Udayavni Special

ಜೆಎನ್‌ಯು ಅಂತಲ್ಲ, ಶಿಕ್ಷಣ ಸಂಸ್ಥೆಗಳೆಲ್ಲವೂ ರೋಗಗ್ರಸ್ತ


Team Udayavani, Dec 6, 2019, 6:32 AM IST

jnu

ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಆಟದ ಮೈದಾನವಾಗುತ್ತಿರುವ ವಿದ್ಯಾರ್ಥಿಒಕ್ಕೂಟಗಳನ್ನು ಮುಂದಿನ 10 ವರ್ಷಗಳವರೆಗೆ ನಿಷೇಧಿಸಬೇಕು. ಈ ವಿದ್ಯಾರ್ಥಿ ಒಕ್ಕೂಟಗಳಿಂದಾಗಿ ತಮಗೆ ಹಾನಿಯೇ ಹೆಚ್ಚಾಗುತ್ತಿದೆ ಎನ್ನುವುದು ವಿದ್ಯಾರ್ಥಿಗಳ ಅರಿವಿಗೆ ಬರುತ್ತಿಲ್ಲ.

ಸುಮಾರು ಹತ್ತು ವರ್ಷಗಳ ಹಿಂದೆ ಸರ್ಕಾರಿ ಮ್ಯಾನೇಜ್‌ಮೆಂಟ್‌ ಕಾಲೇಜೊಂದಕ್ಕೆ “ನಾಯಕತ್ವದ’ ಕುರಿತು ಕಾರ್ಯಾಗಾರ ನಡೆಸಲು ಹೋಗಿದ್ದೆ. ಆ ಕಾಲೇಜಿನ ಕ್ಲಾಸ್‌ರೂಮ್‌ಗಳಲ್ಲಿ ಎಲ್‌ಸಿಡಿ ಪ್ರಾಜೆಕ್ಟರ್‌ಗಳೇ ಇರಲಿಲ್ಲಲ್ಲ. ಪ್ರಾಜೆಕ್ಟರ್‌ನ ಅಗತ್ಯ ಎದುರಾದಾಗ ಕಾಲೇಜಿನ ಸ್ಟೋರ್‌ನಿಂದ ಹೊತ್ತು ತಂದು, ಪಾಠ ಮುಗಿದ ನಂತರ ಮತ್ತೆ ಅದನ್ನು ವಾಪಸ್‌ ಕೊಡಬೇಕು ಎನ್ನುವುದು ತಿಳಿದು ನನಗೆ ಅಚ್ಚರಿಯಾಯಿತು. ಆದರೆ ಎಲ್‌ಸಿಡಿ ಪ್ರಾಜೆಕ್ಟರ್‌ ತರುವುದು ದೊಡ್ಡ ಕಿರಿಕಿರಿಯ ವಿಷಯವಾಗಿತ್ತು.

ಏಕೆಂದರೆ ಸ್ಟೋರ್‌ನ ವ್ಯವಸ್ಥಾಪಕ ತನ್ನ ಕುರ್ಚಿಯಲ್ಲೇ ಇರುತ್ತಿರಲಿಲ್ಲ. ಹೀಗಾಗಿ, ಪ್ರಾಧ್ಯಾಪಕರೆಲ್ಲ ಎಲ್‌ಸಿಡಿ ಪ್ರಾಜೆಕ್ಟರ್‌ನ ಸಹವಾಸವೇ ಬೇಡ ಎಂದು, ಅದರ ಬಳಕೆಯನ್ನೇ ನಿಲ್ಲಿಸಿಬಿಟ್ಟಿದ್ದರು.ಕಾರ್ಯಾಗಾರ ಮುಗಿಸಿದ ನಂತರ ನಾನು ಆ ಶಿಕ್ಷಣ ಸಂಸ್ಥೆಯ ನಿರ್ದೇಶಕರನ್ನು ಕರೆದು, “ಎಲ್ಲಾ ತರಗತಿಗಳಲ್ಲಿ ಪ್ರಾಜೆಕ್ಟರ್‌ ತಂದಿಡಿ’ ಎಂದು ಸಲಹೆ ನೀಡಿದೆ. ನನ್ನ ಸಲಹೆ ಕೇಳಿದ್ದೇ ಅವರು ವ್ಯಂಗ್ಯವಾಗಿ ನಕ್ಕು ಅಂದರು-“ಕರ್ನಲ್‌ ಸಾಹೇಬರೇ, ನಾವೇನಾದರೂ ಆ ಉಪಕರಣವನ್ನು ತಂದಿಟ್ಟರೆ ಅದರ ಗತಿ ಏನಾಗುತ್ತದೆ ಎಂದು ವಿದ್ಯಾರ್ಥಿಗಳು ನಿಮಗೆ ಹೇಳಲಿಲ್ಲವಾ?’ . ಹೀಗೆ ಹೇಳಿ ಅವರು ನನ್ನನ್ನು ಒಂದು ಕ್ಲಾಸ್‌ರೂಮಿಗೆ ಕರೆದೊಯ್ದರು. ಆ ಕೊಟಣಿಯಂತೂ, ಅತ್ಯಂತ ಅಸಹ್ಯ ಬರಿಸುವಂತಿತ್ತು. ಕ್ಲಾಸ್‌ರೂಮಿನ ಫ್ಯಾನು ನೆಗ್ಗಿ ಹೋಗಿತ್ತು, ಅದರ ರೆಕ್ಕೆಗಳು ಕಮಲದ ಆಕಾರದಲ್ಲಿ ಬಾಗಿದ್ದವು, ಬೆಂಚು, ಕುರ್ಚಿಗಳೆಲ್ಲ ಮುರಿದು ಹೋಗಿದ್ದವು, ವಿದ್ಯುತ್‌ ಸ್ವಿಚ್‌ಬೋರ್ಡುಗಳೆಲ್ಲ ಕಿತ್ತು ಬಂದಿದ್ದವು, ಏನಾದರೂ ಅವಘಡವಾದೀತೆಂಬ ಭಯದಿಂದ ಎಲೆಕ್ಟ್ರಿಕ್‌ ವಯರ್‌ಗಳನ್ನೆಲ್ಲ ಸ್ವಿಚ್‌ಬೋರ್ಡುಗಳ ಒಳಗೆ ತುರುಕಿ, ಅವುಗಳನ್ನು ಮೇಲಿಂದ ಮುಚ್ಚಲಾಗಿತ್ತು.ಈ ಕೊಠಡಿಯ ದುರವಸ್ಥೆಯನ್ನು ತೋರಿಸಿದ ನಿರ್ದೇಶಕ ನನ್ನತ್ತ ತಿರುಗಿ ಅಂದರು, “”ಇದನ್ನೆಲ್ಲ ಮಾಡಿದ್ದು ಬೇರೆ ಯಾರೂ ಅಲ್ಲ ಸರ್‌, ನಮ್ಮ ವಿದ್ಯಾರ್ಥಿಗಳೇ! ಹೀಗಾಗಿ, ಆ ಎಲ್‌ಸಿಡಿ ಪ್ರಾಜೆಕ್ಟರ್‌ ಅದೇ ಸ್ಟೋರ್‌ನಲ್ಲೇ ಇದ್ದರೆ ಸೇಫ್. ”””ಅಲ್ಲಾ ರೀ, ಅಂಥ ಅಶಿಸ್ತಿನ ವಿದ್ಯಾರ್ಥಿಗಳ ಮೇಲೆ ನೀವು ಕ್ರಮ ಕೈಗೊಳ್ಳಬಹುದಲ್ಲ?” ಎಂದು ಪ್ರಶ್ನಿಸಿದೆ.

ಅದಕ್ಕೆ ಆ ನಿರ್ದೇಶಕ ಅಂದರು- “”ಅವರ ವಿರುದ್ಧ ಯಾರೂ ದೂರು ಕೊಡುವುದಿಲ್ಲ ಸರ್‌, ಅಲ್ಲದೆ ಯಾರೂ ಸಾಕ್ಷ್ಯ ಹೇಳುವುದಿಲ್ಲ. ಒಂದು ವೇಳೆ ನಾನೇನಾದರೂ ಕ್ರಮ ಕೈಗೊಳ್ಳಲು ಮುಂದಾದೆನೆಂದರೆ ಕಾಲೇಜಿನಲ್ಲಿ ಕೋಲಾಹಲ ಏರ್ಪಡುತ್ತದಷ್ಟೇ. ಈ ಹುಡುಗರನ್ನು ಕಡಿಮೆ ಅಂದಾಜು ಹಾಕಬೇಡಿ ಸರ್‌. ಈ ವಿದ್ಯಾರ್ಥಿ ಒಕ್ಕೂಟಗಳೆಲ್ಲ ರಾಜಕೀಯದ ಗುಂಪುಗಳಾಗಿ ಬದಲಾಗಿದ್ದು, ಇದರ ತುಂಬೆಲ್ಲ ಗೂಂಡಾಗಳೇ ತುಂಬಿದ್ದಾರೆ. ಇವರೆಲ್ಲ ಒಂದು ರೀತಿ ಜೇನುಗೂಡಿದ್ದಂತೆ, ತಡವಿದರೆ ಮುಗಿದೇ ಹೋಯಿತು. ಯಾವೆಲ್ಲ ರೀತಿಯ ಸಮಸ್ಯೆ ಸೃಷ್ಟಿಸುತ್ತಾರೆ ಎಂದರೆ, ಊಹಿಸುವುದಕ್ಕೂ ನಮಗೆ ಸಾಧ್ಯವಿಲ್ಲ. ಗದ್ದಲ ಆರಂಭವಾದರೆ ಮಾಧ್ಯಮಗಳು ಮತ್ತು ರಾಜಕಾರಣಿಗಳ ಪ್ರವೇಶವಾಗಿಬಿಡುತ್ತದೆ. ಕೊನೆಗೆ ನಾನು ಅಥವಾ ನನ್ನ ಸಹೋದ್ಯೋಗಿಗಳ ತಲೆದಂಡವಾಗುತ್ತದೆ”ಮುಂದುವರಿದು, ಅವರು ಅಂಗಲಾಚುವ ಧ್ವನಿಯಲ್ಲಿ ಹೇಳಿದರು- “”ನಾನು ಇಲ್ಲಿ 3 ವರ್ಷ ಮುಗಿಸಿದ್ದೇನೆ, ಇನ್ನೇನು ಕೆಲ ಸಮಯದಲ್ಲೇ ನಿವೃತ್ತಿ ಪಡೆಯಲಿದ್ದೇನೆ. ಇಂಥ ಸಮಯದಲ್ಲಿ ನನಗೆ ಯಾವ ವಿವಾದವೂ ಬೇಡ, ಈಗ ಹೇಗಿದೆಯೋ ಹಾಗೆ ಇರಲಿ. ಈ ಹುಡುಗರಿಗೆ ಓದುವುದಕ್ಕೆ ಆಸಕ್ತಿ ಇದ್ದರೆ ಬರಲಿ, ಇಲ್ಲವೇ ಬಿಡಲಿ. ನೀವು ನಿಮ್ಮ ಕೆಲಸ ಮುಗಿಸಿ ಹೊರಡಿ ಸರ್‌”ಶಿಕ್ಷಣ ಸಂಸ್ಥೆಗಳಲ್ಲಿನ ಸಿಬ್ಬಂದಿಗಳು ಎದುರಿಸುವ ಇಂಥ ಸ್ಥಿತಿ ನನಗೇನೂ ಅಪರಿಚಿತವಲ್ಲ. ಹೀಗಾಗಿ ಇತ್ತೀಚೆಗೆ ಜಾಧವ್‌ಪುರದ ವಿದ್ಯಾರ್ಥಿಗಳು ಕೇಂದ್ರ ಸಚಿವರೊಬ್ಬರನ್ನು ಮುತ್ತಿಕೊಂಡದ್ದು, ಅವರನ್ನು ರಕ್ಷಿಸಲು ರಾಜ್ಯಪಾಲರು ಮುಂದಾಗಿದ್ದು, ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಜೆಎನ್‌ಯು ವಿದ್ಯಾರ್ಥಿಗಳ ಗದ್ದಲಗಳನ್ನೆಲ್ಲ ನೋಡಿದಾಗಲೂ ನನಗೆ ಆಶ್ಚರ್ಯವಾಗಲಿಲ್ಲ.ಯಾಕೆ ಈ ವಿದ್ಯಾರ್ಥಿಗಳು ವಿಚಿತ್ರವಾಗಿ ವರ್ತಿಸುತ್ತಾರೆ, ಶಿಕ್ಷಣದ ಮೇಲೆ ಗಮನ ಹರಿಸುವುದನ್ನು ಬಿಟ್ಟು ಅಸಂಬದ್ಧ ಸಂಗತಿಗಳಲ್ಲಿ ತಮ್ಮ ಸಮಯ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಆಳಕ್ಕಿಳಿದು ನೋಡಿದಾಗ… ವ್ಯವಸ್ಥೆಯಲ್ಲಿ ಸುಧಾರಣೆ ತರಲು ಬಯಸದ ಅನೇಕ ಭಾಗೀದಾರರು ಕಾಣಿಸುತ್ತಾರೆ. ಅಂದರೆ, ರಾಜಕೀಯ ಪಕ್ಷಗಳು, ಸಿಬ್ಬಂದಿ, ವಿದ್ಯಾರ್ಥಿ ಒಕ್ಕೂಟಗಳು…ಒಟ್ಟಲ್ಲಿ ಎಲ್ಲರೂ ಅದೇ ಕೊಳಚೆಯಲ್ಲೇ ಮೀನು ಹಿಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಮುಖ್ಯವಾಹಿನಿ ರಾಜಕೀಯ ಪಕ್ಷಗಳಂತೂ ವಿದ್ಯಾರ್ಥಿ ಒಕ್ಕೂಟಗಳನ್ನು ತಮ್ಮ ಘಟಕಗಳು ಎಂಬಂತೆ ಭಾವಿಸುತ್ತವೆ.ಈ ಕಾರಣಕ್ಕಾಗಿಯೇ, ಇಂದು ಪ್ರಪಂಚದ ಅತ್ಯುತ್ತಮ 200 ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೇ ಒಂದು ವಿ.ವಿ.ಯೂ ಸ್ಥಾನ ಪಡೆದಿಲ್ಲ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನ ಪದವೀಧರರು ಹುಟ್ಟಿಕೊಂಡರೂ ನಮ್ಮಲ್ಲಿ ಹೇಳುಕೊಳ್ಳುವಷ್ಟು ಸಂಶೋಧನೆಗಳೇ ಆಗುತ್ತಿಲ್ಲ. ಕಾನ್ಫಿಡರೇಷನ್‌ ಆಫ್ ಇಂಡಸ್ಟ್ರಿಯ ಹಳೆಯ ವರದಿಯೊಂದು, “”ಭಾರತೀಯ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಪದವೀಧರರಲ್ಲಿ ಕೇವಲ 15 ಪ್ರತಿಶತ ವಿದ್ಯಾರ್ಥಿಗಳಷ್ಟೇ ಉದ್ಯೋಗಗಳಿಗೆ ಅರ್ಹರು, ಉಳಿದ 85 ಪ್ರತಿಶತ ಪದವೀಧರರು ಅನರ್ಹರು. ಮುಕ್ಕಾಲು ಪ್ರತಿಶತ ಪದವೀಧರರಿಗೆ ತರಬೇತಿ ಕೊಟ್ಟು ಕಲಿಸಲೂ ಆಗುವುದಿಲ್ಲ” ಎಂದಿತ್ತು. ಈ ಕಾರಣಕ್ಕಾಗಿಯೇ ಇಂದು ಒಂದು ಸರ್ಕಾರಿ ಕಚೇರಿಯಲ್ಲಿನ ಗುಮಾಸ್ತರ ಕೆಲಸಕ್ಕೆ, ಫಾರೆಸ್ಟ್‌ ಗಾರ್ಡ್‌ ಕೆಲಸಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪಿಎಚ್‌ಡಿ ಪದವೀಧರರು, ವೈದ್ಯರು, ಇಂಜಿನಿಯರ್‌ಗಳು ಅರ್ಜಿ ಸಲ್ಲಿಸುತ್ತಿರುವುದು. ಕೌಶಲ್ಯವೇ ಇಲ್ಲದ ವಿದ್ಯಾರ್ಥಿಗಳಿಗಾಗಿ ಉದ್ಯೋಗ ಸೃಷ್ಟಿಸಲು ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ.ಅಷ್ಟೇ ಏಕೆ, ಇತ್ತ ನಮ್ಮ ಶ್ರೇಷ್ಠತಮ ಶೈಕ್ಷಣಿಕ ಸಂಸ್ಥೆಗಳೆಂದೆನಿಸಿಕೊಳ್ಳುವ ಐಐಟಿಗಳೂ ಕೂಡ ಪ್ರಪಂಚದ 200 ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾಗ ಪಡೆದಿಲ್ಲ. ಈ ಸಂಸ್ಥೆಗಳಲ್ಲಿ ಗಮನಾರ್ಹ ಸಂಶೋಧನೆಗಳೇ ನಡೆದಿಲ್ಲ. ಇಂದು ಐಐಟಿಗಳಲ್ಲಿ ಸೇರುತ್ತಿರುವ ವಿದ್ಯಾರ್ಥಿಗಳಲ್ಲಿ ಬಹುಪಾಲು ಮಂದಿ ಕೋಚಿಂಗ್‌ ಇನ್ಸ್‌ಟಿಟ್ಯೂಟ್‌ಗಳಲ್ಲಿ ಓದಿದವರಷ್ಟೇ,ಅವರಿಗೆ ಪ್ರಾಯೋಗಿಕ(ಪ್ರಾಕ್ಟಿಕಲ್‌)ಅನುಭವವೇ ಇಲ್ಲ.

ದೇಶದಲ್ಲಿ ಒಟ್ಟು 23 ಐಐಟಿಗಳಿವೆ. ಆದರೆ ಇವೆಲ್ಲವೂ ಒಟ್ಟುಗೂಡಿ ಕೇವಲ 400 ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಿವೆ. 2016-17ರಲ್ಲಿ ಪೇಟೆಂಟ್‌ಗಳಿಗಾಗಿ ಸಲ್ಲಿಸಲಾದ ಒಟ್ಟು 46,600 ಅರ್ಜಿಗಳಲ್ಲಿ ಭಾರತೀಯ ಸಂಸ್ಥೆಗಳಿಂದ ಸಲ್ಲಿಕೆಯಾಗಿದ್ದು ಕೇವಲ 23 ಪ್ರತಿಶತ ಅರ್ಜಿಗಳಷ್ಟೇ. ಉಳಿದದ್ದನ್ನೆಲ್ಲ ಭಾರತದಲ್ಲಿ ಕಾರ್ಯನಿರ್ವಹಿಸುವ ವಿದೇಶಿ ಸಂಸ್ಥೆಗಳು ಸಲ್ಲಿಸಿವೆ. ಭಾರತೀಯ ವಿಜ್ಞಾನ ಸಂಸ್ಥೆ ಪೇಟೆಂಟ್‌ಗಾಗಿ 54 ಅರ್ಜಿಗಳನ್ನು, ಅಮಿಟಿ-106 ಅರ್ಜಿಗಳನ್ನು ಸಲ್ಲಿಸಿದರೆ, ಎನ್‌ಐಟಿಯದ್ದಂತೂ ಆಟಕ್ಕುಂಟ ಲೆಕ್ಕಕ್ಕಿಲ್ಲ ಎಂಬಂತಿದೆ. ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿ 19640 ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಕೆಯಾದರೆ, ಅವುಗಳಲ್ಲಿ ಕೇವಲ 2860ಕ್ಕಷ್ಟೇ ಮಾನ್ಯತೆ ದೊರೆತಿದೆ, ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಕ್ಷೇತ್ರದಲ್ಲಿ 14500 ಅರ್ಜಿಗಳು ಸಲ್ಲಿಕೆಯಾದರೆ, ಮಾನ್ಯತೆ ಸಿಕ್ಕಿರುವುದು 2546 ಅರ್ಜಿಗಳಿಗಷ್ಟೇ.

ಬಯೋಟೆಕ್ನಾಲಜಿ ಮತ್ತು ಸಂಬಂಧಿಸಿದ ವಿಷಯಗಳಲ್ಲಿ 1754 ಅರ್ಜಿಗಳು ಸಲ್ಲಿಕೆಯಾದರೆ, ಮಾನ್ಯತೆ ಸಿಕ್ಕಿದ್ದು 558 ಪೇಟೆಂಟ್‌ಗಳಿಗೆ ಮಾತ್ರ.2012ರಿಂದ 2017ರವರೆಗೆ ದೇಶದಲ್ಲಿ ಪೇಟೆಂಟ್‌ಗಳನ್ನು ಪಡೆದ ಟಾಪ್‌ 5 ಸಂಸ್ಥೆಗಳು ಯಾವುವು ಗೊತ್ತೇ? 1) ಕೌನ್ಸಿಲ್‌ ಆಫ್ ಸೈಂಟಿಫಿಕ್‌ ಆ್ಯಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌ 2) ಡಿಆರ್‌ಡಿಒ 3) ಸ್ಯಾಮ್‌ಸಂಗ್‌ ಸಂಶೋಧನಾ ಸಂಸ್ಥೆ 4) ಹಿಂದೂಸ್ತಾನ್‌ ಯೂನಿಲಿವರ್‌ ಲಿಮಿಟೆಡ್‌ ಹಾಗೂ 5) ನಮ್ಮ ಐಐಟಿಗಳು.

ಆದರೆ ಮೇಲಿನ ಮೊದಲ ನಾಲ್ಕೂ ಸಂಸ್ಥೆಗಳಲ್ಲಿ ನಿಮಗೆ ಐಐಟಿ ಪದವೀಧರರು ಅಷ್ಟಾಗಿ ಕಾಣಿಸುವುದಿಲ್ಲ. ಈ ಅಂಕಿಸಂಖ್ಯೆಗಳನ್ನು ಚೀನಾಕ್ಕೆ ಹೋಲಿಸಿದರೆ, ಅಜಗಜಾಂತರ ವ್ಯತ್ಯಾಸವಿರುವುದು ಗೋಚರಿಸುತ್ತದೆ. ಇಂದು ಜಗತ್ತಿನ ಟಾಪ್‌ 100 ಸಂಸ್ಥೆಗಳಲ್ಲಿ ಚೀನಾದ 4 ಸಂಸ್ಥೆಗಳಿವೆ(ಹಾಗೂ ಟಾಪ್‌ 25ನಲ್ಲಿ 2 ಶಿಕ್ಷಣ ಸಂಸ್ಥೆಗಳಿವೆ.)2017ರಲ್ಲಿ ಅಮೆರಿಕದಲ್ಲಿ ಆರು ಲಕ್ಷಕ್ಕೂ ಅಧಿಕ ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಕೆಯಾದರೆ, ಈ ಸಂಖ್ಯೆ ಚೀನಾದಕ್ಕೆ 12 ಲಕ್ಷದಷ್ಟಿತ್ತು! ಇವುಗಳಿಗೆ ಹೋಲಿಸಿದರೆ ಭಾರತದಲ್ಲಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 46 ಸಾವಿರ. ಅದಕ್ಕಿಂತಲೂ ಬೇಸರದ ಸಂಗತಿಯೆಂದರೆ, ಇವುಗಳಲ್ಲಿ ಪೇಟೆಂಟ್‌ ಮಾನ್ಯತೆ ಪಡೆದದ್ದು ಕೇವಲ 12000 ಅರ್ಜಿಗಳಷ್ಟೇ!

137 ಕೋಟಿ ಜನರಿರುವ ದೇಶದ ಕಥೆಯಿದು.ನಾವೀನ್ಯತೆಯೇ ಒಂದು ರಾಷ್ಟ್ರದ ಶಕ್ತಿ ಮೂಲ. ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ, ಹೊಸ ವಿಧಾನಗಳನ್ನು ಕಂಡು ಹಿಡಿಯುವ ಸಾಮರ್ಥ್ಯದಿಂದ ಮಾತ್ರ ನಮಗೆ ಇಷ್ಟವಿರುವ ಉತ್ಪನ್ನಗಳನ್ನು ಪಡೆಯಲು ಸಾಧ್ಯ. ಇದು ತಂತ್ರಜ್ಞಾನಿಕ ಆವಿಷ್ಕಾರಗಳಿಗೆ, ವಿತ್ತೀಯ ಸಮೃದ್ಧಿಗೆ ಮತ್ತಷ್ಟು ಸಂಶೋಧನೆಗಳಿಗೆ ಕಾರಣವಾಗುತ್ತದೆ. ಆದರೆ ಇದೆಲ್ಲ ಸಾಧ್ಯವಾಗಬೇಕೆಂದರೆ, ನಮ್ಮ ಶೈಕ್ಷಣಿಕ ಸಂಸ್ಥೆಗಳು ಕುಶಲ-ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ತಯ್ನಾರಿಸಬೇಕಲ್ಲವೇ?ಇದನ್ನೆಲ್ಲ ಗಮನಿಸಿದಾಗ, ಕೇವಲ ಒಂದೇ ಶಿಕ್ಷಣ ಸಂಸ್ಥೆಯತ್ತ ಬೆರಳೆತ್ತಿ ತೋರಿಸುವುದು ಸರಿಯಲ್ಲ ಎಂದೆನಿಸುವುದಿಲ್ಲವೇ? ನಮ್ಮ ಶೈಕ್ಷಣಿಕ ಸಂಸ್ಥೆಗಳಿಗೆಲ್ಲ ಹುಳುಕು ಹಿಡಿದಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಿದೆ.

ಒಂದೇ ವ್ಯತ್ಯಾಸವೆಂದರೆ, ಕೆಲವು ಶಿಕ್ಷಣ ಸಂಸ್ಥೆಗಳಿಗೆ ಕಡಿಮೆ ಹುಳುಕು ಹಿಡಿದಿದೆಯಷ್ಟೆ!ಹಾಗೆ ನೋಡಿದರೆ, ಇಂದು ವಿವಾದದ ಗೂಡಾಗಿರುವ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯವೂ(ಜೆಎನ್‌ಯು) ದೊಡ್ಡ ಸ್ಕಾಲರ್‌ಗಳನ್ನು ಹುಟ್ಟುಹಾಕಿರುವ ಸಂಸ್ಥೆ(ನೋಬೆಲ್‌ ಪಡೆದವರೂ ಇದ್ದಾರೆ).ಎಲ್ಲಕ್ಕಿಂತ ಹೆಚ್ಚಾಗಿ, ಟೆಕ್ನಾಲಜಿ ಶಿಕ್ಷಣಸಂಸ್ಥೆಗಳನ್ನು, ಮಾನವಿಕ ಅಧ್ಯಯನದ ಸಂಸ್ಥೆಗಳಿಗೆ ಹೋಲಿಸಲಾಗದು. ಒಬ್ಬ ಇಜಿನಿಯರ್‌ ಕೂಡ ಸೃಜನಶೀಲನಾಗುವುದು ಆಪೇಕ್ಷಣೀಯವೇ. ಆದರೂ ಪಾಲಿಟಿಕಲ್‌ ಸೈನ್ಸ್‌, ಸೋಷಿಯಾಲಜಿ, ಎಕನಾಮಿಕ್ಸ್‌ ಓದುವ ವಿದ್ಯಾರ್ಥಿ ಸಮಾಜದೊಂದಿಗೆ ಹೆಚ್ಚು ಒಡನಾಟವಿಟ್ಟುಕೊಳ್ಳುವುದು ಒಳ್ಳೆಯದು. ಸಮಾಜೋ-ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಘಟನಾವಳಿಗಳಿಗೆ ಸ್ಪಂದಿಸಲು ಅವರಿಗೆ ಹೆಚ್ಚು ಸ್ವಾತಂತ್ರÂ ಕೊಡುವುದೂ ಆಪೇಕ್ಷಣೀಯವೇ.ಆದರೆ, ಇದನ್ನೇ ಲಾಭವಾಗಿಟ್ಟುಕೊಳ್ಳುವ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ ಹೀಗಾಗಿ, ಇಡೀ ಶಿಕ್ಷಣ ವ್ಯವಸ್ಥೆಯಲ್ಲೇ ಆಮೂಲಾಗ್ರ ಬದಲಾವಣೆ ಮಾಡುವ ಕುರಿತು ಚಿಂತಿಸುವ ಜತೆ ಜತೆಗೇ, ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಆಟದ ಮೈದಾನವಾಗುತ್ತಿರುವ ವಿದ್ಯಾರ್ಥಿ ಒಕ್ಕೂಟಗಳನ್ನು ಮುಂದಿನ 10 ವರ್ಷಗಳವರೆಗೆ ನಿಷೇಧಿಸಬೇಕು. ಈ ವಿದ್ಯಾರ್ಥಿ ಒಕ್ಕೂಟಗಳಿಂದಾಗಿ ತಮಗೆ ಹಾನಿಯೇ ಹೆಚ್ಚಾಗುತ್ತಿದೆ ಎನ್ನುವುದು ವಿದ್ಯಾರ್ಥಿಗಳ ಅರಿವಿಗೆ ಬರುತ್ತಿಲ್ಲ.

– ಲೆ. ಕರ್ನಲ್‌. ಭಟ್ನಾಗರ್‌(ನಿವೃತ್ತ)

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

Udayavani Tags

ಟಾಪ್ ನ್ಯೂಸ್

microsoft

ಟಿಕ್ ಟಾಕ್ ಖರೀದಿಗೆ ಟ್ರಂಪ್ ಅನುಮತಿ ಕೋರಿದ ಮೈಕ್ರೋಸಾಫ್ಟ್ ಸಿಇಓ ಸತ್ಯನಾದೆಲ್ಲಾ ?

ಶಿಕ್ಷಣ ಸಂವಾದ: ಅಸ್ಮಿತೆಯೆಡೆಗೆ ಮಕ್ಕಳ ಮೊದಲ ಹೆಜ್ಜೆ ಐತಿಹಾಸಿಕ ಸತ್ಯಗಳಿಂದ ಆರಂಭವಾಗಲಿ

ಶಿಕ್ಷಣ ಸಂವಾದ: ಅಸ್ಮಿತೆಯೆಡೆಗೆ ಮಕ್ಕಳ ಮೊದಲ ಹೆಜ್ಜೆ ಐತಿಹಾಸಿಕ ಸತ್ಯಗಳಿಂದ ಆರಂಭವಾಗಲಿ

Rakhi-1

ಸಂತ್ರಸ್ತೆಗೆ ರಾಖಿ ಕಟ್ಟಿ ಕಾಣಿಕೆ ಕೊಡಲು ಲೈಂಗಿಕ ದೌರ್ಜನ್ಯ ಆರೋಪಿಗೆ ಕೋರ್ಟ್ ಆದೇಶ

ಕನಸು ನಾಳೆ ನನಸು: ಸಕಲ ವೈಭವದಿಂದ ಕಂಗೊಳಿಸುತ್ತಿರುವ ಅಯೋಧ್ಯೆ

ಕನಸು ನಾಳೆ ನನಸು: ಸಕಲ ವೈಭವದಿಂದ ಕಂಗೊಳಿಸುತ್ತಿರುವ ಅಯೋಧ್ಯೆ

BCCIಯಿಂದ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿ ರಚನೆ ; 60 ವರ್ಷ ಮೀರಿದವರಿಗೆ ಅವಕಾಶವಿಲ್ಲ

BCCIಯಿಂದ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿ ರಚನೆ ; 60 ವರ್ಷ ಮೀರಿದವರಿಗೆ ಅವಕಾಶವಿಲ್ಲ

JSS‌ ಆಸ್ಪತ್ರೆಯಲ್ಲಿ ಆಕ್ಸ್‌ಫ‌ರ್ಡ್‌ ಲಸಿಕೆ ಪ್ರಯೋಗ

JSS‌ ಆಸ್ಪತ್ರೆಯಲ್ಲಿ ಆಕ್ಸ್‌ಫ‌ರ್ಡ್‌ ಲಸಿಕೆ ಪ್ರಯೋಗ

ವಿವಾದಾತ್ಮಕ ಟ್ವೀಟ್‌ಗೆ ಕ್ಷಮೆ ಯಾಚಿಸಿದ ಪ್ರಶಾಂತ್‌ ಭೂಷಣ್‌

ವಿವಾದಾತ್ಮಕ ಟ್ವೀಟ್‌ಗೆ ಕ್ಷಮೆ ಯಾಚಿಸಿದ ಪ್ರಶಾಂತ್‌ ಭೂಷಣ್‌
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ 19; ಪರ್ಯಾಯ ಶಿಕ್ಷಣ ಪದ್ಧತಿಗೆ ಇದು ಸಕಾಲವೇ?

ಕೋವಿಡ್ 19; ಪರ್ಯಾಯ ಶಿಕ್ಷಣ ಪದ್ಧತಿಗೆ ಇದು ಸಕಾಲವೇ?

ಶೈಕ್ಷಣಿಕ ವ್ಯವಸ್ಥೆಗೆ ಜಟಿಲ ಸಮಸ್ಯೆಯಾದ ಸೋಂಕಿನ ಭೀತಿ

ಶೈಕ್ಷಣಿಕ ವ್ಯವಸ್ಥೆಗೆ ಜಟಿಲ ಸಮಸ್ಯೆಯಾದ ಸೋಂಕಿನ ಭೀತಿ

ಭಾಗವತರಿಗೆ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿದ್ದ ಕಾಳಿಂಗ ನಾವಡರು ಅದ್ಭುತ ಸ್ನೇಹಜೀವಿ

ಭಾಗವತರಿಗೆ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿದ್ದ ಕಾಳಿಂಗ ನಾವಡರು ಅದ್ಭುತ ಸ್ನೇಹಜೀವಿ

ಕಾಳಿಂಗ ನಾವಡರು ಹೊಸತನದ ಹರಿಕಾರ, ಕಿರಿಯ ವಯಸ್ಸಿನಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿದ್ರು

ಕಾಳಿಂಗ ನಾವಡರು ಹೊಸತನದ ಹರಿಕಾರ, ಕಿರಿಯ ವಯಸ್ಸಿನಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿದ್ರು

40 ವರ್ಷದ ಹಿಂದಿನ ಕರಾಳ ನೆನಪು; ಭೀಕರ ರಸ್ತೆ ಅಪಘಾತದಲ್ಲಿ ಬದುಕಿ ಉಳಿದ್ದೇವು

40 ವರ್ಷದ ಹಿಂದಿನ ಕರಾಳ ನೆನಪು; ಭೀಕರ ರಸ್ತೆ ಅಪಘಾತದಲ್ಲಿ ಬದುಕಿದ್ದೇ ಪವಾಡ!

MUST WATCH

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mystery

udayavani youtube

“ಕಟ್ಟಿಹುದು ಬುತ್ತಿ ಉಣಲುಂಟು ತಾಳು” ಎಂದು ಜೀವನ ಪಾಠ | Life Lessons by Farmer

udayavani youtube

ಮಂಗೋಶ್ಟಿನ್ ಬೆಳೆಯುವ ಸೂಕ್ತ ವಿಧಾನ | How To Grow Mangosteen Fruit |FULL INFORMATION

udayavani youtube

New Education Policy 2020: All the key takeaways | Udayavaniಹೊಸ ಸೇರ್ಪಡೆ

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ನಿಂದ ಕೊಡುಗೆ; ಉಡುಪಿ ಕೋವಿಡ್‌ ಆಸ್ಪತ್ರೆಗೆ ವೆಂಟಿಲೇಟರ್‌

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ನಿಂದ ಕೊಡುಗೆ; ಉಡುಪಿ ಕೋವಿಡ್‌ ಆಸ್ಪತ್ರೆಗೆ ವೆಂಟಿಲೇಟರ್‌

microsoft

ಟಿಕ್ ಟಾಕ್ ಖರೀದಿಗೆ ಟ್ರಂಪ್ ಅನುಮತಿ ಕೋರಿದ ಮೈಕ್ರೋಸಾಫ್ಟ್ ಸಿಇಓ ಸತ್ಯನಾದೆಲ್ಲಾ ?

ಸ್ವ್ಯಾಬ್ ಪರೀಕ್ಷೆಗೆ ವಿಜ್ಞಾನ ವಿದ್ಯಾರ್ಥಿಗಳಿಗೆ ತರಬೇತಿ

ಸ್ವ್ಯಾಬ್ ಪರೀಕ್ಷೆಗೆ ವಿಜ್ಞಾನ ವಿದ್ಯಾರ್ಥಿಗಳಿಗೆ ತರಬೇತಿ

ಅವಧಿ ವಿಸ್ತರಣೆ ಇಂದು ನಿರ್ಣಯ?

ಅವಧಿ ವಿಸ್ತರಣೆ ಇಂದು ನಿರ್ಣಯ?

ಪೇಜಾವರ ಶ್ರೀಗಳ ಕುರಿತ ಘಟನೆಗಳನ್ನು ಆಧರಿಸಿ ಪುಸ್ತಕ ಹೊರ ತರುವ ಯೋಜನೆ; ಮಾಹಿತಿಗಾಗಿ ಮನವಿ

ಪೇಜಾವರ ಶ್ರೀಗಳ ಕುರಿತ ಘಟನೆಗಳನ್ನು ಆಧರಿಸಿ ಪುಸ್ತಕ ಹೊರ ತರುವ ಯೋಜನೆ; ಮಾಹಿತಿಗಾಗಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.