Udayavni Special

ಪೌರತ್ವ ಕಾಯಿದೆ ವಿರೋಧಿ vs ಗಾಳಿ ಸ್ವಾತಂತ್ರ್ಯ ಚಳವಳಿ


Team Udayavani, Jan 17, 2020, 6:00 AM IST

an-35

ಒಂದು ರೀತಿಯಲ್ಲಿ ಸಿಎಎ ಗುರಿಯಾಗಿರಿಸಿಕೊಂಡಿರುವುದು ಬಾಂಗ್ಲಾದೇಶವನ್ನು. ಕಾರಣ ಅಲ್ಲಿ ನೀಡಲಾಗುತ್ತಿರುವ ಕಾಟ ಹಾಗೂ ತಾರತಮ್ಯದಿಂದ ಬೇಸತ್ತು ಎಷ್ಟೋ ಹಿಂದೂಗಳು ಅಲ್ಲಿಂದ ಕಾಲ್ತೆಗೆದು ನಮ್ಮಲ್ಲಿಗೆ ಆಶ್ರಯ ಅರಸಿ ಬರುತ್ತಿರುವುದು ಎಷ್ಟೋ ಕಾಲದಿಂದ ನಡೆದೇ ಇದೆ. ಬಾಂಗ್ಲಾಕ್ಕೆ ಪಾಕಿಸ್ಥಾನದಿಂದ ಮುಕ್ತಿ ತಂದು ಕೊಟ್ಟದ್ದು ಭಾರತ ಸರಕಾರ ಹಾಗೂ ಭಾರತೀಯ ಸೇನೆ ಎಂಬುದನ್ನು ಮರೆತಿರುವ ಬಾಂಗ್ಲಾದ ನಾಯಕರ ಪ್ರಜ್ಞೆಯನ್ನು ಕಲಕುವ ಕೆಲಸವನ್ನೂ ಈ ಕಾಯಿದೆ ಮಾಡುವ ಸಾಧ್ಯತೆಯಿದೆ.

ಪೌರತ್ವ ತಿದ್ದುಪಡಿ ಕಾಯಿದೆ(ಸಿಎಎ)ಯನ್ನು ವಿರೋಧಿಸಿ ನಡೆಸಲಾಗುತ್ತಿರುವ ಆಂದೋಲನ ಇದೀಗ ದೇಶವ್ಯಾಪ್ತಿಯಾಗಿ ಹಬ್ಬಿದೆ. ಈ ಹೋರಾಟವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಸುತ್ತಿದ್ದಾರೆ. ಈ ಹೋಲಿಕೆ ಸಮಂಜಸವಲ್ಲ. ವಾಸ್ತವವಾಗಿ ಇದು ಒಂದು ಉತ್ಪ್ರೇಕ್ಷಿತ ವರ್ಣನೆ.

ಎಲ್ಲಕ್ಕಿಂತ ಮೊದಲಿಗೆ ಗಮನಿಸಬೇಕಾದ ಅಂಶವೆಂದರೆ ನಮ್ಮ ಅಂದಿನ ಸ್ವಾತಂತ್ರ್ಯ ಹೋರಾಟಕ್ಕೆ ನ್ಯಾಯೋಚಿತ ಕಾರಣವಿತ್ತು. ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆಯಬೇಕೆಂಬ ಕಾರಣ ಅದು. ಆದರೆ ಸಿಎಎ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಗಲಭೆಗಳಿಗೆ ಅಸಮರ್ಪಕ ಮಾಹಿತಿ, ಅನಗತ್ಯ ಭೀತಿ – ಇವೇ ಆಧಾರ. ಈ ತಿದ್ದುಪಡಿ ಕಾಯಿದೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿರುವುದೇ ದೇಶವ್ಯಾಪಿ ಪ್ರತಿಭಟನೆಗೆ ಕಾರಣ. ಪ್ರತಿಭಟನೆಯಲ್ಲಿ ನಿರತರಾಗಿರುವ ವಿದ್ಯಾವಂತರೆನಿಸಿ ಕೊಂಡವರು ಅಥವಾ ಈ ಕಾಯಿದೆಯ ಟೀಕಾಕಾರರೆನಿಸಿಕೊಂಡವರು ಬೇಕು ಬೇಕೆಂದೇ ವಾಸ್ತವಾಂಶಗಳನ್ನು ಮರೆ ಮಾಚಿದ್ದಾರೆ. ಇವರಲ್ಲಿ ತಮ್ಮ ಲಾಭದ ಮೇಲೆ ಕಣ್ಣಿಟ್ಟಿರುವ ಕೆಲ ವಿಪಕ್ಷೀಯ ನಾಯಕರೂ ಇದ್ದಾರೆ. ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದ ಮಂದಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಇದರರ್ಥ, ಇವರೆಲ್ಲ ಎಲ್ಲಿ ತಮ್ಮ ಪೌರತ್ವವನ್ನೇ ಕಳೆದುಕೊಳ್ಳಬೇಕಾದೀತೋ ಎಂಬ ಅಥವಾ ತಾವೆಲ್ಲ ದ್ವಿತೀಯ ದರ್ಜೆಯ ನಾಗರಿಕರಾಗಿ ಬಾಳಬೇಕಾದೀತೇನೋ ಎಂಬ ಅಥವಾ ತಮ್ಮನ್ನೆಲ್ಲ ದೇಶದಿಂದಲೇ ಓಡಿಸುತ್ತಾರೇನೋ ಎಂಬ ಭೀತಿಭೂತಕ್ಕೆ ಬಲಿಯಾಗಿದ್ದಾರೆನ್ನುವುದೇ ಆಗಿದೆ. ವಾಸ್ತವವಾಗಿ ಇದೆಲ್ಲ ಕೇವಲ ಬ್ರಾಂತಿಯಷ್ಟೆ. ಮುಸ್ಲಿಮರ ಪಾಲಿಗೆ ಅತ್ಯಂತ ಸುರಕ್ಷಿತವಾದ ದೇಶವೊಂದು ಇದ್ದರೆ ಅದು ಭಾರತವೇ ಹೊರತು ಪಾಕಿಸ್ಥಾನವಾಗಲಿ, ಬಾಂಗ್ಲಾ ದೇಶವಾಗಲಿ ಅಥವಾ ಶ್ರೀಲಂಕೆಯಾಗಲಿ ಅಲ್ಲ ಎಂಬ ಮಾತನ್ನು ಆಗಾಗ ಎಷ್ಟೋ ಮಂದಿ ಹೇಳಿಲ್ಲವೇ?

ಒಂದು ರೀತಿಯಲ್ಲಿ ಸಿಎಎ ಗುರಿಯಾಗಿರಿಸಿಕೊಂಡಿರುವುದು ಬಾಂಗ್ಲಾದೇಶವನ್ನು. ಕಾರಣ ಅಲ್ಲಿ ನೀಡಲಾಗುತ್ತಿರುವ ಕಾಟ ಹಾಗೂ ಅಲ್ಲಿ ತೋರಿಸಲಾಗುತ್ತಿರುವ ತಾರತಮ್ಯ ಧೋರಣೆಯಿಂದ ಬೇಸತ್ತು ಎಷ್ಟೋ ಹಿಂದೂಗಳು ಅಲ್ಲಿಂದ ಕಾಲ್ತೆಗೆದು ನಮ್ಮಲ್ಲಿಗೆ ಆಶ್ರಯ ಅರಸಿ ಬರುತ್ತಿರುವುದು – ಎಷ್ಟೋ ಕಾಲದಿಂದ ನಡೆದೇ ಇದೆ. ಪಾಕಿಸ್ಥಾನದಿಂದ ಅಥವಾ ಅಫ್ಘಾನಿಸ್ಥಾನದಿಂದ ಹಿಂದೂಗಳು ವಲಸೆ ಬರುವ ಪರಿಪಾಠ ಹೆಚ್ಚು ಕಡಿಮೆ ನಿಂತೇ ಹೋಗಿದೆ ಅಥವಾ ಇಂಥ ಪ್ರಕರಣಗಳು ಎಲ್ಲೋ ಆಗೊಮ್ಮೆ – ಈಗೊಮ್ಮೆ ಅಲ್ಪ ಪ್ರಮಾಣದಲ್ಲಿ ಕಂಡುಬರುತ್ತಿವೆಯಷ್ಟೇ. ಪಾಕಿಸ್ಥಾನದಲ್ಲಿನ ಹಿಂದೂಗಳ ಒಂದು ವರ್ಗ (ವಿಶೇಷವಾಗಿ ಸಿಂಧಿಗಳು) ಅನುಕೂಲವಂತ ಸ್ಥಿತಿಗೆ ಬಂದಿರುವುದೇನೋ ಹೌದು; ಆದರೆ ಅಲ್ಲಿನ ಬಹುತೇಕ ಹಿಂದೂಗಳು ಅಲ್ಲಿನ ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ದ್ವಿತೀಯ ದರ್ಜೆಯ ಪೌರರಾಗಿ ಮಾರ್ಪಟ್ಟಿದ್ದಾರೆ; ಚಿಕ್ಕ ಪುಟ್ಟ ನೌಕರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಿರಾಶ್ರಿತರ ಒಳಹರಿವು ಇನ್ನೂ ಮುಂದುವರಿದದ್ದೇ ಆದರೆ, ವಲಸಿಗರ ಸ್ವೀಕಾರಕ್ಕೆ ಈಗ ನಿಗದಿಸಲಾಗಿರುವ ಗಡುವಿನ ಮಿತಿಯನ್ನು (ಈಗ 2014) ವಿಸ್ತರಿಸಬೇಕಾಗಬಹುದೇನೋ.

ಸಿಎಎಗೆ ಸಂಸತ್ತಿನ ಅಸ್ತುಮುದ್ರೆ ದೊರಕಿಸಿಕೊಳ್ಳುವಲ್ಲಿ ಸಫ‌ಲವಾಗುವುದರೊಂದಿಗೆ ಸರಕಾರ ನಮ್ಮ ನೆರೆ ರಾಷ್ಟ್ರಗಳಲ್ಲಿ ಹಿಂಸೆ ಅನುಭವಿಸುತ್ತಿರುವ ಹಿಂದೂ ಅಲ್ಪಸಂಖಾತರ ಪರ ತಾನಿದ್ದೇನೆಂದು ಮರುದೃಢೀಕರಿಸಿದಂತಾಗಿದೆ. ಈ ಬಡಪಾಯಿಗಳಿಗೆ ಭಾರತ ಬಿಟ್ಟರೆ ಬೇರೆ ಯಾವ ದೇಶಕ್ಕೂ ಹೋಗಲು ಸಾಧ್ಯವಿಲ್ಲ. ಇದೇ ವೇಳೆ, ನಾವು ಈಗಾಗಲೇ ಜನಸಾಂದ್ರ ರಾಷ್ಟ್ರವಾಗಿರುವುದರಿಂದ ವಿದೇಶೀಯರನ್ನು ಸ್ವೀಕರಿಸುವಲ್ಲಿ ಆಯ್ಕೆಯ ಮಾನದಂಡ ಇರಿಸಿಕೊಳ್ಳಲೇಬೇಕಾಗಿದೆ. ಸಿಎಎ ಕುರಿತ ಭ್ರಮಾತ್ಮಕ ಭೀತಿಗೆ ಇರುವ ಕಾರಣಗಳಲ್ಲಿ ಒಂದೆಂದರೆ ಈ ತಿದ್ದುಪಡಿ ಕಾಯಿದೆಯನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿ

(ಎನ್‌ಪಿಆರ್‌) ಹಾಗೂ ಎನ್‌ಆರ್‌ಸಿ ಈ ಎರಡೂ ಕಾಯಿದೆಗಳು ಕೂಡ ಸೂಕ್ತ ಕಾನೂನು ಪ್ರಕ್ರಿಯೆ ನಡೆಸದೆ ಯಾರನ್ನೂ ದೇಶದಿಂದ ಹೊರ ಕಳುಹಿಸುವ ಗುರಿಯನ್ನು ಇರಿಸಿಕೊಂಡಿಲ್ಲ.

ಇಷ್ಟಕ್ಕೂ ಸಿಎಎ ವಿರುದ್ಧದ ಪ್ರತಿಭಟನಾತ್ಮಕ ಹೋರಾಟವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಸಿದವರು ಯಾರೆಂದರೆ ಕೇರಳದ ಮಾರ್ಕ್ಸ್ವಾದಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತಿತರರು. ಪಿಣರಾಯಿಯವರ ಪ್ರಕಾರ, ಈ ತಿದ್ದುಪಡಿ ಮಸೂದೆಯ ಪರಿಣಾಮ ವಾಗಿ ದೇಶದ ಸಂವಿಧಾನ ಹಾಗೂ ಜಾತ್ಯತೀತ ನಿಲುವಿಗೆ ಧಕ್ಕೆ ಬಂದಿದೆ.

ಸಿಎಎಗೆ ಸಂಬಂಧಿಸಿದ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿರುವವರು, ವಿಪಕ್ಷೀಯ ರಾಜಕೀಯ ಕಾರ್ಯಕರ್ತರು, ವಿಶ್ವವಿದ್ಯಾಲಯಗಳ ಕೆಲ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಹಾಗೂ ನಗರ ಪ್ರದೇಶಗಳಲ್ಲಿನ ಕೆಲ ಮುಸ್ಲಿಮರು, ಇಲ್ಲಿಗೆ ಸ್ವಾತಂತ್ರ್ಯ ಆಂದೋಲನದ ಹೋಲಿಕೆ ಅರ್ಥ ಕಳೆದುಕೊಂಡಿದೆ ಎಂದಾಯಿತು. ಕಾರಣ, ಸ್ವಾತಂತ್ರ್ಯ ಚಳವಳಿಯಲ್ಲಿ ಸಮಾಜದ ಬಹುತೇಕ ಎಲ್ಲ ವರ್ಗಗಳ ಜನರೂ ಪಾಲ್ಗೊಂಡಿದ್ದರು; ಆಂದೋಲನ ಗ್ರಾಮಾಂತರ ಪ್ರದೇಶಗಳಿಗೂ ಹಬ್ಬಿತ್ತು. ಇನ್ನು, ಸ್ವಾತಂತ್ರ್ಯ ಆಂದೋಲನದಲ್ಲಿ ಮುಸ್ಲಿಮರ ಪಾತ್ರದ ಕುರಿತು ಹೇಳುವಾಗ ಒಂದು ಕಹಿ ಸತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಈಗ ಪಾಕಿಸ್ಥಾನ ಹಾಗೂ ಬಾಂಗ್ಲಾದೇಶವೆಂದು ಕರೆಸಿಕೊಳ್ಳುತ್ತಿರುವ ಅಂದಿನ ಮುಸ್ಲಿಂ ಬಾಹುಳ್ಯದ ಪ್ರದೇಶಗಳ ಹೆಚ್ಚಿನ ಮಂದಿ ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ನಡೆದಿದ್ದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳಲಿಲ್ಲ. ಹೆಚ್ಚೆಂದರೆ ಅವರು ಅವಿಭಜಿತ ಪಂಜಾಬ್‌ನಲ್ಲಿ ಯೂನಿಯನಿಸ್ಟ್‌ ಪಾರ್ಟಿಯಂಥ, ಪೂರ್ವಬಂಗಾಲ (ಬಾಂಗ್ಲಾದೇಶ)ದಲ್ಲಿ ಮುಸ್ಲಿಂ ಲೀಗ್‌ನಿಂದ ಸಿಡಿದು ಬೇರೆಯಾದ ಫ‌ಜುಲ್‌ ಹಖ್‌ ನೇತೃತ್ವದ ರಾಜಕೀಯ ಬಣಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಯೂನಿಯನಿಸ್ಟ್‌ ಪಾರ್ಟಿಯಂತೂ, ಅದು ಸ್ವಾತಂತ್ರ್ಯ ಹೋರಾಟದ ಪರವಾಗಿತ್ತು ಎಂಬುದಕ್ಕಿಂತಲೂ ಪಂಜಾಬಿನ ಸಿರಿವಂತ ಜಮೀನ್ದಾರ ರುಗಳ ನೇತೃತ್ವದ ಪಕ್ಷವಾಗಿತ್ತು; ಬ್ರಿಟಿಷ್‌ ಸರಕಾರದ ಪರವಾಗಿದ್ದ ಪಕ್ಷವಾಗಿತ್ತು ಎಂದರೆ ಹೆಚ್ಚು ಸರಿ. ಉತ್ತರ ಪ್ರದೇಶದ (ಅಂದಿನ ಯುನೈಟೆಡ್‌ ಪ್ರಾವಿನ್ಸಸ್‌) ಮೇಲ್ವರ್ಗದ ಮುಸ್ಲಿಮರು ಮುಸ್ಲಿಂಲೀಗ್‌ನ ಪರವಾಗಿದ್ದರು; ಸಿಂಧ್‌ನ ಮುಸ್ಲಿಮರಿಗಿಂತಲೂ ಹೆಚ್ಚು ಪ್ರಬಲವಾಗಿ ಪಾಕಿಸ್ಥಾನದ ಪರವಾಗಿ ಪ್ರಚಾರಾಂದೋಲನ ಕೈಗೊಂಡರು. ಪಂಜಾಬ್‌, ಸಿಂಧ್‌ ಹಾಗೂ ಇಂದಿನ ಪಾಕಿಸ್ಥಾನದಲ್ಲಿನ ಅನೇಕ ಭಾಗಗಳನ್ನು, ಹಾಗೆಯೇ ಪೂರ್ವ ಬಂಗಾಲವನ್ನು 1937ರ ಬಳಿಕ ಆಳಿದ್ದು ಮುಸ್ಲಿಂ ಲೀಗ್‌ ಸರಕಾರಗಳೇ ಹೊರತು ಕಾಂಗ್ರೆಸ್‌ ಸರಕಾರಗಳಲ್ಲ.

ರಾಜ ಪ್ರಭುತ್ವಗಳಿದ್ದ ಭಾರತದಲ್ಲೂ ಕಾಂಗ್ರೆಸ್‌ನೊಂದಿಗಿನ ಹಾಗೂ ಸ್ವಾತಂತ್ರ್ಯ ಚಳವಳಿಯ ಜತೆಗಿನ ಮುಸ್ಲಿಮರ ಸಂಬಂಧವೂ ಹೀಗೆಯೇ ಇತ್ತು. ಹೈದರಾಬಾದಿನ ನಿಜಾಂ ಸರಕಾರ ಹಾಗೂ ಆ ರಾಜ್ಯದ ಪ್ರತಿಷ್ಠಿತ ಮುಸ್ಲಿಂ ವರ್ಗ ಪಾಕಿಸ್ಥಾನದೊಂದಿಗೆ ಸೇರ್ಪಡೆಗೊಳ್ಳಲು ತುದಿಗಾಲಲ್ಲಿ ನಿಂತಿದ್ದವು. ಸರದಾರ್‌ ಪಟೇಲ್‌ ಹಾಗೂ ಕೆ.ಎಂ. ಮುನ್ಶಿ ಅಂದು ಹೈದರಾಬಾದ್‌ ಹಾಗೂ ಜುನಾಗಢಕ್ಕೆ ಸೇನೆಯನ್ನು ಕಳಿಸಿದ್ದು ಇದೇ ಕಾರಣಕ್ಕಾಗಿ. ಮಹಮ್ಮದ್‌ ಅಲಿ ಜಿನ್ನಾ ಹಾಗೂ ಮುಸ್ಲಿಂ ಲೀಗಿನ ಇತರ ನಾಯಕರು, ಕಾಂಗ್ರೆಸ್‌ ಪಕ್ಷದಲ್ಲಿನ ಮುಸ್ಲಿಂ ನಾಯಕರನ್ನು ಕೀಳಾಗಿ ಕಾಣುತ್ತಿದ್ದರು. ವಾಸ್ತವವಾಗಿ ಜಿನ್ನಾ ಹಾಗೂ ಇತರ ಮುಸ್ಲಿಂ ನಾಯಕರು “ತಾನು ಸಮಸ್ತ ಭಾರತೀಯರ ಪಕ್ಷ’ ಎಂಬ ಕಾಂಗ್ರೆಸ್‌ನ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು; ಅದು ಕೇವಲ ಹಿಂದೂಗಳ ಪಕ್ಷ ಎಂದು ಟೀಕಿಸುತ್ತಿದ್ದರು.

ವಾಸ್ತವವಾಗಿ ಮುಸ್ಲಿಂ ಲೀಗ್‌ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವನ್ನೂ ವಹಿಸಲಿಲ್ಲ. ಜಿನ್ನಾ ಅವರು ಜೈಲಿಗೆ ಹೋಗದೆಯೇ ಪಾಕಿಸ್ಥಾನ ಎಂಬ ದೇಶವನ್ನು ತಮ್ಮದಾಗಿಸಿಕೊಂಡರು. ಬ್ರಿಟಿಷರು ಭಾರತದಲ್ಲಿ ಹೆಚ್ಚು ಕಾಲ ಉಳಿಯಲಾರರೆಂಬುದು ಅರಿವಾದ ಬಳಿಕ ಜಿನ್ನಾ ಹಾಗೂ ಮುಸ್ಲಿಂ ಲೀಗಿನ ಇತರ ನಾಯಕರು ಕಾಂಗ್ರೆಸ್‌ ಸ್ವಾತಂತ್ರ್ಯ ಗಳಿಸುವ ಗಳಿಗೆಯನ್ನೇ ಕಾಯುತ್ತಿದ್ದರು.

ಇನ್ನು , ಆರೆಸ್ಸೆಸ್‌ ಹಾಗೂ ಹಿಂದೂ ಮಹಾಸಭಾ ಎರಡೂ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಿರಲಿಲ್ಲ ಎಂಬ ಮಾತೂ ಇದೆ. ಇದೇ ರೀತಿ ಕಮ್ಯುನಿಸ್ಟರ ಮೇಲೂ (ಪಿಣರಾಯಿ ವಿಜಯನ್‌ ಇದೇ ಗುಂಪಿನವರು) ಭೂತ ಪೂರ್ವ ಮದ್ರಾಸ್‌ ಪ್ರಾಂತ್ಯದ ಜಸ್ಟಿಸ್‌ ಪಾರ್ಟಿ (ಇದು ಒಡೆದು ಇಂದು ಡಿಎಂಕೆಯ ಎರಡು ಬಣಗಳಾಗಿ ಬಿಟ್ಟಿದೆ), ಅಂದಿನ ಬಾಂಬೆ ಪ್ರಾಂತ್ಯದ “ನಾನ್‌ – ಬ್ರಾಹ್ಮಿನ್‌’ ಪಾರ್ಟಿ – ಇವುಗಳೂ ಸ್ವಾತಂತ್ರ್ಯೋದೋಲನದಲ್ಲಿ ಪಾಲ್ಗೊಂಡಿರಲಿಲ್ಲ. ಅಷ್ಟೇನೂ ರುಚಿಸಲಾರದ ಒಂದು ಕಹಿ ಸತ್ಯವೆಂದರೆ ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಕರ್ನಾಟಕದಲ್ಲಿ ಆಗಿ ಹೋಗಿರುವ ಅನೇಕ ಕಾಂಗ್ರೆಸ್‌ ನಾಯಕರು ಹಿಂದಿನ ಜಸ್ಟಿಸ್‌ ಪಾರ್ಟಿಯ ನಾಯಕರಾಗಿದ್ದವರು.

ಸಿಎಎ ಪ್ರತಿಭಟನೆಯನ್ನು ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಸುವುದು ಇನ್ನೊಂದು ಕಾರಣಕ್ಕಾಗಿಯೂ ತಪ್ಪೇ ಆಗುತ್ತದೆ. ಸ್ವಾತಂತ್ರ್ಯ ಆಂದೋಲನ ಹೆಚ್ಚು ಕಡಿಮೆ ಶಾಂತಿಯುತವಾಗಿತ್ತು. ಅಸಹಕಾರ ಚಳವಳಿ, ಕ್ವಿಟ್‌ ಇಂಡಿಯಾ ಚಳವಳಿಗಳಂಥ ಕೆಲ ಹೋರಾಟಗಳು ಸ್ವಲ್ಪ ಮಟ್ಟಿಗೆ ಹಿಂಸೆಗೆ ದಾರಿ ಮಾಡಿಕೊಟ್ಟಿದ್ದು ಹೌದಾದರೂ ಒಟ್ಟಾರೆಯಾಗಿ ಭಾರತದ ಸ್ವಾತಂತ್ರ್ಯ ಆಂದೋಲನ ಶಾಂತಿಯುತವೆಂದೇ ಹೇಳಬಹುದು. ಆದರೆ ಸಿಎಎ ಪ್ರತಿಭಟನೆಗಳು ದೊಡ್ಡ ಪ್ರಮಾಣದಲ್ಲಿ ಹಿಂಸಾತ್ಮಕ ಘಟನೆಗಳಿಗೆ ಹಾದಿ ಮಾಡಿಕೊಟ್ಟಿವೆ. ಮಂಗಳೂರು, ಅಲಹಾಬಾದ್‌, ಉತ್ತರ ಪ್ರದೇಶಗಳಲ್ಲಿ ಪ್ರತಿಭಟನಕಾರರು ಖಡ್ಗಗಳನ್ನು ಜಳಪಿಸುತ್ತ ಪೊಲೀಸ್‌ ಠಾಣೆಗಳ ಮೇಲೆ ದಾಳಿ ನಡೆಸುತ್ತಿದ್ದುದನ್ನು ಟಿವಿ ಚಾನೆಲ್‌ಗ‌ಳು ತೋರಿಸಿವೆ. ಪ್ರತಿಭಟನೆ ನಡೆದ ಎಲ್ಲ ಕಡೆಗಳಲ್ಲಿ ಕಾಶ್ಮೀರದಲ್ಲಿ ನಡೆದಂಥ ಕಲ್ಲು ತೂರಾಟದ ಘಟನೆಗಳು ನಡೆದಿವೆ.

ಪ್ರತಿಭಟನಾಕಾರರನ್ನು ಸಮರ್ಥಿಸುವ ಉದ್ದೇಶದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ ವಿಡಿಯೋ ಕ್ಲಿಪ್ಪಿಂಗ್‌ ಸಹಿತದ ಹೇಳಿಕೆಗಳು ಸಮರ್ಥನೀಯ ಅಥವಾ ಒಪ್ಪಲು ಸಾಧ್ಯವಿರುವ ಪುರಾವೆಗಳಿಂದ ಕೂಡಿವೆ ಎನ್ನಲು ಸಾಧ್ಯವಿಲ್ಲ. ಮಂಗಳೂರಿನ ಪೊಲೀಸ್‌ ಅಧಿಕಾರಿಗಳು ದೌರ್ಜನ್ಯವೆಸಗಿದ್ದಾರೆ ಎಂದಿದ್ದಾರೆ ಕುಮಾರಸ್ವಾಮಿ. ಯಾವ ಪೋಲಿಸ್‌ ಅಧಿಕಾರಿಗಳನ್ನು ಅವರಿಂದು ಆಕ್ಷೇಪಿಸುತ್ತಿದ್ದಾರೋ ಅಂಥ ಅಧಿಕಾರಿಗಳು ಈ ಹಿಂದೆ ಅವರೇ ಅಥವಾ ಅವರ ಸರಕಾರವೇ ಅಲ್ಲಿಗೆ ನೇಮಿಸಿರಬ ಹುದಾದ ಸಾಧ್ಯತೆಯೂ ಇದೆ.

ದುರದೃಷ್ಟವಶಾತ್‌ ಸಿಎಎ ವಿರೋಧಿ ಪ್ರತಿಭಟನೆಗಳು ಮೋದಿ ಸರಕಾರದ ವಿರುದ್ಧದ ಜನರ ಆಕ್ರೋಶವೆಂದು ರಮಣೀಯವಾಗಿ ಬಣ್ಣಿಸುವವರು, ಪ್ರತಿಭಟನೆಯ ಅತಿರೇಕಗಳ ಕುರಿತಾದ ಜನರ ಮೌನ ಪ್ರತಿಕ್ರಿಯೆಯನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ. ಸಿಎಎ ಪರ ಬೆಂಬಲದ ಸದ್ದಡಗಿದೆಯೆಂದರೆ, ಇದರರ್ಥ ದೇಶದಲ್ಲಿರುವ ಬಹು ಸಂಖ್ಯಾತರು ರಸ್ತೆ ಪ್ರತಿಭಟನೆಗಳ ವೇಳೆ ಪ್ರತಿಭಟನಾಕಾರರು ತೋರಿಸಿದ ವರ್ತನೆಯನ್ನು ಬೆಂಬಲಿಸಿದ್ದಾರೆ ಎಂದಲ್ಲ. ನಾವು ಒಂದು ರಾಷ್ಟ್ರವಾಗಿ ಸಾರ್ವಜನಿಕ ಆಸ್ತಿಯನ್ನು ಅಥವಾ ಸಂಪತ್ತನ್ನು ಮೂರ್ಖರಂತೆ ಧ್ವಂಸ ಮಾಡುವ ಶಕ್ತಿಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.

ಸ್ವಲ್ಪ ಖಡಕ್ಕಾಗಿ ಹೇಳಬೇಕೆಂದರೆ ಈಗ ನಡೆದಿರುವ ಪ್ರತಿಭಟನೆಗಳ ಅತ್ಯಂತ ಅಪಾಯಕಾರಿ ಮುಖವೆಂದರೆ ಕಾಂಗ್ರೆಸ್‌ ಹಾಗೂ ಇತರ ವಿರೋಧ ಪಕ್ಷಗಳು ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಛೂ ಬಿಡುತ್ತಿರುವುದೇ ಆಗಿದೆ. ಈ ಪಕ್ಷಗಳು ಈಗ ಜನರನ್ನು ಒಡೆಯುವ ಆಟದಲ್ಲಿ ನಿರತವಾಗಿವೆ.

ಈ ಹಿಂದೆ ದೇಶದಲ್ಲಿ ನಡೆದ ಕೆಲ ಪ್ರತಿಭಟನೆಗಳನ್ನು ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಸಿದ ಉದಾಹರಣೆಗಳಿವೆ. ಈಚಿನ ವರ್ಷಗಳಲ್ಲಿ ನಡೆದಿರುವ ಇಂಥ ಹೋರಾಟವೆಂದರೆ “ಭ್ರಷ್ಟಾಚಾರದ ವಿರುದ್ಧದ ಭಾರತ’ವೆಂಬ ಆಂದೋಲನ. 1970ರ ದಶಕದ ಮಧ್ಯಭಾಗದಲ್ಲಿ ನಡೆದಿದ್ದ ಜೆ.ಪಿ. ಆಂದೋಲನ ಇಂಥದೇ ಇನ್ನೊಂದು ತಾತ್ವಿಕ ಸಮರ. ಸಿಎಎ ವಿರೋಧಿ ಪ್ರತಿಭಟನೆಗಳಂತಲ್ಲದೆ, ಅಂದಿನ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಅತ್ಯಂತ ಪ್ರಾಮಾಣಿಕರಾದ ಅಣ್ಣಾ ಹಜಾರೆಯವರ ನೇತೃತ್ವವಿತ್ತು. ಅವರು ಓರ್ವ ಲೋಕಮಾನ್ಯ ತಿಲಕರೋ, ಮಹಾತ್ಮಾ ಗಾಂಧೀಜಿಯೋ ಜಯಪ್ರಕಾಶ್‌ ನಾರಾಯಣರೋ ಆಗಿರಲಿಲ್ಲದಿರಬಹುದು.

ಆದರೆ ಹಜಾರೆ ಯವರಿಗೆ ಅವರದೇ ಒಂದು ಹಕ್ಕಿದೆ. ಅವರದೇ ಒಂದು ನಿಲುವಿದೆ. ಅವರ ಆಂದೋಲನ ನಡೆದುದು ನ್ಯಾಯಯುತ ಕಾರಣಕ್ಕಾಗಿ; ಅವರು ಜನರ ಭಾವನೆಗಳನ್ನು ದುರುಪಯೋಗ ಪಡಿಸಿಕೊಳ್ಳಲಿಲ್ಲ. ದುರದೃಷ್ಟವಶಾತ್‌, ಆಮ್‌ಆದ್ಮಿ ಪಕ್ಷ ದಿಲ್ಲಿಯಲ್ಲಿ ಅಧಿಕಾರ ಹಿಡಿದ ಬೆನ್ನಿಗೇ ಆಂದೋಲನದ ಕತೆ ಸಮಾಪ್ತವಾಯಿತು. ಸರಕಾರದ ವಿವಿಧ ಹಂತಗಳಲ್ಲಿ ಹಾಗೂ ಇತರೆಡೆಗಳಲ್ಲಿರುವ ಭ್ರಷ್ಟ ವ್ಯಕ್ತಿಗಳಿಂದ ಜನತೆಯನ್ನು ಪಾರು ಮಾಡುವುದಕ್ಕಾಗಿ ಧೈರ್ಯ ಸ್ಥೈರ್ಯ ನೀಡುವಂಥ ನಿರಂತರ ಆಂದೋಲನವೊಂದು ನಮಗೆ ಬೇಕಾಗಿದೆ.

ಸಿಎಎ ಬಾಂಗ್ಲಾ ದೇಶದಂಥ ನೆರೆಯ ಮಿತ್ರ ರಾಷ್ಟ್ರಗಳಿಗೆ ಕೋಪ ತರಿಸಿದೆ ಎಂದು ಕೆಲ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ವಾಸ್ತವವಾಗಿ ಸಿಎಎ ಬಾಂಗ್ಲಾ ದೇಶಕ್ಕೆ ಅಲ್ಲಿರುವ ಹಿಂದೂ ಅಲ್ಪ ಸಂಖ್ಯಾತರಿಗೆ ಅಲ್ಲಿನ ಸರಕಾರ ನೀಡುತ್ತಿರುವ ಹಿಂಸೆ, ಕಾಟ ನಿಲ್ಲಿಸಬೇಕೆಂಬ ಎಚ್ಚರಿಕೆಯ ಗಂಟೆಯಾಗಿದೆ.

ಬಾಂಗ್ಲಾಕ್ಕೆ ಪಾಕಿಸ್ಥಾನದಿಂದ ಮುಕ್ತಿ ತಂದು ಕೊಟ್ಟದ್ದು ಭಾರತ ಸರಕಾರ ಹಾಗೂ ಭಾರತೀಯ ಸೇನೆ ಎಂಬುದನ್ನು ಮರೆತಿರುವ ಬಾಂಗ್ಲಾದ ನಾಯಕರ ಪ್ರಜ್ಞೆಯನ್ನು ಕಲಕುವ ಕೆಲಸವನ್ನೂ ಈ ಕಾಯಿದೆ ಮಾಡುವ ಸಾಧ್ಯತೆಯಿದೆ. ಪಾಕಿಸ್ಥಾನ ಆಗಿನ ತನ್ನ ಬಂಗಾಲಿ ಭಾಷಿಗ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಳ್ಳುವಾಗ ಕೋಮುವಾದದ ಆಟವನ್ನು ಮೆರೆದಿತ್ತು. ಪೂರ್ವ ಪಾಕಿಸ್ಥಾನದವರೇ ಆಗಿದ್ದ ಹೆಚ್ಚಿನ ಹಿಂದೂಗಳನ್ನು ಭಾರತದತ್ತ ದೂಡುವ ಮೂಲಕ ಜನಾಂಗೀಯ ಸ್ವಚ್ಛತಾ ಆಂದೋಲನವನ್ನು ಯಶಸ್ವಿಯಾಗಿ ನಡೆಸಿತ್ತು.

– ಅರಕೆರೆ ಜಯರಾಮ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

Chamarajanagar-Covid-Hospital

ಚಾಮರಾಜನಗರ: ನಿತ್ಯ ಸೋಂಕು ಪ್ರಕರಣಗಳು ಶತಕದ ಅಂಚಿಗೆ : ಒಟ್ಟು ಪ್ರಕರಣಗಳು ಸಾವಿರದಂಚಿನಲ್ಲಿ

ತಲಕಾವೇರಿ ಗುಡ್ಡ ಕುಸಿತ ದುರಂತ: ಬಂಟ್ವಾಳ ಮೂಲದ ಅರ್ಚಕರೂ ನಾಪತ್ತೆ?

ತಲಕಾವೇರಿ ಗುಡ್ಡ ಕುಸಿತ ದುರಂತ: ಬಂಟ್ವಾಳ ಮೂಲದ ಅರ್ಚಕರೂ ನಾಪತ್ತೆ?

ATM-730

ಇನ್ನು ನಿಮ್ಮ ಕಾರ್ಡ್ ಮತ್ತು ಮೊಬೈಲ್ ಮೂಲಕ ಆಫ್ ಲೈನ್ ಪಾವತಿಗೂ ಅವಕಾಶ – ಇಲ್ಲಿದೆ ಮಾಹಿತಿ

Gold loan

ಚಿನ್ನದ ಮೌಲ್ಯದ ಶೇ. 90ರಷ್ಟು ಸಾಲ ನೀಡಲು ಆರ್‌ಬಿಐ ಅವಕಾಶ

ಆ.20ರ ಒಳಗೆ ಸಿಇಟಿ ಫಲಿತಾಂಶ ಪ್ರಕಟ : ಡಿಸಿಎಂ ಅಶ್ವತ್ಥನಾರಾಯಣ

ಆ.20ರ ಒಳಗೆ ಸಿಇಟಿ ಫಲಿತಾಂಶ ಪ್ರಕಟ : ಡಿಸಿಎಂ ಅಶ್ವತ್ಥನಾರಾಯಣ

ಹುಬ್ಬಳ್ಳಿ ಹಾಡಹಗಲೇ ಅಪರಿಚಿತರಿಂದ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ!

ಹುಬ್ಬಳ್ಳಿ ಹಾಡಹಗಲೇ ಅಪರಿಚಿತರಿಂದ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ!
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

kat-13

ಕೊರೊನಾ ವೈರಸ್‌- ಅಸ್ವಾಭಾವಿಕ ಆಹಾರ ಪದ್ಧತಿಯ ಕೊಡುಗೆ

MUST WATCH

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farmಹೊಸ ಸೇರ್ಪಡೆ

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

Chamarajanagar-Covid-Hospital

ಚಾಮರಾಜನಗರ: ನಿತ್ಯ ಸೋಂಕು ಪ್ರಕರಣಗಳು ಶತಕದ ಅಂಚಿಗೆ : ಒಟ್ಟು ಪ್ರಕರಣಗಳು ಸಾವಿರದಂಚಿನಲ್ಲಿ

ತಲಕಾವೇರಿ ಗುಡ್ಡ ಕುಸಿತ ದುರಂತ: ಬಂಟ್ವಾಳ ಮೂಲದ ಅರ್ಚಕರೂ ನಾಪತ್ತೆ?

ತಲಕಾವೇರಿ ಗುಡ್ಡ ಕುಸಿತ ದುರಂತ: ಬಂಟ್ವಾಳ ಮೂಲದ ಅರ್ಚಕರೂ ನಾಪತ್ತೆ?

I can

ಆದಿತ್ಯ ಲ್ಯಾಬ್‌ನಲ್ಲೇ ಕಾಲ ಕಳೆಯುತ್ತಿದ್ದ, ಅಲ್ಲೇ ಮಲಗುತ್ತಿದ್ದ

ATM-730

ಇನ್ನು ನಿಮ್ಮ ಕಾರ್ಡ್ ಮತ್ತು ಮೊಬೈಲ್ ಮೂಲಕ ಆಫ್ ಲೈನ್ ಪಾವತಿಗೂ ಅವಕಾಶ – ಇಲ್ಲಿದೆ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.