ಹೇಗೆ ಸೃಷ್ಟಿಯಾಯಿತು ಈ ಮನಸ್ಥಿತಿ?

Team Udayavani, Dec 8, 2019, 4:36 AM IST

ಈ ನೋವು ಆಕೆಯ ಹೆತ್ತವರ ನೋವು ಮಾತ್ರವಲ್ಲ. ಇಡಿಯ ಭಾರತದ, ವಿಶ್ವದ ಹೆತ್ತವರ ನೋವು. ಆದರೂ ನೇರ ನಾಟುವ ಶೂಲ ನೀಡುವ ನೋವಿಗೂ, ಬಳಿಯಲ್ಲಿ ಇದ್ದವರ ಎದೆಗೆ ನಾಟುವ ನೋವನ್ನು ಕಲ್ಪಿಸಿ ಅನುಭವಿಸುವುದಕ್ಕೂ ವ್ಯತ್ಯಾಸ ಇದೆ.

ಚಡಪಡಿಸುತ್ತಿದ್ದೇನೆ. ಹೊಟ್ಟೆಯೊಳಗೆ ಜ್ವಾಲೆ ಭುಗಿಲೇಳುತ್ತಿದೆ. ತಾಳಲಾರೆ. ನನಗೇ ಈ ಪರಿ ನೋವಾಗಿರುವಾಗ, ಅತ್ಯಾಚಾರಕ್ಕೆ ಒಳಗಾದ ಪಶುವೈದ್ಯೆಯ ಹೆತ್ತವರ ಸಂಕಟ ಹೇಗಿರಬಹುದು? ನಿರ್ಭಯಾಳ ಮನೆಯವರ ಸಂಕಟ ಹೇಗಿರಬಹುದು? ಈ ದೇಶದಲ್ಲಿ ಹಸುಳೆಗಳಿಂದ ಹಿಡಿದು ಅಜ್ಜಿಯಂದಿರವರೆಗೆ ಅತ್ಯಾಚಾರಕ್ಕೆ ಒಳಗಾಗುವ, ಪುರುಷಾಹಂಕಾರಕ್ಕೆ ಬಲಿಯಾಗುವ ಅನೇಕ ಅಸಹಾಯಕರಿದ್ದಾರೆ. ಅವರು ಮತ್ತವರ ಹೆತ್ತವರು ಈ ನೋವು ತಾಳುವರೆಂತು! ಈ ನೋವು ಆಕೆಯ ಹೆತ್ತವರ ನೋವು ಮಾತ್ರವಲ್ಲ. ಇಡಿಯ ಭಾರತದ, ವಿಶ್ವದ ಹೆತ್ತವರ ನೋವು. ಆದರೂ ನೇರ ನಾಟುವ ಶೂಲ ನೀಡುವ ನೋವಿಗೂ, ಬಳಿಯಲ್ಲಿ ಇದ್ದವರ ಎದೆಗೆ ನಾಟುವ ನೋವನ್ನು ಕಲ್ಪಿಸಿ ಅನುಭವಿಸುವುದಕ್ಕೂ ವ್ಯತ್ಯಾಸ ಇದೆ.

ಇಲ್ಲಿ ಪುರುಷಾಹಂಕಾರ ರಣ ಕೇಕೆ ಹಾಕುತ್ತಿದೆ. ರಣಹದ್ದುಗಳಂತೆ ಹಸುಳೆಗಳಿಂದ ಹಿಡಿದು ಮುದುಕಿಯರ ಮೇಲೆ ಎರಗಿ ಎರಗಿ, ಕುಕ್ಕಿ ಕುಕ್ಕಿ ತಿನ್ನುತ್ತಿದೆ. ಈ ದೇಶ ಧೃತರಾಷ್ಟ್ರನ ಆಸ್ಥಾನದಂತಾಗಿದೆ. ಕಣ್ಣಿಲ್ಲದ ರಾಜ. ಕಣ್ಣಿದ್ದೂ ಕುರುಡಾದ ಆಸ್ಥಾನ ಮಂದಿ. ಇಲ್ಲಿ ಅತ್ಯಾಚಾರಗಳು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿವೆ. ಇದಕ್ಕೆ ಕಾರಣ ಹೆಣ್ಣನ್ನು ಭೋಗದ ವಸ್ತು ಎಂಬಂತೆ ನೋಡು ವುದು ಹಾಗೂ ಆಕೆ ಪುರುಷಾಧೀನಳು ಎಂದು ಭಾವಿಸುವ ಅಹಂಕಾರದ ಮನಸ್ಥಿತಿ. ಎಲ್ಲಿಂದ ಬಂದಿದೆ ಈ ಮನಸ್ಥಿತಿ?

ಪುರಾಣ ಕಾಲದಿಂದಲೂ ಈ ದೇಶದ ಮಹಿಳೆಯರು ಪುರುಷಾಹಂಕಾರಕ್ಕೆ ಬಲಿಯಾದವರೇ. ಅದು ದ್ರೌಪದಿ ಇರಬಹುದು, ಸೀತೆ, ಅಹಲ್ಯೆ ಇರಬಹುದು. ಅಥವಾ ರೇಣುಕೆ ಇರಬಹುದು. ಪುರುಷಾಹಂಕಾರ ಇವರನ್ನೆಲ್ಲ ಅಮಾನುಷವಾಗಿಯೇ ನಡೆಸಿಕೊಂಡಿ ದೆ. ಆದರೂ ಇಷ್ಟು ಉದ್ದ ಯಾತ್ರೆಯಲ್ಲಿ ಮಹಿಳೆ ಮನುವಿನ ಶಾಸನದಿಂದ ಬಿಡುಗಡೆ ಪಡೆದು ಹೊರ ಜಗತ್ತಿಗೆ ಕಾಲಿಟ್ಟಿದ್ದಾಳೆ. ಆದರೂ ಆಕೆ ಬಲಿಯಾಗುವುದು ತಪ್ಪಿಲ್ಲ. ಶಾಸನಗಳು ಕಾನೂನುಗಳಿಂದ ಲೂ ಪುರುಷಾ ಹಂಕಾರವನ್ನು ಕಡಿಮೆಗೊಳಿಸಲು ಆಗಿಲ್ಲ. ಸಂಪ್ರದಾಯಬದ್ಧ ಮನಸ್ಸು ಈಗಲೂ ಮಹಿಳೆಯನ್ನು ಪುರುಷನ ಸಮನಾಗಿ ನೋಡಲು ಸಿದ್ಧ ಇಲ್ಲ. ತುಳುನಾಡ ಜನಪದ ಮಹಾಕಾವ್ಯದ ಕಥನಾಯಕಿ ಅಲೌಕಿಕ ಸಿರಿಗೂ “”ಪೊಣ್ಣಾಳ್ವಿಕೆಯಾ ಸಿರಿಯೆ?” ಎಂದು ಪ್ರಶ್ನಿಸಿತ್ತು ಅವಳ ಕಾಲದ ಪುರುಷ ವರ್ಗ. 12ನೆಯ ಶತಮಾನದಲ್ಲಿ ಆಳುಪ ಮಹಾರಾಣಿ ಬಲ್ಲಮಹಾದೇವಿ ಮಹಾರಾಣಿಯಾಗಿ ಒಡ್ಡೋಲಗ ಕೊಟ್ಟ ಆಸ್ಥಾನದಲ್ಲಿ ಪುರುಷ ಅಧಿಕಾರಿಗಳು ಇಬ್ಬದಿಗಳಲ್ಲಿ ಆಸೀನರಾಗಿದ್ದರು. ಆದರೂ ಬಲ್ಲಮಹಾದೇವಿಯ ನಾಡಿನ ಮಾತೃ ಆರಾಧನೆಯ ನೆಲದ ಮಹಿಳೆಗೆ ಕಟ್ಟುಪಾಡುಗಳನ್ನು ವಿಧಿಸಿದೆ ಪುರುಷ ಪ್ರಧಾನ ಸಮಾಜ. ಮಹಿಳೆಯರು/ರಾಣಿಯರು ರಾಜ್ಯಭಾರ ಮಾಡಿದ ಐತಿಹಾಸಿಕ ದಾಖಲೆಗಳಿದ್ದರೂ ಆನಂತರದ ದಿನಗಳಲ್ಲಿ ಮಹಿಳೆಯನ್ನು ಆಳ್ವಿಕೆಯಿಂದ ದೂರ ನಿಲ್ಲಿಸಿದ್ದು ಪುರುಷಾಹಂಕಾರವೇ ಅಲ್ಲ ವೇ? ಮಹಿಳೆ ಪಂಚಾಯತಿ ಕಣದಲ್ಲಿ ಇರಬಾರದು, ಚಾವಡಿ ಸಭೆಯಲ್ಲಿ ಭಾಗವಹಿಸಬಾರದು, ದೊಡ್ಡ ಸ್ಥಾನಗಳಿಗೆ ಹೋಗಬಾರದು, ದೇವರ ಪೂಜೆ ಮಾಡಬಾರದು- ಇಂಥ ನೂರಾರು ಕಟ್ಟುಪಾಡುಗಳು ಮಹಿಳೆಯರ ಮೇಲೆ ಪುರುಷರ ಅಧಿಪತ್ಯವನ್ನು ಸ್ಥಾಪಿಸಿವೆ.

ಪುರುಷ ಹೇಳಿದಂತೆಯೇ ಈ ಸಮಾಜ ನಡೆಯಬೇಕು. ಆತ ಶಬರಿ ಮಲೆಗೆ ಪ್ರವೇಶ ಮಾಡಲು ಅವಕಾಶ ನೀಡಿದರೆ ಮಾತ್ರ ಆಕೆ ಶಬರಿ ಮಲೆ ಪ್ರವೇಶಿಸಬಹುದಷ್ಟೆ, ಇಲ್ಲದಿದ್ದರೆ, ಇಲ್ಲ. ಇಂಥ ಮಾನಸಿಕ ಸ್ಥಿತಿ ಎಲ್ಲ ಕಡೆಯೂ ಇದೆ. ಈ ಮನಸ್ಥಿತಿಗಳೇ ಹೆಣ್ಣನ್ನು ಹತ್ತಿಕ್ಕುತ್ತಿವೆ, ಅವಳನ್ನು ಮೇಲೇಳದಂತೆ ತಡೆಯುತ್ತಿವೆ. ಪುರುಷರಿಗೆ ತಾವು ಮಹಿಳೆಯರಿಗಿಂತ ಮೇಲು ಎಂಬ ಭಾವವನ್ನು ಮೂಡಿಸು ತ್ತಿವೆ. ಇಂತಹ ನಡೆಗಳೇ ಪುರುಷರ ಅಹಂಕಾರವನ್ನು ಹೆಚ್ಚಿಸುತ್ತವೆ. ಮಹಿಳೆಯರನ್ನು ಮೂದಲಿಸಲು, ಛೇಡಿಸಲು, ಮಹಿಳೆಯರು ತಮ್ಮ ಸಮಾನ ಅಲ್ಲ ಎಂದು ಭಾವಿಸಲು ಕಾರಣವಾಗುತ್ತವೆ.

ಅದನ್ನೂ ಮೀರಿ ಬೆಳೆದರೆ ಆಕೆ ಹೀಗೆ ಪುರುಷಾಹಂಕಾರಕ್ಕೆ ಬಲಿಯಾಗುತ್ತಾಳೆ. ಹೆಣ್ಣನ್ನು ಕೀಳಾಗಿ ಕಾಣುವ ಗಂಡು ಮಕ್ಕಳು-ಪುರುಷರು ಇಂತಹ ಮಾನಸಿಕ ಸ್ಥಿತಿಯಿಂದ ಹೊರ ಬರುವ ವಾತಾವರಣವನ್ನು ನಿರ್ಮಿಸಬೇಕಾಗಿದೆ. ಮನೆಯಲ್ಲಿ, ಶಾಲೆಯಲ್ಲಿ ಎಲ್ಲೆಲ್ಲೂ ಇಂತಹ ಜಾಗೃತಿ ಅಭಿಯಾನ ನಡೆಸಬೇಕಾಗಿದೆ. ಸಮಾಜದ ಎಲ್ಲಾ ರಂಗಗಳಲ್ಲಿ ಅದು ಧಾರ್ಮಿಕ ಇರಬಹುದು, ಸಾಮಾಜಿಕ ಇರಬಹುದು ಅಥವಾ ರಾಜಕೀಯ ಇರಬಹುದು-ಮಹಿಳೆಯರನ್ನು ಪುರುಷರ ಜತೆ ಜತೆಗೆ ಸಮಾನವಾಗಿ ಹೆಜ್ಜೆ ಇಡುವುದಕ್ಕೆ ಅವಕಾಶ ಕಲ್ಪಿಸಲೇಬೇಕಿದೆ.

ಡಾ. ಇಂದಿರಾ ಹೆಗ್ಗಡೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ...

  • ಸಿಟಿಗಳಲ್ಲಿರುವ ಹುಡುಗೀರು, ಈಗಷ್ಟೇ ಮೂವತ್ತಾಯ್ತು. ಎರಡು ವರ್ಷ ಬಿಟ್ಟು ಮದುವೆ ಆದರಾಯ್ತು. ಈಗ್ಲೆ ಏನವಸರ ಅನ್ನುತ್ತಾರೆ. ಆದರೆ, ಹಳ್ಳಿಯಲ್ಲಿರುವ ಹೆಣ್ಣುಮಕ್ಕಳಿಗೆ,...

  • ತೂಕ ಇಳಿಸಲೇಬೇಕು ಅಂತಾದಾಗ, ಅವರಿವರು ಮಾತನಾಡುವ "ಸ್ಲಿಮ್‌ ಸೂತ್ರ'ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು...

  • ಅದು ಮಳೆಗಾಲದ ಒಂದು ದಿನ ಸಂಜೆ. ಯಾವುದೋ ಕೆಲಸ ನಿಮಿತ್ತ ಸಿಲ್ಕ್ಬೋರ್ಡ್‌ ದಾಟಿ ಆಚೆ ಹೋಗಿದ್ದೆ. ಸಿಲ್ಕ್ಬೋರ್ಡ್‌ಗೆ ಪರ್ಯಾಯ ಪದ ಟ್ರಾಫಿಕ್‌ ಅಂತ, ಬೆಂಗಳೂರಿನವರಿಗಷ್ಟೇ...