Udayavni Special

ಗಾಂಧೀಜಿ 150ನೇ ವರ್ಷಾಚರಣೆ : ಯಾವ ಮೌಲ್ಯಕ್ಕೆ ಮಣೆ ?


Team Udayavani, Oct 10, 2019, 5:44 AM IST

gandiji

ಗಾಂಧಿ ವಂಶಸ್ಥರು ಇಂದು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದರೂ (ಉದಾ: ಅಮೆರಿಕ ಹಾಗೂ ದಕ್ಷಿಣಾ ಫ್ರಿಕಗಳಲ್ಲಿ) ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಂಡವರು ಇಲ್ಲವೇ ಇಲ್ಲ ಎನ್ನಬಹುದು. ಗಾಂಧಿ ವಂಶೀಯರು ಇಂದು ವಿವಿಧ ವೃತ್ತಿ – ಕ್ಷೇತ್ರಗಳಲ್ಲಿ ತಮ್ಮ ಹೆಸರನ್ನು ಛಾಪಿಸಿದ್ದಾರೆ; ಆದರೆ ರಾಜಕೀಯದಲ್ಲಿ ಹೇಳಿಕೊಳ್ಳುವಂಥ ಸ್ಥಾನಮಾನ ದಕ್ಕಿಸಿಕೊಂಡಿಲ್ಲ.

ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರನ್ನು ಅವರ ಜನ್ಮದಿನವಾದ ಅಕ್ಟೋಬರ್‌ 2ರಂದು ಮಾತ್ರ ನೆನಪಿಸಿಕೊಳ್ಳುವ, ಉಳಿದ ದಿನಗಳಲ್ಲಿ ಅವರ ನೆನಪನ್ನು ದಫ‌¤ರಖಾನೆಯೊಳಗೆ ಬಂಧಿಸಿಡುವ ಪರಿಪಾಠ ನಮ್ಮದು ಎಂಬ ಮಾತನ್ನು ಅಲ್ಲಗಳೆಯುವವರು ಯಾರೂ ಇರಲಾರರೇನೋ. ನಮ್ಮ ನೇತಾರರ ಪೈಕಿ ಕೆಲವರ ಜನ್ಮದಿನವನ್ನು ಬಹುತೇಕ ವರ್ಷದ ಉದ್ದಕ್ಕೂ ಆಚರಿಸಲಾಗುತ್ತದೆ. ಇಂಥವರ ಸಾಲಿನಲ್ಲಿ ಗಾಂಧೀಜಿ ಬರುವುದಿಲ್ಲ. ಇನ್ನು ನಮ್ಮ ರಾಜ್ಯೋತ್ಸವ ದಿನಾಚರಣೆಯ ಕತೆಯೂ ಇದೇ. ಬಹುತೇಕ ಸರಕಾರದ ಹಣದಿಂದಲೇ ನಡೆಯುವ ಆಚರಣೆ ಇದು.

ಈ ವರ್ಷದ ಗಾಂಧಿ ಜಯಂತಿ ಆಚರಣೆಗೆ ಒಂದು ವಿಶೇಷತೆಯಿತ್ತು. ಈ ಬಾರಿಯದು ಗಾಂಧೀಜಿಯವರ 150ನೆಯ ಜನ್ಮದಿನ. ವಾಸ್ತವವಾಗಿ 150ನೆಯ ವರ್ಷಾಚರಣೆ ಎರಡು ವರ್ಷಗಳ ಅವಧಿಯದ್ದಾಗಿದೆ. ಅದು ಶುರುವಾದುದು 2018ರ ಅಕ್ಟೋಬರ್‌ 2ರಂದು, ಅರುಣಾಚಲ ಪ್ರದೇಶದ ಚಾಂಗ್ಲಾಂಗ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ಸಮಾರಂಭದ ಮೂಲಕ. ಈ ದ್ವೆ „ವಾರ್ಷಿಕ ಆಚರಣೆ 2020ರ ಗಾಂಧಿ ಜಯಂತಿ ದಿನದಂದು ಸಂಪನ್ನಗೊಳ್ಳಲಿದೆ. ಕೇಂದ್ರದ ಸಂಸ್ಕೃತಿ ಸಚಿವಾಲಯ ಇದಕ್ಕೆಂದೇ 125 ಸದಸ್ಯರನ್ನೊಳಗೊಂಡ ರಾಷ್ಟ್ರೀಯ ಆಚರಣಾ ಸಮಿತಿ ಯೊಂದನ್ನು ಅಸ್ತಿತ್ವಕ್ಕೆ ತಂದಿದೆ.

ಈ ಸಂದರ್ಭದಲ್ಲಿ ದಿಲ್ಲಿಯ ರಾಜಘಾಟ್‌ನಲ್ಲಿ ಅಕ್ಟೋಬರ್‌ 2ರಂದು ನಡೆದ ಸಮಾರಂಭವೊಂದರಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನೀಡಿದ ಹೇಳಿಕೆಯನ್ನು ನೋಡೋಣ. “ಯಾರು ಏನು ಬೇಕಾದರೂ ಹೇಳಿಕೊಳ್ಳಲಿ, ಗಾಂಧೀಜಿಯವರ ತಣ್ತೀ – ಸಿದ್ಧಾಂತಗಳನ್ನು ಅನುಸರಿಸುತ್ತ ಬಂದಿರುವ ಏಕೈಕ ರಾಜಕೀಯ ಪಕ್ಷವೆಂದರೆ ಕಾಂಗ್ರೆಸ್‌ ಮಾತ್ರ. ಪಕ್ಷವು ಇದನ್ನು ಮುಂದೆಯೂ ಮಾಡಲಿದೆ… ಉದ್ಯೋಗ, ವಿದ್ಯೆ, ರೈತರಿಗೆ ಸಿಗಬೇಕಾದ ಸೌಲಭ್ಯಗಳು ಇತ್ಯಾದಿಗಳನ್ನು ಒದಗಿಸುವ ಮೂಲಕ ಗಾಂಧೀಜಿಯವರ ಮಾರ್ಗವನ್ನು ಅನುಸರಿಸುತ್ತ ಬಂದಿರುವುದು ಕೇವಲ ಕಾಂಗ್ರೆಸ್‌ ಸರಕಾರಗಳಷ್ಟೇ’. ಇದು ಸೋನಿಯಾ ಗಾಂಧಿ ಅಂದು ನೀಡಿದ್ದ ಹೇಳಿಕೆ.

ಆದರೆ ಗಾಂಧೀಜಿ ತಮ್ಮ ಅಂತಿಮ ಆಸೆಯನ್ನು ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಳ್ಳುವ ಆ ಕೊನೆಯ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಕಷ್ಟವನ್ನು ಸೋನಿಯಾ ಗಾಂಧಿಯವರಾಗಲಿ, ಕಾಂಗ್ರೆಸ್‌ನ ಇತರ ನಾಯಕರಾಗಲಿ ತೆಗೆದುಕೊಂಡಿದ್ದೇ ಆದರೆ, ಅವರಿಗೆ ಅಷ್ಟೇನೂ ಹಿತವೆನಿಸಲಿಕ್ಕಿಲ್ಲ. ಗಾಂಧೀಜಿ ತಮ್ಮ ಹತ್ಯೆಯಾಗುವ ಮುನ್ನಾ ದಿನ, ಅರ್ಥಾತ್‌ 1948ರ ಜನವರಿ 29ರಂದು ಭಾರತೀಯ ಕಾಂಗ್ರೆಸ್‌ ಪಕ್ಷಕ್ಕಾಗಿ ಹೊಸ “ಸಂವಿಧಾನ’ ರೂಪಿಸುವುದಕ್ಕಾಗಿ ದಿಲ್ಲಿಯ ಬಿರ್ಲಾ ಹೌಸ್‌ನಲ್ಲಿ ತಂಗಿದ್ದರು.

ಅಂದು ಅವರು ಬರೆದ ಸಾಲುಗಳಿವು “ಇಂಥ ಹಾಗೂ ಇತರ ಕಾರಣಗಳಿಗಾಗಿ ಈಗ ಅಸ್ತಿತ್ವದಲ್ಲಿರುವ ಕಾಂಗ್ರೆಸ್‌ ಸಂಘಟನೆಯನ್ನು ಬರ್ಖಾಸ್ತುಗೊಳಿಸುವ ಹಾಗೂ ಲೋಕ ಸೇವಕ ಸಂಘದ ರೂಪದಲ್ಲಿ ಅದನ್ನು ಮಾರ್ಪಡಿಸುವ ಬಗೆಗಿನ ನಿರ್ಣಯವನ್ನು ಅಖೀಲ ಭಾರತ ಕಾಂಗ್ರೆಸ್‌ ಸಮಿತಿ ಸ್ವೀಕರಿಸುತ್ತಿದೆ.

(ಇದಕ್ಕಾಗಿ) ಈ ಕೆಳಕಂಡ ನಿಯಮಾವಳಿಯನ್ನು ಸಂದಭೋìಚಿತವಾಗಿ ಬದಲಾಯಿಸಿಕೊಳ್ಳುವ ಅಧಿಕಾರವನ್ನೂ ಲೋಕಸೇವಕ ಸಂಘ ಹೊಂದಿರುತ್ತದೆ.’ ಆದರೆ ಜವಾಹರಲಾಲ್‌ ನೆಹರೂ ಮತ್ತು ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರನ್ನೊಳಗೊಂಡಂತೆ ಕಾಂಗ್ರೆಸ್‌ನ ನೇತಾರರು ಕಾಂಗ್ರೆಸ್‌ನ ಬರ್ಖಾಸ್ತು ಕುರಿತ ಗಾಂಧೀಜಿಯವರ ಅಂತಿಮ ಇಚ್ಛೆಯನ್ನು ಈಡೇರಿಸಲು ಮುಂದಾಗಲಿಲ್ಲ; ಕಾಂಗ್ರೆಸನ್ನು ಒಂದು ರಾಜಕೀಯ ಪಕ್ಷದ ರೂಪದಲ್ಲಿಯೇ ಮುಂದುವರಿ ಸಲಾಯಿತು. ಬಹುಶಃ ಪಕ್ಷದ ಉನ್ನತ ನಾಯಕರಿಂದ ತೊಡಗಿ, ಅದರ ವಿವಿಧ ಶ್ರೇಣಿಗಳ ನಾಯಕರೆಲ್ಲರೂ ಕಾಂಗ್ರೆಸ್‌ ಎಂಬ ಸಂಘಟನೆಯ ಈ ಮಾರ್ಪಡಿನ ಲಾಭ ಅಥವಾ ಪ್ರಯೋಜನವನ್ನು ಪಡೆದುಕೊಂಡರು.

ರಾಷ್ಟ್ರದಲ್ಲಿ ಗಾಂಧೀಜಿಯವರ ಚಿಂತನೆ ಹಾಗೂ ಆದರ್ಶಗಳ ಪ್ರಸ್ತುತತೆ ಕುರಿತಂತೆ ದೊಡ್ಡ ಮಟ್ಟದ ಚರ್ಚೆ – ಸಂವಾದಗಳು ನಡೆಯುತ್ತಿವೆ. ಇದರಲ್ಲಿ ಅಚ್ಚರಿಯೇನಿಲ್ಲ. ಗಾಂಧೀಜಿ ಇಂದಿಗೂ ಒಬ್ಬ ನೇತಾರನಾಗಿ ಪ್ರಸ್ತುತರು. ಅವರ ಆರಾಧನೆ ಸುಲಭ; ಆದರೆ ಅವರ ಅನುಸರಣೆ ಕ್ಲಿಷ್ಟಕರ. ಆದರೆ ಇಂದಿನ ರಾಜಕಾರಣಿಗಳು ಏನಿಲ್ಲವೆಂದರೂ ಎರಡು ರೀತಿಗಳಲ್ಲಾದರೂ ಗಾಂಧಿ ತಣ್ತೀಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಒಂದು-ವಂಶಾಡಳಿತ ರಾಜಕಾರಣದಿಂದ ದೂರ ಸರಿಯುವುದು; ಇನ್ನೊಂದು – ಭ್ರಷ್ಟಾಚಾರದ ಚಾಳಿಗೆ ಮಂಗಳ ಹಾಡುವುದು. ಈಗಾಗಲೇ ವಂಶಾಡಳಿತದ ರೂಢಿಯನ್ನು ಮೈಗೂಡಿಸಿಕೊಂಡವರು ಇನ್ನು ಮುಂದಾದರೂ ತಮ್ಮ ನಡೆಯನ್ನು ಸರಿಪಡಿಸಿಕೊಳ್ಳಬಹುದಾಗಿದೆ.

ಗಾಂಧೀಜಿ ಅಂದು ನಿಜವಾಗಿಯೂ ಕಾಂಗ್ರೆಸ್‌ ಸಂಘಟನೆಯನ್ನು ಬರ್ಖಾಸ್ತುಗೊಳಿಸಬೇಕೆಂದು ಆಶಿಸಿದ್ದರೆ? ಇಂಥದೊಂದು ಅನುಮಾನ ಇಂದು ಅನೇಕರಲ್ಲಿದೆ. ಅಂಥ ಚಿಂತನೆ ಗಾಂಧೀಜಿಯವರಲ್ಲಿ ಇರಲಿಲ್ಲ ಎನ್ನುತ್ತಾರೆ ಕೆಲವರು. ಗಾಂಧೀಜಿ ಕಲ್ಪನೆಯ ಲೋಕ ಸೇವಕ ಸಂಘ ಮುಂದೆ ಅಸ್ತಿತ್ವಕ್ಕೆ ಬಂತು; ಆದರೆ ಒಂದು ಸೇವಕ ಸಂಘಟನೆಯಾಗಿ ಅಲ್ಲ; ಬದಲಿಗೆ ಬಹುತೇಕ ಒಂದು ರಾಜಕೀಯ ರೂಪದಲ್ಲಿ. ಒಂದು ಪಕ್ಷವಾಗಿ ಅದು ಕರ್ನಾಟಕಕ್ಕೂ ಪರಿಚಿತವೇ. 1962ರ ಚುನಾವಣೆಯಲ್ಲಿ ಈ ಪಕ್ಷ ತನ್ನ ಅಭ್ಯರ್ಥಿಯೊಬ್ಬರನ್ನು ಲೋಕಸಭೆಗೆ ಆಯ್ಕೆ ಮಾಡಿತ್ತು. ಈಗ ವಿಸ್ಮತಿಗೆ ಸರಿದಿರುವ ರಾಜಕಾರಣಿಯಾದ ಶಿವಮೂರ್ತಿ ಸ್ವಾಮಿ ಆಳವಂಡಿ ಆ ವರ್ಷ ಕೊಪ್ಪಳ ಕ್ಷೇತ್ರದಿಂದ ಲೋಕಸೇವಕ ಸಂಘದ ಅಭ್ಯರ್ಥಿಯಾಗಿ ಗೆದ್ದು ಸಂಸತ್‌ ಪ್ರವೇಶಿಸಿದ್ದರು.

1962ರಲ್ಲಿ, ಕಾಂಗ್ರೆಸ್‌ಗೆ ಸಡ್ಡು ಹೊಡೆಯುವವರೇ ಇಲ್ಲದಿದ್ದ ಕಾಲದಲ್ಲಿ ಕರ್ನಾಟಕದಿಂದ ಕಾಂಗ್ರೆಸೇತರ ಅಭ್ಯರ್ಥಿಯಾಗಿ ಗೆದ್ದವರು ಅವರೊಬ್ಬರೇ.
ಆದರೂ ಲೋಕ ಸೇವಕ ಸಂಘ ಒಂದು ಸಣ್ಣ ಮಟ್ಟಿನ ರಾಜಕೀಯ ಶಕ್ತಿಯಾಗಿ ಪಶ್ಚಿಮ ಬಂಗಾಲ ಹಾಗೂ ಬಿಹಾರದಲ್ಲಿ ತಲೆಯೆತ್ತಿದ್ದು ಹೌದು. ಪಶ್ಚಿಮ ಬಂಗಾಲದಲ್ಲಿ ಅದಕ್ಕಿದ್ದ ಜನಪ್ರಿಯತೆ ಪುರುಲಿಯಾ ಜಿಲ್ಲೆಗಷ್ಟೇ ಸೀಮಿತವಾಗಿತ್ತು; ಅಲ್ಲಿ 1952ರಲ್ಲಿ ಎರಡು ಲೋಕಸಭಾ ಸ್ಥಾನಗಳನ್ನು ಬುಟ್ಟಿಗೆ ಹಾಕಿ ಕೊಂಡಿತ್ತು. ಅದೇ ವರ್ಷ ಬಿಹಾರದಲ್ಲಿ ಈ ಪಕ್ಷ ಏಳು ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಪಶ್ಚಿಮ ಬಂಗಾಲದಲ್ಲಿ ಅದು ಸಮಾಜ ಸುಧಾರಣೆಗೆ ತನ್ನಿಂದಾದ ಪ್ರಯತ್ನಗಳನ್ನು ದಾಖಲಿಸಿತು; ಜಾತಿ ಶ್ರೇಣೀಕರಣಕ್ಕೆ ಸವಾಲೆಸೆಯಿತು. ಆದರೆ 1967ರ ಹೊತ್ತಿಗೆ ಅದರ ರಾಜಕೀಯ ಶಕ್ತಿ ಶಿಥಿಲಗೊಂಡಿತು. ಲೋಕಸೇವಕ ಸಂಘ ಕೂಡ ಗಾಂಧೀಜಿ ಆಶಯವನ್ನು ಈಡೇರಿಸುವಂಥ ಮಾದರಿ ಪಕ್ಷವಾಗಿ ಋಜುಪಡಿಸಿಕೊಳ್ಳಲು ವಿಫ‌ಲವಾಯಿ ತೆನ್ನಬೇಕು.

ಆದರೆ ಗಾಂಧೀಜಿ 1939ರಷ್ಟು ಹಿಂದೆಯೇ ತಮ್ಮ “ಹರಿಜನ’ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಲೇಖನವೊಂದು ಕಾಂಗ್ರೆಸ್‌ ಸಹಿತ ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರಸ್ತುತವೆನಿಸುವಂಥ ಚಿಂತನೆಯನ್ನು ಒಳಗೊಂಡಿತ್ತು. ಗಾಂಧೀಜಿ ಆ ಲೇಖನದಲ್ಲಿ ಹೀಗೆ ಹೇಳಿದ್ದರು “ಕಾಂಗ್ರೆಸ್‌ ಒಂದು ಸಂಘಟನೆಯಾಗಿ ಯಶಸ್ವಿಯಾಗಲು ಕಾರಣ, ಅದು ಅಸ್ತಿತ್ವಕ್ಕೆ ಬಂದಿದ್ದ ಕಾಲದಲ್ಲಿ ಮಾತ್ರ ಸಿಗಬಲ್ಲವರಾಗಿದ್ದ ಅತ್ಯಂತ ನಿಸ್ವಾರ್ಥಿ ಹಾಗೂ ಸುಸಂಸ್ಕೃತ ವ್ಯಕ್ತಿಗಳು ಅದನ್ನು ಆರಂಭಿಸಿದ್ದು. ಇಂಥ ಸ್ವಾರ್ಥ ರಹಿತ ಹಾಗೂ ಸುಸಂಸ್ಕೃತ ಮಹನೀಯರು ತಮ್ಮ ಕಾಲದ ಜನರ ಪ್ರತಿನಿಧಿಗಳಾಗಿ ನಡೆದುಕೊಂಡರು; ಸೇವೆ ಹಾಗೂ ಸ್ವಾರ್ಥತ್ಯಾಗ ಎಂಬ ಗುಣಗಳ ಮೂಲಕ ಆ ಜನರ ಪರಿಕಲ್ಪನೆಯ ನಾಡಿ ಮಿಡಿತವನ್ನು ಗುರುತಿಸಿದರು. ಅವರು ಜನರಿಂದ ರೂಪುಗೊಂಡರು ಹಾಗೂ ಜನರ ಪ್ರತಿನಿಧಿಗಳಾಗಿ ನಡೆದುಕೊಂಡರು.’

ಗಾಂಧೀಜಿ ರಾಜಕೀಯ ರಂಗದಲ್ಲಿ ಓರ್ವ ವಾಸ್ತವವಾದಿ ಯಾಗಿದ್ದವರು; ನಿಷ್ಕ್ರಿಯ ಕನಸಿಗರಾಗಿದ್ದವರಲ್ಲ. ಕಾಂಗ್ರೆಸ್‌ ಸಂಘಟನೆಯ ಪದಾಧಿಕಾರಿಗಳಲ್ಲಿ ಭ್ರಷ್ಟಾಚಾರ ಮೆರೆಯು ತ್ತಿದ್ದುದನ್ನು ಅರಿತವರು. ಮಂತ್ರಿಗಳು ಹಾಗೂ ಶಾಸಕರೆನಿಸಿಕೊಂಡವರು ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ನಡವಳಿಕೆಯ ಮೇಲೆ ಸ್ವತಃ ಕಣ್ಣಿಡಬೇಕಾಗುತ್ತದೆ. ಅವರು
ಸೀಸರ್‌ನ ಪತ್ನಿಯಂತೆ ಪ್ರತಿಯೊಂದು ವಿಷಯದಲ್ಲೂ ಸಂಶಯಾತೀತರಾಗಿರಬೇಕಾಗುತ್ತದೆ. ಅವರು ಸ್ವಂತಕ್ಕಾಗಿ ಆಗಲಿ, ತಮ್ಮ ಬಂಧು ಮಿತ್ರರಿಗಾಗಿ ಆಗಲಿ ಯಾವುದೇ ಪ್ರಯೋಜನಗಳನ್ನು ಅಥವಾ ಲಾಭಗಳನ್ನು ಮಾಡಿಕೊಳ್ಳಕೂಡದು. ಅವರ ಬಂಧುಗಳ್ಳೋ ಮಿತ್ರರೋ ಯಾವುದಾದರೂ ಹುದ್ದೆಗೆ ಅಭ್ಯರ್ಥಿಯಾಗಿ ಬಂದು ಆ ಹುದ್ದೆಯನ್ನು ಪಡೆದರೆ, ಅದಕ್ಕೆ ಕಾರಣ ಅವರು ಇತರ ಅಭ್ಯರ್ಥಿಗಳಿಗಿಂತ ಉತ್ತಮ ಎಂಬ ಕಾರಣಕ್ಕಾಗಿ ಅಂಥ ಹುದ್ದೆ ಅವರಿಗೆ ಸಿಕ್ಕಿದೆ ಎನ್ನುವ ಹಾಗಾಗಬೇಕು. ಗಾಂಧೀಜಿಯವರ ಈ ಚಿಂತನಾರ್ಹ ಬರಹ ಪ್ರಕಟವಾದುದು 1938ರಲ್ಲಿ; ಹೆಚ್ಚಿನ ಪ್ರಾಂತ್ಯಗಳಲ್ಲಿ ಕಾಂಗ್ರೆಸ್‌ ಆಳ್ವಿಕೆಯದ್ದ ಸಂದರ್ಭದಲ್ಲಿ. ಅಷ್ಟೇ ಅಲ್ಲ, ಮಧ್ಯಪ್ರಾಂತ್ಯಗಳು (ಸೆಂಟ್ರಲ್‌ ಪ್ರಾವಿನ್ಸಸ್‌ ) ಮತ್ತು ಬೇರಾರ್‌ನ ಆಗಿನ “ಪ್ರಧಾನಮಂತ್ರಿ’ ಡಾ| ನಾರಾಯಣ್‌ ಭಾಸ್ಕರ್‌ ಖೇರ್‌ ಅವರ ಸರಕಾರದ ವಿರುದ್ಧ ಭ್ರಷ್ಟಾಚಾರದ ದೂರುಗಳು ಕೇಳಿಬಂದಾಗ, ಅವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಲು ಗಾಂಧೀಜಿ ಹಿಂಜರಿಯಲಿಲ್ಲ. ಉನ್ನತ ಮಟ್ಟದ ಪ್ರತಿಭಾವಂತ ವೈದ್ಯರಾಗಿದ್ದ ಖೇರ್‌ ಅವರು ಬಂಡಾಯವೆದ್ದರು; ಕಾಂಗ್ರೆಸ್‌ ಪಕ್ಷದಿಂದ ಹೊರನಡೆದರು. ಹಿಂದೂ ಮಹಾಸಭಾಕ್ಕೆ ಸೇರ್ಪಡೆಗೊಂಡು ವೈಸರಾಯ್‌ ಲಿನ್‌ಲಿತ್‌ಗೊà ಅವರ ಕಾರ್ಯಕಾರಿ ಮಂಡಳಿಯ ಸದಸ್ಯರಾದರು. ಆದರೆ ಗಾಂಧೀಜಿಯವರು ಡಾ| ಖೇರ್‌ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಕೊಂಚ ಎಡವಿದರು ಎನ್ನಬೇಕಾಗುತ್ತದೆ. ಅವರು ರವಿಶಂಕರ್‌ ಶುಕ್ಲಾ ಅವರನ್ನು ನೇಮಿಸಿದರು. ಇದು ಅವರ ತಪ್ಪು ಆಯ್ಕೆಯಾಗಿತ್ತು. “ಆಂಧ್ರ ಕೇಸರಿ’ ಎಂಬ ಬಿರುದಿಗೆ ಪಾತ್ರರಾಗಲಿದ್ದ ಟಿ. ಪ್ರಕಾಶಂ ಅವರು ಸ್ವೀಕರಿಸಿದ್ದ ಕೆಲ “ಉಡುಗೊರೆ’ಗಳ ಬಗ್ಗೆ ತನಿಖೆ ನಡೆಸುವಂತೆಯೂ ಗಾಂಧೀಜಿ ಆದೇಶ ವಿತ್ತರು. ಅತ್ಯಂತ ಯಶಸ್ವೀ ಬ್ಯಾರಿಸ್ಟರರಾಗಿದ್ದ ಟಿ. ಪ್ರಕಾಶಂ ಅವರು ಗಾಂಧೀಜಿಯವರ ನಿಲುವನ್ನು ಪ್ರತಿಭಟಿಸಿದ್ದಷ್ಟೇ ಅಲ್ಲ, ನೆಹರೂ, ಪಟೇಲ್‌ ಹಾಗೂ ಪಟ್ಟಾಭಿ ಸೀತಾರಾಮಯ್ಯನವರ ನಡವಳಿಕೆಯ ಬಗೆಗಿನ ತಮ್ಮ ಅಸಮ್ಮತಿಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದರು.

ಆದರೆ ರಾಷ್ಟ್ರದ ಸಾರ್ವಜನಿಕ ಜೀವನಕ್ಕೆ ಅತ್ಯಂತ ಪ್ರಸ್ತುತವೆನಿಸುವಂಥ “ಗಾಂಧಿ ಮೌಲ್ಯ’ವೆಂದರೆ ಅವರು ತಮ್ಮ ಮಕ್ಕಳನ್ನು ಸಾರ್ವಜನಿಕ ಜೀವನಕ್ಕೆ ಕಾಲಿಡುವಂತೆ ಯಾವ ರೀತಿಯಲ್ಲೂ ಪ್ರೋತ್ಸಾಹಿಸದಿದ್ದುದು. ಗಾಂಧೀಜಿಯವರಿಗೆ ನಾಲ್ವರು ಪುತ್ರರು – ಹರಿಲಾಲ್‌, ಮಣಿಲಾಲ್‌, ರಾಮದಾಸ್‌ ಮತ್ತು ದೇವದಾಸ್‌. ಹಿರಿಯ ಪುತ್ರನಾದ ಹರಿಲಾಲ್‌ಗೆ ಸಾಂಪ್ರದಾಯಿಕ ಶಿಕ್ಷಣ ದೊರೆಯಲಿಲ್ಲ. ಈ ಅವಕಾಶ ತನಗೆ ತಪ್ಪಿಸಿದಿರಿ ಎಂದು ಆತ ತಂದೆಯ ವಿರುದ್ಧ ಜಗಳವಾಡಿದ್ದರು. ಗಾಂಧೀಜಿ ತನ್ನ ಮಗನ ಮಹತ್ವಾಕಾಂಕ್ಷೆಯನ್ನು ಹತ್ತಿಕ್ಕಿ ಆತನ ಬದಲಿಗೆ ಇನ್ನೊಬ್ಬ ಹುಡುಗನನ್ನು ಇಂಗ್ಲೆಂಡಿಗೆ ಕಳಿಸಿದ್ದರು.

ಗಾಂಧೀಜಿ- ಹರಿಲಾಲ್‌ ನಡುವಿನ ಪ್ರಕ್ಷುಬ್ಧ ಸಂಬಂಧದ ಫ‌ಲವಾಗಿ ಗಾಂಧೀಜಿಯ ವ್ಯಕ್ತಿತ್ವವನ್ನು “ರಾಷ್ಟ್ರದ ಪಾಲಿಗೆ ರಾಷ್ಟ್ರಪಿತ,
ಮಗನ ಪಾಲಿಗೆ ಅಪರಿಚಿತ’ ಎಂದು ಕಂಡವರೆಲ್ಲ ಬಣ್ಣಿಸುವಂತಾಯಿತು.
ಗಾಂಧೀ ವಂಶಸ್ಥರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದರೂ (ಉದಾ: ಅಮೆರಿಕ ಹಾಗೂ ದಕ್ಷಿಣಾಫ್ರಿಕಗಳಲ್ಲಿ) ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಂಡವರು ಇಲ್ಲವೇ ಇಲ್ಲ ಎನ್ನಬಹುದು. ಗಾಂಧೀ ವಂಶೀಯರು ಇಂದು ವಿವಿಧ ವೃತ್ತಿ – ಕ್ಷೇತ್ರಗಳಲ್ಲಿ ತಮ್ಮ ಹೆಸರನ್ನು ಛಾಪಿಸಿದ್ದಾರೆ; ಆದರೆ ರಾಜಕೀಯದಲ್ಲಿ ಹೇಳಿಕೊಳ್ಳುವಂಥ ಸ್ಥಾನಮಾನ ದಕ್ಕಿಸಿಕೊಂಡಿಲ್ಲ. ಈ ಮಾತಿಗೆ ಒಂದೇ ಒಂದು ಅಪವಾದವೆಂದರೆ ಗಾಂಧೀಜಿಯ ಮೊಮ್ಮಕ್ಕಳ ಲ್ಲೊಬ್ಬರಾದ ಗೋಪಾಲಕೃಷ್ಣ ಗಾಂಧಿ (ದೇವದಾಸ್‌ರವರ ಮಗ). ಓರ್ವ ರಾಜತಾಂತ್ರಿಕರೂ ಆಗಿದ್ದ ಅವರು ಪಶ್ಚಿಮ ಬಂಗಾಲದ ರಾಜ್ಯಪಾಲರೂ ಆಗಿದ್ದವರು. ಕಾಂಗ್ರೆಸ್‌ ಹಾಗೂ ಎಡಪಕ್ಷಗಳೊಂದಿಗೆ ಅವರಿಗೆ ಹಿತವಾದ ಸಂಬಂಧವಿದೆ.

– ಅರಕೆರೆ ಜಯರಾಮ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಭಾರತದಿಂದ ಔಷಧ ಕೋರಿದ ಅಮೆರಿಕ

ಭಾರತದಿಂದ ಔಷಧ ಕೋರಿದ ಅಮೆರಿಕ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

kat-13

ಕೊರೊನಾ ವೈರಸ್‌- ಅಸ್ವಾಭಾವಿಕ ಆಹಾರ ಪದ್ಧತಿಯ ಕೊಡುಗೆ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ದೇವೇಗೌಡರ ಜತೆ ಮೋದಿ “ಫೋನ್‌ ಪೆ ಚರ್ಚಾ’

ದೇವೇಗೌಡರ ಜತೆ ಮೋದಿ “ಫೋನ್‌ ಪೆ ಚರ್ಚಾ’

ಎಸ್‌ಡಿಆರ್‌ಎಫ್‌ ಕೇಂದ್ರದಿಂದ 395 ಕೋ. ರೂ.

ಎಸ್‌ಡಿಆರ್‌ಎಫ್‌ ಕೇಂದ್ರದಿಂದ 395 ಕೋ. ರೂ.

ನಷ್ಟ: ವಿಶ್ವ ಸರಣಿಯ ಆತಿಥ್ಯಕ್ಕೆ ಪಾಕ್‌ ಮನವಿ

ನಷ್ಟ: ವಿಶ್ವ ಸರಣಿಯ ಆತಿಥ್ಯಕ್ಕೆ ಪಾಕ್‌ ಮನವಿ

3-4 ದಿನ ಗುಡುಗು ಸಹಿತ ಮಳೆ ಸಾಧ್ಯತೆ

3-4 ದಿನ ಗುಡುಗು ಸಹಿತ ಮಳೆ ಸಾಧ್ಯತೆ

ಆರೋಗ್ಯ ಯೋಧರು: 10 ಲಕ್ಷ ಮಾಸ್ಕ್ ತಯಾರಿಸಿದ ಮಹಿಳೆಯರು

ಆರೋಗ್ಯ ಯೋಧರು: 10 ಲಕ್ಷ ಮಾಸ್ಕ್ ತಯಾರಿಸಿದ ಮಹಿಳೆಯರು