ವಿರುದ್ಧ ದಿಕ್ಕಿಗೆ ಚಲಿಸುತ್ತಿದೆಯೇ ಆರ್ಥಿಕ ಸುಧಾರಣೆ?

Team Udayavani, Jan 18, 2020, 6:34 AM IST

ಪ್ರಧಾನಿ ಮೋದಿಯವರ ಸರಕಾರಾವದಿಯಲ್ಲಿ ಭಾರ ತದ ಘನತೆ ಗೌರವಗಳು ವಿಶ್ವದಾದ್ಯಂತ ಹೆಚ್ಚಿರುವುದು ನಿಜ. ಆದರೆ ಆರ್ಥಿಕ ಸುಧಾರಣಾ ಕ್ರಮಗಳು ವಿರುದ್ಧ ದಿಕ್ಕಿಗೆ ಚಲಿಸುತ್ತಿ ರುವಂತೆ ಗೋಚರವಾಗುತ್ತಿದೆ. ಉತ್ಪಾದನಾ ಕೊರತೆ, ಹಣ ದುಬ್ಬರ, ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳು ಉಲ್ಬಣಗೊಳ್ಳುತ್ತಿರುವುದು ವಿಷಾದನೀಯ.ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅನುತ್ಪಾದಕ ಆಸ್ತಿಯಲ್ಲಿ ಗಣನೀಯ ಇಳಿಕೆ ಕಾಣುತ್ತಿರುವುದು ಆಶಾದಾಯಕ.

ಜಿಡಿಪಿ: ಜಿಡಿಪಿಯನ್ನು ಭಾರತದಲ್ಲಿ ಮೂರು ತಿಂಗಳಿ ಗೊಮ್ಮೆ ಲೆಕ್ಕ ಹಾಕಲಾಗುತ್ತದೆ. ಆ ಮೊತ್ತವು ಹೆಚ್ಚುತ್ತಾ ಹೋ ದರೆ ದೇಶವು ಆರ್ಥಿಕವಾಗಿ ಮುನ್ನಡೆಯುತ್ತಿದೆ ಎಂದರ್ಥ. ಕಡಿಮೆಯಾದರೆ ಆರ್ಥಿಕ ಹಿಂಜರಿಕೆಯ ಲಕ್ಷಣ. ಒಟ್ಟಾರೆ ಆರ್ಥಿಕ ಹಿಂಜರಿಕೆ ದೇಶ ವಿದೇಶಗಳಲ್ಲಿ ವ್ಯಾಪಕವಾಗಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಹೂಡಿಕೆ ಹರಿದು ಬರು ವುದಿಲ್ಲ. ಆದುದರಿಂದ ಇದೀಗ ಭಾರೀ ಪ್ರಮಾಣದಲ್ಲಿ ಮೂಲ ಸೌಕರ್ಯಗಳ ಮೇಲೆ ವೆಚ್ಚ ಮಾಡುವ ಅವ ಶ್ಯಕತೆ ಉಂಟಾ ಗಿದೆ. ಆರ್‌ಬಿಐ ರಿಪೋ ದರವನ್ನು 5.15 ತಂದು ನಿಲ್ಲಿಸಿದರೂ ಖಾಸಗಿ ಹೂಡಿಕೆ ಶೇ. 1 ರಷ್ಟು ಮಾತ್ರ ಬಂದಿ ದೆ. ಕಳೆದ ಬಾರಿ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟು ಕೊಂಡು ರಿಪೋ ದರ ಪುನಃ ಕಡಿಮೆ ಮಾಡಲಿಲ್ಲ. ಇದನ್ನು ಗಮನಿಸಿದರೆ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವುದು ಅನಿವಾರ್ಯ. ಅಲ್ಲದೆ ಜಿಎಸ್‌ಟಿ ಆದಾಯ ಹೆಚ್ಚುವುದು ಅನಿವಾರ್ಯವಾಗಿದೆ ಇದೀಗ ಎಡಿಬಿ ಸಮೀಕ್ಷೆಯು 2019-20ನೇ ವರ್ಷದ ಆರ್ಥಿಕ ದರವನ್ನು ಶೇ. 5.1ಕ್ಕೆ ಇಳಿಸಿದೆ. ಐಎಮ್‌ಎಫ್ ಶೇ. 6.1ಕ್ಕೆ, ಆರ್‌ಬಿಐ ಶೇ. 5ಕ್ಕೆ ಹಾಗೂ ವಿಶ್ವಬ್ಯಾಂಕ್‌ ಶೇ. 6ಕ್ಕೆ ತಗ್ಗಿಸಿದೆ. ಕೇಂದ್ರ ಕೈಗೊಂಡಿರುವ ಉತ್ತೇಜನಾ ಕ್ರಮಗಳಿಂದ 1920-21 ನೇ ಹಣಕಾಸು ವರ್ಷದಲ್ಲಿ ದೇಶೀ ಆರ್ಥಿಕತೆಯಲ್ಲಿ ಸ್ಥಿರತೆ ಕಂಡು ಬರಲಿದೆ ಮತ್ತು ವೃದ್ಧಿ ದರವು ಶೇ. 6.5ಕ್ಕೆ ಮರಳುವ ನಿರೀಕ್ಷೆ ಇದೆಯೆಂದು ಎಡಿಬಿ ಅಂದಾಜಿಸಿದೆ. ಒಂದು ದೇಶದಲ್ಲಿ ಸಂಭವಿಸುವ ಸಮೃದ್ಧಿ ಅಥವಾ ಹಿಂಜರಿತವು ಇತರ ದೇಶಗಳಿಗೂ ಪಸರಿ ಸಬಲ್ಲದು. ಅಮೆರಿಕವು ಮುಂದು ವರಿದ ಶ್ರೀಮಂತ ದೇಶ. ಅದರ ಕರೆನ್ಸಿ ಡಾಲರನ್ನು ಎಲ್ಲಾ ದೇಶಗಳು ಸ್ವೀಕರಿಸುತ್ತವೆ. ಅಮೆರಿಕದಲ್ಲಿ ಆರ್ಥಿಕ ಏರಿಳಿತಗಳು ಸಂಭವಿಸಿದರೆ ಅದರ ಪರಿಣಾಮ ಎಲ್ಲಾ ದೇಶಗಳಿಗೂ ತಲು ಪುತ್ತದೆ. ಅಮೆರಿಕ ಮತ್ತು ಚೀನ, ಜಪಾನ್‌ ಮತ್ತು ದ.ಕೊರಿ ಯಾಗಳ ವಾಣಿಜ್ಯ ಸಂಘರ್ಷಗಳು ನಮ್ಮ ಆರ್ಥಿ ಕತೆಯ ಮೇಲೂ ಪ್ರಭಾವ ಬೀರಿವೆ. ಮೊದಲ ತ್ರೆçಮಾಸಿಕದಲ್ಲಿ ಜಿಡಿಪಿ ಶೇ. 5ಕ್ಕೆ ಕುಸಿದಾಗ ವಿದೇಶಿ ಹೂಡಿಕೆದಾರರಿಗೆ ವಿಧಿಸಿದ್ದ ತೆರಿಗೆ ಇಳಿಕೆ ಕಾರ್ಪೋರೆಟ್‌ ತೆರಿಗೆ ಕಡಿತ, ಬ್ಯಾಂಕ್‌ಗಳ ವಿಲೀನದ ಕ್ರಮ ಕೈಗೊಂಡರೂ ದ್ವಿತೀಯ ತ್ರೆçಮಾಸಿಕಕ್ಕೆ ಶೇ. 4.5ಕ್ಕೆ ಹಿನ್ನಡೆ ಕಂಡಿತು. ಹೀಗೆ ಬಂಡವಾಳ ಸಂಚಯನ ಈಗಿನ ಆದ್ಯತೆ.

ಹಣದುಬ್ಬರ: ಇದೀಗ ಆರ್ಥಿಕತೆಗೆ ಉತ್ತೇಜನ ನೀಡುತ್ತಿ ರುವ ಹಂತದಲ್ಲಿ ಹಣದುಬ್ಬರ ಗರಿಷ್ಟ ಮಟ್ಟ ತಲುಪಿದೆ. ಇದ ರಿಂದ ಖರೀದಿಯ ಶಕ್ತಿ ಕ್ಷೀಣಿಸಿದೆ. ಅರ್ಥ ವ್ಯವಸ್ಥೆ ಬೆಳವಣಿಗೆ ಕಾಣುವ ಸಮಯದಲ್ಲಿ ಹಣದುಬ್ಬರವು ಇದ್ದೇ ಇರುತ್ತದೆ. ಆದರೆ ಅದು ನಿಯಂತ್ರಣ ದಲ್ಲಿರಬೇಕು. ನಿಯಂತ್ರಣದಲ್ಲಿದ್ದರೆ ಆರ್ಥಿಕ ಬೆಳವಣಿಗೆಗೆ ಪೂರಕವಾ ಗುತ್ತದೆ ಮತ್ತು ಖರೀದಿಗೆ ಜನರ ಬಳಿ ಹಣ ಲಭ್ಯವಿರುತ್ತದೆ ಹಾಗೂ ಉತ್ಪಾದನಾ ಚಟು ವಟಿಕೆ ಹೆಚ್ಚಲು ನೆರವಾಗುತ್ತದೆ. ನಿಯಂತ್ರಣ ತಪ್ಪಿದರೆ ಬೆಲೆ ಏರಿಕೆಯಿಂದ ಖರೀದಿ ಸಾಮರ್ಥ್ಯ ಕ್ಷೀಣಿಸುತ್ತದೆ. “ಠೇವಣಿಗಳ ಬಡ್ಡಿದರದ ಮಟ್ಟಕ್ಕೆ ಹಣ ದುಬ್ಬರ ತಲುಪಿದರೆ ಠೇವಣಿಯ ಉದ್ದೇಶ ವ್ಯರ್ಥವಾ ಗುತ್ತದೆ’. ಇದೀಗ ಕಳೆದ 5 ವರ್ಷ ಗಳಲ್ಲಿಯೇ ಗರಿಷ್ಠ ಚಿಲ್ಲರೆ ಹಣದುಬ್ಬರ ಶೇ. 7.35 ಕ್ಕೆ ಏರಿದೆ. ಇದು ಈರುಳ್ಳಿ ಮತ್ತು ತೈಲ ದರ ಹೆಚ್ಚಳದ ಪರಿಣಾಮ, ಇದು ಇಳಿಕೆಯ ಹಾದಿಯಲ್ಲಿದೆ. ಸಗಟು ಬೆಲೆ ಸೂಚ್ಯಂಕ ದಲ್ಲೂ ಶೇ. 2.59ರಷ್ಟು ಏರಿಕೆಯಾಗಿದೆ. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ಮೊಬೈಲ್‌ ಕರೆ ದರಗಳ ಜತೆಗೆ ಆಹಾರ ಪದಾರ್ಥಗಳು ದುಬಾರಿಯಾಗಿವೆ. ಜನರ ಖರೀದಿ ಸಾಮರ್ಥ್ಯ ಕುಸಿದು ಹಣ ದುಬ್ಬರ ಜನಸಾಮಾನ್ಯರ ಬವಣೆ ಹೆಚ್ಚಿಸಿದೆ. ಕೇಂದ್ರ ಸರಕಾರದ ವಿತ್ತೀಯ ಕೊರತೆ ಬಜೆಟ್‌ ಅಂದಾಜನ್ನು ಮೀರಿ ಹೋಗಿದೆ. ವಿತ್ತೀಯ ಕೊರತೆ ರೂ. 7.20 ಲಕ್ಷ ಕೋಟಿಗೇರಿದೆ. ಬಜೆಟ್‌ ಅಂದಾಜು ಕೊರತೆ ರೂ. 7.03 ಲಕ್ಷ ಕೋಟಿ ಯಿತ್ತು. ವಿತ್ತೀಯ ಕೊರತೆ ಹೆಚ್ಚಿದರೆ ಯಾವುದೇ ಆರ್ಥಿಕ ಬೆಳವ ಣಿಗೆಯನ್ನು ತೀವ್ರಗೊಳಿಸಲು ಅಸಾಧ್ಯ. 8 ಮಹತ್ವದ ಕೈಗಾರಿಕಾ ಕ್ಷೇತ್ರಗಳು ಹಿನ್ನಡೆ ಅನುಭವಿಸಿವೆ.

ನಿರುದ್ಯೋಗ: ಆರ್ಥಿಕ ಬೆಳವಣಿಗೆಯ ದರವು ಉದ್ದೇ ಶಿತ ದರಕ್ಕಿಂತ ಹಿಂದೆ ಬಿದ್ದಿದೆ. ಹಾಗಾಗಿ ಸಾಕಷ್ಟು ಪ್ರಮಾ ಣದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ವಿತ್ತೀಯ ಕೊರತೆ ಮಿತಿಮೀರಿ ಏರುತ್ತಿದೆ. ನಷ್ಟದಲ್ಲಿರುವ ಕೈಗಾರಿಕೆಗಳ ಹೂಡಿಕೆ ಹಣವನ್ನು ವಾಪಾಸು ಪಡೆಯಲು ವಿತ್ತ ಸಚಿ ವಾಲಯ ಯೋಚಿಸುತ್ತಿದೆ. ಎಷ್ಟೇ ಹಣಕಾಸು ಸಹಾಯ ಮಾಡಿದರೂ ಹಾನಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ನಷ್ಟದಲ್ಲಿರುವ ಸಂಸ್ಥೆಗಳ ಶೇರುಗಳನ್ನು ಖಾಸಗಿ ಯವರಿಗೆ ಮಾರಾಟ ಮಾಡಿ ಅಂತಹ ಘಟಕಗಳನ್ನು ಮುಚ್ಚಿದರೆ ನಿರುದ್ಯೋಗ ಹೆಚ್ಚುತ್ತದೆ.

ನಿರುದ್ಯೋಗ ಭಾರತದ ಇಂದು ನಿನ್ನೆಯ ಸಮಸ್ಯೆಯ ಲ್ಲದಿದ್ದರೂ ಬಹು ಭೀಕರ ಸಮಸ್ಯೆಗಳಲ್ಲಿ ಒಂದೆನಿಸಿದೆ. ಅಕ್ಟೋಬರ್‌ ಅಂತ್ಯಕ್ಕೆ ನಿರುದ್ಯೋಗ ಪ್ರಮಾಣ ಶೇ. 8.5 ಕ್ಕೆ ತಲುಪಿದೆ. ಉದ್ಯೋಗವು ಮಾನವನ ಮೂಲಭೂತ ಆವಶ್ಯ ಗಳಲ್ಲಿ ಒಂದೆನಿಸಿದೆ. ಆದರೆ ಉದ್ಯೋಗವನ್ನು ಮೂಲಭೂತ ಹಕ್ಕಾಗಿಸದೆ ಇರುವುದು ವಿಪರ್ಯಾಸ. ನಿರುದ್ಯೋಗ ಸಮಸ್ಯೆ ನಮ್ಮ ಆರ್ಥ ವ್ಯವಸ್ಥೆಯನ್ನು ಅಪಾರವಾಗಿ ಹಾನಿಗೀಡು ಮಾಡಿದೆ. ದೇಶದಲ್ಲಿ ನಿರುದ್ಯೋಗದಿಂದ ತಾಸಿಗೊಂದು ಆತ್ಮ ಹತ್ಯೆ ಸಂಭವಿಸುತ್ತಿದೆ. ನಿಧಾನ ಬೆಳವಣಿಗೆಯ ಪ್ರಕ್ರಿಯೆ ಅಭಿವೃದ್ಧಿಯ ದರವನ್ನು ಉದ್ಯೋಗದ ದರವು ಅವಲಂಬಿ ಸಿರುತ್ತದೆ. ಅದೇ ಸಂದರ್ಭದಲ್ಲಿ ಅಭಿವೃದ್ಧಿಯಾದರೆ ನಿರು ದ್ಯೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಸರಿಯಲ್ಲ. ಅನೇಕ ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ನಿರು ದ್ಯೋಗವಿರುವುದು ಒಂದು ಸಾಮಾನ್ಯ ಸಂಗತಿ.

ಅಧಿಕ ಉದ್ಯೋಗ ಸೃಷ್ಟಿ, ಜನಸಂಖ್ಯೆ ನಿಯಂತ್ರಣ, ಅಭಿವೃದ್ಧಿ ದರ ಏರಿಕೆ, ಸಮರ್ಪಕ ಶಿಕ್ಷಣ ನೀಡಿಕೆ, ಶ್ರಮಿಕ ಕೆಲಸಗಳು, ತಂತ್ರಜ್ಞಾನ ಅಳವಡಿಕೆ ಹಾಗೂ ಮಾನವ ಶಕ್ತಿಯ ಸಂಯೋಜನೆಯಿಂದ ನಿರುದ್ಯೋಗ ನಿವಾರಣೆ ಸಾಧ್ಯ. ಇದೀಗ ನಿರುದ್ಯೋಗ ತ್ವರಿತವಾಗಿ ಬೆಳೆಯುತ್ತಿರುವಾಗಲೇ ಇಂಟರ್‌ನೆಟ್‌ ಆದಾರಿತ ಓಯೊ, ಓಲಾ, ಪೇಟಿಎಂ, ಕ್ವಿಕರ್‌ಗಳು ಮತ್ತು ಜೊಮಾಟೊದಂಥ ಸ್ಟಾರ್ಟ್‌ಅಪ್‌ಗಳು ನಿರುದ್ಯೋಗ ಕಡಿಮೆ ಮಾಡಿವೆ.

ಎನ್‌ಪಿಎ: 2019ರ ತ್ರೆçಮಾಸಿಕದಲ್ಲಿ ಕಳೆದ ಏಳು ವರ್ಷಕ್ಕೆ ಹೋಲಿಸಿದರೆ ಅನುತ್ಪಾದಕ ಆಸ್ತಿ (ಎನ್‌ಪಿಎ) ಯಲ್ಲಿ ಗಣನೀಯ ಇಳಿಕೆ ಕಂಡಿದೆ. ಬ್ಯಾಂಕ್‌ಗಳ ಒಟ್ಟು ಅನುತ್ಪಾದಕ ಆಸ್ತಿ. ಶೇ. 11.2 ರಿಂದ ಶೇ. 9.1 ಕ್ಕೆ ಇಳಿಕೆಯಾಗಿದೆ. 2018 ರಲ್ಲಿ ಅನುತ್ಪಾದಕ ಆಸ್ತಿ 6 ಲಕ್ಷ ಕೋಟಿಯಿದ್ದದ್ದು ಇದೀಗ ರೂ. 3.7 ಲಕ್ಷ ಕೋಟಿಗೆ ಇಳಿದಿದ್ದು, ಬ್ಯಾಂಕಿಂಗ್‌ ಕ್ಷೇತ್ರ ಸುರಕ್ಷಿತವಾಗುತ್ತಿದೆ. ದೇಶದ ಮಂದಗತಿಯ ಆರ್ಥಿಕ ಬೆಳವಣಿ ಗೆಯಿಂದ ಚೇತರಿಸಿಕೊಳ್ಳಲು ಬ್ಯಾಂಕ್‌ಗಳು ಸಹಕಾರಿಯಾಗು ತ್ತಿವೆ. ದೇಶದ ಆರ್ಥಿಕ ಮಂದಗತಿಗೆ ಬ್ಯಾಂಕ್‌ ನಲ್ಲಿ ಬೆಳೆಯು ತ್ತಿರುವ ಅನುತ್ಪಾದಕ ಆಸ್ತಿಯೇ ಕಾರಣ. ಅನುತ್ಪಾದಕ ಆಸ್ತಿಯ ವೇಗವನ್ನು ತಡೆಯಬೇಕು. ಅನುತ್ಪಾದಕ ಆಸ್ತಿ ಯಿಂದಾಗಿ ಹಣದ ಚಲಾವಣೆ ಕುಂಠಿತಗೊಂಡಿರುವುದೇ ಆರ್ಥಿಕ ಮಂದ ಗತಿಗೆ ಮುಖ್ಯ ಕಾರಣ. ಬ್ಯಾಂಕಿನಲ್ಲಿ ರಿಟೇಲ್‌ ಸಾಲಕ್ಕೆ ಹೆಚ್ಚು ಒತ್ತುಕೊಡಬೇಕು. ಕಾರ್ಪೊರೇಟ್‌ ವಲಯದ ಸಾಲ ಇಳಿಮುಖವಾಗಿದೆಯಾದರೂ ಕ್ರೋನಿ ಕ್ಯಾಪಿಟಲಿಸ್ಟ್‌ಗಳ ಸಾಲ ವಸೂಲಿಗೆ ತಕ್ಕ ಮತ್ತು ತೀಕ್ಷ್ಣ ಕ್ರಮ ಅಗತ್ಯ. ಈ ಆರ್ಥಿಕ ವರ್ಷದ ಮೂರು ತ್ರೆçಮಾಸಿಕಗಳಲ್ಲಿ ರೂ. 1,14,000 ಕೋಟಿ ವಂಚನೆಯಾಗಿದೆ. ಇದು ಅರ್ಥವ್ಯವಸ್ಥೆಗೆ ಆಗುತ್ತಿರುವ ಆಘಾತ.

ಕೃಷಿ ಕ್ಷೇತ್ರ: ಕೃಷಿಕರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ದೊರಕಬೇಕು. ರೈತರ ಸ್ಥಿತಿಯನ್ನು ಸುಧಾರಿಸಲು ಸಾಲ ಮನ್ನಾ ಎಂದಿಗೂ ಶಾಶ್ವತ ಅಥವಾ ದೀರ್ಘಾವಧಿ ಪರಿಹಾರವಾಗಲಾರದು. ಸಾಲ ಮನ್ನಾ ಎಂಬುದು ಓಟ್‌ ಬ್ಯಾಂಕ್‌ ತಂತ್ರವಾಗಿ ಕಳೆದ ದಶಕದಲ್ಲಿ 4.7 ಲಕ್ಷ ಕೋಟಿ ಹಾಗೂ ಕಳೆದರಡು ವರ್ಷಗಳಲ್ಲಿ 2 ಲಕ್ಷ ಕೋಟಿ ಸಾಲ ಮನ್ನವಾಗಿ ಸರಕಾರದ ಖಜಾನೆಯ ಮೇಲೆ ಹೊಡೆತ ಬಿದ್ದಿದೆ. ಬೆಳೆಗಳಿಗೆ ಸ್ವರ್ಧಾತ್ಮಕ ಬೆಲೆ ನಿಗದಿಗೊಳಿಸಬೇಕು. ಬೆಳೆ ವಿಮೆ ಯೋಜನೆ ಸರಿಯಾಗಬೇಕು. ಕೃಷಿಕ ದೇಶದ, ಆರ್ಥಿಕತೆಯ ಮತ್ತು ರಾಷ್ಟ್ರ ರಾಜಕಾರಣದ ಬೆನ್ನೆಲುಬೂ ಹೌದು ಎಂಬುದನ್ನು ಮರೆಯಬಾರದು.

ಔದ್ಯಮಿಕ ವಲಯವನ್ನು ಪುನಃಶ್ಚೇತನಗೊಳಿಸುವ ಯೋಜನೆಗಳನ್ನು ಮತ್ತು ವಿದೇಶಿ ವಿನಿಮಯಕ್ಕೆ ಉತ್ತೇಜನ ಕೊಡಲು ರಪು¤ ವ್ಯಾಪಾರಕ್ಕೆ ಸಹಕಾರಿಯಾಗುವ ಯೋಜನೆ ಗಳನ್ನು ರಚಿಸಬೇಕು. ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲು, ಬ್ಯಾಂಕ್‌ಗಳ ಲಾಭಗಳಿಕೆ ಹೆಚ್ಚಲು ಕ್ರಿಯಾಶೀಲರಾಗಿ ಕಾರ್ಯ ಪ್ರವೃತ್ತರಾಗಬೇಕು. ಕೃಷಿ ಚಟುವಟಿಕೆಗಳ ಉತ್ತೇಜನಕ್ಕೆ ವ್ಯವಸ್ಥೆ ಮಾಡಬೇಕು. ಹಾಗೆಯೇ ಜಾಗತಿಕ ವಾಣಿಜ್ಯ ಸಂಘರ್ಷಗಳು ತಿಳಿಯಾದರೆ ಅತಿವೃಷ್ಟಿ, ಅನಾವೃಷ್ಟಿ ಸಂಭವಿಸದಿದ್ದಲ್ಲಿ ಆರ್ಥಿಕತೆ ಚೇತರಿಕೆಯಾ ಗಬಹುದೆಂದು ನಿರೀಕ್ಷಿಸಬಹುದು.

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ