ಮೀಸಲಾತಿ ಇನ್ನೆಷ್ಟು ಕಾಲ!


Team Udayavani, Feb 15, 2017, 2:20 PM IST

Reservation-Symbolic-Image.jpg

ಹಿಂದುಳಿದವರ ಅಭ್ಯುದಯಕ್ಕಾಗಿ ಇರುವ ಮೀಸಲಾತಿಯನ್ನು ಯಾರೂ ವಿರೋಧಿಸುವುದಿಲ್ಲ. ಆದರೆ ಅದರ ನಿರ್ವಹಣಾ ವಿಧಾನದ ಬಗ್ಗೆ ತೀವ್ರ ಆತಂಕವಿದೆ. ಜನಸಾಮಾನ್ಯರಲ್ಲಿ ಈಗಾಗಲೇ ಒಂದು ಅವ್ಯಕ್ತ ಭೇದ ಭಾವ ಮನೆ ಮಾಡಿದೆ. ಇದು ಇನ್ನೂ ಜಾಗೃತವಾಗಿ, ಘನೀಕರಿಸಿ ಸಮಾಜದ ಒಡಕಿಗೆ ಕಾರಣವಾಗಬಾರದು. ದೇಶದ ಹಿತದೃಷ್ಟಿಯಿಂದ ಈ ಎರಡು ವಾಹಿನಿಗಳಲ್ಲಿನ ಅಂತರ ಕಡಿಮೆ ಮಾಡುವ ಕೆಲಸ ಮೊದಲಾಗಬೇಕಾಗಿದೆ.

ಮಂಡಲ ಆಯೋಗದ ವರದಿ ಎಂದೇ ಪ್ರಖ್ಯಾತವಾದ ಪ್ರಕರಣದಲ್ಲಿ ಮೀಸಲಾತಿಯ ಇತಿಮಿತಿಯ ಕುರಿತಾಗಿ ಪ್ರಪ್ರಥಮ ಬಾರಿಗೆ ಒಂದು ವಿಸ್ತೃತವಾದ ಚರ್ಚೆ ನಡೆದಿದೆ. ಇಂದಿರಾ ಸ್ವಹಾನಿ ಮತ್ತು ಇತರರು ಮೀಸಲಾತಿ ವಿರುದ್ಧ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ನವ ಸದಸ್ಯ ಸಂವಿಧಾನ ಪೀಠ ಎಲ್ಲ ಆಯಾಮಗಳನ್ನು ಪರಿಶೀಲಿಸಿ ನವೆಂಬರ್‌ 1992ರಲ್ಲಿ ತೀರ್ಪು ನೀಡಿತ್ತು. ನ್ಯಾಯಾಲಯದ ಅಭಿಪ್ರಾಯದಂತೆ ಹಿಂದುಳಿದವರಿಗಾಗಿ ರೂಪಿಸಿದ ಸಾಂವಿಧಾನಿಕ ಯೋಜನೆ ಈ ಮೀಸಲಾತಿ. ಪೀಠವು ಹಿಂದುಳಿದವರು ಯಾರು ಹಾಗೂ ಅವರನ್ನು ಗುರುತಿಸುವ ವಿಧಾನವನ್ನು ಕೂಡ ವ್ಯಾಖ್ಯಾನಿಸಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದದಿರುವುದೇ ಹಿಂದುಳಿದಿರುವಿಕೆಯ ಲಕ್ಷಣ ಎಂದು ವಿವರಿಸಿದೆ.

ಅಂದರೆ ಮತೀಯ ಆಧಾರದಲ್ಲಿ ಮೀಸಲಾತಿ ವರ್ಗೀಕರಣವಾಗಿಲ್ಲವೆಂಬುದು ಸ್ಪಷ್ಟ. ಹಾಗೆ ನೇರ ಜಾತಿ ಆಧಾರಿತವಾಗಿಯೂ ಆದ ವರ್ಗೀಕರಣವಲ್ಲ. ಆದರೆ ಹಿಂದುಳಿದಿರುವಿಕೆಯನ್ನು ಗುರುತಿಸಲು ಜಾತಿ ಸಹಾಯ ಮಾಡಿದೆ. ತನ್ಮೂಲಕ ಇದು ಜಾತಿ ಆಧಾರಿತವೆಂದೇ ಹೇಳಬಹುದು. ಮೀಸಲಾತಿಯ ಮೂಲಕ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವುದು ಈ ಯೋಜನೆಯ ಉದ್ದೇಶ. ಆದರೆ ಇಲ್ಲಿ ಹಿಂದುಳಿದವರ ಅಭ್ಯುದಯಕ್ಕಾಗಿ ಅನುಷ್ಠಾನಕ್ಕೆ ತಂದ ಮೀಸಲಾತಿಯಿಂದಾಗಿ ಒಂದು ಪ್ರತ್ಯೇಕ ವಾಹಿನಿ ಸಮಾಜದಲ್ಲಿರುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯ, ಮೀಸಲಾತಿಯನ್ನು ದೀರ್ಘ‌ಕಾಲ ಮುಂದುವರಿಸುವುದರಿಂದ ಸಮಾಜದಲ್ಲಿ ಪ್ರತ್ಯೇಕ ವಾಹಿನಿಯೊಂದು ಸ್ಥಿರವಾಗುತ್ತದೆ, ಇದು ಪ್ರಜಾಸತ್ತೆಗೆ ವಿರೋಧವಾದುದು, ಹಾಗಾಗಿ ಮೀಸಲಾತಿಯನ್ನು ದೀರ್ಘ‌ಕಾಲ ಮುಂದುವರಿಸುವುದು ಸರಿಯಲ್ಲ ಎಂಬ ಎಚ್ಚರಿಕೆ ನುಡಿಯನ್ನೂ ನೀಡಿದೆ.

ದೀರ್ಘ‌ಕಾಲ ಮೀಸಲಾತಿ ಮುಂದುವರಿಯುವುದು ಪ್ರಜಾಸತ್ತೆಗೆ ವಿರೋಧವಾದ ನಡೆ ಎಂದು ಅಭಿಪ್ರಾಯಪಟ್ಟ ಘನ ನ್ಯಾಯಾಲಯ ಸರಕಾರಕ್ಕೆ ಯಾವ ನಿರ್ಬಂಧವನ್ನು ಹೇರಲಿಲ್ಲ. ‘ಸದ್ಯದ ಪರಿಸ್ಥಿತಿಯಲ್ಲಿ (1992ರ ಕಾಲಕ್ಕೆ) ಹಿಂದುಳಿದಿರುವಿಕೆ ಸಮಾಜದಲ್ಲಿ ಇರುವುದರಿಂದ ಮೀಸಲಾತಿಯ ಅಗತ್ಯವಿದೆ’ ಎಂದು ಮಾತ್ರ ಹೇಳಿದೆ. ಯೋಜನೆಯನ್ನು ಅದರ ಉದ್ದೇಶದಂತೆ ಆದಷ್ಟು ಬೇಗ ಪೂರ್ಣಗೊಳಿಸಿ ಸಮಾಜದಲ್ಲಿ ಎರಡೆರಡು ವಾಹಿನಿಗಳು ಸದಾ ಮುಂದುವರಿಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸರಕಾರಕ್ಕೆ ಸ್ಪಷ್ಟ ಪದಗಳಲ್ಲಿ ತಿಳಿಸಲಿಲ್ಲ. ಪರಿಣಾಮವಾಗಿ ಈಗಲೂ ಮೀಸಲಾತಿ ಹಳೆಯ ಮಾದರಿಯಲ್ಲಿ ಮುಂದುವರಿಯುತ್ತಿದೆಯಲ್ಲದೆ ಅದರ ಪ್ರಮಾಣ ಹೆಚ್ಚುತ್ತಿದೆ ಹಾಗೂ ಕ್ಷೇತ್ರ ವಿಸ್ತರಿಸುತ್ತಾ ಇದೆ.

ಅವಧಿ ಬದ್ಧವಲ್ಲದುದೇ ಸಮಸ್ಯೆ
ಮೀಸಲಾತಿ ಯೋಜನೆ ಅವಧಿ ಬದ್ಧವಾಗಿಲ್ಲ. ಅದು ಸಂವಿಧಾನದಂತೆ ಮೂಲಭೂತ ಹಕ್ಕು, ಆದರೆ ಅದನ್ನು ದೀರ್ಘ‌ಕಾಲ ಅದೇ ಸ್ಥಿತಿಯಲ್ಲಿ ಮುಂದುವರಿಸುವುದರ ಅಪಾಯವನ್ನು ಸರ್ವೋಚ್ಚ ನ್ಯಾಯಾಲಯ ಗಮನಿಸಲಿಲ್ಲವೆಂದಲ್ಲ. ಮುಖ್ಯವಾಗಿ ಮೀಸಲಾತಿಯ ಅಸಮರ್ಪಕ ಅನುಷ್ಠಾನ ದಕ್ಷತೆಯ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ ಎನ್ನುವುದನ್ನು ಸಂವಿಧಾನ ನಿರ್ಮಾತೃಗಳೇ ಮನಗಂಡಿದ್ದಾರೆ, ಹಾಗಾಗಿ ಸಾರ್ವಜನಿಕ ಸೇವೆಯಲ್ಲಿ ಸಂಗತವಾಗಿರಬೇಕಾದ ದಕ್ಷತೆಗೆ ಚ್ಯುತಿ ಆಗದ ಹಾಗೆ ಮೀಸಲಾತಿಯ ನಿರ್ವಹಣೆಯಾಗಬೇಕು ಎಂದು ಸಂವಿಧಾನದ ಆರ್ಟಿಕಲ್‌ 335ರಲ್ಲಿ ಸ್ಪಷ್ಟಪಡಿಸಲಾಗಿದೆ. 

ಮಂಡಲ ಆಯೋಗದ ಪ್ರಕರಣದಲ್ಲಿ ನ್ಯಾಯಾಲಯ ಇದನ್ನು ಪುನರುಚ್ಚರಿಸಿದೆ. ಮುಂದುವರಿದು, ನ್ಯಾಯಾಲಯ ಮೀಸಲಾತಿಯ ಪ್ರಮಾಣ ಹಾಗೂ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಕೆನೆ ಪದರವನ್ನು ಅಳವಡಿಸಲು ನಿರ್ದೇಶಿಸಿದೆ. ಈ ಕೆನೆಪದರ ಯೋಜನೆಯಲ್ಲಿ ಮೀಸಲಾತಿ ವರ್ಗಗಳ ಆರ್ಥಿಕ ಸಬಲತೆ ಹಾಗೂ ಶೈಕ್ಷಣಿಕ ಮಟ್ಟ ಮತ್ತು ಸರಕಾರಿ ಸೇವೆಯಲ್ಲಿ ಈಗಾಗಲೇ ಹೊಂದಿರುವ ಸ್ಥಾನಗಳನ್ನು ಆಧರಿಸಿ ಮೀಸಲಾತಿ ಸೌಲಭ್ಯ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಮಂಡಲ ಆಯೋಗದ ಪ್ರಕರಣದ ತೀರ್ಪು ಬಂದಾಗ ಆಗಿನ ಪ್ರಧಾನಿ ನರಸಿಂಹ ರಾವ್‌ ಕೆನೆಪದರಿನ ಇತಿಮಿತಿ ನಿರ್ಧರಿಸಲು ಒಂದು ಸಮಿತಿ ನೇಮಿಸಿದರು. ಹಾಗೆ ನಿಯುಕ್ತವಾದ ಸಮಿತಿ ಕೂಲಂಕಷವಾಗಿ ಚರ್ಚಿಸಿ ಕೆಲವು ಮಾನದಂಡಗಳನ್ನು ನಿಗದಿ ಮಾಡಿದೆ. ಅದರಂತೆ ಎರಡು ಲಕ್ಷ ರೂ. ವಾರ್ಷಿಕ ಆದಾಯವಿರುವ ಮೀಸಲಾತಿ ವರ್ಗಕ್ಕೆ ಸೇರಿದ ಕುಟುಂಬಗಳು ಹಾಗೂ ಮಾತಾಪಿತಲ್ಲಿ ಯಾರಾದರೂ ಸರಕಾರಿ ಸೇವೆಯಲ್ಲಿ ಪತ್ರಾಂಕಿತ ಹುದ್ದೆ ಹೊಂದಿದ ಕುಟುಂಬಗಳ ಮಕ್ಕಳಿಗೆ ಮೀಸಲಾತಿ ಅವಕಾಶ ನಿರಾಕರಿಸಲಾಗಿತ್ತು. ಈ ಮಿತಿ ಪುನರ್‌ ಪರಿಶೀಲಿಸುವ ಅವಕಾಶವನ್ನೂ ಕಲ್ಪಿಸಲಾಗಿತ್ತು. ಆದರೆ ಸರಕಾರಗಳು ಇದನ್ನು ಸಮರ್ಪಕವಾಗಿ ಅನುಷ್ಠಾನಿಸುವ ಗೋಜಿಗೇ ಹೋಗಲಿಲ್ಲ. ಆರ್ಥಿಕವಾಗಿ ಸಬಲರಾಗಿರುವ ಮೀಸಲಾತಿ ವರ್ಗಕ್ಕೆ ನಿರಾತಂಕವಾಗಿ ಈ ಸೌಲಭ್ಯ ದೊರಕುತ್ತಿರುವ ಉದಾಹರಣೆಗಳಿವೆ. ಹಾಗಾಗಿ ಕೆನೆಪದರ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎನ್ನುವುದು ಸ್ಪಷ್ಟ.

ಮೀಸಲಾತಿ ನಿರ್ವಹಣೆ ಬಗ್ಗೆ ಆತಂಕ
ಮೀಸಲಾತಿಯನ್ನು ಯಾರೂ ವಿರೋಧಿಸುವುದಿಲ್ಲ. ಆದರೆ ಅದರ ನಿರ್ವಹಣಾ ವಿಧಾನದ ಬಗ್ಗೆ ತೀವ್ರ ಆತಂಕವಿದೆ. ಮೀಸಲಾತಿಯನ್ನು ಆ ವರ್ಗದ ಜನರ ಸಂಖ್ಯೆಗನುಗುಣವಾಗಿ ಪ್ರಮಾಣವನ್ನು ನಿಗದಿಪಡಿಸಿ ಅನುಷ್ಠಾನಿಸಲು ಆರಂಭಿಸಲಾಯಿತು. ಆದರೆ ಈ ಸೌಲಭ್ಯ ಎಲ್ಲ ಕುಟುಂಬಗಳಿಗೂ ವ್ಯಾಪಕವಾಗಿ ಸಿಗುವ ಹಾಗೆ ಯಾವ ಕ್ರಮವನ್ನು ಅನುಸರಿಸಲಿಲ್ಲ. ಅಲ್ಲಿ ಅರ್ಹತೆಯ ಪ್ರಶ್ನೆ ಇರಬಹುದು. ಆದಾಗ್ಯೂ ಅವರವರ ಅರ್ಹತೆಗನುಗುಣವಾಗಿ ಬೇರೆ ಬೇರೆ ರೂಪದ ಮೀಸಲಾತಿ ಸೌಲಭ್ಯ ಪ್ರತಿ ಕುಟುಂಬಗಳಿಗೂ ಸಿಗುವಂಥ ಯಾವ ಕ್ರಮವನ್ನೂ ಸರಕಾರ ರೂಪಿಸಲಿಲ್ಲ. ಹಾಗಾಗಿ ಈ ಸೌಲಭ್ಯ ವ್ಯಾಪಕವಾಗಿ ಆ ವರ್ಗಕ್ಕೆ ಸಿಗದೆ ಕೆಲವರಿಗೆ ಪದೇ ಪದೇ ಸಿಗುವಂತಾಗಿದೆ. ಇದರಿಂದಾಗಿ ಮೀಸಲಾತಿ ವರ್ಗದಲ್ಲಿಯೇ ತೀರಾ ತಾರತಮ್ಯ ಉಂಟಾಗಿದೆ. ಈಗ ರಾಜಕಾರಣಿಗಳು ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವ ಹಾಗೂ ಕ್ಷೇತ್ರವನ್ನು ವಿಸ್ತರಿಸುವ ಬಗ್ಗೆ ಚಿಂತಿಸುವ ಮೂಲಕ ನಿರ್ವಹಣಾ ದೋಷಕ್ಕೆ ಪರಿಹಾರ ಹುಡುಕುತ್ತಿದ್ದಾರೆ.

ಎಲ್ಲ ರಾಜಕೀಯ ಪಕ್ಷಗಳೂ ಮೀಸಲಾತಿಯನ್ನು ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿಯೇ ಉಳಿಸಿ ಬೆಳೆಸಿಕೊಂಡು ಬಂದಿವೆ. ಮೀಸಲಾತಿ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿ ಇರುವುದಾಗಿದ್ದರೆ ಅದರ ಪರಿಣಾಮವನ್ನು ಅಳೆಯುವ ಸಾಹಸ ಮಾಡಬಹುದಿತ್ತು. ಆದರೆ ಸರಕಾರಗಳು ಯೋಜನೆಯನ್ನು ಯಥಾವತ್‌ ಮುಂದುವರಿಸುವಲ್ಲಿ ಮಾತ್ರ ಆಸಕ್ತಿ ತೋರಿಸುತ್ತಾ ಬಂದಿವೆ. ಈಗ ಮೀಸಲಾತಿ ಎಂಬ ಬೆಣ್ಣೆಯನ್ನು ಕೆಲವೇ ಪ್ರಭಾವಿ ವರ್ಗಗಳು ಮಾತ್ರ ಮೆಲ್ಲುತ್ತಿವೆ ಎಂಬುದು ಸರಕಾರದ ಅರಿವಿಗೆ ಬಂದಿದೆ. ಹಾಗಾಗಿ ಕರ್ನಾಟಕ ಸರಕಾರ ಒಳ ಮೀಸಲಾತಿಯ ಜಾಗಟೆ ಬಾರಿಸುತ್ತಿದೆ. ಇದು ಸಮಸ್ಯೆಗೆ ಪರಿಹಾರವಾದೀತೇ ಎಂಬುದು ಯಕ್ಷ ಪ್ರಶ್ನೆ. ಮಂಡಲ ಆಯೋಗದ ಪ್ರಕರಣದಲ್ಲಿ ಹಾಗೂ ಇತರ ಸಂದರ್ಭಗಳಲ್ಲಿ ಮೀಸಲಾತಿಯ ಸಮರ್ಪಕ ನಿರ್ವಹಣೆ ಬಗ್ಗೆ ಸರ್ವೋಚ್ಚ ನ್ಯಾಯಾಲಯ ನೀಡಿದ ಹಿತವಚನಗಳನ್ನು ಯಾವುದೇ ಸರಕಾರ ಪಾಲಿಸಲಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬೇಕಾಗಿದೆ.

ಸಮಾಜದ ಒಡಕಿಗೆ ಕಾರಣವಾಗದಿರಲಿ
ಮೀಸಲಾತಿಯ ಪ್ರಮಾಣ ಶೇ.50ಕ್ಕಿಂತ ಅಧಿಕವಾಗಬಾರದು ಎಂದು ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಕೆಲವು ರಾಜ್ಯಗಳು ಕಡೆಗಣಿಸಿವೆ. ಆಳುವ ಸರಕಾರಗಳಿಗೆ ಮೀಸಲಾತಿ ಹೆಚ್ಚಿಸುವ ಆಸಕ್ತಿಯ ಹೊರತು ದಕ್ಷತೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಸುದೀರ್ಘ‌ ಕಾಲದಿಂದ ಇರುವ ಮೀಸಲಾತಿಯಿಂದ ಆಗಿರುವ ಪರಿಣಾಮ ಏನೆಂಬುದರ ಅಧ್ಯಯನ ಮಾಡುವ ಆಸಕ್ತಿ ತೋರಿಸುವುದಿಲ್ಲ. ಬದಲು ಮೀಸಲಾತಿ ವಿಸ್ತರಿಸುವ ಉದ್ದೇಶವನ್ನೇ ತೋರಿಸುತ್ತವೆ. ಏಳು ದಶಕಗಳ ದೀರ್ಘಾವಧಿಯ ಅನಂತರವೂ ಸರಕಾರ ಹಿಂದುಳಿದವರು ಇನ್ನೂ ಇದ್ದಾರೆ ಎಂದು ಸರಕಾರ ಪ್ರತಿಪಾದಿಸುವುದಾದರೆ ಅದು ಆಡಳಿತದ ಅದಕ್ಷತೆಯನ್ನು ತೋರಿಸುತ್ತದಲ್ಲವೇ!

ಈಗ ನಮ್ಮ ಸಮಾಜದಲ್ಲಿ ಕಳೆದ ಏಳು ದಶಕಗಳಿಂದ ಎರಡು ವಾಹಿನಿಗಳು ಚಾಲ್ತಿಯಲ್ಲಿವೆ. ಜನಸಾಮಾನ್ಯರಲ್ಲಿ ಈಗಾಗಲೇ ಒಂದು ಅವ್ಯಕ್ತ ಭೇದ ಭಾವ ಮನೆ ಮಾಡಿದೆ. ಈ ಭಾವನೆ ಇನ್ನೂ ಜಾಗೃತವಾಗಿ, ಘನೀಕರಿಸಿ ಸಮಾಜದ ಒಡಕಿಗೆ ಕಾರಣವಾಗಬಾರದು. ಈ ಎರಡು ವಾಹಿನಿಗಳಲ್ಲಿನ ಅಂತರ ಕಡಿಮೆ ಮಾಡುವ ಕೆಲಸ ಮೊದಲಾಗಬೇಕಾಗಿದೆ. ಪ್ರಗತಿಪರ ಎಂದು ಹೇಳಿಕೊಳ್ಳುವ ಸರಕಾರ ಇನ್ನಾದರೂ ದಕ್ಷತೆಗೆ ಒತ್ತು ನೀಡುವ ಸಂಕಲ್ಪ ಮಾಡಬೇಕು. ಈ ಬಗ್ಗೆ ಒಂದು ಪರಿಣಾಮಕಾರಿ ಕ್ರಮವೆಂದರೆ ಕೆನೆಪದರವನ್ನು ಕೇಂದ್ರ ಹಾಗೂ ರಾಜ್ಯಗಳು ಕಟ್ಟುನಿಟ್ಟಾಗಿ ಅಳವಡಿಸುವುದು. ಇದರಿಂದ ಎರಡು ವಾಹಿನಿಗಳ ನಡುವಿನ ಅಂತರ ಕಡಿಮೆಯಾಗುತ್ತದೆ. ಅಲ್ಲದೆ ಮೀಸಲಾತಿಯ ಪ್ರಮಾಣವನ್ನು ಹಂತ ಹಂತವಾಗಿ ಕಡಿಮೆ ಮಾಡಬಹುದಾಗಿದೆ. ಪೂರಕವಾಗಿ ಮುಂದುವರಿದ ಮೀಸಲಾತಿ ವರ್ಗಕ್ಕೆ ಸೇರಿದ ವ್ಯಕ್ತಿಗಳು ಸ್ವಯಂಪ್ರೇರಣೆಯಿಂದ ಮೀಸಲಾತಿ ತ್ಯಜಿಸಿ ಮುಖ್ಯ ವಾಹಿನಿಯವರೊಡನೆ ಬೆರೆಯುವ ಸಂಕಲ್ಪ ಮಾಡುವುದು ದೇಶದ ಹಿತದೃಷ್ಟಿಯಲ್ಲಿ ಉತ್ತಮ.

– ಬೇಳೂರು ರಾಘವ ಶೆಟ್ಟಿ

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.