ಪಠ್ಯದಲ್ಲಿ ಟಿಪ್ಪು ಚರಿತ್ರೆ: ಉಳಿಸಬೇಕೆ? ಅಳಿಸಬೇಕೆ?


Team Udayavani, Nov 8, 2019, 6:00 AM IST

cc-52

ಶತ ಶತಮಾನಗಳಿಂದ ಜನರು ನಂಬಿರುವುದೇ ಒಂದು, ಪಠ್ಯದಲ್ಲಿ ಇರುವುದೇ ಮತ್ತೂಂದು. ಇಂತಹ ಹಲವು ದೃಷ್ಟಾಂತಗಳು ನಮ್ಮ ಮುಂದಿವೆ. ವೈಭವದಿಂದ ಮೆರೆಯುತ್ತಿದ್ದ ವಿಜಯನಗರವನ್ನು ಧ್ವಂಸ ಮಾಡಿ, ಹಾಳು ಹಂಪಿಯನ್ನಾಗಿ ಮಾಡಿದ್ದು ಬಹಮನಿ ಸುಲ್ತಾನರು ಎಂಬ ಸಂಗತಿಯನ್ನು ಯಾವ ಪಠ್ಯಪುಸ್ತಕಗಳೂ ನೇರವಾಗಿ ಹೇಳುವುದಿಲ್ಲ. ಕೆಲವರು ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಗಮನಿಸುವುದಕ್ಕೂ ಸಿದ್ಧರಿಲ್ಲ.

ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ವಿಷಯ ರಾಜ್ಯವನ್ನು ಮತ್ತೂಮ್ಮೆ ವೈಚಾರಿಕವಾಗಿ ಇಬ್ಭಾಗಿಸುವ ಅಪಾಯ ಗೋಚರಿಸುತ್ತಿದೆ. ಹಲವರು ತಮ್ಮ ಕೃತಿಗಳು ಹಾಗೂ ಪಠ್ಯ ಪುಸ್ತಕಗಳನ್ನು ಮತ್ತೂಮ್ಮೆ ತೆರೆಯುವ ಅನಿವಾರ್ಯತೆಯೂ ಸೃಷ್ಟಿಯಾಗಿದೆ. 18ನೇ ಶತಮಾನದಲ್ಲಿ ಮೈಸೂರನ್ನು ಆಳಿದ ಟಿಪ್ಪು ಸುಲ್ತಾನನ ಕುರಿತಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ರಚಿಸಿರುವ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಇರುವ ಉಲ್ಲೇಖಗಳನ್ನು ಮರುಪರಿಶೀಲಿಸಲು ಯಡಿಯೂರಪ್ಪ ಸರಕಾರ ಮುಂದಾಗಿರುವುದು ಈಗ ವಿವಾದ ಅಲ್ಲದಿದ್ದರೂ ಚರ್ಚೆಯನ್ನಂತೂ ಹುಟ್ಟುಹಾಕಿದೆ.

ಸರಕಾರದ ಈ ನಡೆಗೆ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರ ಪ್ರಕಾರ ಭವಿಷ್ಯದಲ್ಲಿ ಮುದ್ರಣವಾಗುವ ಎಲ್ಲ ಪಠ್ಯಪುಸ್ತಕ ಗಳಿಂದ ಟಿಪ್ಪು ಹಾಗೂ ಆತನ ತಂದೆ ಹೈದರ್‌ ಆಲಿಯ ಕುರಿತಾಗಿ ಉಲ್ಲೇಖಗಳನ್ನು ಸರಕಾರ ಕಿತ್ತುಹಾಕಲಿದ್ದು, ಈ ಇಬ್ಬರ ಆಡಳಿತದ ಅವಧಿಯ ಮೈಸೂರಿನ ಇತಿಹಾಸವು ಪೂರ್ಣವಾಗಿ ಸಿಗಲಿಕ್ಕಿಲ್ಲ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬಿಜೆಪಿ ಇತಿಹಾಸವನ್ನು ಮತ್ತೆ ಬರೆಯಲು ಮುಂದಾಗಿದ್ದು, ರಾಜ್ಯದ ಮುಸ್ಲಿಂ ದೊರೆಗಳು, ಬಿಜಾಪುರದ ಸುಲ್ತಾನರು, ಹೈದರ್‌ ಹಾಗೂ ಟಿಪ್ಪುಗೆ ಸಂಬಂಧಿಸಿದ ಎಲ್ಲ ಉಲ್ಲೇಖಗಳನ್ನೂ ಕೈಬಿಡಲಿದೆ ಎನ್ನುವ ಆತಂಕವೂ ಕೆಲವರಲ್ಲಿದೆ.

ಈಚೆಗೆ ಕಲ್ಯಾಣ ಕರ್ನಾಟಕ ಎಂದು ನಾವು ಕರೆಯುತ್ತಿರುವ ಹೈದರಾಬಾದ್‌-ಕರ್ನಾಟಕ ಭಾಗವನ್ನು ಆಳಿದ ನಿಜಾಮರನ್ನು ರಾಕ್ಷಸರಂತೆ ಬಿಂಬಿಸಿದ್ದು ಬಿಜೆಪಿ ಅಲ್ಲ, ಕಾಂಗ್ರೆಸ್‌ ಎನ್ನುವುದು ಉಲ್ಲೇಖನೀಯ. ಖಾಸಗಿ ಸೈನ್ಯವನ್ನು ಸಿದ್ಧಗೊಳಿಸಿ, ಈ ಭಾಗವನ್ನು ಪಾಕಿಸ್ತಾನದ ಜತೆಗೆ ವಿಲೀನಗೊಳಿಸಲು ಯತ್ನಿಸಿದ ಕೊನೆಯ ನಿಜಾಮ (ಮಿರ್‌ ಒಮರ್‌ ಅಲಿ ಖಾರ್‌)ನಿಂದ ಹೈದರಾಬಾದ್‌ – ಕರ್ನಾಟಕ ವಿಮೋಚನೆಯಾದ ದಿನವನ್ನು ಆಚರಿಸುವ ನೆಪದಲ್ಲಿ ಕಾಂಗ್ರೆಸ್‌ ರಜಾಕರನ್ನು ರಾಕ್ಷಸರಂತೆ ಬಿಂಬಿಸಿತು. ಈ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿಯಲು ರಜಾಕರ ಆಳ್ವಿಕೆಯೇ ಕಾರಣವೆಂದು ಹಲವರು ಇಂದಿಗೂ ನಂಬಿದ್ದಾರೆ.

ಯಾವ ರೀತಿಯಿಂದ ನೋಡಿದರೂ ಭಾರತದ ಇತಿಹಾಸದಲ್ಲಿ ಟಿಪ್ಪು ಸುಲ್ತಾನ್‌ ವಿವಾದಾತ್ಮಕ ವ್ಯಕ್ತಿಯೇ ಆಗಿದ್ದಾನೆ. ಹಿಂದಿನ ಹಾಗೂ ಇಂದಿನ ಶಾಲಾ ಪಠ್ಯ ಪುಸ್ತಕಗಳಲ್ಲಿ ಕೆಲವು ಐತಿಹಾಸಿಕ ಸತ್ಯಗಳನ್ನು ಮರೆಮಾಚುವ ಪ್ರಯತ್ನಗಳು ನಡೆದೇ ಇವೆ. ಶತ ಶತಮಾನಗಳಿಂದ ಜನರು ನಂಬಿರುವುದೇ ಒಂದು, ಪಠ್ಯದಲ್ಲಿ ಇರುವುದೇ ಮತ್ತೂಂದು. ಇಂತಹ ಹಲವು ದೃಷ್ಟಾಂತಗಳು ನಮ್ಮ ಮುಂದಿವೆ. ವೈಭವದಿಂದ ಮೆರೆಯುತ್ತಿದ್ದ ವಿಜಯನಗರವನ್ನು ಧ್ವಂಸ ಮಾಡಿ, ಹಾಳು ಹಂಪಿಯನ್ನಾಗಿ ಮಾಡಿದ್ದು ಬಹಮನಿ ಸುಲ್ತಾನರು ಎಂಬ ಸಂಗತಿಯನ್ನು ಯಾವ ಪಠ್ಯಪುಸ್ತಕಗಳೂ ನೇರವಾಗಿ ಹೇಳುವುದಿಲ್ಲ. ಕೆಲವರು ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಗಮನಿಸುವುದಕ್ಕೂ ಸಿದ್ಧರಿಲ್ಲ. ಹಂಪಿಗೆ ಭೇಟಿ ನೀಡುವ ಪ್ರತಿಯೋರ್ವ ಪ್ರವಾಸಿಗನೂ ಈ ವೈಭವವನ್ನು ಯಾರು ಧ್ವಂಸ ಮಾಡಿದ್ದು ಎಂಬುದನ್ನು ಪ್ರಶ್ನಿಸುತ್ತಾನೆ. ಕಣ್ಣೆದುರು ಹರಡಿರುವ ಈ ಸತ್ಯವನ್ನು ಯಾವ ಪುಸ್ತಕವೂ ಅಡಗಿಸಿಡಲು ಸಾಧ್ಯವಿಲ್ಲ. ಉತ್ತರ ಭಾರತದಲ್ಲಿ ಅಯೋಧ್ಯೆಯೂ ಸೇರಿದಂತೆ ಹಲವು ಹಿಂದೂ ದೇವಸ್ಥಾನಗಳನ್ನು ದಂಡೆತ್ತಿ ಬಂದ ಘಜ್ನಿ, ಘೋರಿಯಂತಹ ದಾಳಿಕೋರರೇ ನಾಶ ಮಾಡಿದ್ದು ಎಂಬುದರಲ್ಲೂ ಎರಡು ಮಾತಿಲ್ಲ.

ಬ್ರಿಟಿಷರ ವಿರುದ್ಧದ ಹೋರಾಟ
ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿ ಟಿಪ್ಪುವನ್ನು ಗುರುತಿಸುವುದರಲ್ಲಿ ತಪ್ಪೇನೂ ಇಲ್ಲ. ಏಕೆಂದರೆ, ಆಗಷ್ಟೇ ಉದಿಸುತ್ತಿದ್ದ ಬ್ರಿಟಿಷ್‌ ಶಕ್ತಿ ತನ್ನ ಸಂಸ್ಥಾನ ಮೈಸೂರಿಗೆ ಹಾಗೂ ದೇಶದ ಇತರ ಭಾಗಗಳಿಗೆ ಅಪಾಯಕಾರಿ ಎನ್ನುವುದನ್ನು ಟಿಪ್ಪು ಗ್ರಹಿಸಿದ್ದ. ಟಿಪ್ಪುವಿಗಿಂತ ಬಲಿಷ್ಠರಾಗಿದ್ದರೂ ಸಿಖ್ಬರು, ಜಾಟರು ಹಾಗೂ ಮರಾಠರು ಬ್ರಿಟಿಷರ ವಿರುದ್ಧ 18ನೇ ಶತಮಾನದಲ್ಲಿ ಹೋರಾ ಡಿದ ಉಲ್ಲೇಖಗಳಿಲ್ಲ. ಅಫ‌^ನ್ನರ ಆಕ್ರಮಣವನ್ನು ತಡೆ ಗಟ್ಟಲು 1761ರ ಜನವರಿಯಲ್ಲಿ ಪುಣೆಯಿಂದ ಪಾಣಿಪತ್‌ ಜಿಲ್ಲೆಯ (ಈಗಿನ ಹರಿಯಾಣ) ತನಕ ಮರಾಠರ ಸೇನೆ ದಂಡಯಾತ್ರೆ ಮಾಡಿದಾಗಲೂ ಸಿಖ್ಬರು ಹಾಗೂ ಜಾಟರು ಮೂಕಪ್ರೇಕ್ಷಕರಂತಿದ್ದರು. ಮೂರನೇ ಪಾಣಿಪತ್‌ ಕದನದಲ್ಲಿ ಮರಾಠರು ಸೋತಿದ್ದು ವಿಪರ್ಯಾಸದ ಸಂಗತಿ. ಶತಮಾನಗಳಷ್ಟು ಹಿಂದೆ ರಜಪೂತ ದೊರೆಗಳೂ ಮುಸ್ಲಿಂ ದಾಳಿಕೋರರ ವಿರುದ್ಧ ಸಂಘಟಿತ ಹೋರಾಟವನ್ನು ರೂಪಿಸಲು ವಿಫ‌ಲರಾಗಿದ್ದರು. 19ನೇ ಶತಮಾನದಲ್ಲಿ ಮರಾಠರು ಹಾಗೂ ಸಿಖ್ಬರು ಬ್ರಿಟಿಷರ ವಿರುದ್ಧ ಸಂಘರ್ಷಕ್ಕೆ ಇಳಿದರೂ ಅದು ಬಹಳ ತಡವಾಗಿತ್ತು. ಬ್ರಿಟಿಷರು ಆಗಲೇ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ತಮ್ಮ ಮುಸ್ಲಿಂ ಹಾಗೂ ಕನ್ನಡಿಗ ಸೈನಿಕರನ್ನು ಸೇರಿಸಿಕೊಂಡು ಹೈದರ್‌ ಮತ್ತು ಟಿಪ್ಪು ಬ್ರಿಟಿಷರ ವಿರುದ್ಧ ನಾಲ್ಕು ಸಲ ಯುದ್ಧ ಮಾಡಿದ್ದು ಸಣ್ಣ ಸಂಗತಿ ಯಲ್ಲ. ಆಗ ಅವರ ಸೇನೆ ಹಾಗೂ ಸಂಸ್ಥಾನದಲ್ಲಿ ಅಧಿಕಾರಿಗಳಾಗಿ ಬಹುತೇಕ ಮುಸ್ಲಿಮರು ಹಾಗೂ ಬ್ರಾಹ್ಮಣರೇ ಇದ್ದರು.

ಸ್ವಾತಂತ್ರ್ಯ ಹೋರಾಟ
ಅಪ್ರತಿಮ ವೀರನಾಗಿದ್ದರೂ ಟಿಪ್ಪುವಿನಲ್ಲಿ ದುರ್ಗುಣಗಳೂ ಹೇರಳವಾಗಿದ್ದವು. ಇದೇ ಕಾರಣಕ್ಕಾಗಿ ಕೊಡಗು, ಕರಾವಳಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ಆತನನ್ನು ಸಾಕಷ್ಟು ಜನ ದ್ವೇಷಿಸುತ್ತಾರೆ. ಆತ ಮುಸ್ಲಿಂ ಅಂಧಾಭಿಮಾನಿ ಎನ್ನುವುದು ಒಂದು ಕಾರಣವಾದರೆ, ವೈರಿಗಳು ಹಾಗೂ ಕೆಲವೊಮ್ಮೆ ತನ್ನವರನ್ನೂ ಆತ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದ ಎನ್ನುವುದು ಮತ್ತೂಂದು ಕಾರಣ. ಹಳೆಯ ಕೃತಿಗಳು ಬೇರೆಲ್ಲ ವಿಚಾರಗಳನ್ನು ಹೇಳುತ್ತಿದ್ದರೂ ಆಧುನಿಕ ಇತಿಹಾಸ ತಜ್ಞರು ಹಾಗೂ ಸಂಶೋಧಕರು ಟಿಪ್ಪು ಹೇಗೆ ಮೈಸೂರನ್ನು ಇಸ್ಲಾಮಿಕ್‌ ರಾಜ್ಯವಾಗಿ ಪರಿವರ್ತಿಸಲು ಯತ್ನಿಸಿದ, ಬಲವಂತದ ಮತಾಂತರಗಳಲ್ಲಿ ಆತನ ಪಾತ್ರದ ಕುರಿತು ವಿವರಿ ಸಿದ್ದಾರೆ. ಮೈಸೂರಿನ ರಾಜ್ಯಭಾಷೆಯಾಗಿ ಕನ್ನಡದ ಬದಲು ಪರ್ಶಿಯನ್‌ ಭಾಷೆಯನ್ನು ಜಾರಿಗೆ ತಂದ ಟಿಪ್ಪು, ತನ್ನ ಸಾಮ್ರಾಜ್ಯದ ಪ್ರಮುಖ ಊರುಗಳ ಹೆಸರನ್ನೂ ಬದಲಿಸಿದ. ಆತನ ಆಳ್ವಿಕೆಯ ಸಂದ ರ್ಭ ದಲ್ಲೇ ಮೈಸೂರು ನಜರ್‌ಬಾದ್‌ ಆಯಿತು, ಮಂಗಳೂರು ಜಲಾಲಾಬಾದ್‌ ಎಂದು ಕರೆಸಿಕೊಂಡಿತು, ಮಡಿಕೇರಿಗೆ ಜಫ‌ರಾ ಬಾ ದ್‌ ಎಂಬ ನಾಮಕರಣ ವಾಯಿತು. ಸಕಲೇಶಪುರ ಮಂಜರಾ ಬಾ ದ್‌ ಎಂದಾಯಿತು. ಹೀಗೆ ಹಲವು ಊರುಗಳನ್ನು ಹೆಸರಿಸಬಹುದು.

ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯುವ ವರಿದ್ದಾರೆ. ಕರ್ನಾಟಕ ವಿಧಾನಸೌಧ ಸ್ಥಾಪನೆಯ ವಜ್ರಮಹೋತ್ಸವ ಆಚರಣೆಯ ಸಂದರ್ಭದಲ್ಲಿ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ 2017ರ ಅಕ್ಟೋಬರ್‌ 25ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಮಾಡಿದ ಭಾಷಣವೂ ಇತ್ತೀಚೆಗೆ ಹೆಚ್ಚು ಸದ್ದು ಮಾಡಿತು. ಅವರು ಹೇಳಿದ್ದಿಷ್ಟು: “ಬ್ರಿಟಿಷರ ವಿರುದ್ಧ ಹೋರಾಡುತ್ತ ಟಿಪ್ಪು ವೀರಮರಣವನ್ನಪ್ಪಿದ. ಆತ ಅಭಿವೃದ್ಧಿಯ ಹರಿಕಾರ. ಯುದ್ಧದಲ್ಲಿ ಮೈಸೂರು ರಾಕೆಟ್‌ಗಳನ್ನು ಆವಿಷ್ಕರಿಸಿ ಬಳಸಿದ್ದು ಆತನ ಸಾಧನೆ. ಈ ತಂತ್ರಜ್ಞಾನವನ್ನು ಮುಂದೆ ಯುರೋಪಿಯನ್ನರೂ ಅಳವಡಿಸಿಕೊಂಡರು.’

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎನ್ನುವುದನ್ನು ರಾಷ್ಟ್ರಪತಿಗಳು ಹೇಳಲಿಲ್ಲ. ಇತಿಹಾಸದ ಹೆಚ್ಚು ಜ್ಞಾನವಿಲ್ಲದ ಸಾಮಾನ್ಯ ಮನುಷ್ಯನೂ, ಹೈದರ್‌ ಮತ್ತು ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದರೂ, ಆಗ ಅವರು (ಬ್ರಿಟಿಷರು) ಭಾರತದ ಮೇಲೆ ತಮ್ಮ ಹಿಡಿತವನ್ನು ಬಲಪಡಿಸಿಕೊಳ್ಳುತ್ತಿದ್ದರಷ್ಟೇ ಎನ್ನುವುದನ್ನು ಗಮನಿಸುತ್ತಾರೆ. ಆಗಿನ್ನೂ ಭಾರತ ತನ್ನ ಸ್ವಾತಂತ್ರ್ಯವನ್ನು ಪೂರ್ಣವಾಗಿ ಕಳೆದುಕೊಂಡಿರಲಿಲ್ಲ. ದೇಶದ ಕೆಲವು ಭಾಗಗಳು ಮಾತ್ರ ಈಸ್ಟ್‌ ಇಂಡಿಯಾ ಕಂಪೆನಿಯ ಆಡಳಿತಕ್ಕೆ ಒಳಪಟ್ಟಿದ್ದವು. ಬ್ರಿಟಿಷರ ವಿರುದ್ಧ ಹೋರಾಡುವಾಗಲೂ ತನ್ನ ಸ್ವಾತಂತ್ರ್ಯ ಹಾಗೂ ತನ್ನ ಆಡಳಿತವಿರುವ ಮೈಸೂರಿನ ರಕ್ಷಣೆಯಷ್ಟೇ ಟಿಪ್ಪುವಿನ ಉದ್ದೇಶವಾಗಿತ್ತು. ತಮ್ಮ ಪಕ್ಷ ಮಾತ್ರ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿತೆಂದು ಕಾಂಗ್ರೆಸಿಗರು ಹೇಳುತ್ತಿರಬಹುದು. ಆದರೆ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ (1857-59) ಮುಂಚೂಣಿಯಲ್ಲಿದ್ದು ಹೋರಾಡಿದ ಮಹಾರಾಜರು, ರಾಜರು, ನವಾಬರು ಹಾಗೂ ಜನರಲ್‌ಗ‌ಳೇ ಸ್ವಾತಂತ್ರ್ಯದ ಬೀಜವನ್ನು ದೇಶದ ಜನರ ಮನದಲ್ಲಿ ಬಿತ್ತಿ, ಚಳವಳಿಯಾಗಿ ಬೆಳೆಸಿದರೆಂಬುದನ್ನು ಮರೆಯಬಾರದು.

ಮಹಾರಾಣಿ ಲಕ್ಷಮ್ಮಣ್ಣಿ
ಟಿಪ್ಪು ಮೈಸೂರಿನ ಸ್ವಯಂಘೋಷಿತ ಸುಲ್ತಾನನಾಗಿದ್ದ. ಆದರೆ, 1761ರಿಂದ 1782ರ ವರೆಗೆ ಮೈಸೂರನ್ನು ಆಳಿದ್ದ ಹೈದರ್‌ ಆಲಿ ತನ್ನನ್ನು ತಾನು ಫೌಜ್‌ದಾರ್‌ ಅಥವಾ ಶಾಸಕ ಎಂದು ಕರೆದು ಕೊಂಡಿದ್ದ. ಟಿಪ್ಪುವಿನಂತೆ ಮೈಸೂರು ಸಿಂಹಾಸನದ ಮೇಲೆ ಆತನೆಂದೂ ವಿರಾಜಮಾನನಾಗಲಿಲ್ಲ. ಆದರೆ, ಇಬ್ಬರೂ ಒಡೆಯರ್‌ ಕೈಯಿಂದ ಅಧಿಕಾರವನ್ನು ಕಿತ್ತುಕೊಂಡವರೇ.

ಈ ಇಬ್ಬರಿಗೂ ಮಗ್ಗುಲ ಮುಳ್ಳಾಗಿದ್ದವರೆಂದರೆ ಇಮ್ಮಡಿ ಕೃಷ್ಣ ರಾಜ ಒಡೆಯರ್‌ ಅವರ ರಾಣಿಯಾಗಿದ್ದ ಮಹಾರಾಣಿ ಲಕ್ಷಮ್ಮಣ್ಣಿ (1742-1810) ಅವರು. ನಮ್ಮ ಮಕ್ಕಳಿಗೆ ಟಿಪ್ಪುಗಿಂತಲೂ ಲಕ್ಷಮ್ಮಣ್ಣಿ ಅವರ ಕತೆಯನ್ನು ಹೇಳುವ ಅಗತ್ಯವಿದೆ. ಬೆಂಗಳೂರಿನಲ್ಲಿರುವ ಒಂದು ಖಾಸಗಿ ಕಾಲೇಜು ಮಾತ್ರ ಅವರ ಹೆಸರನ್ನು ಹೊಂದಿದೆ, ಅದೂ ಅದರ ಸ್ಥಾಪಕರಲ್ಲಿ ಒಬ್ಬರಾದ ಇತಿಹಾಸ ತಜ್ಞ ಪ್ರೊ| ವೆಂಕಟಸುಬ್ಬ ಶಾಸ್ತ್ರಿ ಅವರ ಕಾರಣದಿಂದ. ಟಿಪ್ಪುವನ್ನು ಪದಚ್ಯುತಗೊಳಿಸುವುದಕ್ಕಾಗಿ ಈ ಮಹಾರಾಣಿ ಬ್ರಿಟಿಷರು, ಮರಾಠರು ಹಾಗೂ ನಿಜಾಮರೊಂದಿಗೆ ಸಂಪರ್ಕ ಸಾಧಿಸಿದ್ದರು!

ಟಿಪ್ಪು ಕುರಿತಾಗಿ ನಮ್ಮ ಪಠ್ಯಗಳು ಹೇಳಬೇಕಾಗಿರುವುದೇನು ಎನ್ನುವ ಕುರಿತು: ಬ್ರಿಟಿಷರ ವಿರುದ್ಧ ಟಿಪ್ಪು ಮಾಡಿದ ಯುದ್ಧಗಳನ್ನು ಶ್ಲಾ ಸುವ ಜತೆಗೆ, ಅವನ ಕೆಲವು ದುಷ್ಕೃತ್ಯಗಳನ್ನೂ ಪಠ್ಯದಿಂದ ತೆಗೆದುಹಾಕುವುದು ಸಾಧ್ಯವಿಲ್ಲ. ಇತಿಹಾಸದ ಮೇಲಿನ ಬಹುತೇಕ ಪಠ್ಯಪುಸ್ತಕಗಳು ಅವುಗಳ ರಾಷ್ಟ್ರೀಕರಣಕ್ಕಿಂತಲೂ ಮುಂಚಿನವು. ಎನ್‌ಸಿಇಆರ್‌ಟಿ (ನ್ಯಾಷನಲ್‌ ಕೌನ್ಸಿಲ್‌ ಫಾರ್‌ ಎಜುಕೇಶನಲ್‌ ರಿಸರ್ಚ್‌ ಆಂಡ್‌ ಟ್ರೈನಿಂಗ್‌) ಹಾಗೂ ಸಹಯೋಗಿ ಸಂಸ್ಥೆಗಳು ಅನುಮೋದಿಸಿದ ಮೇಲೆಯೇ ಪ್ರಕಟಿಸಿದವುಗಳು. ಅನ್ಯಧರ್ಮೀ ಯರ ವಿಚಾರದಲ್ಲಿ ಮುಸ್ಲಿಂ ದೊರೆಗಳು ತಾರತಮ್ಯ ಮಾಡಿರು ವುದಕ್ಕೆ ಸಾಕಷ್ಟು ನಿದರ್ಶನಗಳೂ ಇವೆ. ಅಲ್ಲಾವುದ್ದೀನ್‌ ಖೀಲ್ಜಿಯ ಜನರಲ್‌ ಆಗಿದ್ದ ಮಲಿಕ್‌ ಕಾಫ‌ರ್‌ ಹೊಯ್ಸಳ ಸಾಮ್ರಾಜ್ಯದ ಹಳೆಬೀಡು ಸಹಿತ ಹಲವು ದೇಗುಲಗಳನ್ನು ನಾಶ ಮಾಡಿರುವುದನ್ನು ನಾವು ಓದಿಲ್ಲವೇ? ಈಗಿನ ಆಂಧ್ರ ಪ್ರದೇಶದಲ್ಲಿರುವ ದೇವಗಿರಿಯ ಆಡಳಿತಗಾರರ ಮೇಲೆ ಖೀಲ್ಜಿ ತೋರಿದ ಅನಾಗರಿಕತೆ, ದಿಲ್ಲಿಯ ಸಾಮಂತ ದೊರೆ ಗಯಾಸುದ್ದೀನ್‌ ಬಲ್ಬನ್‌, ಅಕºರನ ಎಲ್ಲ ಸೆಕ್ಯುಲರಿಸಂ ತಣ್ತೀಗಳನ್ನು ಮಣ್ಣುಪಾಲು ಮಾಡಿದ ಔರಂಗಜೇಬನ ಕೋಮುವಾದ – ಎಷ್ಟು ನಿದರ್ಶನಗಳು ಬೇಕು? ಅಕºರ್‌ ನಿಷೇಧಿ ಸಿದ್ದ ತಲೆಕಂದಾಯ (ಜೆಝಿಯಾ) ವನ್ನು ಹಿಂದೂ ಪ್ರಜೆಗಳ ಮೇಲೆ ಔರಂಗಜೇಬ ಮತ್ತೆ ಹೇರಿಲ್ಲವೇ? ಮತಾಂತರಕ್ಕೆ ಒಪ್ಪದ ಹಿಂದೂಗಳು ಮುಸ್ಲಿಂ ಆಳ್ವಿಕೆಯ ರಾಜ್ಯದಲ್ಲಿ ಎರಡನೇ ದರ್ಜೆಯ ಪ್ರಜೆಗಳೆಂದು ನಿರೂಪಿಸಲು ತಲೆ ಕಂದಾಯ ವಿಧಿಸಲಾಗುತ್ತಿತ್ತು.

ಮಕ್ಕಳಿಗಾಗಿ ಸಿದ್ಧಪಡಿಸುವ ಸಮಾಜ ವಿಜ್ಞಾನದ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನನ ಕುರಿತಾದ ಅಧ್ಯಾಯಗಳನ್ನು ಉಳಿಸಿಕೊಳ್ಳಬೇಕೇ ಅಥವಾ ಅಳಿಸಿಹಾಕಬೇಕೇ ಎನ್ನುವುದನ್ನು ಪರಾಮರ್ಶಿಸಲು ಸಮಿತಿಯೊಂದನ್ನು ರಚಿಸುವ ಮಾತುಗಳೂ ಕೇಳಿಬಂದಿವೆ. ಸಮಿತಿಯಲ್ಲಿ ಇತಿಹಾಸಜ್ಞರು, ಅನುಭವಿ ಶಿಕ್ಷಕರು, ಮಕ್ಕಳ ಶಿಕ್ಷಣದ ತಜ್ಞರು ಇದ್ದರೆ ಸೂಕ್ತ. ಅಧಿಕಾರದಲ್ಲಿರುವ ಪಕ್ಷ ಯಾವುದೇ ಆದರೂ ಅಧಿಕಾರಿಗಳಿಗೆ ಈ ಸಮಿತಿಯಲ್ಲಿ ಸ್ಥಾನವಿದ್ದೇ ಇರುತ್ತದೆ. ಶಿಕ್ಷಣದ ಗುಣಮಟ್ಟ (ವಿಶೇಷವಾಗಿ ಸಮಾಜ ವಿಜ್ಞಾನ ವಿಷಯದಲ್ಲಿ) ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣೇತರ ಕ್ಷೇತ್ರಗಳ ಪರಿಣತರ ಸಲಹೆಗಳೂ ಮಹತ್ವಪೂರ್ಣ ಆಗಬಹುದು.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

ರಾಜ್ಯದಲ್ಲಿ50 ಸಾವಿರ ಕೋಟಿ ರೂ. ಹೂಡಿಕೆ; ಇಂಧನ ಕ್ಷೇತ್ರದಲ್ಲಿ ಭರ್ಜರಿ ಒಪ್ಪಂದ

ರಾಜ್ಯದಲ್ಲಿ50 ಸಾವಿರ ಕೋಟಿ ರೂ. ಹೂಡಿಕೆ; ಇಂಧನ ಕ್ಷೇತ್ರದಲ್ಲಿ ಭರ್ಜರಿ ಒಪ್ಪಂದ

ವಿಧಾನ ಪರಿಷತ್‌ ಚುನಾವಣೆ: 3 ಪಕ್ಷಗಳಿಂದ 7 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ವಿಧಾನ ಪರಿಷತ್‌ ಚುನಾವಣೆ: 3 ಪಕ್ಷಗಳಿಂದ 7 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನ್ಯಾಯಾಂಗದಲ್ಲಿ ಪ್ರಕರಣಗಳು ತ್ವರಿತ ಇತ್ಯರ್ಥವಾಗಲಿ

ನ್ಯಾಯಾಂಗದಲ್ಲಿ ಪ್ರಕರಣಗಳು ತ್ವರಿತ ಇತ್ಯರ್ಥವಾಗಲಿ

ಚೀನ vs ತೈವಾನ್‌ : ಮಗದೊಂದು ಮಹಾಯುದ್ಧ?

ಚೀನ vs ತೈವಾನ್‌ : ಮಗದೊಂದು ಮಹಾಯುದ್ಧ?

ಚೀನಕ್ಕೆ ಬಿಸಿ ಮುಟ್ಟಿಸುವಲ್ಲಿ ಕ್ವಾಡ್‌ ಯಶಸ್ವಿ

ಚೀನಕ್ಕೆ ಬಿಸಿ ಮುಟ್ಟಿಸುವಲ್ಲಿ ಕ್ವಾಡ್‌ ಯಶಸ್ವಿ

ಅಗ್ನಿಶಾಮಕ ಇಲಾಖೆಯಲ್ಲೂ ನೇಮಕಾತಿ ಅಕ್ರಮ:  7 ಮಂದಿ ಮೇಲೆ ಪ್ರಕರಣ ದಾಖಲು

ಅಗ್ನಿಶಾಮಕ ಇಲಾಖೆಯಲ್ಲೂ ನೇಮಕಾತಿ ಅಕ್ರಮ:  7 ಮಂದಿ ಮೇಲೆ ಪ್ರಕರಣ ದಾಖಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

ಹೊಸ ಸೇರ್ಪಡೆ

ರಾಜ್ಯದಲ್ಲಿ50 ಸಾವಿರ ಕೋಟಿ ರೂ. ಹೂಡಿಕೆ; ಇಂಧನ ಕ್ಷೇತ್ರದಲ್ಲಿ ಭರ್ಜರಿ ಒಪ್ಪಂದ

ರಾಜ್ಯದಲ್ಲಿ50 ಸಾವಿರ ಕೋಟಿ ರೂ. ಹೂಡಿಕೆ; ಇಂಧನ ಕ್ಷೇತ್ರದಲ್ಲಿ ಭರ್ಜರಿ ಒಪ್ಪಂದ

ವಿಧಾನ ಪರಿಷತ್‌ ಚುನಾವಣೆ: 3 ಪಕ್ಷಗಳಿಂದ 7 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ವಿಧಾನ ಪರಿಷತ್‌ ಚುನಾವಣೆ: 3 ಪಕ್ಷಗಳಿಂದ 7 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನ್ಯಾಯಾಂಗದಲ್ಲಿ ಪ್ರಕರಣಗಳು ತ್ವರಿತ ಇತ್ಯರ್ಥವಾಗಲಿ

ನ್ಯಾಯಾಂಗದಲ್ಲಿ ಪ್ರಕರಣಗಳು ತ್ವರಿತ ಇತ್ಯರ್ಥವಾಗಲಿ

ಚೀನ vs ತೈವಾನ್‌ : ಮಗದೊಂದು ಮಹಾಯುದ್ಧ?

ಚೀನ vs ತೈವಾನ್‌ : ಮಗದೊಂದು ಮಹಾಯುದ್ಧ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.