ಅಭಿಮನ: ಬ್ಯಾಂಕ್‌ ಸಿಬಂದಿ ವೇತನ ಪರಿಷ್ಕರಣೆಯ ಸುತ್ತ


Team Udayavani, Aug 11, 2020, 6:15 AM IST

ಅಭಿಮನ: ಬ್ಯಾಂಕ್‌ ಸಿಬಂದಿ ವೇತನ ಪರಿಷ್ಕರಣೆಯ ಸುತ್ತ

ಸಾಂದರ್ಭಿಕ ಚಿತ್ರ

ವೇತನ ಪರಿಷ್ಕರಣೆಗಾಗಿ 3 ವರ್ಷಗಳ ನಿರಂತರ ಹೋರಾಟ, ಸಿಬ್ಬಂದಿಗೆ ಹಲವು ದಿನಗಳ ವೇತನ ಕಡಿತದ ಶಿಕ್ಷೆ, ಭಾರತೀಯ ಬ್ಯಾಂಕುಗಳ ಸಂಘಟನೆಯೊಡನೆ ಸುದೀರ್ಘ‌ 35 ಸುತ್ತಿನ ಮಾತುಕತೆಗಳು, ಗ್ರಾಹಕ ರಿಂದ, ಜನಸಾಮಾನ್ಯರಿಂದ ಮತ್ತು ಸರಕಾರ ದಿಂದ ತೀವ್ರ ತರಾಟೆ ಮತ್ತು ಅಕ್ರೋಶದ ನಂತರ ಬ್ಯಾಂಕ್‌ ಸಿಬ್ಬಂದಿ ವೇತನ ಪರಿಷ್ಕರಣೆ ನಿಟ್ಟಿನಲ್ಲಿ ಭಾರ ತೀಯ ಬ್ಯಾಂಕುಗಳ ಸಂಘ (ಐಆಅ) ಮತ್ತು ಬ್ಯಾಂಕ್‌ ಕಾರ್ಮಿಕ ಸಂಘಗಳ ಒಕ್ಕೂಟದ ಮಧ್ಯೆ ವೇತನ ಪರಿಷ್ಕರಣೆಗಾಗಿ ಸಾಮಾನ್ಯ ತಿಳಿವಳಿಕೆ ಏರ್ಪಟ್ಟಿದೆ. ಇದು ಕೇವಲ ತಿಳಿವಳಿಕೆಯಾಗಿದ್ದು, ಇನ್ನು ಮೂರು ತಿಂಗಳೊಳಗಾಗಿ ವಿಸ್ತೃತ ಒಪ್ಪಂದವು ಆಗಲಿದೆ.

ಈ ತಿಳಿವಳಿಕೆ ಪ್ರಕಾರ 37 ಬ್ಯಾಂಕುಗಳ 8.50 ಲಕ್ಷ ಸಿಬ್ಬಂದಿಗೆ ಅವರ ವೇತನದಲ್ಲಿ ಶೇ.15 ರಷ್ಟು ಹೆಚ್ಚಾ ಗುತ್ತಿದ್ದು 2017ನವೆಂಬರ್‌ನಿಂದ ಬಾಕಿ ಕೂಡಾ ಸಿಗುತ್ತದೆ. ಈ ಹೆಚ್ಚಳದಿಂದ ಬ್ಯಾಂಕಿಂಗ್‌ ಉದ್ಯಮದ ಮೇಲೆ ಸುಮಾರು 8000 ಕೋಟಿ ರೂ. ಭಾರ ಬೀಳಲಿದೆ. ಇತರ ಕೇಂದ್ರ ಸರಕಾರದ ಸಿಬ್ಬಂದಿಗೆ ನೀಡಿದಂತೆ ಎನ್‌ಪಿಎಸ್‌ (National Provident Fund Scheme)ಗೆ ಮೂಲ ವೇತನದ 14%ನ್ನು ಜಮಾ ಮಾಡಲಾಗುವುದು. ಕುಟುಂಬ ಪಿಂಚಣಿ ಈವರೆಗೆ ಪಿಂಚಣಿಯ 15% ಇದ್ದು, ಅದನ್ನು 30% ಗೆ ಏರಿಸಲಾಗುತ್ತಿದ್ದು ಸುಮಾರು 72000 ಜನರು ಇದರ ಉಪಯೋಗ ಪಡೆಯುವ ನಿರೀಕ್ಷೆ ಇದೆ. ಬ್ಯಾಂಕಿಂಗ್‌ ಉದ್ಯಮದಲ್ಲಿ ಮೊದಲ ಬಾರಿ ಸಾಧನೆ ಆಧಾರಿತ ಪ್ರೋತ್ಸಾಹ ಸಂಬಳ (performance linked incentive PLI) ಜಾರಿಗೆ ತರಲಾಗಿದ್ದು, ಇದು ರೆಗ್ಯುಲರ್‌ ಸಂಬಳದ ಹೊರತಾಗಿ ಇರುತ್ತದೆ. ಇದು ಬ್ಯಾಂಕ್‌ ಗಳಿಸುವ ವಾರ್ಷಿಕ ನಿವ್ವಳ ಲಾಭದ ಮೇಲೆ ಇದ್ದು, ವರ್ಷದಿಂದ ವರ್ಷಕ್ಕೆ ಲೆಕ್ಕ ಹಾಕಲಾಗುವುದು. 5-10% ಲಾಭ ಹೆಚ್ಚಿದರೆ 5 ದಿನಗಳ, 10-15% ಹೆಚ್ಚಿದರೆ 10 ದಿನಗಳ ಮತ್ತು 15% ಮೀರಿದರೆ ಮೂಲ ವೇತನ ಮತ್ತು ತುಟ್ಟಿ ಭತ್ತೆ ಸೇರಿಸಿ 15 ದಿನಗಳ ಸಂಬಳ ವನ್ನು ಪ್ರೋತ್ಸಾಹ ಸಂಬಳವಾಗಿ ನೀಡಲಾಗುವುದು. ಹಾಗೆಯೇ ಗಳಿಸಿದ ರಜೆಯ ನಗದೀಕರಣವನ್ನು ಕೆಲವು ಇತಿ ಮಿತಿಯೊಂದಿಗೆ ಪ್ರತಿವರ್ಷವೂ ಮಾಡಬಹುದು.

ಮೇಲು ನೋಟಕ್ಕೆ ಇದನ್ನು ಒಂದು ಅತ್ಯುತ್ತಮ ವೇತನ ಪರಿಷ್ಕರಣೆ ಒಪ್ಪಂದ ಎಂದು ಹೊಗಳಿ ಹಾಡಿ ದರೂ ತಿಳಿವಳಿಕೆಯ ವಿವರಗಳು ಮತ್ತು ಸ್ಪಷ್ಟೀಕರಣ ಗಳು ಒಂದೊಂದಾಗಿ ಹೊರಬರುತ್ತಿರು ವಂತೆ, ಈ ತಿಳಿವ ಳಿಕೆಯ ವಿರುದ್ಧ ಅಪಸ್ವರಗಳು ಜೋರಾಗಿ ಕೇಳುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಕಾರ್ಮಿಕ ಧುರೀಣರ ವಿರುದ್ಧ ಅಕ್ರೋಶ-ಆರೋಪ ಕೇಳಿ ಬರುತ್ತಿದೆ. ಸಿಬ್ಬಂದಿಯ ಪ್ರಮುಖ ಬೇಡಿಕೆಯಾದ ಮತ್ತು ಬಹು ನಿರೀಕ್ಷೆಯ ಐದು ದಿನಗಳ ವಾರ, ಈವರೆಗಿನ ತಿಳಿವಳಿಕೆ ಯಲ್ಲಿ ಕಾಣುತ್ತಿ ಲ್ಲ. ಹಾಗೆಯೇ ವಿಶೇಷ ಭತ್ಯೆಯನ್ನು ಮೂಲ ವೇತನದಲ್ಲಿ ಸೇರಿಸದೇ ನಿವೃತ್ತಿ ಸೌಲಭ್ಯ (ಪಿಂಚಣಿ) ಹೆಚ್ಚಳಕ್ಕೆ ಅವಕಾಶ ನೀಡದಿರುವುದು ಸಿಬ್ಬಂದಿಯನ್ನು ನಿರಾಶೆಗೊಳಿಸಿದೆ. ವೇತನ ಹೆಚ್ಚಳ 15% ಆದರೂ, ಪರಿಷ್ಕೃತ ಸ್ಕೇಲ್‌ ಪ್ರಕಾರ ಹೆಚ್ಚಳ ಗಮನಾರ್ಹವಲ್ಲ ಮತ್ತು 2012ರ ನಂತರ ನಿವೃತ್ತಿಯಾದವರ ಪಿಂಚಣಿಯಲ್ಲಿ ಖೋತಾ ಆಗುವ ಸಂಭವ ಇದೆ ಎನ್ನುವ ವದಂತಿಗಳಿಂದ ಹಲವರು ಆಧೀರರಾಗಿದ್ದಾರೆ.

ನಿವೃತ್ತರಿಗೆ ನಿರಾಶೆ?
ಸಾಮಾನ್ಯವಾಗಿ ಎಲ್ಲಾ ಇಲಾಖೆಗಳಲ್ಲಿ ವೇತನ ಪರಿಷ್ಕರಣೆ ಸಂಗಡ ಪಿಂಚಣಿಯೂ ಪರಿಷ್ಕರಣೆ ಯಾಗುತ್ತಿದ್ದು, ಬ್ಯಾಂಕ್‌ ಸಿಬ್ಬಂದಿಗೆ ಈ ಸೌಲಭ್ಯವನ್ನು ನೀಡಿಲ್ಲ. ಬಜೆಟ್‌ ಅನುದಾನದ ಮೂಲಕ ಪಿಂಚಣಿ ಪಡೆಯುವವರಿಗೆ ಧಾರಾಳವಾಗಿ ಪಿಂಚಣಿ ಏರಿಕೆಯಾಗಬೇಕಿದ್ದರೆ, ಅನುತ್ಪಾದಕ ಅಸ್ತಿಯ(ಸಾಲ)ಹೊರತಾಗಿಯೂ ಸದಾ ಲಾಭ ಗಳಿಸುವ ಬ್ಯಾಂಕ್‌ಗಳ ಸಿಬ್ಬಂದಿಗೆ ಈ ಭಾಗ್ಯ ಏಕಿಲ್ಲ ಎಂದು ಅವರು ಕೇಳುತ್ತಿದ್ದಾರೆ. ವಿಪರ್ಯಾಸವೆಂದರೆ, ಬ್ಯಾಂಕುಗಳ ದೊಡ್ಡಣ್ಣ ರಿಸರ್ವ್‌ ಬ್ಯಾಂಕ್‌ ಸಿಬ್ಬಂದಿಗೆ ಇತ್ತೀಚೆಗೆ ಪಿಂಚಣಿ ಏರಿಸಿದ ಸರಕಾರ ಇತರ ಬ್ಯಾಂಕ್‌ ಸಿಬ್ಬಂದಿಗಳ ನಿಟ್ಟಿನಲ್ಲಿ ಮೀನಮೇಷ ಎಣಿಸುತ್ತಿದೆ.

ಇನ್ನು ಸಿಬ್ಬಂದಿ ವೇತನ ಹೆಚ್ಚಳದ ಬಗೆಗೆ ಮಾತುಕತೆ ಗಳು 2018ರಲ್ಲಿ ಅರಂಭವಾದಾಗ ,ಬ್ಯಾಂಕುಗಳ ಕ್ಷೀಣಿಸುತ್ತಿರುವ ಅರ್ಥಿಕಸ್ಥಿತಿಯನ್ನು ಉಲ್ಲೇಖೀಸಿ ಸಿಬ್ಬಂದಿಗೆ 2% ಹೆಚ್ಚಳ ನೀಡಲಾಗಿತ್ತು. ಈ ಕಾಟಾಚಾರದ ನೀಡಿಕೆಯಿಂದಾ ಗಿ ಮುಷ್ಕರ ಹೆಚ್ಚಿದಂತೆ, ನಂತರದ ದಿನಗಳಲ್ಲಿ ಪ್ರತಿಭಟನೆ ಕಾವನ್ನು ಸಹಿಸ ಲಾಗದೇ ಈ ನೀಡಿಕೆಯನ್ನು ಸಮಾಧಾನಕರವಾದ 15%ಗೆ ಏರಿಸಲಾಯಿತು. ಸಿಬ್ಬಂದಿಗಳು 25% ಏರಿಕೆಗೆ ಒತ್ತಾಯ ಮಾಡಿದರೂ, ಇನ್ನಿತರ ಕೆಲವು ಬೇಡಿಕೆ ಗಳೊಂದಿಗೆ ಕನಿಷ್ಟ 15% ಸಂಬಳ ಏರಿಕೆ ಅವರ ಗುರಿ ಯಾಗಿತ್ತು. ಹಣಕಾಸು ವಲಯದಲ್ಲಿ ವಾರ್ಷಿಕ ಸಂಬಳ ಏರಿಕೆ ಸರಾಸರಿ 9-10% ಇದ್ದು, ಬ್ಯಾಂಕುಗಳಲ್ಲಿ ಸಂಬಳ ಏರಿಕೆ ಐದು ವರ್ಷಕ್ಕೊಮ್ಮೆ ಆಗುವುದರಿಂದ, ಅವರಿಗೆ 15% ಏರಿಕೆಯನ್ನು ಸಮರ್ಥಿಸಲಾಗುತ್ತದೆ. ಬ್ಯಾಂಕ್‌ ಸಿಬ್ಬಂದಿ ವೇತನ ಪರಿಷ್ಕರಣೆ ಇತಿಹಾಸವನ್ನು ನೋಡಿದಾಗ, ಈ ಏರಿಕೆ ಸರಾಸರಿ 13-15% ಇರುವುದನ್ನು ನೋಡಿ, ಮಾತುಕತೆಗಳ ಆರಂಭದ ಲ್ಲಿಯೇ ಸೂಕ್ತವಾದ ಏರಿಕೆಯನ್ನು ನೀಡಿ ಸಿಬ್ಬಂದಿ ವೇತನ ನಷ್ಟ ಮತ್ತು ಗ್ರಾಹಕರಿಗೆ ಆದ ಅನನುಕೂಲವನ್ನು ತಪ್ಪಿಸಬಹುದಿತ್ತು. ಕೇವಲ 2% ಏರಿಕೆ ನೀಡಿ ಕೊನೆಗೆ 15%ಗೆ ಒಪ್ಪಿರುವುದು, ನಮ್ಮ ಅಡಳಿತ ವ್ಯವಸ್ಥೆ ವಾಸ್ತವ ವನ್ನು ತಿಳಿಯುವ ಪ್ರಯತ್ನವನ್ನು ಮಾಡದಿರುವ ನ್ಯೂನತೆಯ ನಿದರ್ಶನ ಎನ್ನಬಹುದೇನೋ? ಮುಂದಿನ ದಿನಗಳಲ್ಲಿ ಸಾಮಾನ್ಯ ಮತ್ತು ಜೀವ ವಿಮಾ ನಿಗಮಗಳಲ್ಲೂ ಇಂಥ ಒಪ್ಪಂದ ಏರ್ಪಡುವುದನ್ನು ಅಲ್ಲಗಳೆಯಲಾಗದು. ಈ ಟ್ರೆಂಡ್‌ಗೆ ದೇಶದಲ್ಲಿ ದೀರ್ಘ‌ ಇತಿಹಾಸ ಇದೆ.

ರಮಾನಂದ ಶರ್ಮಾ

ಟಾಪ್ ನ್ಯೂಸ್

tdy-19

2023ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ತೆಕ್ಕಟ್ಟೆ: ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಈಚರ್‌ ವಾಹನ; ತಪ್ಪಿದ ಭಾರೀ ಅನಾಹುತ

ತೆಕ್ಕಟ್ಟೆ: ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಈಚರ್‌ ವಾಹನ; ತಪ್ಪಿದ ಭಾರೀ ಅನಾಹುತ

1-daadad

ಸಿನಿಮಾ ರಂಗದಿಂದಲೇ ನಾನು ಚಿರಂಜೀವಿ: ಇಫಿಯಲ್ಲಿ ಚಿರಂಜೀವಿ ಭಾವುಕ

ಮದರಸಾ ವಿದ್ಯಾರ್ಥಿಗಳಿಗೆ ಇನ್ನು ಸ್ಕಾಲರ್‌ಶಿಪ್‌ ಇಲ್ಲ

ಮದರಸಾ ವಿದ್ಯಾರ್ಥಿಗಳಿಗೆ ಇನ್ನು ಸ್ಕಾಲರ್‌ಶಿಪ್‌ ಇಲ್ಲ

1-aSASA

ಡಬ್ಬಲ್ ಇಂಜಿನ್ ಸರಕಾರವಿದ್ದರೂ ಶರಾವತಿ ಸಂತ್ರಸ್ತರಿಗೆ ನ್ಯಾಯವಿಲ್ಲ: ಸಿದ್ದರಾಮಯ್ಯ ಕಿಡಿ

Satish Jaraki

ಕಾಂಗ್ರೆಸ್ ಸರ್ಕಾರದಲ್ಲೇ ಹೆಚ್ಚು ಹಿಂದೂಗಳ ರಕ್ಷಣೆ: ಸತೀಶ್ ಜಾರಕಿಹೊಳಿ

1-adasdsad

ಚಿಕ್ಕಮಗಳೂರು: ಬಸ್ -ಟಿಪ್ಪರ್ ಮುಖಾಮುಖಿ; ಮಹಿಳೆ ಸಾವು, 15 ಮಂದಿಗೆ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡದ ಉಳಿವಿಗೆ ಶೈಕ್ಷಣಿಕ ಉಪಕ್ರಮ ಅಗತ್ಯ

ಕನ್ನಡದ ಉಳಿವಿಗೆ ಶೈಕ್ಷಣಿಕ ಉಪಕ್ರಮ ಅಗತ್ಯ

ಮೀಸಲಾತಿಯ ಪುನರ್‌ವಿಮರ್ಶೆ ಅಗತ್ಯಮೀಸಲಾತಿಯ ಪುನರ್‌ವಿಮರ್ಶೆ ಅಗತ್ಯ

ಮೀಸಲಾತಿಯ ಪುನರ್‌ವಿಮರ್ಶೆ ಅಗತ್ಯ

ಜ್ಞಾನ-ಕೌಶಲಗಳ ನಡುವೆ ಗೊಂದಲವೇಕೆ?

ಜ್ಞಾನ-ಕೌಶಲಗಳ ನಡುವೆ ಗೊಂದಲವೇಕೆ?

ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ-ಹಾನಿಕಾರಕ ಪಿಡುಗು

ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ-ಹಾನಿಕಾರಕ ಪಿಡುಗು

ಪ್ರಚಲಿತ ಇತಿಹಾಸದ ಕದ ತೆರೆಯೋಣ

ಪ್ರಚಲಿತ ಇತಿಹಾಸದ ಕದ ತೆರೆಯೋಣ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

tdy-19

2023ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ತೆಕ್ಕಟ್ಟೆ: ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಈಚರ್‌ ವಾಹನ; ತಪ್ಪಿದ ಭಾರೀ ಅನಾಹುತ

ತೆಕ್ಕಟ್ಟೆ: ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಈಚರ್‌ ವಾಹನ; ತಪ್ಪಿದ ಭಾರೀ ಅನಾಹುತ

1-daadad

ಸಿನಿಮಾ ರಂಗದಿಂದಲೇ ನಾನು ಚಿರಂಜೀವಿ: ಇಫಿಯಲ್ಲಿ ಚಿರಂಜೀವಿ ಭಾವುಕ

ಮದರಸಾ ವಿದ್ಯಾರ್ಥಿಗಳಿಗೆ ಇನ್ನು ಸ್ಕಾಲರ್‌ಶಿಪ್‌ ಇಲ್ಲ

ಮದರಸಾ ವಿದ್ಯಾರ್ಥಿಗಳಿಗೆ ಇನ್ನು ಸ್ಕಾಲರ್‌ಶಿಪ್‌ ಇಲ್ಲ

1-aSASA

ಡಬ್ಬಲ್ ಇಂಜಿನ್ ಸರಕಾರವಿದ್ದರೂ ಶರಾವತಿ ಸಂತ್ರಸ್ತರಿಗೆ ನ್ಯಾಯವಿಲ್ಲ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.