ಪ್ರತ್ಯೇಕ ಧರ್ಮದ ಸ್ಥಾಪನೆ ಅನಗತ್ಯ


Team Udayavani, Aug 3, 2017, 7:38 AM IST

03-ANKANA-2.jpg

ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಶೈವ ಮತ್ತು ಲಿಂಗಾಯತರು ಒಗ್ಗಟ್ಟಾಗಿ ಬಂದರೆ ತಾವು ಕೇಂದ್ರ ಸರಕಾರಕ್ಕೆ ಧರ್ಮ ಸ್ಥಾಪನೆಗೆ ಶಿಫಾರಸು ಮಾಡಲು ಸಿದ್ಧ ಎಂದು ಪ್ರಕಟಿಸಿದ್ದಾರೆ. ವೀರಶೈವ ಸಮುದಾಯದಲ್ಲಿ ಹೆಚ್ಚಿನ ಮತ ಬ್ಯಾಂಕ್‌ ಹೊಂದಿರುವ ಬಿಜೆಪಿ ತಟಸ್ಥ ನಿಲುವನ್ನು ಪ್ರದರ್ಶಿಸಿತ್ತು. ವೀರಶೈವ ಮಹಾಸಭಾದ ನಿರ್ಧಾರಕ್ಕೆ ಬದ್ಧ ಎಂದು ಹೇಳಿದೆ. ಧರ್ಮ ರಚನೆಯ ಬಗ್ಗೆ ದಿನ ನಿತ್ಯ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಪ್ರಮುಖ ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ| ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಜತೆ  “ಉದಯವಾಣಿ’  ನೇರಾ- ನೇರ ಸಂದರ್ಶನ ನಡೆಸಿದಾಗ.

ಪ್ರತ್ಯೇಕ ಧರ್ಮ ಸ್ಥಾಪನೆ ಆವಶ್ಯಕತೆ ಇದೆಯೇ? 
ನಿಜವಾಗಲೂ ಇಲ್ಲ. ವೀರಶೈವ ಲಿಂಗಾಯತ ಸಮುದಾಯ ಹಿಂದೂ ಧರ್ಮದ ಒಂದು ಭಾಗವೇ ಆಗಿದೆ. ಆಚಾರ ವಿಚಾರಗಳೆಲ್ಲ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದಾದ ಹಿಂದೂ ಧರ್ಮದ ಪದ್ಧತಿಯಂತೆಯೇ ಇರುವುದರಿಂದ ಪ್ರತ್ಯೇಕ ಧರ್ಮದ ಸ್ಥಾಪನೆ ಅನಗತ್ಯ. 

ಮತ್ತೆ  ಪ್ರತ್ಯೇಕ ಧರ್ಮದ ಕೂಗು ರಾಜ್ಯದೆಲ್ಲೆಡೆ ಕೇಳಿ ಬರುತ್ತಿದೆಯಲ್ಲ?
ಪ್ರತ್ಯೇಕ ಧರ್ಮ ಸ್ಥಾಪನೆ ಬೇಡಿಕೆ ಈಗಿನದಲ್ಲ. ಮೊದಲಿನಿಂ ದಲೂ ಒತ್ತಾಯ ಕೇಳಿಬರುತ್ತಿದೆ. ಸರಕಾರದಿಂದ ಕೆಲವು ಸವಲತ್ತುಗಳು ಸಿಗುತ್ತವೆ ಎಂಬ ಉದ್ದೇಶದಿಂದ ಪ್ರತ್ಯೇಕ ಧರ್ಮ ರಚನೆಯಾಗಬೇಕು ಎಂದು ಹಲವರ ಒತ್ತಾಸೆಯಾಗಿದೆ. 

ಹಳೆಯ ಬೇಡಿಕೆಗೆ ಮತ್ತೆ ಮರುಜೀವ ಏಕೆ? 
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರ ಹಿನ್ನೆಲೆಯಲ್ಲಿ ವೀರಶೈವ ಮತ್ತು ಲಿಂಗಾಯತ ಧರ್ಮ ಸ್ಥಾಪನೆಯ ಕೂಗು ಎದ್ದಿರಬಹುದು ಎಂದು ನಮಗನಿಸುತ್ತಿದೆ. ಚುನಾವಣೆಯ ದೃಷ್ಟಿ ಇಟ್ಟುಕೊಂಡು ಧರ್ಮ ಸ್ಥಾಪನೆಯ ವಿಚಾರ ಪ್ರಸ್ತಾಪಿಸಿ ಅದರ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಯುತ್ತಿದೆ.

ಈ ಹುನ್ನಾರದ ಹಿಂದೆ ಯಾರ ಕೈವಾಡ ಇದೆ?
ರಾಜಕೀಯ ಪಕ್ಷಗಳ ಕೈವಾಡ ಇದರ ಹಿಂದೆ ಅಡಗಿದೆ. ಹಲವು ರಾಜಕಾರಣಿಗಳು ವೀರಶೈವ ಲಿಂಗಾಯತ ಧರ್ಮವನ್ನು ನಿರ್ನಾಮ ಮಾಡುವ ಉದ್ದೇಶದಿಂದ ಪ್ರತ್ಯೇಕ ಧರ್ಮ ಸ್ಥಾಪನೆಯ ವಿಚಾರವನ್ನು ಕೆದಕಲಾಗಿದೆ. ಈ ಸಂದರ್ಭದಲ್ಲಿ ಇದು ಅನಗತ್ಯವಾಗಿದ್ದು, ಜನರ ಭಾವನೆಯನ್ನು ಉದ್ರೇಕಗೊಳಿಸಿ ಒಂದು ಜಾತಿ ವಿರುದ್ಧ ಮತ್ತೂಂದು ಜಾತಿಯನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಇದು ದುರದೃಷ್ಟಕರ ಸಂಗತಿ. 

ಸ್ವಾಮೀಜಿ ನಿಮಗೆ ನೇರ ಪ್ರಶ್ನೆ. ಧರ್ಮದ ಬೇಡಿಕೆ ಹಿಂದೆ ಯಾರ ಸಂಚು ಕೆಲಸ ಮಾಡುತ್ತಿದೆ?
ಕಾಣದ ಕೈಗಳು ಇದರ ಹಿಂದೆ ಕೆಲಸ ಮಾಡುತ್ತಿವೆ. ರಾಜಕೀಯ ಶಕ್ತಿಗಳ ಕೈವಾಡ ಇದರ ಹಿಂದೆ ಅಡಗಿದೆ ಎಂದಷ್ಟೇ ಹೇಳಬಹುದು. ಪ್ರತ್ಯೇಕ ಧರ್ಮ ವಿಚಾರದ ಹೋರಾಟಕ್ಕೆ ತೆರೆಯ ಮರೆಯಲ್ಲಿ ಪ್ರೋತ್ಸಾಹ ನೀಡುವ ಮೂಲಕ ಒಗ್ಗಟ್ಟಿನಿಂದ ಇರುವ ಸಮುದಾಯವನ್ನು ವಿಭಜನೆ ಮಾಡುವ ಪ್ರಯತ್ನ ನಿರಂತರವಾಗಿ ನಡೆದಿದೆ. ಇದರ ಒಳ ಮರ್ಮ ಅರಿತು ಸಮುದಾಯದವರು ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕು. ರಾಜಕಾರಣಿಗಳ ತಂತ್ರಕ್ಕೆ ಸಮುದಾಯದ ಧುರೀಣರು ಬಲಿಯಾಗಬಾರದು. 

ಧರ್ಮ ಸ್ಥಾಪನೆಗೆ ನಿಮ್ಮ ಸಹಮತಿ ಇದೆಯೇ?
ವೀರಶೈವ ಮತ್ತು ಲಿಂಗಾಯತ ಸಮುದಾಯದ ಪ್ರತ್ಯೇಕ ಧರ್ಮ ಸ್ಥಾಪಿಸಲು ಮನಃಪೂರ್ವಕವಾಗಿ ನಮಗೆ ಇಷ್ಟವಿಲ್ಲ. ವೀರಶೈವ ಲಿಂಗಾಯತವು ಹಿಂದೂ ಧರ್ಮದ ಭಾಗವಾಗಿಯೇ ಇರಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ. 

ವೀರಶೈವರನ್ನು ಹೊರತುಪಡಿಸಿ ಲಿಂಗಾಯತ ಧರ್ಮ ಸ್ಥಾಪಿಸಬೇಕೆನ್ನುವ ಬೇಡಿಕೆ ಇದೆಯಲ್ಲಾ?
ಬರೀ ಲಿಂಗಾಯತರನ್ನು ಒಳಗೊಂಡಂತೆ ಪ್ರತ್ಯೇಕ ಧರ್ಮ ಸ್ಥಾಪಿಸುವುದಕ್ಕೆ ನಮ್ಮ ವಿರೋಧ ಇದೆ. ಬಸವಣ್ಣನ ಅಂಕಿತವನ್ನು ತಿದ್ದಿದ ಮಾತೆ ಮಹಾದೇವಿಯವರು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಒತ್ತಾಯಿಸುತ್ತಿದ್ದಾರೆ. ವಿಶ್ವಗುರು ಬಸವಣ್ಣನಿಗೆ ಅವಮಾನ ಮಾಡಿದ ಮಾತೆ ಮಹಾದೇವಿ ಅವರಿಗೆ ವೀರಶೈವರನ್ನು ಹೊರಗಿಟ್ಟು, ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸಬೇಕೆನ್ನುವ ನೈತಿಕ ಹಕ್ಕು ಇಲ್ಲ. 

ವೀರಶೈವರನ್ನು ಹೊರತುಪಡಿಸಿ ಲಿಂಗಾಯತ ಧರ್ಮ ಸ್ಥಾಪಿಸಬೇಕು ಎನ್ನುವ ಬೇಡಿಕೆ ಏಕೆ?
ಇದು ಜಾತಿಜಾತಿಗಳ ನಡುವೆ ಸಂಘರ್ಷವನ್ನು ತಂದೊಡ್ಡುವ ಕೆಲಸ. ಬಲಾಡ್ಯವಾಗಿ ಬೆಳೆಯುತ್ತಿರುವ ವೀರಶೈವ ಲಿಂಗಾಯತ ಸಮುದಾಯವನ್ನು ದುರ್ಬಲಗೊಳಿಸುವ ಪ್ರಯತ್ನ. ಬಸವಣ್ಣ ಜೀರ್ಣೋದ್ಧಾರ ಮಾಡಿದ ಲಿಂಗಾಯತ ಮತಕ್ಕಿಂತ ಪೂರ್ವದಲ್ಲೇ ವೀರಶೈವ ಸಮುದಾಯ ಇತ್ತು. ಬಸವಣ್ಣ ಸಹ ಅದನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ವೀರಶೈವರನ್ನು ದೂರವಿಟ್ಟು ಲಿಂಗಾಯತ ಧರ್ಮ ರಚಿಸುವುದು ಸೂಕ್ತವಲ್ಲ. 

ಪ್ರತ್ಯೇಕ ಧರ್ಮ ಸ್ಥಾಪನೆಯಾದರೆ ಸಮುದಾಯದ ಮೇಲಾಗುವ ದುಷ್ಪರಿಣಾಮವೇನು?
ರಾಜ್ಯದಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯ ಬಹುಸಂಖ್ಯಾತ ಪಂಗಡವಾಗಿದೆ. ಇದನ್ನು ಒಡೆದು ಆಳುವ ನೀತಿಯನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಸಮುದಾಯದ ಮನಸ್ಸನ್ನು ಕಲುಷಿತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಧರ್ಮ ಸ್ಥಾಪನೆಯಾದರೆ, ಲಿಂಗಾಯತ/ ವೀರಶೈವ ಜನಾಂಗಗಳಲ್ಲಿರುವ ಒಳಜಾತಿಗಳಲ್ಲೇ ಬೇಧಭಾವ ಆರಂಭವಾಗಿ ಸಂಘರ್ಷಗಳು ನಡೆದು ಪ್ರಬಲವಾಗಿರುವ ಸಮುದಾಯ ತನ್ನ ಅಸ್ತಿತ್ವಕ್ಕೆ ಧಕ್ಕೆ ತಂದುಕೊಳ್ಳುವ ಅಪಾಯವಿದೆ. 

ಹೋರಾಟದ ಪರಿ ಗಮನಿಸಿದರೆ ಧರ್ಮ ಸ್ಥಾಪನೆ ಆಗಲಿದೆಯೇ? 
ಲಿಂಗಾಯತ ಧರ್ಮಕ್ಕಾಗಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯಾದ್ಯಂತ ಪರ ಮತ್ತು ವಿರೋಧದ ಕೂಗು ಎದ್ದಿದೆ. ಆದರೆ, ವಾಸ್ತವವಾಗಿ ಕಾನೂನು ತಜ್ಞರ ಅಭಿಪ್ರಾಯ ಆಧರಿಸಿ ಹೇಳುವುದಾದರೆ, ಧರ್ಮ ಸ್ಥಾಪನೆ ಸುಲಭದ ಕೆಲಸವಲ್ಲ. ಕರ್ನಾಟಕಕ್ಕೆ ಸೀಮಿತವಾಗಿ ಧರ್ಮ ರಚಿಸಲು ಸಾಧ್ಯವಿಲ್ಲ. ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿನ ಸಮುದಾಯದ ಜನರಿಗೂ ಅನ್ವಯವಾಗುವಂತೆ ಧರ್ಮ ಸ್ಥಾಪಿಸಬೇಕಾಗುತ್ತದೆ. ಇದು ರಾಜ್ಯ ಸರಕಾರದಿಂದ ಮಾತ್ರ ಆಗುವ ಕೆಲಸವಲ್ಲ. ಕೇಂದ್ರ ಸರಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ ಸಂವಿಧಾನ ರಚನೆಯಾದ ನಂತರ ಇದುವರೆಗೂ ಯಾವುದೇ ಹೊಸ ಧರ್ಮ ಸ್ಥಾಪಿಸಿದ ಉದಾಹರಣೆ ಇಲ್ಲ. ಹಾಗಿರುವಾಗ ಧರ್ಮ ಸ್ಥಾಪನೆಯ ಕನಸು ಎಲ್ಲಿ ನನಸಾಗುತ್ತದೆ?

ಬಸವಣ್ಣ ಪ್ರತಿಪಾದಿಸಿದ ಲಿಂಗಾಯತ ಸಮುದಾಯವನ್ನು ಧರ್ಮವನ್ನಾಗಿ ಮಾಡಿದರೆ ಮತ್ತಷ್ಟು ಬಲ ಬರುತ್ತದೆಯಲ್ಲವೇ?
ನಿಜವಾಗಿಯೂ ಇಲ್ಲ. ಬಸವಣ್ಣ ಯಾವುದೇ ಜಾತಿ, ಮತ, ಪಂಗಡಕ್ಕೆ ಸೇರಿದ ವ್ಯಕ್ತಿಯಲ್ಲ. ಲಿಂಗಾಯತ ಸಮುದಾಯವನ್ನು ಮೀರಿದ ವ್ಯಕ್ತಿತ್ವ ಅವರದ್ದು. ವಿಶ್ವಮಾನವನಾಗಿ ಬೆಳೆದ ಬಸವಣ್ಣನನ್ನು ಪ್ರತ್ಯೇಕ ಧರ್ಮ ಸ್ಥಾಪಿಸುವ ಮೂಲಕ ನಾವು ಬಂಧಿಯಾಗಿಸುವ ಪ್ರಯತ್ನ ನಡೆಯುತ್ತಿದೆ. ಬಸವಣ್ಣನ ತತ್ವ ಪರಿಪಾಲನೆಗೂ ಧಕ್ಕೆ ಬೀಳಲಿದೆ. 

ರಾಜಕಾರಣಿಗಳ ಹಸ್ತಕ್ಷೇಪಕ್ಕೆ ವಿರೋಧ ಏಕೆ?
ಧರ್ಮದಲ್ಲಿ ಯಾವತ್ತೂ ರಾಜಕಾರಣಿಗಳ ಹಸ್ತಕ್ಷೇಪ ಇರಬಾರದು. ಯಾವುದೇ ಧರ್ಮವಾಗಲೀ ಅದು ರಾಜಕೀಯದಿಂದ ಹೊರತಾಗಿರಬೇಕೆಂಬುದು ನಮ್ಮ ನಿಲುವು. ಧರ್ಮದಲ್ಲಿ ರಾಜಕಾರಣಕ್ಕೆ ಅವಕಾಶ ನೀಡಿದರೆ, ಧರ್ಮದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ, ಘನತೆ, ಗೌರವ ಮಣ್ಣುಪಾಲಾಗುತ್ತದೆ. ಜನರಲ್ಲಿ ಮನಸ್ತಾಪಗಳು ಸೃಷ್ಟಿಯಾಗುತ್ತವೆ. ಧರ್ಮದಿಂದ ರಾಜಕಾರಣಿಗಳು ಹಾಗೂ  ಸರಕಾರಗಳು ದೂರ ಇರುವುದು ಒಳ್ಳೆಯದು. ಧರ್ಮದ ಹೊರತಾಗಿ ಸರಕಾರಕ್ಕೆ ಮಾಡಲು ಬಹಳಷ್ಟು ಕೆಲಸಗಳು ಇವೆ. ಕಳಸಾ ಬಂಡೂರಿ, ಮಹದಾಯಿ ವಿವಾದವನ್ನು ಬಗೆಹರಿಸಲಿ. ಭ್ರಷ್ಟಾಚಾರ ನಿಯಂತ್ರಿಸಲಿ. ರಾಜ್ಯದ ಅಭಿವೃದ್ಧಿಯತ್ತ ಸರಕಾರ ಗಮನ ಹರಿಸಲಿ.

ಜಾತಿ ಜನಗಣತಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಮ್ಮ ರಾಜ್ಯದಲ್ಲಿ ಹಲವಾರು ಒಳಜಾತಿಗಳಿವೆ. ಎಲ್ಲರೂ ಪರಸ್ಪರ ಅನ್ಯೋನ್ಯತೆಯಿಂದ ಸಮಾಜದಲ್ಲಿ ಬದುಕುತ್ತಿದ್ದಾರೆ. ಒಂದು ಸರಕಾರವೇ ಜಾತಿ ಜನಗಣತಿ ನಡೆಸಿ ಅದರ ವಿವರವನ್ನು ಬಹಿರಂಗಪಡಿಸಿದರೆ, ಅದು ಒಳಜಾತಿಗಳ ಸಂಘರ್ಷಕ್ಕೆ ಕಾರಣವಾಗುತ್ತದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಸರಕಾರ ಈಗಾಗಲೇ ಜಾತಿ ಜನಗಣತಿ ಪೂರೈಸಿದ್ದು, ವರದಿಯನ್ನು ಇನ್ನೂ ಪ್ರಕಟಿಸಿಲ್ಲ. ಒಂದೊಮ್ಮೆ  ವರದಿ ಪ್ರಕಟಿಸಿದರೆ  ಆಳುವ ಸರಕಾರಕ್ಕೆ ಖಂಡಿತ ಪೆಟ್ಟು ಬೀಳಲಿದೆ. ಜಾತಿ ಸಂಘರ್ಷ ಮತ್ತು ಒಳಜಾತಿ ಸಂಘರ್ಷ ಉಂಟಾಗುತ್ತದೆ. ಪ್ರಬಲವಾಗಿರುವ ಜಾತಿಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿದೆ.

ಯಾವ ಅರ್ಥದಲ್ಲಿ ಅಪಾಯವಿದೆ?
ಕರ್ನಾಟಕದಲ್ಲಿ ವೀರಶೈವ ಅಥವಾ ಲಿಂಗಾಯತ ಸಮುದಾಯ ಪ್ರಬಲ ಜನಾಂಗವಾಗಿದ್ದು, ಹಲವಾರು ಒಳಜಾತಿಗಳಿಂದ ಕೂಡಿದೆ. ಜಾತಿ ಜನಗಣತಿ ವೇಳೆ ಹಲವರು ತಮ್ಮ ಒಳಜಾತಿಗಳನ್ನು ನಮೂದಿಸಿದ್ದಾರೆ. ಸರಕಾರವು ಒಳಜಾತಿಗಳನ್ನು ಪ್ರತ್ಯೇಕ ಜಾತಿ ಎಂದು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದರೆ, ದೊಡ್ಡ ಸಮುದಾಯವಾದ ವೀರಶೈವ ಲಿಂಗಾಯತ ಜನಾಂಗ ವಿಭಜನೆಗೊಂಡು ದುರ್ಬಲಗೊಳ್ಳುತ್ತದೆ. ಆಗ ಜಾತಿ ಸಂಘರ್ಷ ನಡೆದು ಸಮಾಜದಲ್ಲಿ ಅಶಾಂತಿ ನೆಲೆಸುವ ಮತ್ತು ಸಾಮರಸ್ಯಕ್ಕೆ ಧಕ್ಕೆಯಾಗುವ ಅಪಾಯವಿದೆ. 

ಪಂಚ ಪೀಠಗಳ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯನವರನ್ನೇಕೆ ಆಹ್ವಾನಿಸುವುದಿಲ್ಲ..?
ನಾವು ನಮ್ಮ ಪೀಠದ  ಪ್ರಮುಖ ಸಮಾರಂಭಗಳಿಗೆ ಯಾವುದೇ ಪಕ್ಷದ ಸರಕಾರವಾದರೂ ಸರಿ ಮುಖ್ಯಮಂತ್ರಿಗಳನ್ನ ಆಹ್ವಾನಿಸುತ್ತೇವೆ. ಅದರಂತೆ ಹಲವು ಬಾರಿ ಸಿಎಂ ಸಿದ್ದರಾಮಯ್ಯನವರಿಗೂ ರಂಭಾಪುರಿ ಪೀಠದ ಕಾರ್ಯಕ್ರಮಗಳಿಗೆ ಕರೆದಿದ್ದೇವೆ. ಆದರೆ ಮುಖ್ಯಮಂತ್ರಿಗಳೇ ಬಂದಿಲ್ಲ. ರಾಜ್ಯದ ಮುಖ್ಯಮಂತ್ರಿಗಳಾದವರು ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಪೂರ್ವಗ್ರಹ ಪೀಡಿತ ದೃಷ್ಟಿಯಿಂದ ನೋಡಬಾರದು. ಎಲ್ಲ ಧರ್ಮದ, ಸಮುದಾಯದ ಸಮಾರಂಭಕ್ಕೆ ಹಾಜರಾಗುವ ಸಿದ್ದರಾಮಯ್ಯನವರು ಪಂಚಪೀಠ ಜಗದ್ಗುರುಗಳ ಕಾರ್ಯಕ್ರಮಕ್ಕೆ ಬರಲು ನಿರಾಕರಿಸುತ್ತಿರುವುದು ಬೇಸರ ತರಿಸಿದೆ. ಇತ್ತೀಚೆಗೆ ಉಡುಪಿಯ ಕೃಷ್ಣ ಮಠಕ್ಕೆ ರಾಷ್ಟ್ರಪತಿಗಳು ಭೇಟಿ ನೀಡಿದಾಗ ಶಿಷ್ಟಾಚಾರ ಪಾಲಿಸಲು ಸಹ ಸಿಎಂ ಅಲ್ಲಿ ಭೇಟಿ ನೀಡದೆ ಕಾರ್ಯಕ್ರಮದಿಂದ ದೂರವೇ ಉಳಿದರು. ಇದು ತಪ್ಪು ಸಂದೇಶ ನೀಡುತ್ತದೆ.

ಧರ್ಮ ರಾಜಕಾರಣ ಬೇಡ
ಪ್ರತ್ಯೇಕ ಧರ್ಮದ ಬೇಡಿಕೆ ದುರಾದೃಷ್ಟಕರ. ತಮಗೆ ಇಷ್ಟವಿಲ್ಲದಿದ್ದರೂ ಭಕ್ತರಿಗೆ ನೋವುಂಟು ಮಾಡಬಾರದೆನ್ನುವ ಉದ್ದೇಶದಿಂದ ಸಹಮತ ವ್ಯಕ್ತಪಡಿಸುತ್ತೇವೆ. ಇದರ ಹಿಂದೆ ವೀರಶೈವ ಧರ್ಮವನ್ನು ದುರ್ಬಲಗೊಳಿಸುವ ಸಂಚು ಇದೆ. ಪಂಚಪೀಠಗಳನ್ನು ಗುರಿಯಾಗಿಸಿಕೊಂಡು ರಾಜಕೀಯ ನಡೆಯುತ್ತಿದೆ.  ಸರಕಾರ ಧರ್ಮ ರಾಜಕಾರಣ ಮಾಡುವುದನ್ನು ಬಿಟ್ಟು ಕಳಸ ಬಂಡೂರಿಯಂತ ವಿವಾದಗಳನ್ನು ಬಗೆಹರಿಸಲು, ಭ್ರಷ್ಟಾಚಾರ ತಡೆಗಟ್ಟಲು, ಬರ ಪರಿಸ್ಥಿತಿ ನಿರ್ವಹಿಸಲು , ಕೆರೆ ಕಟ್ಟೆ ನಿರ್ಮಿಸಲು ಗಮನ ಹರಿಸಬೇಕು. 

ಸಂದರ್ಶನ ಬಿ.ವಿ. ಸೋಮಶೇಖರ್‌

ಟಾಪ್ ನ್ಯೂಸ್

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

sagara news

ಅಕ್ರಮ ಗೋವು ಕಳ್ಳತನ: ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

incident held at sagara

ಬಸ್ಸಿಗೆ ಕಾಯುತ್ತಿದ್ದವರಿಗೆ ಢಿಕ್ಕಿ ಹೊಡೆದ ಕಾರು: ಚಾಲಕ ಸಾವು, ಉಳಿದವರ ಸ್ಥಿತಿ ಗಂಭೀರ

ಅಲ್ಪಸಂಖ್ಯಾತರನ್ನು ಮುಗಿಸುವುದೇ ಕುಮಾರಸ್ವಾಮಿ ಗುರಿ: ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ

ಅಲ್ಪಸಂಖ್ಯಾತರನ್ನು ಮುಗಿಸುವುದೇ ಕುಮಾರಸ್ವಾಮಿ ಗುರಿ: ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ

1-dd

ನಿರುದ್ಯೋಗ ನಿವಾರಣೆಗೊಂದು ಉಪಾಯವಿದೆ: ಡಿಕೆಶಿ ಹೇಳಿದ್ದೇನು ?

GENERAL BIPIN RAWAT

ಅಫ್ಘಾನ್‌ ಪ್ರಭಾವ: ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಉಲ್ಬಣಿಸುವ ಎಚ್ಚರಿಕೆ..!

hdk

ನಾನು ಹಿಂದೆ ಕಸ ಸಂಗ್ರಹಿಸುವ ಗುತ್ತಿಗೆ ಪಡೆದು ವ್ಯಾಸಂಗ ಮಾಡಿದವ:ಎಚ್ ಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನ ಬಳಿ ಪ್ಲ್ಯಾನ್‌ ಬಿ ಎಂಬುದೇ ಇರಲಿಲ್ಲ

ನನ್ನ ಬಳಿ ಪ್ಲ್ಯಾನ್‌ ಬಿ ಎಂಬುದೇ ಇರಲಿಲ್ಲ

V K Sasikala arrives in Tamil Nadu

ಶಶಿಕಲಾ ಹಿಂದಿರುಗುವುದು ಎಐಎಡಿಎಂಕೆ ಕಾರ್ಯಕರ್ತರಿಗೂ ಬೇಕಿಲ್ಲ

ಸಭಾಪತಿ ಸ್ಥಾನ ಬೇಕು ಅಂತ ನೀವು ಕೇಳಿದ್ದೀರಾ?

ಸಭಾಪತಿ ಸ್ಥಾನ ಬೇಕು ಅಂತ ನೀವು ಕೇಳಿದ್ದೀರಾ?

ಅಧ್ಯಕ್ಷ ಮಾಡ್ತೀವಿ, ಜೆಡಿಎಸ್‌ಗೆ ಬನ್ನಿ ಅಂದಿದ್ದಾರೆ

ಅಧ್ಯಕ್ಷ ಮಾಡ್ತೀವಿ, ಜೆಡಿಎಸ್‌ಗೆ ಬನ್ನಿ ಅಂದಿದ್ದಾರೆ

ತ್ಯಾಗ ನಮ್ಮದು, ಅಧಿಕಾರ ಅನುಭವಿಸ್ತಿರೋದು ಯಾರೋ!

ತ್ಯಾಗ ನಮ್ಮದು, ಅಧಿಕಾರ ಅನುಭವಿಸ್ತಿರೋದು ಯಾರೋ!

MUST WATCH

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

udayavani youtube

ಉಕ್ಕಿ ಹರಿಯುತ್ತಿದೆ ಚಿಕ್ಕಬಳ್ಳಾಪುರದ ರಂಗಧಾಮ ಕೆರೆ..!

udayavani youtube

ಕೆರೆಯ ಮೇಲೆ ಆಂಬ್ಯುಲೆನ್ಸ್ ಹೋಗಲು ಸಹಾಯ ಮಾಡಿದ ಸಾರ್ವಜನಿಕರು

udayavani youtube

ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಗ್ರಾಮಸ್ಥರು

ಹೊಸ ಸೇರ್ಪಡೆ

ಗೋವಾ ಸರ್ಕಾರ ಕೇಂದ್ರದ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ: ಪ್ರಧಾನಿ ಮೋದಿ

ಗೋವಾ ಸರ್ಕಾರ ಕೇಂದ್ರದ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ: ಪ್ರಧಾನಿ ಮೋದಿ

1-2-aa’

ಅತಿಯಾದ ಲೈಂಗಿಕ ಗೀಳು: ಸ್ತ್ರೀ ಹಾರ್ಮೋನ್ ಚುಚ್ಚಿಸಿಕೊಂಡ ಸ್ಪೇನ್‌ನ ಮಾಜಿ ರಾಜ !

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

sagara news

ಅಕ್ರಮ ಗೋವು ಕಳ್ಳತನ: ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

incident held at sagara

ಬಸ್ಸಿಗೆ ಕಾಯುತ್ತಿದ್ದವರಿಗೆ ಢಿಕ್ಕಿ ಹೊಡೆದ ಕಾರು: ಚಾಲಕ ಸಾವು, ಉಳಿದವರ ಸ್ಥಿತಿ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.