ಸೋಲಿನ ಭೀತಿಯವರಿಗೆ ಸುರಕ್ಷಿತ ಸ್ಪರ್ಧಾಕಣ ಕರ್ನಾಟಕ 


Team Udayavani, Mar 20, 2019, 12:30 AM IST

21.jpg

ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸೋನಿಯಾ ಗಾಂಧಿ ಜಯ ಸಾಧಿಸಿದ ನೆನಪು ಕರ್ನಾಟಕದ ಜನಮಾನಸದಲ್ಲಿ ಇನ್ನೂ ಹಸಿರಾಗಿಯೇ ಇದೆ. ಅದು ಅವರು ತನ್ನೆದುರು ಬಿಜೆಪಿ ಅಭ್ಯರ್ಥಿಯಾಗಿ ನಿಂತಿದ್ದ (ಈಗಿನ ವಿದೇಶಾಂಗ ಸಚಿವೆ) ಸುಷ್ಮಾ ಸ್ವರಾಜ್‌ ಅವರನ್ನು ಸೋಲಿಸಿ ಪಡೆದ ಗೆಲುವಾಗಿತ್ತು. 

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಬೀದರ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕರ್ನಾಟಕ ರಾಜ್ಯ ಕಾಂಗ್ರೆಸ್‌ ಘಟಕ ಮನವಿ ಮಾಡಿದೆ. ಹೀಗೆ ಅವರು ಕರ್ನಾಟಕ ರಾಜ್ಯದಿಂದ ಸ್ಪರ್ಧಿಸಿದರೆ ಅದು ಇಡೀ ದಕ್ಷಿಣ ಭಾರತದ ಕಾಂಗ್ರೆಸ್‌ ಕಾರ್ಯಕರ್ತರ ನೈತಿಕ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎನ್ನುವುದು ಕೆಪಿಸಿಸಿಯ ಲೆಕ್ಕಾಚಾರ. ಈ ಸಲಹೆಯ ಹಿಂದೆ ಇನ್ನೂ ಕೆಲವು ಕಾರಣಗಳಿವೆ. 

ಮೊದಲನೆಯ ಕಾರಣ, ರಾಹುಲ್‌ ಓರ್ವ ರಾಷ್ಟ್ರೀಯ ನಾಯಕರು; ಅವರು ದೇಶದ ಯಾವುದೇ ಭಾಗದಿಂದ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎನ್ನುವುದನ್ನು ಈ ಮೂಲಕ ತೋರಿಸಿಕೊಡಬೇಕೆನ್ನುವುದು. ಎರಡನೆಯ ಕಾರಣ, ಕರ್ನಾಟಕದ ಜನತೆ ನೆಹರೂ – ಇಂದಿರಾ ಗಾಂಧಿ ಕುಟುಂಬಕ್ಕೆ ಹಿಂದಿನಿಂದಲೂ ನಿಷ್ಠರು; ಅವರು ಈ ಹಿಂದೆ ಇಂದಿರಾ ಅವರನ್ನು ಆಮೇಲೆ ಸೋನಿಯಾ ಗಾಂಧಿಯವರನ್ನು ಗೆಲ್ಲಿಸಿದ್ದಾರೆ. ಮತ್ತೆ ಈಗ ರಾಹುಲ್‌ ಅವರನ್ನು ಕೂಡ ಗೆಲ್ಲಿಸುತ್ತಾರೆಂಬ ಸಂದೇಶವನ್ನು ಸಾರಬೇಕೆನ್ನುವುದು. ಮೂರನೆಯದಾಗಿ ಅಧಿಕಾರದೊಂದಿಗಿನ ಸಂಬಂಧವನ್ನು ಭದ್ರಪಡಿಸಿಕೊಳ್ಳುವಲ್ಲಿ ಕರ್ನಾಟಕದ ಮಂದಿ ಸಿದ್ಧಹಸ್ತರೆಂಬುದನ್ನು; ಇದೀಗ ಜೆಡಿಎಸ್‌ನೊಂದಿಗೆ ಅಧಿಕಾರ ಹಂಚಿಕೊಂಡಿದ್ದರೂ ಅವರೇ ಈಗ ಅಧಿಕಾರಾರೂಢರು ಎಂಬುದನ್ನು ಈ ಮೂಲಕ ತೋರಿಸಿಕೊಡುವುದು. ನಾಲ್ಕನೆಯದಾಗಿ, ಪ್ರಧಾನಿ ನರೇಂದ್ರ ಮೋದಿ 2014ರ ಲೋಕಸಭಾ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರಗಳಿಂದ (ಉತ್ತರಪ್ರದೇಶದ ವಾರಾಣಸಿ ಹಾಗೂ ಗುಜರಾತಿನ ವಡೋದರಾದಿಂದ) ಸ್ಪರ್ಧಿಸಿ ಗೆದ್ದಿದ್ದರೆ, ರಾಹುಲ್‌ ಗಾಂಧಿಯವರು ಮೋದಿ ಅವರಿಗಿಂತಲೂ ಹೆಚ್ಚು ಜನಪ್ರಿಯರು ಎಂಬುದನ್ನು ಸಾಬೀತು ಪಡಿಸಲು ಈ ಮೂಲಕ ಸಾಧ್ಯ ಎನ್ನುವುದು.  ಮೋದಿಯವರು ಅಂದು ವಾರಾಣಸಿ ಕ್ಷೇತ್ರವನ್ನು ಉಳಿಸಿಕೊಂಡು ವಡೋದರಾ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ರಾಜಕಾರಣಿಯೊಬ್ಬ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇ ಆದರೆ, ಆತ ಜನರ ಮೇಲಿನ ತನ್ನ ಹಿಡಿತ ಹೇಗಿದೆ ನೋಡಿ ಎಂದು ಹೇಳುತ್ತ ತಿರುಗುವ ಸಾಧ್ಯತೆಯಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಯೇ ಇಲ್ಲ. ತನ್ನ ತವರು ಕ್ಷೇತ್ರದಿಂದ ಹೊರಗಡೆ ಕೂಡ ಸ್ಪರ್ಧಿಸಿ ಗೆಲ್ಲಬಲ್ಲೆ ನೋಡಿರಿ ಎಂದು ಆತ ತನ್ನ ಅಭಿಮಾನಿಗಳಲ್ಲಿ ಧಾರಾಳವಾಗಿ ಹೇಳಿಕೊಳ್ಳಬಹುದು. ಆದರೂ ಚುನಾವಣೆಗಳಲ್ಲಿ ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸುವುದನ್ನು ಬಲವಾಗಿ ವಿರೋಧಿಸುವವರಿದ್ದಾರೆ. ಅದೂ ಅಲ್ಲದೆ ಉಮೇದ್ವಾರ ಅಭ್ಯರ್ಥಿಯೊಬ್ಬ/ಳು ಸ್ಪರ್ಧಿಸಬಹುದಾದ ಕ್ಷೇತ್ರಗಳ ಸಂಖ್ಯೆಯನ್ನು 1951ರ ಜನಪ್ರತಿನಿಧಿ ಕಾಯ್ದೆ ಕೇವಲ ಎರಡಕ್ಕಷ್ಟೆ ಸೀಮಿತಗೊಳಿಸಿದೆ. ಅಭ್ಯರ್ಥಿ ಎರಡೂ ಕಡೆಗಳಲ್ಲಿ ಗೆದ್ದರೆ, ಒಂದನ್ನು ರಾಜೀನಾಮೆ ಮೂಲಕ ತೆರವುಗೊಳಿಸಬೇಕಾಗುತ್ತದೆ. ಪರಿಣಾಮವಾಗಿ, ಆತ / ಆಕೆ ತೆರವುಗೊಳಿಸಿದ ಸ್ಥಾನಕ್ಕೆ ಉಪಚುನಾವಣೆ ನಡೆಯಬೇಕಾಗುತ್ತದೆ. ಹೀಗೆ ಚುನಾಯಿತ ಅಭ್ಯರ್ಥಿಯ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಸುವುದೆಂದರೆ ಈದು ಸಾರ್ವಜನಿಕ ಹಣದ ಪೋಲಲ್ಲದೆ ಮತ್ತೇನೂ ಅಲ್ಲ ಎಂಬ ಅಭಿಪ್ರಾಯ ಇಂದು ವ್ಯಾಪಕವಾಗಿ ಪ್ರಕಟಗೊಳ್ಳುತ್ತಿದೆ. 

ರಾಜಕಾರಣಿಗಳು ಒಂದಕ್ಕಿಂತ ಹೆಚ್ಚು ಕ್ಷೇತ್ರದಿಂದ ಸ್ಪರ್ಧಿಸಲು ಇರುವ ಇನ್ನೊಂದು ಕಾರಣವೆಂದರೆ ತಮ್ಮ ತವರು ಕ್ಷೇತ್ರದಿಂದ ಆಯ್ಕೆಯಾಗುವ ಭರವಸೆಯನ್ನು ಅವರು ಕಳೆದುಕೊಂಡಿರುವುದು. ಎರಡರಲ್ಲಿ ಒಂದು ಕಡೆ ಸೋತರೆ ಇನ್ನೊಂದರಲ್ಲಿ ಗೆಲುವು; ಅರ್ಥಾತ್‌ ಇದು ಇನ್ಶೂರೆನ್ಸ್‌ ಪಾಲಿಸಿ ತೆಗೆದುಕೊಂಡ ಹಾಗೆ. ಆದರೆ ಈ ಪಾಲಿಸಿಗೆ ಪ್ರೀಮಿಯಂ ಕಟ್ಟುವವರು ಯಾರು? ಈ ದೇಶದ ಜನರು. ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪ್ರಯತ್ನಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಒಂದು ಸರಿಯಾದ ನಿಲುವನ್ನೇ ತೆಗೆದುಕೊಂಡಿದೆ. ಈ ಕ್ರಮ ಸರಿಯಲ್ಲ; ಇದಕ್ಕೆ ತನ್ನ ವಿರೋಧವಿದೆ ಎಂಬ ತನ್ನ ನಿಲುವನ್ನು ಅದು 2018ರ ಏಪ್ರಿಲ್‌ನಲ್ಲಿ ಸರ್ವೋಚ್ಚ ನ್ಯಾಯಾಲಯದೆದುರು ಪುನರುಚ್ಚರಿಸಿದೆ. ಭಾರತದ ಕಾನೂನು ಆಯೋಗ ಕೂಡ ಇದೇ ನಿಲುವನ್ನು ಪ್ರಕಟಿಸಿದೆ. ಒಂದು ಕ್ಷೇತ್ರವನ್ನು ಇರಿಸಿಕೊಂಡು ಇನ್ನೊಂದಕ್ಕೆ ರಾಜೀನಾಮೆ ನೀಡುವ ಅಭ್ಯರ್ಥಿಗೆ ದಂಡ ಹಾಕಬೇಕು; ಹೀಗೆ ದಂಡ ಹಾಕಲು ಅವಕಾಶ ನೀಡುವಂಥ ಕಾಯ್ದೆಯನ್ನು ಜಾರಿಗೆ ತರಬೇಕು ಎಂಬಂಥ ಸಲಹೆಯೂ ಕೇಳಿಬಂದಿದೆ. ಆತ/ಆಕೆ ಉಪಚುನಾವಣೆಗೆ ತಗಲುವ ವೆಚ್ಚದ ಮೊತ್ತವನ್ನು ಸರಕಾರದ ಖಾತೆಗೆ ಮೊದಲೇ ಜಮಾ ಮಾಡಬೇಕೆಂಬ ನಿಯಮ ಜಾರಿಗೆ ಬರಬೇಕು; ಜಮಾ ಮಾಡಬೇಕಾದ ಮೊತ್ತ 10 ಲಕ್ಷ ರೂ.ಗಳಾಗಿರಬೇಕು. ಎಂಬ ಸಲಹೆಯೂ ಬಂದಿದೆ. 

ಹೀಗೆ ಎರಡೆರಡು ಕಡೆಗಳಲ್ಲಿ ಸ್ಪರ್ಧಿಸುವ ಖಯಾಲಿಗೆ ಸಂಬಂಧಿಸಿದಂತೆ ನೆಹರೂ – ಇಂದಿರಾ ಗಾಂಧಿ ಕುಟುಂಬ ಚರಿತ್ರೆಯನ್ನೇ ನಿರ್ಮಿಸಿದೆ. ಚುನಾವಣೆಯಲ್ಲಿ ಸೋಲುವ ಸಾಧ್ಯತೆ ಇದರ ಹಿಂದಿರುವ ಬಲವಾದ ಕಾರಣಗಳಲ್ಲೊಂದು. 1977ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತ ಬಳಿಕ ಇಂದಿರಾ ಅಕ್ಷರಶಃ ಕಂಗೆಟ್ಟು ಹೋಗಿದ್ದರು. ಜನತಾಪಕ್ಷ ಅವರ ಕೈಯಲ್ಲಿದ್ದ ಅಧಿಕಾರವನ್ನು ಬಲವಂತವಾಗಿ ಕಿತ್ತುಕೊಂಡಂತಾಗಿತ್ತು. ದಕ್ಷಿಣ ಭಾರತ ಜನತಾಪಕ್ಷದ ಗಾಳಿಯಿಂದ ತಪ್ಪಿಸಿಕೊಂಡಿದ್ದು, ಕಾಂಗ್ರೆಸ್‌ಗೆ ತನ್ನ ಪರಂಪರಾಗತ ನಿಷ್ಠೆಯನ್ನು ದೃಢೀಕೃತಗೊಳಿಸಿದ್ದರ ಹಿನ್ನೆಲೆಯಲ್ಲಿ ಆಕೆ ದಕ್ಷಿಣದ ಯಾವುದಾದರೂ ಸುರಕ್ಷಿತ ಕ್ಷೇತ್ರದಿಂದ ಆಯ್ಕೆಯಾಗಿ ಸಂಸತ್ತಿಗೆ ಹಿಂದಿರುಗಬೇಕೆಂದು ಬಯಸಿದರು. ಆಕೆಯ ತುರ್ತು ಪರಿಸ್ಥಿತಿಯ ದಿನಗಳ ಆಡಳಿತ ವೈಖರಿಯ ನೆನಪಿದ್ದ ಉತ್ತರ ಭಾರತದ ರಾಜ್ಯಗಳು ಆಕೆಯನ್ನು ಹಾಗೂ ಆಕೆಯ ಪಕ್ಷವನ್ನು ಸೋಲಿಸುವ ಮೂಲಕ ಶಿಕ್ಷಿಸಿದ್ದರೆ, ದಕ್ಷಿಣ ಭಾರತದ ರಾಜ್ಯಗಳು ತುರ್ತು ಸ್ಥಿತಿಯ ಅತಿರೇಕಗಳನ್ನು ಅಷ್ಟೇನೂ ಮನಸ್ಸಿಗೆ ಹಚ್ಚಿಕೊಂಡಂತಿರಲಿಲ್ಲ. ಇಂದಿರಾ ಗೆದ್ದು ಬರಲು ಅನುಕೂಲ ಮಾಡಿಕೊಡುವ ಸಲುವಾಗಿ ಕಾಂಗ್ರೆಸ್‌ನ ಡಿ.ಬಿ. ಚಂದ್ರೇಗೌಡ ಅವರು ತಮ್ಮ ಚಿಕ್ಕಮಗಳೂರಿನ ಸದಸ್ಯಸ್ಥಾನಕ್ಕೆ ರಾಜೀನಾಮೆ ನೀಡಿದರು. 1978ರ ಸೆಪ್ಟೆಂಬರ್‌ನಲ್ಲಿ ನಡೆಸಲಾದ ಉಪಚುನಾವಣೆಯಲ್ಲಿ ಇಂದಿರಾ ತಮ್ಮ ಪ್ರತಿಸ್ಪರ್ಧಿ, ಜನತಾ ಅಭ್ಯರ್ಥಿ ವೀರೇಂದ್ರ ಪಾಟೇಲರನ್ನು ಪರಾಭವಗೊಳಿಸಿದರು. ಆದರೂ ಜನತಾಪಕ್ಷದ ಸದಸ್ಯರೇ ಬಹುಸಂಖ್ಯೆಯಲ್ಲಿದ್ದ ಲೋಕಸಭೆ 1978ರ ಡಿಸೆಂಬರ್‌ನಲ್ಲಿ ಹಕ್ಕುಚ್ಯುತಿಯ ಅಪರಾಧ ಹಾಗೂ ಹಿಂದಿನ ಸದನದ ಶಿಷ್ಟಾಚಾರವನ್ನು ಭಂಗಿಸಿದ ಕಾರಣಕ್ಕಾಗಿ ಆಕೆಯನ್ನು ಸದನದಿಂದ ಹೊರ ಹಾಕಿತು. 1980ರಲ್ಲಿ ಆಕೆ ಅಧಿಕಾರಕ್ಕೆ ಮರಳಿದಾಗ ಆಕೆಯ ಬಹಿಷ್ಕಾರದ ನಿರ್ಣಯವನ್ನು ಸದನ ನಿರಸನಗೊಳಿಸಿತು, ಆ ಮಾತು ಬೇರೆ. 

ಮತ್ತೂಮ್ಮೆ ಪ್ರಧಾನಿಯಾದ ಬಳಿಕ ಇಂದಿರಾಗಾಂಧಿ ಆಂಧ್ರದ ಮೇಡಕ್‌ ಕ್ಷೇತ್ರದಿಂದ ಆಯ್ಕೆ ಬಯಸಿದರು. ಆಯ್ಕೆಯೂ ಆದರು. 1984ರ ಅಕ್ಟೋಬರ್‌ 31ರಂದು ಹತ್ಯೆಗೀಡಾದಾಗ ಆಕೆ ಮೇಡಕ್‌ ಲೋಕಸಭಾ ಕೇತ್ರದ ಸದಸ್ಯೆಯಾಗಿದ್ದರು. 1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸೋನಿಯಾ ಗಾಂಧಿ ಜಯ ಸಾಧಿಸಿದ ನೆನಪು ಕರ್ನಾಟಕದ ಜನಮಾನಸದಲ್ಲಿ ಇನ್ನೂ ಹಸಿರಾಗಿಯೇ ಇದೆ. ಅದು ಅವರು ತನ್ನೆದುರು ಬಿಜೆಪಿ ಅಭ್ಯರ್ಥಿಯಾಗಿ ನಿಂತಿದ್ದ (ಈಗಿನ ವಿದೇಶಾಂಗ ಸಚಿವೆ) ಸುಷ್ಮಾ ಸ್ವರಾಜ್‌ ಅವರನ್ನು ಸೋಲಿಸಿ ಪಡೆದ ಗೆಲುವಾಗಿತ್ತು. ಅಂದು ಸೋನಿಯಾ ಉತ್ತರ ಪ್ರದೇಶದ ಅಮೇಠಿಯಿಂದಲೂ ಸ್ಪರ್ಧಿಸಿದ್ದರು; ಅಲ್ಲಿ ಗೆಲುವು ಸಿಕ್ಕಿದ್ದರಿಂದ, ಕರ್ನಾಟಕದ ಮತದಾರರನ್ನು ನಿರಾಶೆಯಲ್ಲಿ ಕೆಡಹುವ ರೀತಿಯಲ್ಲಿ ಆಕೆ ಬಳ್ಳಾರಿ ಸ್ಥಾನಕ್ಕೆ ರಾಜೀನಾಮೆ ಎಸೆದು ಅಮೇಠಿಯನ್ನು ಅಪ್ಪಿಕೊಂಡರು. ಆದರೆ ಸುಷ್ಮಾ ಸ್ವರಾಜ್‌ ಆಮೇಲೂ ಕೆಲ ವರ್ಷಗಳವರೆಗೆ ಬಳ್ಳಾರಿಯೊಂದಿಗಿನ ಸಾಮಾಜಿಕ ಸಂಪರ್ಕವನ್ನು ಉಳಿಸಿಕೊಂಡಿದ್ದರು. ಸುಷ್ಮಾ ಅವರು ತಮ್ಮ ಆಶೀರ್ವಾದಕ್ಕೆ ತಕ್ಕವರಲ್ಲದಿದ್ದ ಬಿಜೆಪಿ ಮಂದಿಗೆ ಆಶೀರ್ವಾದ ಮಾಡುವ ಮೂಲಕ ಅವರಿಗೆ ಅಲ್ಪಕಾಲದ “ರಾಜಕೀಯ ಗೌರವ’ ದೊರಕಿಸಿಕೊಟ್ಟರೆಂಬುದೇನೋ ನಿಜವೇ. ಈ ಬಾರಿ ರಾಹುಲ್‌ ಗಾಂಧಿಯವರು ಅದೇ ಅಮೇಠಿ ಸ್ಥಾನಕ್ಕಾಗಿ ಸ್ಪರ್ಧಿಸಲು ಈಗಾಗಲೇ ನಿರ್ಧರಿಸಿದ್ದಾರಾದರೂ, ಕರ್ನಾಟಕದಿಂದ ಸ್ಪರ್ಧಿಸುವಂತೆ ಅವರನ್ನು ಆಹ್ವಾನಿಸಲಾಗಿದೆ. ರಾಯ್‌ಬರೇಲಿ, ಅಮೇಠಿ ಹಾಗೂ ಭೂತಪೂರ್ವ ಫ‌ೂಲ್‌ಫ‌ುರ್‌ (ಎಲ್ಲವೂ ಉತ್ತರ ಪ್ರದೇಶದ ಕ್ಷೇತ್ರಗಳು) – ಇವು ಮೂರೂ ನೆಹರೂ ವಂಶದ ನಿಯಂತ್ರಣದಲ್ಲಿರುವ ಕ್ಷೇತ್ರಗಳು. 

ಬಹು ಹಿಂದಿನಿಂದಲೂ ಕರ್ನಾಟಕ, ಉತ್ತರದ ಪರಾಜಿತ ರಾಜಕಾರಣಿಗಳ ಪಾಲಿಗೆ ಸುರಕ್ಷಿತ ಗೆಲುವು ತಂದುಕೊಡುವ ಸ್ಪರ್ಧಾಕಣವಾಗಿ ಉಪಕರಿಸುತ್ತ ಬಂದಿದೆ. 1962ರಲ್ಲಿ ಉತ್ತರ ಪ್ರದೇಶ ಮೂಲದ ಮಾಜಿ ಕೇಂದ್ರ ಸಚಿವ ಅಜಿತ್‌ ಪ್ರಸಾದ್‌ ಜೈನ್‌ ಅವರು ಇಲ್ಲಿನ ತುಮಕೂರು ಲೋಕಸಭಾ ಕ್ಷೇತ್ರದಿಂದ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಇನ್ನೋರ್ವ ಮಾಜಿ ಕೇಂದ್ರ ಸಚಿವ ಎಂ.ವಿ. ಕೃಷ್ಣಪ್ಪ ಅವರು ಈ ಸ್ಥಾನವನ್ನು ಅವರಿಗಾಗಿ ತೆರವು ಗೊಳಿಸಿದ್ದರು. ಆದರೆ ಮೂರು ವರ್ಷಗಳ ಬಳಿಕ (1965) ಜೈನ್‌ ಅವರು ತುಮಕೂರಿನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸ್ಥಾನ ತನಗೆ ಇಷ್ಟವೂ ಇಲ್ಲ, ಬೇಕೂ ಇಲ್ಲ ಎಂದಿದ್ದರು. ಆಮೇಲೆ ಇನ್ನೊಂದು ಉಪಚುನಾವಣೆ ನಡೆಯಿತು; ಅದರಲ್ಲಿ ಕಾಂಗ್ರೆಸ್‌ನ ಮಾಲಿ ಮರಿಯಪ್ಪ ಆಯ್ಕೆಯಾದರು. ಮಧುಗಿರಿ (ಈಗಿನ ಚಿಕ್ಕಬಳ್ಳಾಪುರ) ಕ್ಷೇತ್ರದಿಂದ 1967ರಲ್ಲಿ ಆಯ್ಕೆಯಾದ ಮಾಲಿ ಮರಿಯಪ್ಪ ನಿಧನ ಹೊಂದಿದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಸುಧಾ ವಿ. ರೆಡ್ಡಿ ಅನಾಯಾಸವಾಗಿ ಗೆದ್ದುಬಂದರು. ಆದರೂ 1980ರಲ್ಲಿ ನಡೆದ ಉಪಚುನಾವಣೆಯೊಂದರಲ್ಲಿ ಗೆದ್ದ ಮಾಜಿ ಕೇಂದ್ರ ಸಂಪರ್ಕ ಖಾತೆಯ ಸಚಿವ ಸಿ.ಎಂ. ಸ್ಟೀಫ‌ನ್‌, ತಾವು ನಿಧನರಾಗುವವರೆಗೂ ಆ ಸದಸ್ಯ ಸ್ಥಾನವನ್ನು ಉಳಿಸಿಕೊಂಡಿದ್ದರು. ಸ್ಟೀಫ‌ನ್‌ ಅವರು ಹೊಸದಿಲ್ಲಿ ಕ್ಷೇತ್ರದಲ್ಲಿ ಅಟಲ್‌ಬಿಹಾರಿ ವಾಜಪೇಯಿಯವರ ವಿರುದ್ಧ ಸೋತ ಬಳಿಕ ಗುಲ್ಬರ್ಗ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಅಂದು ಅವರಿಗಾಗಿ ಗುಲ್ಬರ್ಗ ಲೋಕಸಭಾ ಸದಸ್ಯ ಸ್ಥಾನವನ್ನು ತೆರೆವುಗೊಳಿಸಿದ್ದವರು ಮಾಜಿ ಸಿಎಂ ಧರ್ಮಸಿಂಗ್‌. 

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.