ಅಪಾಯದ ಅಂಚಿನಲ್ಲಿರುವಾಗ ವಿಲೀನವೇ?


Team Udayavani, Sep 20, 2018, 6:00 AM IST

20.jpg

ಬ್ಯಾಂಕ್‌ಗಳು ಸಾಲ ಕೊಡುವಾಗ ಹೊಣೆಗಾರಿಕೆ ಮತ್ತು ತತ್ವಗಳಿಗೆ ಬದ್ಧವಾಗಿರಬೇಕು. ಸಾಲಗಳ ಲಿಕ್ವಿಡಿಟಿ ಮತ್ತು ಸಾಲಕ್ಕೆ ಖಾತರಿಯಾಗಿ ಪಡೆದ ಆಸ್ತಿಗಳನ್ನು ಅಗತ್ಯವಿದ್ದಾಗ ಹಣವನ್ನಾಗಿ ಪರಿವರ್ತನೆ ಮಾಡುವಂತಿರಬೇಕು. ಸಾಲದ ಉದ್ದೇಶ ರಚನಾತ್ಮಕವಾಗಿರಬೇಕೆ ಹೊರತು ಎಂದೂ ವಿನಾಶದ ಅಂಚಿಗೆ ತಲುಪುವಂತಿರಬಾರದು. ಬ್ಯಾಂಕ್‌ ಸಾಲ ವಸೂಲಿ ನ್ಯಾಯ ಮಂಡಳಿಗಳಲ್ಲಿ ವಸೂಲಾತಿಗೆ ಸಂಪೂರ್ಣ ಪರಿಹಾರ ಸಿಗುವಂತಿರಬೇಕು. 

ಭಾರತೀಯ ಬ್ಯಾಂಕಿಂಗ್‌ ಉದ್ಯಮ ಅನುತ್ಪಾದಕ ಸಾಲವೆಂಬ ಆಳ, ಅಗಲ ಅರಿಯದ ಬೃಹತ್‌ ಸುಳಿಯಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿರುವ ಸಂಕಷ್ಟದ ಕಾಲದಲ್ಲೇ ಕೇಂದ್ರ ಸರಕಾರ ಇನ್ನೂ ಮೂರು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಗೆ ಮುಂದಡಿಯಿಡಲು ಪ್ರಯತ್ನಿಸುತ್ತಿರುವುದು ಸಮಂಜಸವೇ ಎನ್ನುವ ಪ್ರಶ್ನೆಯೊಂದು ಈಗ ಬೃಹತ್‌ದಾಕಾರ ತಾಳಿ ನಿಂತಿದೆ. ಇದು ಕೇಂದ್ರ ಸರಕಾರದ ಗಮನಾರ್ಹ ಪ್ರಯತ್ನವೇ ಹೊರತು ಆದೇಶವಲ್ಲ. ಈ ಪ್ರಸ್ತಾಪ ಮತ್ತು ಸೂಚನೆಗೆ ಬ್ಯಾಂಕಿನ ಆಡಳಿತ ಮಂಡಳಿ, ನಿಯಂತ್ರಣ ಮಂಡಳಿಗಳ ಅನುಮೋದನೆಯ ಜತೆಗೆ ಸಂಸತ್‌ನ ಸದನಗಳ ಅನುಮೋದನೆಯೊಂದಿಗೆ ದೃಢೀಕರಣಗೊಳ್ಳಬೇಕಾಗಿದೆ. “ಇದು ಬ್ಯಾಂಕ್‌ಗಳನ್ನು ಹಂತ ಹಂತವಾಗಿ ವಿಲೀನಗೊಳಿಸುವ ಕಾರ್ಯಕ್ರಮ’. 

ವಿಶ್ವಾದ್ಯಂತ ಹಣಕಾಸಿನ ಲೇವಾದೇವಿ ನಡೆಸುವ ಆರ್ಥಿಕ ಸಂಸ್ಥೆಗಳಾದ ಬ್ಯಾಂಕ್‌ಗಳು ಜನಜೀವನದ ಅತೀ ಮಹತ್ತರವಾದ ಅವಿಭಾಜ್ಯ ಅಂಗಗಳು. ಆರ್ಥಿಕ ಬೆಳವಣಿಗೆಗೆ ಮಾತ್ರವಲ್ಲದೆ ದೈನಂದಿನ ಆಗುಹೋಗುಗಳ ಜತೆಗೂ ಬ್ಯಾಂಕ್‌ಗಳಿಗೆ ನಿರ್ಣಾಯಕ ಪಾತ್ರವಿದೆ. ಬ್ಯಾಂಕಿಂಗ್‌ ಕ್ಷೇತ್ರದ ಅನುತ್ಪಾದಕ ಸಾಲಗಳು (NPA-Non Performing Assets)” ಮುಳ್ಳಿನ ಬೇಲಿಯ ಮೇಲಿನ ಅರಿವೆಗಳಂತಿವೆ’. ಈ ಕಾಲಘಟ್ಟದಲ್ಲಿ ವಿಲೀನದ (Amalgamation)ಬಗ್ಗೆ ಬರೆಯುವ ಮೊದಲು ಬ್ಯಾಂಕಿಂಗ್‌ ಕ್ಷೇತ್ರದ ಬಗ್ಗೆ ಸಿಂಹಾವಲೋಕನ ಮಾಡುವ ಅಗತ್ಯವಿದೆ. 

ಬ್ಯಾಂಕ್‌ ಉದ್ಯಮವನ್ನು ಸ್ಥಾಪಿಸುವಾಗ ಹಲವಾರು ಹಿರಿಯ ಚೇತನಗಳು ಪ್ರಾರಂಭದಲ್ಲಿಯೇ ತೆಗೆದುಕೊಂಡ ಅತ್ಯಂತ ಮಹತ್ವದ ನಿರ್ಧಾರಗಳೆಂದರೆ ಸಾಲದ ವಿಚಾರ ಬಂದಾಗ ಆರ್ಥಿಕ ಸ್ಥಿತಿಯ ತಖೆ¤ಯ (Balance Sheet) ಗಾತ್ರಕ್ಕಿಂತಲೂ ಪ್ರಮುಖವಾದ ಸರಳ ಮತ್ತು ಗಂಭೀರವಾದ ವಿಚಾರವೆಂದರೆ ಲಾಭ. ವ್ಯವಹಾರದಲ್ಲಿ ಆದಾಯದಿಂದ ಖರ್ಚನ್ನು ಕಳೆದಾಗ ಉಳಿಯುವುದೇ ಲಾಭ ಮತ್ತು ಈ ಹಿನ್ನೆಲೆಯಲ್ಲಿ ಪ್ರಬಲವಾದ ನಂಬಿಕೆಯ ವಿಚಾರವನ್ನು ಮಂಡಿಸಿದರು. ಅವರು ಆರ್ಥಿಕ ತಜ್ಞರಾಗಿರಲಿಲ್ಲ. ಆದರೂ ಅವರ ಮಾತು ಇಂದಿಗೂ ಪ್ರಸ್ತುತ. ಅಂದಿನ ಕಾಲಘಟ್ಟದಲ್ಲಿ ವೈಯಕ್ತಿಕ ಹಿನ್ನೆಲೆ, ಪ್ರಾಮಾಣಿಕತನ, ನಿಷ್ಠೆಯೇ ಸಾಲಕ್ಕೆ ಪ್ರಮುಖ ಆಧಾರ ಎಂಬಂತಿತ್ತು.  ಬ್ಯಾಂಕ್‌ಗಳ ಗಾತ್ರ ದೊಡ್ಡದಾಗಿ ಲಾಭವಿಲ್ಲದಿದ್ದರೆ ಹೇಗೆ? 2008ರ ಹೊತ್ತಿನಲ್ಲಿ ವಿದೇಶದ ಅತ್ಯಂತ ಬೃಹತ್‌ ಗಾತ್ರದ, ಸದೃಢವೆಂದು ಕರೆಸಿಕೊಂಡ ಬ್ಯಾಂಕ್‌ಗಳು ತರಗಲೆಯಂತೆ ಉದುರಿವೆಯಲ್ಲವೇ? ಇದೀಗ ವಿಲೀನ ಪ್ರಕ್ರಿಯೆ ಪ್ರಾರಂಭಿಸಲು ಹೊರಟಿರುವ ಬ್ಯಾಂಕ್‌ಗಳ ಆರ್ಥಿಕ ತಖೆ¤ಯನ್ನು ನೋಡುವ. ವಿಲೀನಗೊಳಿಸಲು ಹೊರಟಿರುವ ಈ ಮೂರು ಬ್ಯಾಂಕ್‌ಗಳ ಗಾತ್ರ ಸುಮಾರು 15 ಲಕ್ಷ ಕೋಟಿ ರೂ.ಪ್ರತಿಯೊಂದು ಬ್ಯಾಂಕಿನ ಗಾತ್ರ ಹಾಗೂ ನಿರ್ವಹಣೆ ಹೀಗಿದೆ : 

ಸಾಲಗಳು ಬ್ಯಾಂಕ್‌ ಆಫ್ ಬರೋಡ-ರೂಪಾಯಿ 4,48,327 ಕೋಟಿ, ವಿಜಯಾ ಬ್ಯಾಂಕ್‌ ರೂಪಾಯಿ 1,22,348 ಕೋಟಿ, ದೇನಾ ಬ್ಯಾಂಕ್‌ ರೂಪಾಯಿ 69,917-ಕೋಟಿ. ಜಾಗೂರಕ ನಾಗರಿಕನಲ್ಲಿ ಪ್ರಶ್ನಿಸಿದರೆ ಇಲ್ಲಿ ಸುಧಾರಣೆಯ ಅಗತ್ಯವಿತ್ತೇ ಹೊರತು ವಿಲೀನದ ಅಗತ್ಯ ಇಲ್ಲ ಎನ್ನುವ ಉತ್ತರ ದೊರೆಯುತ್ತದೆ. 

ಮೇಲಿನ ವಿಚಾರದೊಂದಿಗೆ ಸಾರ್ವಜನಿಕ ಬ್ಯಾಂಕ್‌ಗಳ ಆರ್ಥಿಕ ಸದೃಢತೆಯನ್ನು ಅವಲೋಕಿಸಿದರೆ ಸಾರ್ವಜನಿಕ ರಂಗದ ಬ್ಯಾಂಕ್‌ಗಳ ಒಟ್ಟು ನಿರ್ವಹಣೆ ಲಾಭ ರೂಪಾಯಿ 1,50,149 ಕೋಟಿ, ಅನುತ್ಪಾದಕ ಆಸ್ತಿಗಳಿಗಾಗಿ ಮೀಸಲು ರೂಪಾಯಿ 2,86,004 ಕೋಟಿ, ತನ್ಮೂಲಕ ಒಟ್ಟಾರೆ ನಿವ್ವಳ ನಷ್ಟ 85,370 ಕೋಟಿ ರೂಪಾಯಿ. ಇದಲ್ಲದೆ 22 ಖಾಸಗಿ ವಲಯದ ಬ್ಯಾಂಕ್‌ಗಳ ಎನ್‌ಪಿಎ ರೂ. 1,37,795 ಕೋಟಿ. ಕಣ್ಣು ಕುಕ್ಕುವ ಇನ್ನೊಂದು ವಿಚಾರವೇನೆಂದರೆ 2001ರಿಂದ 2018ರ ವರೆಗೆ ಬ್ಯಾಂಕ್‌ಗಳು ಮನ್ನಾ ಮಾಡಿದ (write off) ಸಾಲ ಸರಿಸುಮಾರು ರೂಪಾಯಿ 3,20,000 ಕೋಟಿಗೂ ಮಿಕ್ಕಿದೆ. 

ಇದರಲ್ಲಿ ಹೆಚ್ಚಿನ ಪಾಲು ಬ್ಯಾಂಕ್‌ಗಳ ನಿವರ್ಹಣಾ ಲಾಭದಿಂದಲೇ ಹೊಂದಾಣಿಕೆಯಾಗಿದೆ. ಅಂದರೆ ಇಲ್ಲಿ ಗಹನವಾದ ವಿಚಾರವೇನೆಂದರೆ ಇದರ ಬಿಸಿ ಮತ್ತು ಹೊರೆ ಪ್ರತಿಯೊಬ್ಬ ನಾಗರಿಕನ ಮೇಲೆ ಬೀಳುತ್ತದೆ. ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿಗೆ ಕಾರಣವಾದ ವಿಷಯಗಳನ್ನು ಕಂಡುಕೊಂಡು ಬ್ಯಾಂಕ್‌ಗಳನ್ನು ಸದೃಢಗೊಳಿಸಬೇಕಿತ್ತು. ಸದ್ಯ ಪರಿಸ್ಥಿತಿಯಲ್ಲಿ NPA ಎಂಬುದು ಬ್ಯಾಂಕಿಂಗ್‌ ವ್ಯವಸ್ಥೆಗೆ ಸವಾಲಾಗಿದೆ. ಬ್ಯಾಂಕ್‌ಗಳ ವರ್ಷದಿಂದ ವರ್ಷಕ್ಕೆ ನಿರ್ವಹಣೆಯಲ್ಲಿನ ಲಾಭ (Operative Profit) ಹೆಚ್ಚುತ್ತಲೇ ಇದೆ. ಕಳೆದ ಒಂದು ದಶಕದಿಂದ ಬ್ಯಾಂಕ್‌ ಸಿಬ್ಬಂದಿಗಳ ಮತ್ತು ಅಧಿಕಾರಿಗಳ ಪರಿಶ್ರಮದಿಂದ ಬಂದ ಲಾಭದ ಶೇ.70 ಅನುತ್ಪಾದಕ ಆಸ್ತಿಯ ಪ್ರೊವಿಷನ್‌ಗಾಗಿ ಹೋಗಿದೆ. ಪ್ರಭಾವಿ ಉದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳು ಶ್ರೀಮಂತರಾಗುತ್ತಲೇ ಇದ್ದಾರೆ, ಐಷರಾಮಿ ಜೀವನ ನಡೆಸುತ್ತಿದ್ದಾರೆ. ಅವರ ಬ್ಯಾಂಕ್‌ ಸಾಲ ಮಾತ್ರ ದುಃಸ್ಥಿತಿಯಲ್ಲಿದೆ. ಹೆಚ್ಚಿನವರು ವಿದೇಶದಲ್ಲಿದ್ದಾರೆ. 

ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳು 2016, 2017, 2018ರ ನಿರಂತರ ನೋವು ಮತ್ತು ರಕ್ತಸ್ರಾವದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇದಕ್ಕೆ ಕಾರಣರಾಗಿರುವ ಮಲ್ಯ, ನೀರವ್‌, ಚೋಕ್ಸಿಯಂತಹ ಹೈಪ್ರೊಫೈಲ್‌ ಸಾಲಗಾರರು ತಲೆಮರೆಸಿಕೊಂಡು ಪಲಾಯನ ಮಾಡಿ ವಿದೇಶಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಕಾರ್ಪೊರೇಟ್‌ ಸಾಲಗಾರರ ವಂಚನೆ ಮತ್ತು ಸುಸ್ತಿ ಕಣ್ಣೆದುರು ಇರುವಾಗಲೇ ವಿಲೀನ ಎಷ್ಟು ಸರಿ ಎಂಬ ಪ್ರಶ್ನೆಗೆ ಸರಕಾರ ಮೊದಲು ಉತ್ತರಿಸಬೇಕು. 

ಸುಸ್ತಿ ಸಾಲದಲ್ಲಿ ಶೇ.75 ಕಾರ್ಪೊರೇಟ್‌ ವಲಯಕ್ಕೆ ಸೇರಿದ್ದು. ವಿಲೀನದ ಬಳಿಕ ಬ್ಯಾಂಕ್‌ ಗಾತ್ರ ದೊಡ್ಡದಾದಾಗ ದೊಡ್ಡ ಕಾರ್ಪೊರೇಟರ್‌ ಸಂಸ್ಥೆಗಳಿಗೆ ಇನ್ನಷ್ಟು ಸಾಲ ನೀಡುವ ಸಾಮರ್ಥ್ಯ ಸಿಗಲಿದೆ ಎನ್ನುವುದು ನಿಜ. ಆದರೆ ಸಾಲ ಈ ರೀತಿ ಸುಸ್ತಿ ಆದರೆ? ಈ ಸುಸ್ತಿ ಸಾಲಗಾರರಿಗೆ ಸಿಕ್ಕಿ ಬೀಳುವ ತನಕ ರಾಜ ಮರ್ಯಾದೆ. 

ಇದರ ಭಾರ ಮಾತ್ರ ಬಡ ಬ್ಯಾಂಕಿನ ಗ್ರಾಹಕನ ಮೇಲೆ. NPA ನಷ್ಟವನ್ನು ಭರಿಸಲು ಬಡ್ಡಿದರ ಏರಿಕೆ, ಶುಲ್ಕ, ದಂಡ ವಸೂಲಿ ಕ್ರಮವನ್ನು ಎಷ್ಟು ಸಮಯ ಮುಂದುವರಿಸಲು ಸಾಧ್ಯ. ಉದ್ದೇಶಪೂರ್ವಕವಾಗಿ ಸಾಲ ಪಾವತಿಸದ ಕಾರ್ಪೊರೇಟ್‌ ಸಂಸ್ಥೆಗಳ ಕೃತ್ಯಗಳಿಗೆ ಪ್ರಾಮಾಣಿಕ ಗ್ರಾಹಕರು ಅಧಿಕಾರಿಗಳು, ಸಿಬ್ಬಂದಿಗಳು ಒಂದಲ್ಲ ಒಂದು ರೀತಿಯಲ್ಲಿ ಬಲಿಯಾಗುತ್ತಿದ್ದಾರೆ. “ಕೆಟ್ಟವರಿಗೆ ರಕ್ಷಣೆ ಕೊಟ್ಟರೆ ಒಳ್ಳೆಯವರಿಗೆ ಹಿಂಸೆ ಕೊಟ್ಟಂತೆ’. ಸದ್ಯದ ಪರಿಸ್ಥಿತಿಯಲ್ಲಿ NPAಗೆ ಬೇಲಿ ಹಾಕಿ ವಿಲೀನ ಪ್ರಕ್ರಿಯೆಗಳನ್ನು ನಿಲ್ಲಿಸಿದರೆ ಆರ್ಥಿಕ ವ್ಯವಸ್ಥೆಗೆ ಸಹಾಯಕಾರಿಯಾಗಬಹುದು.ಬ್ಯಾಂಕ್‌ಗಳ ಸಾಲ ವಸೂಲಾತಿ ನೀತಿ ಸದೃಢವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿಲೀನಕ್ಕಿಂತ ಬ್ಯಾಂಕ್‌ಗಳು ಅನುತ್ಪಾದಕ ಆಸ್ತಿಗಳ ವಸೂಲಿಗಾಗಿ ಹೋರಾಡಿ ಹಳಿಗೆ ತರಬೇಕು. 

ಬ್ಯಾಂಕ್‌ಗಳು ಸಾಲ ಕೊಡುವಾಗ ಹೊಣೆಗಾರಿಕೆ ಮತ್ತು ತತ್ವಗಳಿಗೆ ಬದ್ಧವಾಗಿರಬೇಕು. ಸಾಲಗಳ ಲಿಕ್ವಿಡಿಟಿ ಮತ್ತು ಸಾಲಕ್ಕೆ ಖಾತರಿಯಾಗಿ ಪಡೆದ ಆಸ್ತಿಗಳನ್ನು ಅಗತ್ಯವಿದ್ದಾಗ ಹಣವನ್ನಾಗಿ ಪರಿವರ್ತನೆ ಮಾಡುವಂತಿರಬೇಕು. ಸಾಲದ ಉದ್ದೇಶ ರಚನಾತ್ಮಕವಾಗಿರಬೇಕೆ ಹೊರತು ಎಂದೂ ವಿನಾಶದ ಅಂಚಿಗೆ ತಲುಪುವಂತಿರಬಾರದು. ಬ್ಯಾಂಕ್‌ ಸಾಲ ವಸೂಲಿ ನ್ಯಾಯ ಮಂಡಳಿಗಳಲ್ಲಿ (DRT) ವಸೂಲಾತಿಗೆ ಸಂಪೂರ್ಣ ಪರಿಹಾರ ಸಿಗುವಂತಿರಬೇಕು. ಮೇಲ್ಮನವಿ ನ್ಯಾಯ ಮಂಡಳಿಗಳು 6 ತಿಂಗಳೊಳಗೆ ವಸೂಲಿ ಪ್ರಕ್ರಿಯೆ ಮುಗಿಸಬೇಕು.

ಬ್ಯಾಂಕಿಂಗ್‌ ಕ್ಷೇತ್ರವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುವ ಪರಿಸ್ಥಿತಿ ಬಂದಿದೆ. ಜನಸಾಮಾನ್ಯರು ಕಷ್ಟಪಟ್ಟು ಉಳಿತಾಯ ಮಾಡಿದ ಹಣವನ್ನು ಬೇಕಾಬಿಟ್ಟಿ ಬಳಸಬಾರದು. ರಿಸರ್ವ್‌ ಬ್ಯಾಂಕಿನ ಆದೇಶ ಮತ್ತು ಅಪ್ಪಣೆಗಳನ್ನು ಪಾಲಿಸಬೇಕು. ಠೇವಣಿದಾರರು ಮತ್ತು ಸಾಲಗಾರರ ನಡುವಿನ ಮಧ್ಯವರ್ತಿಗಳು ಬ್ಯಾಂಕ್‌ ಸಿಬಂದಿಗಳು. ಇವರ ಪ್ರಾಮಾಣಿಕತೆ ಇನ್ನೂ ವೃದ್ಧಿಯಾಗಬೇಕು. 

ಬ್ಯಾಂಕ್‌ಗಳು ಗಣಕೀಕೃತವಾಗುವ ಮುಂಚೆ ಇದ್ದ ಕಮಿಷನ್‌, ಎಕ್ಸ್‌ಚೇಂಜ್‌, ಸಂಭವನೀಯ ಶುಲ್ಕಗಳು ಈಗ ಮಾಯವಾಗಿದೆ. 
1980ರಲ್ಲಿ ನ್ಯೂ ಬ್ಯಾಂಕ್‌, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ನೊಂದಿಗೆ ವಿಲೀನವಾದಾಗ ಮರಳಿ ಸಹಜ ಸ್ಥಿತಿಗೆ ಬರಲು ಬಹುಕಾಲ ಬೇಕಾಗಿತ್ತು. ಗ್ಲೋಬಲ್‌ ಟ್ರಸ್ಟ್‌ ಬ್ಯಾಂಕ್‌ ಓರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌ನೊಂದಿಗೆ ವಿಲೀನವಾದಾಗ ಚೇತರಿಕೆಗೆ 3ವರ್ಷ ಕಾಲಾವಧಿ ಬೇಕಾಗಿತ್ತು. 
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕ್‌ಗಳ ತವರೂರು. 1931ರಲ್ಲಿ ಸ್ಥಾಪನೆಯಾದ ವಿಜಯಾ ಬ್ಯಾಂಕ್‌ನ ಪರಿಸ್ಥಿತಿಯ ಬಗ್ಗೆ ಹೇಳುವುದಿದ್ದರೆ -1960ರ ದಶಕದಲ್ಲಿ ನೌಕರರು ಅಧಿಕಾರಿಗಳು ಬ್ಯಾಂಕಿನ ಉಳಿವಿಗಾಗಿ ಸಂಬಳವನ್ನೇ ತ್ಯಜಿಸಿದ್ದರು. ಅನಂತರ ಹಸಿವು , ಬಾಯಾರಿಕೆಯನ್ನು ಕೂಡಾ ಸಹಿಸಿಕೊಂಡು ಬ್ಯಾಂಕಿನ ಏಳಿಗಾಗಿ ದುಡಿದಿದ್ದರು. 1979ರಲ್ಲಿಯೇ ಎಲ್ಲಾ ರಾಜ್ಯಗಳಿಗೂ ಪಸರಿಸಿದ ಬ್ಯಾಂಕ್‌ಗಳಲ್ಲಿ ವಿಜಯಾ ಬ್ಯಾಂಕ್‌ ಒಂದಾಗಿದೆ. ಘನತೆ ಗೌರವಗಳಿಂದ ಗ್ರಾಹಕ ಸ್ನೇಹಿ ಬ್ಯಾಂಕ್‌ಗಳಲ್ಲಿ ಒಂದು ಎಂದೆನಿಸಿಕೊಂಡಿದೆ. 

ನೋಟ್‌ ಅಪಮೌಲ್ಯ ಮಾಡಿದಾಗ ನಿವೃತ್ತರು ಸ್ವಯಂ ಸೇವಕರಂತೆ ನೋಟ್‌ ಬದಲಾವಣೆಗೆ ಬ್ಯಾಂಕಿಗೆ ಸಹಕರಿಸಿದ್ದರು. ಬ್ಯಾಂಕ್‌ ವಿಲೀನವಾದಾಗ ಇವರಿಗೆಲ್ಲ ಮಾನಸಿಕ ನೋವು, ವ್ಯಥೆ ಆಗದೆ ಇರದು. ಭಾವನಾತ್ಮಕ ಸಂಬಂಧ ಎಲ್ಲೆಗೂ ಮೀರಿದ್ದಾಗಿದೆ ಎನ್ನುತ್ತಾರೆ. ಪರಿವರ್ತನೆ ಜಗದ ನಿಯಮ ಮತ್ತು ಅನಿವಾರ್ಯ. ಆದರೆ ಪರಿವರ್ತನೆ ರಚನಾತ್ಮಕವಾಗಿರಬೇಕು. 

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ 

ಟಾಪ್ ನ್ಯೂಸ್

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

8-uv-fusion

Smell of First Rain: ಹೊಸಮಳೆಯ ಮೃಣ್ಮಯ ಗಂಧ

7-uv-fsuion

Yugadi: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

6-uv-fusion

UV Fusion: ಯುಗಾದಿ ಸಂಭ್ರಮೋತ್ಸವ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.