ಕೋವಿಡ್ ಕಲಿಸಿದ ಜೀವನ ಪಾಠವನ್ನು ಮರೆಯದಿರೋಣ


Team Udayavani, Dec 30, 2020, 6:15 AM IST

ಕೋವಿಡ್ ಕಲಿಸಿದ ಜೀವನ ಪಾಠವನ್ನು ಮರೆಯದಿರೋಣ

ಸಾಂದರ್ಭಿಕ ಚಿತ್ರ

ಇನ್ನೆರಡು ದಿನಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗಳಿಗೆ ಜಗತ್ತು ತೆರೆದು ಕೊಳ್ಳಲಿದೆ. 2020ರ ಸತತ ಆಘಾತಗಳಿಂದ ಚೇತರಿಸಿಕೊಳ್ಳುತ್ತಿರುವ ಜನರು 2021ರ ಕುರಿತು ಬಹಳಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. 2021 ಶುಭದಾಯಕವಾಗಿರಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. 2020ರ ಉದ್ದಕ್ಕೂ ವಿಶ್ವವನ್ನು ಕಂಗೆಡಿಸಿದ ಕೋವಿಡ್‌ ಮತ್ತು ಈ ಹಿನ್ನೆಲೆಯಲ್ಲಿ ಬಹುತೇಕ ದೇಶಗಳಲ್ಲಿ ಜಾರಿ ಗೊಳಿಸಲಾಗಿದ್ದ ಲಾಕ್‌ಡೌನ್‌ ಜನರನ್ನು ಮನೆಗ ಳಲ್ಲಿಯೇ ಕಟ್ಟಿಹಾಕಿದ್ದಂತೂ ನಿಜ. ಇವೆಲ್ಲವೂ ಕೇವಲ ದೈಹಿಕವಾಗಿ ಮಾತ್ರವಲ್ಲದೇ; ಮಾನಸಿಕ ವಾಗಿಯೂ ಜನರ ಮೇಲೆ ಪ್ರಭಾವ ಬೀರಿದೆ.

ಅನಿರೀಕ್ಷಿತವಾಗಿ ಬಂದೆರಗಿದ ಸಾಂಕ್ರಾಮಿಕ ಕಾಯಿಲೆಯಿಂದ ಜಗತ್ತಿನಾದ್ಯಂತ ಹಲವು ಏರುಪೇರುಗಳಾದವು. ಇದು ಸಹಜ ವಾಗಿ ನಮ್ಮ ಆತ್ಮವಿಶ್ವಾಸದ ಬೇರನ್ನು ಅಲುಗಾ ಡಿಸಿದೆ. ಈ ಎಲ್ಲ ನಕಾರಾತ್ಮಕ ಪರಿಣಾಮ ಗಳ ಹೊರತಾಗಿಯೂ ಕೋವಿಡ್‌ ಜನರಲ್ಲಿ ನೈರ್ಮಲ್ಯ, ಸುರಕ್ಷತೆಯ ಬಗೆಗೆ ಜಾಗೃತಿ ಮೂಡುವಂತೆ ಮಾಡಿದ್ದೇ ಅಲ್ಲದೆ ಜನರ ಯೋಚನಾಲಹರಿಯನ್ನೂ ಬದಲಾಯಿ ಸುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.

ತಮ್ಮಷ್ಟಕ್ಕೆ ದುಡಿದು ಸುಖವೋ ದುಃಖವೋ ತಮ್ಮ ಜೀವನವನ್ನು ಸಾಗಿಸುತ್ತಿದ್ದ ಅವೆಷ್ಟೋ ಕುಟುಂಬಗಳು ಈ ವರ್ಷ ತೀವ್ರ ಸಂಕಷ್ಟ ಎದುರಿಸಬೇಕಾಗಿ ಬಂತು. ಕೆಲವರಿಗೆ ಉದ್ಯೋಗ ನಷ್ಟವಾದರೆ, ಹಲವರಿಗೆ ಭವಿಷ್ಯದ ಬಗೆಗೆ ಚಿಂತಿಸುವಂತೆ ಮಾಡಿತು. ಇದು ಕೇವಲ ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರ ಮಾತ್ರವಲ್ಲದೆ ಒಟ್ಟಾರೆ ಇಡೀ ಜನಜೀವನದ ಮೇಲೆ ಪರಿಣಾಮವನ್ನು ಬೀರಿತು. ಸಮಾಜದ ಪ್ರತಿಯೊಂದೂ ವರ್ಗ ಪರ್ಯಾಯ ಸಾಧ್ಯತೆ ಗಳ ಬಗೆಗೆ ಚಿಂತಿಸುವಂತೆ ಮಾಡಿತು. ಸಾವಿ ರಾರು ಮಂದಿ ಸೊÌàದ್ಯೋಗದತ್ತ ಮುಖ ಮಾಡಿದರೆ ಹಲವು ಸ್ಟಾರ್ಟಪ್‌ಗ್ಳು ತೆರೆದು ಕೊಂಡವು. ನಗರಮುಖೀಗಳಾಗಿದ್ದ ಅದೆಷ್ಟೋ ಮಂದಿ ಹಳ್ಳಿಗಳತ್ತ ಮುಖ ಮಾಡಿ ಪಾಳು ಬಿದ್ದಿದ್ದ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಸ್ವತಂತ್ರವಾಗಿ ಮತ್ತು ಸ್ವಾವಲಂಬಿಯಾಗಿ ಹೇಗೆ ಬದುಕಬಹುದು ಎಂಬ ಬಗೆಗೆ ಹಲವರು ಈಗಲೂ ಚಿಂತಿಸುತ್ತಿದ್ದಾರೆ.

ಕೋವಿಡ್‌ ಭಯದಿಂದಾಗಿ ನಮ್ಮ ದೈನಂದಿನ ಜೀವನದಲ್ಲಿ ಹಲವು ಸಕಾರಾತ್ಮಕ ಬೆಳವಣಿಗೆ ಗಳಾಗಿವೆ. ಈ ವರ್ಷ ನಾವು ಕೆಲವೊಂದು ಮಾರ್ಗಸೂಚಿಗಳನ್ನು ಪಾಲಿಸಲೇಬೇಕಾದ ಅನಿವಾರ್ಯಕ್ಕೊಳಗಾದೆವು. ಇವು ನಮ್ಮ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾದರೆ ಇದರಿಂದ ನಮಗೆ ಸಾಕಷ್ಟು ಪ್ರಯೋಜ ನಗಳಿವೆ ಎಂಬುದನ್ನು ಕಲಿಸಿಕೊಟ್ಟಿದೆ. ಆದರೆ ಈ ಭೀತಿಯಿಂದ ನಿಧಾನವಾಗಿ ಹೊರಬರುತ್ತಿ ರುವಂತೆಯೇ ನಾವು ಮತ್ತದೇ ಹಳೆಯ ಚಾಳಿಗಳತ್ತ ಮುಖ ಮಾಡಲಾರಂಭಿಸಿದ್ದೇವೆ. ಇದೀಗ ವೈರಸ್‌ ಹೊಸ ಸ್ವರೂಪಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ನಮ್ಮನ್ನು ಎಚ್ಚರಿಸಿದೆ. ನೈರ್ಮಲ್ಯ, ಸುರಕ್ಷತೆ ನಮ್ಮೆಲ್ಲರ ದೈನಂದಿನ ಬದುಕಿನ ಆದ್ಯತೆಗಳಾಗಬೇಕಿದೆ.

ಕೌಟುಂಬಿಕವಾಗಿ ಯೋಚಿಸುವುದಾದರೆ ಸಂಬಂಧದ ಬೆಸುಗೆಯನ್ನು ಕೋವಿಡ್‌ ಸಾಂಕ್ರಾಮಿಕ ಬಲವಾಗಿಯೇ ಬಿಗಿದಿದೆ. ಆಧುನಿಕ ಜೀವನ ಮತ್ತು ಬದಲಾಗುತ್ತಿರುವ ಉದ್ಯೋಗ ಕ್ಷೇತ್ರಗಳಿಗೆ ಒಗ್ಗಿಕೊಳ್ಳಲು ಹಾತೊ ರೆಯುತ್ತಿದ್ದ ಮಂದಿ ತಮ್ಮ ಕುಟುಂಬದಿಂದ ದೂರವಾಗಿದ್ದರು. ಒಬ್ಬರಿಗೊಬ್ಬರು ಸಮಯ ಕೊಡಲಾಗದೆ ಮುನಿಸಿನಿಂದಲೇ ಇರುತ್ತಿದ್ದ ಅದೆಷ್ಟೋ ಕುಟುಂಬಗಳ ಸದಸ್ಯರು ಒಂದುಗೂಡಿದ್ದಾರೆ. ರಜೆ ಇದ್ದರೂ ಮನೆಯೊಳಗೆ ನಿಲ್ಲದ ಮಕ್ಕಳು ಮನೆ ಸೇರಿದ್ದಾರೆ. ಮಗ-ಸೊಸೆ, ಮಗಳು- ಅಳಿಯಂದಿರನ್ನು ಕಾಣಲು ಕಾತರರಾಗಿದ್ದ ಹಿರಿಯ ಜೀವಗಳು ಒಂದಷ್ಟು ತಿಂಗಳುಗಳ ಕಾಲವನ್ನು ತಮ್ಮ ಕುಟುಂಬದ ಸದಸ್ಯರೊಂದಿಗೆ ಕಳೆಯುವಂತಾಯಿತು. ಪ್ರವಾಸ ಅಥವಾ ಸಮಾರಂಭಗಳಲ್ಲಿ ಜತೆ ಸೇರುತ್ತಿದ್ದ ಒಂದೇ ಕುಟುಂಬದ ಸದಸ್ಯರು ಈಗ ಒಂದೇ ಸೂರಿನಡಿ ಠಿಕಾಣಿ ಹೂಡುವಂತಾಗಿದೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡುವಂತಾಗಿತ್ತು. ಈ ಮೂಲಕ ಇಂದಿನ ಪೀಳಿಗೆಯ ಜನರಿಗೆ ಕುಟುಂಬ ಜೀವನದ ಮಹತ್ವ ಅರಿವಿಗೆ ಬರುವಂತಾಯಿತು.

ಲಾಕ್‌ಡೌನ್‌ ಅವಧಿಯಲ್ಲಿ ಜನರ ವ್ಯವಹಾರಗಳು ಕಡಿಮೆಯಾದ ಕಾರಣ ಪ್ರಕೃತಿಯೂ ನಿಟ್ಟುಸಿರು ಬಿಟ್ಟು ಹಾಯಾಗಿತ್ತು. ವಾಹನಗಳು ರಸ್ತೆಗಿಳಿಯದೇ ಇದ್ದುದರಿಂದ ವಾಯುಮಾಲಿನ್ಯ ಅಚ್ಚರಿಯ ರೀತಿಯಲ್ಲಿ ಕಡಿಮೆಯಾಗಿತ್ತು. ಕಾರ್ಖಾನೆಗಳು ಬಂದ್‌ ಆಗಿದ್ದರಿಂದ ಶಬ್ದಮಾಲಿನ್ಯ ಕಡಿಮೆಯಾಗಿ ಹಕ್ಕಿಗಳ ಇಂಚರಕ್ಕೆ ಕಿವಿಯಾಗುವ ಸೌಭಾಗ್ಯವೂ ಪ್ರಾಪ್ತಿಯಾಗಿತ್ತು. ಸಣ್ಣದಾಗಿ ನೆಗಡಿ, ಜ್ವರ ಕಾಣಿಸಿಕೊಂಡಾಗಲೂ ವೈದ್ಯರ ಬಳಿ ಓಡುತ್ತಿದ್ದ ಮಂದಿ ಊರಲ್ಲಿಯೇ ಸಿಗುವ ಗಿಡಮೂಲಿಕೆಗಳ ಮೊರೆ ಹೋದರು. “ಹಿತ್ತಲ ಗಿಡ ಮದ್ದಲ್ಲ’ ಎಂದು ಮೂಗು ಮುರಿಯುತ್ತಿದ್ದವರಿಗೆ ಔಷಧ ಸಸ್ಯಗಳ ಮೌಲ್ಯವೇನು ಎಂಬುದು ತಿಳಿಯಿತು. ಅದೆಷ್ಟೋ ಮಂದಿ ಈಗ ಆರೋಗ್ಯ ವೃದ್ಧಿಗಾಗಿ ಪ್ರಾಣಾಯಾಮ, ಯೋಗ, ಧ್ಯಾನದಲ್ಲಿ ನಿರತರಾಗಿದ್ದಾರೆ.

ಇನ್ನು ನದಿ, ಸಾಗರಗಳಲ್ಲಿ ವಾಣಿಜ್ಯಿಕ ಚಟುವಟಿಕೆಗಳು ಕಡಿಮೆಯಾದ ಪರಿಣಾಮ ಜಲ ಮಾಲಿನ್ಯದ ಪ್ರಮಾಣ ಕಡಿಮೆಯಾದರೆ ವಿಮಾನಗಳ ಹಾರಾಟದ ಅಬ್ಬರವಿಲ್ಲದೆ ಆಗಸ ನಿರ್ಮಲವಾಗಿತ್ತು.

ಡಿಜಿಟಲ್‌ನತ್ತ ಮುಖ
ಜನರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಕೆಲವು ತಿಂಗಳುಗಳ ಹಿಂದೆ ದೇಶದಲ್ಲಿ ಯಾವುದು ಅಸಾಧ್ಯ ಎಂದು ಭಾವಿಸಲಾಗಿತ್ತೋ ಅದು ಕಾರ್ಯಸಾಧ್ಯವಾಗುತ್ತಿದೆ. ಸುಮಾರು ಎರಡು ದಶಕಗಳ ಹಿಂದೆಯೇ ವಾಣಿಜ್ಯ ವ್ಯವಹಾರ ಸಹಿತ ಆರ್ಥಿಕ ಚಟುವಟಿಕೆಗಳಿಗೆ ತಂತ್ರಜ್ಞಾನವನ್ನು ಬಳಕೆ ಮಾಡುವ ಬಗೆಗೆ ದೇಶದಲ್ಲಿ ಚರ್ಚೆಗಳು ಆರಂಭವಾಗಿದ್ದವಾದರೂ ಆರೇಳು ವರ್ಷಗಳ ಹಿಂದೆಯಷ್ಟೇ ಡಿಜಿಟಲ್‌ ವ್ಯವಹಾರಕ್ಕೆ ಒಂದಿಷ್ಟು ಆದ್ಯತೆ ಲಭಿಸಿತು. ಸರಕಾರದ ಸತತ ಪ್ರಯತ್ನಗಳ ಹೊರತಾಗಿಯೂ ಜನರು ಆನ್‌ಲೈನ್‌ ವ್ಯವಹಾರಕ್ಕೆ ಒಗ್ಗಿಕೊಂಡಿರಲಿಲ್ಲ. ಆದರೆ ಈಗ ಅನಿವಾರ್ಯವಾಗಿ ನಗದು ರಹಿತ ವ್ಯವಹಾರದತ್ತ ಹೆಚ್ಚಿನ ಆಸಕ್ತಿ ತೋರಲಾರಂಭಿಸಿದ್ದಾರೆ. ಸಣ್ಣಪುಟ್ಟ ಹಣಕಾಸು ವ್ಯವಹಾರಕ್ಕೆ ಬ್ಯಾಂಕ್‌, ಅಂಚೆ ಕಚೇರಿಗಳಿಗೆ ಅಲೆದಾಡುತ್ತಿದ್ದವರು ಈಗ ಮನೆಯಲ್ಲಿಯೇ ಕುಳಿತು ಮೊಬೈಲ್‌ ಮೂಲಕ ತಮ್ಮ ಬೇಕು-ಬೇಡಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದ ಜನರು ಈ ವಿಚಾರದಲ್ಲಿ ಒಂದಿಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವರಾದರೂ ಕಾಲಕ್ರಮೇಣ ಇದಕ್ಕೂ ಪರಿಹಾರ ಸಿಗುವ ನಿರೀಕ್ಷೆ ಇದೆ.

ಕೊರೊನಾದ ಬಳಿಕ ಜನರು ಸ್ವತ್ಛತೆಗೆ ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ. ಪದೇಪದೆ ಕೈ ತೊಳೆಯುತ್ತಿದ್ದಾರೆ. ಮನೆ ಹಾಗೂ ಸುತ್ತ ಮುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಕೊರೊನಾ ನಮ್ಮ ಜೀವನ ಶೈಲಿಯ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಲು ಸಹಾಯಕ ವಾದರೆ ಪ್ರಕೃತಿಯ ಮುಂದೆ ಮಾನವ ತೃಣ ಸಮಾನ ಎಂಬುದನ್ನೂ ಸಾಬೀತುಪಡಿಸಿದೆ. “2020 ನೆಗೆಟಿವ್‌ ಇಯರ್‌’, “ದುರಂತಗಳ ವರ್ಷ’ ಎಂದು ಕೊರಗುವ ಬದಲು ನಮಗೆ ಈ ವೈರಸ್‌ ಮೂಲಕ ಪ್ರಕೃತಿ ನೀಡಿದ ಎಚ್ಚರಿಕೆಗಳನ್ನು ನಾವು ಮೊದಲು ಅರ್ಥೈಸಿಕೊಳ್ಳೋಣ. ಕೊರೊನಾ ನಮಗೆ ಕಲಿಸಿದ ಜೀವನ ಪಾಠ ಅಮೂಲ್ಯವಾದುದಾಗಿದ್ದು ಅವನ್ನು ಮರೆಯ ದಿರೋಣ. ಕೊರೊನಾ ನೆಪದಲ್ಲಾದರೂ ನಾವು ಒಂದಿಷ್ಟು ಬದಲಾದರೆ ಅದು ನಮ್ಮ ಭವಿಷ್ಯಕ್ಕೆ ಪೂರಕವಾಗುವುದಂತೂ ಖಂಡಿತ.

ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.