ರಾಹುಲ್‌ ನಾಯಕತ್ವಕ್ಕೆ ಫೆಡರಲ್‌ ಫ್ರಂಟ್ ಆತಂಕ


Team Udayavani, May 23, 2018, 10:20 AM IST

rahul.jpg

ಪ್ರಧಾನಿ ಹುದ್ದೆ ಮೇಲೆ ಸದ್ಯದ ಮಟ್ಟಿಗೆ ಹಾಲಿ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಜತೆಯಲ್ಲೇ ಇನ್ನೂ ಹಲವಾರು ಕಣ್ಣುಗಳಿವೆ ಎಂಬುದು ಮಾತ್ರ ಒಪ್ಪಿಕೊಳ್ಳಲೇಬೇಕಾದ ಸತ್ಯ. ಇದರಲ್ಲಿ ಮುಂಚೂಣಿಯಲ್ಲಿರುವವರು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ ಮುಲಾಯಂ ಸಿಂಗ್‌ ಯಾದವ್‌, ಮಾಯಾವತಿ, ಮಹಾರಾಷ್ಟ್ರದ ಶರದ್‌ ಪವಾರ್‌. ಇವರು ಪ್ರಾದೇಶಿಕ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದರೆ ರಾಹುಲ್‌ಗೆ ತೀವ್ರ ಪ್ರತಿಸ್ಪರ್ಧೆ ನೀಡುವುದಂತೂ ಖಂಡಿತ.

ಮಹಾಘಟಬಂಧನ್‌ ಅಥವಾ ಫೆಡರಲ್‌ ಫ್ರಂಟ್‌ ಹೆಸರಲ್ಲಿ ದೇಶಾದ್ಯಂತ ಪ್ರತಿಪಕ್ಷಗಳು ಒಗ್ಗೂಡುತ್ತಿರುವುದರಿಂದ ಕಾಂಗ್ರೆಸ್‌ಗೆ ನಷ್ಟವೋ ಅಥವಾ ಲಾಭವೋ ಎಂಬ ಚರ್ಚೆ ಶುರುವಾಗಿದೆ. ಒಂದೊಮ್ಮೆ ದೇಶಾದ್ಯಂತ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾದರೂ, ಇದರಿಂದ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗಂತೂ ಖಂಡಿತ ಹೆಚ್ಚಿನ ಲಾಭ ಸಿಗಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. 

ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಹೊರತಾಗಿ ಫೆಡರಲ್‌ ಫ್ರಂಟ್‌ ಕಟ್ಟಿಕೊಳ್ಳಬೇಕು ಎಂಬುದು ಈ ಒಕ್ಕೂಟದ ಮುಂಚೂಣಿಯಲ್ಲಿರುವ ತೆಲಂಗಾಣದ ಕೆ.ಸಿ.ಚಂದ್ರಶೇಖರ್‌ ಮತ್ತು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರ ಚಿಂತನೆ. ಆದರೆ ಈ ಇಬ್ಬರೂ ನಾಯಕರಿಗೂ ಕಾಂಗ್ರೆಸ್‌ ಅಂದರೆ ಅಷ್ಟಕಷ್ಟೇ ಎಂಬ ಸನ್ನಿವೇಶವಿರುವಾಗ ರಾಹುಲ್‌ಗೆ ಹೇಗೆ ಲಾಭವಾಗುತ್ತದೆ ಎಂಬ ಚರ್ಚೆಗಳೂ ಶುರುವಾಗಿವೆ. 

ಇದೀಗ ಕರ್ನಾಟಕ ಚುನಾವಣಾ ಫ‌ಲಿತಾಂಶ ಹೊರಬಿದ್ದ ಮೇಲೆ ಮತ್ತೆ ಫೆಡರಲ್‌ ಫ್ರಂಟ್‌ನ ಚರ್ಚೆಗಳು ಆರಂಭವಾಗಿವೆ. ಇದಕ್ಕೆ ಪೂರಕವೆಂಬಂತೆ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕಾರ ಮಾಡುವಾಗ ಫೆಡರಲ್‌ ಫ್ರಂಟ್‌ನಲ್ಲಿ ಗುರುತಿಸಿಕೊಂಡಿರುವ ಪ್ರಾದೇಶಿಕ ಪಕ್ಷಗಳ ನಾಯಕರು ಹಾಜರಿರಬೇಕು, ಈ ಮೂಲಕ ತಮ್ಮ ಬಲಪ್ರದರ್ಶನವಾಗಬೇಕು ಎಂಬ ನಿಟ್ಟಿನಲ್ಲಿ ತಯಾರಿಯೂ ನಡೆಯುತ್ತಿದೆ. 

ಇರಲಿ, ಇದಕ್ಕೂ ಮುನ್ನ, ಪ್ರಧಾನಿ ಹುದ್ದೆ ಎಂಬುದು ರಾಹುಲ್‌ಗೆ ಸಲೀಸಾಗಿ ಸಿಗುವಂತಿದೆಯೇ? ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರ ಸಿಗುವ ಸಾಧ್ಯತೆಗಳೇ ಅಷ್ಟಾಗಿ ಗೋಚರಿಸುತ್ತಿಲ್ಲ. 

ಕರ್ನಾಟಕ ಚುನಾವಣೆ ಪ್ರಚಾರದ ಸಂದರ್ಭವದು; ನಾನು ಪ್ರಧಾನಿಯಾಗಲು ಸಿದ್ಧನಿದ್ದೇನೆ ಎಂಬ ಮಾತು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕಡೆಯಿಂದ ಬಂದ ಕೂಡಲೇ ಸಂಚಲನವೇ ಉಂಟಾಗಿತ್ತು. ಈ ಹಿಂದೆ ರಾಹುಲ್‌ ಅಮೆರಿಕ ಪ್ರವಾಸದಲ್ಲಿದ್ದಾಗ ಅವಕಾಶ ಸಿಕ್ಕರೆ ಪ್ರಧಾನಿಯಾಗುತ್ತೇನೆ ಎಂದು ಹೇಳಿದ್ದರು, ದೇಶೀ ನೆಲದಲ್ಲಿ ಈ ಬಗ್ಗೆ ಎಂದಿಗೂ ಮಾತನಾಡಿರಲಿಲ್ಲ. ಇದೇ ಮೊದಲ ಬಾರಿಗೆ ರಾಹುಲ್‌ ಪ್ರಧಾನಿ ಯಾಗಲು ಸಿದ್ಧ ಎಂದು ದೇಶದಲ್ಲೇ ಹೇಳಿದಾಗ, ಅದು ಹೇಗೆ ಎಂಬ ಪ್ರಶ್ನೆಯಂತೂ ಮೂಡಿದೆ. ಸದ್ಯ ಲೋಕಸಭೆಯಲ್ಲಿ 44ರ ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್‌, ರಾಹುಲ್‌ ಅವರನ್ನು ಪ್ರಧಾನಿ ಮಾಡಬೇಕು ಎಂದಾದರೆ ಕಡೇ ಪಕ್ಷ 150ರಿಂದ 200 ಸ್ಥಾನಗಳಲ್ಲಾದರೂ ಜಯಿಸಬೇಕು.

ಇದು ಸಾಧ್ಯವೋ ಅಥವಾ ಅಸಾಧ್ಯವೋ ಎಂಬುದು ಸದ್ಯದ ಮಟ್ಟಿಗೆ ಚರ್ಚೆಗೆ ನಿಲುಕದ ವಿಷಯ. ಆದರೆ, ಪ್ರಧಾನಿ ಹುದ್ದೆ ಮೇಲೆ ಸದ್ಯದ ಮಟ್ಟಿಗೆ ಹಾಲಿ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಜತೆಯಲ್ಲೇ ಇನ್ನೂ ಹಲವಾರು ಕಣ್ಣುಗಳಿವೆ ಎಂಬುದು ಮಾತ್ರ ಒಪ್ಪಿಕೊಳ್ಳಲೇಬೇಕಾದ ಸತ್ಯ. ಇದರಲ್ಲಿ ಮುಂಚೂಣಿಯಲ್ಲಿರುವವರು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ ಮುಲಾಯಂ ಸಿಂಗ್‌ ಯಾದವ್‌, ಮಾಯಾವತಿ, ಮಹಾರಾಷ್ಟ್ರದ ಶರದ್‌ ಪವಾರ್‌. ಇವರು ಪ್ರಾದೇಶಿಕ ಮಟ್ಟದಲ್ಲಿ ತಮ್ಮ ತಮ್ಮ ರಾಜ್ಯಗಳಲ್ಲಿ ಉತ್ತಮ ಸಾಧನೆ ಮಾಡಿದರೆ ರಾಹುಲ್‌ಗೆ ತೀವ್ರ ಪ್ರತಿ ಸ್ಪರ್ಧೆ ನೀಡುವುದಂತೂ ಖಂಡಿತ.

ಫೆಡರಲ್‌ ಫ್ರಂಟ್‌ ಅಥವಾ ಮಹಾಘಟಬಂಧನ್‌ ಎಂಬುದು ಆರಂಭವಾಗಿದ್ದೇ ಬಿಹಾರದಲ್ಲಿ ನಿತೀಶ್‌ಕುಮಾರ್‌-ಲಾಲು ಮತ್ತು ರಾಹುಲ್‌ ಜೋಡಿ ಬಿಜೆಪಿ ವಿರುದ್ಧ ಅಮೋಘವಾಗಿ ಗೆದ್ದಾಗ. ಇದೇ ಮಾದರಿಯನ್ನು ಇಡೀ ದೇಶಕ್ಕೆ ಅನ್ವಯಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜೋಡಿಯನ್ನು ಮಣಿಸಬಹುದು ಎಂಬುದನ್ನು ಈ ಪಕ್ಷಗಳು ಕಂಡುಕೊಂಡಿದ್ದವು. ಆದರೆ, ಬಿಹಾರದಲ್ಲಿ ಮಹಾಘಟಬಂಧನ್‌ನಿಂದ ನಿತೀಶ್‌ಕುಮಾರ್‌ ಅವರು ಹೊರಬಂದು ಬಿಜೆಪಿ ಜತೆ ಕೈಜೋಡಿಸಿದಾಗ ಲಾಲು ಮತ್ತು ಕಾಂಗ್ರೆಸ್‌ನ ಕನಸಿಗೊಂದು ಪೆಟ್ಟು ಬಿದ್ದಿತ್ತು. 

ಇದೀಗ ಕರ್ನಾಟಕದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸೇರಿ ಸರ್ಕಾರ ರಚನೆ ಮಾಡುತ್ತಿರುವ ವಿಚಾರ ಮಹಾಘಟಬಂಧನ್‌ ಅಥವಾ ಫೆಡರಲ್‌ ಫ್ರಂಟ್‌ಗೆ ಜೀವ ತಂದಿದೆ. ಚುನಾವಣಾ ಪೂರ್ವದಲ್ಲಿ ಹೊಂದಾಣಿಕೆ ಇಲ್ಲದಿದ್ದರೂ, ಚುನಾವಣಾ ನಂತರ ದಲ್ಲಾದರೂ ಈ ಎರಡೂ ಸೇರಿ ಸರ್ಕಾರ ರಚಿಸುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುತ್ತಿರುವುದು ಧನಾತ್ಮಕ ಸಂದೇಶ ಎನ್ನುವುದು ದೇಶದ ಬಹುತೇಕ ಪ್ರತಿಪಕ್ಷಗಳ 
ಮನದ ಮಾತು. ಇದೇ ಮಾದರಿಯನ್ನು ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಅನ್ವಯ ಮಾಡಬೇಕು. ಈಗಾಗಲೇ ಬಿಜೆಪಿ ಪ್ರಾಬಲ್ಯಗಳಿಸಿರುವ ಕಡೆ ಸಮರ್ಥವಾಗಿ ಎದುರಿಸಬೇಕು, ಹಾಗೆಯೇ ಎಲ್ಲಿ ಬಿಜೆಪಿ ತಳವೂರಿಲ್ಲವೋ ಅಲ್ಲಿ ಬೆಳೆಯಲು ಬಿಡಲೇಬಾರದು ಎಂಬುದು ಈ ಎಲ್ಲಾ ರಾಜ್ಯಗಳಲ್ಲಿರುವ ಪಕ್ಷಗಳ ಚಿಂತನೆ. ಹೀಗಾಗಿಯೇ ಬಿಜೆಪಿಗೆ ಪ್ರತಿಯಾಗಿ ಗಟ್ಟಿ ಒಕ್ಕೂಟ ರಚಿಸಿಕೊಳ್ಳಲು ಮುಂದಡಿ ಇಡುತ್ತಿವೆ. 

ಈ ಫೆಡರಲ್‌ ಫ್ರಂಟ್‌ನ ವಿಚಾರ ಪಕ್ಕಕ್ಕಿರಲಿ, ಸದ್ಯದ ಮಟ್ಟಿಗೆ ರಾಹುಲ್‌ ಗಾಂಧಿ ಅವರ ಪ್ರಧಾನಿ ಕನಸಿಗೆ ಭಂಗ ಉಂಟಾಗು ವುದೇನಿದ್ದರೂ ಅದು ಪ್ರಧಾನಿ ಮೋದಿ ಅವರಿಗಿಂತ ಹೆಚ್ಚಾಗಿ, ತಮ್ಮ ಜತೆಗಿನ ಪಕ್ಷಗಳ ನಾಯಕರಿಂದಲೇ. ಮೊದಲಿಗೆ ಮಮತಾ ಬ್ಯಾನರ್ಜಿ ಅವರು, ತಾವು ಪ್ರಧಾನಿಯಾಗಲು ಸಿದ್ಧ ಎಂದು ಹೇಳಿಲ್ಲವಾದರೂ, ತಾವು ಏಕೆ ಒಂದು ಕೈ ನೋಡಬಾರದು ಎಂಬ ಚಿಂತನೆಯಲ್ಲಂತೂ ಇದ್ದಾರೆ. ಇದು ಅವರ ಮಾತಿನಲ್ಲೇ ಹಲವಾರು ಬಾರಿ ವ್ಯಕ್ತವೂ ಆಗಿದೆ. ಕರ್ನಾಟಕದ ಚುನಾವಣೆ ಪ್ರಚಾರ ವೇಳೆ ರಾಹುಲ್‌ ಪ್ರಧಾನಿಯಾಗಲು ಸಿದ್ಧವೆಂದು ಹೇಳಿದಾಗ, ಇದು ಅವರ ವೈಯಕ್ತಿಕ ಮಾತು. ಆದರೆ ಹೇಗೆ ಆಗುತ್ತಾರೆ ಎಂಬುದನ್ನು ನಿರ್ಧರಿಸುವುದು ಮುಂದಿನ ಚುನಾವಣೆ. ಫೆಡರಲ್‌ ಫ್ರಂಟ್‌ ಕಟ್ಟಿಕೊಳ್ಳುತ್ತಿರುವ ನಾವಂತೂ ರಾಹುಲ್‌ ಗಾಂಧಿಗೆ ನೇತೃತ್ವ ಕೊಡಲು ಸಿದ್ಧವಿಲ್ಲ. ಬೇಕಾದರೆ, ಕಾಂಗ್ರೆಸ್‌ ಕೂಡ ತಮ್ಮ ಜತೆ ಬರಬಹುದು. ಯಾರು ನೇತೃತ್ವ ವಹಿಸಬೇಕು ಎಂಬುದನ್ನು ಮುಂದಿನ ನಿರ್ಧಾರಗಳಲ್ಲಿ ತೀರ್ಮಾನಿಸಬಹುದು ಎಂದು ಖಡಕ್ಕಾಗಿಯೇ ಹೇಳಿದ್ದಾರೆ. 

ಇದಕ್ಕೆ ಸಿಪಿಐನ ಡಿ.ರಾಜಾ ಅವರ ಸಹಮತವೂ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಫೆಡರಲ್‌ ಫ್ರಂಟ್‌ನ ನೇತೃತ್ವವನ್ನು ಕಾಂಗ್ರೆಸ್‌ಗೆ ನೀಡಲು ಸಾಧ್ಯವೇ ಇಲ್ಲ. ಅವರು ಕರ್ನಾಟಕ ಮಾದರಿಯಲ್ಲೇ ಬೇರೆ ಪಕ್ಷಗಳ ಜತೆಯಲ್ಲಿ ಬರಬೇಕು ಎಂದಿದ್ದಾರೆ. ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆಯೂ ಚುನಾವಣೆ ನಂತರವೇ ನಿರ್ಧರಿಸಬಹುದು ಎಂದಿದ್ದಾರೆ.  ಇನ್ನು ಎನ್‌ಸಿಪಿಯ ತಾರೀಕ್‌ ಅನ್ವರ್‌ ಅವರು ಕಾಂಗ್ರೆಸ್‌ನ ಇತಿಹಾಸದ ವರ್ತನೆಗಳ ಬಗ್ಗೆ ಹೇಳುತ್ತಾ, ಇಂದಿನವರೆಗೂ ಆ ಪಕ್ಷ ಪ್ರಾದೇಶಿಕ ಪಕ್ಷಗಳ ಕೈಗೆ ನೊಗ ಕೊಟ್ಟು ಮುನ್ನಡೆಯಿರಿ ಎಂದು ಹೇಳಿಲ್ಲ. ನಾನೂ ಕೂಡ ಆ ಪಕ್ಷದಿಂದಲೇ ಬಂದವನಾಗಿರುವುದರಿಂದ ಇಂಥ ಮಾತುಗಳು ಅಲ್ಲಿಂದ ಬಂದದ್ದು ಅಪರೂಪ. ಆದರೆ, ಈಗ 
ಕಾಲ ಬದಲಾಗಿದ್ದು, ಕಾಂಗ್ರೆಸ್‌ ಅನಿವಾರ್ಯವಾಗಿ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಒಪ್ಪಿಕೊಳ್ಳಲೇಬೇಕು ಎಂದಿದ್ದಾರೆ. 

ಸದ‌Âವೇ ಚುನಾವಣೆ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ಗೆ ಈ ಪ್ರಾದೇಶಿಕ ಪಕ್ಷಗಳ ಭಯವಿಲ್ಲ. ಆದರೆ, ಲೋಕಸಭೆ ಚುನಾವಣೆಯಲ್ಲಂತೂ ಪ್ರಾದೇಶಿಕ ಪಕ್ಷಗಳ ಬೆಂಬಲ ಅತ್ಯಗತ್ಯವಾಗಿಯೇ ಬೇಕು. ಈ ಬೆನ್ನಲ್ಲೇ, ದೇಶಾದ್ಯಂತ ಕರ್ನಾಟಕ ಮಾದರಿ ಜಾರಿಗಾಗಿ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ ಮೇಲೆ ಒತ್ತಡ ಹೇರುತ್ತಿವೆ. 

ಕಡಿಮೆ ಸ್ಥಾನ ಬಂದಿದ್ದರೂ ಜೆಡಿಎಸ್‌ಗೆ ಅಧಿಕಾರ ನೀಡಿರುವ ನೀವು ಇದೇ ಮಾದರಿಯನ್ನು ಉಳಿದ ರಾಜ್ಯಗಳಲ್ಲೂ ಅನುಸರಿಸಿ ಪ್ರಾದೇಶಿಕ ಪಕ್ಷಗಳ ಬಲವರ್ಧನೆಗಾಗಿ ಕೈಜೋಡಿಸಿ ಎಂದಿವೆ. ಹಾಗಾದರೆ, ಕಾಂಗ್ರೆಸ್‌ ಕರ್ನಾಟಕ ಮಾದರಿಯನ್ನು ದೇಶಾ ದ್ಯಂತ ಅಳವಡಿಸುತ್ತಾ? ಒಂದು ವೇಳೆ ಅನುಸರಿಸಿದರೂ ರಾಹುಲ್‌ಗೆ ಲಾಭವಾಗುತ್ತಾ? ಈ ಪ್ರಶ್ನೆಯನ್ನು ಮುಂದಿಟ್ಟಿಕೊಂಡು ರಾಜ್ಯಗಳ ಲೆಕ್ಕಾಚಾರದಲ್ಲಿ ವಿಶ್ಲೇಷಿಸಬಹುದು. 

ಅಂದರೆ, ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್‌ ಸದ್ಯ ಎನ್‌ಸಿ ಜತೆ ಹೊಂದಾಣಿಕೆಯಲ್ಲಿದ್ದು, ಅದಕ್ಕೇ ಅಧಿಕಾರ ಬಿಟ್ಟುಕೊಡಬೇಕಾಗಿ ಬರಬಹುದು. ಪಶ್ಚಿಮ ಬಂಗಾಳದಲ್ಲಿ ಮಮತಾ ಜತೆ ಒಪ್ಪಂದ ಮಾಡಿಕೊಂಡರೂ, ಉಪಯೋಗವಂತೂ ಇಲ್ಲ. ಇಲ್ಲಿ ಮಮತಾ ದೀದಿಯೇ ಸುಪ್ರೀಂ. ಒಡಿಶಾದಲ್ಲಿ ನವೀನ್‌ ಪಟ್ನಾಯಕ್‌ ಮತ್ತು ಕಾಂಗ್ರೆಸ್‌ ಜತೆಗೂಡೋದೇ ಕಷ್ಟ. ಉತ್ತರ ಪ್ರದೇಶದಲ್ಲಿ ಅಖೀಲೇಶ್‌ ಯಾದವ್‌ – ಮಾಯಾವತಿ ಕೈಜೋಡಿಸಿದರೆ, ಕಾಂಗ್ರೆಸ್‌ ಮೂರನೇ ಪಕ್ಷವಾಗಿ ಬೆಂಬಲ ಕೊಡಬೇಕು ಅಷ್ಟೇ. ಬಿಹಾರದಲ್ಲೂ ಲಾಲು ಜತೆ ಹೋಗಿ ಸರ್ಕಾರ ಮಾಡ
ಬೇಕು. ತಮಿಳುನಾಡಿನಲ್ಲಿ ಡಿಎಂಕೆ ಜತೆ ಸಖ್ಯವಾಗಿ ಸರ್ಕಾರ ಅವರಿಗೇ ಬಿಟ್ಟುಕೊಡಬೇಕು. ತೆಲಂಗಾಣ ಮತ್ತು ಆಂಧ್ರದಲ್ಲಿ ಕಾಂಗ್ರೆಸ್‌ಗೆ ಅಷ್ಟಾಗಿ ಬಲವಿಲ್ಲ. ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬಂಥ ಪರಿಸ್ಥಿತಿ ಉಂಟಾಗುತ್ತದೆ.

ಹೆಚ್ಚು ಕಡಿಮೆ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್‌ ಬಲ ಕುಂದಿದೆ. ಏಕೆಂದರೆ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಕಾಂಗ್ರೆಸ್‌ ಬಲ ಕುಂದಿದರೆ ಸುಮಾರು 150 ಸೀಟು ಕಳೆದುಕೊಂಡ ಹಾಗೆಯೇ. ಇನ್ನು ಗುಜರಾತ್‌, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕದಂಥ ರಾಜ್ಯಗಳು ಸುಮಾರು 100 ಲೋಕಸಭಾ ಸೀಟುಗಳನ್ನು ಒಳಗೊಂಡಿದ್ದು ಇಲ್ಲೂ ಉತ್ತಮ ಪ್ರದರ್ಶನ ನೀಡಲೇಬೇಕು. ಅಲ್ಲದೆ ಈಶಾನ್ಯ ರಾಜ್ಯಗಳಲ್ಲೂ ಪಕ್ಷ ಅಸಾಧಾರಣ ಪ್ರದರ್ಶನ ನೀಡಬೇಕು. ಹಾಗಾದಾಗ ಮಾತ್ರ ಕಾಂಗ್ರೆಸ್‌ ಫೆಡರಲ್‌ ಫ್ರಂಟ್‌ನಲ್ಲೇ ಮೇಲ್ಪಂಕ್ತಿಯಲ್ಲಿ ಕುಳಿತು ಪ್ರಧಾನಿ ಹುದ್ದೆಗೆ ಪಟ್ಟು ಹಿಡಿಯಬಹುದು. 

ಈ ಎಲ್ಲಾ ಸಂಗತಿಗಳನ್ನು ಪಕ್ಕಕ್ಕಿಟ್ಟು, ಕರ್ನಾಟಕ ಮಾದರಿಯಲ್ಲೇ ಕಾಂಗ್ರೆಸ್‌ ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡುತ್ತೆ ಎಂದುಕೊಂಡರೂ, ಇತಿಹಾಸ ಇದಕ್ಕೆ ವಿರುದ್ಧವಾದ ಸಂಗತಿಗಳನ್ನೇ ಮುಂದಿಡುತ್ತದೆ. ಅಂದರೆ, ಈ ಹಿಂದೆ ಪ್ರಾದೇಶಿಕ ಪಕ್ಷಗಳು ಸರ್ಕಾರ ರಚಿಸಿದಾಗ ಜತೆಯಲ್ಲಿ ನಿಲ್ಲುತ್ತಿದ್ದ ಕಾಂಗ್ರೆಸ್‌, ಮಧ್ಯೆ ಬೆಂಬಲ ವಾಪಸ್‌ ತೆಗೆದುಕೊಂಡು ಸರ್ಕಾರ ಬೀಳಿಸುತ್ತಿ ದ್ದುದರಲ್ಲಿ ಎತ್ತಿದ ಕೈ ಎಂಬಂತಿತ್ತು. ಮಾಜಿ ಪ್ರಧಾನಿ ದೇವೇಗೌಡರು ಮತ್ತು ಐ.ಕೆ. ಗುಜ್ರಾಲ್‌ ಅವರು ಕಾಂಗ್ರೆಸ್‌ನ ಕೈಕೊಡುವ ಮನೋಭಾವದ ಬಿಸಿಗೆ ತುತ್ತಾದವರೇ. ಏಕೆಂದರೆ ಇವರಿಬ್ಬರನ್ನೂ ಒಂದು ವರ್ಷದವರೆಗೂ ಅಧಿಕಾರ ನಡೆಸಲು ಕಾಂಗ್ರೆಸ್‌ ಬಿಟ್ಟಿರಲಿಲ್ಲ. ಮಧ್ಯದಲ್ಲೇ ಬೆಂಬಲ ವಾಪಸ್‌ ತೆಗೆದು ಸರ್ಕಾರ ಬೀಳಲು ಕಾರಣವಾಗಿತ್ತು. ಇಂಥ ಕಾಂಗ್ರೆಸ್‌ ಇದೀಗ ಉಳಿದ ಪ್ರಾದೇಶಿಕ ಪಕ್ಷಗಳಿಗೆ ಸರ್ಕಾರ ಮಾಡಲು 
ಬಿಟ್ಟು ತಾನು ಕೈಕಟ್ಟಿ ಕುಳಿತುಕೊಳ್ಳಲಿದೆಯೇ? ಇದಕ್ಕೆ ಕಾಲವೇ ಉತ್ತರ ಹೇಳಬೇಕು.

– ಸೋಮಶೇಖರ ಸಿ.ಜೆ.

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.