ರಾಜಪಕ್ಸೆಗಳಿಗೆ ಚೀನ ಗೆಳೆಯ, ಭಾರತ ಆಪ್ತ ಸಂಬಂಧಿ!


Team Udayavani, Nov 23, 2019, 5:28 AM IST

raja-pakse-1

ಗೋಟಬಯಾ ಆಡಳಿತದಲ್ಲಿ ಶ್ರೀಲಂಕಾ ಮತ್ತೆ ಚೀನದ ತೆಕ್ಕೆಗೆ ಹಿಂದಿರುಗಲಿದೆ ಎಂದು ಅನೇಕರು ಭಾವಿಸುತ್ತಿದ್ದಾರೆ. ಆದರೆ ಇದಕ್ಕೆ ಆಧಾರವಿಲ್ಲ.

ಗೋಟಬಯಾ ಗೆಲುವನ್ನು ಕಳೆದ ವರ್ಷವೇ ಊಹಿಸಿದ್ದ ಮೋದಿ ಸರ್ಕಾರ, ಆಗಲೇ ರಾಜಪಕ್ಸೆಗಳೆಡೆಗೆ ಧಾವಿಸಿತ್ತು. ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುವಂಥ ಅನೇಕ ಸಂಕೇತಗಳೀಗ ಸಿಗುತ್ತಿವೆ.ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋಟಬಯಾ ರಾಜಪಕ್ಸೆಯವರ ನಿರ್ಣಾಯಕ ಗೆಲುವಿನ ನಂತರ ಭಾರತದಲ್ಲಿ ಹಲವು ರೀತಿಯ ಅಳಕು-ಅನುಮಾನಗಳನ್ನು ವ್ಯಕ್ತಪಡಿಸಲಾಗುತಿದೆ.ಗೋಟಬಯಾ ಅಡಿಯಲ್ಲಿ ಈ ದ್ವೀಪರಾಷ್ಟ್ರವು ಮತ್ತೆ ಚೀನಾದ ತೆಕ್ಕೆಗೆ ಹಿಂದಿರುಗಲಿದೆ ಎಂದು ಅನೇಕರು ಭಾವಿಸುತ್ತಿದ್ದಾರೆ. ಆದರೆ ಈ ಭಯಕ್ಕೆ ಯಾವುದೇ ಆಧಾರವಿಲ್ಲ. ಏಕೆ ಎನ್ನುವುದನ್ನು ನಾನು ಮುಂದೆ ವಿವರಿಸುತ್ತೇನೆ. ಅದಕ್ಕೂ ಮೊದಲು ಈ ಭಯದ ಉಗಮಕ್ಕೆ ಕಾರಣವೇನು ಎನ್ನುವ ಹಿನ್ನೆಲೆಯನ್ನು ಅರಿತುಕೊಳ್ಳೋಣ.ಈ ಭಯದ ಬುನಾದಿಯಿರುವುದು ಹಿಂದಿನ ಅನುಭವಗಳಲ್ಲಿ. ಗೋಟಬಯಾರ ಹಿರಿಯ ಸಹೋದರ ಮಹಿಂದಾ ರಾಜಪಕ್ಸೆ (ಈಗ ಪ್ರಧಾನಿಯಾಗಿ ನೇಮಿಸಲ್ಪಟ್ಟಿದ್ದಾರೆ) ನವೆಂಬರ್‌ 2005ರಿಂದ ಜನವರಿ 2015ರವರೆಗೆ ಈ ದ್ವೀಪ ರಾಷ್ಟ್ರದ ಅಧ್ಯಕ್ಷರಾಗಿದ್ದರು. ಮಹಿಂದಾ ರಾಜಪಕ್ಸೆ ತಮ್ಮ ಆಡಳಿತಾವಧಿಯಲ್ಲಿ ಶ್ರೀಲಂಕಾವನ್ನು ಚೀನಾದತ್ತ ಕೊಂಡೊಯ್ದರು. ಆ ಅವಧಿಯಲ್ಲಿ ಶ್ರೀಲಂಕಾ ಅಗಾಧ ಪ್ರಮಾಣದಲ್ಲಿ ಚೀನಾದ ಹೂಡಿಕೆಗಳಿಗೆ ಸಾಕ್ಷಿಯಾಯಿತು. ಅಲ್ಲದೇ ಎರಡೂ ರಾಷ್ಟ್ರಗಳ ನಡುವಿನ ರಕ್ಷಣಾ ಸಂಬಂಧಿ ಕಾರ್ಯಕ್ಷೇತ್ರದಲ್ಲೂ ಬಹಳಷ್ಟು ಸಹಭಾಗಿತ್ವ ಏರ್ಪಟ್ಟಿತು.ಚೀನಾ “ಡೆಬ್‌r ಟ್ರ್ಯಾಪ್‌ ಡಿಪ್ಲಮಸಿ’ ಎನ್ನುವ ತಂತ್ರವನ್ನು ಅನುಸರಿಸುತ್ತದೆ. ಅಂದರೆ, ಎದುರಿನ ರಾಷ್ಟ್ರವನ್ನು ಸಾಲದ ಸುಳಿಯಲ್ಲಿ ಸಿಲುಕಿಸುವ ತಂತ್ರ. ಚಿಕ್ಕ ರಾಷ್ಟ್ರಗಳಿಗೆ ಬೃಹತ್‌ ಮಟ್ಟದಲ್ಲಿ ಸಾಲ ನೀಡಿ, ಆ ಹಣವು ಅನವಶ್ಯಕ ಯೋಜನೆಗಳಿಗೆ ವಿನಿಯೋಗವಾಗುವಂತೆ ನೋಡಿಕೊಳ್ಳುತ್ತದೆ ಚೀನಾ. ಆದರೆ ಯಾವಾಗ ಈ ಚಿಕ್ಕ ರಾಷ್ಟ್ರಗಳು ಸಾಲ ಹಿಂದಿರುಗಿಸಲು ತಿಣುಕಾಡುತ್ತವೋ, ಆಗ ಚೀನಾ ಬಲವಂತವಾಗಿ ಆ ರಾಷ್ಟ್ರಗಳಿಂದ ವ್ಯೂಹಾತ್ಮಕ ಲಾಭವನ್ನು ಪಡೆಯುತ್ತದೆ. ಇದೇ ರೀತಿಯೇ ಅದು ಶ್ರೀಲಂಕಾವನ್ನು ಸಾಲದ ಜಾಲಕ್ಕೆ ಸಿಲುಕಿಸಿತು. ಸಾಲ ಹಿಂದಿರುಗಿಸಲಾಗದೆ ಮಹಿಂದಾ ರಾಜಪಕ್ಸೆಯವರು ಚೀನಾದ ಯುದ್ಧ ನೌಕೆಗಗಳು ಮತ್ತು ಜಲಾಂತರ್ಗಾಮಿಗಳಿಗೆ ತಮ್ಮ ಬಂದರುಗಳಲ್ಲಿ ನೆಲೆ ಊರಲು ಅನುಮತಿಸಿದರು. ಈ ಸಂಗತಿ ಭಾರತವನ್ನು ಎದ್ದು ಕೂಡುವಂತೆ ಮಾಡಿತು.ಆದರೆ, ನಿರೀಕ್ಷಿಸಿದಂತೆಯೇ ಶ್ರೀಲಂಕಾರದಲ್ಲಿ, ಹೆಚ್ಚುತ್ತಿರುವ ಚೀನಾದ ಉಪಸ್ಥಿತಿಯ ವಿರುದ್ಧ ಪ್ರತಿರೋಧ ಆರಂಭವಾಯಿತು.

2015ರಅಧ್ಯಕ್ಷೀಯ ಚುನಾವಣೆಯಲ್ಲಿ ಈ ವಿಚಾರವೇ ಪ್ರಮುಖ ಚರ್ಚಾವಸ್ತುವಾಯಿತು. ಚೀನಾದ ಬೆಳೆಯುತ್ತಿರುವ ಪ್ರಭಾವಳಿಯನ್ನುವಿರೋಧಿಸಿದ ಮೈತ್ರಿಪಾಲ ಸಿರಿಸೇನ, ದ್ವೀಪ ರಾಷ್ಟ್ರವು ಚೀನಾದ ವಸಾಹತು ಪ್ರದೇಶವಾಗಿ ಮಾರ್ಪಡುತ್ತದೆ ಎಂದು ಭಯದ ಚಾಟಿ ಬೀಸಿಚುನಾವಣೆಯಲ್ಲಿ ಗೆಲುವು ಸಾಧಿಸಿಬಿಟ್ಟರು. (ಇದಕ್ಕೂ ಮುನ್ನ ಸಿರಿಸೇನಾ ಅವರು ಮಹಿಂದಾ ರಾಜಪಕ್ಸೆಯ ಪಕ್ಷದಲ್ಲಿ ಸಚಿವರಾಗಿದ್ದವರು! ಶ್ರೀಲಂಕಾದ ಹಿಡಿತವೆಲ್ಲವೂ ರಾಜಪಕ್ಸೆ ಕುಟುಂಬದ ಹಿಡಿತದಲ್ಲಿದೆ, ಸರ್ವಾಧಿಕಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ಪಕ್ಷದಿಂದ ಹೊರಬಂದು, ಮಹಿಂದಾ ವಿರುದ್ಧ ಸ್ಪರ್ಧಿಸಿದ್ದರು)ಮಹಿಂದಾ ರಾಜಪಕ್ಸೆ ಆಡಳಿತಾವಧಿಯಲ್ಲಿ ಎಲ್‌ಟಿಟಿಇ ವಿರುದ್ಧ ಭಯಾನಕ ನಿರ್ಣಾಯಕ ಯುದ್ಧ ನಡೆದಿತ್ತು. ಆಗ ಮಹಿಂದಾ ತಮ್ಮ ದೇಶಕ್ಕೆ ಕಂಟಕಪ್ರಾಯವಾಗಿದ್ದ 25 ವರ್ಷಗಳ ನಾಗರಿಕ ಯುದ್ಧವನ್ನು ಅಂತ್ಯಗೊಳಿಸಿದರು. ಆ ಸಮಯದಲ್ಲಿ ರಕ್ಷಣಾ ಸಚಿವರಾಗಿದ್ದವರು ಗೋಟಬಯಾ ರಾಜಪಕ್ಸೆ.””ಗೋಟಬಯಾ ಅವರ ನೇತೃತ್ವದಲ್ಲಿ ನಡೆದ ಎಲ್‌ಟಿಟಿಇ ವಿರುದ್ಧದ ಸಮರದಲ್ಲಿ, ಶ್ರೀಲಂಕಾದ ಸೇನೆಯು ವ್ಯಾಪಕ ಮಾನವ ಹಕ್ಕು ಉಲ್ಲಂಘನೆ ಮಾಡಿತು, ಅಮಾಯಕ ತಮಿಳು ನಾಗರಿಕರನ್ನು ಕೊಲ್ಲಲಾಯಿತು, ಆಸ್ಪತ್ರೆ, ಶಾಲೆಗಳು ಮತ್ತು ನಾಗರಿಕರ ಮನೆಗಳ ಮೇಲೆ ಬಾಂಬ್‌ ದಾಳಿ ಮಾಡಲಾಯಿತು”ಎನ್ನುವ ಆರೋಪ ಇದೆ. ಈ ವಿಚಾರದಲ್ಲಿ ರಾಜಪಕ್ಸೆ ಸಹೋದರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗೂ, ಹಲವು ನಿರ್ಬಂಧಗಳಿಗೂ ಗುರಿಯಾದರು. ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಷ್ಟೇ ಅಲ್ಲದೇ, ಜಪಾನ್‌ನಂಥ ಸಾಲದಾತ ರಾಷ್ಟ್ರವೂ ಶ್ರೀಲಂಕಾದೊಂದಿಗಿನ ಸಂಬಂಧವನ್ನು ಕಡಿದುಕೊಂಡಿತು.ಆ ಸಮಯದಲ್ಲಿ ಭಾರತ ಕೂಡ ತನ್ನದೇ ಕಾರಣಗಳಿಗಾಗಿ ಶ್ರೀಲಂಕಾದಿಂದ ವಿಮುಖವಾಯಿತು. ಶ್ರೀಲಂಕಾದಲ್ಲಿನ ತಮ್ಮ ತಮಿಳು ಸಹೋದರರ ಮೇಲೆ ನಡೆದ ಅತ್ಯಾಚಾರಗಳಿಂದಾಗಿ ಕ್ರುದ್ಧರಾಗಿದ್ದ ಭಾರತೀಯ ತಮಿಳರನ್ನು ಶಾಂತಗೊಳಿಸಲು ಭಾರತ ಈ ನಡೆ ಅನುಸರಿಸಬೇಕಾಯಿತು. ಶ್ರೀಲಂಕನ್‌ ಪಡೆಗಳ ಕಾರ್ಯಾಚರಣೆಗಳಿಂದಾಗಿ ಲಕ್ಷಾಂತರ ತಮಿಳರು ಒಂದೋ ಕಾಣೆಯಾದರು, ಇಲ್ಲವೇ ದ್ವೀಪರಾಷ್ಟ್ರವನ್ನು ತೊರೆದರು.ಈ ಸಮಯದಲ್ಲೇ ಶ್ರೀಲಂಕಾಗೆ ಶ್ರೀರಕ್ಷೆಯಾಗಿ ನಿಂತಿತು ಚೀನಾ! ಚೀನಾ ಶ್ರೀಲಂಕಾವನ್ನು ಬೆಂಬಲಿಸಿದ್ದಷ್ಟೇ ಅಲ್ಲದೇ, ಅದರ ವಿರುದ್ಧ ವಿಧಿಸಲಾಗಿದ್ದ ಜಾಗತಿಕ ನಿರ್ಬಂಧಗಳಿಂದ ಕಾಪಾಡಿ, ಸಂಕಷ್ಟದಲ್ಲಿದ್ದ ಈ ದ್ವೀಪರಾಷ್ಟ್ರಕ್ಕೆ ಬೃಹತ್‌ ಪ್ರಮಾಣದಲ್ಲಿ ಆರ್ಥಿಕ ಸಹಾಯ ನೀಡಿತು. ಇದರಿಂದ ಸಂತುಷ್ಟರಾದ ಮಹಿಂದಾ ರಾಜಪಕ್ಸೆ, ಕೃತಜ್ಞತೆಯ ರೂಪದಲ್ಲಿ ಚೀನಾಗೆ ತಮ್ಮ ನೆಲದಲ್ಲಿ ಹೆಚ್ಚು ಹೆಜ್ಜು ಗುರುತು ಮೂಡಿಸುವುದಕ್ಕೆ ಅನುವು ಮಾಡಿಕೊಟ್ಟರು.

ಸಹಜವಾಗಿಯೇ, ಮಹಿಂದಾರ ಈ ನಡೆಗೆ ಶ್ರೀಲಂಕನ್ನರಿಂದ ಎದುರಾದ ಪ್ರತಿರೋಧ ಹಾಗೂ ತಮಿಳು ನಾಗರಿಕರಿಗೆ ರಾಜಪಕ್ಸೆಸಹೋದರರ ಮೇಲೆ ಮೂಡಿದ್ದ ಆಳವಾದ ಅಸಮಾಧಾನದ ಫ‌ಲವಾಗಿ ಸಿರಿಸೇನಾ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದುಬಿಟ್ಟರು.ಸೋಲಿನಿಂದ ಆಘಾತಗೊಂಡ ಮಹಿಂದಾ, ತಮ್ಮ ಸೋಲಿನಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದರು. 2015ರಲ್ಲಿ ಅಧ್ಯಕ್ಷರಾಗಿ ಅಧಿಕಾರಕ್ಕೇರಿದ ಸಿರಿಸೇನಾ, ಆರಂಭಿಕ ವರ್ಷಗಳಲ್ಲಿ ಚೀನಾದ ಪ್ರಭಾವವನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಜಾರಿಗೆ ತಂದರು.ಆದರೆ, ಕೆಲವೇ ವರ್ಷಗಳಲ್ಲಿ ಸಿರಿಸೇನಾ ಅವರು ಚೀನಾದ ಪರ ಮೃದು ಧೋರಣೆ ತೋರಿಸಲಾರಂಭಿಸಿದರು! ಅದೂ ಯಾವ ಮಟ್ಟಕ್ಕೆಂದರೆ, ಚೀನಿಯರಿಗೆ ವಿವಾದಾಸ್ಪದ ಹಂಬನ್‌ತೋಟ ಬಂದರನ್ನೇ ಬಿಟ್ಟುಕೊಟ್ಟರು. ಇದಷ್ಟೇ ಅಲ್ಲದೆ, ತಮ್ಮ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ವಿರುದ್ಧ ತಿರುಗಿಬಿದ್ದ ಸಿರಿಸೇನಾ, ಅವರನ್ನು ಕೆಳಕ್ಕಿಳಿಸಿ, ಆ ಜಾಗದಲ್ಲಿ ಮತ್ತೆ ಮಹಿಂದಾ ರಾಜಪಕ್ಸೆಯನ್ನೇ ಪ್ರಧಾನಿಯಾಗಿಸಲು ಮುಂದಾದರು! ಅವರ ಪ್ರಯತ್ನ ವಿಫ‌ಲವಾಯಿತು. ಸುಮಾರು ಎರಡು ವರ್ಷ ನಡೆದ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಮತ್ತು ಅಧ್ಯಕ್ಷ ಸಿರಿಸೇನಾ ನಡುವಿನ ತೀವ್ರಭಿನ್ನಾಭಿಪ್ರಾಯಗಳಿಂದಾಗಿ ಶ್ರೀಲಂಕಾ ಆಡಳಿತಕ್ಕೆ ಗರ ಬಡಿದು, ಹಲವು ತೊಂದರೆಗಳು ಎದುರಾದವು. ಶ್ರೀಲಂಕನ್ನರು, ಅದರಲ್ಲೂ ಬಹುಸಂಖ್ಯಾತ ಸಿಂಹಳಿಯರು, ಸಿರಿಸೇನಾರ ಮೇಲೆ ಮುನಿಸಿಕೊಂಡರು.ಸಿರಿಸೇನಾ ಆಡಳಿತಕ್ಕೆ ಕೊನೆಯ ಬಲವಾದ ಪೆಟ್ಟು ಬಿದ್ದದ್ದು, ಕಳೆದ ವರ್ಷ ಉಗ್ರರಿಂದ ಚರ್ಚ್‌ನ ಮೇಲೆ ಬಾಂಬ್‌ ದಾಳಿ ನಡೆದ ವೇಳೆಯಲ್ಲಿ. ಆ ದಾಳಿಯಲ್ಲಿ 259 ಮಂದಿ ನಿಧನರಾದರೆ, 500 ಜನರು ಗಾಯಗೊಂಡರು. ಗಮನಾರ್ಹ ಸಂಗತಿಯೆಂದರೆ, ಈ ರೀತಿಯ ದಾಳಿ ನಡೆಯಬಹುದು ಎಂದು ಭಾರತವು ಶ್ರೀಲಂಕನ್‌ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡಿತ್ತು. ಆದರೆ ಭಾರತದ ಎಚ್ಚರಿಕೆಯನ್ನು ಸಿರಿಸೇನಾ ಮತ್ತು ಶ್ರೀಲಂಕಾದ ಗುಪ್ತಚರ ಇಲಾಖೆ ಗಂಭೀರವಾಗಿ ಪರಿಗಣಿಸಲೇ ಇಲ್ಲ.

ಇದರಿಂದಾಗಿ ಸಿರಿಸೇನಾ ವಿರುದ್ಧ ಜನಾಕ್ರೋಶ ಹೆಚ್ಚಾಗಿಬಿಟ್ಟಿತು.ಅತ್ತ ವಿಕ್ರಮಸಿಂಘೆ ವಿರುದ್ಧ ನಿರಂತರವಾಗಿ ಜಗಳವಾಡುತ್ತಿದ್ದಸಿರಿಸೇನಾಗೆ ಹೋಲಿಸಿದರೆ, ಗೋಟಬಯಾ ರಾಜಪಕ್ಸೆಯಲ್ಲಿ ಜನ ದೃಢ ನಾಯಕತ್ವದ ಗುಣವನ್ನು ಕಂಡರು. ತಮಿಳು ಪ್ರತ್ಯೇಕತಾವಾದ ಮತ್ತು ನಾಗರಿಕ ಯುದ್ಧವನ್ನು ಕೊನೆಗೊಳಿಸುವಲ್ಲಿ ಅವರು ತೋರಿದ್ದ ನಿರ್ಣಾಯಕ ನಾಯಕತ್ವವನ್ನು ನೋಡಿದ್ದರು ಶ್ರೀಲಂಕನ್ನರು. ಹೀಗಾಗಿ ಚರ್ಚ್‌ ಮೇಲಿನ ದಾಳಿಯ ನಂತರ, ಇಂಥ ಉಗ್ರ ಕೃತ್ಯಗಳನ್ನು ಹತ್ತಿಕ್ಕುವುದಾಗಿ ಭರವಸೆ ನೀಡಿದ ಗೋಟಬಯಾಗೆ ಗಣನೀಯ ಬೆಂಬಲ ಸಿಕ್ಕಿತು.ಫ‌ಲಿತಾಂಶವನ್ನು ಮೊದಲೇ ಊಹಿಸಿತ್ತು ಭಾರತಗೋಟಬಯಾ ಗೆಲುವನ್ನು ಕಳೆದ ವರ್ಷವೇ ಊಹಿಸಿದ್ದ ಭಾರತ, ಆಗಲೇ ರಾಜಪಕ್ಸೆ ಸಹೋದರರೆಡೆಗೆ ಸ್ನೇಹ ಹಸ್ತ ಚಾಚಿತು. ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ನವದೆಹಲಿಗೆ ಮಹಿಂದಾ ರಾಜಪಕ್ಸೆಯನ್ನು ಆಹ್ವಾನಿಸಿದ್ದರು. ಆಗ ಇವರಿಬ್ಬರೂ ಎರಡೂ ರಾಷ್ಟ್ರಗಳನ್ನು ಕಾಡುತ್ತಿರುವ ಭದ್ರತಾ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು.

ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಈಸ್ಟರ್‌ ಬಾಂಬಿಂಗ್‌ ಘಟನೆಯ ನಂತರ ಶ್ರೀಲಂಕಾಗೆ ಭೇಟಿ ನೀಡಿದ್ದ ನರೇಂದ್ರ ಮೋದಿ, ಮಹಿಂದಾರನ್ನು ಭೇಟಿಯಾಗಿ ಸ್ನೇಹ ವೃದ್ಧಿಸಿಕೊಂಡರಂತೆ. ಆ ಸಮಯದಲ್ಲಿ ಇಬ್ಬರೂ ಉಗ್ರವಾದದ ಅಪಾಯದ ಬಗ್ಗೆ ಚರ್ಚಿಸಿದರಲ್ಲದೇ, ಈ ವಿಚಾರದಲ್ಲಿ ಮೋದಿಯವರು ಅನೇಕ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರಂತೆ. ಈ ವರ್ಷದ ಚುನಾವಣೆಯಲ್ಲಿ ಗೋಟಬಯಾ ಸ್ಪರ್ಧಿಸುತ್ತಾರೆ ಎಂದು ಘೋಷಣೆ ಆಗುವುದಕ್ಕಿಂತ ಮುನ್ನವೇ ಕೇಂದ್ರ ಸರ್ಕಾರವು ರಾಜಪಕ್ಸೆಗಳೊಂದಿಗೆ ಮಾತನಾಡಿ, ನಾವು ನಿಮ್ಮೊಂದಿಗಿದ್ದೇವೆ ಎಂದು ಸಹೋದರರಿಗೆ ಪರೋಕ್ಷ ಸಂದೇಶ ಕಳುಹಿಸಿತು. ಇದಕ್ಕೆ ಪೂರಕವೆಂಬಂತೆ, ತಮ್ಮ ಚುನಾವಣಾ ಪ್ರಚಾರದ ವೇಳೆ ಗೋಟಬಯಾ ಅವರು ಭಾರತದೊಂದಿಗೆ ನಿಕಟ ಸ್ನೇಹವನ್ನು ಸ್ಥಾಪಿಸುವ ಕುರಿತು ಮಾತನಾಡಿದ್ದರು. “”ಚೀನಾ ನಮ್ಮ ಗೆಳೆಯನಾಗಿ ಉಳಿಯಲಿದೆ, ಆದರೆ ಭಾರತ ನಮ್ಮ ಆಪ್ತ ಸಂಬಂಧಿ” ಎಂದಿದ್ದರು.

ಶ್ರೀಲಂಕಾದ ನೂತನ ಅಧ್ಯಕ್ಷರು ಭಾರತದೊಂದಿಗಿನ ಸ್ನೇಹವನ್ನು ಕಾಪಿಡುವಂಥ ನೀತಿಯನ್ನು ಅನುಸರಿಸಲಿದ್ದಾರೆ ಎನ್ನುವ ಬಗ್ಗೆ ವಿದೇಶಾಂಗ ಇಲಾಖೆಯ ಅಧಿಕಾರಿಗಳಿಗೆಕಾನ್ಫಿಡೆನ್ಸ್‌ ಇದೆ. ಈಗಲಾಗಲೇ ಮಹಿಂದಾ ರಾಜಪಕ್ಸೆ ಕೂಡ, “”ಭಾರತದೊಂದಿಗೆ ನಿಕಟ ಭದ್ರತಾ ಸಹಕಾರ ಸಾಧಿಸುವುದು ತಮ್ಮ ಮೊದಲ ಆದ್ಯತೆ” ಎಂದಿದ್ದಾರೆ. ತಮ್ಮ ದೇಶ ಸಮೃದ್ಧಿ ಸಾಧಿಸುವುದಕ್ಕೆ ಭಾರತದ ಸಹಭಾಗಿತ್ವ ಮುಖ್ಯ ಎಂಬುದು ಶ್ರೀಲಂಕನ್‌ ಆಡಳಿತಕ್ಕೆ ಮನವರಿಕೆಯಾಗಿದೆ. ಉದಾಹರಣೆಗೆ, ಕೊಲಂಬೋ ಇಂಟರ್‌ನ್ಯಾಷನಲ್‌ ಫೈನಾನ್ಷಿಯಲ್‌ ಸಿಟಿಯ ಯಶಸ್ಸಿನ ಹಿಂದೆ ಭಾರತೀಯ ಉದ್ಯಮಿಗಳ ಪಾತ್ರ ಬಹಳಷ್ಟಿದೆ. ಈ ವಿಚಾರದಲ್ಲಿ ಭಾರತದೊಂದಿಗೆ ಈಗ ಸಕ್ರಿಯ ಸಹಭಾಗಿತ್ವ ಸಾಧಿಸಬೇಕಿದೆ ಎಂದು ಗೋಟಬಯಾ ಕೆಲವೇ ದಿನಗಳ ಹಿಂದಷ್ಟೇ ಹಿರಿಯ ಅಧಿಕಾರಿಗಳಿಗೆ ಹೇಳಿದ್ದಾರೆ.ಗೋಟಬಯಾ ಗೆಲುವಿನ ನಂತರ ಅವರಿಗೆ ಮೊದಲು ಅಭಿನಂದನೆ ಸಲ್ಲಿಸಿದ ಜಾಗತಿಕ ನಾಯಕರಲ್ಲಿ ಪ್ರಧಾನಿ ಮೋದಿ ಒಬ್ಬರು. ತದನಂತರ, ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಎರಡು ದಿನ ಕೊಲಂಬೋದ ಪ್ರವಾಸವನ್ನೂ ಕೈಗೊಂಡರು. ಎರಡೂ ರಾಷ್ಟ್ರಗಳ ನಡುವೆ “”ಫ‌ಲಪ್ರದಮಾತುಕತೆ” ನಡೆಯಿತು.ನವೆಂಬರ್‌ 29ರಂದು ಗೋಟಬಯಾ ರಾಜಪಕ್ಸೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲೇ ಅವರು ಭಾರತಕ್ಕೆ ಮೊದಲ ವಿದೇಶಾಂಗ ಭೇಟಿ ಕೈಗೊಳ್ಳುತ್ತಿರುವುದು ಅಪಾರ ಮಹತ್ವವನ್ನು ಪಡೆದಿದೆ. ಇದಷ್ಟೇ ಅಲ್ಲದೇ, ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುವಂಥ ಅನೇಕ ಪ್ರೋತ್ಸಾಹದಾಯಕ ಸಂಕೇತಗಳೂ ದ್ವೀಪರಾಷ್ಟ್ರದಿಂದ ಸಿಗಲಾರಂಭಿಸಿವೆ.

ರಾಜಪಕ್ಸೆ ಸಹೋದರರು ಅಧಿಕಾರಕ್ಕೇರಿರುವುದು ಭಾರತದ ಪಾಲಿಗೆ ದೊಡ್ಡ ಅವಕಾಶವೇ ಹೊರತು, ಅಪಾಯವಲ್ಲ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮತ್ತು ನೀತಿ ತಜ್ಞರು ಹೇಳುತ್ತಿದ್ದಾರೆ.

(ಮೂಲ: ಸ್ವರಾಜ್ಯ)

– ಜೈದೀಪ್‌ ಮಜುಂದಾರ್‌

ಟಾಪ್ ನ್ಯೂಸ್

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.