ಕಾಶ್ಮೀರದ ಭಯೋತ್ಪಾದಕರೂ ಅವರ ಸಹಾನುಭೂತಿ ಸಾಥಿಗಳೂ


Team Udayavani, Feb 20, 2019, 12:30 AM IST

14.jpg

ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಲಾಗದೆಯೇ ಮೋದಿ ಸರಕಾರ ತನ್ನ ಐದು ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸುತ್ತಿದೆ ಎನ್ನುವುದು ನಿಜಕ್ಕೂ ವಿಷಾದನೀಯ. ಸಂವಿಧಾನದ 35ನೆಯ ಹಾಗೂ 370ನೆಯ ವಿಧಿಗಳ ರದ್ಧತಿಗೆ ಸಂಬಂಧಿಸಿದಂತೆ ಈ ಸರಕಾರದಿಂದ ಇನ್ನೂ ಬಹಳಷ್ಟನ್ನು ನಿರೀಕ್ಷಿಸಲಾಗಿತ್ತು. ಇಂಥ ಧೈರ್ಯದ ನಿರ್ಧಾರವನ್ನು ತೆಗೆದುಕೊಳ್ಳಲು ಮೋದಿಯವರಿಗಲ್ಲದೆ ಇನ್ನು ಯಾರಿಗೆ ಸಾಧ್ಯವಿತ್ತು? ರಾಜ್ಯಸಭೆಯಲ್ಲಿ ಅಲ್ಲದಿದ್ದರೂ ಲೋಕಸಭೆಯಲ್ಲಿ ಅವರ ಪಕ್ಷಕ್ಕೆ ಅನುಕೂಲಕರ ಬಹುಮತವಿತ್ತು.

ಧಾರವಾಡದ ಬಿಜೆಪಿ ಸಂಸದ ಪ್ರಹ್ಲಾದ ಜೋಶಿ ಇಂಥದೊಂದು ಹೇಳಿಕೆಯನ್ನು ನೀಡಿದ್ದು ತಪ್ಪು ಎಂದು ಅವರ ಮೇಲೆ ಗೂಬೆ ಕೂರಿಸುವಂತಿಲ್ಲ. ಅಂದ ಹಾಗೆ, ಅವರು ಹೇಳಿದ್ದು  -“”ದಕ್ಷಿಣ ಕಾಶ್ಮೀರದ ಪ್ರತಿ ಮನೆಯಲ್ಲೂ ಒಬ್ಬ ಭಯೋತ್ಪಾದಕನಿದ್ದಾನೆ ಅಥವಾ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದ ವ್ಯಕ್ತಿ ಇದ್ದಾನೆ!” ಅವರು ಈ ಹೇಳಿಕೆಯನ್ನು ನೀಡಿದ್ದು ಆತ್ಮಹತ್ಯಾ ಬಾಂಬರ್‌ ಒಬ್ಬನ ದಾಳಿಗೆ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್)ಯ ಸಿಬ್ಬಂದಿ ದೊಡ್ಡ ಸಂಖ್ಯೆಯಲ್ಲಿ ಬಲಿಯಾದ ಭೀಕರ ಘಟನೆಯ ಹಿನ್ನೆಲೆಯಲ್ಲಿ. 

ಯಾವ ಸತ್ಯವನ್ನು ಹೇಳಲು ನರೇಂದ್ರ ಮೋದಿ ಸರಕಾರದ ಸಚಿವರು ಕೂಡ ಹಿಂದೆ ಮುಂದೆ ನೋಡಿದ್ದಾರೋ ಅಂಥ ಸತ್ಯವನ್ನು ಪ್ರಹ್ಲಾದ ಜೋಶಿ ಹೇಳಿದ್ದಾರೆ. ಕೆಲ ವರ್ಷಗಳಿಂದೀಚೆಗಿನ ಅವಧಿಯಲ್ಲಿ ಕಾಶ್ಮೀರ ಕಣಿವೆಯಲ್ಲಿನ ಮುಸ್ಲಿಮರ ಪೈಕಿ ಬಹುತೇಕರು ಪಾಕ್‌ ನಿರ್ದೇಶಿತ ವಿಧ್ವಂಸಕ ಘಟನೆಗಳನ್ನು ಬಹಿರಂಗವಾಗಿ ಬೆಂಬಲಿಸುತ್ತ ಬಂದಿದ್ದಾರೆ, ಇಡೀ ರಾಜ್ಯ ಪಾಕಿಸ್ತಾನದೊಂದಿಗೆ ಸೇರ್ಪಡೆಗೊಳ್ಳಬೇಕೆಂಬ ನಿಲುವಿಗೆ ಬೆಂಬಲ ನೀಡುತ್ತ ಬಂದಿದ್ದಾರೆ ಅಥವಾ ತಮ್ಮ ಯುವಕರು ಉಗ್ರಗಾಮಿಗಳಾಗಲು ಅವಕಾಶ ನೀಡುತ್ತಾ ಬಂದಿದ್ದಾರೆ. ಈ ಅಂಕಣದಲ್ಲಿ ಪದೇ ಪದೇ ಹೇಳಲಾಗಿರುವಂತೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಸಮಸ್ಯೆ ಇಡೀ ರಾಜ್ಯವನ್ನೇನೂ ಬಾಧಿಸುತ್ತಿಲ್ಲ. ಅದು ಮುಸ್ಲಿಮರ ಬಾಹುಳ್ಯವಿರುವ ಕಾಶ್ಮೀರ ಕಣಿವೆ ಪ್ರದೇಶಕ್ಕಷ್ಟೆ ಸೀಮಿತವಾಗಿದೆ. ಜಮ್ಮು ಪ್ರದೇಶ ಹಾಗೂ ಲಡಾಖ್‌ನಲ್ಲಿ ನೆಲೆಸಿರುವ ಜನರಿಗೆ ಭಾರತದ ಅಂಗವಾಗಿರುವುದೇ ಇಷ್ಟ. ಇನ್ನು ಕಾಶ್ಮೀರ ಕಣಿವೆಯಲ್ಲಿರುವ ಮುಸ್ಲಿಮರ ಪೈಕಿ ಶಿಯಾ ಮುಸ್ಲಿಮರಿಗೆ ಕೂಡ ಭಾರತದೊಂದಿಗಿನ ಸಂಬಂಧದಲ್ಲಿ ಯಾವುದೇ ಸಮಸ್ಯೆ ಕಂಡು ಬರುತ್ತಿಲ್ಲ. ಸಮಸ್ಯೆಯೇನಿದ್ದರೂ ಕಣಿವೆಯಲ್ಲಿನ ಸುನ್ನಿ ಮುಸ್ಲಿಮರದು; ಅವರ ಬೆಂಬಲ ಪಾಕಿಸ್ತಾನಕ್ಕಷ್ಟೆ. ಕಾಶ್ಮೀರದ ರಾಜಕೀಯ ನಾಯಕರು (ಇವರಲ್ಲಿ ಮಾಜಿ ಮುಖ್ಯಮಂತ್ರಿಗಳಿದ್ದಾರೆ, ಕೇಂದ್ರ ಸಚಿವರುಗಳಿದ್ದಾರೆ) ಬಹಿರಂಗವಾಗಿ ಹೇಳಿಕೊಳ್ಳದ ಒಂದು ಸತ್ಯವಿದೆ, ಅದೆಂದರೆ ಅವರ ಪಾಕಿಸ್ತಾನಪರ ನಿಲುವು. 

ಇದು ಎಲ್ಲರಿಗೂ ಗೊತ್ತಿರುವ ನಗ್ನಸತ್ಯ. “ಕಾಶ್ಮೀರಿಯತ್‌’ ಕುರಿತೇ ಆಗಲಿ, ಅಥವಾ ಸ್ವತಂತ್ರ ಕಾಶ್ಮೀರದ ಕುರಿತೇ ಆಗಲಿ, ರಾಜ್ಯದ ಜನತೆಗೆ ಸ್ವ-ನಿರ್ಣಾಯಕ ರಾಜಕೀಯ ಅಧಿಕಾರ ದೊರೆಯಬೇಕೆನ್ನುವ ಕುರಿತೇ ಆಗಲಿ ಇಂಥ ನಾಯಕರು ಪದೇ ಪದೇ ಆಡುವ ಮಾತುಗಳನ್ನು ನಂಬುವುದೇ ಕಷ್ಟ ಎಂಬಂತಾಗಿದೆ. ನೆನಪಿಡಬೇಕಾದ ಸತ್ಯ ಸಂಗತಿಯೊಂದಿದೆ. ಈಗಿರುವ ನ್ಯಾಶನಲ್‌ ಕಾನ್ಫರೆನ್ಸ್‌ ಹಾಗೂ ಪೀಪಲ್ಸ್‌ ಡೆಮಾಕ್ರಟಿಕ್‌ ಫ್ರಂಟ್‌ (ಪಿಡಿಪಿ) ಪಕ್ಷಗಳೆರಡೂ ಭೂತಪೂರ್ವ ಪಕ್ಷವಾದ “ಪ್ಲೆಬಿಸೈಟ್‌ ಫ್ರಂಟ್‌’ನ ಪುನರವತಾರಗಳೇ. ಈ ಪ್ಲೆಬಿಸೈಟ್‌ ಫ್ರಂಟ್‌ ಜಮ್ಮು – ಕಾಶ್ಮೀರವನ್ನು ಪಾಕ್‌ನೊಂದಿಗೆ ಸೇರ್ಪಡೆಗೊಳಿಸಬೇಕೆಂಬ ಪ್ರಸ್ತಾವದ ಪರವಾಗಿ ರಾಜ್ಯದ ಜನರು ಮತಹಾಕಬೇಕೆಂದು ಬಯಸಿತ್ತು. ಹೀಗಾಗಿ ಈ ಎರಡೂ ಪಕ್ಷಗಳಲ್ಲಿರುವವರು ಪಾಕಿಸ್ತಾನದಿಂದ ಹರಿದು ಬರುವ ಹಣ ಹಾಗೂ (ಮೊನ್ನೆ ಭಾನುವಾರದ ತನಕ) ನಮ್ಮ ಸರಕಾರ ನೀಡುತ್ತ ಬಂದಿರುವ ಭದ್ರತೆ, ಈ ಎರಡನ್ನೂ ಬಳಸಿಕೊಂಡು ಐಷಾರಾಮೀ ಜೀವನ ನಡೆಸುತ್ತಿರುವ ಪ್ರತ್ಯೇಕತಾವಾದಿ ನಾಯಕರಿಗಿಂತ ಯಾವ ರೀತಿಯಲ್ಲೂ ಭಿನ್ನರಲ್ಲ.

ಕಾಶ್ಮೀರ ಪ್ರತ್ಯೇಕ ಸ್ವತಂತ್ರ (ಸ್ವಾಯತ್ತ) ರಾಜ್ಯವಾಯಿತು ಎನ್ನೋಣ, ಆಗ ಅಲ್ಲಿರುವ ಹಿಂದೂಗಳ ಹಾಗೂ ಬೌದ್ಧಮತೀಯರ ಅವಸ್ಥೆಯೇನು? ಪಾಕಿಸ್ಥಾನ ಹಾಗೂ ಬಾಂಗ್ಲಾ ದೇಶದಲ್ಲಿ ಹಿಂದೂಗಳಿಗೆ ಆದ ಗತಿಯೇ ಇವರದೂ ಆದೀತು. ರಾಷ್ಟ್ರ ವಿಭಜನೆಯ ದಿನಗಳ ಬಗ್ಗೆ ಯೋಚಿಸುವಷ್ಟು ದೂರ ಯಾಕೆ ಹೋಗಬೇಕು? ಜಾತ್ಯತೀತ ತಣ್ತೀವನ್ನು ಪಾಲಿಸುತ್ತಿರುವ ಭಾರತದಲ್ಲೇ ಏನಾಯಿತು ನೋಡಿ. ಅಸಹಿಷ್ಣುಗಳಾದ ಮುಸ್ಲಿಮರು ಜನಾಂಗೀಯ ದ್ವೇಷದಿಂದ ಜಮ್ಮು – ಕಾಶ್ಮೀರದ ಪಂಡಿತರನ್ನು ರಾಜ್ಯದ ಹೊರಗಟ್ಟಿದ್ದು ಈಗ ಇತಿಹಾಸ. ರಾಜ್ಯದಲ್ಲಿ ಇತ್ತೀಚೆಗೆ ಕೆಲಕಾಲ ಆಡಳಿತ ನಡೆಸಿದ ಪಿಡಿಪಿ – ಬಿಜೆಪಿ ಮೈತ್ರಿ ಸರಕಾರಕ್ಕೆ ಕೂಡ ಕಾಶ್ಮೀರ ಮೂಲದ ಪಂಡಿತ ಸಮುದಾಯವನ್ನು ರಾಜ್ಯದೊಳಕ್ಕೆ ಮರಳಿ ಕರೆತರಲು ಸಾಧ್ಯವಾಗದೆ ಹೋಯಿತು. 

ಮೋದಿ “ಅಸಹಾಯಕತೆ’- ಇಲ್ಲಿದೆ ಕಾರಣ
ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಲಾಗದೆಯೇ ಮೋದಿ ಸರಕಾರ ತನ್ನ ಐದು ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸುತ್ತಿದೆ ಎನ್ನುವುದು ನಿಜಕ್ಕೂ ವಿಷಾದನೀಯ. ಸಂವಿಧಾನದ 35ನೆಯ ಹಾಗೂ 370ನೆಯ ವಿಧಿಗಳ ರದ್ಧತಿಗೆ ಸಂಬಂಧಿಸಿದಂತೆ ಈ ಸರಕಾರದಿಂದ ಇನ್ನೂ ಬಹಳಷ್ಟನ್ನು ನಿರೀಕ್ಷಿಸಲಾಗಿತ್ತು. ಇಂಥ ಧೈರ್ಯದ ನಿರ್ಧಾರವನ್ನು ತೆಗೆದುಕೊಳ್ಳಲು ಮೋದಿಯವರಿಗಲ್ಲದೆ ಇನ್ನು ಯಾರಿಗೆ ಸಾಧ್ಯವಿತ್ತು? ರಾಜ್ಯಸಭೆಯಲ್ಲಿ ಅಲ್ಲದಿದ್ದರೂ ಲೋಕಸಭೆಯಲ್ಲಿ ಅವರ ಪಕ್ಷಕ್ಕೆ ಅನುಕೂಲಕರ ಬಹುಮತವಿತ್ತು. ಪೂರ್ವಭಾವಿ ಚುನಾವಣಾ ಸಮೀಕ್ಷೆಗಳು ಅಪಾಯಕಾರಿ ಸುಳಿವುಗಳನ್ನು ಹೊರ ಹಾಕಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಲಾರದೆಂದೂ, ಕಾಂಗ್ರೆಸ್‌ ಅಥವಾ ಯುಪಿಎ ಹಾಗೂ ಮಹಾಘಟಬಂಧನದ ಪಕ್ಷಗಳ ಮತ ಸಂಪಾದನೆಯ ಸಾಮರ್ಥ್ಯ ಬಿಜೆಪಿಯದಕ್ಕಿಂತಲೂ ಅಧಿಕವಿರುತ್ತದೆ ಎಂದು ಅವು ಭವಿಷ್ಯ ನುಡಿದಿವೆ. ಹೀಗಾಗಿ ನಾವು ಡಾ| ಮನಮೋಹನ್‌ ಸಿಂಗ್‌ರಂಥ “ಆಕಸ್ಮಿಕ’ ಪ್ರಧಾನಿಯನ್ನೋ ಅಥವಾ ಚಂದ್ರಶೇಖರ್‌, ಎಚ್‌.ಡಿ. ದೇವೇಗೌಡ ಅಥವಾ ಐ.ಕೆ. ಗುಜ್ರಾಲ್‌ರಂಥ “ಅದೃಷ್ಟಶಾಲಿ ಪ್ರಧಾನಿ’ಯನ್ನು ಅಥವಾ ಸೋನಿಯಾ ಗಾಂಧಿಯವರ ಪೋಷಕತ್ವದಲ್ಲಿ ಪಟ್ಟಕ್ಕೆ ಬರಬಹುದಾದ ರಾಹುಲ್‌ ಗಾಂಧಿ ಅಥವಾ ಪ್ರಿಯಾಂಕಾ ವಾದ್ರಾರಂಥ “ತರಬೇತಿ ಸ್ಥಿತಿಯ ಪ್ರಧಾನಿ’ಯ ಸಾಧ್ಯತೆ ಕುರಿತ ಕಹಿ ಸತ್ಯ ಎದುರಿಸಲು ಸಿದ್ಧರಾಗಬೇಕಾಗಿದೆ. 

ಮೋದಿ ಸರಕಾರ, ಪಿಡಿಪಿಯೊಂದಿಗೆ ಸರಕಾರ ರಚಿಸುವ ಸಲುವಾಗಿ ಸಂವಿಧಾನದ 370ನೆಯ ವಿಧಿ ಕುರಿತ ಪ್ರಶ್ನೆಯನ್ನು ಕೈಬಿಟ್ಟದ್ದನ್ನು ಕಂಡೆವು. ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿಯವರ ಸರಕಾರ, ಲೋಕಸಭೆಯಲ್ಲಿ ಇತರ ಪಕ್ಷಗಳ ಬೆಂಬಲ ದೊರಕಿಸಿಕೊಳ್ಳುವ ಸಲುವಾಗಿ ರಾಮಮಂದಿರ ನಿರ್ಮಾಣ ಹಾಗೂ 370ನೆಯ ವಿಧಿಯನ್ನು ಕೈಬಿಟ್ಟದ್ದನ್ನು ದೇಶ ಕಂಡಿದೆ.

ಕಳೆದ ವರ್ಷ ಜಮ್ಮು – ಕಾಶ್ಮೀರದ ಖಾಯಂ ನಿವಾಸಿಗಳನ್ನು ನಿರ್ದಿಷ್ಟವಾಗಿ ಗುರುತಿಸುವುದಕ್ಕೆ ರಾಜ್ಯ ಸರಕಾರಕ್ಕೆ ನೆರವಾಗಬಹುದಾಗಿದ್ದ 35 ಎ ವಿಧಿಯ ರದ್ದತಿ ಕೋರಿಕೆ ಅರ್ಜಿಯನ್ನು ಪಿಡಿಪಿ ನೇತೃತ್ವದ ಸರಕಾರ ಸರ್ವೋಚ್ಚ ನ್ಯಾಯಾಲಯ ವಿರೋಧಿಸಿದ್ದನ್ನು ಕಂಡು ಮೋದಿ ಸರಕಾರ ತನ್ನ ಅಸಹಾಯಕತೆ ಹಾಗೂ ಮುಜುಗರವನ್ನು ವ್ಯಕ್ತಪಡಿಸಿದ್ದನ್ನು ನೋಡಿದ್ದೇವೆ. ಬಿಜೆಪಿ ಈ ಸರಕಾರದಲ್ಲಿ ಮೈತ್ರಿ ಪಕ್ಷವಾಗಿದ್ದುದರಿಂದ ಇದನ್ನು ವಿರೋಧಿಸಲು ಅದಕ್ಕೆ ಸಾಧ್ಯವಾಗಲಿಲ್ಲ. “1954ರಲ್ಲಿ ಎಸಗಲಾಗಿದ್ದ ಈ ಸಂಬಂಧದ ಸಾಂವಿಧಾನಿಕ ಪ್ರಮಾದ’ವನ್ನು ಉನ್ನತ ನ್ಯಾಯಾಲಯ ಸರಿಪಡಿಸಬೇಕಾಗಿದೆ ಎಂಬ ನಿಲುವನ್ನು ಕೇಂದ್ರ ಸರಕಾರ ವ್ಯಕ್ತಪಡಿಸಿತು.

ಪ್ರತ್ಯೇಕ ಸ್ಥಾನಮಾನ: ಸುಪ್ರೀಂ ಹೇಳಿದ್ದೇನು?
1992ರಷ್ಟು ಹಿಂದೆಯೇ 370ನೆಯ ವಿಧಿ ರದ್ದಾಗಬೇಕು; ಜತೆಗೆ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ರೂಪಿಸಬೇಕು ಎಂಬ ಪ್ರಸ್ತಾವವನ್ನೂ ತಿರಸ್ಕರಿಸಬೇಕು ಎಂದು ರಾಜ್ಯದ ಸಮರ್ಥ ರಾಜ್ಯಪಾಲರಾಗಿದ್ದ ಜಗಮೋಹನ್‌ ತಮ್ಮ ಒಂದು ಪುಸ್ತಕದಲ್ಲಿ ಪ್ರತಿಪಾದಿಸಿದ್ದರು. ಈ ಎರಡೂ (370ನೆಯ ವಿಧಿ ಹಾಗೂ ಪ್ರತ್ಯೇಕ ಸಂವಿಧಾನ ಪ್ರಸ್ತಾವಗಳು) ಪ್ರತ್ಯೇಕತಾವಾದವನ್ನು ಹುಟ್ಟು ಹಾಕುತ್ತವೆ; ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ. ಹಾಗೂ ಕಾಶ್ಮೀರ ಈ ಹಿಂದೆ ಎಂದೂ ಭಾರತದ ಭಾಗವಾಗಿರಲೇ ಇಲ್ಲ ಎಂಬಂಥ ಭಾವನೆಗೆ ಇಂಬು ಕೊಡುತ್ತೇವೆ ಎಂದವರು ತಮ್ಮ ಈ ಕೃತಿಯಲ್ಲಿ ವಾದಿಸಿದ್ದರು. ಇಲ್ಲೇ ಇನ್ನೊಂದು ಅಂಶವನ್ನೂ ನೆನಪು ಮಾಡಿಕೊಳ್ಳಬೇಕು – ಭಾರತೀಯ ಸಂವಿಧಾನದ ವ್ಯಾಪ್ತಿಯನ್ನು ಮೀರಿ ಜಮ್ಮು – ಕಾಶ್ಮೀರಕ್ಕೆ ಸಾರ್ವಭೌಮ ಅಧಿಕಾರ ಕೊಡುವ ಮಾತೇ ಇಲ್ಲ ಎಂದು ಸುಪ್ರೀಂಕೋರ್ಟ್‌ 2016ರಲ್ಲಿ ನೀಡಿದ್ದ ತೀರ್ಪಿನಲ್ಲಿ ಘೋಷಿಸಿತ್ತು. ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನ ರೂಪಿಸುವುದೆಂದರೆ, ಅದು ಭಾರತೀಯ ಸಂವಿಧಾನಕ್ಕಿಂತ ಕೆಳಹಂತದ್ದಾಗಿರುತ್ತದೆ ಎಂದು ನ್ಯಾ | ಕುರಿಯನ್‌ ಜೋಸೆಫ್ ಹಾಗೂ ರೋಹಿಂಗ್ಟನ್‌ ನಾರಿಮನ್‌ ಇವರನ್ನೊಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿತ್ತು. 

ರಾಜ್ಯದ ಸಾರ್ವಭೌಮ ಸ್ಥಾನಮಾನವನ್ನು ಬದಲಾಯಿಸ ಕೂಡದು ಅಥವಾ ಮೊಟಕುಗೊಳಿಸಕೂಡದೆಂಬ ಜಮ್ಮು – ಕಾಶ್ಮೀರ ಹೈಕೋರ್ಟಿನ 2015ರ ತೀರ್ಪನ್ನು ಸುಪ್ರೀಂಕೋರ್ಟ್‌ ಈ ಮೂಲಕ ವಜಾಗೊಳಿಸಿತ್ತು. ವಿತ್ತೀಯ ಆಸ್ತಿಗಳ ಭದ್ರತೆ ಹಾಗೂ ಪುನರ್‌ನಿರ್ಮಾಣ ಮತ್ತು ಭದ್ರತಾ ಆಸಕ್ತಿಗಳ ಅನುಷ್ಠಾನ (ಖಅRಊಅಉಖಐ) ಕಾಯ್ದೆಯನ್ನು ರಾಜ್ಯದಲ್ಲಿ ಅಳವಡಿಸುವ ಪ್ರಸ್ತಾವಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿತ್ತು. ಬಾಕಿಯಿರುವ ಸಾಲಗಳನ್ನು ವಸೂಲಿ ಮಾಡುವ ಪ್ರಕ್ರಿಯೆಗಾಗಿ ಬ್ಯಾಂಕುಗಳು ಈ ಕಾಯ್ದೆಯನ್ನು ಬಳಸಿಕೊಳ್ಳುತ್ತಿವೆ.  ಕಾಶ್ಮೀರ ಸಮಸ್ಯೆಯನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಬಹುದೆಂಬ ಸಲಹೆ ಅನೇಕ ದಿಕ್ಕುಗಳಿಂದ ದೀರ್ಘ‌ಕಾಲದಿಂದ ಕೇಳಿಬರುತ್ತಿದೆ. ಕಳೆದ 70 ವರ್ಷಗಳಿಂದ ನಾವು ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸಿದ್ದೇವೆ; ಚರ್ಚೆ ನಡೆಸಿದ್ದೇವೆ. ಆದರೆ ಪಾಕಿಸ್ತಾನ ಜಮ್ಮು – ಕಾಶ್ಮೀರವನ್ನು ತನಗೆ ಬಿಟ್ಟು ಕೊಡಬೇಕೆಂಬ ರಾಗವನ್ನು ನಿಲ್ಲಿಸಿಲ್ಲ. ವಿಶ್ವಸಂಸ್ಥೆಯ ನಿರ್ಣಯವನ್ನು ಉಲ್ಲಂ ಸಿ ಅದು (ಪಾಕ್‌), ರಾಜ್ಯದಲ್ಲಿರುವ ನಮ್ಮ ಸರಹದ್ದಿನ ಭಾಗವನ್ನು ಚೀನಕ್ಕೆ ಉಡುಗೊರೆಯಾಗಿ ನೀಡಿದೆ. ತಿಳಿದಿರಲಿ, ರಾಷ್ಟ್ರದ ಅತ್ಯಂತ ಉತ್ತರದಲ್ಲಿರುವ ಈ ರಾಜ್ಯದ ಒಟ್ಟು 2.22 ಲಕ್ಷ ಚದರ ಅಡಿ ಭೂ ಪ್ರದೇಶದ ಪೈಕಿ 78 ಸಾವಿರ ಚದರ ಅಡಿ ಪಾಕಿಸ್ತಾನದ ಕಬಾjದಲ್ಲಿದೆ; 37,500 ಚದರ ಅಡಿ ಪ್ರದೇಶವನ್ನು ಚೀನ ಅಕ್ರಮವಾಗಿ ಆಕ್ರಮಿಸಿಕೊಂಡಿದೆ; 5,180 ಚದರ ಅಡಿ ಪ್ರದೇಶವನ್ನು ಪಾಕಿಸ್ತಾನ ಅಕ್ರಮವಾಗಿ ಚೀನಾದ ಕೈಗಿತ್ತಿದೆ. ಹೀಗಾಗಿ ಈಗ ನಮ್ಮಲ್ಲೀಗ ಉಳಿದಿರುವುದು ಕಾಶ್ಮೀರದ ಅರ್ಧಭಾಗ ಮಾತ್ರ; 1947ರ ಅಕ್ಟೋಬರ್‌ನಲ್ಲಿ ಮಹಾರಾಜ ಹರಿಸಿಂಗ್‌ ಭಾರತೀಯ ಒಕ್ಕೂಟಕ್ಕೆ ಬಿಟ್ಟುಕೊಟ್ಟಿದ್ದ ಪ್ರದೇಶ ಇದು. 

ಒಂದು ವಿವಾದಾತ್ಮಕ ಸಲಹೆ
ಕಾಶ್ಮೀರಿ ಕಣಿವೆಯಲ್ಲಿನ ಮುಸ್ಲಿಮರ ಪೈಕಿ ಕೆಲವರು ಪಾಕಿಸ್ತಾನದೊಂದಿಗೆ ಸೇರ್ಪಡೆಗೊಳ್ಳುವ ಪ್ರಸ್ತಾವವನ್ನು ಬೆಂಬಲಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಿವಾದಾತ್ಮಕ “ಪರಿಹಾರ ಸಲಹೆಗಳು’ ಇಳಿ ಧ್ವನಿಯಲ್ಲಿ ವ್ಯಕ್ತವಾಗಿರುವುದುಂಟು. ಜಾತ್ಯತೀತತೆಯ ಆರಾಧಕರು ಇಂಥದೊಂದು ವಿವಾದಾತ್ಮಕ ಚಿಂತನೆಯನ್ನು ಕಂಡು ಬೆಚ್ಚಿಬಿದ್ದಾರು. 1977ರ ಆಗಸ್ಟ್‌ನಲ್ಲಿ ಇಸ್ರೇಲಿನ ಆಗಿನ ವಿದೇಶಾಂಗ ಸಚಿವ, ಜ| ಮೋಶೆ ಡಯಾನ್‌ ಅವರು ದಿಲ್ಲಿಗೆ “ರಹಸ್ಯ ಭೇಟಿ’ ನೀಡಿದ್ದರು. ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿಯವರೊಂದಿಗೆ ಕಾಶ್ಮೀರ ಸಮಸ್ಯೆ ಕುರಿತು ಚರ್ಚಿಸುತ್ತ “ಈ ಸಮಸ್ಯೆಗೆ ಒಂದೇ ಪರಿಹಾರವೆಂದರೆ ರಾಜ್ಯದ ಜಾತೀಯ ಅಥವಾ ಜನಾಂಗೀಯ ಆಧಾರಿತ ಗುಣಲಕ್ಷಣವನ್ನು ಬದಲಾಯಿಸುವುದು’ ಎಂಬ ಸಲಹೆಯನ್ನು ನೀಡಿದ್ದರೆನ್ನಲಾಗಿದೆ. ಅರ್ಥಾತ್‌, ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂ ಪ್ರಜೆಗಳ ಬಾಹುಳ್ಯವನ್ನು ಸೃಷ್ಟಿಸಬೇಕು ಹಾಗೂ ಅಲ್ಲಿರುವ ಮುಸ್ಲಿಂ ಜನಸಂಖ್ಯಾ ಬಾಹುಳ್ಯವನ್ನು ಬಗ್ಗು ಬಡಿಯಬೇಕು ಎಂಬುದಾಗಿತ್ತು ಅವರ ಇಳಿದನಿಯ ಸಲಹೆ. ಪ್ಯಾಲೆಸ್ತೀನಿನ ಇಸ್ರೇಲಿ ಆಕ್ರಮಿತ ಪ್ರದೇಶಗಳಲ್ಲಿ ಇಸ್ರೇಲಿಗಳು ಮಾಡಿದ್ದು ಇದನ್ನೇ. ಅಷ್ಟೇಕೆ, ಚೀನಾ ಕೂಡ ಅಲ್ಲಿನ ಸಿನ್‌ಕಿಯಾಂಗ್‌ ಪ್ರಾಂತ್ಯದಲ್ಲಿದ್ದ ಮುಸ್ಲಿಂ ಬಾಹುಳ್ಯವಿರುವ ಜಾಗಗಳಲ್ಲೆಲ್ಲ ಅವರ ಜನಸಂಖ್ಯೆಯನ್ನು ಇಳಿಮುಖಗೊಳಿಸಿದೆ. ಅವು ಪಾಕಿಸ್ತಾನಕ್ಕೆ ಬೆಂಬಲ ಹಾಗೂ ಆಸರೆಯ ಭರವಸೆ ವ್ಯಕ್ತಪಡಿಸುತ್ತಲೇ ಇದ್ದ ಕಾರಣ ಈ ಕೆಲಸವನ್ನು ಮಾಡಿದೆ. ಆದರೆ ನಾವು 35 ಎ ಹಾಗೂ 370ನೆಯ ವಿಧಿಗಳನ್ನು ಪವಿತ್ರ ಗೋಮಾತೆಯಂತೆ ಪೂಜ್ಯಭಾವದಿಂದ ಹಾಗೂ ತಥಾಕಥಿತ ಜಮ್ಮು – ಕಾಶ್ಮೀರದ ಸಾರ್ವಭೌಮತೆಗೆ ಮನ್ನಣೆ ನೀಡುತ್ತ ಬಂದಿರುವುದರಿಂದ ಇಂಥ ಕೆಲಸ ನಮಗೆ ಸಾಧ್ಯವಿಲ್ಲವೇನೋ. ಪ್ರಥಮ ಪ್ರಧಾನಿ ಜವಾಹರ ನೆಹರೂರವರ ದಿನಗಳಲ್ಲಿ ಕೂಡ ಇಸ್ರೇಲಿನ ಆಗಿನ ವಿದೇಶಾಂಗ ಸಚಿವ ಮೋರೆ ಶಾರೆತ್‌ ದಿಲ್ಲಿಗೆ ರಹಸ್ಯ ಭೇಟಿ ನೀಡಿದ್ದರು… (1956).

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.