ಅಭಿವೃದ್ಧಿ ಇಂದಿಗೂ ಮುಂದಿಗೂ ಸ್ಥಿರವಾಗಿರಲಿ


Team Udayavani, Jun 6, 2022, 6:20 AM IST

ಅಭಿವೃದ್ಧಿ ಇಂದಿಗೂ ಮುಂದಿಗೂ ಸ್ಥಿರವಾಗಿರಲಿ

ಹವಾಮಾನ ಬದಲಾವಣೆ, ತಾಪಮಾನ ಏರಿಕೆ, ಕಲುಷಿತ ಗಾಳಿ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆಯಂತಹ ಜಾಗತಿಕ ಪಾರಿಸರಿಕ ಸಮಸ್ಯೆಗಳನ್ನು ಕಡಿಮೆ ಮಾಡದ ಹೊರತು ಅಭಿವೃದ್ಧಿ ನಿರಂತರವಾಗಲಾರದು. ಹಾಗೆಂದು ಸಂಪನ್ಮೂಲಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗದು. ಆದರೆ ಅವುಗಳನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಮತ್ತು ಮಿತವಾಗಿ ಬಳಸಬೇಕು.

ಎಲ್ಲ ರಾಷ್ಟ್ರಗಳಿಗೂ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆ ಒಂದು ಅವಶ್ಯವಾದ ಪ್ರಕ್ರಿಯೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಆರ್ಥಿಕ ಅಭಿವೃದ್ಧಿ ಒಂದು ಬಹು ಮುಖ್ಯವಾದ ಅಂಶವಾಗಿದೆ. ಬಡತನ ನಿವಾರಣೆ, ಉದ್ಯೋಗ ನಿರ್ಮಾಣ, ಮೂಲ ಸೌಕರ್ಯಗಳ ಅಭಿವೃದ್ಧಿ, ನೈರ್ಮಲ್ಯ ವ್ಯವಸ್ಥೆ ಮುಂತಾದ ಜೀವನಾವಶ್ಯಕತೆಗಳನ್ನು ಈಡೇರಿಸದ ಹೊರತು ಅಭಿವೃದ್ಧಿ ಸಾಧ್ಯವಾಗದು. ಆದರೆ ಹಿಂದುಳಿದ ರಾಷ್ಟ್ರಗಳಲ್ಲಿ ಇರುವ ಮೂಲಭೂತ ಸಮಸ್ಯೆಗಳು ಅಭಿವೃದ್ಧಿಯ ವೇಗವನ್ನು ಕುಂಠಿತಗೊಳಿಸುತ್ತಿದೆ. ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಸರಕಾರದ ಯೋಜನೆ ಹಾಗೂ ಜನರ ಪ್ರಯತ್ನಗಳು ಅಗತ್ಯವಾಗಿದೆ. ಭಾರತ ಮಾತ್ರವಲ್ಲ ವಿಶ್ವದ ಎಲ್ಲ ರಾಷ್ಟ್ರಗಳು ಜನರ ಜೀವನ ಮಟ್ಟವನ್ನು ಎತ್ತರಿಸಲು ವಿವಿಧ ಯೋಜನೆಗಳನ್ನು ಹಾಕಿಕೊಳ್ಳುತ್ತಿವೆ. ಆದರೆ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಸರಕಾರದ ವಿವಿಧ ಯೋಜನೆ ಗಳು ಹಾಗೂ ಆದಾಯ ಗಳಿಸಲು ಜನರು ಮಾಡುವ ಚಟುವಟಿಕೆಗಳು ಅವುಗಳ ಜತೆ ಜತೆಗೆ ಪ್ರಾದೇಶಿಕ ಹಾಗೂ ಜಾಗತಿಕ ಪಾರಿಸರಿಕ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದು ಆತಂಕದ ವಿಷಯ. ಅಭಿವೃದ್ಧಿಯ ನೆಪದಲ್ಲಿ ಪರಿಸರದ ಹಾನಿ ತಪ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಅನಾಹುತ ಖಂಡಿತ.

ಅಭಿವೃದ್ಧಿಯ ಪ್ರಯತ್ನಗಳು ಪರಿಸರವನ್ನು ನಾಶ ಮಾಡಬಾರದು ಹಾಗೂ ಅಭಿವೃದ್ಧಿಯು ಮುಂದಿನ ತಲೆಮಾರುಗಳ ವರೆಗೂ ನಿರಂತರವಾಗಿರಬೇಕೆಂಬ ಉದ್ದೇಶದಿಂದ ಹುಟ್ಟಿಕೊಂಡ ಪರಿಕಲ್ಪನೆಯೇ ಸಹ್ಯ ಅಭಿವೃದ್ಧಿ ಅಥವಾ ಸುಸ್ಥಿರ ಅಭಿವೃದ್ಧಿ. ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಮಾನತೆ ಮತ್ತು ಪರಿಸರ ಸಂರಕ್ಷಣೆಯನ್ನು ಸುಭದ್ರಗೊಳಿಸುವುದು ಸುಸ್ಥಿರ ಅಭಿವೃದ್ಧಿಯ ಪ್ರಮುಖ ಗುರಿಯಾಗಿದೆ. ಈ ಮೂರು ಅಂಶಗಳು ಸಾಮರಸ್ಯದಿಂದ ಕೆಲಸ ಮಾಡಬಹುದಾದರೂ ಅವುಗಳು ಒಂದಕ್ಕೊಂದು ಸಂಘರ್ಷಕ್ಕೆ ಒಳಗಾಗುವುದೇ ಹೆಚ್ಚು.

2015ರಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಒಟ್ಟಾಗಿ ಜಗತ್ತಿನ ಆರ್ಥಿಕ, ಸಾಮಾಜಿಕ ಮತ್ತು ಪರಿಸರಗಳ ಸುಸ್ಥಿರ ಅಭಿವೃದ್ಧಿಗಾಗಿ 17 ಪ್ರಮುಖ ಜಾಗತಿಕ ಉದ್ದೇಶಗಳನ್ನು ಅಳವಡಿಸಿಕೊಂಡಿದ್ದು 2030ರ ವೇಳೆಗೆ ಅದನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಇದು ಬಡತನ ನಿರ್ಮೂಲನೆ, ಜೀವನ ಮಟ್ಟದ ಬದಲಾವಣೆ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಶಿಕ್ಷಣ, ಮೂಲ ಆವಶ್ಯಕತೆಗಳ ಪೂರೈಕೆ ಹಾಗೂ ಪರಿಸರ ಸಂರಕ್ಷಣೆಯಂತಹ ಮೂಲ ಉದ್ದೇಶಗಳನ್ನು ಹೊಂದಿದ್ದು ಜಾಗತಿಕ ಶಾಂತಿ ಹಾಗೂ ಸಮೃದ್ಧಿಗಾಗಿ ಶ್ರಮಿಸುತ್ತದೆ. ಜಾಗತಿಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ವಿಶ್ವದ ನಾಯಕರು ಸೆಪ್ಟಂಬರ್‌ 2015ರ ಅಂತ್ಯದ ವೇಳೆಗೆ ಅಳವಡಿಸಿಕೊಂಡಿದ್ದು 2030ರ ವರೆಗೆ ಮಾನ್ಯವಾಗಿರುತ್ತವೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಗ್ಲೋಬಲ್‌ ಗೋಲ್ಸ್‌ ಎಂದೂ ಕರೆಯುತ್ತಾರೆ. ಸಹಸ್ರಮಾನದ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವುದು ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳ ಗುರಿಯಾಗಿವೆ.

ಅಭಿವೃದ್ಧಿ ಹಾಗೂ ಉತ್ತಮ ಜೀವನ ಮಟ್ಟವನ್ನು ಹೊಂದಲು ಮಾಡುವ ವಿವಿಧ ಚಟುವಟಿಕೆಗಳು ಪರಿಸರವನ್ನು ಹಾನಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಧಿಕ ಆದಾಯ ಹಾಗೂ ಜೀವನಮಟ್ಟದ ಹೆಚ್ಚಳದ ಗುರಿಯನ್ನು ಸಾಧಿಸುವ ಉದ್ದೇಶದಿಂದ ಅಧಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ಪಾದನೆ ಹಾಗೂ ಇತರ ಆರ್ಥಿಕ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ಆದಾಯದ ಹೆಚ್ಚಳವು ಜನರ ಅನುಭೋಗವನ್ನು ಹೆಚ್ಚಿಸುವುದರ ಮೂಲಕ ಸೃಷ್ಟಿಯಾಗುವ ತ್ಯಾಜ್ಯ ಉತ್ಪನ್ನಗಳು ಭೂಮಿಯನ್ನು, ಪರಿಸರವನ್ನು ಕಲುಷಿತಗೊಳಿಸುತ್ತಿವೆ. ಇದರಿಂದ ನಮ್ಮ ಪೀಳಿಗೆ ಮಾತ್ರವಲ್ಲದೆ ಮುಂದಿನ ಪೀಳಿಗೆಗೆ ಅಪಾರ ನಷ್ಟವಿದೆ. ಬಡತನ ಮತ್ತು ಪರಿಸರ ಅವನತಿ ಯೊಂದಿಗೆ ಆರೋಗ್ಯಕರ ಸಮಾಜ ಅಥವಾ ಉತ್ತಮ ಆರ್ಥಿಕತೆಯಲ್ಲಿ ಬದುಕಲು ಸಾಧ್ಯವಿಲ್ಲ ಎನ್ನುವುದು ವಾಸ್ತವ. ಆರ್ಥಿಕ ಬೆಳವಣಿಗೆಯು ಮಾನವನ ಜೀವನ ಮಟ್ಟವನ್ನು ಉತ್ತಮಗೊಳಿಸಲು ಅವಶ್ಯ ವಾದರೂ ಆದು ಪರಿಸರದ ಗುಣಮಟ್ಟವನ್ನು ನಾಶ ಮಾಡ   ದಂತಿರಬೇಕು. ಸಂಪನ್ಮೂಲಗಳು ಮುಂದಿನ ತಲೆ ಮಾರಿನ ಜನರಿಗೂ ಲಭ್ಯವಾಗುವಂತಿರಬೇಕು. ಅಭಿ ವೃದ್ಧಿ ಶೀಲ ದೇಶಗಳಿಗೆ ಇದು ಅತೀ ದೊಡ್ಡ ಸವಾಲು.

ಸುಸ್ಥಿರ ಅಭಿವೃದ್ಧಿಯ ಮುಖ್ಯ ಗುರಿಯು ಇಂದಿನ ಮತ್ತು ಭವಿಷ್ಯದ ಪೀಳಿಗೆಗಳ ಸಮೃದ್ಧಿಯನ್ನು ಸಮತೋಲನಗೊಳಿಸುವುದಾಗಿದೆ. ಸುಸ್ಥಿರ ಅಭಿವೃದ್ಧಿಯು ಆರ್ಥಿಕ, ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಜಂಟಿಯಾಗಿ ಪರಿಹರಿಸುವ ಮೂಲಕ ಆರೋಗ್ಯಕರ ಸಮುದಾಯವನ್ನು ಅಭಿವೃದ್ಧಿಪಡಿಸಲು ದೀರ್ಘ‌ಕಾಲೀನ, ಸಮಗ್ರ ವಿಧಾನವನ್ನು ಒಳಗೊಂಡಿರುವ ಕಲ್ಪನೆಯಾಗಿದೆ. ಇದು ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಮತ್ತು ವಿವೇಚನಾರಹಿತವಾದ ಬಳಕೆಯನ್ನು ತಪ್ಪಿಸುತ್ತದೆ.

ಸುಸ್ಥಿರ ಅಭಿವೃದ್ಧಿಯು ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮತ್ತು ಬಳಸುವ ವಿಧಾನಗಳನ್ನು ಪ್ರೋತ್ಸಾಹಿಸುತ್ತದೆ. ಉದ್ಯೋಗ, ಆಹಾರ, ಇಂಧನ, ನೀರು ಮತ್ತು ನೈರ್ಮಲ್ಯದ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಯಾವುದೇ ದೇಶದ ಪ್ರಮುಖ ಕರ್ತವ್ಯವಾಗಿದೆ. ಇದನ್ನು ಸಮರ್ಥನೀಯ ರೀತಿಯಲ್ಲಿ ಮಾಡಬೇಕಾದರೆ ಜನಸಂಖ್ಯೆಯ ಪ್ರಮಾಣವನ್ನು ನಿಯಂತ್ರಿಸಿ ಮಾನವ ಗುಣಮಟ್ಟವನ್ನು ಹೆಚ್ಚಿಸುವ ಆವಶ್ಯಕತೆಯಿದೆ.

ಸುಸ್ಥಿರ ಅಭಿವೃದ್ಧಿಯ ಪ್ರಮುಖ ಅಂಶಗಳಾದ ಸಾಮಾಜಿಕ ಪ್ರಗತಿ ಮತ್ತು ಸಮಾನತೆ, ಪರಿಸರ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸ್ಥಿರ ಆರ್ಥಿಕ ಬೆಳವಣಿಗೆಗಳನ್ನು ಸಾಧಿಸಲು ಸರಕಾರ ಹಾಗೂ ಜನರ ಶ್ರಮದ ಅಗತ್ಯವಿದೆ. ಪ್ರತಿಯೊಬ್ಬರಿಗೂ ಆರೋಗ್ಯಕರ, ಸ್ವತ್ಛ ಮತ್ತು ಸುರಕ್ಷಿತ ಪರಿಸರವನ್ನು ಹೊಂದುವ ಹಕ್ಕಿದೆ. ಪರಿಸರ ಮಾಲಿನ್ಯ, ಬಡತನ, ಕಳಪೆ ವಸತಿ ಮತ್ತು ನಿರುದ್ಯೋಗವನ್ನು ಕಡಿಮೆ ಮಾಡುವ ಮೂಲಕ ಇದನ್ನು ಸಾಧಿಸಬಹುದು. ಇಂದಿನ ಪೀಳಿಗೆ ಮತ್ತು ಭವಿಷ್ಯದ ಪೀಳಿಗೆಗಳಲ್ಲಿ ಯಾರಿಗೂ ಅನ್ಯಾಯವಾಗದಂತಹ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ.

ಹವಾಮಾನ ಬದಲಾವಣೆ, ತಾಪಮಾನ ಏರಿಕೆ, ಕಲುಷಿತ ಗಾಳಿ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆಯಂತಹ ಜಾಗತಿಕ ಪಾರಿಸರಿಕ ಸಮಸ್ಯೆ ಗಳನ್ನು ಕಡಿಮೆ ಮಾಡದ ಹೊರತು ಅಭಿವೃದ್ಧಿ ನಿರಂತರವಾಗಲಾರದು. ಹಾಗೆಂದು ಸಂಪನ್ಮೂಲಗಳ ಬಳಕೆ ಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗದು. ಆದರೆ ಅವು ಗಳನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಮತ್ತು ಮಿತವಾಗಿ ಬಳಸಬೇಕು. ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ಅವುಗಳ ಪರ್ಯಾಯಗಳ ಬಳಕೆ ಹಾಗೂ ಅಭಿವೃದ್ಧಿಯನ್ನು ಪ್ರೋತ್ಸಾಹಿಸಬೇಕು. ಈ ಕುರಿತು ಜನರಲ್ಲೂ ಜಾಗೃತಿ ಮೂಡಿಸುವ ಆವಶ್ಯಕತೆ ಇದೆ.

ಉತ್ತಮ ಉದ್ಯೋಗಾವಕಾಶಗಳೊಂದಿಗೆ ಉತ್ತಮ ಜೀವನಮಟ್ಟ ಪ್ರತಿಯೊಬ್ಬರ ಹಕ್ಕು. ನಮ್ಮ ದೇಶವು ಅಭಿವೃದ್ಧಿ ಹೊಂದಬೇಕಾದರೆ ಆರ್ಥಿಕ ಹಾಗೂ ಸಾಮಾಜಿಕ ಸಮೃದ್ಧಿಯ ಅಗತ್ಯವಿದೆ. ಇದಕ್ಕಾಗಿ ಅಧಿಕ ಹೂಡಿಕೆ ಮತ್ತು ಅಧಿಕ ಉತ್ಪಾದನೆಗಳ ಆವಶ್ಯಕತೆಯಿದೆ. ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಾದಾಗ ಅವರ ಜೀವನ ಮಟ್ಟ ಸುಧಾರಿಸಲು ಸಾಧ್ಯ. ಬಡತನ, ಹಸಿವು, ಆರ್ಥಿಕ ಅಸಮಾನತೆ ಮುಂತಾ ದವು ಗಳಿಂ ದಾಗಿ ಬಡರಾಷ್ಟ್ರಗಳು ಮುಂದೆ ಸಾಗಲು ಸಾಧ್ಯ ವಾಗು ತ್ತಿಲ್ಲ. ಇದಕ್ಕಾಗಿ ಸರಕಾರದ ನ್ಯಾಯಯುತ ಸೂಕ್ತ ಯೋಜನೆಗಳು ಜನರನ್ನು ತಲುಪಬೇಕು. ಜನರ ಸಾಮರ್ಥ್ಯವನ್ನು ಹೆಚ್ಚಿಸಿ ಜೀವನ ಮಟ್ಟವನ್ನು ಬದಲಿಸಬಹುದು. ಭ್ರಷ್ಟಾಚಾರ ಮುಕ್ತವಾದ ದಕ್ಷ ಆಡಳಿತದಿಂದ ಇದನ್ನು ಸಾಧಿಸಬಹುದು.

ಸುಸ್ಥಿರ ಅಭಿವೃದ್ಧಿಗಾಗಿ ಕೆರೆ, ನದಿ, ಸಮುದ್ರ, ಸರೋವರಗಳಂತಹ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಿ ಸಮರ್ಥನೀಯವಾಗಿ ಬಳಸಿಕೊಳ್ಳಬೇಕು. ಸುಸ್ಥಿರ ಅರಣ್ಯಕ್ಕಾಗಿ ಕಾಡು-ಮರ, ಗುಡ್ಡ-ಬೆಟ್ಟಗಳ ನಾಶ ವನ್ನು ತಡೆಯಬೇಕು. ಸುಸ್ಥಿರ ಕೃಷಿ ಹಾಗೂ ಆಹಾರ ಕ್ಕಾಗಿ ಮಣ್ಣಿನ ಮಾಲಿನ್ಯ ಹಾಗೂ ಗುಣ ಮಟ್ಟದ ಅವನತಿಯನ್ನು ತಡೆಯಬೇಕು. ಪರಿಸರ ಸಮತೋಲನ ವನ್ನು ಕಾಯ್ದುಕೊಳ್ಳಲು ಅಮೂಲ್ಯ ವಾದ ಜೀವವೈವಿಧ್ಯವನ್ನು ಉಳಿಸಿಕೊಳ್ಳಬೇಕು ಬೇಕು. ಪರಿಸರವನ್ನು ಶುದ್ಧವಾಗಿ ಉಳಿಸಿದರೆ ಮಾತ್ರ ನಾವು ಮತ್ತು ನಮ್ಮ ಮಕ್ಕಳ ಭವಿಷ್ಯ ಉತ್ತಮ ವಾಗಿ ಉಳಿಯಲು ಸಾಧ್ಯ. ಶಾಂತಿಯುತ ಮತ್ತು ಎಲ್ಲರನ್ನೂ ಒಳಗೊಂಡಂತಹ ಬೆಳವಣಿಗೆ, ಎಲ್ಲರಿಗೂ ನ್ಯಾಯವನ್ನು ಒದಗಿಸುವ ಮೂಲಕ ಬೆಳವಣಿಗೆ ಯನ್ನು ಮುಂದಿನ ತಲೆಮಾರುಗಳ ವರೆಗೆ ಪರಿಣಾಮಕಾರಿಯಾಗಿಸಬಹುದು ಮತ್ತು ಸುಸ್ಥಿರ ವಾಗಿರಿಸಬಹುದು.

– ವಿದ್ಯಾ ಅಮ್ಮಣ್ಣಾಯ, ಕಾಪು

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.