ಬೈಡೆನ್‌, ಹ್ಯಾರಿಸ್‌ರಿಂದ ಭಾರತ ಹೆಚ್ಚೇನೂ ನಿರೀಕ್ಷಿಸುವಂತಿಲ್ಲ


Team Udayavani, Jan 8, 2021, 6:12 AM IST

ಬೈಡೆನ್‌, ಹ್ಯಾರಿಸ್‌ರಿಂದ ಭಾರತ ಹೆಚ್ಚೇನೂ ನಿರೀಕ್ಷಿಸುವಂತಿಲ್ಲ

ರಾಜನಿಗೆ ಪಟ್ಟವಾದರೆ ನಾವು ರಾಗಿ ಬೀಸೋದು ತಪ್ಪುತ್ತಾ..? ಎನ್ನುವ ಮಾತನ್ನು ಕೇಳಿರಬಹುದು. ಮುಖ್ಯ ಮಂತ್ರಿ-ಪ್ರಧಾನಮಂತ್ರಿ ಯಾರಾದರೇನು ತಮ್ಮ ದಿನನಿತ್ಯದ ಬದುಕಿನ ಸಮಸ್ಯೆಯೇನೂ ಬಗೆಹರಿಯದು ಎಂದು ಜನ ಸಾಮಾನ್ಯರು ಆಡಿಕೊಳ್ಳುವುದನ್ನೂ ಕೇಳಿರ ಬಹುದು. ಕಚೇರಿಯ ಮುಖ್ಯಸ್ಥ, ತಹಶೀಲ್ದಾರ್‌-ಜಿಲ್ಲಾಧಿಕಾರಿ ಮೊದ ಲಾದ ಆಡಳಿತಾತ್ಮಕ ಮಹತ್ವಪೂರ್ಣ ಹು¨ªೆಗಳಲ್ಲಿರುವವರು ಬದಲಾದರೆ ಜನ ಆ ಕುರಿತು ಪರ-ವಿರೋಧದ ಗಾಸಿಪ್‌ ಶುರು ಹಚ್ಚಿಕೊಳ್ಳುವುದು ಸ್ವಾಭಾವಿಕ. ಅಂಥದ್ದರಲ್ಲಿ ವಿಶ್ವದ ದೊಡªಣ್ಣ ಎನಿಸಿದ ಅಮೆರಿಕದ ಅಧ್ಯಕ್ಷ ಚುನಾವಣೆಯ ಫ‌ಲಿತಾಂಶ ಬಗ್ಗೆ ಇಡೀ ಜಗತ್ತೇ ಕುತೂಹಲದ ದೃಷ್ಟಿ ಹರಿಸು ವುದು ಸಹಜ. ಜೋ ಬೈಡೆನ್‌ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಭಾರತಕ್ಕಾಗುವ ಲಾಭ-ನಷ್ಟದ ಬಗ್ಗೆ ಚರ್ಚೆ ಆರಂಭವಾಗಿದೆ.

ಇಡ್ಲಿಯ ಮೆಲಿನ ತಮ್ಮ ಪ್ರೀತಿಯನ್ನು ತೋರ್ಪಡಿಸುವ ಮೂಲಕ ಭಾರತೀಯ ಮೂಲದ ಮತದಾರರನ್ನು ಓಲೈಸುವ ಪ್ರಯತ್ನವನ್ನು ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಕಮಲಾ ಹ್ಯಾರಿಸ್‌ ಚುನಾವಣೆ ಸಂದರ್ಭದಲ್ಲಿ ಮಾಡಿದ್ದರು. ಮಾನವ ಹಕ್ಕು ಉಲ್ಲಂಘನೆಯಂತಹ ವಿಷಯವನ್ನಿಟ್ಟುಕೊಂಡು ಹಿಂದೊಮ್ಮೆ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಕಮಲಾ ಹ್ಯಾರಿಸ್‌ರನ್ನು ತಮ್ಮವರು ಎನ್ನುವ ಅಭಿಮಾನದಿಂದ ದಕ್ಷಿಣ ಭಾರತೀಯರು ಹರಸಿ ಅವರ ಗೆಲುವಿಗಾಗಿ ಹಾರೈಸಿದ್ದರು. ಆಕೆ ಚುನಾಯಿತರಾದ ಸುದ್ದಿ ಕೇಳಿ ಅವರ ತಾಯಿಯ ಹುಟ್ಟೂರಿನಲ್ಲಿ ಜನರು ಉತ್ಸವ ಆಚರಿಸಿದರು. ಜಮ್ಮು-ಕಾಶ್ಮೀರ, ಧಾರ್ಮಿಕ ಸಹಿಷ್ಣುತೆಯಂತಹ ಸಂವೇದ ನಾಶೀಲ ವಿಷಯಗಳನ್ನಿಟ್ಟುಕೊಂಡು ಭಾರತದ ವಿರುದ್ದ ಕತ್ತಿ ಮಸೆಯುತ್ತಿದ್ದ ಇನ್ನೂ ಕೆಲವು ಸಂಸದರ ಗೆಲುವನ್ನು ನಮ್ಮ ವರು ಎಂದು ಸಂಭ್ರಮಿಸಲಾಗುತ್ತಿದೆ. ಬೈಡೆನ್‌ ಓರ್ವ ಸಜ್ಜನ, ಮಾನವ ಹಕ್ಕುಗಳ ರಕ್ಷಕ, ಪರಿಸರ ರಕ್ಷಕ, ಪ್ರಜಾಪ್ರಭುತ್ವ ರಕ್ಷಕ ವ್ಯಕ್ತಿ ಎಂದೂ ಭಾರತದೊಂದಿಗಿನ ಸುಮಧುರ ಸಂಬಂಧವನ್ನು ಇನ್ನಷ್ಟು ಸದೃಢಗೊಳಿಸಲಿರುವರು ಎನ್ನುವ ಚರ್ಚೆಗಳು ಈಗ ನಡೆಯುತ್ತಿವೆ.

ಕಳೆದ ನಾಲ್ಕು ದಶಕಗಳಿಂದ ಪಾಕಿಸ್ಥಾನ ಪ್ರಾಯೋಜಿತ ಆತಂಕವಾದದ ವಿರುದ್ಧ ಭಾರತದ ಅಭಿಪ್ರಾಯವನ್ನು ನಿರ್ಲಕ್ಷಿಸಿ ಆ ದೇಶದ ಸಖ್ಯಕ್ಕೆ ಮಹತ್ವ ಕೊಟ್ಟಿದ್ದ ಅಮೆರಿಕ ಇತ್ತೀಚಿನ ವರ್ಷಗಳಲ್ಲಿ ಭಾರತದೊಂದಿಗೆ ಸಂಬಂಧ ವೃದ್ಧಿಗೆ ಮುಂದಾಗಿರುವುದರಲ್ಲೂ ಅವರ ಹಿತಾಸಕ್ತಿಗಳು ಅಡಗಿವೆ. ಸೋವಿಯತ್‌ ರಷ್ಯಾದೊಂದಿನ ಶೀತಲ ಸಮರದ ಸಮಯದಲ್ಲಿ ಮಹತ್ವಪೂರ್ಣ ಸ್ಥಾನ ಪಡೆದುಕೊಂಡಿದ್ದ ಪಾಕಿಸ್ಥಾನದಲ್ಲಿ ನಡೆಯುತ್ತಿದ್ದ ಅಲ್ಪ ಸಂಖ್ಯಾಕರ ಮಾನವ ಅಧಿಕಾರ ಉಲ್ಲಂಘನೆ, ಆತಂಕವಾದದ ಹರಡುವಿಕೆಯಂತಹ ಎಲ್ಲ ಕುಕೃತ್ಯಗಳೂ ಅಮೆರಿಕಕ್ಕೆ ಸಹ್ಯವಾಗಿದ್ದವು. ನಿರಂತರವಾಗಿ ಸರ್ವಾಧಿಕಾರಿಗಳ ಕಪಿಮುಷ್ಠಿಗೆ ಸಿಲುಕಿದ್ದ ಪಾಕಿಸ್ಥಾನದ ಸಹಸ್ರ ತಪ್ಪುಗಳನ್ನೂ ಕಂಡೂ ಕಾಣದಂತಿದ್ದ ಅಮೆರಿಕ ಸ್ವತಹ ತನ್ನಲ್ಲಿ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಉಗ್ರವಾದ ಪಸರಿಸುತ್ತಿರುವುದನ್ನು ನೋಡಿ ಎಚ್ಚೆತ್ತುಕೊಂಡಿದೆ. ಒಂದರ್ಥ ದಲ್ಲಿ ತನ್ನ ಸ್ವಂತ ಹಿತ ಕಾಯ್ದುಕೊಳ್ಳುವ ಅಮೆರಿಕದ ನೀತಿ ಇಂದು ನಿನ್ನೆಯದಲ್ಲ.

“ಅಮೆರಿಕ ಫ‌ಸ್ಟ್‌’ ಎಂದ ಟ್ರಂಪ್‌ ಚುನಾವಣೆಯ ಸಮಯದÇÉೇ ಭಾರತವನ್ನು ಕೊಳಕು ದೇಶ ಎಂದರು. ಚೀನದ ಹೆಚ್ಚುತ್ತಿರುವ ಪ್ರಭಾವವನ್ನು ತಗ್ಗಿಸಬೇಕಾದ ಅನಿವಾರ್ಯತೆಗೆ ಸಿಲುಕಿ ಭಾರತವನ್ನು ಸಮರ್ಥಿಸುವ ಸೋಗು ಹಾಕಿದರು.

ಚುನಾವಣೆಯ ಸಮಯದಲ್ಲಿ ಚೀನದ ವಿರುದ್ಧ ಗುಡು ಗುತ್ತಿದ್ದ ಅಮೆರಿಕದ ರಾಜಕಾರಣಿಗಳು ಅಧಿಕಾರಕ್ಕೆ ಬಂದ ಅನಂತರ ತಮ್ಮ ಕಠಿನ ನಿಲುವನ್ನು ಅಚಲವಾಗಿರಿಸಿಕೊಳ್ಳುತ್ತಾರೆ ಎನ್ನುವುದು ಸಂದೇಹಾಸ್ಪದ. ಭೌಗೋಳಿಕವಾಗಿ ಸಾವಿರಾರು ಕಿ.ಮೀ.ದೂರದಲ್ಲಿರುವ ಅಮೆರಿಕನ್ನರು ಭಾರತ-ಚೀನ ಸಂಭಾವ್ಯ ಸಂಘರ್ಷದಲ್ಲಿ ಭಾರತದ ಪರ ಬಾಯಿ ಮಾತಿನ ಹೇಳಿಕೆ ನೀಡಬಹುದೇ ವಿನಾ ಯುದ್ಧಭೂಮಿಗೆ ಧಾವಿಸಬಹುದೆನ್ನುವುದು ಅವಾಸ್ತವಿಕವೇ ಸರಿ. ಈಗಾಗಲೇ ಜೋ ಬೈಡೆನ್‌ ಚೀನದೊಂದಿಗೆ ಸಂಬಂಧ ಸುಧಾರಿಸುವ ಮಾತುಗಳನ್ನಾಡಿದ್ದಾರೆ. ಕ್ವಾಡ್‌ ಸಮೂಹದ ಜಪಾನ್‌, ಆಸ್ಟ್ರೇಲಿಯಾ ಮತ್ತು ಆಸಿಯಾನ್‌ ದೇಶಗಳು ಒಂದೆಡೆ ಚೀನದ ವಿರುದ್ಧ ಗುರುತಿಸಿಕೊಂಡರೆ ಇನ್ನೊಂದೆಡೆ ಚೀನದೊಂದಿಗಿನ ವಾಣಿಜ್ಯ ವ್ಯವಹಾರ ಯಥಾಪ್ರಕಾರ ಮುಂದುವರಿಸುತ್ತಿವೆ. ಇತ್ತೀಚೆಗೆ ಚೀನದ ನೇತೃತ್ವದಲ್ಲಿ ಭಾರತದ ಭಾಗೀದಾರಿಯಿಲ್ಲದೇ ನಡೆದ Rಇಉಕ ಒಪ್ಪಂದದಲ್ಲಿ ಜಪಾನ್‌, ಆಸ್ಟ್ರೇಲಿಯಾ ಮತ್ತು ಆಸಿಯಾನ್‌ ದೇಶಗಳು ತಮ್ಮ ತಮ್ಮ ಆರ್ಥಿಕ ಹಿತವನ್ನು ಗಮನದಲ್ಲಿಟ್ಟುಕೊಂಡು ಭಾಗಿಯಾದವು ಎನ್ನುವುದು ಗಮನಾರ್ಹ.

ಕೊರೊನಾದಿಂದಾಗಿ ಜರ್ಝರಿತವಾಗಿರುವ ಅರ್ಥ ವ್ಯವಸ್ಥೆಯನ್ನು ಹಳಿಗೆ ತರಬೇಕಾದ ಸವಾಲನ್ನು ಎದುರಿಸುತ್ತಿ ರುವ ಸಂಕಷ್ಟದ ಸಮಯದಲ್ಲಿ ಸಹಜವಾಗಿಯೇ ಎಲ್ಲ ರಾಷ್ಟ್ರಗಳು ಆರ್ಥಿಕ ಹಿತ ಕಾಪಾಡಿಕೊಳ್ಳಲು ಆದ್ಯತೆ ನೀಡುತ್ತಿವೆ. ಚೀನದಂತಹ ಪ್ರಮುಖ ಆರ್ಥಿಕ ಶಕ್ತಿಯನ್ನು ನಿರ್ಲಕ್ಷಿಸಲು ಅಮೆರಿಕಕ್ಕೆ ಕೂಡಾ ಸಾಧ್ಯವಾಗದು ಮತ್ತು ಬೈಡೆನ್‌ ಅವರಿಂದ ಅಂಥ ನಿರೀಕ್ಷೆಯನ್ನು ಇಟ್ಟುಕೊಳ್ಳುವುದೂ ಮೂರ್ಖತನವಾದೀತು. ಸ್ವದೇಶೀ, ಸ್ವಾವಲಂಬನೆಯ ಸ್ವಾಭಿಮಾನಿ ಚಿಂತನೆಯ ಭಾರತ ಅಮೆರಿಕದಿಂದ ಹೆಚ್ಚಿನ ನಿರೀಕ್ಷೆಯ ಭ್ರಮಾಲೋಕದಿಂದ ಹೊರಬರಬೇಕಾಗಿದೆ. ಬೈಡೆನ್‌-ಕಮಲಾ ಹ್ಯಾರಿಸ್‌ ಅಮೆರಿಕದ ಒಳಿತಿಗಾಗಿ ಚೀನದೊಂದಿಗೆ ರಾಜಿ ಮಾಡಿಕೊಂಡು ಭಾರತವನ್ನು ನಡು ನೀರಿನಲ್ಲಿ ಕೈ ಬಿಡಲು ಹಿಂಜರಿಯಲಾರರು.

ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.