Udayavni Special

ಕೆ.ಶಿವನ್‌ ಎಂಬ ಅಪ್ಪಟ ದೇಶಿ ಪ್ರತಿಭೆ

"ಚಂದ್ರಯಾನ-2' ಯಶಸ್ವಿಯಾದದ್ದೇ, ಇಡೀ ದೇಶ ಕೆ. ಶಿವನ್‌ ಮತ್ತು ತಂಡಕ್ಕೆ ಗೌರವ ನಮನ ಸಲ್ಲಿಸಬೇಕು

Team Udayavani, Sep 5, 2019, 5:12 AM IST

Sivan,-ISRO,-Chandrayaan-2

ಭಾರತೀಯ ಬಾಹ್ಯಾಕಾಶ ಸಂಸ್ಥೆ ಹಮ್ಮಿಕೊಂಡ “ಚಂದ್ರಯಾನ-2′ ಯೋಜನೆ ಯಶಸ್ವಿಯಾದಲ್ಲಿ (ಅದು ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ), ಇಡೀ ದೇಶ ಎದ್ದು ನಿಂತು ಇಸ್ರೋದ ಅಧ್ಯಕ್ಷ ಕೆ. ಶಿವನ್‌ ಅವರನ್ನು ಹಾಗೂ ಅವರ ವಿಜ್ಞಾನಿಗಳು ಮತ್ತು ಇತರರನ್ನೊಳಗೊಂಡ ಕಾರ್ಯತಂಡಕ್ಕೆ ಗೌರವ ನಮನ ಸಲ್ಲಿಸಬೇಕಾಗುತ್ತದೆ.

ಡಾ| ಕೈಲಾಸಪರವು ಶಿವನ್‌ (ಜನನ: ಏಪ್ರಿಲ್‌ 1957) ಇಸ್ರೋದ ಅಧ್ಯಕ್ಷರಾಗಿ ನೇಮಕಗೊಂಡದ್ದು 2018ರ ಜನವರಿಯಲ್ಲಿ. ಇದಕ್ಕೆ ಮೊದಲು ಇಸ್ರೋದ ಹೊರಗಡೆ ಅವರ ಬಗ್ಗೆ ಅನೇಕರಿಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಅವರ ಪೂರ್ವಾಧಿಕಾರಿ ಎ.ಎಸ್‌. ಕಿರಣ್‌ ಕುಮಾರ್‌ (ಹಾಸನ ಜಿಲ್ಲೆಯ ಆಲೂರಿನವರು) ಅವರ ಬಗೆಗೂ ಇದೇ ಮಾತನ್ನು ಹೇಳಬಹುದು. ಒಟ್ಟಾರೆಯಾಗಿ ಕರ್ನಾಟಕದ ಜನತೆ ಈ ವಿಜ್ಞಾನಿಯ ಬಗ್ಗೆ ಹೆಚ್ಚು ಗಮನಹರಿಸಿಲ್ಲವೆಂದೇ ಹೇಳಬಹುದು. ಏಕೆಂದರೆ ನಮ್ಮಲ್ಲಿ ಅನೇಕರು ರಾಜಕೀಯ, ಥಳಕು ಬಳುಕಿನ ಸಿನಿಮಾಗಳು ಹಾಗೂ ಕ್ರಿಕೆಟ್‌ ಪಂದ್ಯಾಟಗಳು ಮತ್ತಿತರ ವಿಷಯಗಳಲ್ಲೇ ವ್ಯಸ್ತರಾಗಿರುವವರು. ಶಿವನ್‌ ಹಾಗೂ ಕಿರಣ್‌ ಕುಮಾರ್‌ ಇಬ್ಬರೂ ತಮ್ಮ ಸ್ವಂತ ಪ್ರತಿಭೆ ಹಾಗೂ ಪ್ರಯತ್ನಬಲದಿಂದ ತಳಮಟ್ಟದಿಂದ ಬೆಳೆದು ನಿಂತವರು. ಅವರನ್ನು ಅಧಿಕಾರಸ್ಥರ ಪೈಕಿ ಯಾರೂ ಮೇಲೆತ್ತಲಿಲ್ಲ; ಹಾಗೆ ಮೇಲಿನ ಕಕ್ಷೆಯಲ್ಲಿ ಸ್ಥಾಪಿಸಲಿಲ್ಲ. ಅಧಿಕಾರಸ್ಥ ಮಂದಿಯ ಸಂಪರ್ಕ/ಸಂಬಂಧದ ಕಾರಣದಿಂದ ಮೇಲೆ ಬಂದ ಅತಿಗಣ್ಯರ ಸಾಲಿನಲ್ಲಿರುವ ಭಾರತೀಯ ವಿಜ್ಞಾನಿಗಳಿಗೂ ಈ ವಿಜ್ಞಾನಿದ್ವಯರಿಗೂ ಅಜಗಜಾಂತರವಿದೆ. ಇಬ್ಬರೂ ದೇಶೀಯ ಶಿಕ್ಷಣ ಸಂಸ್ಥೆಗಳಲ್ಲೇ ಓದಿದ ವಿಜ್ಞಾನಿಗಳು, ಪ್ರತಿಷ್ಠಿತ ವಿದೇಶಿ ವಿ.ವಿ.ಗಳಿಗೆ ಹೋದವರು ಅವರಲ್ಲ. ಅವರು ಭಾರತದ ಸರಕಾರಿ ವಿಜ್ಞಾನ ಸಂಸ್ಥೆ ಎಷ್ಟೇ ತೊಡಕು ತೊಂದರೆಗಳಿಂದ ಬಾಧಿತವಾಗಿರಲಿ, ಇಲ್ಲೇ ದುಡಿಯುತ್ತೇವೆಂದು ನಿರ್ಧರಿಸಿದವರು; ಪಾಶ್ಚಾತ್ಯ ದೇಶಗಳಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಅವಕಾಶವಿದ್ದರೂ ಅದನ್ನು ಕಡೆಗಣಿಸಿ ಇಲ್ಲೇ ನಿಂತವರು. ಅಂದು ಗಾಂಧೀಜಿ ಪ್ರತಿಪಾದಿಸಿದ ನರೇಂದ್ರ ಮೋದಿ ಸರಕಾರ ಜನಪ್ರಿಯಗೊಳಿಸಿರುವ “ಸ್ವದೇಶಿ’ ಧೋರಣೆಯನ್ನು ನಿಜಾರ್ಥದಲ್ಲಿ ಪ್ರತಿನಿಧಿಸಿರುವವರು ಈ ವಿಜ್ಞಾನಿದ್ವಯರು.

ಇವರಿಬ್ಬರ ಪೈಕಿ ಕೆ. ಶಿವನ್‌ ತಮಿಳ್ನಾಡಿನ ನಾಗರಕೋಯಿಲ್‌ ಜಿಲ್ಲೆಯವರು. ಅವರ ಕುಟುಂಬದಲ್ಲಿ ಅವರೇ ಪ್ರಥಮ ಪದವೀಧರ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಡಾಕ್ಟರೇಟ್‌ ಪದವಿ ಗಳಿಸಿರುವ ಪ್ರತಿಭಾವಂತ ಅವರು.

ಕಳೆದ ಅನೇಕ ವರ್ಷಗಳಿಂದ ಭಾರತೀಯ ವಿಜ್ಞಾನ ಸಂಸ್ಥೆ ಕೆಲವೇ ವ್ಯಕ್ತಿಗಳ ಪುಟ್ಟ ಗುಂಪಿನೊಂದಿಗೆ ಗುರುತಿಸಿಕೊಂಡಿದೆ. ಇವರಲ್ಲಿ ಕೆಲವರು ಆಧಿಕಾರಸ್ಥ ಮಂದಿಗೆ ನಿಕಟರಾಗಿದ್ದು ಸರಕಾರದ ವತಿಯಿಂದ ದೊರೆತ ಪ್ರಶಸ್ತಿ ಗೌರವಗಳಿಂದ ಅಲಂಕೃತರಾದವರು. ಕೆಲವರಂತೂ ಅವರದೇ ಹೆಸರನ್ನು ಹೊತ್ತ ಸರಕಾರಿ ಘೋಷಿತ “ಸ್ವಂತ’ ಸಂಸ್ಥೆಗಳಿಗೆ ಸೇರಿಕೊಂಡವರು. ಇವರಲ್ಲಿ ಕೆಲವರು ತಮ್ಮ ಕಿರಿಯ ವಿಜ್ಞಾನಿಗಳು ರಚಿಸಿ ಸಲ್ಲಿಸಿದ ಪ್ರಬಂಧಗಳಿಗೆ ತಮ್ಮ ಹೆಸರನ್ನು ಹಾಕಿಕೊಂಡವರೆಂಬ “ಬಿರುದಿ’ಗೂ ಪಾತ್ರರಾಗಿದ್ದಾರೆ. ಇವರ ಕಾರ್ಯವಲಯದ ಹೊರಗಡೆ ಬೇರೆ ಯಾರೂ ಇಲ್ಲವೇನೋ ಎಂಬ ರೀತಿಯಲ್ಲಿ ನಾವು ಕೂಡ ಇಂಥ ವಿಜ್ಞಾನಿಗಳ ಹೆಸರನ್ನು ಪಠನಮಾಡುತ್ತಲೇ ಬಂದಿದ್ದೇವೆ. ಅಥವಾ ಹೀಗೂ ಹೇಳ ಬಹುದೇನೋ ಇಂಥವರ ಸ್ಥಾನವನ್ನು ತುಂಬಬಹುದಾದ ಯುವ ಪಡೆಯನ್ನು ಸೃಷ್ಟಿಸಲು ನಾವು ವಿಫ‌ಲರಾಗಿದ್ದೇವೆ. ಇನ್ನು ಐಟಿ-ಬಿಟಿ ಕ್ಷೇತ್ರದಲ್ಲಿ ಸಾಕಷ್ಟು ಹಣ ಮಾಡಿಕೊಂಡ ಉದ್ಯಮ ಸಾಹಸಿಗಳಿಗಷ್ಟೇ ಯಶಸ್ಸಿನ ಕೀರ್ತಿಯನ್ನು ಅಂಟಿಸುತ್ತ ಬಂದಿದ್ದೇವೆಯೇ ಹೊರತು ಈ ಕ್ಷೇತ್ರಗಳ ಹಿಂದೆ ದುಡಿದಿರುವ ವಿಜ್ಞಾನಿಗಳಿಗಲ್ಲ. ಇದೆಲ್ಲಕ್ಕೂ ಕಲಶಪ್ರಾಯವೆಂಬಂತೆ ನಮ್ಮ ಹುಡುಗ ಹುಡುಗಿಯರಿಗೆ ಮೂಲಭೂತ (ಪ್ರಾಥಮಿಕ)ವಿಜ್ಞಾನದ ಶಾಖೆಗಳು ಅಥವಾ ಅವುಗಳ ಪರ್ಯಾಯ ರೂಪದ ಅಧ್ಯಯನದ ಬಗ್ಗೆ ಒಂದು ಬಗೆಯ ನಿರ್ಲಕ್ಷ್ಯವಿದೆ. ಉದಾಹರಣೆಗೆ ವಿ.ವಿ.ಯೊಂದರ ಭೂಗರ್ಭ ಶಾಸ್ತ್ರ ವಿಭಾಗದಲ್ಲಿ ಕೇವಲ ಆರು ಮಂದಿ ವಿದ್ಯಾರ್ಥಿಗಳಿದ್ದಾರೆ; ಹಲವಾರು ಮಂದಿ ಪ್ರೊಫೆಸರ್‌ಗಳಿದ್ದಾರೆ. ಕೆಲ ದಶಕಗಳ ಹಿಂದೆ ಭೂಗರ್ಭ ಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರಗಳನ್ನು ಮುಂಚೂಣಿ ವಿಷಯಗಳೆಂದು ಪರಿಗಣಿ Ó ‌ ಲಾಗುತ್ತಿತ್ತು; ಇವು ಅನೇಕ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದ ವಿಜ್ಞಾನ – ಶಾಖೆಗಳಾಗಿದ್ದವು. ಇಂದು ಎಂಥ ಅಧೋಗತಿ ಪ್ರಾಪ್ತವಾಗಿ ದೆಯೆಂದರೆ ಇಂದಿನ ಲಾಭೈಕ ದೃಷ್ಟಿಯ ಖಾಸಗಿ ಕಾಲೇಜುಗಳ ಪೈಕಿ ಹೆಚ್ಚಿನವು ಬಿ.ಎಸ್‌ಸಿ. ವಿಭಾಗವನ್ನು ಮುಚ್ಚಿ, ಡೊನೇಶನ್‌ ರೂಪದಲ್ಲಿ ಹೆಚ್ಚಿನ ಆದಾಯ ತಂದುಕೊಡಬಲ್ಲ ಬಿ.ಕಾಮ್‌. ಅಥವಾ ಉದ್ಯಮ ಆಡಳಿತ (ಬಿಸಿನೆಸ್‌ ಅಡ್ಮಿನಿಸ್ಟ್ರೇಶನ್‌) ವಿಭಾಗಗಳನ್ನು ಚಾಲ್ತಿಯಲ್ಲಿ ತಂದಿವೆ. ಖಾಸಗಿ ವಿ.ವಿ.ಗಳದೂ ಇದೇ ಕತೆ.

ಕಳೆದ ಹಲವು ವರ್ಷಗಳ ಅವಧಿಯಲ್ಲಿ ಭಾರತೀಯ ವಿಜ್ಞಾನ ಕ್ಷೇತ್ರದಲ್ಲಿ ಶ್ರೇಷ್ಠತೆಯ ವ್ಯಸನ ಅಥವಾ ಗಣ್ಯತೆಯ ಪ್ರಜ್ಞೆಯೆಂ ಬುದು ಬೆಳೆದು ಬಿಟ್ಟಿದೆ. ಅಲ್ಪಸ್ವಲ್ಪ ಯಶಸ್ಸು ಸಾಧಿಸಿದ ವಿಜ್ಞಾನಿಗಳು ವಿಜ್ಞಾನ ಕ್ಷೇತ್ರದ ಆಡಳಿತಗಾರರಾಗಿಬಿಟ್ಟರು, ಅಲ್ಲಿನ ನೀತಿ ನಿರೂಪಕ ರಾಗಿಬಿಟ್ಟರು. ಇವರಲ್ಲಿ ಕೆಲವರು ಸ್ವಹಿತಾಶಕ್ತಿಯ ವ್ಯಾಮೋಹಿಗಳಾಗಿ ತಮಗೆ ಯಾರು ನಿಷ್ಠರಾಗಿದ್ದಾರೋ ಅವರನ್ನೇ ಆಯ್ಕೆ ಮಾಡಿ ಇರಿಸಿಕೊಂಡರು. ಇದೆಲ್ಲವೂ ಕಳಪೆ ಪ್ರತಿಭೆಗಳ ಹುಟ್ಟಿಗೆ ಕಾರಣವಾಗಿ, ಪ್ರತಿಭಾ ಪಲಾಯಾನಕ್ಕೆ ಹೆಬ್ಟಾಗಿಲಾಯಿತು. ಅನೇಕರಿಗೆ ತಾವು ಇಂಥಲ್ಲಿರುವುದು ಇಲ್ಲಿದ್ದವರಿಗೆ ಅನಗತ್ಯವೆನಿಸು ತ್ತಿದೆಯೆಂಬ ಅನಾಥ ಪ್ರಜ್ಞೆ ಬಾಧಿಸಿತು. ಅಂಥವರು ವಿದೇಶಗಳಿಗೆ ವಲಸೆ ಹೋದರು. ಪ್ರತಿಷ್ಠಿತ ಜೀವವಿಜ್ಞಾನಿ ಜೆ.ಬಿ.ಎಸ್‌. ಹಾಲೆxàನ್‌, ಭಾರತದಲ್ಲೇ ಇದ್ದು ಸೇವೆ ಸಲ್ಲಿಸಲು ಬಯಸಿ ಕೆಲ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಬಳಿಕ ಇಲ್ಲಿನವರ ಧೋರಣೆಗೆ ರೋಸಿ ಹೋದರು. ಅವರಲ್ಲಿ ಈ ನಿರಾಶಾಭಾವನೆ ಮೂಡಲು ಕಾರಣ, ಜವಾಹರಲಾಲ್‌ ನೆಹರೂ ಅವರಿಗೆ ನಿಕಟರಾಗಿದ್ದ ಪ್ರಮುಖ ಸಂಖ್ಯಾಶಾಸ್ತ್ರ ಪ್ರವೀಣರಾಗಿ ಪರಿವರ್ತಿತರಾದ ಭೌತ ವಿಜ್ಞಾನಿ ಪ್ರೊ| ಪಿ.ಸಿ. ಮಹಾಲನೋಬಿಸ್‌ ಅವರು.
ಇದು ಜಾಗತೀಕರಣ, ಉದಾರೀಕರಣದ ಯುಗ. ಈ ದಿನಗಳಲ್ಲಿ ಪ್ರತಿಭಾ ಪಲಾಯನವೆನ್ನುವುದು ಅಥವಾ ವಿದೇಶಕ್ಕೆ ಹೋಗುವುದು, ಅಲ್ಲೇ ನೆಲೆಸುವುದು ಇವೆಲ್ಲ ತೀರಾ ಸಾಮಾನ್ಯ ಸಂಗತಿ ಎಂಬರ್ಥದಲ್ಲಿ ಕೆಲವರು ಮಾತನಾಡುವುದಿದೆ. ಹಾಗಾಗಿಯೇ, ಎಚ್‌1ಬಿ ವೀಸಾ ನೀಡಿಕೆ ಕುರಿತ ಅಮೆರಿಕ ಸರಕಾರದ ನಿರ್ಧಾರದ ಬಗ್ಗೆ ನಾವು ತುಂಬಾ ತಲೆಕೆಡಿಸಿಕೊಂಡಿ ರುವುದು. ಉನ್ನತ ಹುದ್ದೆಯಲ್ಲಿರುವ ನಮ್ಮ ಕೆಲ ವಿಜ್ಞಾನಿಗಳ ವೃತ್ತಿ ಜೀವನ ಕುರಿತಂತೆ ಅಧ್ಯಯನ ನಡೆಸಿದರೆ ಇವರಲ್ಲಿ ಕೆಲವರು ಅಧಿಕಾರಸ್ಥ ಮಂದಿಯ ಜತೆಗೆ ಉತ್ತಮ ಸಂಪರ್ಕವಿರಿಸಿಕೊಂಡ ವರೆಂಬುದು ಅಥವಾ ಶ್ರೀಮಂತ ಕುಟುಂಬದಿಂದ ಬಂದವರೆಂಬುದು ಅರಿವಾಗುತ್ತದೆ. ಇಂಥವರು ಸಿಎಸ್‌ಐಆರ್‌ (ವಿಜ್ಞಾನ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ) ಪ್ರಯೋಗಾಲಯಗಳ ಸರಕಾರಿ ಅನುದಾನಿತ ಸಂಶೋಧನ ಸಂಸ್ಥೆಗಳ, ಉನ್ನತಮಟ್ಟದ ವಿ.ವಿ.ಗಳ ಹಾಗೂ ಶೈಕ್ಷಣಿಕ ಸಂಸ್ಥೆಗಳ ಮೇಲೆ ಪ್ರಾಬಲ್ಯ ಸಾಧಿಸಿದರು. ಅಂದರೆ ಸ್ವಾತಂತ್ರ್ಯ ಪೂರ್ವಕಾಲದ ವಿಜ್ಞಾನ – ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಸರ್‌ ಶಾಂತಿ ಸ್ವರೂಪ ಭಟ್ನಾಗರ್‌, ಹೋಮಿಭಾಬಾ, ಮಹಾಲನೋಬಿಸ್‌ ಅಥವಾ ವಿಕ್ರಂ ಸಾರಾಭಾಯ್‌ ಮುಂತಾದವರ ಸೇವೆಯನ್ನು ಕೀಳುಗಳೆಯುವುದು ಈ ಮಾತಿನ ಉದ್ದೇಶವಲ್ಲ. ಆದರೆ ಇವರುಗಳ ಪ್ರಾಬಲ್ಯ, ನಮ್ಮ ವಿ.ವಿ.ಗಳು ಹಾಗೂ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಗಾಧ ಸಂಖ್ಯೆಯಲ್ಲಿದ್ದ ವಿಜ್ಞಾನಿಗಳ ಕೊಡುಗೆಯನ್ನು ನಿರ್ಲಕ್ಷಿಸುವಂಥ ನೇತ್ಯಾತ್ಮಕ ಪರಿವೇಶವೊಂದನ್ನು ಸೃಷ್ಟಿಸಿತು. ಆ ಕಾಲದ ನಮ್ಮ ವಿಜ್ಞಾನ ಕ್ಷೇತ್ರ ರಾಜಕೀಯ ಹಾಗೂ ಆಡಳಿತ ಕ್ಷೇತ್ರಗಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ. ಹಾಗೆಂದೇ ಭಾರತೀಯ ವಿಜ್ಞಾನ ಕ್ಷೇತ್ರದ ಪಡಸಾಲೆಯನ್ನು ಆಳಿದವರು ಇಂಥ “ರಾಜಕಾರಣಿ’ಗಳೇ ಎನ್ನಬಹುದು.

ಇನ್ನು, ನಮ್ಮ ಉನ್ನತ ಹುದ್ದೆಯಲ್ಲಿದ್ದ ವಿಜ್ಞಾನಿಗಳ ಪೈಕಿ ಕೆಲವರು ದರ್ಪ-ದುರಹಂಕಾರ ಬೆಳೆಸಿಕೊಂಡವರೂ ಇದ್ದರು. ಇಂದಿರಾ ಗಾಂಧಿಯವರಿಗೆ ಅತಿ ನಿಕಟರಾಗಿದ್ದ ಇಂಥ ದರ್ಪಿಷ್ಟ ವಿಜ್ಞಾನಿಯೊಬ್ಬರು ಮೊರಾರ್ಜಿ ದೇಸಾಯಿಯವರನ್ನು ಛೇಡಿಸಿದ ರೀತಿ ಇದು – “ಅವರು, ಆ ಮೊರಾರ್ಜಿಭಾಯಿ, ತಾವು ಬಿ.ಎಸ್ಸಿ. ಪದವೀಧರರಾಗಿರುವುದರಿಂದ ವಿಜ್ಞಾನ ಕ್ಷೇತ್ರದಲ್ಲಿ ತನ್ನದೇ ಮಾತು ಅಂತಿಮ ಅಂತ ಭಾವಿಸಿದ್ದಾರೆ!’ ಇದೇ ವಿಜ್ಞಾನಿ ಬೆಂಗಳೂರಿನ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, “ನೀವು, ಶಾಲಾ ಹುಡುಗರು ಆ ಪತ್ರಕರ್ತರಿಗಿಂತ ಹೆಚ್ಚು ಚೆನ್ನಾಗಿ ಪ್ರಶ್ನೆಗಳನ್ನು ಕೇಳುತ್ತೀರಿ!’ ಎಂದಿದ್ದರು. ಇಂಥ ಹಮ್ಮಿಗೆ ವ್ಯತಿರಿಕ್ತವಾದ ನಿಲುವು ಸರ್‌ ಸಿ.ವಿ. ರಾಮನ್‌ ಅವರದಾಗಿತ್ತು. ಅವರು ಭಾರತೀಯ ವಿಜ್ಞಾನ ಕ್ಷೇತ್ರದ ಪಾಲಿಗೆ ಓರ್ವ ಉತ್ಕೃಷ್ಟ ಗುಣಮಟ್ಟದ ಸಾರ್ವಜನಿಕ ಸಂಪರ್ಕ ಅಧಿಕಾರಿಯಂತಿದ್ದರು. ಅನೇಕ ಬಾರಿ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣವಿತ್ತಿದ್ದರು. 1940ರಲ್ಲಿ ಬೆಂಗಳೂರು ನಗರ ಪಾಲಿಕೆ ಅವರನ್ನು ಚಿಕ್ಕಪೇಟೆಯಲ್ಲಿನ ಸಾರ್ವಜನಿಕ ಶೌಚಾಲಯದ ಉದ್ಘಾಟನೆಗಾಗಿ ಆಹ್ವಾನಿಸಿದಾಗ, ನೊಬೆಲ್‌ ಪ್ರಶಸ್ತಿ ಪುರಸ್ಕೃತರಾದ ತನ್ನ ಘನತೆಗೆ ಕುಂದು ತರುವ ಕೀಳು ಕಾರ್ಯಕ್ರಮವಿದು ಎಂದು ಅವರು ಅಂದುಕೊಳ್ಳಲೇ ಇಲ್ಲ. ಅವರ ಬದಲಿಗೆ ಯಾರೋ ಇತರ ವಿಜ್ಞಾನಿಯನ್ನೋ, ಅಧಿಕಾರಿಯನ್ನೋ ಆಹ್ವಾನಿಸಿದ್ದಿದ್ದರೆ, ಖಂಡಿತಕ್ಕೂ ಅವರು ಇದೊಂದು ಅವಮಾನ ಎಂದು ಭಾವಿಸಿಕೊಳ್ಳುತ್ತಿದ್ದರು.
ವಿಜ್ಞಾನ ಕ್ಷೇತ್ರದ ಉನ್ನತ ಹುದ್ದೆಗಳಿಗೆ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಭಾವಿ ಅಧಿಕಾರಿಗಳು ತಮ್ಮ ಪಾತ್ರವನ್ನು ನಿರ್ವಹಿದ್ದುಂಟು. ಪಿ.ಎನ್‌. ಹಕ್ಸರ್‌ ಇಂಥವರಲ್ಲೊಬ್ಬರು. ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್‌ ತಮ್ಮ ಇತ್ತೀಚೆಗೆ ಬಿಡುಗಡೆಯಾದ ಕೃತಿ, “ಇಂಟರ್‌ವೈನ್‌x ಲೈವ್ಸ್‌; ಪಿ.ಎನ್‌. ಹಕ್ಸರ್‌ ಆ್ಯಂಡ್‌ ಇಂದಿರಾಗಾಂಧಿ’ಯಲ್ಲಿ ಬರೆದಿದ್ದಾರೆ. – ವಿಕ್ರಂ ಸಾರಾಭಾಯ್‌ ಅವರ ಅಕಾಲಿಕ ನಿಧನದ ಬಳಿಕ ಬಾಹ್ಯಾಕಾಶ ಆಯೋಗ ಹಾಗೂ ಇಸ್ರೋದ ಅಧ್ಯಕ್ಷರನ್ನಾಗಿ ಡಾ| ಸತೀಶ್‌ ಧವನ್‌ ಅವರನ್ನು ಆಯ್ಕೆ ಮಾಡಿದವರು ಹಕ್ಸರ್‌ ಅವರೇ. ಧವನ್‌ ಅವರಿಗೆ ಎರಡೆರಡು ಹುದ್ದೆಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡಲಾಯಿತು. ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರ ಹುದ್ದೆ ಹಾಗೂ ಇಸ್ರೋ ಮುಖ್ಯಸ್ಥರ ಹುದ್ದೆ.

ಚಂದ್ರಯಾನ 2ರ ಯೋಜನೆಯನ್ವಯ “ಲ್ಯಾಂಡರ್‌ ವಿಕ್ರಮ್‌’ ಚಂದ್ರ ಪದರವನ್ನು ಸ್ಪರ್ಶಿಸುವ ಸಮಯ ಇನ್ನೇನು ಬಂದೇ ಬಿಟ್ಟಿತೆನ್ನುವಾಗಲೇ, ಪೂರ್ವನಿರೀಕ್ಷಿತವೆನ್ನಬಹುದಾದ ಕೆಲವೊಂದು ಟೀಕೆಗಳೂ ಕೇಳಿಬಂದಿವೆ. ಚಂದ್ರಸ್ಪರ್ಶದ ಈ ಯೋಜನೆ “ಬಡವರ ವಿರೋಧಿ’ ಎಂದು ಬಣ್ಣಿಸಿರುವ ಬಿಬಿಸಿ, “ಭಾರತ ಎಲ್ಲಕ್ಕಿಂತ ಮೊದಲಿಗೆ ಬಡತನ ನಿವಾರಣೆಯತ್ತ ಗಮನ ಹರಿಸಬೇಕು, ಆಮೇಲಷ್ಟೇ ಚಂದ್ರನ ಮೇಲೆ ಇಳಿಯುವ ಬಗ್ಗೆ ಯೋಚಿಸಬೇಕು’ ಎಂದು ಅಪ್ಪಣೆ ಕೊಡಿಸಿದೆ. “ಎಲ್ಲರಿಗಿಂತ ಮೊದಲು, 50 ವರ್ಷಗಳ ಹಿಂದೆ 1969ರಲ್ಲಿ, ಚಂದ್ರನ ಮೇಲೆ ಪಾದ ಊರಿದವರು ಅಮೆರಿಕನ್ನರು’ ಎಂದೂ ಭಾರತಕ್ಕೆ ನೆನಪು ಮಾಡಿಕೊಡಲಾಗಿದೆ! ಇಂಥ ಟೀಕಾಸ್ತ್ರಗಳ ಹಿಂದೆ ಅಮೆರಿಕ, ರಶ್ಯ, ಫ್ರಾನ್ಸ್‌ಗಳ ಉಪಗ್ರಹ ಉಡಾವಣಾ ಏಕಸ್ವಾಮ್ಯಕ್ಕೆ ಭಾರತದ ಚಂದ್ರಯಾನ ಯೋಜನೆ ಧಕ್ಕೆ ತಂದೀತೆಂಬ ಭಯವಿದೆ. ನಮ್ಮ ಕೈಗಾರಿಕೋದ್ಯಮಿಗಳ ಲ್ಲೊಬ್ಬರಾದ ಅಂಬಾನಿ ಸಾಹೇಬರು ಮುಂಬಯಿಯ ತನ್ನ ಐಷಾರಾಮಿ ಬಂಗಲೆಗಾಗಿ 5,000 ಕೋಟಿ. ರೂ. ಸುರಿಯುತ್ತಾರೆ. ಐಪಿಎಲ್‌ ಕ್ರಿಕೆಟ್‌ ಟೀಮ್‌ನ ನಿರ್ವಹಣೆಗೆ ತಗಲುವುದು 1,000 ಕೋಟಿ. ರೂ.ಗಳು ಅಗಾಧ ಪ್ರಮಾಣದ ಖರ್ಚುವೆಚ್ಚಗಳ ಇಂದಿನ ಸಂದರ್ಭದಲ್ಲಿ ಚಂದ್ರಯಾನ 2ಕ್ಕೆ ತಗಲಿರುವುದು 978 ಕೋಟಿ. ರೂ.ಗಳು. ಇಂಥ ಪರಿಮಿತ ವೆಚ್ಚದ ಯೋಜನೆ ನಮ್ಮ ರಾಷ್ಟ್ರೀಯ ಭಾವನೆಯನ್ನು ಉದ್ದೀಪಿಸುವ ಪ್ರಯತ್ನಕ್ಕೆ ಇನ್ನಷ್ಟು ಸ್ಫೂರ್ತಿ ಪ್ರೇರಣೆ ಒದಗಿಸಲಿದೆ. ಇಸ್ರೋದ ವ್ಯೋಮ ಯೋಜನೆಗಳನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಡಾ| ಶಿವನ್‌, ಅವರು “ಭಾರತ ಎಂದೂ ಬಡದೇಶವಲ್ಲ’ ಎಂದಿರುವುದು ಅತ್ಯಂತ ಸಮುಚಿತ ಹೇಳಿಕೆಯೇ ಆಗಿದೆ.

– ಅರಕೆರೆ ಜಯರಾಮ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಇನ್ನು ಮೂರು ವರ್ಷ ಬಿ.ಎಸ್‌.ವೈ ಅವರೇ ಸಿಎಂ: ಕೆ.ಎಸ್‌.ಈಶ್ವರಪ್ಪ

ಇನ್ನು ಮೂರು ವರ್ಷ ಬಿ.ಎಸ್‌.ವೈ ಅವರೇ ಸಿಎಂ: ಕೆ.ಎಸ್‌.ಈಶ್ವರಪ್ಪ

ಬಿಜೆಪಿ ಸರ್ಕಾರದ ಪತನ ಹಗಲು ಗನಸು: ಅಶ್ವತ್ಥನಾರಾಯಣ

ಬಿಜೆಪಿ ಸರ್ಕಾರದ ಪತನ ಹಗಲು ಗನಸು: ಅಶ್ವತ್ಥನಾರಾಯಣ

ಅನಾಮಧೇಯ ಪತ್ರದ ಮೂಲಕ ಜೀವ ಬೆದರಿಕೆ: ಉಗ್ರಪ್ಪ

ಅನಾಮಧೇಯ ಪತ್ರದ ಮೂಲಕ ಜೀವ ಬೆದರಿಕೆ: ಉಗ್ರಪ್ಪ

ಸಿಎಂ ಸಹಿತ ಸಚಿವ, ಶಾಸಕರ ವೇತನ ಭತ್ತೆ ಶೇ. 30 ಕಡಿತ

ಸಿಎಂ ಸಹಿತ ಸಚಿವ, ಶಾಸಕರ ವೇತನ ಭತ್ತೆ ಶೇ. 30 ಕಡಿತ

ಐದು ದಿನದೊಳಗೆ ಗ್ಯಾಂಗ್ ಸ್ಟರ್ ಅರುಣ್ ಗೌಳಿ ಶರಣಾಗಬೇಕು: ಬಾಂಬೆ ಹೈಕೋರ್ಟ್

ಐದು ದಿನದೊಳಗೆ ಗ್ಯಾಂಗ್ ಸ್ಟರ್ ಅರುಣ್ ಗೌಳಿ ಶರಣಾಗಬೇಕು: ಬಾಂಬೆ ಹೈಕೋರ್ಟ್

ಮೈ ಶುಗರ್‌ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಬದ್ಧ

ಮೈ ಶುಗರ್‌ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಬದ್ಧ

ಮೋದಿ, ಶಾ ಮಾತುಕತೆ; ದೇಶದಲ್ಲಿ ಇನ್ನೂ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ

ಮೋದಿ, ಶಾ ಮಾತುಕತೆ; ದೇಶದಲ್ಲಿ ಇನ್ನೂ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

kat-13

ಕೊರೊನಾ ವೈರಸ್‌- ಅಸ್ವಾಭಾವಿಕ ಆಹಾರ ಪದ್ಧತಿಯ ಕೊಡುಗೆ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ಇನ್ನು ಮೂರು ವರ್ಷ ಬಿ.ಎಸ್‌.ವೈ ಅವರೇ ಸಿಎಂ: ಕೆ.ಎಸ್‌.ಈಶ್ವರಪ್ಪ

ಇನ್ನು ಮೂರು ವರ್ಷ ಬಿ.ಎಸ್‌.ವೈ ಅವರೇ ಸಿಎಂ: ಕೆ.ಎಸ್‌.ಈಶ್ವರಪ್ಪ

ಬಿಜೆಪಿ ಸರ್ಕಾರದ ಪತನ ಹಗಲು ಗನಸು: ಅಶ್ವತ್ಥನಾರಾಯಣ

ಬಿಜೆಪಿ ಸರ್ಕಾರದ ಪತನ ಹಗಲು ಗನಸು: ಅಶ್ವತ್ಥನಾರಾಯಣ

ಹೈಕೋರ್ಟ್‌ ಸ್ವಯಂ ಪ್ರೇರಿತ ಪಿಐಎಲ್‌: ಕೇಂದ್ರ, ರಾಜ್ಯ ಸರ್ಕಾರಕ್ಕೆ ನೋಟಿಸ್‌

ಹೈಕೋರ್ಟ್‌ ಸ್ವಯಂ ಪ್ರೇರಿತ ಪಿಐಎಲ್‌: ಕೇಂದ್ರ, ರಾಜ್ಯ ಸರ್ಕಾರಕ್ಕೆ ನೋಟಿಸ್‌

ಅನಾಮಧೇಯ ಪತ್ರದ ಮೂಲಕ ಜೀವ ಬೆದರಿಕೆ: ಉಗ್ರಪ್ಪ

ಅನಾಮಧೇಯ ಪತ್ರದ ಮೂಲಕ ಜೀವ ಬೆದರಿಕೆ: ಉಗ್ರಪ್ಪ

ಸಿಎಂ ಸಹಿತ ಸಚಿವ, ಶಾಸಕರ ವೇತನ ಭತ್ತೆ ಶೇ. 30 ಕಡಿತ

ಸಿಎಂ ಸಹಿತ ಸಚಿವ, ಶಾಸಕರ ವೇತನ ಭತ್ತೆ ಶೇ. 30 ಕಡಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.