Udayavni Special

ನಿರ್ಭಿಡೆಯ ಕರ್ತವ್ಯ ನಿರ್ವಹಣೆ: ನ್ಯಾಯಾಂಗ ವ್ಯವಸ್ಥೆಗೆ ವಂದನೆ


Team Udayavani, Nov 1, 2019, 5:48 AM IST

44

ಈ ದೇಶದ ಪ್ರಜೆಗಳಾಗಿರುವುದು ನಮ್ಮ ಅದೃಷ್ಟವೆಂದೇ ಹೇಳಬಹುದು. ಇಲ್ಲಿ ಯಾರ ಮರ್ಜಿಯನ್ನೂ ಕಾಯದೆ ಸ್ವತಂತ್ರ ನೆಲೆಯಲ್ಲಿ ಕೆಲಸ ಮಾಡುವ ಛಾತಿಯುಳ್ಳ ನ್ಯಾಯಂಗ ವ್ಯವಸ್ಥೆ ಯಿದೆ. ಇನ್ನೊಂದು ವಿಷಯದಲ್ಲೂ ನಾವು ಅದೃಷ್ಟವಂತರು. ದೇಶದ ನಾನಾ ಹಂತಗಳ ಬಹುತೇಕ ನ್ಯಾಯಾಲಯಗಳು ತಮ್ಮೆ ದುರು ಬರುವ ವ್ಯಕ್ತಿ ಪಡೆದುಕೊಂಡಿರುವ ಜನಬೆಂಬಲ ಎಷ್ಟೆಂಬ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಂಥ ವ್ಯಕ್ತಿಯ ವಿಚಾ ರಣೆಯನ್ನು ಆತನ ಜನಪ್ರಿಯತೆಯ ಆಧಾರದಲ್ಲಿ ನಡೆಸುವುದಿಲ್ಲ.

ಕಪ್ಪು ಹಣವನ್ನು ಬಿಳಿ ಮಾಡುವ ಉದ್ದೇಶದ ಅಕ್ರಮ ಹಣ ವರ್ಗಾವಣೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಖಲಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಜಾಮೀನು ಬಿಡುಗಡೆ ಪಡೆದು ಬೆಂಗಳೂರಿಗೆ ಆಗಮಿಸಿದಾಗ ಅವರಿಗೆ ನೀಡಲಾದ ವೀರೋಚಿತ ಸ್ವಾಗತದ ಪರಿ ಹೇಗಿತ್ತೆಂದರೆ, ಕಾನೂನು ವ್ಯವಸ್ಥೆಯ ಗಂಧಗಾಳಿಯಿರದ ಯಾವನೇ ವ್ಯಕ್ತಿ, “ಅವರು ನಿಜಕ್ಕೂ ನಿರಪರಾಧಿ’ ಎಂದು ಉದ್ಗರಿಸುವ ಹಾಗಿತ್ತು. ಶಿವಕುಮಾರ್‌ ಬೆಂಬಲಿಗರು ಬೆಂಗಳೂರಿನಲ್ಲಿ ನಡೆಸಿದ ಈ ಅಬ್ಬರದ ಶಕ್ತಿ ಪ್ರದರ್ಶನ ದಿಲ್ಲಿಯ ನ್ಯಾಯಾಧೀಶರುಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಲು ಸಾಧ್ಯವಿಲ್ಲ. ಈ ಪ್ರಕರಣದ ವಿಚಾರಣೆ ಕರ್ನಾಟಕದ ನ್ಯಾಯಾಲಯಗಳಲ್ಲಿ ನಡೆದಿದ್ದರೂ ಈ ವಿಷಯದಲ್ಲಿ ಏನೂ ವ್ಯತ್ಯಾಸವಾಗುತ್ತಿರಲಿಲ್ಲ. ಡಿಕೆಶಿಗೆ ನೀಡಲಾದ ಇಂಥ ಸಂಭ್ರಮದ ಸ್ವಾಗತ ನ್ಯಾಯಾಲಯಗಳ ಮೇಲೆ ಪ್ರಭಾವ ಬೀರಲಿಕ್ಕಿಲ್ಲ ವೆನ್ನುವುದು ನಿಜವಾದರೂ, ಒಂದು ರೀತಿಯಲ್ಲಿ ಇದು ಭಾರತೀಯ ಜನತಾಪಕ್ಷದ ಅಧ್ವರ್ಯುಗಳಿಗೆ ಎಸೆದ ಒಂದು ಸವಾಲೇ ಎಂಬಂತಿತ್ತು. ಅದೃಷ್ಟವಶಾತ್‌ ಶಿವಕುಮಾರ್‌ ಅವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ತಮ್ಮನ್ನು ತಿಹಾರ್‌ ಜೈಲಿಗಟ್ಟಿದ ದಿಲ್ಲಿಯ ನ್ಯಾಯಾಧೀಶರುಗಳನ್ನು ನಿಂದಿಸಿಲ್ಲ. ಆಕ್ಷೇಪಿಸಿಲ್ಲ. ಅವರ ಮೇಲೆ ವಾಗ್ಧಾಳಿ ನಡೆಸಿಲ್ಲ. ಆದರೆ ನಿರೀಕ್ಷೆಯಂತೆಯೇ ಮೋದಿ ಸರಕಾರವೇ ಇದಕ್ಕೆಲ್ಲ ಕಾರಣ ಎಂದಿದ್ದಾರೆ. ಮುಂದೆ ಬಿಜೆಪಿ ನಾಯಕರ ಹಲವು ಅಕ್ರಮಗಳನ್ನು ಬಯಲಿಗೆಳೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ ಡಿಕೆಶಿ ಹಿಂದೆ ಜೈಲು ಮಂತ್ರಿಯಾಗಿದ್ದವರು. ಆ ದಿನಗಳಲ್ಲಿ “ಕಾರಾಗೃಹಗಳ ಸುಧಾರಣೆಗಾಗಿ ಅವರು ತೆಗೆದುಕೊಂಡಿದ್ದ ನಿರ್ಧಾರಗಳ ಲ್ಲೊಂದು ಇನ್ನೂ ನನ್ನ ನೆನಪಿನಲ್ಲಿದೆ. ಬೆಂಗಳೂರಿನ ಕೇಂದ್ರೀಯ ಕಾರಾಗ್ರಹ (ಸೆಂಟ್ರಲ್‌ ಜೈಲ್‌)ದ ಸೂಪರಿಂಟೆಂಡೆಂಟ್‌ ಅವರನ್ನು ಗಾಂಧಿ ನಗರದ ಬಂಗಲೆಯಿಂದ ಒಕ್ಕಲೆಬ್ಬಿಸಿ ಆ ಬಂಗಲೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಬಗೆಗಿನ ನಿರ್ಧಾರ ಅದು. ಮುಂದೆ ಈ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಗೊಂಡಿತು. ಅಂದು ಶಿವಕುಮಾರ್‌ ಇನ್ನೂ ತರುಣ ವಯಸ್ಕರು; ಮೊದಲ ಬಾರಿಗೆ ಪಕ್ಷೇತರ ಶಾಸಕರಾದವರು. ಇಂಥ ಅಂಶಗಳು ಅಂಥ ಏಕ ಪಕ್ಷೀಯ ನಿರ್ಧಾರ ತೆಗೆದುಕೊಳ್ಳದಂತೆ ಅವರನ್ನು ಕಟ್ಟಿ ಹಾಕ ಲಿಲ್ಲ. ಬಹುಶಃ ಇದೇ ಕಾರಣಕ್ಕಿರಬೇಕು, ಕೆಲವರು ಅವರನ್ನು “ಕ್ರಿಯಾಶೀಲವ್ಯಕ್ತಿ’, “ಜನರಿಗೆ ಒಳ್ಳೆಯದಾಗುವುದಾದರೆ ಎಷ್ಟು ದೂರಕ್ಕೂ ಹೋಗಬಲ್ಲ ವ್ಯಕ್ತಿ’ ಎಂದು ಬಣ್ಣಿಸುವುದು. ಡಿಕೆಶಿಯವರೇ ಹೇಳಿಕೊಂಡಿರುವಂತೆ ಅವರು ರಾಜಕೀಯದಲ್ಲಿ ಪ್ರೌಢತೆ ಸಂಪಾದಿಸಿದ್ದಾರೆ; ಉದ್ಯಮ, ಶಿಕ್ಷಣ ಕ್ಷೇತ್ರದಲ್ಲಿಯೂ ಬೆಳೆದಿರುವುದು ಮಾತ್ರವಲ್ಲ, ರಾಜಕೀಯ ಪ್ರಭಾವ/ಸಾಮ ರ್ಥ್ಯದ ವಿಷಯದಲ್ಲೂ ಸಾಕಷ್ಟು ಪ್ರಗತಿ ಕಂಡಿದ್ದಾರೆ.

ಒಂದು ವೇಳೆ ಶಿವಕುಮಾರ್‌ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಖುಲಾಸೆಗೊಂಡರೆ ಆಗ ಅವರಿಗೆ ಯಾವ ರೀತಿಯ ಸ್ವಾಗತ ದೊರೆಯಬಹುದು ಎಂದೇ ಈಗ ಅಚ್ಚರಿಪಡು ವಂತಾಗಿದೆ. ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣ ದಲ್ಲಿ ತನಿಖಾ ಸಂಸ್ಥೆಯ ಗೆಲುವಿನ ಸಾಧ್ಯತೆ ಕಡಿಮೆಯಿ ತ್ತೆಂಬುದನ್ನು ಗಮನಿಸಿದಲ್ಲಿ ಈ ಇಕ್ಕುಳದಲ್ಲಿ ಸಿಲುಕಿಕೊಂಡ ಶಿವಕುಮಾರ್‌ ಹೇಗಾದರೂ ಶಿಕ್ಷೆಯಿಂದ ಪಾರಾಗುತ್ತಿದ್ದರೋ ಏನೋ ಎಂಬ ಊಹೆಗೆ ಅವಕಾಶವಿದೆ. ಈ ಹಿಂದೆ ಜಾರಿ ನಿರ್ದೇಶನಾಲಯ ಬಿಜೆಪಿಯ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಆಸ್ತಿ – ಸೊತ್ತುಗಳನ್ನೂ ಮುಟ್ಟುಗೋಲು ಹಾಕಿಕೊಂಡಿತ್ತು; ಆದರೆ ಅವರ ವಿರುದ್ಧದ ಕೇಸು ಬಿದ್ದು ಹೋಯಿತು. ಈಗ ಶಿವಕುಮಾರ್‌ ಈ ಕೇಸಿನಲ್ಲೂ ಖುಲಾಸೆಗೊಂಡರೆ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿನ ಅವರ ಬೆಂಬಲಿಗರು ರಾಜ್ಯ ರಾಜಧಾನಿಯನ್ನು ಅಕ್ಷರಶಃ ಸ್ತಂಭನಗೊಳಿಸಲಿದ್ದಾರೆ! ಈಗ ಡಿಕೆಶಿ ಅವರು ಜಾಮೀನಿನ ಮೇಲಿದ್ದಾರಷ್ಟೆ. ಇದು ಶಿವಕುಮಾರ್‌ ಅವರ ಬೆಂಬಲಿಗರು ಎರಡನೆಯ ಬಾರಿಗೆ ನಡೆಸಿರುವ ಶಕ್ತಿ ಪ್ರದರ್ಶನ. ಗಮನಿಸಬೇಕು – ಆದಾಯ ತೆರಿಗೆ ಅಧಿಕಾರಿಗಳು ಡಿಕೆಶಿ ಅವರ ಸದಾಶಿವ ನಗರದ ನಿವಾಸದ ಮೇಲೆ ದಾಳಿ ನಡೆಸಿದ ದಿನದಿಂದಲೂ ಅವರ ಬೆಂಬಲಿಗರು “ಇದು ಬಿಜೆಪಿ ರಾಜಕೀಯ ದ್ವೇಷದಿಂದ ನಡೆಸುತ್ತಿರುವ ಸೇಡಿನ ಆಟ; ಬಿಜೆಪಿಯಲ್ಲೇ ಇರುವ ಕಳಂಕಿತರ ಬಗ್ಗೆ ಅದರ ನಾಯಕರು ಮೃದು ಧೋರಣೆ ತಳೆದಿದ್ದಾರೆ ಎಂದು ವಾದಿಸುತ್ತಲೇ ಬಂದಿದ್ದಾರೆ. ಹಾಗೆ ನೋಡಿದರೆ ಆದಾಯ ತೆರಿಗೆ ಅಧಿಕಾರಿಗಳ ದಾಳಿಗೊಳಗಾದ ವ್ಯಕ್ತಿಯ ವರ್ಚಸ್ಸು ನಿಶ್ಚಿತವಾಗಿಯೂ ಕುಂದು ತ್ತದೆ. ಮಾಜಿ ಉಪಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಅವರ ಅಥವಾ ಅವರ ಕುಟುಂಬ ಸದಸ್ಯರು ಒಡೆತನದ ವೃತ್ತಿ ಶಿಕ್ಷಣ ಕಾಲೇಜುಗಳು ಹಾಗೂ ಇತರ ಕಟ್ಟಡಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಮೇಲೆ ಪರಮೇ ಶ್ವರ್‌ ಅವರ ವರ್ಚಸ್ಸು ಕಡಿಮೆಯಾಗಿದೆ. ಆದರೆ ಅವರು ಶಿವಕುಮಾರ್‌ ಮಾಡಿದಂತೆ ಯಾರ ವಿರುದ್ಧವೇ ಆಗಲಿ ಯಾವ ಹೇಳಿಕೆ ಯನ್ನೂ ನೀಡಿಲ್ಲ. ಬಹುಶಃ ಐಟಿ ದಾಳಿಗೊಳಗಾದ ಇನ್ನೋರ್ವ ಮಾಜಿ ಸಚಿವ ಆರ್‌.ಎಲ್‌. ಜಾಲಪ್ಪ ಕೂಡ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಬಹುಶಃ ಇದಕ್ಕೆ ಕಾರಣ ಅವರ (ಜಾಲಪ್ಪ ಅವರ) ಇಳಿ ವಯಸ್ಸಿರಬಹುದು ಅಥವಾ ಬಹುಶಃ ಅವರಲ್ಲಿ ಇನ್ನೂ ಅತ್ಯಂತ ತೀವ್ರತೆರನ ಅವಮಾನದ ಪ್ರಸಂಗದ ಅನುಭವ ಇರುವುದರಿಂದ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಘಟನೆ ಅವರನ್ನು ಅಷ್ಟೇನೂ ವಿಚಲಿತಗೊಳಿಸಿಲ್ಲ. ಈ ಹಿಂದೆ ಸಿಬಿಐ ಅಧಿಕಾರಿಗಳು ಅಡ್ವೊಕೇಟ್‌ ರಶೀದ್‌ ಹತ್ಯೆಯ ಪ್ರಕರಣದಲ್ಲಿ ಜಾಲಪ್ಪ ಅವರನ್ನು ಬಂಧಿಸಿ, ವಿಚಾರಣೆ ನಡೆಸಿ ದ್ದರು. ಆಗ ಜಾಲಪ್ಪ ರಾಮಕೃಷ್ಣ ಹೆಗಡೆಯವರ ಸರಕಾರದಲ್ಲಿ “ಸರ್ವಶಕ್ತ ಗೃಹಸಚಿವ’ರಾಗಿದ್ದರು (1988). ಈ ಪ್ರಕರಣದಲ್ಲಿ ಅವರು ಇನ್ನೋರ್ವ ಆರೋಪಿ ಮಾಜಿ ಐಪಿಎಸ್‌ ಅಧಿಕಾರಿ ನಾರಾಯಣ್‌ ಅವರೊಂದಿಗೆ ಖುಲಾಸೆಗೊಂಡಿದ್ದರು.

ಕಳೆದ ಹಲವಾರು ವರ್ಷಗಳಲ್ಲಿ ಭ್ರಷ್ಟಾಚಾರದ ಆರೋಪ ಕ್ಕೊಳಗಾದ ರಾಜಕಾರಣಿಗಳು, ಆರೋಪ ಹುರುಳಿಲ್ಲದೆಂದು ಪ್ರತಿಪಾದಿಸುವ ಉದ್ದೇಶದಿಂದ ತಮ್ಮ ಜನಪ್ರಿಯತೆ ಹಾಗೂ ಚುನಾವಣಾ ವಿಜಯದತ್ತ ಬೆಟ್ಟು ಮಾಡುತ್ತ ಬಂದಿರುವುದನ್ನು ನೋಡಿದ್ದೇವೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್‌ ಅವರ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಹಲವಾರು ಆರೋಪಗಳು ಕೇಳಿಬಂದ ಸಂದರ್ಭಗಳಲ್ಲೂ ಅವರು “ಜನ ನನ್ನ ಕಡೆ ಇದ್ದಾರೆ’ ಎಂದೇ ಹೇಳುತ್ತಿದ್ದರು. ಆಗ ಕೇಂದ್ರದಲ್ಲಿದ್ದ ಜನತಾ ಪಾರ್ಟಿ ಸರಕಾರ ಅವರ ವಿರುದ್ಧ ವಿಚಾರಣೆ ನಡೆಸು ವುದಕ್ಕಾಗಿ ನ್ಯಾ| ಎ.ಎನ್‌. ಗ್ರೋವರ್‌ ನೇತೃತ್ವದ ಆಯೋಗವನ್ನು ನೇಮಿ ಸಿತ್ತು. ಈ ನಡುವೆ ನಾವು ಮರೆತಿರುವ ಸಂಗಾತಿಯೆಂದರೆ, ದೇವರಾಜ್‌ ಅರಸ್‌ ತಮ್ಮ ವಿರುದ್ಧದ ಆರೋಪಗಳ ತನಿಖೆಗಾಗಿ ತಾವೇ ಆಯೋಗವೊಂದನ್ನು ನೇಮಿಸಿದ್ದು. ಭೂತಪೂರ್ವ ಮೈಸೂರು ಹೈಕೋರ್ಟಿನ ನ್ಯಾಯಧೀಶ ಮೀರ್‌ ಇಕ್ಬಾಲ್‌ ಹುಸೇನ್‌ ಈ ಆಯೋಗವನ್ನು ಅಸ್ತಿತ್ವಕ್ಕೆ ತಂದಿದ್ದರು. ಆದರೆ ಹೈಕೋರ್ಟ್‌ ಈ ನೇಮಕಾತಿಯನ್ನು ರದ್ದುಗೊಳಿಸಿತು.

ಇಷ್ಟಕ್ಕೂ ಅನೇಕರ ತಲೆತಿನ್ನುತ್ತಿರುವ ಒಂದು ಪ್ರಶ್ನೆ ಎಂದರೆ ಜಾರಿ ನಿರ್ದೇಶನಾಲಯ ಎಂದರೇನು? ಇದು ಆರ್ಥಿಕ ಸಂಬಂಧಿ ಕಾಯ್ದೆಗಳ ಅನುಷ್ಠಾನಕ್ಕಾಗಿ ಹಾಗೂ ಆರ್ಥಿಕ ಅಪ ರಾ« ‌ಗಳ ವಿಚಾರಣೆಗಾಗಿ 1956ರಲ್ಲಿ ಸ್ಥಾಪಿಸಲ್ಪಟ್ಟ ಸಂಸ್ಥೆ. ಇದು ಕೇಂದ್ರವಿತ್ತ ಸಚಿವಾಲಯದ ಅಂಗವಾಗಿದ್ದು, ಐಎಎಸ್‌, ಐಪಿ ಎಸ್‌ ಹಾಗೂ ಭಾರತೀಯ ಕಂದಾಯ ಸೇವಾ ಸಂಸ್ಥೆ (ಆದಾಯ ತೆರಿಗೆ ಇಲಾಖೆ)ಗಳ ಅಧಿಕಾರಿಗಳನ್ನು ಒಳಗೊಂಡಿದೆ. ಸಿಬಿಐ ಗಿಂತ ಭಿನ್ನವಾಗಿರುವ ಈ ಸಂಸ್ಥೆ ನಮ್ಮ ದೇಶದ ಅತ್ಯುನ್ನತ ತನಿಖಾ ಏಜೆನ್ಸಿಯಾಗಿದೆ. ಇದು ಉನ್ನತ ಹಂತಗಳಲ್ಲಿ ನಡೆಯುವ ಭ್ರಷ್ಟಾ ಚಾರ ಪ್ರಕರಣಗಳ (ಬ್ಯಾಂಕ್‌ ವಂಚನೆ ಪ್ರಕರಣಗಳು, ಕಂಪೆನಿ ವ್ಯವಹಾರಗಳಲ್ಲಿನ ಅಕ್ರಮ ಪ್ರಕರಣಗಳು) ತನಿಖಾ ಕಾರ್ಯ ವನ್ನು ನಿರ್ವಹಿಸುವ ಅತ್ಯಂತ ಪ್ರಭಾವೀ ಸಂಸ್ಥೆ. ಇದು ಪ್ರಧಾನ ವಾಗಿ ವಿದೇಶೀ ವಿನಿಮಯ ನಿರ್ವಹಣ ಕಾಯ್ದೆ – 1999 (ಫೆಮಾ) ಹಾಗೂ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ – 2002 (ಪಿಎಂಎಲ್‌ಎ) ಎಂಬ ಎರಡು ಕಾರ್ಯಗಳ ಅನುಷ್ಠಾನದ ಅಧಿಕಾರವನ್ನು ಹೊಂದಿದೆ. ಈ ಸಂಸ್ಥೆ ಇದುವರೆಗೆ ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸಿದ ಸುಮಾರು 2000ಕ್ಕೂ ಅಧಿಕ ಪ್ರಕರಣಗಳು ಹಾಗೂ ವಿದೇಶೀ ವಿನಿಮಯ ಕಾಯ್ದೆ ಯನ್ನು ಭಂಗಿಸಿದ ಸುಮಾರು 12,000 ಪ್ರಕರಣಗಳನ್ನು ಈ ಸಂಸ್ಥೆ ದಾಖಲಿಸಿಕೊಂಡಿದೆ ಎನ್ನುತ್ತಿವೆ ಅಂಕಿ – ಅಂಶಗಳು.

ಆದರೆ ಜಾರಿ ನಿರ್ದೇಶನಾಲಯ ತಾನು ನಿರ್ವಹಿಸಿರುವ ಪ್ರಕರಣಗಳ ಪೈಕಿ 2005ರಿಂದ ಇದುವರೆಗಿನ ಅವಧಿಯಲ್ಲಿ ಕೇವಲ ಒಂಭತ್ತು ಕೇಸುಗಳನ್ನಷ್ಟೆ ಪರಿಶೀಲಿಸಿದ್ದು, ಕೇವಲ 13 ಮಂದಿಯ ಅಪರಾಧಗಳನ್ನಷ್ಟೆ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದೆ. ಆರ್ಥಿಕ ಅಪರಾಧ ಕೃತ್ಯವನ್ನೆಸಗಿ ಜೈಲು ಕಂಡವರ ಸಂಖ್ಯೆ ತೀರಾ ಸಣ್ಣದು; ಹೀಗೇಕೆ ಎಂಬುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಅಕ್ರಮ ಹಣ ವರ್ಗಾವಣೆ ವ್ಯವಹಾರ ಪ್ರಕರಣಗಳು ಇತರ ಸಾಮಾನ್ಯ ಅಪರಾಧ ಪ್ರಕರಣಗಳಿಗಿಂತ ಭಿನ್ನವಾಗಿರುತ್ತವೆ. ಅವು (ಅಪರಾಧ ಕೃತ್ಯಗಳು) ದಾಖಲೆಗಳು ಹಾಗೂ ಊಹೆ – ಅನುಮಾನಗಳನ್ನು ಆಧರಿಸಿರುತ್ತವೆ. ಅಕ್ರಮ ಹಣ ವರ್ಗಾವಣೆ ಜಾಲವನ್ನು ಸಾಂದರ್ಭಿಕ ಪುರಾವೆಗಳ ಆಧಾ ರದ ಮೇಲಷ್ಟೆ ಋಜುಪಡಿಸಬೇಕಾಗುತ್ತದೆ. ಹಣ ಕೈಯಿಂದ ಕೈಗೆ ಸಾಗಿ ಹೋದ ಜಾಡನ್ನು ಹಾಗೂ ಎಲೆಕ್ಟ್ರಾನಿಕ್‌ ಸಾಧನಗಳ ಮೂಲಕ ನಡೆದಿರುವ ಹಣದ ವರ್ಗಾವಣೆ ವ್ಯವಹಾರದ ಜಾಲ ವನ್ನು ಭೇದಿಸಲು ಬಹಳಷ್ಟು ಸಮಯಾವಕಾಶ ಬೇಕಾಯಿತು. ಅಲ್ಲದೆ ಅಕ್ರಮ ಹಣ ವರ್ಗಾವಣೆ ಕಾಯ್ದೆ 28 ಬಗೆಯ ಅಪರಾಧಗಳ ಶೋಧ ಪ್ರಕ್ರಿಯೆಗಳನ್ನು ಲಕ್ಷ್ಯದಲ್ಲಿರಿಸಿಕೊಂಡಿದೆ. ಹಾಗಾಗಿಯೇ ಇಡಿ ಅಧಿಕಾರಿಗಳು ಲೋಡುಗಟ್ಟಲೆ ದಾಖಲೆ ಗಳನ್ನು ವಶಪಡಿಸಿಕೊಂಡರೆಂದೂ, ಇವುಗಳನ್ನು ಅಧಿಕಾರಿಗಳು ಪರಿಶೀಲಿಸಬೇಕಾಗಿದೆಯೆಂದೂ ವಿವರಿಸುವಂಥ ವರದಿಗಳು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದು.

ದಿಲ್ಲಿಯ ನ್ಯಾಯಾಲಯವೊಂದರಲ್ಲಿ ನಡೆದ ಡಿ.ಕೆ. ಶಿವಕುಮಾರ್‌ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಮೊದಲಿಂದ ಇಲ್ಲಿಯ ತನಕ ಗಮನಿಸುತ್ತ ಬಂದವರು ಒಂದು ಅಂಶವನ್ನಂತೂ ಖಂಡಿತ ಗಮನಿಸಿರುತ್ತಾರೆ. ತಮ್ಮ ಕಕ್ಷಿದಾರನನ್ನು ಅಧಿಕಾರಿಗಳು ದೀರ್ಘ‌ ವಿಚಾರಣೆಗೆ ಒಳಪಡಿಸಿದ್ದಾರೆ; ಕಿರುಕುಳ ಕೊಟ್ಟಿದ್ದಾರೆ; ಅವರಿಗೆ ಮಾನಸಿಕ ನೀಡಿದ್ದಾರೆ ಎಂದು ಡಿಕೆಶಿ ಪರವಾದ ಮಂಡಿಸಿದ ಅಭಿಷೇಕ್‌ ಮನು ಸಿಂ Ì ನ್ಯಾಯಾಧೀಶ ರಲ್ಲಿ ದೂರಿಕೊಂಡಿದ್ದಾರೆ. ನಾಗರಿಕರು ಯಾವುದೇ ಅಪರಾಧ ಎಸಗಿರಲಿ, ಅವರು ಹೊಂದಿರಬೇಕಾದ ಮಾನವೀಯ ಹಕ್ಕು ಗಳನ್ನು ಪೊಲೀಸ ರಾಗಲಿ, ತನಿಖಾ ಸಂಸ್ಥೆಯಾಗಲಿ ದಮನಿಸ ಕೂಡದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಡಿ.ಕೆ. ಬಸು ಮತ್ತು ಪಶ್ಚಿಮ ಬಂಗಾಲ ಸರಕಾರದ ನಡುವಣ ಪ್ರಕರಣ ವೊಂದರಲ್ಲಿ (1996) ಸವೋತ್ಛ ನ್ಯಾಯಾಲಯ (ನ್ಯಾ| ಕುಲ ದೀಪ್‌  ಸಿಂಗ್‌ ಹಾಗೂ ನ್ಯಾ| ಎ.ಎಸ್‌. ಆನಂದ್‌) ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಇಲ್ಲಿ ನೆನಪಿಸಿಕೊಳ್ಳ ಬಹುದು. ಈ ಪ್ರಕರಣದಲ್ಲಿ ನ್ಯಾಯಪೀಠ ಹೀಗೆ ಹೇಳಿತ್ತು, “ಆರ್ಥಿಕ ಅಪರಾಧ ಪ್ರಕರಣಗಳ ವಿಚಾರಣೆ ನಡೆಸುವ ಅಧಿಕಾರಿಗಳು ಸಾಮಾನ್ಯ ಪೊಲೀಸರಂತೆ ವರ್ತಿಸುವಂತಿಲ್ಲ. ನಾಗರಿಕ ಸಮಾಜ ಕಾನೂನಿನ ಆಳ್ವಿಕೆಗೆ ಒಳಪಟ್ಟಿರಬೇಕೇ ಹೊರತು ಸಾಮಾನ್ಯ ಮಾನವರ ಆಳ್ವಿಕೆಗಲ್ಲ.’ ಇದು ಕಸ್ಟಡಿಯಲ್ಲಿ ಸಂಭವಿಸಿದ ಸಾವಿಗೆ ಸಂಬಂಧಿ ಸಿದ ಪ್ರಕರಣವಾಗಿತ್ತು. ಸಿಬಿಐ ಅಥವಾ ಇಡಿ ಸಂಸ್ಥೆಗಳು ನಡೆಸಿದ ವಿಚಾರಣೆಯ ವೇಳೆ ಕಸ್ಟಡಿಯಲ್ಲಿ ಹಿಂಸೆ ನೀಡಲಾದ ಪ್ರಕರಣಗಳ ಸಂಖ್ಯೆ ಸಾಕಷ್ಟು ದೊಡ್ಡದಾಗಿಯೇ ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ 2017ರಲ್ಲಿ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರೂ ನಿರೀಕ್ಷಿತ ಸ್ಪಂದನ ದೊರಕಲಿಲ್ಲ. ಇನ್ನೊಂದು ಪ್ರಕರಣದಲ್ಲಿ ಕಲ್ಕತ್ತಾ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾ ಧೀಶ ಅಜಿತ್‌ ಕುಮಾರ್‌ ಸೇನ್‌ ಗುಪ್ತಾ ಅವರ ಪತ್ನಿ ಹಾಗೂ ಮಗಳು (ಡಾ| ತಪತಿ ಸೇನ್‌ ಗುಪ್ತಾ ಹಾಗೂ ಬ್ಯಾರಿಸ್ಟರ್‌ ಅಂಗವಾ ಸೇನ್‌ ಗುಪ್ತಾ) ತಮ್ಮನ್ನು ಜಾರಿ ನಿರ್ದೇಶನಾಲಯ ತಪ್ಪಾಗಿ ನಡೆಸಿಕೊಂಡಿದೆಯೆಂಬ ದೂರಿನೊಂದಿಗೆ ನ್ಯಾಯಾ ಲಯದ ಮೊರೆಹೊಕ್ಕಿದ್ದರು. ಆರೋಪಿಗಳಿಗೆ ನೀಡುವ ಯಾವುದೇ ರೀತಿಯ ಅಮಾನವೀಯ ಹಿಂಸೆ, ಅಥವಾ ಅವರ ಮರ್ಯಾದೆಯನ್ನು ಹೀನೈಸುವ ರೀತಿಯ ನಡವಳಿಕೆ ಸಂವಿಧಾನದ 21ನೆಯ ವಿಧಿಯ ಉಲ್ಲಂಘನೆಯಾಗಿದೆ ಎಂದು ಕಲ್ಕತ್ತಾ ಉಚ್ಚನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಡಿ.ಕೆ. ಶಿವಕುಮಾರ್‌ ಹಾಗೂ ಅವರ ಬೆಂಬಲಿಗರು ಈ ಭ್ರಷ್ಟಾ ಚಾರ ಪ್ರಕರಣವನ್ನು ಸದ್ಗುಣಕ್ಕೆ ತೆತ್ತ ಬೆಲೆಯೆಂದು ಬಿಂಬಿ ಸಲು, ಈ ಮೂಲಕ ರಾಜಕೀಯ ಪ್ರಯೋಜನಗಳನ್ನು ದಕ್ಕಿಸಿ ಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸಮಾ ಜದ ಕೆಲವೊಂದು ವರ್ಗಗಳಲ್ಲಿ ತುಂಬಾ ಜನಪ್ರೀತಿ ಗಳಿಸಿರು ತ್ತಾರೆ; ಕಾರಣ, ಇವರುಗಳು ತಮ್ಮ ಪ್ರೀತಿ ಪಾತ್ರರಿಗೆ ಅವರು ನಿರೀಕ್ಷಿಸಿದ ನೆರವನ್ನು ಒದಗಿಸುವುದಕ್ಕಾಗಿ ಕಾನೂನಿನ ನಿಯಮ ಗಳನ್ನು ಗಾಳಿಗೆ ತೂರಲು ಸಿದ್ಧರಿರುತ್ತಾರೆ. ಇನ್ನೊಂದು ಮಾತು ಇ.ಡಿ. ಅಧಿಕಾರಿಗಳು ನಡೆಸುವ ದಾಳಿಗಳು ಹಾಗೂ ದಾಖಲಿಸಿ ಕೊಳ್ಳುವ ಪ್ರಕರಣಗಳು ಕೇವಲ ಸುದ್ದಿ ಮಾಡುತ್ತವಷ್ಟೆ. ಟಿ.ವಿ. ವಾಹಿನಿಗಳಲ್ಲಿ ಸದ್ದುಗದ್ದಲಕ್ಕೆ ಕಾರಣವಾಗುತ್ತವಷ್ಟೆ. ಅಪರಾಧಿ ಗಳನ್ನು ಜೈಲಿಗಟ್ಟುವ ನಿಟ್ಟಿನಲ್ಲಿ ಇಂಥ ದಾಳಿಗಳ ಪ್ರಯೋಜನ ಕೇವಲ ಅತ್ಯಲ್ಪ ಎಂದೇ ಹೇಳಬೇಕಾಗುತ್ತದೆ.

ಅರಕೆರೆ ಜಯರಾಮ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮದುಮಗಳಿಗೆ ಕೋವಿಡ್ ಸೋಂಕು ದೃಢ: ಮದುವೆಯಲ್ಲಿ ಪಾಲ್ಗೊಂಡವರಿಗೆ ಶುರುವಾಯಿತು ಆತಂಕ

ಮದುಮಗಳಿಗೆ ಕೋವಿಡ್ ಸೋಂಕು ದೃಢ: ಮದುವೆಯಲ್ಲಿ ಪಾಲ್ಗೊಂಡವರಿಗೆ ಶುರುವಾಯಿತು ಆತಂಕ

ಬ್ರಹ್ಮಾವರದಲ್ಲಿ ಸೈಕಲ್ ಸವಾರನಿಗೆ ಕಾರು ಢಿಕ್ಕಿ: ಗಂಭೀರ ಗಾಯಗೊಂಡ ಸವಾರ

ಬ್ರಹ್ಮಾವರದಲ್ಲಿ ಸೈಕಲ್ ಸವಾರನಿಗೆ ಕಾರು ಢಿಕ್ಕಿ: ಗಂಭೀರ ಗಾಯಗೊಂಡ ಸವಾರ

ಬೆಂಗಳೂರಿನಿಂದ ಬಂದ ಐವರಲ್ಲಿ ಮೂವರಿಗೆ ಕೋವಿಡ್ ಪಾಸಿಟಿವ್: ಜಡ್ಕಲ್ ಕಟ್ಟೆ ಬಳಿ ಸೀಲ್ ಡೌನ್

ಬೆಂಗಳೂರಿನಿಂದ ಬಂದ ಐವರಲ್ಲಿ ಮೂವರಿಗೆ ಕೋವಿಡ್ ಪಾಸಿಟಿವ್: ಜಡ್ಕಲ್ ಕಟ್ಟೆ ಬಳಿ ಸೀಲ್ ಡೌನ್

ಲಾಕ್‌ಡೌನ್‌ ವೇಳೆ ನೆರವಾದ ಡೆಲಿವರಿ ಬಾಯ್‌ ಪ್ರತಿಮೆ ನಿರ್ಮಾಣ

ಲಾಕ್‌ಡೌನ್‌ ವೇಳೆ ನೆರವಾದ ಡೆಲಿವರಿ ಬಾಯ್‌ ಪ್ರತಿಮೆ ನಿರ್ಮಾಣ

ಪಬ್ಜಿ ಗೀಳು : ಅಜ್ಜನ ಪೆನ್ಶನ್ ಖಾತೆಯಿಂದ 2 ಲಕ್ಷ ಬೋಳಿಸಿದ ಮೊಮ್ಮಗ..!

ಪಬ್ಜಿ ಗೀಳು : ಅಜ್ಜನ ಪೆನ್ಶನ್ ಖಾತೆಯಿಂದ 2 ಲಕ್ಷ ಬೋಳಿಸಿದ ಮೊಮ್ಮಗ..!

ಜನಪ್ರತಿನಿಧಿಗಳಿಗೂ ಸೋಂಕು ಸಂಕಟ; ಕುಣಿಗಲ್ ಶಾಸಕರಿಗೆ ಸೋಂಕು ದೃಢ

ಜನಪ್ರತಿನಿಧಿಗಳಿಗೂ ಸೋಂಕು ಸಂಕಟ; ಕುಣಿಗಲ್ ಶಾಸಕರಿಗೆ ಸೋಂಕು ದೃಢ

ಕೋವಿಡ್‌ ಪರಿಣಾಮ ತಿಂಗಳು ಕಳೆದರೂ ಬಂದಿಲ್ಲ ರುಚಿ ಮತ್ತು ವಾಸನೆ ಗ್ರಹಣ ಸಾಮರ್ಥ್ಯ

ಕೋವಿಡ್‌ ಪರಿಣಾಮ ತಿಂಗಳು ಕಳೆದರೂ ಬಂದಿಲ್ಲ ರುಚಿ ಮತ್ತು ವಾಸನೆ ಗ್ರಹಣ ಸಾಮರ್ಥ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

kat-13

ಕೊರೊನಾ ವೈರಸ್‌- ಅಸ್ವಾಭಾವಿಕ ಆಹಾರ ಪದ್ಧತಿಯ ಕೊಡುಗೆ

MUST WATCH

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya


ಹೊಸ ಸೇರ್ಪಡೆ

ಮದುಮಗಳಿಗೆ ಕೋವಿಡ್ ಸೋಂಕು ದೃಢ: ಮದುವೆಯಲ್ಲಿ ಪಾಲ್ಗೊಂಡವರಿಗೆ ಶುರುವಾಯಿತು ಆತಂಕ

ಮದುಮಗಳಿಗೆ ಕೋವಿಡ್ ಸೋಂಕು ದೃಢ: ಮದುವೆಯಲ್ಲಿ ಪಾಲ್ಗೊಂಡವರಿಗೆ ಶುರುವಾಯಿತು ಆತಂಕ

ದೇಹ ಕೊಡದ್ದಕ್ಕೆ ಅಧಿಕಾರಿಗಳ ಅಪಹರಿಸಿದ ಆದಿವಾಸಿಗಳು

ದೇಹ ಕೊಡದ್ದಕ್ಕೆ ಅಧಿಕಾರಿಗಳ ಅಪಹರಿಸಿದ ಆದಿವಾಸಿಗಳು

huballi-tdy-1

ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ

ಇಂಡೋನೇಷ್ಯಾದಲ್ಲಿ 63 ಸಾವಿರ ದಾಟಿದ ಸೋಂಕು

ಇಂಡೋನೇಷ್ಯಾದಲ್ಲಿ 63 ಸಾವಿರ ದಾಟಿದ ಸೋಂಕು

ಬ್ರಹ್ಮಾವರದಲ್ಲಿ ಸೈಕಲ್ ಸವಾರನಿಗೆ ಕಾರು ಢಿಕ್ಕಿ: ಗಂಭೀರ ಗಾಯಗೊಂಡ ಸವಾರ

ಬ್ರಹ್ಮಾವರದಲ್ಲಿ ಸೈಕಲ್ ಸವಾರನಿಗೆ ಕಾರು ಢಿಕ್ಕಿ: ಗಂಭೀರ ಗಾಯಗೊಂಡ ಸವಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.