ಸಬ್‌ ಅಚ್ಛಾ ಹೈ-ಎಲ್ಲಾ ಚೆನ್ನಾಗಿದೆ…!


Team Udayavani, Sep 24, 2019, 5:51 AM IST

f-24

ಹೌಡಿ ಗೆಳೆಯರೇ…
ಈ ದೃಶ್ಯ, ಈ ವಾತಾವರಣ ಕಲ್ಪನಾತೀತವಾಗಿದೆ. ಈ ಅಪಾರ ಜನ ಸಮೂಹದ ಉಪಸ್ಥಿತಿ ಕೇವಲ ಲೆಕ್ಕಾಚಾರಕ್ಕೆ ಸೀಮಿತವಲ್ಲ. ಇಂದು ನಾವಿಲ್ಲಿ ಒಂದು ಹೊಸ ಇತಿಹಾಸ ನಿರ್ಮಾಣವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಅಲ್ಲದೇ ಹೊಸ ಕೆಮಿಸ್ಟ್ರಿಯನ್ನೂ ಕೂಡ! ಎನ್‌ಆರ್‌ಜಿ ಕ್ರೀಡಾಂಗಣದ ಈ ಎನರ್ಜಿ, ಭಾರತ ಮತ್ತು ಅಮೆರಿಕ ನಡುವೆ ವೃದ್ಧಿಯಾಗುತ್ತಿರುವಸಿನರ್ಜಿಗೆ(ಸಮ್ಮಿಲನಕ್ಕೆ) ಸಾಕ್ಷಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿದಂತೆ, ವಿವಿಧ ರಾಜಕೀಯ ಪಕ್ಷಗಳ-ಕ್ಷೇತ್ರಗಳ ನಾಯಕರು ಇಲ್ಲಿ ಬಂದಿರುವುದೂ, ಅವರೆಲ್ಲ ಭಾರತದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದೂ, ಶುಭ ಹಾರೈಸುತ್ತಿರುವುದೆಲ್ಲ ಅಮೆರಿಕದಲ್ಲಿರುವ ಭಾರತೀಯರ ಸಾಮರ್ಥ್ಯ ಮತ್ತು ಅವರ ಸಾಧನೆಗೆ ನೀಡುವ ಮನ್ನಣೆಯಾಗಿದೆ. ಅಲ್ಲದೇ ಇದು 130 ಕೋಟಿ ಭಾರತೀಯರಿಗೆ ನೀಡುವ ಮನ್ನಣೆಯೂ ಸಹ. ಚುನಾಯಿತ ಪ್ರತಿನಿಧಿಗಳಷ್ಟೇ ಅಲ್ಲದೆ, ಇನ್ನೂ ಅನೇಕ ಅಮೆರಿಕನ್‌ ಮಿತ್ರರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಾನು ಪ್ರತಿಯೊಬ್ಬ ಭಾರತೀಯರ ಪರವಾಗಿ ಎಲ್ಲರನ್ನೂ ಹೃದಯಪೂರ್ವಕ ಸ್ವಾಗತಿಸುತ್ತೇನೆ. ಈ ಕಾರ್ಯಕ್ರಮದಲ್ಲಿ ಸ್ಥಳಾಭಾವದ ಕಾರಣದಿಂದಾಗಿ ಸಾವಿರಾರು ಜನರಿಗೆ ಭಾಗವಹಿಸಲು ಆಗಲಿಲ್ಲ ಎಂದು ತಿಳಿದು ಬಂದಿದೆ. ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದವರಿಗೆ, ವೈಯಕ್ತಿಕವಾಗಿ ಕ್ಷಮೆ ಕೇಳುತ್ತೇನೆ.

ಗೆಳೆಯರೇ, ಈ ಕಾರ್ಯಕ್ರಮದ ಹೆಸರು “ಹೌಡಿ ಮೋದಿ’
(ಹೇಗಿದ್ದೀರಿ ಮೋದಿ). ಆದರೆ ಮೋದಿ ಒಬ್ಬನೇ ಏನೇನೂ ಅಲ್ಲ. ನಾನು 130 ಕೋಟಿ ಭಾರತೀಯರ ಆದೇಶದಂತೆ ಕೆಲಸ ಮಾಡುವ ಸಾಧಾರಣ ವ್ಯಕ್ತಿಯಷ್ಟೆ. ಈ ಕಾರಣಕ್ಕಾಗಿಯೇ ನೀವು “ಹೌಡಿ ಮೋದಿ?’ ಎಂದು ಕೇಳಿದಾಗ, ನನ್ನ ಮನಸ್ಸಂತೂ ಉತ್ತರಿಸುತ್ತದೆ- ಭಾರತದಲ್ಲಿ “ಸಬ್‌ ಅಚ್ಛಾ ಹೈ’, “ಸಬ್‌ ಚಂಗಾ ಸೀ’, “ಮಜಾ ಮಾ ಛೇ’, “ಅಂತಾ ಬಾಗುಂದಿ’, “ಎಲ್ಲಾ ಚೆನ್ನಾಗಿದೆ’, “ಎಲ್ಲಂ ಸೌಖ್ಯಂ’, “ಸೋಬ್‌ ಖೂಬ್‌ ಭಾಲೋ’, “ಸಬೂ ಭಲ್ಲಾಛೀ’.

ಗೆಳೆಯರೇ…ನಾನು ಏನು ಹೇಳುತ್ತಿದ್ದೇನೆ ಎಂದು ನಮ್ಮ ಅಮೆರಿಕದ ಮಿತ್ರರಿಗೆ ಆಶ್ಚರ್ಯವಾಗುತ್ತಿರಬಹುದು. ಟ್ರಂಪ್‌ ಮತ್ತು ಅಮೆರಿಕನ್‌ ಮಿತ್ರರೇ, ನಾನು ಭಾರತದ ವಿವಿಧ ಭಾಷೆಗಳಲ್ಲಿ ಹೇಳಿದ್ದಿಷ್ಟೆ: Everything is fine! ಶತಮಾನಗಳಿಂದ ನಮ್ಮ ದೇಶದಲ್ಲಿ ನೂರಾರು ಭಾಷೆಗಳು, ನೂರಾರು ಉಪ ಭಾಷೆಗಳು ಸಹ -ಅಸ್ತಿತ್ವದ ಭಾವನೆಯೊಂದಿಗೆ ಮುನ್ನಡೆಯುತ್ತಿವೆ. ಇಂದಿಗೂ ಅವು ಕೋಟ್ಯಂತರ ಜನರ ಮಾತೃ ಭಾಷೆಯಾಗಿವೆ. ಗೆಳೆಯರೇ, ಕೇವಲ ಭಾಷೆಯೊಂದೇ ಅಲ್ಲ, ನಮ್ಮ ದೇಶದಲ್ಲಿ ವಿವಿಧ ಧರ್ಮಗಳು, ನೂರಾರು ಸಂಪ್ರದಾಯಗಳು, ಬಗೆ ಬಗೆ ಪೂಜಾ ಪದ್ಧತಿಗಳು, ನೂರಾರು ರೀತಿಯ ಪ್ರಾದೇಶಿಕ ಆಹಾರ ಪದ್ಧತಿಗಳು, ವಿವಿಧ ವೇಷ ಭೂಷಣಗಳು, ಭಿನ್ನ ಭಿನ್ನ ವಾತಾವರಣ- ಋತು ಮಾನಗಳು…ನಮ್ಮ ನೆಲವನ್ನು ಅದ್ಭುತವಾಗಿಸಿವೆ.

ವಿವಿಧತೆಯಲ್ಲಿ ಏಕತೆಯೇ ನಮ್ಮ ಪರಂಪರೆ, ಇದೇ ನಮ್ಮ ವಿಶೇಷತೆ, ಇದೇ ವೈವಿಧ್ಯತೆಯೇ ನಮ್ಮ ಚಲನಶೀಲ ಪ್ರಜಾಪ್ರಭುತ್ವಕ್ಕೆ ಆಧಾರ, ಇದೇ ನಮ್ಮ ಶಕ್ತಿ, ಇದೇ ನಮ್ಮ ಪ್ರೇರಣೆ. ನಾವು ಎಲ್ಲೇ ಹೋಗಲಿ ವೈವಿಧ್ಯತೆ, ಪ್ರಜಾಪ್ರಭುತ್ವದ ಸಂಸ್ಕಾರವನ್ನು ಜೊತೆ ಜೊತೆಗೆ ಒಯ್ಯುತ್ತೇವೆ. ಇಂದು ಈ ಕ್ರೀಡಾಂಗಣದಲ್ಲಿ ಕುಳಿತ 50 ಸಾವಿರಕ್ಕೂ ಅಧಿಕ ಭಾರತೀಯರು ನಮ್ಮ ಮಹಾನ್‌ ಪರಂಪರೆಯ ಪ್ರತಿನಿಧಿಗಳಾಗಿ ಉಪಸ್ಥಿತರಿದ್ದಾರೆ. ನಿಮ್ಮಲ್ಲಿ ಅನೇಕರಂತೂ, ಭಾರತದ ಪ್ರಜಾಪ್ರಭುತ್ವದ ಅತಿ ದೊಡ್ಡ ಉತ್ಸವವಾದ 2019ರ ಲೋಕ ಸಭಾ ಚುನಾವಣೆಯಲ್ಲೂ ಸಕ್ರಿಯ ಕೊಡುಗೆ ನೀಡಿದ್ದೀರಿ. ನಿಜಕ್ಕೂ, ಈ ಚುನಾವಣೆಯು ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯ ಧ್ವಜವನ್ನು ಇಡೀ ಪ್ರಪಂಚದಲ್ಲಿ ಹಾರಿಸಿತು. ಈ ಚುನಾವಣೆಯಲ್ಲಿ 610 ದಶಲಕ್ಷಕ್ಕೂ ಹೆಚ್ಚು, ಅಂದರೆ 61 ಕೋಟಿಗೂ ಅಧಿಕ ಜನರು ಭಾಗವಹಿಸಿದರು. ಒಂದು ರೀತಿಯಲ್ಲಿ ಅಮೆರಿಕದ ಒಟ್ಟು ಜನ ಸಂಖ್ಯೆಗಿಂತಲೂ ಅಜಮಾಸು ಎರಡು ಪಟ್ಟು ಅಧಿಕ ಜನರು! ಇದರಲ್ಲೂ ಕೂಡ 8 ಕೋಟಿ ಯುವಕರಂತೂ ಮೊದಲ ಬಾರಿಯ ಮತದಾರರಾಗಿದ್ದರು! ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತಿ ಹೆಚ್ಚು ಮಹಿಳೆಯರು ಈ ಬಾರಿ ವೋಟ್‌ ಮಾಡಿದ್ದಾರೆ. ಅಲ್ಲದೇ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರೂ ಚುನಾಯಿತರಾಗಿದ್ದಾರೆ.  ಗೆಳೆಯರೇ, 2019ರ ಚುನಾವಣೆಯು ಮತ್ತೂಂದು ಹೊಸ ದಾಖಲೆಯನ್ನು ಬರೆಯಿತು. ಪೂರ್ಣ ಬಹುಮತದ ಸರ್ಕಾರವೊಂದು 5 ವರ್ಷಗಳ ತನ್ನ ಆಡಳಿತವನ್ನು ಪೂರ್ಣಗೊಳಿಸಿ, ಹಿಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೇರಿತು. 6 ದಶಕಗಳ ನಂತರ ಇಂಥದ್ದೊಂದು ದಾಖಲೆ ನಿರ್ಮಾಣವಾಯಿತು. ಇದೆಲ್ಲವೂಸಾಧ್ಯವಾಗಿದ್ದೇಕೆ? ಯಾರಿಂದಾಗಿ ಆಯಿತು? ಖಂಡಿತ ಇಲ್ಲಾರೀ, ಇದು ಮೋದಿಯ ಕಾರಣದಿಂದ ಅಲ್ಲ, ಭಾರತ ವಾಸಿಗಳಿಂದಾಗಿ ಆಗಿದೆ.

ಇಂದು ಭಾರತದಲ್ಲಿ ಹೆಚ್ಚು ಚರ್ಚೆಯಾಗುವ ಪದವೆಂದರೆ “ವಿಕಾಸ್‌’. ಇಂದು ಭಾರತದ ಅತಿ ದೊಡ್ಡ ಮಂತ್ರವೆಂದರೆ “ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’. ಇಂದು ಭಾರತದ ಅತಿ ದೊಡ್ಡ ನೀತಿಯೆಂದರೆ “ಜನ ಭಾಗೀದಾರಿ’. ಇಂದು ಭಾರತದ ಅತಿ ದೊಡ್ಡ ಪ್ರಚಲಿತ ಘೋಷಣೆಯೆಂದರೆ “ಸಂಕಲ್ಪದಿಂದ ಸಿದ್ಧಿ’. ಇಂದು ಭಾರತದ ಅತಿ ದೊಡ್ಡ ಸಂಕಲ್ಪವೆಂದರೆ “ನ್ಯೂ ಇಂಡಿಯಾ!’

ಭಾರತವು ಇಂದು ನ್ಯೂ ಇಂಡಿಯಾದ ಕನಸನ್ನು ಸಾಕಾರಗೊಳಿಸಲು ಹಗಲುರಾತ್ರಿ ಶ್ರಮಿಸುತ್ತಿದೆ. ಇದರಲ್ಲಿ ಮುಖ್ಯ ಸಂಗತಿಯೆಂದರೆ, ನಾವು ಯಾರೋ ಇನ್ನೊಬ್ಬರ ಜೊತೆಗಲ್ಲ, ಬದಲಾಗಿ ನಮ್ಮೊಂದಿಗೆ ನಾವೇ ಸ್ಪರ್ಧೆಗೆ ಇಳಿದಿದ್ದೇವೆ. ನಮಗೆ ನಾವೇ ಸವಾಲು ಒಡ್ಡಿ ಕೊಳ್ಳುತ್ತಿದ್ದೇವೆ.

ಗೆಳೆಯರೇ, ಇಂದು ಭಾರತವು ಇನ್ನಷ್ಟು ವೇಗವಾಗಿ ಮುನ್ನುಗ್ಗಲು ಬಯಸುತ್ತದೆ. “ಭಾರತದಲ್ಲಿ ಏನೇನೂ ಬದಲಾಗಲು ಸಾಧ್ಯವಿಲ್ಲ’ ಎಂದು ಯೋಚಿಸುವ ಜನರಿಗೆ ಸವಾಲೊಡ್ಡುತ್ತಿದೆ ಇಂದಿನ ಭಾರತ.

ಕಳೆದ ಐದು ವರ್ಷಗಳಲ್ಲಿ 130 ಕೋಟಿ ಭಾರತೀಯರು ಸೇರಿ ಪ್ರತಿ ಕ್ಷೇತ್ರದಲ್ಲೂ ಎಂತೆಂಥ ಫ‌ಲಿತಾಂಶವನ್ನು ಪಡೆದಿದ್ದಾರೆಂದರೆ, ಈ ಹಿಂದೆ ಇದರ ಬಗ್ಗೆ ಕಲ್ಪನೆ ಮಾಡಿ ಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ. ನಮ್ಮ ಗುರಿ ಎತ್ತರಕ್ಕೇರುತ್ತಿದೆ, ನಮ್ಮ ಸಾಧನೆ ಅದಕ್ಕಿಂತ ಎತ್ತರವಾಗುತ್ತಿದೆ.

ಕಳೆದ 7 ದಶಕದಲ್ಲಿ ದೇಶದ ಗ್ರಾಮೀಣ ಪ್ರದೇಶಗಳಲ್ಲಿನ ನೈರ್ಮಲ್ಯ ಪ್ರಮಾಣ ಕೇವಲ 38 ಪ್ರತಿಶತದಷ್ಟಿತ್ತು. ಕಳೆದ 5 ವರ್ಷದಲ್ಲಿ ನಾವು 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಇಂದು ಗ್ರಾಮೀಣ ನೈರ್ಮಲ್ಯವು 99 ಪ್ರತಿಶತಕ್ಕೆ ತಲುಪಿದೆ! ಈ ಹಿಂದೆ ದೇಶದಲ್ಲಿ ಅಡುಗೆ ಅನಿಲ ಸಂಪರ್ಕ ಪ್ರಮಾಣವು 55 ಪ್ರತಿಶತದಷ್ಟಿತ್ತು, 5 ವರ್ಷದೊಳಗೆ ನಾವು ಇದನ್ನು 95.5 ಪ್ರತಿಶತಕ್ಕೆ ಏರಿಸಿದ್ದೇವೆ. ಕೇವಲ 5 ವರ್ಷಗಳಲ್ಲಿ ನಾವು 15 ಕೋಟಿಗೂ ಹೆಚ್ಚು ಜನರಿಗೆ ಗ್ಯಾಸ್‌ ಸಂಪರ್ಕ ಕಲ್ಪಿಸಿದ್ದೇವೆ. ಈ ಹಿಂದೆ ಭಾರತದಲ್ಲಿ ಗ್ರಾಮೀಣ ರಸ್ತೆ ಸಂಪರ್ಕ ಕೇವಲ 55 ಪ್ರತಿಶತದಷ್ಟಿತ್ತು, 5 ವರ್ಷದಲ್ಲಿ ನಾವು ಇದನ್ನು 97 ಪ್ರತಿಶತ ಒಯ್ದಿದ್ದೇವೆ. ಕೇವಲ ಐದು ವರ್ಷದಲ್ಲಿ ನಾವು ದೇಶದ ಗ್ರಾಮೀಣ ಪ್ರದೇಶಗಳಲ್ಲಿ 2 ಲಕ್ಷ ಕಿಲೋ ಮೀಟರ್‌ ರಸ್ತೆ ನಿರ್ಮಾಣ ಮಾಡಿದ್ದೇವೆ. ಭಾರತದಲ್ಲಿ 50 ಪ್ರತಿ ಶತಕ್ಕಿಂತ ಕಡಿಮೆ ಜನರ ಬಳಿ ಬ್ಯಾಂಕ್‌ ಖಾತೆಗಳಿದ್ದವು, ಕಳೆದ 5 ವರ್ಷದಲ್ಲಿ ಅಜಮಾಸು 100 ಪ್ರತಿ ಶತ ಕುಟುಂಬಗಳು ಬ್ಯಾಂಕಿಂಗ್‌ ವ್ಯವಸ್ಥೆಯೊಂದಿಗೆ ಸಂಪರ್ಕ ಪಡೆದಿವೆ. 5 ವರ್ಷಗಳಲ್ಲಿ ನಾವು 37 ಕೋಟಿಗೂ ಹೆಚ್ಚು ಜನರಿಗಾಗಿ ಹೊಸ ಬ್ಯಾಂಕ್‌ ಖಾತೆ
ತೆರೆದಿದ್ದೇವೆ. ಇಂದು ಜನರಿಗೆ ಮೂಲ ಸೌಕರ್ಯಗಳ ಬಗ್ಗೆ ಚಿಂತೆ ಕಡಿಮೆಯಾಗುತ್ತಿರುವುದರಿಂದ, ಅವರು ದೊಡ್ಡ ಕನಸು ಕಾಣುವಂತಾಗಿದೆ. ತಮ್ಮ ಕನಸನ್ನು ಸಾಕಾರಗೊಳಿಸಿ ಕೊಳ್ಳಲು ಅವರು ತಮ್ಮ ಎಲ್ಲಾ ಶಕ್ತಿ ಯನ್ನೂ ಆ ದಿಕ್ಕಿನಲ್ಲಿ ಹರಿಸುತ್ತಿದ್ದಾರೆ. ಗೆಳೆಯರೇ, ನಮಗೆ ಈಸ್‌ ಆಫ್ ಡೂಯಿಂಗ್‌ ಬ್ಯುಸಿನೆಸ್‌ ಎಷ್ಟು ಮುಖ್ಯವೋ, ಅದರಷ್ಟೇ ಈಸ್‌ ಆಫ್ ಲಿವಿಂಗ್‌ ಕೂಡ ಮುಖ್ಯವಾದದ್ದು. ಇದಕ್ಕೆ ದಾರಿಯೆಂದರೆ ಸಬಲೀಕರಣ. ಯಾವಾಗ ಸಾಮಾನ್ಯ ಜನರ ಸಬಲೀಕರಣವಾಗುತ್ತದೋ, ಆಗ ದೇಶ ಮತ್ತು ಸಾಮಾಜಿಕ ಅಭಿವೃದ್ಧಿಯು ಬಹಳ ವೇಗವಾಗಿ ಮುನ್ನಡೆಯುತ್ತದೆ.

ಗೆಳೆಯರೇ, ಇತ್ತೀಚಿನ ದಿನಗಳಲ್ಲಿ “ಡೇಟಾ ಈಸ್‌ ದಿ ನ್ಯೂ ಆಯಿಲ್‌’ ಎನ್ನಲಾಗುತ್ತದೆ. (ಡೇಟಾ, ತೈಲದಷ್ಟೇ ಅಮೂಲ್ಯ ಸಂಪನ್ಮೂಲ ಎನ್ನುವ ಅರ್ಥದಲ್ಲಿ). ನಾನೆನ್ನುತ್ತೇನೆ “ಡೇಟಾ ಈಸ್‌ ದಿ ನ್ಯೂ ಗೋಲ್ಡ್‌’. ಇಡೀ ಪ್ರಪಂಚದಲ್ಲಿ ಅತಂತ ಕಡಿಮೆ ದರದಲ್ಲಿ ಎಲ್ಲಾದರೂ ಡೇಟಾ ಸಿಗುತ್ತದೆ ಎಂದರೆ, ಅದು ಭಾರತದಲ್ಲಿ ಮಾತ್ರ. ಭಾರತದಲ್ಲೀಗ 1 ಜಿಬಿ ಡೇಟಾದ ಬೆಲೆ ಕೇವಲ 25-30 ಸೆಂಟ್ಸ್‌ಗೆ ಸಿಗುತ್ತದೆ. ವಿಶ್ವದ ಬೇರಾವುದೇ ದೇಶದಲ್ಲೂ ಇಷ್ಟು ಅಗ್ಗದ ದರದಲ್ಲಿ 1 ಜಿಬಿ ಡೇಟಾ ಸಿಗುವುದಿಲ್ಲ. ಈ ಅಗ್ಗದ ಡೇಟಾ “ಡಿಜಿಟಲ್‌ ಇಂಡಿಯಾ’ದ ಒಂದು ಹೊಸ ಗುರುತಾಗಿ ಬದಲಾಗಿದೆ. ಅಗ್ಗದ ಡೇಟಾವು ಭಾರತದಲ್ಲಿ ಆಡಳಿತವನ್ನು ಮರು ವ್ಯಾಖ್ಯಾನಿಸಿದೆ. ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಜಮಾಸು 10 ಸಾವಿರ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ.

ಗೆಳೆಯರೇ, ಒಂದು ಕಾಲದಲ್ಲಿ ಪಾಸ್‌ಪೋರ್ಟ್‌ ಸಿದ್ಧವಾಗಲು 2-3 ತಿಂಗಳು ಹಿಡಿಯುತ್ತಿತ್ತು. ಈಗ ಒಂದು ವಾರಕ್ಕಿಂತ ಕಡಿಮೆ ಸಮಯದಲ್ಲಿ ಪಾಸ್‌ ಪೋರ್ಟ್‌ ನಿಮ್ಮ ಮನೆಗೆ ಬಂದಿರುತ್ತದೆ. ಹಿಂದೆಲ್ಲ ವೀಸಾ ವಿಚಾರದಲ್ಲಿ ಏನೆಲ್ಲ ಅಡ್ಡಿಗಳಿದ್ದವು ಎನ್ನುವುದು  ನಿಮಗೆ ಹೆಚ್ಚು ಗೊತ್ತಿರುತ್ತದೆ. ಒಂದು ಕಾಲದಲ್ಲಿ ಹೊಸ ಕಂಪನಿಯ ನೋಂದಣಿಗೆ 2-3 ವಾರ  ಹಿಡಿಯುತ್ತಿತ್ತು. ಇಂದು 24 ಗಂಟೆಯಲ್ಲಿ ಹೊಸ ಕಂಪೆನಿ ನೋಂದಣಿಯಾಗುತ್ತದೆ! ಒಂದು ಕಾಲದಲ್ಲಿ ಟ್ಯಾಕ್ಸ್‌ ರೀಫ‌ಂಡ್‌ಗೆ ತಿಂಗಳು ಗಟ್ಟಲೇ ಹಿಡಿಯುತ್ತಿತ್ತು. ಇಂದು ಕೇವಲ ಒಂದು ವಾರದಲ್ಲೋ, ಹತ್ತು ದಿನದಲ್ಲೋ ನಿಮ್ಮ ಬ್ಯಾಂಕ್‌ಗೆ ರೀಫ‌ಂಡ್‌ ತಲುಪುತ್ತದೆ. ಒಂದು ಕಾಲದಲ್ಲಿ ಟ್ಯಾಕ್ಸ್‌ ರಿಟರ್ನ್ಸ್ ಸಲ್ಲಿಸುವುದೇ ಬಹು ದೊಡ್ಡ ತಲೆನೋವಾಗಿತ್ತು, ಆದರೆ ಈ ಬಾರಿ ಅಗಸ್ಟ್‌ 31ರಂದು, ಅಂದರೆ, ಒಂದೇ ದಿನದಲ್ಲಿ ಅಜಮಾಸು 50 ಲಕ್ಷ ಜನರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಆನ್‌ಲೈನ್‌ನ‌ಲ್ಲಿ ಸಲ್ಲಿಸಿದ್ದಾರೆ! ಅಂದರೆ ಹ್ಯೂಸ್ಟನ್‌ ನಗರಿಯ ಒಟ್ಟು ಜನಸಂಖ್ಯೆಯ ಎರಡು ಪಟ್ಟು ಅಧಿಕ ಜನ!

ವೇಗದ ವಿಕಾಸವನ್ನು ಬಯಸುವ ಯಾವುದೇ ದೇಶವಾದರೂ ಸಹ, ಅಲ್ಲಿ ನಾಗರಿಕರಿಗಾಗಿ “ವೆಲ್‌ ಫೇರ್‌ ಸ್ಕೀಮ್‌'(ಕಲ್ಯಾಣ ಕಾರ್ಯಕ್ರಮಗಳು) ಅಗತ್ಯವಿರುತ್ತವೆ. ಅನೇಕ “ವೆಲ್‌ ಫೇರ್‌ ಸ್ಕೀಮ್‌’ ನಡೆಸುವ ಜತೆ ಜತೆಗೆ ನಾವು ಹೊಸ ಭಾರತದ ನಿರ್ಮಾಣಕ್ಕಾಗಿ ಕೆಲ ಸಂಗತಿಗಳಿಗೆ “ಫೇರ್‌ ವೆಲ್‌'(ಬೀಳ್ಕೊಡುಗೆ) ಕೂಡ ಕೊಡುತ್ತಿದ್ದೇವೆ. ಅಂದರೆ ವೆಲ್‌ ಫೇರ್‌ಗೆ ಕೊಟ್ಟಷ್ಟೇ ಮಹತ್ವವನ್ನು ನಾವು ಫೇರ್‌ ವೆ ಗ‌ೂ ಕೊಡುತ್ತಿದ್ದೇವೆ. ಇದೇ ಅಕ್ಟೋಬರ್‌ 2ರಂದು ಮಹತ್ಮಾಗಾಂಧಿಯವರ 150ನೇ ಜಯಂತಿಯಿದೆ. ಅಂದು ಭಾರತ ಬಯಲು ಬಹಿರ್ದೆಸೆಗೆ ಫೇರ್‌ ವೆಲ್‌ ಕೊಡಲಿದೆ! ಭಾರತವು ಕಳೆದ 5 ವರ್ಷದಲ್ಲಿ 1,500ಕ್ಕೂ ಹೆಚ್ಚು ಪುರಾತನ ಕಾನೂನುಗಳಿಗೂ ಫೇರ್‌ವೆಲ್‌ ಕೊಟ್ಟಿದೆ. ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದ್ದ ನೂರಾರು ತೆರಿಗೆಗಳ ಸಂಕೀರ್ಣ ಜಾಲವಿತ್ತಲ್ಲ, ಅದಕ್ಕೂ ಫೇರ್‌ ವೆಲ್‌ ಕೊಟ್ಟು ಜಿಎಸ್‌ಟಿ ತಂದಿದೆ ಭಾರತ. ವರ್ಷಗಳ ನಂತರ “ಒಂದು ದೇಶ ಒಂದು ತೆರಿಗೆ’ಯನ್ನು ಸಾಕಾರಗೊಳಿಸಿದ್ದೇವೆ. ಗೆಳೆಯರೇ, ನಾವು ಭ್ರಷ್ಟಾಚಾರಕ್ಕೂ ಸವಾಲೊಡ್ಡುತ್ತಿದ್ದೇವೆ. ಕಳೆದ 2-3 ವರ್ಷಗಳಲ್ಲಿ 3.5 ಲಕ್ಷಕ್ಕೂ ಹೆಚ್ಚು ಅನುಮಾನಾಸ್ಪದ ಕಂಪನಿಗಳಿಗೆ ಫೇರ್‌ ವೆಲ್‌ ಕೊಟ್ಟಿದ್ದೇವೆ. ಕಾಗದದ ಮೇಲಷ್ಟೇ ಇದ್ದು ಸರ್ಕಾರಿ ಸೇವೆಗಳ ಲಾಭ ಪಡೆಯುತ್ತಿದ್ದ 8 ಕೋಟಿಗೂ ಹೆಚ್ಚು ನಕಲಿ ಹೆಸರುಗ‌ಳಿಗೂ ಫೇರ್‌ ವೆಲ್‌ ಕೊಟ್ಟಿದ್ದೇವೆ. ಈ ನಕಲಿ ಹೆಸರನ್ನು ಅಳಿಸುವ ಮೂಲಕ ಎಷ್ಟು ಹಣವನ್ನು ಉಳಿಸಲಾಗಿದೆ ಗೊತ್ತೇ? ಅಜ ಮಾಸು ಒಂದು ಲಕ್ಷ ಕೋಟಿ ರೂಪಾಯಿ!

ಭಾರತದ ಪ್ರತಿಯೊಬ್ಬ ಸಂಸದನಿಗೂ ಚಪ್ಪಾಳೆ ತಟ್ಟಿ!
ದೇಶದ ಎದುರು 70 ವರ್ಷಗಳಿಂದ ಮತ್ತೂಂದು ಬಹು ದೊಡ್ಡ ಸವಾಲಿತ್ತು. ಅದಕ್ಕೂ ಕೆಲ ದಿನಗಳ ಹಿಂದೆ ಭಾರತವು ಫೇರ್‌ ವೆಲ್‌ ನೀಡಿದೆ. (ನಗುತ್ತಾ) ನಿಮಗೆ ಅರ್ಥವಾಯಿತಲ್ಲವೇ? ನಾನು ಮಾತನಾಡುತ್ತಿರುವುದು ಆರ್ಟಿಕಲ್‌ 370 ಬಗ್ಗೆ. ಆರ್ಟಿಕಲ್‌ 370, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ಜನರನ್ನು ಅಭಿವೃದ್ಧಿಯಿಂದ ಮತ್ತು ಸಮಾನ ಅವಕಾಶಗಳಿಂದ ವಂಚಿತವಾಗಿಸಿತ್ತು. ಈ ಸ್ಥಿತಿಯ ಲಾಭವನ್ನು ಉಗ್ರವಾದ ಮತ್ತು ಪ್ರತ್ಯೇಕತಾವಾದವನ್ನು ಹೆಚ್ಚಿಸುವ ಶಕ್ತಿಗಳು ಪಡೆಯುತ್ತಿದ್ದ‌ವು. ಈಗ ಭಾರತದ ಸಂವಿಧಾನವು ಉಳಿದ ಭಾರತೀಯರಿಗೆ ಕೊಟ್ಟ ಅಧಿಕಾರವನ್ನು, ಜಮ್ಮು-ಕಾಶ್ಮೀ ರ ಹಾಗೂ ಲಡಾಖ್‌ ಜನರಿಗೂ ಕೊಟ್ಟಿದೆ.

ಅಲ್ಲಿನ ಮಹಿಳೆಯರು, ಮಕ್ಕಳು ಮತ್ತು ದಲಿತರೊಂದಿಗೆ ಆಗುತ್ತಿದ್ದ ಭೇದ ಭಾವ ಈಗ ಅಂತ್ಯವಾಗಿದೆ. ಗೆಳೆಯರೇ ನಮ್ಮ ಸಂಸತ್ತಿನ ಮೇಲ್ಮನೆ, ಕೆಳಮನೆ ಎರಡರಲ್ಲೂ ಈ ವಿಚಾರವಾಗಿ ಗಂಟೆಗಳವರೆಗೆ ಚರ್ಚೆಗಳು ನಡೆದವು. ದೇಶ ಮತ್ತು ವಿದೇಶಗಳಲ್ಲಿ ಇದು ನೇರ ಪ್ರಸಾರವಾಯಿತು. ನಮ್ಮ ಪಕ್ಷದ ಬಳಿ ರಾಜ್ಯ ಸಭೆಯಲ್ಲಿ ಬಹುಮತವಿಲ್ಲ. ಇದರ ಹೊರತಾಗಿಯೂ ಮೇಲ್ಮನೆ ಮತ್ತು ಕೆಳಮನೆ ಎರಡರಲ್ಲೂ ಈ ವಿಚಾರಕ್ಕೆ ಸಂಬಂಧಿ ಸಿದ್ದ ನಿರ್ಣಯಗಳಿಗೆ ಮೂರನೇ ಎರಡರಷ್ಟು ಬಹುಮತ ಸಿಕ್ಕಿತು. ನಾನು ನಿಮ್ಮೆಲ್ಲರಿಗೂ ಕೇಳಿ ಕೊಳ್ಳುತ್ತೇನೆ – ಭಾರತದ ಪ್ರತಿಯೊಬ್ಬ ಸಂಸದನಿಗಾಗಿ ಎದ್ದು ನಿಂತು ಚಪ್ಪಾಳೆ ತಟ್ಟಿ!

ಭಾರತದ ಹಿತ ದ್ವೇಷಿಗಳಿಗೆ ತೊಂದರೆ
ನನಗೆ ಅರ್ಥವಾಗುತ್ತಿದೆ ಗೆಳೆಯರೇ, ತಮ್ಮ ರಾಷ್ಟ್ರವನ್ನೇ ಸರಿಯಾಗಿ ನೋಡಿಕೊಳ್ಳಲು ಆಗದ ಕೆಲವರಿಗೆ ಭಾರತದ ಈ ಕೆಲಸಗಳನ್ನು ನೋಡಿ ಬಹಳ ತೊಂದರೆಯಾಗುತ್ತಿದೆ! ಇವರು  ಭಾರತದೆಡೆಗಿನ ದ್ವೇಷವನ್ನೇ ತಮ್ಮ ರಾಜಕೀಯ ಕೇಂದ್ರವಾಗಿಸಿಕೊಂಡಿದ್ದಾರೆ. ಈ ಜನರು ಭಾರತದಲ್ಲಿ ಅಶಾಂತಿ ಬಯಸುತ್ತಾರೆ, ಉಗ್ರವಾದವನ್ನು ಪೋಷಿಸುತ್ತಾ ಬಂದಿದ್ದಾರೆ. ಅವರ ನಿಜ ರೂಪದ ಬಗ್ಗೆ ಕೇವಲ ನಿಮಗಷ್ಟೇ ಅಲ್ಲ, ಇಡೀ ಜಗತ್ತಿಗೇ ಚೆನ್ನಾಗಿ ತಿಳಿದಿದೆ. ಅಮೆರಿಕದಲ್ಲಿ 9/11 ಆಗಿರಲಿ ಅಥವಾ ಮುಂಬೈಯಲ್ಲಿ 26/11 ಆಗಿರಲಿ, ಅದರ ಮಾಸ್ಟರ್‌ ಮೈಂಡ್‌ಗಳು ಯಾವ ದೇಶದಲ್ಲಿ ಇದ್ದಾರೆ ಹೇಳಿ?

ಗೆಳೆಯರೇ, ಸಮಯ ಬಂದಿದೆ. ಆತಂಕ ವಾ ದದ ವಿರುದ್ಧ ಮತ್ತು ಆತಂಕವಾದವನ್ನು ಬೆಳೆಸುತ್ತಿರುವವರ ವಿರುದ್ಧ ನಿರ್ಣಾಯಕ ಹೋರಾಟ ನಡೆಸಲೇಬೇಕಿದೆ. ಆತಂಕ ವಾದದ ವಿರುದ್ಧ ಹೋರಾಡುವ ಟ್ರಂಪ್‌ರ ಮನೋಬಲವಿದೆಯಲ್ಲ, ಅದನ್ನು ಶ್ಲಾಘಿಸುವುದಕ್ಕಾಗಿ ಎದ್ದು ನಿಂತು ಚಪ್ಪಾಳೆ ತಟ್ಟಿ.

ಸವಾಲುಗಳಿಗೆ ಮುಖಾಮುಖಿ
ಗೆಳೆಯರೇ, ಭಾರತವು ಇಂದು ಸವಾಲುಗಳಿಂದ ದೂರ ಓಡುತ್ತಿಲ್ಲ, ಅವುಗಳಿಗೆ ಮುಖಾಮುಖಿಯಾಗುತ್ತಿದೆ. ಭಾರತವಿಂದು ಚಿಕ್ಕ ಪುಟ್ಟ ಬದಲಾವಣೆಗಳಿಗಲ್ಲ, ಸಮಸ್ಯೆಗಳ ಪೂರ್ಣ ಪರಿಹಾರಕ್ಕೆ ಒತ್ತು ಕೊಡುತ್ತಿದೆ. ಅಸಂಭವವೆನಿಸುವ ಸಂಗತಿಗಳನ್ನು ಭಾರತವಿಂದು ಸಂಭವಗೊಳಿಸುತ್ತಿದೆ. ನಾವೀಗ ಭಾರತವನ್ನು 5 ಟ್ರಿಲಿಯನ್‌ ಆರ್ಥಿಕತೆಯಾಗಿಸಲು ಕಟಿಬದ್ಧರಾಗಿದ್ದೇವೆ. ಮೂಲ ಸೌಕರ್ಯಾಭಿವೃದ್ಧಿ, ಹೂಡಿಕೆ ಮತ್ತು ರಫ್ತು ಹೆಚ್ಚಿಸುವುದಕ್ಕೆ ಒತ್ತು ಕೊಡುತ್ತಿದ್ದೇವೆ. ಜನಸ್ನೇಹಿ, ಅಭಿವೃದ್ಧಿ ಸ್ನೇಹಿ ಮತ್ತು ಹೂಡಿಕೆ ಸ್ನೇಹಿ ವಾತಾವರಣ ನಿರ್ಮಿಸುತ್ತಾ ಮುನ್ನಡೆಯುತ್ತಿದ್ದೇವೆ. ನಾವು ಮೂಲ ಸೌಕರ್ಯಗಳಿಗಾಗಿ ಅಜಮಾಸು 1.3 ಟ್ರಿಲಿಯನ್‌ ಡಾಲರ್‌ ಖರ್ಚು ಮಾಡಲಿದ್ದೇವೆ. ಗೆಳೆಯರೇ, ಕಳೆದ 5 ವರ್ಷಗಳಲ್ಲಿ ಪ್ರಪಂಚದಲ್ಲಿನ ಅನೇಕ ಅನಿಶ್ಚಿತತೆಗಳ ನಡುವೆಯೂ ಭಾರತದ ಬೆಳವಣಿಗೆಯ ದರ ಸರಾಸರಿ 7.5 ಪ್ರತಿಶತವಿದೆ. ಹಿಂದಿನ ಯಾವುದೇ ಸರ್ಕಾರದ ಆಡಳಿತಾವಧಿಯ ಸರಾಸರಿ ತೆಗೆದು ನೋಡಿ, ಇಂಥ ಸಾಧನೆ ಸಾಧ್ಯವಾಗಿಲ್ಲ. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಇಂದು ಭಾರತವು ಪ್ರಪಂಚದ ಅತ್ಯುತ್ತಮ ತಾಣಗಳಲ್ಲಿ ಒಂದು. 2014-2019ರವರೆಗೂ ಎಫ್ ಡಿಐ ಹರಿವಲ್ಲಿ 2 ಪಟ್ಟು ಹೆಚ್ಚಳವಾಗಿದೆ. ಇತ್ತೀಚೆಗಷ್ಟೇ ನಾವು ಸಿಂಗಲ್‌ ಬ್ರಾಂಡ್‌ ರಿಟೇಲ್‌ನಲ್ಲಿ ಎಫ್ ಡಿಐ ನಿಯಮಾವಳಿಗಳನ್ನು ಸರಳಗೊಳಿಸಿದ್ದೇವೆ, ಕಲ್ಲಿದ್ದಲು ಗಣಿಗಾರಿಕೆ ಮತ್ತು ಕಾಂಟ್ರಾಕ್ಟ್ ಮ್ಯಾನು ಫ್ಯಾಕ್ಚರಿಂಗ್‌ನಲ್ಲಿ ವಿದೇಶಿ ಹೂಡಿಕೆ 100 ಪ್ರತಿಶತವಾಗಬಹುದು.

ನಿನ್ನೆ ಹ್ಯೂಸ್ಟನ್‌ನ ಎನರ್ಜಿ ಸೆಕ್ಟರ್‌ನ ಸಿಐಒಗಳೊಂದಿಗೆ ಮಾತನಾಡಿದೆ. ಭಾರತದ ಕಾರ್ಪೊರೇಟ್‌ ಟ್ಯಾಕ್ಸ್‌ನಲ್ಲಿ ಭಾರೀ ಕಡಿತದ ನಿರ್ಣಯ ತೆಗೆದುಕೊಂಡಿರುವುದರಿಂದ ಈ ಸಿಇಒಗಳೆಲ್ಲ ತುಂಬಾ ಉತ್ಸಾಹಿತರಾಗಿದ್ದಾರೆ. ಕಾರ್ಪೋರೇಟ್‌ ಟ್ಯಾಕ್ಸ್‌ ಕಡಿಮೆ ಮಾಡುವ ನಿರ್ಣಯವು ಜಾಗತಿಕ ವ್ಯಾಪಾರ ವಲಯಕ್ಕೂ ಗುಣಾತ್ಮಕ ಸಂದೇಶ ನೀಡಿದೆ. ಈ ನಿರ್ಣಯವು ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುತ್ತದೆ.

ಗೆಳೆಯರೇ, ಮುಂದಿನ ಒಂದೆ ರಡು ದಿನ ಗ ಳಲ್ಲಿ ಟ್ರಂಪ್‌ ಜತೆ ನನ್ನ ಮಾತು ಕತೆ ನಡೆ ಯ ಲಿ ದೆ. ಇದ ರಿಂದ ಲೂ ಗುಣಾ ತ್ಮ ಕ ಫ‌ಲಿ ತಾಂಶ ಬರು ತ್ತದೆ ಎಂಬ ನಂಬಿಕೆೆ ನನ ಗಿದೆ. ಅದಾಗ್ಯೂ ಟ್ರಂಪ್‌ ನನ್ನನ್ನು ಠಿಟuಜಜ nಛಿಜಟಠಿಜಿಚಠಿಟ್ಟ ಅಂತಾರೆ. ಆದರೆ ಅವರೂ ಕೂಡ “ಒಪ್ಪಂದದ ಕಲೆ ’ ಯಲ್ಲಿ ನಿಷ್ಣಾ ತರು. (ನಗು ತ್ತಾ) ನಾನು ಅವ ರಿಂದ ಈ ವಿಷ ಯ ದಲ್ಲಿ ತುಂಬಾ ಕಲಿ ಯು ತ್ತಿ ದ್ದೇನೆ!

ಗೆಳೆಯರೇ, ಉತ್ತಮ ಭವಿಷ್ಯಕ್ಕಾಗಿ ನಮ್ಮ ಈ ಯಾತ್ರೆಯು ಮತ್ತಷ್ಟು ವೇಗವಾಗಲಿದೆ. ನೀವೆಲ್ಲರೂ ಇದರ ಪ್ರಮುಖ ಭಾಗೀದಾರರು. ನೀವು ಭಾರತದಿಂದ ದೂರವಿರಬಹುದು. ಆದರೆ ಭಾರತ ಸರ್ಕಾರ ನಿಮ್ಮಿಂದ ದೂರವಿಲ್ಲ. ಕಳೆದ 5 ವರ್ಷದಲ್ಲಿ ನಾವು ಸಾಗರೋತ್ತರ ಭಾರತೀಯರೊಂದಿಗಿನ ಸಂಬಂಧದ ರೀತಿಯನ್ನು ಮತ್ತು ಮಹತ್ವವನ್ನು ಬದಲಿಸಿದ್ದೇವೆ. ಈಗ ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಕೇವಲ ಸರ್ಕಾರಿ ಕಾರ್ಯಾಲಯಗಳಲ್ಲ. ಅವು ನಿಮ್ಮ ಮೊದಲ ಗೆಳೆಯರಾಗಿವೆ. ಅನಿವಾಸಿಭಾರತೀಯರ ಹಿತರಕ್ಷಣೆಗಾಗಿ ಸರ್ಕಾರ ನಿರಂತರ ಕೆಲಸ ಮಾಡುತ್ತಿದೆ.

ಹ್ಯೂಸ್ಟನ್‌ನಿಂದ ಹೊರಟಿರುವ ಈ ಸಂದೇಶವು 21ನೇ ಶತಮಾನದಲ್ಲಿ ಹೊಸ ಪರಿಭಾಷೆಗೆ, ಹೊಸ ಸಂಭಾವ್ಯತೆಗೆ ಜನ್ಮ ಕೊಡಲಿದೆ. ಅಮೆರಿಕ-ಭಾರತದ ಬಳಿ ಸಮಾನ ಲೋಕ ತಾಂತ್ರಿಕ ಮೌಲ್ಯಗಳ ಶಕ್ತಿಯಿದೆ. ಎರಡೂ ದೇಶಗಳಲ್ಲೂ ನವ ನಿರ್ಮಾಣದ ಸಮಾನ ಸಂಕಲ್ಪವಿದೆ.

ಸನ್ಮಾನ್ಯ ಟ್ರಂಪ್‌ ಅವರೇ, ನಮ್ಮಿಬ್ಬರ ನಡುವಿನ ಈ ದೋಸ್ತಿ ಭಾರತ-ಅಮೆರಿಕದ ಸಮಾನ ಕನಸು ಮತ್ತು ಚಲನಶೀಲ ಭವಿಷ್ಯವನ್ನು ಹೊಸ ಎತ್ತರಕ್ಕೆ ಕರೆದೊಯ್ಯಲಿದೆ. ಟ್ರಂಪ್‌ ಸೇರಿದಂತೆ, ಅಮೆರಿಕದ ವಿವಿಧ ಕ್ಷೇತ್ರಗಳಿಂದ ಈ ಕಾರ್ಯಕ್ರಮಕ್ಕೆ ಬಂದ  ಎಲ್ಲಾ ನಾಯಕರಿಗೂ ನಾನು ಹೃದಯ ಪೂರ್ವಕ ಧನ್ಯವಾದ ಅರ್ಪಿಸುತ್ತೇನೆ. ನಿಮಗೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಟೆಕ್ಸಾಸ್‌ನ ಸರ್ಕಾರ ಮತ್ತು ಆಡಳಿತಕ್ಕೆ ಧನ್ಯವಾದ. ಥ್ಯಾಂಕ್ಯೂ ಹ್ಯೂಸ್ಟನ್‌. ಥ್ಯಾಂಕ್ಯೂ ಅಮೆರಿಕ. ಮೇ ಗಾಡ್‌ ಬ್ಲೆಸ್‌ ಯೂ ಆಲ್‌. ಥ್ಯಾಂಕ್‌ ಯೂ.

ನನ್ನ ಕುಟುಂಬವನ್ನು ಪರಿಚಯಿಸುತ್ತಿದ್ದೇನೆ
ಟ್ರಂಪ್‌ರವರು ತಮ್ಮ ಚುನಾವಣಾ ಪ್ರಚಾರದಲ್ಲಿ “ಅಬ್‌ ಕೀ ಬಾರ್‌ ಟ್ರಂಪ್‌ ಸರ್ಕಾರ್‌’ ಎಂದು ಹೇಳಿದಾಗ, ಅದು ಭಾರತೀಯರಿಗೆ ಚೆನ್ನಾಗಿ ಕನೆಕ್ಟ್ ಆಗಿತ್ತು. ನಾನು ಟ್ರಂಪ್‌ ಅವರನ್ನು ಮೊದಲ ಬಾರಿ ಭೇಟಿಯಾದಾಗ, ಅವರು “ಶ್ವೇತ ಭವನದಲ್ಲೀಗ ಭಾರತದ ನಿಜವಾದ ಸ್ನೇಹಿತ ಇದ್ದಾನೆ‌’ ಎಂದು ಹೇಳಿದ್ದರು. ಇಂದು ಈ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿಯು ಆ ಮಾತಿಗೆ ದೊಡ್ಡ ಸಾಕ್ಷಿಯಾಗಿದೆ. ನಮ್ಮೆರಡೂ ರಾಷ್ಟ್ರಗಳು ತಮ್ಮ ನಡುವಿನ ಸಂಬಂಧವನ್ನು ಮತ್ತೂಂದು ಎತ್ತರಕ್ಕೆ ಒಯ್ದಿವೆ. ಸನ್ಮಾನ್ಯ ಟ್ರಂಪ್‌ ಅವರೇ… ನೀವು ಕುಟುಂಬ ಸಮೇತರಾಗಿ ಭಾರತಕ್ಕೆ ಬರಬೇಕು ಮತ್ತು ನಿಮ್ಮನ್ನು ಸ್ವಾಗತಿಸುವ ಅವಕಾಶ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. 2017ರಲ್ಲಿ ನೀವು ನನಗೆ ನಿಮ್ಮ ಕುಟುಂಬದ ಪರಿಚಯ ಮಾಡಿಸಿದಿರಿ. ಇವತ್ತು ನನಗೆ ನನ್ನ ಕುಟುಂಬವನ್ನು(130 ಕೋಟಿ ಭಾರತೀಯರನ್ನು) ನಿಮಗೆ ಪರಿಚಯಿಸುವ ಅವಕಾಶ ಸಿಕ್ಕಿದೆ!

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.