ಭಾಷೆ ಕಲಿಕೆ ಮತ್ತು ಮಾಧ್ಯಮ


Team Udayavani, Jul 16, 2019, 5:00 AM IST

RTE-647

ಪ್ರೌಢ ಹಂತದಲ್ಲಿ ಮೂಲ ಶಿಕ್ಷಣದ ಕಲ್ಪನೆಯಲ್ಲಿ ಕೌಶಲ್ಯಗಳನ್ನು ಕಲಿಸೋಣ. ಅನಂತರದ ಶಿಕ್ಷಣ ವ್ಯವಸ್ಥೆಯೊಳಗೆ (ಪ್ರೌಢ ಹಂತದ ನಂತರ) ಆರ್ಥಿಕ ಮತ್ತು ವಾಣಿಜ್ಯ ಚಿಂತನೆಗಳು ಬರಲಿ. ಆಗ ಮಗು ತನಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸಶಕ್ತತೆ ಹೊಂದಿರುತ್ತದೆ. ಅದು ಬಿಟ್ಟು ಮಗುವನ್ನು ಒಂದು ಸರಕಾಗಿ ಪರಿಗಣಿಸಿ ತನ್ನದಲ್ಲದ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವುದು ಮಾನಸಿಕ, ಬೌದ್ಧಿಕ, ಮಾನವಿಕ ಬೆಳವಣಿಗೆಗೆ ತೀರಾ ವಿರುದ್ಧ ಮಾತ್ರವಲ್ಲ ಭವಿಷ್ಯದಲ್ಲಿ ನಾಡಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪರಿಸರದ ಮೇಲೆ ಸರಿಪಡಿಸಲಾಗದಷ್ಟು ಹೊಡೆತ ನೀಡುವುದರಲ್ಲಿ ಸಂಶಯವೇ ಇಲ್ಲ.

ಹಲವು ಭಾಷೆಗಳ ನಾಡು ನಮ್ಮದು. ಮನೆಯಲ್ಲೊಂದು ನೆರೆ ಹೊರೆಯಲ್ಲೊಂದು, ಊರಿನಲ್ಲೊಂದು, ನಾಡಿನಲ್ಲೊಂದು ಹೀಗೆ ಬಹುಭಾಷಾ ನೆಲೆಯಲ್ಲಿ ಒಟ್ಟು ಸಮಾಜ ವ್ಯವಸ್ಥೆ, ಸಂಸ್ಕೃತಿ, ಜನಜೀವನ ಬೆಳೆದಿದೆ, ವಿಕಾಸ ಹೊಂದಿದೆ. ನಮ್ಮ ಭಾಷೆ ಬೇರೆ, ರಾಜ್ಯ ಭಾಷೆ ಬೇರೆ ಆಗಿದ್ದರೂ ವ್ಯಾವಹಾರಿಕವಾಗಿರುವ ಒಟ್ಟು ಪ್ರದೇಶ ವ್ಯಾಪಿ ರಾಜ್ಯ ಭಾಷೆಯನ್ನು ನಾವೆಲ್ಲ ಒಪ್ಪಿಕೊಂಡಿದ್ದೇವೆ. ಶಿಕ್ಷಣ, ಶಿಕ್ಷಣದ ಮಾಧ್ಯಮವೂ ಇದೇ ಹಿನ್ನೆಲೆಯಲ್ಲಿ ವ್ಯವಸ್ಥೆಗೊಳಿಸಲಾಗಿದೆ.

ಓರ್ವ ಮಗು ಏಕ ಕಾಲದಲ್ಲಿ ಹಲವು ಭಾಷೆಯನ್ನು ಕಲಿಯುವ ಸಾಮರ್ಥ್ಯ ಹೊಂದಿದೆ. ಮನೆ ಭಾಷೆ, ನೆರೆಹೊರೆಯ ಭಾಷೆ, ರಾಜ್ಯ ಭಾಷೆಯನ್ನೂ ಕಲಿಯುತ್ತದೆ. ಅಂತಹ ಭಾಷೆಯ ಮೂಲಕ ವ್ಯವಹರಿಸಿರುತ್ತದೆ. ಮುಂದೆಯೂ ವ್ಯವಹರಿಸುತ್ತದೆ. ಭಾಷೆಯ ಮೂಲಕ ವ್ಯವಹರಿಸುತ್ತಿದೆಯೆಂದರೆ ವ್ಯಾಪಾರ ಮಾಡುತ್ತದೆ ಎಂದಲ್ಲ (ಸಂವಹನ ನಡೆಸುತ್ತದೆ). ಹೀಗೆ ಗೊತ್ತಿರುವ ಭಾಷಾ ಜ್ಞಾನದೊಂದಿಗೆ ಮಗು ಶಾಲೆಯನ್ನು ಪ್ರವೇಶಿಸುತ್ತದೆ. ಇಲ್ಲಿ ಮಗು ಖಾಲಿ ಚೀಲವಲ್ಲ. ಬೆಳೆ ಬೆಳೆಯುತ್ತಾ ಕಲಿತುಕೊಂಡ, ಸಂಗ್ರಹಿಸಿಕೊಂಡ, ತಾನೇ ಸಂರಚಿಸಿಕೊಂಡ ಭಾಷಾ ಸ್ವರೂಪದ ಜ್ಞಾನದೊಂದಿಗೆ ಅನುಭವ ಹೊಂದಿರುತ್ತದೆ. ಹಾಗಾಗಿ ಮಗು ಯಾವುದೇ ಹಂತದ ತರಗತಿಗೆ ಸೇರಲಿ ಶಾಲೆಯೆಂಬುದು ಮಗುವಿನ ಕಲಿಕೆಯ ಮುಂದುವರಿಕೆಯ ಭಾಗವಾಗಿ ಇರುತ್ತದೆಯೇ ಹೊರತು ಬೇರು ಕತ್ತರಿಸಿಕೊಂಡು ಕುಂಡದಲ್ಲಿ ನೆಡುವ ಗಿಡದ ಹಾಗೆ ಅಲ್ಲ. ಬಹಳ ಮುಖ್ಯವಾಗಿ ಭಾಷಾ ಪರಿಸರಕ್ಕನುಗುಣವಾಗಿ ಮಗು ಗ್ರಹಿಸುವ, ಅರ್ಥೈಸಿಕೊಳ್ಳುವ, ವಿಸ್ತರಿಸುವ, ಪ್ರತಿಕ್ರಿಯಿಸುವ ವಿಧಾನವನ್ನು ಮಿದುಳಿನಲ್ಲಿ ಸಂರಚಿಸಿಕೊಂಡಿರುತ್ತದೆ. ಹಾಗಾಗಿ ಮಕ್ಕಳು ಅಂಥದ್ದೇ ಕಲಿಕಾ ವಿನ್ಯಾಸದ ಭಾಷಾ ಮಾಧ್ಯಮದ ಚೌಕಟ್ಟಿನೊಳಗೇ ಕಲಿಕೆ ಆರಂಭಿಸಬೇಕಾಗುತ್ತದೆ ಎಂಬುದು ಶಿಕ್ಷಣ ತಜ್ಞರ, ಭಾಷಾ ಶಾಸ್ತ್ರಜ್ಞರ ನಿಲುವು. ಅದೇ ಶಿಕ್ಷಣದ ತಳಹದಿಯೂ ಆಗುತ್ತದೆ.

ಈಗ ಇಲ್ಲಿ ಮಾಧ್ಯಮದ ಪ್ರಶ್ನೆ ಬರುತ್ತದೆ. ಒಂದು ಮಗು ಶಾಲೆಗೆ ಪ್ರವೇಶಿಸುವಲ್ಲಿಯವರೆಗೆ ಒಂದು ಭಾಷಾ ಪರಿಸರದಲ್ಲಿ ಬೆಳೆದಿರುತ್ತದೆ, ವ್ಯವಹರಿಸಿರುತ್ತದೆ ಮತ್ತು ಅದೇ ವಾತಾವರಣದಲ್ಲಿ ಮುಂದುವರಿಯುತ್ತದೆ. ಅಂತಹ ಮಾನಸಿಕ ಕಲಿಕಾ ಚೌಕಟ್ಟು ಅದೇ ಭಾಷೆಗನುಗುಣವಾಗಿ ವಿಕಾಸ ಹೊಂದುತ್ತದೆ ಹಾಗೂ ಶಾಲಾ ಚೌಕಟ್ಟಿಗೆ ಮಗು ಬಂದ ಮೇಲೆಯೂ ಪ್ರಕ್ರಿಯೆ ನಡೆಯುತ್ತದೆ. ಭಾಷೆ ಮಗುವಿನ ಬೆಳವಣಿಗೆಯಲ್ಲಿ ಸಂಕೇತವಾಗಿಯೂ (ಸಂವಹನದ ರೂಪದಲ್ಲಿ) ಮತ್ತು ಮನೋದೈಹಿಕವಾದ ಸಂಬಂಧವಾಗಿಯೂ ಕೆಲಸ ಮಾಡುತ್ತದೆಯೆಂಬುದು ತಜ್ಞರ ಅಭಿಪ್ರಾಯ ನಿಲುವು. ಹಾಗಾಗಿ ಮಗು ಕೇವಲ ಭಾಷೆಯನ್ನು ಕಲಿಯುವುದಲ್ಲ. ಆ ಮೂಲಕ ದೂರಗಾಮಿಯಾಗಿ ಪರಿಣಾಮ ಬೀರಬಲ್ಲ ಒಟ್ಟು ದೇಹ ಮನಸ್ಸುಗಳ ಸಮತೋಲನ ಬೆಳವಣಿಗೆಗೆ ತಳಹದಿಯನ್ನೂ ಹಾಕಿಕೊಳ್ಳುತ್ತದೆ. ಆ ಮೂಲಕ ಮಗು ಅಗತ್ಯವಿದ್ದಾಗ ಮತ್ತು ಅನಿವಾರ್ಯವಾದಾಗ ಇತರ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಯಬಲ್ಲುದು. ಭಾಷಾ ಕಲಿಕೆಯೆಂದರೆ ಕಲಿಸುವುದಲ್ಲ ಕಲಿಯುವುದು.

ಪ್ರಸ್ತುತ ಮಾತೆತ್ತಿದರೆ ಸಾಕು ಭವಿಷ್ಯ, ಸ್ಪರ್ಧೆ, ಉದ್ಯೋಗ, ಅವಕಾಶ, ಗುಣಮಟ್ಟ, ಸಮಾನತೆ ಹೀಗೆಲ್ಲ ಮಾತಾಡುತ್ತೇವೆ (ಅದನ್ನು ಯಾರೂ ಅಲ್ಲಗೆಳೆಯಲಾರರು). ಆದರೆ ನಿಜವಾಗಿಯೂ ನಾವು ಶಿಕ್ಷಣದ ಬಗ್ಗೆ ಮಾತಾನಾಡುತ್ತಿಲ್ಲ. ಹಾಗೆಂದುಕೊಂಡು ಮಾತಾಡುತ್ತೇವೆ ಅಷ್ಟೇ.

ಮಗು ಕಲಿಯುವುದು ಮತ್ತು ಕಲಿಯುವಂತೆ ಮಾಡುವುದು ಶಿಕ್ಷಣ. ಇಲ್ಲಿ ಭಾಷೆ ಒಂದು ಪ್ರಧಾನ ಸಲಕರಣೆ. ಓರ್ವ ಮಗು ತನ್ನ ಪರಿಸರದಲ್ಲಿ, ಸನ್ನಿವೇಶದಲ್ಲಿ, ವ್ಯವಹಾರದಲ್ಲಿರುವ ಭಾಷೆಯ ಮೂಲಕ ಚಿಂತನಾಕ್ರಮವನ್ನು ರೂಢಿಸಿಕೊಂಡಿರುತ್ತದೆ. ಆ ಮೂಲಕ ಶಬ್ದಗಳನ್ನು ಉತ್ಪಾದಿಸುವ, ಪ್ರಯೋಗಿಸುವ, ಉಚ್ಚರಿಸುವ ಕ್ರಿಯೆಗೆ ತೊಡಗುತ್ತದೆ. ಇದೇ ಭಾಷಾ ಕಲಿಕೆಯ ಆರಂಭ. ಮಗು ಮೂರು ವಿಧದಲ್ಲಿ ಭಾಷಾ ಕಲಿಕೆಗೆ ತೊಡಗಿಕೊಳ್ಳುತ್ತದೆ. ಒಂದು ತನ್ನೊಡನಿರುವವರ, ವಾತಾವರಣದಲ್ಲಿರುವವರ ವರ್ತನೆಗಳನ್ನು ನೋಡಿ . ಎರಡು ಸ್ವತಃ ಪ್ರಯೋಗಗಳಲ್ಲಿ ಮತ್ತು ಕ್ರಿಯೆಯಲ್ಲಿ ತೊಡಗಿಕೊಳ್ಳುವ ಮೂಲಕ. ಮೂರನೆಯದ್ದು ಹಂತ ಹಂತವಾಗಿ ಅಭಿವೃದ್ಧಿ ಪಡಿಸಿಕೊಳ್ಳುತ್ತಾ. ಈ ಹಂತಗಳೇ ಶಾಲಾ ಶಿಕ್ಷಣದ ವ್ಯವಸ್ಥೆಯ ತಳಹದಿ. ಸುಮಾರಾಗಿ ಹದಿನಾರು ವರ್ಷದವರೆಗೂ ಮಗು ತನ್ನ ದೈಹಿಕ ಮಾನಸಿಕ ಬೆಳವಣಿಗೆಯ ವೇಗವನ್ನು ಹೊಂದಿರುತ್ತದೆ. ಅಲ್ಲಿಯವರೆಗೆ ಶಿಕ್ಷಣ ವಿಶಾಲ ವ್ಯಾಪ್ತಿಯಲ್ಲಿ ಮಗುವಿಗೆ ಅನುಭವ ಕೊಡಬೇಕು.

ಭಾಷೆಯ ಮೂಲಕ ಬೌದ್ಧಿಕವಾಗಿ ವಿಕಾಸ ಹೊಂದಬೇಕು. ಈ ಹಂತದಲ್ಲಿ ಉದ್ಯೋಗ, ಸ್ಪರ್ಧೆ, ಭವಿಷ್ಯ, ಮಾರುಕಟ್ಟೆ ಎಂದೆಲ್ಲ ಹೇಳಿ ಮಗುವಿನ ಕಲಿಕೆಯ ಮೂಲ ಅಂಶಗಳಿಗೆ ವಿರುದ್ಧವಾಗಿ ಶಿಕ್ಷಣದ ಆಶಯಗಳಿಗೆ ಕೊಳ್ಳಿ ಇಡಬಾರದು. ಇಲ್ಲಿ ಮೊದಲು ಆಗಬೇಕಾದ್ದು ಉತ್ತಮವಾಗಿ ಭಾಷೆಯನ್ನು ಕಲಿಸುವ ವ್ಯವಸ್ಥೆ ಹಾಗೂ ಎಲ್ಲ ವಿಷಯಗಳಲ್ಲಿ ಕಲಿಕಾ ಮಟ್ಟದ ಸುಧಾರಣೆ. ಗುಣಮಟ್ಟದ ಹೆಸರಿನಲ್ಲಿ, ಭವಿಷ್ಯದ ಪ್ರಶ್ನೆ ಎಂಬುದಾಗಿ ಮಗು ಏನು ಕಲಿಯಬೇಕು, ಹೇಗೆ ಕಲಿಯಬೇಕು, ಯಾಕೆ ಕಲಿಯಬೇಕು ಎಂಬ ಶಿಕ್ಷಣದ ಎಲ್ಲ ಶಾಸ್ತ್ರ ಸಿದ್ಧಾಂತಗಳಿಗೆ ಎಳ್ಳುನೀರು ಬಿಡಬಾರದು. ಮಗು ಭಾಷೆಯನ್ನು ಕಲಿಯಬೇಕೋ, ಭಾಷೆಯ ಬಗ್ಗೆ ಕಲಿಯಬೇಕೋ ಅಥವಾ ಭಾಷೆಯ ಮೂಲಕ ಕಲಿಯಬೇಕೋ ಎಂಬ ಕಲಿಕೆಯ ಮೂಲಾಂಶಗಳ ಅರಿವಿಲ್ಲದೆ ನರ್ಸರಿಯಿಂದಲೆ ಎಲ್ಲವನ್ನೂ ಭಾಷೆಯ ಮೂಲಕ ತುರುಕಲು ಹೊರಟಿದ್ದೇವೆ. ಮಗು ಮೊದಲು ಎದ್ದು ನಿಲ್ಲಬೇಕು. ಆ ಮೇಲೆ ನಡೆಯುತ್ತಾ ಅನಂತರ ಓಡುವುದಕ್ಕೆ ಬಲವಂತನಾಗಬೇಕು.

ಪ್ರೌಢ ಹಂತದಲ್ಲಿ ಮೂಲ ಶಿಕ್ಷಣದ ಕಲ್ಪನೆಯಲ್ಲಿ ಕೌಶಲ್ಯಗಳನ್ನು ಕಲಿಸೋಣ. ಅನಂತರದ ಶಿಕ್ಷಣ ವ್ಯವಸ್ಥೆಯೊಳಗೆ (ಪ್ರೌಢ ಹಂತದ ನಂತರ) ಆರ್ಥಿಕ ಮತ್ತು ವಾಣಿಜ್ಯ ಚಿಂತನೆಗಳು ಬರಲಿ. ಆಗ ಮಗು ತನಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸಶಕ್ತತೆ ಹೊಂದಿರುತ್ತದೆ. ಅದು ಬಿಟ್ಟು ಮಗುವನ್ನು ಒಂದು ಸರಕಾಗಿ ಪರಿಗಣಿಸಿ ತನ್ನದಲ್ಲದ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವುದು ಮಾನಸಿಕ, ಬೌದ್ಧಿಕ, ಮಾನವಿಕ ಬೆಳವಣಿಗೆಗೆ ತೀರಾ ವಿರುದ್ಧ ಮಾತ್ರವಲ್ಲ ಭವಿಷ್ಯದಲ್ಲಿ ನಾಡಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪರಿಸರದ ಮೇಲೆ ಸರಿಪಡಿಸಲಾಗದಷ್ಟು ಹೊಡೆತ ನೀಡುವುದರಲ್ಲಿ ಸಂಶಯವೇ ಇಲ್ಲ. ಮಗು ಸಂಪನ್ಮೂಲವಾಗಿ ಬೆಳೆಯಬೇಕೇ ಹೊರತು ಸಂಪತ್ತು ಸೃಷ್ಟಿಸುವ ಮತ್ತು ಕ್ರೋಢೀಕರಿಸುವವನಾಗಿ ಪ್ರೌಢ ಹಂತದವರೆಗೆ ಬೆಳೆಸಬಾರದು. ಅನಂತರದ ಹಂತದಲ್ಲಿ ನಾವು ಪಥ ತೋರಿಸುವ ಅಥವಾ ಆತನೇ ಪಥ ಆಯ್ಕೆ ಮಾಡಿಕೊಳ್ಳಲಿ.

ಇಂದಿನ ಪ್ರಾಥಮಿಕ, ಪ್ರೌಢ ಶಿಕ್ಷಣದ ಧೋರಣೆಗಳಿಗೆ ಅರ್ಥವಿಲ್ಲ ತಳಹದಿಯೂ ಇಲ್ಲ. ಬದಲಾವಣೆಯ ಹೆಸರಲ್ಲಿ ಶಿಕ್ಷಣ ಶಾಸ್ತ್ರದ ಸಿದ್ಧಾಂತಗಳ ಎಲ್ಲ ಅಂಶಗಳನ್ನು ಗಾಳಿಗೆ ತೂರಿ ಜಳ್ಳನ್ನೇ ಸುಧಾರಣೆಯೆನ್ನುತ್ತಾರೆ. ಮಾಧ್ಯಮದ ಹೆಸರಲ್ಲಿ ಅತ್ತ ಕನ್ನಡವೂ ಇಲ್ಲದೆ ಇಂಗ್ಲೀಷೂ ಇಲ್ಲದೆ ನಮ್ಮ ಕನ್ನಡ ಶಾಲೆಗಳನ್ನು ಇನ್ನಷ್ಟು ಪ್ರಪಾತಕ್ಕೆ ತಳ್ಳುವುದೇ ಇಂದಿನ ಸುಧಾರಣೆಯಾಗಿದೆ. ಸರಕಾರ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವ ತಾಕತ್ತನ್ನು ತೋರಿಸಬೇಕು. ಉನ್ನತ ಹಂತಕ್ಕೆ ಬೇಕಾಗಿ ಮಗುವಿನ ಬೌದ್ಧಿಕ ವಿಕಾಸಕ್ಕೆ, ಮಾನವತೆಯ ಬೆಳವಣಿಗೆಗೆ ಹಾಗೂ ಸಾಮಾಜಿಕ, ಸಾಂಸ್ಕೃತಿಕ, ಕೌಟುಂಬಿಕ ನೆಲೆಗಟ್ಟಿಗೇಕೆ ಕೊಡಲಿ ಇಡಬೇಕು?

-ರಾಮಕೃಷ್ಣ ಭಟ್‌ ಚೊಕ್ಕಾಡಿ

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.