Udayavni Special

ಪ್ರಮಾಣ ವಚನವೂ, ಜನನಾಯಕರ ಜಾಯಮಾನವೂ


Team Udayavani, Dec 5, 2019, 5:09 AM IST

udbhav

ಪ್ರಮಾಣವಚನಕ್ಕೆ ಸಂಬಂಧಿಸಿದ ವಿಧಿಯನ್ನು ನಿರ್ವಹಿಸುವಾಗ, ಅದರ ಮಾದರಿಯನ್ನು ತಮ್ಮ ಇಚ್ಛೆಗನುಗುಣವಾಗಿ ಬಳಸಿಕೊಳ್ಳುವ ಮಂತ್ರಿ ಮಹೋದಯರು, ಸಂಸತ್‌ ಸದಸ್ಯರು ಹಾಗೂ ಶಾಸಕರುಗಳ ನಡವಳಿಕೆ ಸಂವಿಧಾನದ ವಿರೋಧಿ ಎನ್ನುವಂತಿಲ್ಲವೆಂಬುದು ನಿಜವಿರಬಹುದು. ಆದರೆ ಇದು ಶಿಷ್ಟಾಚಾರದ ಉಲ್ಲಂಘನೆಯಂತೂ ಹೌದು.

ನಮ್ಮ ಮಂತ್ರಿಗಳು, ಸಂಸತ್‌ ಸದಸ್ಯರು ಹಾಗೂ ಶಾಸಕರು ಚುನಾವಣೆಯಲ್ಲಿ ಗೆದ್ದು ಬಂದಾಗ ದೇವರ ಹೆಸರಿನಲ್ಲಿ, ಸತ್ಯದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ಒಂದು ಸಂವಿಧಾನದ ಪ್ರಣೀತ ವಿಧಿ. ಈ ಸಂದರ್ಭದಲ್ಲಿ ಅವರು ಸಂವಿಧಾನ ಮತ್ತು ಕಾನೂನಿಗೆ ಅನುಸಾರವಾಗಿ, ಯಾವುದೇ ಭೀತಿ ಅಥವಾ ಪಕ್ಷಪಾತ ರಹಿತವಾಗಿ, ಪ್ರೀತಿ-ದ್ವೇಷಗಳಿಗೆ ಒಳಪಡದೆ ಕರ್ತವ್ಯ ನಿರ್ವಹಿಸುವುದಾಗಿಯೂ ಘೋಷಿಸುತ್ತಾರೆ. ಕೇಂದ್ರದ ಮಂತ್ರಿಗಳೇ ಆಗಲಿ, ರಾಜ್ಯಗಳ ಸಚಿವರುಗಳೇ ಆಗಲಿ, ಅಧಿಕಾರದ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲೇ, ಅಧಿಕಾರಕ್ಕೆ ಸಂಬಂಧಿಸಿದ ಗೋಪ್ಯವನ್ನು ಕಾಪಾಡುವ ಬಗೆಗಿನ ಶಪಥವನ್ನೂ ಕೈಗೊಳ್ಳುತ್ತಾರೆ. ಇವರು ಮಾತ್ರವಲ್ಲ, ಸರ್ವೋಚ್ಚ ನ್ಯಾಯಾಲಯ ಹಾಗೂ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ಹಾಗೆಯೇ ಭಾರತದ ಮಹಾಲೇಖಪಾಲರು (ಕಂಪೊóàಲರ್‌ ಆ್ಯಂಡ್‌ ಆಡಿಟರ್‌ ಜನರಲ್‌) ಕೂಡ ತಮ್ಮ ವೃತ್ತಿ ನಿರ್ವಹಣೆಗೆ ಸಂಬಂಧಿಸಿದ ಪ್ರಮಾಣ ವಚನವನ್ನು ಸ್ವೀಕರಿಸಬೇಕಾಗುತ್ತದೆ. ಅಧಿಕಾರ ಗ್ರಹಣದ ಪ್ರಮಾಣ ವಚನದ ಒಕ್ಕಣೆಯನ್ನು ನಮ್ಮ ಸಂವಿಧಾನದ ತೃತೀಯ ಪರಿಚ್ಛೇದದಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ.

ಈ ಪ್ರಮಾಣ ವಚನಗಳ ಒಕ್ಕಣೆಗಳನ್ನು ಕೂಡ ರಾಷ್ಟ್ರೀಯ ಏಕತಾ ಮಂಡಳಿಯ ಶಿಫಾರಸಿನ ಮೇರೆಗೆ 1963ರಲ್ಲಿ ಸಂವಿಧಾನದ 16ನೆಯ ತಿದ್ದುಪಡಿ ಮೂಲಕ ಕೊಂಚ ಬದಲಾಯಿಸಲಾಗಿದೆ. ಅರ್ಥಾತ್‌ ಮೂಲ ಪಾಠಕ್ಕೆ ಒಂದು ಒಕ್ಕಣೆಯನ್ನು ಸೇರ್ಪಡೆಗೊಳಿಸಲಾಗಿದೆ. ಆ ಒಕ್ಕಣೆಯೆಂದರೆ “”ಭಾರತದ ಸಾರ್ವಭೌಮತೆ ಹಾಗೂ ಏಕತೆಯನ್ನು ನಾನು ಎತ್ತಿ ಹಿಡಿಯುತ್ತೇನೆ” ಎಂಬುದಾಗಿದೆ. 1950ರಲ್ಲಿ ಜಾರಿಗೊಳಿಸಲಾದ ಮೂಲ ಸಂವಿಧಾನದಲ್ಲಿ ಈ ಒಕ್ಕಣೆ ಇರಲಿಲ್ಲ. ಬಹುಶಃ ಕಾಶ್ಮೀರದ ಸ್ವಾಯತ್ತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದ ಜಮ್ಮು-ಕಾಶ್ಮೀರದ ಸಚಿವರುಗಳಲ್ಲಿ ಕೆಲವರು ಕೊಂಚ, ಹಿಂಜರಿಕೆಯಿಂದಲೇ “ಸಾರ್ವಭೌಮತೆ’ ಹಾಗೂ “ಏಕತೆ’ ಎಂಬ ಪದಗಳನ್ನು ಉಚ್ಚರಿಸುತ್ತಿದ್ದಿರಬೇಕು! ಮೇಲೆ ಉಲ್ಲೇಖೀಸಲಾದ ಜನನಾಯಕರು ಹಾಗೂ ನ್ಯಾಯಾಧೀಶರಲ್ಲದೆ ಹೀಗೆ ಅಧಿಕಾರದ ಪ್ರಮಾಣವಚನ ಸ್ವೀಕರಿಸುವ ಮಂದಿ ಇನ್ನೂ ಕೆಲವರಿದ್ದಾರೆ. ಜಾಗೃತದಳದ ಆಯುಕ್ತರು, ಗುಪ್ತಚರ ಇಲಾಖೆಯ ಆಯುಕ್ತರು, ಲೋಕಾಯುಕ್ತರು ಹಾಗೂ ಉಪಲೋಕಾಯುಕ್ತರು ಇತ್ಯಾದಿ.

ಆದರೆ ಇಂದಿನ ಪ್ರಕ್ಷುಬ್ಧ ರಾಜಕೀಯ ಸಂದರ್ಭದಲ್ಲಿ ಕೇಳಬೇಕಾದ ಪ್ರಶ್ನೆ ಎಂದರೆ ಇಂಥ ಪ್ರಮಾಣ ವಚನದ ಒಕ್ಕಣೆಯನ್ನು ಎಷ್ಟೋ ಬಾರಿ ಯಾಂತ್ರಿಕವಾಗಿಯೇ ಓದಿ ಹೇಳುವ ನಮ್ಮ ಸಚಿವರುಗಳು ಹಾಗೂ ಶಾಸಕರುಗಳು ತಾವು ಕೈಗೊಳ್ಳುವ ಪ್ರತಿಜ್ಞೆಗೆ ನಿಜಕ್ಕೂ ಬದ್ಧರಾಗಿದ್ದಾರೆಯೇ? ಕೆಲವರಂತೂ ಕನ್ನಡದಲ್ಲೇ ಆಗಲಿ, ಇಂಗ್ಲಿಷಿನಲ್ಲೇ ಆಗಲಿ ಇರುವ ಒಕ್ಕಣೆಯನ್ನು ಓದುವಾಗಲೂ ತಡ ಬಡಿಸುತ್ತಾರೆ. ಉದಾಹರಣೆಗೆ, ಕೆಲವರಿಗೆ “ಕಾನ್ಶಿಯೆನ್ಶಸ್‌ಲಿ’ (ಆತ್ಮಸಾಕ್ಷಿಗೆ ಅನುಗುಣವಾಗಿ) ಎಂಬ ಪದವನ್ನು ಉಚ್ಚರಿಸುವುದು ಕಷ್ಟವಾಗುತ್ತದೆ. ಕೇಂದ್ರದಲ್ಲಿನ ನರೇಂದ್ರ ಮೋದಿ ಸರಕಾರದ ಮಂತ್ರಿಗಳ ಪೈಕಿ ಅನೇಕರು ಹಿಂದಿಯಲ್ಲಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ.

ಲೋಕಸಭಾ ಸದಸ್ಯರಾಗಿ ಬಂದವರ ಪೈಕಿ ಕೆಲ ಹೊಸಬರು ಇಂಗ್ಲಿಷ್‌ನಲ್ಲೇ ಪ್ರಮಾಣ ವಚನ ಸ್ವೀಕರಿಸಿದರು. ಅನೇಕರು ತಮ್ಮ ರಾಜ್ಯಭಾಷೆಯನ್ನೇ ಆಯ್ಕೆ ಮಾಡಿಕೊಂಡರು; ಕೆಲ ಸದಸ್ಯರು ಸಂಸ್ಕೃತದ ಒಕ್ಕಣೆಯನ್ನು ಆಯ್ದುಕೊಂಡರು.

ಈ ಹಿಂದೆ ನಮ್ಮ ಮಂತ್ರಿಗಳ ಪದಗ್ರಹಣ ಸಮಾರಂಭಗಳ ಬಗ್ಗೆ ವರದಿ ಮಾಡಿರುವ ಈ ಅಂಕಣಕಾರ ಒಬ್ಬ ವರದಿಗಾರನ ಅನುಭವದಲ್ಲಿ ಹೇಳುವುದಾದರೆ, ಹೀಗೆ ರಾಜ್ಯದ ಆಡಳಿತದ/ ಅಧಿಕಾರದ ಪ್ರಮಾಣ ವಚನ ಸ್ವೀಕರಿಸುವ ಹೆಚ್ಚಿನವರು ತಮ್ಮ “ಯಾನ’ವನ್ನು ತಮ್ಮ ಎಡಗಾಲನ್ನು ಮುಂದಿಟ್ಟೇ ಆರಂಭಿಸುತ್ತಾರೆ. ಅಧಿಕಾರ ಹಾಗೂ ಗೋಪ್ಯ ಕುರಿತ ತಮ್ಮ ಪ್ರತಿಜ್ಞೆಯನ್ನು ಮುರಿಯುವ ಮೂಲಕ ಅವರು ಸಂವಿಧಾನದ ನಿಬಂಧನೆಯನ್ನು ಉಲ್ಲಂ ಸುತ್ತಾರೆ. ಕಾನೂನಿನ ದೃಷ್ಟಿಯಿಂದ ಇಂಥ “ಪ್ರತಿಜ್ಞಾ ಭಂಗ’ದಿಂದ ಅವರು ಅನರ್ಹನೆನ್ನಿಸಿಕೊಳ್ಳಲಾರರೇನೋ ನಿಜ.

ಅರ್ಥಾತ್‌ ಓರ್ವ ಸಚಿವನಾಗಿ ಅಥವಾ ಶಾಸಕನಾಗಿ ಕರ್ತವ್ಯ ನಿರ್ವಹಿಸುವಿಕೆಗೆ ಇಂಥ “ವಚನಭಂಗ’ ಅಡ್ಡಿಯಾಗಲಾರದು ಎಂಬ ಅಂಶವನ್ನು ಇಲ್ಲಿ ಉಲ್ಲೇಖೀಸಬಹುದಾಗಿದೆ.

ಮಹಾರಾಷ್ಟ್ರ ಮೈತ್ರಿಕೂಟದ ಮಂತ್ರಿಗಳ ಪದಗ್ರಹಣ ಪ್ರಮಾಣ ವಚನದ ವಿಷಯ ಇಲ್ಲಿ ಪ್ರಸ್ತಾವಿಸಲ್ಪಟ್ಟಿರುವುದಕ್ಕೆ ಕಾರಣವಿಲ್ಲದೆ ಇಲ್ಲ. ನ. 30ರಂದು ಮುಂಬಯಿಯಲ್ಲಿ ಶಿವಸೇನಾ ನಾಯಕ ಉದ್ಧವ್‌ ಠಾಕ್ರೆಯವರ ನೇತೃತ್ವದ ನೂತನ ಮೈತ್ರಿಕೂಟ ಸರಕಾರದ (ಮಹಾರಾಷ್ಟ್ರ ವಿಕಾಸ್‌ ಅಘಾಡಿ) ಪ್ರತಿಜ್ಞಾ ವಿಧಿ ಸಮಾರಂಭ ನಡೆಯಿತಷ್ಟೆ? ಎರಡೂ ಪ್ರಮಾಣ ವಚನ ಪಠ್ಯಗಳ (ಅಧಿಕಾರ ಹಾಗೂ ಗೋಪ್ಯ) ವಾಚನಕ್ಕೆ ಮುನ್ನ ಮುಖ್ಯಮಂತ್ರಿ ಹಾಗೂ ಅವರ ಎಲ್ಲ ಸಚಿವರುಗಳೂ ಛತ್ರಪತಿ ಶಿವಾಜಿ, ಡಾ| ಬಿ.ಆರ್‌. ಅಂಬೇಡ್ಕರ್‌ ಹಾಗೂ ಮಹಾತ್ಮಾ ಜ್ಯೋತಿಬಾಫ‌ುಲೆ ಇವರುಗಳ ಹೆಸರುಗಳನ್ನು ಹೇಳಿಯೇ ಮುಂದುವರಿದರು. ಈ ಮಹನೀಯರ ಹೆಸರುಗಳನ್ನು ಉಲ್ಲೇಖೀಸುವುದು ಪ್ರತಿಜ್ಞಾ ವಿಧಿಯ ಅಂಗವೇನಲ್ಲ. ರಾಜ್ಯಪಾಲ ಕೋಶಿಯಾರಿ ಅವರು ಈ ವಿಷಯದಲ್ಲಿ ಏನು ಮಾಡಲೂ ಸಾಧ್ಯವಾಗಲಿಲ್ಲ. ಆದರೆ ನರೇಂದ್ರ ಮೋದಿ ಸಂಪುಟದ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸುವ ಸಂದರ್ಭದಲ್ಲಿ (ಮೇ 2019) ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು, ಓದುವಿಕೆಯಲ್ಲಿ ಏನಾದರೂ ತಪ್ಪಾದರೆ ಅದನ್ನು ಅಲ್ಲಿಯೇ ಸರಿಪಡಿಸುತ್ತಿದ್ದರು. ಕೇವಲ ಒಬ್ಬ ಸಚಿವರಷ್ಟೇ, ಪ್ರತಿಜ್ಞಾ ವಿಧಿ ಪೂರೈಸಿದ ಬಳಿಕ “ಭಾರತ್‌ ಮಾತಾಕೀ ಜೈ’ ಎಂದು ಘೋಷಿಸಿದರು (ತೆಲಂಗಾಣದ ಕೃಷ್ಣಾ ರೆಡ್ಡಿ). ಮಹಾರಾಷ್ಟ್ರ ಸಚಿವ ಸಂಪುಟದ ಪದಗ್ರಹಣ ಸಮಾರಂಭದಲ್ಲಿ ಕಣ್ಣು ಕೋರೈಸುವಂತಿದ್ದ ಒಂದು ಅಂಶವೆಂದರೆ, ವೇದಿಕೆಯಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಇರಿಸಲಾಗಿದ್ದುದು. ಮುಖ್ಯಮಂತ್ರಿ ಹಾಗೂ ಅವರ ಮಂತ್ರಿಗಳು ಶಿವಾಜಿ ಪ್ರತಿಮೆಗೆ ವಿದ್ಯುಕ್ತ ನಮನ ಸಲ್ಲಿಸಿದರು. ಹಾಗೆ ನೋಡಿದರೆ ಈ ಸಮಾರಂಭ ನಡೆದದ್ದೇ ಮುಂಬಯಿಯ ಶಿವಾಜಿ ಪಾರ್ಕ್‌ನಲ್ಲಿ. ಅಂಥದೊಂದು ಅಮೂಲ್ಯ ವಿಶಾಲವಾದ ಜಾಗದಲ್ಲಿ ಅಂದು ಶಿವಸೇನೆಯ ಸ್ಥಾಪಕ ಬಾಳಾ ಠಾಕ್ರೆಯವರ ಶವ ಸಂಸ್ಕಾರ ನಡೆಸಲು ಅಧಿಕಾರಿಗಳು ಹೇಗೆ ಅವಕಾಶ ನೀಡಿದರು ಎಂಬುದೇ ಅಚ್ಚರಿಯ ವಿಷಯ.

ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ, ಉದ್ಧವ್‌ ಮತ್ತಿತರ ಮಂತ್ರಿಗಳ ಪದಗ್ರಹಣ ಸಮಾರಂಭದಲ್ಲಿ ಶಿಷ್ಟಾಚಾರಗಳನ್ನು ಗಾಳಿಗೆ ತೂರಲಾಗಿದೆ ಎಂದು ಆಕ್ಷೇಪಿಸುವ ಮೂಲಕ ತನ್ನ ಪ್ರತಿಭಟನೆ ವ್ಯಕ್ತಪಡಿಸಿದೆ. ಅದರ ಪ್ರತಿಭಟನೆ ನ್ಯಾಯೋಚಿತವೇ ಆಗಿದೆ. “ಪ್ರತಿಜ್ಞೆ ಸ್ವೀಕರಿಸುವ ಮುನ್ನ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಉಲ್ಲೇಖೀಸಲು ನಾನು ಯಾಕೆ ಭಯಪಡಬೇಕು? ನಾನು ಇನ್ನೂ ಅದನ್ನೇ ಮಾಡುತ್ತೇನೆ’ ಎಂದು ಉದ್ಧವ್‌ ಠಾಕ್ರೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರೆಂದು ವರದಿಯಾಗಿದೆ.

ಹಾಗೆ ನೋಡಿದರೆ ಲೋಕಸಭೆಯಲ್ಲಿನ ಬಿಜೆಪಿ ಸದಸ್ಯರು ಕೂಡ ತಾವು ಸ್ವೀಕರಿಸಿದ್ದ ಪ್ರಮಾಣ ವಚನದ ಪಠ್ಯಕ್ಕೆ ಬದ್ಧರಾಗಿಯೇ ನಡೆದುಕೊಂಡಿದ್ದಾರೆ ಎಂದು ಹೇಳುವ ಹಾಗಿಲ್ಲ. ಭೋಪಾಲದ ಸಾಧ್ವಿ ಪ್ರಜ್ಞಾ ಠಾಕೂರ್‌ ತಮ್ಮ ಆಧ್ಯಾತ್ಮಿಕ ಗುರು, ಸ್ವಾಮಿ ಪೂರ್ಣ ಚೇತಾನಂದ್‌ ಅವರ ಹೆಸರನ್ನು ಸೇರಿಸಿಯೇ ಪ್ರತಿಜ್ಞೆ ಸ್ವೀಕರಿಸಿದರು. ಇತ್ತೀಚೆಗಷ್ಟೇ ಆಕೆ “ನಾಥೂರಾಂ ಗೋಡ್ಸೆ ಓರ್ವ ದೇಶ ಭಕ್ತ’ ಎಂಬ ಹೇಳಿಕೆ ನೀಡಿದ್ದಕ್ಕಾಗಿ ಛೀಮಾರಿಗೊಳಗಾದರು. ಆಕೆಯ ಪಕ್ಷದ ಕೆಲ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ “ಜೈ ಶ್ರೀರಾಂ’ ಎಂಬ ಘೋಷಣೆ ಮೊಳಗಿಸಿದರು. “”ಹೀಗೆ ಘೋಷಿಸುವುದಕ್ಕೆ ಇದು ಧಾರ್ಮಿಕ ಸ್ಥಳವಲ್ಲ; ಬೇಕಿದ್ದರೆ ಅವರು ದೇವಾಲಯಗಳಲ್ಲಿ ಹೀಗೆ ಮಾಡಲಿ” ಎಂಬ ಹೇಳಿಕೆಯ ಮೂಲಕ ಪಕ್ಷೇತರ ಸದಸ್ಯೆಯಾದ ನವನೀತ್‌ ಕೌರ್‌ ರಾಣಾ ಅವರು ಇಂಥ ಘೋಷಣೋತ್ಸಾಹದ ಬಗ್ಗೆ ಖಾರವಾದ ಪ್ರತಿಕ್ರಿಯೆ ವ್ಯಕ್ತಪಡಿಸುವಂತಾಯಿತು.

ಕರ್ನಾಟಕದಲ್ಲಿ ಇದು “ಕುಟುಂಬ ಸಮಾರಂಭ!’
ಇನ್ನು ಈ ವಿಷಯದಲ್ಲಿ ನಮ್ಮ ಕರ್ನಾಟಕದ ಸಚಿವರು-ಶಾಸಕರೇ ಉತ್ತಮ ಎನ್ನುವಂತಿಲ್ಲ. ಈ ಸಂವಿಧಾನ ಪ್ರಣೀತ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಅವರೂ ಸಾಕಷ್ಟು ಮುಂದೆಯೇ ಇದ್ದಾರೆ. ನಮ್ಮ ನಾಯಕರಲ್ಲಿ ಅನೇಕರು ತಮ್ಮ ಕುಲದೇವತೆಯ (ಅಥವಾ ಗ್ರಾಮ ದೇವತೆಯ) ಅಥವಾ ತಮ್ಮ “ರಾಜಕೀಯ ಗುರು’ಗಳ, ಅಥವಾ ಡಾ| ಅಂಬೇಡ್ಕರ್‌ ಅವರ ಹೆಸರನ್ನು ಎಳೆದು ತಂದು ಒಕ್ಕಣೆಯಲ್ಲಿ ಸೇರಿಸಿಕೊಂಡು ಓದಿಬಿಡುತ್ತಾರೆ. ಕಾಂಗ್ರೆಸಿಗರಲ್ಲಿ ಕೂಡ ಮಹಾತ್ಮಾ ಗಾಂಧಿಯವರ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸುವವರು ತುಂಬಾ ಕಡಿಮೆ. ಒಂದು ವೇಳೆ ಪ್ರತಿಜ್ಞಾ ಸ್ವೀಕಾರ ದೂರ ಸರಿಯುವ “ಖಯಾಲಿಗಳು’ ಇರುವುದಿಲ್ಲ. ಈ ರೀತಿ ಸಾಮೂಹಿಕವಾಗಿ ಪ್ರತಿಜ್ಞೆ ಸ್ವೀಕರಿಸುವ ವಿಧಿ ಈ ಹಿಂದೆ ನಡೆದದ್ದಿದೆ. ಆದರೆ ಹಾಗೆ ಓದುವಾಗ ಕೇಳಿ ಬರುವ ತಾಳಮೇಳವಿಲ್ಲದ ಸ್ವರಗಳು ಸಮಾರಂಭದ ಗಾಂಭೀರ್ಯವನ್ನು ಹಾಳುಗೆಡವಬಹುದು. ಎಲ್ಲೋ ಕೆಲವರ ಧ್ವನಿ ಎಲ್ಲೋ ಕೆಲವರಿಗಷ್ಟೇ ಕೇಳಿಸಬಹುದು. ಅದೃಷ್ಟವಶಾತ್‌ ಇಂಥ “ಸಮೂಹ ಪ್ರತಿಜ್ಞೆ’ಯ ಕ್ರಮವನ್ನು ಈಚಿನ ದಿನಗಳಲ್ಲಿ ಕೈ ಬಿಡಲಾಗಿದೆ. ಆದರೆ ಕೇಂದ್ರ ಸಚಿವ ಸಂಪುಟದ ಪದಗ್ರಹಣ ಸಮಾರಂಭದಲ್ಲಿ ನಡೆಯುವಂತೆ ಒಬ್ಬೊಬ್ಬ ಮಂತ್ರಿಯೂ ಪ್ರತ್ಯಪ್ರತ್ಯೇಕವಾಗಿ ಪ್ರತಿಜ್ಞೆ ಸ್ವೀಕರಿಸುವುದೇ ಸೂಕ್ತ ಕ್ರಮ. ಈ ಪ್ರಕ್ರಿಯೆಗೆ ಹೆಚ್ಚು ಸಮಯ ಹಿಡಿಯಬಹುದಾದರೂ ಇದೇ ಸರಿಯಾದ ಪದ್ಧತಿ. ಮಂತ್ರಿಗಳ ನೇಮಕದಂಥ ಗಂಭೀರ ವಿಷಯಗಳ ಮಟ್ಟಿಗೆ ಅಡ್ಡದಾರಿಗಳನ್ನು ಬಳಸಿಕೊಳ್ಳುವುದು ಸೂಕ್ತವೆನಿಸಲಾರದು.

ಪ್ರತಿಜ್ಞಾ ಸ್ವೀಕಾರ ವಿಧಿಗೂ ಒಂದು ಇತಿಹಾಸವಿದೆ. 1840 ಹಾಗೂ 1873ರ ಭಾರತೀಯ ಪ್ರಮಾಣವಚನ ಕಾಯ್ದೆಗಳನ್ನು ರೂಪಿಸಿದವರು ಬ್ರಿಟಿಷ್‌ ಆಳ್ವಿಕೆಯಲ್ಲಿದ್ದ ಈಸ್ಟ್‌ ಇಂಡಿಯಾ ಕಂಪೆನಿಯ ಹಾಗೂ ಆ ಸಂಸ್ಥೆಯ ಬಳಿಕದ ವರ್ಷಗಳಲ್ಲಿ ಬಂದ ಬ್ರಿಟಿಷ್‌ ಅಧಿಕಾರಿಗಳು. ಈ ಕಾಯ್ದೆಗಳು ನ್ಯಾಯಾಲಯಗಳಲ್ಲಿ ಹಾಜರಾಗುವ ಸಾಕ್ಷಿದಾರರು ತೆಗೆದುಕೊಳ್ಳಬೇಕಾದ ಪ್ರತಿಜ್ಞೆಗೆ ಸಂಬಂಧಿಸಿದಂಥವು. ಆದರೂ ಬ್ರಿಟಿಷ್‌ ಆಳ್ವಿಕೆಯ ಪೂರ್ವದಲ್ಲೂ ನಮ್ಮ ದೇಶದಲ್ಲಿ ಕೋರ್ಟಿನಲ್ಲಿ ಪ್ರಮಾಣ ಮಾಡುವ ಕ್ರಮ ಚಾಲ್ತಿಯಲ್ಲಿತ್ತು. ಈ ನಿಯಮದನ್ವಯ, ಹಿಂದೂಗಳು ಗಂಗಾಜಲದ ಮೇಲೆ ಅಥವಾ ಭಗವದ್ಗೀತೆಯ ಮೇಲೆ; ಮುಸ್ಲಿàಮರು ಖುರಾನಿನ ಹೆಸರಿನಲ್ಲಿ ಪ್ರಮಾಣ ಮಾಡುವ ಕ್ರಮ ಉತ್ತರ ಭಾರತಕ್ಕೆ (ಗಂಗೆ ಹಾಗೂ ಆಕೆಯ ಉಪನದಿಗಳು ಹರಿಯುವ ರಾಜ್ಯಗಳಿಗೆ) ಅನ್ವಯವಾಗಬೇಕಲ್ಲವೆ? ಎಂದು ವಾದಿಸುವವರೂ ಇದ್ದಾರು. 1940ರ ಪ್ರಮಾಣವಚನ ಕಾಯ್ದೆ ವಿದ್ಯುಕ್ತ ರೀತಿಯ ಸತ್ಯವಚನದ ದೃಢೀಕರಣಕ್ಕೆ ಅವಕಾಶವಿತ್ತಿದೆ. ಇಂದಿನ ತಥಾಕಥಿತ “ವೈಚಾರಿಕ ನಿಲುವು’ ಅಂದಿನ ದಿನಗಳಲ್ಲಿ ಇರಲೇ ಇಲ್ಲ ಎಂದು ಹೇಳುವ ಹಾಗಿಲ್ಲ. ಧಾರ್ಮಿಕ ಗ್ರಂಥಗಳನ್ನು ಸ್ಪರ್ಶಿಸಿ ಪ್ರಮಾಣ ಮಾಡುವ ಕ್ರಮವನ್ನು ಕೊನೆಗೂ ನಿಷೇಧಿಸಲಾಯಿತು-1969ರ ಪ್ರತಿಜ್ಞಾವಿಧಿ ಕಾಯ್ದೆಯ ಮೂಲಕ.

ಅನೇಕರಿಗೆ ತಿಳಿದಿರಲಾರದ ಒಂದು ಸತ್ಯವಿದೆ. ನಮ್ಮ ದೇಶದಲ್ಲಿ ಸರಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲರೂ ಸಂವಿಧಾನಕ್ಕೆ ನಿಷ್ಠೆಯಿಂದ ನಡೆದುಕೊಳ್ಳುವೆನೆಂಬ ಪ್ರತಿಜ್ಞೆಯನ್ನು ಸ್ವೀಕರಿಸಬೇಕಾಗುತ್ತದೆ. ನಮ್ಮ ಪ್ರಾಚೀನ ಭಾರತದ ದೊರೆಗಳು ಹಾಗೂ ಅವರ ಮಂತ್ರಿಗಳು ಅಧಿಕಾರದ ಪ್ರತಿಜ್ಞೆ ಸ್ವೀಕರಿಸುತ್ತಿದ್ದರೇ ಇಲ್ಲವೇ ಎಂಬ ವಿಷಯದಲ್ಲಿ ಪರಸ್ಪರ ವಿರುದ್ಧಾಭಿಪ್ರಾಯಗಳು ವ್ಯಕ್ತವಾಗಿವೆ. ಆದರೂ ರಾಜವಂಶೀಯ ಆಳ್ವಿಕೆಯ ಮೈಸೂರಿನಲ್ಲಿ ಇಂಥದೊಂದು ಕ್ರಮವಿತ್ತು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು (1902ರಲ್ಲಿ) ಹಾಗೂ ಜಯಚಾಮರಾಜ ಒಡೆಯರು (1940)ರಲ್ಲಿ ಮೈಸೂರು ಪ್ರಾಂತ್ಯದ ಪ್ರಜೆಗಳ ಸೇವೆಗಾಗಿ ಶ್ರಮಿಸುವೆನೆಂಬ ಪ್ರಮಾಣ ವಚನವನ್ನು ಸ್ವೀಕರಿಸಿಯೇ ಪಟ್ಟವೇರಿದ್ದರು.

ಹೀಗೆ ಅಧಿಕಾರದ ಹಾಗೂ ಗೋಪ್ಯತೆ ಕುರಿತ ಪ್ರಮಾಣವಚನಕ್ಕೆ ಸಂಬಂಧಿಸಿದ ವಿಧಿಯನ್ನು ನಿರ್ವಹಿಸುವಾಗ, ಅದರ ಮಾದರಿಯನ್ನು ತಮ್ಮ ಇಚ್ಛೆಗನುಗುಣವಾಗಿ ಬಳಸಿಕೊಳ್ಳುವ ಮಂತ್ರಿ ಮಹೋದಯರು, ಸಂಸತ್‌ ಸದಸ್ಯರು ಹಾಗೂ ಶಾಸಕರುಗಳ ನಡವಳಿಕೆ ಸಂವಿಧಾನದ ವಿರೋಧಿ ಎನ್ನುವಂತಿಲ್ಲವೆಂಬುದು ನಿಜವಿರಬಹುದು. ಆದರೆ ಇದು ಶಿಷ್ಟಾಚಾರದ ಉಲ್ಲಂಘನೆಯಂತೂ ಹೌದು. ನಮ್ಮ ಮಂತ್ರಿಗಳು ಆರಂಭದಿಂದಲೇ ತಮ್ಮ ಮಾತು ಹಾಗೂ ಕೃತಿಗಳ ಮೇಲೆ ಕಣ್ಣಿಟ್ಟಿರಬೇಕಾಗುತ್ತದೆ. ಕರ್ತವ್ಯ ನಿರ್ವಹಣೆಯಲ್ಲಿ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವಲ್ಲಿ ವಿಫ‌ಲರಾದರೆಂಬ ಕಾರಣಕ್ಕಾಗಿ ಮಂತ್ರಿಗಳೆನ್ನಿಸಿಕೊಂಡವರು ನ್ಯಾಯಾಲಯದೆದುರು ಹಾಜರಾಗಬೇಕಾಗಿ ಬಂದ ಒಂದೆರಡು ಪ್ರಕರಣಗಳು ಈಗಾಗಲೇ ಆಗಿ ಹೋಗಿವೆ. ಇಂಥ ಒಂದು ಪ್ರಕರಣ ಕೇರಳ ನ್ಯಾಯಾಲಯದ ಮುಂದೆ ಬಂದಿತ್ತು. ಅದು ನ್ಯಾ| ವಿ.ಎಸ್‌. ಮಳೀಮs… ಅವರು ಮುಖ್ಯ ನ್ಯಾಯಾಧೀಶರಾಗಿದ್ದ ಕಾಲದಲ್ಲಿ (1985). ಕೇರಳದ ಕಾಂಗ್ರೆಸ್‌ ಸಚಿವ ಆರ್‌. ಬಾಲಕೃಷ್ಣ ಪಿಳ್ಳೆಯವರಿಗೆ ಸಂಬಂಧಿಸಿದ ಪ್ರಕರಣವಾಗಿತ್ತು ಇದು. ಕಲ್ಲಾರ ಸುಕುಮಾರನ್‌ ಎಂಬವರು ಈ ಕೇಸಿನಲ್ಲಿ ದೂರುದಾರರಾಗಿದ್ದರು.

– ಅರಕೆರೆ ಜಯರಾಮ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

BANTWAL

ಬಂಟ್ವಾಳ: ಅಂಗವೈಕಲ್ಯ ಮೆಟ್ಟಿನಿಂತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ

ಬೀದರ್ ಸಂಸದ ಭಗವಂತ ಖೂಬಾಗೆ ಕೋವಿಡ್ ಸೋಂಕು ದೃಢ

ಬೀದರ್ ಸಂಸದ ಭಗವಂತ ಖೂಬಾಗೆ ಕೋವಿಡ್ ಸೋಂಕು ದೃಢ

ನಾನು ಚುನಾವಣೆ ಗೆಲ್ಲಿಸಿಕೊಟ್ಟೆ, ಗೆಹ್ಲೋಟ್ ಸಿಎಂ ಆದರು! ಬೇಜಾರಿದೆ ಆದರೆ ಬಿಜೆಪಿ ಸೇರಲ್ಲ

ನಾನು ಚುನಾವಣೆ ಗೆಲ್ಲಿಸಿಕೊಟ್ಟೆ, ಗೆಹ್ಲೋಟ್ ಸಿಎಂ ಆದರು! ಬೇಜಾರಿದೆ ಆದರೆ ಬಿಜೆಪಿ ಸೇರಲ್ಲ

facebook

ಫೇಸ್ ಬುಕ್ ಡಿಲೀಟ್ ಮಾಡಿ, ಇಲ್ಲವೇ ಸೇನೆಯಿಂದ ಹೊರನಡೆಯಿರಿ: ಸೇನಾಧಿಕಾರಿಗೆ ಹೈಕೋರ್ಟ್ ಸೂಚನೆ

covid-sentury-star

ಕೋವಿಡ್ ನಿಂದ ಗುಣಮುಖರಾದ ಶತಾಯುಷಿ: ಆಸ್ಪತ್ರೆಯಲ್ಲಿಯೇ ಬರ್ತ್ ಡೇ ಆಚರಣೆ !

donald-trump

ಹುವಾಯ್ ಭದ್ರತಾ ವೈಫಲ್ಯ: ಅನೇಕ ದೇಶಗಳಿಗೆ ಈ ನೆಟ್ ವರ್ಕ್ ಬಳಸದಂತೆ ತಿಳಿಸಿದ್ದೇವೆ: ಟ್ರಂಪ್

ಮಕ್ಕಳ ಸ್ಕ್ರೀನ್‌ ಟೈಂಗೆ ಮಿತಿ: ಕೇಂದ್ರದಿಂದ ಮಾರ್ಗಸೂಚಿ

ಮಕ್ಕಳ ಸ್ಕ್ರೀನ್‌ ಟೈಂಗೆ ಮಿತಿ: ಕೇಂದ್ರದಿಂದ ಮಾರ್ಗಸೂಚಿ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

kat-13

ಕೊರೊನಾ ವೈರಸ್‌- ಅಸ್ವಾಭಾವಿಕ ಆಹಾರ ಪದ್ಧತಿಯ ಕೊಡುಗೆ

MUST WATCH

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk


ಹೊಸ ಸೇರ್ಪಡೆ

ಪೊಲೀಸ್‌ಗೆ ಸೋಂಕು; ಠಾಣೆ ಸೀಲ್‌ಡೌನ್‌

ಪೊಲೀಸ್‌ಗೆ ಸೋಂಕು; ಠಾಣೆ ಸೀಲ್‌ಡೌನ್‌

BANTWAL

ಬಂಟ್ವಾಳ: ಅಂಗವೈಕಲ್ಯ ಮೆಟ್ಟಿನಿಂತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ

ಬೀದರ್ ಸಂಸದ ಭಗವಂತ ಖೂಬಾಗೆ ಕೋವಿಡ್ ಸೋಂಕು ದೃಢ

ಬೀದರ್ ಸಂಸದ ಭಗವಂತ ಖೂಬಾಗೆ ಕೋವಿಡ್ ಸೋಂಕು ದೃಢ

ತುಮಕೂರು: ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆ

ತುಮಕೂರು: ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆ

rn-tdy-1

ರಾಮನಗರ ಜಿಲ್ಲೆಗೆ ಶೇ.60.96 ಫ‌ಲಿತಾಂಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.