ಮನವ ಶೋಧಿಸಬೇಕು ನಿತ್ಯ
Team Udayavani, Jan 2, 2023, 6:15 AM IST
ಒಮ್ಮೆ ಒಂದು ಕಾರ್ಯಕ್ರಮಕ್ಕೆ ಹೋಗುವ ಸಂದರ್ಭ. ಎಲ್ಲರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಕಾರು ಸ್ವಲ್ಪ ದೂರ ಕ್ರಮಿಸಿತ್ತು. ಕಾರಿನೊಳಗಿದ್ದ ಮಹಿಳೆಯೊಬ್ಬಳು ಕೂಗಿ ಕೊಂಡಳು. ನನ್ನ ಮನೆಯ ಬಾಗಿಲ ಬೀಗವನ್ನು ಹಾಕದೇ ಬಂದಿದ್ದೇನೆ. ಕಾರಿ ನಲ್ಲಿದ್ದವರು ಎಷ್ಟೇ ಸಮಾಧಾನ ಪಡಿಸಿದರೂ ಅವಳದ್ದು ಒಂದೇ ಹಟ. ನನ್ನನ್ನು ಬಿಟ್ಟುಬಿಡಿ. ಕಳ್ಳರು ನನ್ನ ಮನೆಯನ್ನು ನುಗ್ಗಬಹುದು. ಅಂತೂ ಇವಳ ಒತ್ತಾಯಕ್ಕೆ ಮಣಿದು ಕಾರು ಅವಳ ಮನೆಯತ್ತ ಮರಳಿತು. ನೋಡುವಾಗ ಬೀಗ ಭದ್ರವಾಗಿ ಹಾಕಲಾಗಿತ್ತು. ಸಮಯ ಹಾಳು ಮಾಡಿದ ಬಗ್ಗೆ ಕಾರಿನಲ್ಲಿದ್ದ ಉಳಿ ದವರು ಆಕೆಯನ್ನು ಸ್ವಲ್ಪ ತರಾಟೆಗೆ ತೆಗೆದುಕೊಂಡರು.
ಒಮ್ಮೆ ಒಬ್ಬರಿಗೆ ಮೊಬೈಲಿನಲ್ಲಿ ಒಂದು ಸಂದೇಶ ಬಂದಿತು. ಅದು ಅಂಚೆ ಇಲಾಖೆಯ ಸಂದೇಶ. ನಿಮ್ಮ ವಿಳಾಸಕ್ಕೆ ಒಂದು ರಿಜಿಸ್ಟರ್ಡ್ ಪತ್ರ ರವಾನಿಸಲಾಗಿದೆ. ಆದರೆ ಆ ವ್ಯಕ್ತಿಗೆ ಅದನ್ನು ನೋಡಿದ ತತ್‌ಕ್ಷಣ ಭಯ ಆರಂಭ ವಾಯಿತು. ಏನಿರಬಹುದು? ಏನಾದರೂ ಅಪಾಯ ಕಾದಿದೆಯೇ? ಹೀಗೆ ಕಲ್ಪನೆ ಏನೇನೋ ರೂಪ ಪಡೆಯಿತು. ಹಲವರಲ್ಲಿ ಈ ಭಯವನ್ನು ಹೊರಹಾಕಿಯೂ ಆಯಿತು. ಅವರದ್ದೆಲ್ಲ ಒಂದೇ ಉತ್ತರ. ಪತ್ರ ಬರಲಿ, ಆಮೇಲೆ ನೋಡೋಣ. ಆದರೂ ಆತನ ಭಯ ದೂರವಾಗಲಿಲ್ಲ. ಅಂತೂ ಅಂಚೆ ಕಚೇರಿಯತ್ತ ಎರಡು ದಿನ ಬಿಟ್ಟು ಹೋದನು. ಕೊನೆಗೆ ನೋಡುವಾಗ ಒಂದು ಜೀವವಿಮಾ ನಿಗಮದ ಬಾಂಡ್. ಆತನಿಗೇ ಆಶ್ಚರ್ಯ. ಇಷ್ಟು ಸಣ್ಣ ವಿಷಯಕ್ಕೆ ಇಷ್ಟೆಲ್ಲ ತಲೆ ಕೆಡಿಸಿಕೊಳ್ಳಬೇಕಿತ್ತೇ?
ಇಂಥ ಹತ್ತಾರು ಘಟನೆಗಳು ನಮ್ಮ ಗಮನಕ್ಕೆ ಬರುತ್ತಿರುತ್ತವೆ. ಇಂದು ಮನಃಶಾಸ್ತ್ರ ಎಂಬ ಪ್ರತ್ಯೇಕ ವಿಭಾಗವೇ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮನಃಶಾಸ್ತ್ರವು ಇಷ್ಟು ಸಮೃದ್ಧವಾಗಿ ಬೆಳೆದಿರದ ಹಿಂದಿನ ದಿನ ಗಳಲ್ಲೂ ಮನಸ್ಸಿನ ನಿಯಂತ್ರಣ ನಮ್ಮ ಹಿರಿಯರಿಗೆ ಸವಾಲಾಗಿತ್ತು. ಇದರ ಫಲವಾಗಿ ಯೋಗ, ಧ್ಯಾನ, ಪ್ರಾಣಾಯಾಮಗಳೊಂದಿಗೆ ಅನೇಕ ಅಧ್ಯಾತ್ಮ ವಿಚಾರಧಾರೆಗಳು ಬೆಳೆದು ಬಂದವು. ಬುದ್ಧನು ಮನಸ್ಸಿನ ಆಸೆಯೇ ದುಃಖಕ್ಕೆ ಮೂಲ ಎಂದನು. ಅಕ್ಕಮಹಾ ದೇವಿಯು ಮನ ಬಂದುದ ಬಯಸಿ ಬೇವುತ್ತಿ ರುವೆನಯ್ನಾ ಎಂದರೆ ಬಸವಣ್ಣ ಮನಸ್ಸನ್ನು ಮರ್ಕಟಕ್ಕೆ ಹೋಲಿಸಿದರು. ದಾಸರು ಮನವ ನಿಲಿಸುವುದ ಬಲು ಕಷ್ಟ ಎಂದರು.
ಚಂಚಲವಾದ ಮನಸ್ಸನ್ನು ಪಳಗಿಸಿ ಇಹದ ಬದುಕನ್ನು ಸಾರ್ಥಕ ಪಡಿಸಿ ಕೊಳ್ಳುವುದು ಅವರ ಹಂಬಲ ವಾಗಿತ್ತು. ಈ ಪ್ರಯತ್ನದ ಹಾದಿಯಲ್ಲಿ ಸಾಗುವಾಗ ಮನಸ್ಸಿನ ಅದ್ಭುತ ಶಕ್ತಿಯ ಅರಿವೂ ಅವರಿಗಾಯಿತು.
ಅನೇಕ ಅಧ್ಯಾತ್ಮ ಸಾಧಕರು, ತತ್ವಜ್ಞಾನಿಗಳು ಮನಸ್ಸಿನ ಹಿಂದೆ ಬಿದ್ದರು. ಅದರ ಉಪಶಮನಕ್ಕೆ ಹಲವಾರು ಮಾರ್ಗಗಳನ್ನು ಕಂಡುಹಿಡಿದರು. ಗೀತೆಯಲ್ಲಿ ಮನಸ್ಸಿನ ಈ ತೆರನಾದ ವರ್ತನೆ ಹಾಗೂ ಅದರ ಪರಿಣಾಮದ ಕುರಿತು ಧ್ಯಾಯತೋ ವಿಷಯಾನ್ ಪುಂಸಃ ಎಂಬ ಶ್ಲೋಕವೊಂದರಲ್ಲಿ ಸುಂದರ ವಿವರಣೆಗಳಿವೆ. ಮನಸ್ಸನ್ನು ಮುತ್ತಿಕೊಂಡ ವಿಷಯವು ಮತ್ತೆ ಮತ್ತೆ ಅದನ್ನೇ ಗುನುಗುವಂತೆ ಮಾಡುತ್ತಾ ನಮ್ಮ ಸುತ್ತ ಸುತ್ತಿ ಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಮನಸ್ಸನ್ನು ಈ ವಿಷಯಗಳಿಂದ ಬಿಡುಗಡೆಗೊಳಿಸಿ ಒಳ್ಳೆಯ ವಿಚಾರಗಳ ಕಡೆಗೆ ಹರಿಸಲು ಪ್ರಯತ್ನಿಸಬೇಕು. ಸಂಗೀತ, ಓದು ಮೊದಲಾದ ಉತ್ತಮ ಹವ್ಯಾಸಗಳಿಂದ ಸ್ವಲ್ಪ ಬಿಡುಗಡೆ ಸಿಗಬಹುದು. ಭಗವಾನ್ ಬುದ್ಧನ ಕುರಿತ ಪುಸ್ತಕವೊಂದರಲ್ಲಿ ಓದಿದ ನೆನಪು. ಯಾವುದೇ ಘಟನೆ ಅಥವಾ ವಿಚಾರ ವಿರಲಿ, ಅದನ್ನು ಇದ್ದ ಹಾಗೆಯೇ ನೋಡಬೇಕು. ಆದರೆ ಕೆಲವರ ಮನಸ್ಸು ಅದಕ್ಕೆ ಕಾಲು, ಬಾಲ ಸೇರಿಸಿ ಅಥವಾ ಉಪ್ಪು, ಖಾರ ಬೆರೆಸಿ ನೋಡಲು ಬಯಸುತ್ತದೆ. ಈ ಕಾರಣದಿಂದ ಸಹಜವಾದ, ಸರಳವಾದ ಸಮಸ್ಯೆಯು ಬೃಹದಾ ಕಾರವಾಗಿ ಗೋಚರಿಸುತ್ತದೆ. ಮನಸ್ಸು ಖಾಲಿಯಾ ದಷ್ಟೂ ಅದರ ಉಪಟಳ ಅಧಿಕ. ಮನಸ್ಸನ್ನು ಒಳ್ಳೆಯ ವಿಚಾರಗಳತ್ತ ಹರಿಸುವುದರಿಂದ ಅದು ಕ್ರಿಯಾಶೀಲ ವಾಗುತ್ತದೆ. ಮನಸ್ಸನ್ನು ವರ್ತಮಾನದ ಕ್ಷಣದಲ್ಲಿ ತೊಡಗಿಸುವುದು ನಿಯಂತ್ರಣದಲ್ಲಿ ಹಿರಿಯರು ಕಂಡುಕೊಂಡ ಇನ್ನೊಂದು ಉತ್ತಮ ಮಾರ್ಗ. ವರ್ತಮಾನಕ್ಕೆ ಸ್ಪಂದಿಸದೆ ಕಳೆದ ದಿನಗಳ ಕಹಿ ನೆನಪುಗಳನ್ನೆ ಮೆಲುಕು ಹಾಕುವುದರಿಂದ ವರ್ತ ಮಾನದ ಅಮೂಲ್ಯ ಕ್ಷಣಗಳಿಂದ ವಂಚಿತರಾಗುತ್ತೇವೆ. ಭವಿಷ್ಯದ ಕುರಿತೂ ನಮ್ಮ ಕಾಳಜಿ ಕಡಿಮೆಯಲ್ಲ. ಕೆಲವೊಮ್ಮೆ ಈ ಅತಿಯಾದ ಕಾಳಜಿ ಭವಿಷ್ಯದ ಬಗ್ಗೆ ಅನಗತ್ಯ ಭಯವನ್ನು ಸೃಷ್ಟಿಸುತ್ತದೆ. ನಕಾ ರಾತ್ಮಕವಾದ ಚಿಂತನೆಗೂ ದಾರಿಯಾಗುತ್ತದೆ. ಭವಿಷ್ಯದ ಬದುಕು ಕರಾಳ ಎಂಬ ಭ್ರಮೆ ಯನ್ನು ಮೂಡಿಸುತ್ತದೆ. ಈ ಸಂದರ್ಭದಲ್ಲಿ ಐನ್‌ಸ್ಟಿàನನ ಮಾತೊಂದು ನೆನಪಾಗುತ್ತದೆ. Learn from yesterday, live for today and hope for tomorrow.
ಹಿಂದಿನ ಘಟನೆಗಳಿಂದ ಪಾಠ ಕಲಿಯ ಬೇಕು. ವರ್ತಮಾನದಲ್ಲಿ ಬದುಕಬೇಕು. ಭವಿಷ್ಯದ ಕುರಿತು ಸದಾ ಆಶಾವಾದಿ ಯಾಗಿರಬೇಕು. ಆಶಾವಾದಿ ಯಾಗಿರಲು ನಮ್ಮ ಹಿರಿಯರು ಕಂಡುಕೊಂಡ ಇನ್ನೊಂದು ಮಾರ್ಗ ಭವಿಷ್ಯದ ಭಾರವನ್ನು ಭಗವಂತನ ಮೇಲೆ ಹಾಕುವುದು. ಭವಿಷ್ಯದಲ್ಲಿ ಒದಗ ಬಹುದಾದ ಸಮಸ್ಯೆಗಳ ಸ್ವರೂಪವನ್ನು ಅನ ಗತ್ಯವಾಗಿ ಈಗಲೇ ಕಲ್ಪಿಸಿಕೊಂಡು ಗಾಬರಿ ಯಾಗುವುದರ ಬದಲು ಮುಂದೆ ಬಂದಾಗ ಎದುರಿಸೋಣ ಎಂಬ ಆತ್ಮವಿಶ್ವಾಸದಿಂದ ಬದುಕುವುದು. ಇದರೊಂದಿಗೆ ಆ ಸಮಯಕ್ಕೆ ಭಗವಂತನು ಯಾವುದಾದರೂ ರೂಪದಲ್ಲಿ ಯಾರಿಂದಲಾದರೂ ಸಹಾಯ ಒದಗಿ ಸುತ್ತಾನೆಂಬ ಭರವಸೆ. ಸ್ವಾಮಿ ವಿವೇಕಾನಂದರ ಬದುಕಿನ ಕೆಲವು ಘಟನೆಗಳು ಈ ದೃಷ್ಟಿಯಲ್ಲಿ ನಮಗೆ ಸ್ಫೂರ್ತಿಯನ್ನು ನೀಡುವಂತಿವೆ.
ಸ್ವಾಮೀಜಿಯವರು ಹೃಷಿಕೇಶದಲ್ಲಿದ್ದ ದಿನಗಳು. ವಿಪರೀತವಾದ ಜ್ವರ ಅವರನ್ನು ಬಾಧಿಸಿತು. ಅದರೊಂದಿಗೆ ಗಂಟಲು ಬೇನೆ. ಇದು ಎಲ್ಲಿಯ ತನಕ ತಲುಪಿತು ಎಂದರೆ ಅವರ ನಾಡಿಬಡಿತವೇ ನಿಧಾನವಾಗ ತೊಡ ಗಿತು. ಸೋದರ ಸನ್ಯಾಸಿಗಳು ಕಂಗಾಲಾದರು. ಆಗ ಒಬ್ಬ ಸಾಧು ಅಲ್ಲಿಗೆ ಬಂದನು. ಆತನ ಬಳಿ ಒಂದು ಜೋಳಿಗೆ ಇದ್ದಿತ್ತು. ಸ್ವಾಮೀ ಜಿಯವರನ್ನು ಗಮನಿಸಿ ಜೋಳಿಗೆಯಿಂದ ಬೇರಿನ ಔಷಧವೊಂದನ್ನು ನೀಡಿದನು. ಅದರ ಸೇವನೆಯ ಅನಂತರ ಸ್ವಾಮೀಜಿ ಚೇತರಿ ಸಿಕೊಂಡರು.
ಇಂದು ಮಾನಸಿಕ ಆರೋಗ್ಯ ಒಂದು ಸವಾಲಾಗಿದೆ. ಪಠ್ಯದಲ್ಲಿ ಇದನ್ನು ಸೇರಿಸುವ ಕುರಿತೂ ಗಂಭೀರವಾದ ಚರ್ಚೆಗಳು ನಡೆ ಯುತ್ತಿವೆ. ಮನಃಶಾಸ್ತ್ರಜ್ಞರೂ ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಮನಸ್ಸನ್ನು ಆರೋಗ್ಯವಾಗಿರಿಸುವಲ್ಲಿ ಮನಃಶಾಸ್ತ್ರಜ್ಞರ ಸಲಹೆಯೊಂದಿಗೆ ನಮ್ಮ ಪ್ರಯತ್ನವೂ ಅಗತ್ಯ. ಡಿ.ವಿ.ಜಿ. ಅವರು ಹೇಳುವಂತೆ ಮನಸ್ಸು ಕದಡಿದಾಗಲೆಲ್ಲ ಹಾಗೋ ಹೀಗೋ ನಮ್ಮ ಕೈಲಾದಷ್ಟು ಪ್ರಯತ್ನಿಸಿ ಮನಸ್ಸನ್ನು ಶಾಂತಗೊಳಿಸಬೇಕು.
ಸ್ವಾಮಿ ವಿವೇಕಾನಂದರ
ಬದುಕೇ ನಮಗೆ ಸ್ಫೂರ್ತಿ
ಹಿಂದಿನ ಘಟನೆಗಳಿಂದ ಪಾಠ ಕಲಿಯ ಬೇಕು. ವರ್ತಮಾನದಲ್ಲಿ ಬದುಕಬೇಕು. ಭವಿಷ್ಯದ ಕುರಿತು ಸದಾ ಆಶಾವಾದಿ ಯಾಗಿರಬೇಕು. ಆಶಾವಾದಿ ಯಾಗಿರಲು ನಮ್ಮ ಹಿರಿಯರು ಕಂಡುಕೊಂಡ ಇನ್ನೊಂದು ಮಾರ್ಗ ಭವಿಷ್ಯದ ಭಾರವನ್ನು ಭಗವಂತನ ಮೇಲೆ ಹಾಕುವುದು. ಭವಿಷ್ಯದಲ್ಲಿ ಒದಗ ಬಹುದಾದ ಸಮಸ್ಯೆಗಳ ಸ್ವರೂಪವನ್ನು ಅನ ಗತ್ಯವಾಗಿ ಈಗಲೇ ಕಲ್ಪಿಸಿಕೊಂಡು ಗಾಬರಿ ಯಾಗುವುದರ ಬದಲು ಮುಂದೆ ಬಂದಾಗ ಎದುರಿಸೋಣ ಎಂಬ ಆತ್ಮವಿಶ್ವಾಸದಿಂದ ಬದುಕುವುದು. ಇದರೊಂದಿಗೆ ಆ ಸಮಯಕ್ಕೆ ಭಗವಂತನು ಯಾವುದಾದರೂ ರೂಪದಲ್ಲಿ ಯಾರಿಂದಲಾದರೂ ಸಹಾಯ ಒದಗಿ ಸುತ್ತಾನೆಂಬ ಭರವಸೆ. ಸ್ವಾಮಿ ವಿವೇಕಾನಂದರ ಬದುಕಿನ ಕೆಲವು ಘಟನೆಗಳು ಈ ದೃಷ್ಟಿಯಲ್ಲಿ ನಮಗೆ ಸ್ಫೂರ್ತಿಯನ್ನು ನೀಡುವಂತಿವೆ.
– ಡಾ| ಶ್ರೀಕಾಂತ್ ಸಿದ್ದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…
ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು
ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ
ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!
Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್