ಭಾರತೀಯನ ಪವಿತ್ರ ಹಕ್ಕಿನ ದುರ್ಬಳಕೆ!


Team Udayavani, Apr 25, 2018, 10:44 AM IST

law.jpg

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎಂಬ ಭಾರತೀಯನ ಅತ್ಯಂತ ಪವಿತ್ರವಾದ ಹಕ್ಕಿನ ದುರ್ಬಳಕೆಯಾದರೆ ಪರವಾಗಿಲ್ಲ, ಅಮಿತ್‌ ಶಾ ಜೈಲು ಸೇರಿದರೆ ಸಾಕು. ಮಗ ಸತ್ತರೂ ಪರವಾಗಿಲ್ಲ, ಸೊಸೆ ವಿಧವೆಯಾದರೆ ಸಾಕು ಎಂಬಂತಹ ಮನಸ್ಥಿತಿ. ಜನಸಾಮನ್ಯರಿಗೆ ಇರುವ ಏಕೈಕ ಮಾರ್ಗದ ದುರ್ಬಳಕೆಯಾದರೂ ಪರವಾಗಿಲ್ಲ, ಪ್ರಧಾನಿ ಹೆಸರು ಕೆಟ್ಟರೆ ಸಾಕು. ಇವರು ಮಾನವ ಹಕ್ಕುಗಳ ಪ್ರತಿಪಾದಕರಂತೆ!

ಪ್ರಿಯಾ ವೃದ್ದನ್‌ ಎಂಬ ಯುವರಾಜ ತನ್ನ ರಥವನ್ನು ವೇಗವಾಗಿ ಚಲಿಸುತ್ತಾ ಬಂದಾಗ, ಅವನ ಚಕ್ರಕ್ಕೆ ಕರುವೊಂದು ಸಿಲುಕಿ ದಾರುಣವಾಗಿ ಮೃತಪಟ್ಟಿತು. ತಿರುವಾರೂರಿನ ಮನು ನೀತಿಚೋಳನು ತನ್ನ ಅರಮನೆಯ ಬಾಗಿಲಿಗೆ ಗಂಟೆಯೊಂದನ್ನು ಕಟ್ಟಿದ್ದನು. ಕೂಸನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಾ ಹಸುವು ಗಂಟೆ ಬಾರಿಸಿ ನ್ಯಾಯ ಪಡೆದುಕೊಂಡಿದ್ದು ಇತಿಹಾಸ. ಕರುವನ್ನು ಕೊಂದ ತನ್ನ ಮಗನ ಮೇಲೆ ರಥವನ್ನೇರಿಸಿ ನೀತಿ ಒದಗಿಸಿದ ಮನುನೀತಿಚೋಳನು, ಸರ್ವ ಕಾಲಕ್ಕೆ ಧರ್ಮದ ಪ್ರತೀಕವಾಗಿ ಅಮರನಾದ. ಧರ್ಮವನ್ನರಸಿ ಬಂದ ಜನಸಾಮಾನ್ಯರು ಗಂಟೆಯನ್ನು ಹೊಡೆದು ನ್ಯಾಯ ಕೇಳಬಹುದಾದ ವ್ಯವಸ್ಥೆ ಅದಾಗಿತ್ತು. ಪ್ರಾಯಶಃ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎಂಬುದರ ಪರಿಕಲ್ಪನೆಯ ಆದಿರೂಪ ಭಾರತದಲ್ಲಿ ಅದಾಗಿತ್ತೇನೊ! 

ಒಬ್ಬ ಕಾನೂನು ವಿದ್ಯಾರ್ಥಿನಿಯಾಗಿ¨ªಾಗ ನನಗೆ ಅತಿಹೆಚ್ಚಿನ ಆಸಕ್ತಿಯ ವಿಷಯ ಸಂವಿಧಾನ, ಅರ್ಥಾತ್‌ Constitutional Law ಆಗಿದ್ದು ಸ್ಪಷ್ಟವಾಗಿ ನೆನಪಿದೆ. ಅದರಲ್ಲೂ PIL ನನ್ನ ಪ್ರಿಯವಾದ ವಿಷಯವಾಗಿತ್ತು. 

70ರ ದಶಕದ ಎರಡನೆಯ ಭಾಗದಲ್ಲಿ ಭಾರತದ ಆತ್ಮದ ಮೇಲೆ ತುರ್ತು ಪರಿಸ್ಥಿತಿ ಎಂಬ ಪ್ರಹಾರ ಮಾಡಲಾಗಿತ್ತು. ಕಾರ್ಯಾಂಗವು ಶಾಸಕಾಂಗದ ಅಧೀನವಾಗಿಬಿಟ್ಟಿತ್ತು. ಶಾಸಕಾಂಗ, ಅಂದಿನ ಸರ್ವಾಧಿಕಾರಿ ಪ್ರಧಾನಿಯ ಹಿಡಿತಕ್ಕೆ ಸಿಲುಕಿತ್ತು¤. ಜನ ಸಾಮಾನ್ಯರು ಶಾಸಕಾಂಗ-ಕಾರ್ಯಾಂಗಗಳಲ್ಲಿ ಸಂಪೂರ್ಣ ನಂಬಿಕೆ ಕಳೆದುಕೊಂಡು ಹತಾಶರಾಗಿ ತತ್ತರಿಸಿಹೋಗಿ¨ªಾಗ, ನ್ಯಾಯಾಂಗದ ಮೊರೆಹೋಗಬಹುದಾದ ಅಪರೂಪದ ಮತ್ತು ವಿಶಿಷ್ಟವಾದ ಮಾರ್ಗವನ್ನು, 80ರ ಪ್ರಥಮ ಭಾಗದಲ್ಲಿ ತೆರೆಯ ಲಾಯಿತು. 1979ರಲ್ಲಿ, ಕಪಿಲಾ ಹಿಂಗೊರಾಣಿ ಎಂಬ ನ್ಯಾಯ ವಾದಿ ಬಿಹಾರದಲ್ಲಿನ ಕೈದಿಗಳ ಇತ್ಯರ್ಥವಾಗದ ಪ್ರಕರಣಗಳನ್ನು ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ, ಎಲ್ಲರ ಪರವಾಗಿ “”Habeas corpus”” ಪ್ರಕರಣವೊಂದನ್ನು ದಾಖಲಿಸುತ್ತಾರೆ. ಹೆಗ್ಗುರುತಿನ ಒಂದು ತೀರ್ಪಿನ ಮೂಲಕ, ಜಸ್ಟಿಸ್‌ ವಿ.ಎಸ್‌.ಕೃಷ್ಣಯ್ಯರ್‌ರವರು, ಬಿಹಾರ ಸರಕಾರಕ್ಕೆ ಸೂಚನೆಯೊಂದನ್ನು ರವಾನಿಸಿ, ದೇಶಾದ್ಯಂತ 40,000ಕ್ಕೂ ಹೆಚ್ಚು ವಿಚಾರಣಾ ಕೈದಿಗಳ ವಿಮೋಚನೆಗೆ ಅಣಿ ಮಾಡಿಕೊಟ್ಟರು. ಐದು ಅರ್ಜಿದಾರರಲ್ಲಿ ಒಬ್ಬಳಾಗಿದ್ದ ಹುಸೈನಾರಾ ಖಾತೂನ್‌ ಪ್ರಕರಣವೆಂದೇ ಖ್ಯಾತಿ ಯಾದ ಆ ಪ್ರಕರಣ, ಭಾರತದ ಕಾನೂನು ಇತಿಹಾಸದಲ್ಲಿ PIL (Public Interest Litigation) ಎಂಬ ಮಹತ್ವದ ಸೂತ್ರದ ನಾಂದಿಯಾಯಿತು. ಕಪಿಲಾ ಸಾರ್ವಜನಿಕ ಹಿತಾಸಕ್ತಿ ಮೊಕದ್ದ ಮೆಯ ಜನನಿಯಾದರೂ, PIL ಎಂಬ ಬಳಕೆ ಪ್ರಾರಂಭವಾಗಿದ್ದು, ಎಸ್‌.ಪಿ. ಗುಪ್ತಾ ವರ್ಸಸ್‌ ಯೂನಿಯನ್‌ ಆಫ್ ಇಂಡಿಯಾ ಪ್ರಕರಣದಿಂದ. ಕಾನೂನು ತಜ್ಞರ ಸಲಹೆ ಬೇಡ, ವಕೀಲರ ಡ್ರಾಫ್ಟಿಂಗ್‌ ಬೇಡ, ಕಾನೂನಿನ ಕಿಂಚಿತ್‌ ಅರಿವೂ ಬೇಡ…ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ರನ್ನುದ್ದೇಶಿಸಿ ಒಂದೇ ಒಂದು ಪತ್ರ ಬರೆದರೆ ಸಾಕು, ನಿಮಗೆ ನ್ಯಾಯ ಲಭ್ಯವಾಗುತ್ತದೆ ಎಂದು ನ್ಯಾಯಾಲಯದ ಬಾಗಿಲು ಗಳನ್ನು ಬಡಜನರಿಗೆ, ಸರ್ವೇಸಾಮಾನ್ಯರಿಗೆ ತೆರೆದಿಟ್ಟ ಮಹತ್ವದ ಮಾರ್ಗ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯದ್ದು. 

ಭಾರತದಲ್ಲಿ “Judicial Activism”ಅರ್ಥಾತ್‌ ನ್ಯಾಯಾಂಗ ಕ್ರಿಯಾವಾದ ಜನಿಸಿದ್ದೂ ಸರ್ವೋಚ್ಚ ನ್ಯಾಯಾಲಯದ ಅಂದಿನ ನ್ಯಾಯಾಧೀಶರಾದ ಜಸ್ಟಿಸ್‌ ವಿ. ಎನ್‌. ಕೃಷ್ಣಯ್ಯರ್‌ ಮತ್ತು ಮುಖ್ಯ ನ್ಯಾಯಮೂರ್ತಿಗಳಾದ ಜಸ್ಟಿಸ್‌ ಭಗವತಿಯವರ ಮುಂದಾಳತ್ವದಿಂದ.  

ಸಾರ್ವಜನಿಕ ನೆನಪುಗಳಿಂದ ಹಿಂದೆ ಸರಿದಿದ್ದ PIL ಜನನ ಮತ್ತು ಪ್ರಾಮುಖ್ಯತೆಯನ್ನು ಮತ್ತೂಮ್ಮೆ ಪ್ರಸ್ತಾಪಿಸುವ ಅನಿವಾ ರ್ಯತೆ ಇಂದು ನಿರ್ಮಾಣವಾಗಿದೆ. 12 ವರ್ಷದ ಕೆಳಗಿನ ಬಾಲಕಿ ಯರ ಮೇಲೆ ಅತ್ಯಾಚಾರ ನಡೆಸಿದ್ದು ಸಿದ್ಧವಾದರೆ, 2015ರ POCSO ಕಾಯ್ದೆಯಡಿ, ಗಲ್ಲು ಶಿಕ್ಷೆ ಎಂಬ ಕಟುವಾದ ಸುಗ್ರೀವಾಜ್ಞೆಯನ್ನು ಮೋದಿ ಸರ್ಕಾರ ಮೊನ್ನೆಯಷ್ಟೇ ಹೊರಡಿ ಸಿದೆ. “”ದುರ್ಬಳಕೆಗೆ ಅವಕಾಶವಿರುವುದಿಲ್ಲವೇ?” ಎಂದು ಅಲ್ಲಿಯೂ ಪ್ರಶ್ನಿಸುವವರಿ¨ªಾರೆ… ಅವರೆಲ್ಲರೂ ಸೋ ಕಾಲ್ಡ್‌ ಮಾನವತಾವಾದಿಗಳು. ಅವರು ನಮ್ಮನ್ನು ಮನುವಾದಿಗಳೆಂದು ಟೀಕಿಸುತ್ತಾರೆ. ಆದರೆ, ಧಮೌì ರಕ್ಷತಿ ರಕ್ಷಿತಃ (ಧರ್ಮವನ್ನು ರಕ್ಷಿಸುವವನನ್ನು ಧರ್ಮ ರಕ್ಷಿಸುತ್ತದೆ) ಎಂದು ನಂಬುವ ಮಾನವ ಧರ್ಮಶಾಸ್ತ್ರದಲ್ಲಿ ನಂಬಿಕೆ ಇರುವವರು ನಾವು. ಯಾವುದೇ ವಾದಗಳಿಗೆ ಕಟ್ಟುಬೀಳುವವರಲ್ಲ, ನೈಸರ್ಗಿಕ ನ್ಯಾಯದ ತತ್ವಗಳ ಆಧಾರದ ಮೇಲೆ ನಿಂತಿರುವ ಭಾರತದ ಸಂವಿಧಾನದಲ್ಲಿ ನಂಬಿಕೆಯಿರುವವರು.

ಅಂಥ ಶ್ರೇಷ್ಠವಾದ ಮತ್ತು ವಿಶ್ವದÇÉೇ ಅತ್ಯಂತ ಸುದೀರ್ಘ‌ವಾದ ಲಿಖೀತ ಸಂವಿಧಾನ, 39A ಕಟ್ಟಳೆಯಡಿ,  To protect and deliver prompt social justice with the help of the Law ಎಂದು ವಿಧಿಸುತ್ತದೆ. ಸಾಮಾಜಿಕ ನ್ಯಾಯವನ್ನು ಕಾಪಾಡುವುದು ಮತ್ತು ಕಾನೂನಾತ್ಮಕವಾಗಿ ನೆರವೇರಿಸುವ ಮಹತ್ವದ ಹೊಣೆ ಸಂವಿಧಾನ¨ªಾಗಿದೆ. ಆ ಜವಾಬ್ದಾರಿಯನ್ನು ಆಧಾರವಾಗಿಟ್ಟುಕೊಂಡು, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಬಡವರ-ಶೋಷಿತರ ಅಳಲಿನ ದನಿಯೆಂಬ ಪವಿತ್ರ ದರ್ಜೆಯನ್ನು ನೀಡಿ ಪೋಷಿಸಿದರು ಜಸ್ಟಿಸ್‌ ಭಗವತಿ ಮತ್ತು ಕೃಷ್ಣಯ್ಯರ್‌. ನಂತರದ ವರ್ಷಗಳಲ್ಲಿ ಸಹಸ್ರಾರು ಪ್ರಕರಣಗಳಲ್ಲಿ ರಾಷ್ಟ್ರದ ಎÇÉಾ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯವು ಅಧಿಕಾರ ವರ್ಗ, ಧನವಂತರ ಅಹಂಕಾರವನ್ನು ಬಗ್ಗುಬಡಿ ಯುವಂತಹ, ಬಡವರ ಬದುಕು ಬದಲಿಸುವಂತಹ ಮಹತ್ವದ ತೀರ್ಪುಗಳನ್ನು ನೀಡಿದವು. ಸಾಮಾನ್ಯ ಭಾರತೀಯನ ಕಣ್ಣೀರು ಒರೆಸಿ ಅವನ ಪ್ರಜಾತಾಂತ್ರಿಕ ಹಕ್ಕುಗಳನ್ನು ಬಲಪಡಿಸುವ ಕೆಲಸವಾಯಿತು ಅಂದು. 

ಆದರಿಂದು ವಿಪರ್ಯಾಸ ನೋಡಿ…ಇತ್ತೀಚೆಗೆ ಮೂವರು ಮಹಾನ್‌ ವಕೀಲರು, ಮಾನವ ಹಕ್ಕುಗಳ ಪ್ರತಿಪಾದಕರು, ದುಶ್ಯಂತ್‌ ದವೆ, ಪ್ರಶಾಂತ್‌ ಭೂಷಣ್‌ ಮತ್ತು ಇಂದಿರಾ ಜಯಸಿಂಗ್‌ ಹಂತ ಹಂತವಾಗಿ ವಾದಿಸಿದ ಜಸ್ಟಿಸ್‌ ಲೋಯಾ ಸಾರ್ವಜನಿಕ ಹಿತಾಸಕ್ತಿ ಪ್ರಕರಣ…ಭಾರತೀಯ ನಾಗರಿಕ ಸರ್ವಶ್ರೇಷ್ಠ ಹಕ್ಕಿನ ದುರ್ಬಳಕೆಯ ಪ್ರತೀಕವಾಯಿತು. ಕಾಂಗ್ರೆಸ್ಸಿನ ತಹ್ಸಿàನ್‌ ಪೂನಾವಾಲ, ಜಸ್ಟಿಸ್‌ ಲೋಯಾ ಅವರ ಸಹಜ ಸಾವಿಗೆ ಅಸಹಜತೆಯ ಲೇಪ ಹಚ್ಚಿ-ತಮ್ಮದೇ ಆದ ಕಾನ್ಸ್‌ಪಿರಸಿ ಥಿಯರಿ ಯನ್ನು ಹೆಣೆದು ಈ ಚೇಷ್ಟೆಯನ್ನು ಸರ್ವೋಚ್ಚ ನ್ಯಾಯಾಲದಲ್ಲಿ PILನ ಮೂಲಕ ಪ್ರಾರಂಭಿಸಿದ. 

ಡಿಸೆಂಬರ್‌ 1, 2014ರಂದು, ಸಂಬಂಧಿಕರ ಮದುವೆಯೊಂದಕ್ಕೆ ನಾಗಪುರಕ್ಕೆ ತೆರಳಿದ ಮುಂಬಯಿ ಉಚ್ಚ ನ್ಯಾಯಾ ಲಯದ ಜಸ್ಟಿಸ್‌ ಬಿ. ಎಚ್‌. ಲೋಯಾರ ದೇಹಾಂತವಾಯಿತು. ಅವರು ಗುಜರಾತಿನ ಸೊಹರಾಬುದ್ದೀನ್‌ ಎನೌRಂಟರ್‌ ಪ್ರಕರಣದ ವಿಚಾರಣೆಯ ಅಧ್ಯಕ್ಷತೆಯನ್ನು ವಹಿಸಿದ್ದಷ್ಟೆ ಎಲ್ಲದ್ದಕ್ಕೂ ಕಾರಣ. ಈಗಾಗಲೇ ಮಂಬಯಿ ಹೈಕೋರ್ಟ್‌ ಆದೇಶಿತ ನ್ಯಾಯಾಂಗ ತನಿಖೆಯ ಮೂಲಕ ಮುಖ್ಯ ನ್ಯಾಯಾಧೀಶರ ವಿಶೇಷ ಅನುಮತಿಯೊಂದಿಗೆ ನಡೆದ 4 ನ್ಯಾಯಾಂಗ ಅಧಿಕಾರಿಗಳ ವಿಚಾರಣೆಯನ್ನು ಕೂಡಾ ಸುಪ್ರೀಂ ಕೋರ್ಟ್‌ ಪರಿಶೀಲಿಸಿತು. 

“Revealed the real motive of these proceedings” by casting unfounded aspersions on judicial officers who had accompanied judge Loya, i.e., “to bring the judiciary into disrepute on the basis of scurrilous allegations”, ಎಂದು ಸರ್ವೋಚ್ಚ ನ್ಯಾಯಾಲಯ ಗಮನಿಸಿತು. ಅರ್ಥಾತ್‌, “ದಿ ಕ್ಯಾರವಾನ್‌’ ಎಂಬ ಪತ್ರಿಕೆಯು ಹೆಣೆದ ಕೃತಕ ಥಿಯರಿಯನ್ನಾಧರಿಸಿ ಒಟ್ಟೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಮತ್ತು ನ್ಯಾಯಾಂಗ ಅಧಿಕಾರಿಗಳ ಮೇಲಿನ ವಿಶ್ವಾಸದ ಬಗ್ಗೆ ಹಾಕಿದ ಪ್ರಶ್ನೆ ಚಿನ್ಹೆಯನ್ನು, ಸರ್ವೋಚ್ಚ ನ್ಯಾಯಾಲಯ ಅತ್ಯಂತ ತೀಕ್ಷ್ಣವಾಗಿ ಆಕ್ಷೇಪಿಸಿತು.”senior counsel chose with all seriousness to make those submissions without a sense of responsibility, and without verifying the basic facts reveals a disturbing state of affairs”,  ಎಂದು ಪ್ರಶಾಂತ್‌ ಭೂಷಣ್‌ರನ್ನು ಕೋರ್ಟ್‌ ಟೀಕಿಸಿತು. 

ಒಬ್ಬ ವ್ಯಕ್ತಿಯೇ ಎಲ್ಲದರ ಹಿಂದಿ¨ªಾನೆ ಎಂದು ನಿರೂಪಿಸುವ ರಾಜಕೀಯ ದುರಾಲೋಚನೆಯಿಂದ, ಈ PILನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇಂತಹ ಕ್ಷುದ್ರ PILಗಳು ಕೋರ್ಟಿನ ಮುಂದೆ ಬರುವುದರಿಂದ, ಪ್ರಾಮಾಣಿಕತೆಯಿಂದ ಕೂಡಿದ ಪ್ರಕರಣಗಳು ನ್ಯಾಯಾಲಯದ ಮುಂದೆ ಇತ್ಯರ್ಥವಾಗದೆ ಉಳಿದುಹೋಗುವುದು ಗುರುತರವಾದ ಕಳವಳವನ್ನುಂಟು ಮಾಡುತ್ತದೆ. ನ್ಯಾಯಾಂಗ ವ್ಯವಸ್ಥೆಗೆ ಏನೋ ಧಕ್ಕೆ ಬಂದಂತೆ, ನ್ಯಾಯಾಂಗದ ಸ್ವಾತಂತ್ರÂವನ್ನು ಪ್ರಶ್ನಿಸುವ ನೆಪವೊಡ್ಡಿ ನ್ಯಾಯ ಒದಗಿಸುವ ಕಾರ್ಯಕ್ಕೇ ಕುಂದು ತರುವಂತಹ ಕೆಲಸವಾಗಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. 

ಭಾರತದ ಇಂದಿನ ಎಡಪಂಥೀಯರಿಗೆ ಹೇಗಾದರೂ ಮಾಡಿ ಭಾರತೀಯ ಜನತಾ ಪಕ್ಷದ ಈಗಿನ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಗುಜರಾತಿನ ಗೃಹಮಂತ್ರಿಯಾಗಿ ದ್ದಾಗ  ನಡೆದ ಸೊಹ್ರಾಬುದ್ದೀನ್‌ ಎನೌRಂಟರ್‌ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯದಲ್ಲಿ ಅಧ್ಯಕ್ಷೀಯ ನ್ಯಾಯಾಂಗ ಅಧಿಕಾರಿಯಾಗಿದ್ದ ಲೋಯಾರ ಮರಣವು ಕೊಲೆ ಎಂದು ಪ್ರತಿಪಕ್ಷಕ್ಕೆ ನಿರೂಪಿಸಬೇಕಿತ್ತು. ಆ ಕಲ್ಮಶದಿಂದ ಕೂಡಿದ ರಾಜಕೀಯ ಉದ್ದೇಶಕ್ಕೆ ಕುಮ್ಮಕ್ಕು ಕೊಡುವುದಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ, ಎಸ್‌ಐಟಿ ತನಿಖೆಕೆ ಕೋರಿ ತೆಹ್ಸಿàನ್‌ ಪೂನಾವಾಲ ಮಾಡಿದ PIL ದಾವೆಗೆ, ಮೋದಿ ದ್ವೇಷಿಗಳೆÇÉಾ ಸೇರಿ ಪುಷ್ಟಿಕೊಟ್ಟರು. ಸುಪ್ರೀಂ ಕೋರ್ಟ್‌ ಸಮೇತವಾಗಿ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನಿಸುವ ದುರ್ಗತಿಗೆ ಕೆಲ ವಕೀಲರು ಬಂದು ನಿಂತರು. ವಕೀಲ ವೃತ್ತಿಗೆ ಕಳಂಕ ತರುವುದರ ಜತೆಗೆ, ನ್ಯಾಯಾಲಯವೇ ತನಗೆ ಗತಿ ಎಂದುಕೊಂಡಿದ್ದ, ಸಾರ್ವಜನಿಕ ಹಿತಾಸಕ್ತಿ ದಾವೆಯನ್ನೇ ದುರ್ಬಳಕೆ ಮಾಡಿಕೊಂಡ ಕರಾಳ ನಿದರ್ಶನ ಇದಾಯಿತು. ಏಪ್ರಿಲ… 20, 2018ರ ಸರ್ವೋಚ್ಚ ನ್ಯಾಯಾಲಯದ ಅದೇಶ, ದಾವೆಯನ್ನು ವಜಾಗೊಳಿಸುವುದರ ಜತೆಗೆ, ಲೋಯಾ ಮರಣ ನೈಸರ್ಗಿಕ ಎಂದೂ ರುಜುವಾತು ಮಾಡಿ, ಇಂತಹ PILಗಳು ನ್ಯಾಯಾಂಗದ ಮೇಲಿನ ನೇರವಾದ ಮತ್ತು ಮುಖಾಮುಖೀ ಪ್ರಹಾರವೆಂದು ಛೀಮಾರಿ ಹಾಕಿದೆ. 

ಕಾಶ್ಮೀರದ ಪಂಡಿತರ ಮಾನವ ಹಕ್ಕುಗಳ ಬಗ್ಗೆ ತಲೆಕೆಡಿಸಿಕೊಳ್ಳದ ಮೋದಿ ದ್ವೇಷಿಗಳು, ಸೈನಿಕರ ಕಷ್ಟವನ್ನು ತಳ್ಳಿಹಾಕಿ ಭಯೋತ್ಪಾದಕರ, ಕಲ್ಲು ತೂರಾಟಗಾರರ ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಗೌರಿಯ ಮರಣಕ್ಕೆ ನ್ಯಾಯ ಬೇಕು ಆದರೆ ಹಿಂದೂ ಕಾರ್ಯಕರ್ತರು ದಾರುಣವಾಗಿ ಹತ್ಯೆಯಾಗುವುದರ ಬಗ್ಗೆ ವಿಷಾದವಿಲ್ಲ. ಸಾರ್ವಜನಿಕ ಹಿತಾಸಕ್ಕಿ ಮೊಕದ್ದಮೆ ಎಂಬ ಭಾರತೀಯನ ಅತ್ಯಂತ ಪವಿತ್ರವಾದ ಹಕ್ಕಿನ ದುರ್ಬಳಕೆಯಾದರೆ ಪರವಾಗಿಲ್ಲ, ಅಮಿತ್‌ ಶಾ ಜೈಲು ಸೇರಿದರೆ ಸಾಕು. ಮಗ ಸತ್ತರೂ ಪರವಾಗಿಲ್ಲ, ಸೊಸೆ ವಿಧವೆಯಾದರೆ ಸಾಕು ಎಂಬಂತಹ ಮನಸ್ಥಿತಿ. ಜನಸಾಮನ್ಯರಿಗೆ ಇರುವ ಏಕೈಕ ಮಾರ್ಗದ ದುರ್ಬಳಕೆಯಾದರೂ ಪರವಾಗಿಲ್ಲ, ಪ್ರಧಾನಿ ಹೆಸರು ಕೆಟ್ಟರೆ ಸಾಕು. ಇವರು ಮಾನವ ಹಕ್ಕುಗಳ ಪ್ರತಿಪಾದಕರಂತೆ! 

ತಮ್ಮ ಹಠ ಸಾಧಿಸಲು ಮತ್ತು ಪ್ರಜಾತಾಂತ್ರಿಕವಾಗಿ ಚುನಾಯಿತ ರಾಗಿರುವ ಕೇಂದ್ರ ಸರ್ಕಾರವನ್ನು ಹಿಮ್ಮೆಟ್ಟಿಸಲು, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮಹಾಭಿಯೋಗಕ್ಕೂ ಹೇಸುವುದಿಲ್ಲ ಈ ಜನ. 

– ಮಾಳವಿಕಾ ಅವಿನಾಶ್‌

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.