು: ಭದ್ರಾ ಮೇಲ್ದಂಡೆ ಜಗಳೂರು ಶಾಖಾ ಕಾಲುವೆಯ ಮಾರ್ಗ ಬದಲಾವಣೆ ಮಾಡದಂತೆ ಮತ್ತು ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಭದ್ರಾ ಮೇಲ್ದಂಡೆ ನೀರಾವರಿ...