ತಲ್ಲಣಗೊಳಿಸುತ್ತಿರುವ ವೈರಸ್‌ ಧ್ವನಿ, ಶಿವಾನಿಯ ವಾಣಿ…


Team Udayavani, Mar 14, 2020, 6:59 AM IST

ತಲ್ಲಣಗೊಳಿಸುತ್ತಿರುವ ವೈರಸ್‌ ಧ್ವನಿ, ಶಿವಾನಿಯ ವಾಣಿ…

ಒಟ್ಟಾರೆ ಪ್ರಾಣಿಗಳ ಲಕ್ಷಣವಾದರೂ ಏನು ಎಂಬುದನ್ನು ಶಿವಾನಿ ಬಣ್ಣಿಸುತ್ತಾರೆ. ಅವು ಸಿಟ್ಟು, ಅಸಹಾಯಕತೆ, ಹಿಂಸೆ, ಸಾವಿನಲ್ಲಿ ಪರ್ಯವಸಾನ ಹೊಂದುತ್ತವೆ. ಇವುಗಳನ್ನು ಕೂಡಿ ಹಾಕುವ, ವಧಿಸುವ ವಧಾಗೃಹದ ಸುತ್ತ ಎಂತಹ ಎನರ್ಜಿ ಇರಬಹುದು?

ಕೊರೊನಾ ಜಾಗತಿಕ ಸುದ್ದಿ ಮಾಡುವ ಸಂದರ್ಭ ದಲ್ಲಿಯೇ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ರಾಜಯೋಗಿನಿ, ಪ್ರಸಿದ್ಧ ಪ್ರವಚನಕಾರ್ತಿ ಬಿ.ಕೆ. ಶಿವಾನಿ ತಮ್ಮ ಪ್ರವಾಸದ ಉಪನ್ಯಾಸದಲ್ಲಿ ಆಹಾರ ಶುದ್ಧತೆ ಕುರಿತು ಬೆಟ್ಟು ಮಾಡಿದ್ದಾರೆ. ಚೀನಾದಲ್ಲಿ 25 ವರ್ಷಗಳ ಹಿಂದೆ ತಲಾ 5 ಕೆ.ಜಿ. ಮಾಂಸವನ್ನು ಆಹಾರವಾಗಿ ಬಳಸುತ್ತಿದ್ದರೆ ಈಗ ಇದರ ಪ್ರಮಾಣ 60 ಕೆ.ಜಿ.ಗೆ ಏರಿದೆ. ಅಲ್ಲಿ ಬಾವಲಿ, ಕಪ್ಪೆ, ನಾಯಿ, ಬೆಕ್ಕು, ಹಾವುಗಳನ್ನೂ ಆಹಾರವಾಗಿ ಬಳಸುತ್ತಿದ್ದಾರೆ. ಮಂಗಗಳ ಮಾಂಸ ಅಲ್ಲಿ ದುಬಾರಿ. ಬ್ರೆಡ್‌ಗೆ ಸ್ಲೆ„ಸ್‌ ಆಗಿ ಹಸಿ ಮಾಂಸ ತಿನ್ನುತ್ತಾರೆ. ಜಿರಲೆ, ಕುಮ್ಚೇಳು, ಮಿಡತೆ, ರಾತ್ರಿ ಓಡಾಡುವ ಕೀಟಗಳನ್ನು ಬೇಯಿಸಿ ಅಥವಾ ಹುರಿದು ರಸ್ತೆ ಬದಿ ಮಾರಾಟ ಮಾಡುತ್ತಾರೆ. ವನ್ಯಜೀವಿಗಳ ಮೂಲಕ ವೈರಸ್‌ಗಳು ಮಾನವರ ಬಳಿಗೆ ಈ ತೆರನಾಗಿ ಬರುತ್ತಿವೆ ಎಂದು ವರದಿಗಳು ಸಾರುತ್ತಿವೆ. ಇಷ್ಟು ಪ್ರಮಾಣದಲ್ಲಿ ಮಾಂಸದ ಬಳಕೆ ತಲಾವಾರು ಏರಿಕೆಯಾದರೆ ಪೂರೈಕೆಯಾಗಬೇಕಾದ ಪ್ರಾಣಿಗಳ ಸಂಖ್ಯೆ ಎಷ್ಟು ಹೆಚ್ಚಿಗೆಯಾಗಬೇಕು?

ತಲಾವಾರು ಮಾಂಸ ಬಳಕೆ
ಜಾಗತಿಕವಾಗಿ 1961ರಲ್ಲಿ ತಲಾ 20 ಕೆ.ಜಿ. ಮಾಂಸ ಬಳಕೆಯಾಗುತ್ತಿದ್ದರೆ 2014ರಲ್ಲಿ 43 ಕೆ.ಜಿ.ಗೆ ಏರಿದೆ. 1961ಕ್ಕೆ ಹೋಲಿಸಿದರೆ ಚೀನದ ಮಾಂಸ ಬಳಕೆ 15 ಪಟ್ಟು ಹೆಚ್ಚಿಗೆಯಾಗಿದ್ದರೆ ಭಾರತದಲ್ಲಿ ಮಾತ್ರ ಇಷ್ಟು ವರ್ಷವೂ ತಲಾವಾರು 4 ಕೆ.ಜಿ. ಆಸುಮಾಸಿನಲ್ಲಿಯೇ ಇದೆ. ಇದೇ ವೇಳೆ ಜನಸಂಖ್ಯೆ ಹೆಚ್ಚಳವಾಯಿತೆನ್ನುವುದನ್ನು ಮರೆಯು ವಂತಿಲ್ಲವಾದರೂ ಭಾರತದಲ್ಲಿ ತಲಾವಾರು ಬಳಕೆ ಅಷ್ಟೇ ಇದ್ದರೆ ಚೀನದಲ್ಲಿ ಭಾರೀ ಏರಿಕೆಯಾಗಿದೆ.

ಅಸಹಾಯಕ ಪ್ರಾಣಿಗಳ ಮಾಂಸ
ಒಟ್ಟಾರೆ ಪ್ರಾಣಿಗಳ ಲಕ್ಷಣವಾದರೂ ಏನು ಎಂಬುದನ್ನು ಶಿವಾನಿ ಬಣ್ಣಿಸುತ್ತಾರೆ. ಅವು ಸಿಟ್ಟು, ಅಸಹಾ ಯಕತೆ, ಹಿಂಸೆ, ಸಾವಿನಲ್ಲಿ ಪರ್ಯವಸಾನ ಹೊಂದುತ್ತವೆ. ಇವುಗಳನ್ನು ಕೂಡಿ ಹಾಕುವ, ವಧಿಸುವ ವಧಾಗೃಹದ ಸುತ್ತ ಎಂತಹ ಎನರ್ಜಿ ಇರಬಹುದು? ಆ ಹಿಂಸೆಯನ್ನು ಅನುಭವಿಸಿದ ವಾತಾವರಣವನ್ನು ಮನೆಯೊಳಗೆ ತಂದರೆ ನೆಗೆಟಿವ್‌ ಶಕ್ತಿಗಳೂ ಬರುವುದಿಲ್ಲವೆ? ಮನೆಯ ಮನು ಷ್ಯರೂ ಸೇರಿದಂತೆ ಯಾವುದೇ ಪ್ರಾಣಿ ಸತ್ತ ಬಳಿಕ ಅವುಗಳನ್ನು ಮನೆಯೊಳಗೆ ಇರಿಸುವುದಿಲ್ಲ. ವಧಾಗೃ ಹದಿಂದ ತಂದ ಪ್ರಾಣಿಗಳ ಮಾಂಸವನ್ನು ತಂದು ಫ್ರಿಡ್ಜ್ ನಲ್ಲಿರಿಸಿದರೆ ಮನೆಯೊಳಗೆ ನೆಗೆಟಿವ್‌ ಶಕ್ತಿಗಳು ಹರಡಿಕೊಂಡಿರುತ್ತವೆ.

ಮಾಂಸೋತ್ಪಾದನೆಯಲ್ಲಿ ಏರಿಕೆ
ಜಗತ್ತಿನ ಮಾಂಸೋತ್ಪಾದನೆಯ ಪ್ರಮಾಣ ಕಳೆದ 50 ವರ್ಷಗಳಲ್ಲಿ ಭಾರೀ ಏರಿಕೆಯಾಗಿದೆ. 1961ರಲ್ಲಿದ್ದ 5 ಕೋ. ಟನ್‌ 2013ರಲ್ಲಿ 30 ಕೋ.ಟನ್‌ಗೆ ಏರಿದೆ. 1961ರಲ್ಲಿ ಸುಮಾರು 10 ಕೋಟಿ ಕೋಳಿ, ಹಂದಿ, ಅಮೆರಿಕದ ಕೋಳಿ ಟರ್ಕಿ, ಕುರಿ, ಆಡು, ಜಾನು ವಾರುಗಳನ್ನು ಮಾಂಸಕ್ಕಾಗಿ ವಧೆ ಮಾಡಿದ್ದರೆ, 2013ರಲ್ಲಿ ವಧೆಯಾದ ಪ್ರಾಣಿಗಳ ಸಂಖ್ಯೆ 60 ಕೋಟಿ.

ಕೃತಕ ಮಾಂಸ-ರೋಗಗಳೂ ಕೃತಕ?
ನಮ್ಮಲ್ಲಿ ಸುಮಾರು 25 ವರ್ಷಗಳ ಹಿಂದೆ ನಾಟಿ ಕೋಳಿಗಳನ್ನು ವರ್ಷಕ್ಕೆ ಕೆಲವೇ ಬಾರಿ ಬಳಸುತ್ತಿದ್ದರು. ನಾಟಿ ಕೋಳಿಗಳ ಸಂಖ್ಯೆ ಒಂದು ಮಿತಿಯಲ್ಲಿ ಬೆಳೆ ಯುತ್ತವೆ. ಬ್ರಾಯ್ಲರ್‌ ಕೋಳಿ ಉದ್ಯಮ ಬೆಳೆದಾಗ ಕೋಳಿ ಮಾಂಸದ ಬಳಕೆ ಜಾಸ್ತಿಯಾಯಿತು. ಇವುಗಳನ್ನು ಕೂಡಿ ಹಾಕಿ ಬೆಳೆಸುವುದು, ಕೆಮಿಕಲ್‌ ಮಿಶ್ರಿತ ಆಹಾರಗಳನ್ನು ಕೊಡುವುದು, ಕೃತಕವಾಗಿ ಅವುಗಳ ತೂಕ ಹೆಚ್ಚಳಗೊ ಳಿಸುವುದು ಎಲ್ಲರಿಗೂ ಗೊತ್ತಿದೆ. ಇಂತಹ ಮಾರ್ಗಗಳಿಂದ ಬೆಳೆದ ಮಾಂಸ ಆಹಾರವಾಗಿ ನಮ್ಮ ಶರೀರದೊಳಗೆ ಹೋಗುತ್ತಿವೆ. ಅಂಕಿಅಂಶಗಳ ಪ್ರಕಾರ ಪ್ರಾಣಿಗಳ ವಧಾಗೃ ಹದಿಂದ ಪರಿಸರ ಹಾನಿಯೂ ಉಂಟಾಗುತ್ತಿದೆ. ರಾಸಾ ಯನಿಕ ಪ್ರಯೋಗ ಸಸ್ಯಾಹಾರವನ್ನೂ ಬಿಡಲಿಲ್ಲವೆನ್ನಿ.

ಪ್ರಾಣಿಗಳ ಸಂಖ್ಯೆ ಮತ್ತು ತೂಕವನ್ನು ಕೃತಕವಾಗಿ ಹೆಚ್ಚಿಸಿ ಅವುಗಳನ್ನು ಆಹಾರಕ್ಕಾಗಿ ಕೊಲ್ಲುವ ಪ್ರಮಾಣ ಹೆಚ್ಚಿವೆ. ಇವು ಒಟ್ಟಾರೆ ಉಂಟು ಮಾಡುವ ಪಾರಿಸರಿಕ ಅಸಮತೋಲನ ಯೋಚಿಸಿದರೆ ಭಯಾನಕವಾಗಿ ತೋರುತ್ತದೆ. ಈಗ ಚೀನದ ಮೂಲಕ ಕೊರೊನಾ ವೈರಸ್‌ ಜಗತ್ತನ್ನೇ ತಲ್ಲಣಗೊಳಿಸುವ ರೀತಿ ತನ್ನ ವಿಶ್ವರೂಪವನ್ನು ತೋರಿಸುತ್ತಿದೆ.

ಇಲ್ಲಿ ಯೋಚಿಸಬೇಕಾದ ಇನ್ನೊಂದು ವಿಚಾರ ಮೊದಲೇ ಬಲಾತ್ಕಾರದಲ್ಲಿ ಕೊಂದ ಪ್ರಾಣಿಗಳ ಮಾಂಸ ವನ್ನು ಫ್ರಿಡ್ಜ್ನಲ್ಲಿರಿಸಿ ಬಳಸುವುದು. ಒಂದರ್ಥದಲ್ಲಿ ಫ್ರಿಡ್ಜ್ ಅಂದರೆ ಕೃತಕ ಉಸಿರಾಟದ ಸಾಧನದಂತೆ. ಫ್ರಿಡ್ಜ್ ಕೂಡ ಪದಾರ್ಥಗಳನ್ನು ಕೆಡದಂತೆ ಹಿಡಿದಿಟ್ಟುಕೊಂಡಿರುತ್ತದೆ. ಸತ್ತ ಜೀವಿಗಳು (ಜೀವಾತ್ಮಗಳು) ಅನುಭವಿಸಿದ ಕಷ್ಟ, ಅಸಹಾಯಕತೆ, ದುಃಖಗಳ ನೆಗೆಟಿವ್‌ ಶಕ್ತಿಗಳನ್ನೂ ಫ್ರಿಡ್ಜ್ ಕೆಡದಂತೆ ರಕ್ಷಿಸಿಕೊಳ್ಳಬಹುದು ಎಂದು ಕೆಲವರ ವಾದ ವಿದೆ. ಮಾಂಸಾಹಾರಗಳನ್ನು ಹೇಗೆ ಫ್ರಿಡ್ಜ್ನಲ್ಲಿರುತ್ತೇವೋ ಅದೇ ಸ್ಥಿತಿ ಸಸ್ಯಾಹಾರಕ್ಕೂ ಇದೆ ಎನ್ನುವುದನ್ನು ಮರೆ ಯುವಂತಿಲ್ಲ.

ಯೋಗಗುರು ಬಾಬಾ ರಾಮ್‌ದೇವ್‌ ಕೂಡ ಶಿವಾನಿ ತೆರನಾದ ಮಾತುಗಳನ್ನಾಡುತ್ತಾರೆ. “ಮೊಟ್ಟೆ ಪೌಷ್ಟಿಕಾಂಶವುಳ್ಳ ಆಹಾರ ಎನ್ನುತ್ತಾರೆ. ಅದು ಎಲ್ಲಿಂದ ಬಂದಿದೆ ಎಂದು ಒಂದು ಕ್ಷಣ ಯೋಚಿಸಿ. ಅದನ್ನೂ ತಿನ್ನುತ್ತೀರಲ್ಲಾ? ಪ್ರಾಣಿಗಳಾದರೂ ಇನ್ನೊಂದು ಪ್ರಾಣಿಗಳ ಮಾಂಸವನ್ನು ಹಲ್ಲು ಮತ್ತು ಕೈಯಿಂದ ತಿನ್ನುತ್ತವೆ. ನಮ್ಮ ಹಲ್ಲುಗಳು ಪ್ರಾಣಿಗಳ ಮಾಂಸ ತಿನ್ನಲು ಸೂಕ್ತ ವಿನ್ಯಾಸ ಹೊಂದಿಲ್ಲ. ಪ್ರಾಣಿಗಳಂತೆ ಹಸಿಯಾಗಿಯೂ, ನೇರ ಹಲ್ಲುಗಳಿಂದಲೂ ತಿನ್ನದೆ ಆಯುಧಗಳನ್ನು ಬಳಸಿ, ರುಚಿಗಾಗಿ ಸಂಸ್ಕರಿಸಿ ತಿನ್ನುತ್ತೇವೆ’ ಎಂದು ವ್ಯಂಗ್ಯವಾಡುತ್ತಾರೆ ರಾಮ್‌ದೇವ್‌.

ಮಂದಿರ, ಮನೆ, ಹೊಟೇಲು…
ಇಲ್ಲಿ ಮಾಂಸಾಹಾರ, ಸಸ್ಯಾಹಾರದ ವಿಷಯ ಮುಖ್ಯವಲ್ಲ. ಅದು ಸೃಷ್ಟಿಸುವ ಶಕ್ತಿ ಮುಖ್ಯ. ದೇವಸ್ಥಾನ, ಗುರುದ್ವಾರ, ಮಂದಿರ, ಮಸೀದಿಗಳಲ್ಲಿ ಪ್ರಸಾದವನ್ನು ತಯಾರಿಸಿದರೆ ಮನೆಗಳಲ್ಲಿ ತಾಯಂದಿರು ಮನೆಮಂದಿ ಗಾಗಿ ಆಹಾರ ತಯಾರಿಸುತ್ತಾರೆ. ಹೊಟೇಲುಗಳಲ್ಲಿ ಹಣಕ್ಕಾಗಿ ಆಹಾರ ತಯಾರಿಸುತ್ತಾರೆ. ಇಲ್ಲಿರುವ ಮನಸ್ಸುಗಳೇ ಶಕ್ತಿ. ಒಂದು ಸಕಾರಾತ್ಮಕ ಶಕ್ತಿಯಾದರೆ, ಇನ್ನೊಂದು ನಕಾರಾತ್ಮಕ ಶಕ್ತಿಗಳನ್ನು ಹುಟ್ಟುಹಾಕುತ್ತವೆ. ಒಂದರಲ್ಲಿ ಭಕ್ತಿ, ಪ್ರೀತಿ ಇದ್ದರೆ, ಇನ್ನೊಂದರಲ್ಲಿ ಇರುವುದಿಲ್ಲ. ಮನೆಯಲ್ಲಿಯೇ ಪ್ರಸಾದ ತಯಾರಿಸಿ ಮನೆಯನ್ನೇ ಮಂದಿರ ಮಾಡಬೇಕು, ಹೊಟೇಲ್‌ ಊಟ ಕೈಬಿಡಬೇಕೆಂಬ ಸಲಹೆ ಶಿವಾನಿಯವರದು. ರಾಮ್‌ದೇವ್‌ ಸಸ್ಯಾಹಾರದ ಬೋರ್ಡ್‌ ಹೊತ್ತ ಸಕ್ಕರೆ, ಮೈದಾವನ್ನೂ “ಛೋಡೋ’ ಎನ್ನಲು ಮರೆಯಲಿಲ್ಲ. ಇವುಗಳೇ ಅನೇಕ ಬಗೆಯ ರೋಗಗಳನ್ನು ಹರಡುವಂತಾದರೆ ಇನ್ನು ಅಸಹಾಯಕ ಪ್ರಾಣಿಗಳ ಮಾಂಸದ ನೆಗೆಟಿವ್‌ ಶಕ್ತಿಗಳು ಎಷ್ಟು ಬಗೆಯ ರೋಗಗಳನ್ನು ಹರಡಲಿಕ್ಕಿಲ್ಲ…? ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಆಹಾರ ಶುದ್ಧತೆ ಕುರಿತು ಹೇಳಿರುವುದನ್ನೇ ಈಗ ಪರಿಣಿತರು ತಮ್ಮ ವ್ಯಾಪ್ತಿಯ ಜನರಿಗೆ, ತಾವು ಕಲಿತ/ ಕಲಿಸುವ ಭಾಷೆಯಲ್ಲಿ ಅರ್ಥವಾಗುವಂತೆ ಹೇಳುತ್ತಿದ್ದಾರೆ.

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವುರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೌಕರಶಾಹಿಯ ದಕ್ಷತೆಗೆ ಸರಕಾರದ ಪ್ರೋತ್ಸಾಹ ಅಗತ್ಯ

ನೌಕರಶಾಹಿಯ ದಕ್ಷತೆಗೆ ಸರಕಾರದ ಪ್ರೋತ್ಸಾಹ ಅಗತ್ಯ

ಶಿಕ್ಷಣ ಸಂಸ್ಥೆಗಳ ನಿಯಮ ಪಾಲನೆ ವಿದ್ಯಾರ್ಥಿಗಳ ಕರ್ತವ್ಯ

ಶಿಕ್ಷಣ ಸಂಸ್ಥೆಗಳ ನಿಯಮ ಪಾಲನೆ ವಿದ್ಯಾರ್ಥಿಗಳ ಕರ್ತವ್ಯ

ಅನ್ನದಾತನ ನೆರವಿಗೆ ನಿಂತ ಬೊಮ್ಮಾಯಿ ಸರಕಾರ

ಅನ್ನದಾತನ ನೆರವಿಗೆ ನಿಂತ ಬೊಮ್ಮಾಯಿ ಸರಕಾರ

ಮತಾಂತರ ನಿಷೇಧ ಕಾಯ್ದೆ: ಸಾಮಾಜಿಕ ಸಾಮರಸ್ಯವೇ ಗುರಿ

ಮತಾಂತರ ನಿಷೇಧ ಕಾಯ್ದೆ: ಸಾಮಾಜಿಕ ಸಾಮರಸ್ಯವೇ ಗುರಿ

ಬೂಸ್ಟರ್‌ ಡೋಸ್‌ಗೆ ಈಗ ಕಾಲ ಪಕ್ವವಾಗಿದೆಯೇ?

ಮತ್ತೆ ಹುಟ್ಟುಹಾಕಿದೆ…ಬೂಸ್ಟರ್‌ ಡೋಸ್‌ಗೆ ಈಗ ಕಾಲ ಪಕ್ವವಾಗಿದೆಯೇ?

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವುರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.