ಕೃಷಿ ಕ್ಷೇತ್ರಕ್ಕೆ ಶೈಕ್ಷಣಿಕ, ಸಾಂಸ್ಕೃತಿಕ ಸ್ಪರ್ಶ ಅಗತ್ಯ


Team Udayavani, Dec 27, 2020, 6:20 AM IST

ಕೃಷಿ ಕ್ಷೇತ್ರಕ್ಕೆ ಶೈಕ್ಷಣಿಕ, ಸಾಂಸ್ಕೃತಿಕ ಸ್ಪರ್ಶ ಅಗತ್ಯ

ಕೃಷಿ ಕ್ಷೇತ್ರ ಈಗ ಹಿಂದಿಗಿಂತ ಹೆಚ್ಚು ಸುದ್ದಿಯ ಲ್ಲಿದೆ. ಕೃಷಿಗೆ ಸಂಬಂಧಿಸಿದ ಕಾಯಿದೆಗಳ ವಿರುದ್ಧ ದೇಶದಲ್ಲಿ ರೈತರ ಪ್ರತಿಭಟನೆ ಒಂದು ಸುದ್ದಿಯಾದರೆ; ಕೊರೊನಾ ತಂದ ಆಪತ್ತಿನಿಂದ ಪಟ್ಟಣ ಸೇರಿದ ಯುವಕರು ಗ್ರಾಮಗಳತ್ತ ಮುಖ ಮಾಡುತ್ತಿರುವುದು ಮತ್ತೂಂದು ಸುದ್ದಿ. ಆದರೂ ಸುಧಾರಣೆ ಹಾಗೂ ಪ್ರಗತಿಗಳ ಬಗ್ಗೆ ಯೋಚಿಸುವಾಗ ಕೃಷಿ ಕ್ಷೇತ್ರದ ಭವಿಷ್ಯ ಆಶಾದಾಯಕವಾಗಿರುವಂತೆ ಕಾಣುತ್ತಿಲ್ಲ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಪ್ರತೀ ಮುಂಗಡ ಪತ್ರದಲ್ಲೂ ಕೃಷಿಗೆ ಸಿಂಹಪಾಲನ್ನು ಮೀಸಲಿಡುತ್ತಿವೆ. ಕೃಷಿಕರನ್ನು ತಮ್ಮತ್ತ ಸೆಳೆಯಲು ವಿವಿಧ ರಾಜಕೀಯ ಪಕ್ಷಗಳು ಕೃಷಿಕರ ವಿಚಾರವಾಗಿ ರಸ್ತೆಗಿಳಿಯುತ್ತಿವೆ. ಈ ಎಲ್ಲ ಭರವಸೆ, ಆಶ್ವಾಸನೆಗಳ ನಡುವೆಯೂ ಕೃಷಿಯನ್ನು ಪೂರ್ಣಪ್ರಮಾಣದ ಉದ್ಯಮವ ನ್ನಾಗಿ ಸ್ವೀಕರಿಸಲು ಯುವಕರು ಹಿಂದೇಟು ಹಾಕುತ್ತಿದ್ದಾರೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಕೃಷಿಯನ್ನು ಕೈಹಿಡಿಯುವವರು ಅಧಿಕವೇ ಹೊರತು ಸ್ವಯಂ ಆಸಕ್ತಿಯಿಂದ ಕೈಹಿಡಿಯು ವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಈ ಬಗ್ಗೆ ಗಂಭೀರವಾಗಿ ಯಾರೂ ಚಿಂತಿಸುತ್ತಿಲ್ಲ. ರಾಜಕೀಯ ಪಕ್ಷಗಳ “ಕೃಷಿ ಕಾಳಜಿ’ ಕೇವಲ ಮತದ ಮೇಲೆ ಕೇಂದ್ರೀಕೃತವಾದರೆ; ಕೃಷಿ ಕ್ಷೇತ್ರದ ತಜ್ಞರು ಸುಧಾರಣ ಭಾಷಣ, ಬರವಣಿಗೆಯಲ್ಲಿಯೇ ಮಗ್ನರಾಗುತ್ತಾರೆ. ಕೃಷಿ ಯಲ್ಲಿ ತೊಡಗಿಸುವಂತೆ ಪ್ರೇರೇಪಿಸುವ ಯಾವ ಯೋಜನೆಗಳತ್ತಲೂ ವಿದ್ಯಾವಂತ ಯುವಕರಲ್ಲಿ ವಿಶ್ವಾಸ ಮೂಡುತ್ತಿಲ್ಲ.

ವಿದ್ಯಾವಂತ ಯುವಕರು ಕೃಷಿಯಿಂದ ವಿಮುಖರಾಗಲು ಒಂದು ಮುಖ್ಯ ಕಾರಣ ಅವರು ಬೆಳೆಯುತ್ತಿರುವ ಕೃಷಿ ಕುಟುಂಬ ದಲ್ಲಿನ ನಿರುತ್ಸಾಹದ ವಾತಾವರಣ. ಯಾವ ಕೃಷಿಕನೂ ವಿದ್ಯಾವಂತನಾದ ತನ್ನ ಮಗನು ಕೃಷಿಯನ್ನು ಕೈಗೆತ್ತಿಕೊಳ್ಳುತ್ತೇನೆಂದರೆ ಅವರ ಮೊದಲ ಉತ್ತರ ಇದಂತೂ ಖಂಡಿತ ಬೇಡ. ಯಾವುದಾದರೂ ಸರಕಾರಿ ಅಥವಾ ಖಾಸಗಿ ಉದ್ಯೋಗದ ಹಿಂದೆ ಹೋಗು. ಇನ್ನು ಸಮಾಜವನ್ನು ತೆಗೆದುಕೊಂಡರೂ ಕೃಷಿ ಕ್ಷೇತ್ರದ ಯುವಕರತ್ತ ಹಗುರವಾದ ಭಾವನೆ. ಬೇರೆ ಬೇರೆ ಸರಕಾರಿ ಅಥವಾ ಖಾಸಗಿ ಉದ್ಯೋಗ ವನ್ನು ಹಿಡಿದವರು ಅಭಿಮಾನದಿಂದ ತಮ್ಮ ತಮ್ಮ ಉದ್ಯೋಗದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರೆ; ಕೃಷಿಯನ್ನು ಕೈಗೆತ್ತಿಕೊಂಡ ವಿದ್ಯಾವಂತ ಯುವಕನು ತನ್ನ ಉದ್ಯಮದ ಬಗ್ಗೆ ಹೇಳಿಕೊಳಕ್ಷೆು ನಾಚಿಕೆ ಪಡುವ ವಾತಾವರಣ. ಸರಕಾರಿ ಅಥವಾ ಖಾಸಗಿ ಕ್ಷೇತ್ರದ ಪ್ರತಿಷ್ಠಿತ ಉದ್ಯೋಗ ಪಡೆಯಲು ಎಲ್ಲ ಅರ್ಹತೆಗಳಿದ್ದೂ; ಸ್ವ ಆಸಕ್ತಿಯಿಂದ ಅಂಥ ಅವಕಾಶಗಳನ್ನು ಬದಿಗೊತ್ತಿ ಕೃಷಿಗೆ ಬಂದ ಯುವಕರನ್ನು ಸಮಾಜವು ನೋಡುವ ವಿಧಾನವೇ ಬೇರೆ. ಇಂದು ಈ ಪರಿಸ್ಥಿತಿ ಎಲ್ಲಿಯ ತನಕ ಬಂದಿದೆ ಎಂದರೆ ಕೃಷಿ ಕ್ಷೇತ್ರದಲ್ಲಿರುವ ಯುವಕರನ್ನು ವಿವಾಹವಾಗಲೂ ಯುವತಿಯರು ಮೀನ ಮೇಷ‌ ಎಣಿಸುವಂತಾಗಿದೆ. ಯಾವಳ್ಳೋ ಒಬ್ಬಳು ಕೃಷಿಯಲ್ಲಿ ತೊಡಗಿಕೊಂಡಿರುವ ಯುವಕನನ್ನು ಮದುವೆಯಾಗುತ್ತೇನೆಂದರೆ ಸುತ್ತಮುತ್ತಲಿನವರು ಹುಬ್ಬೇರಿಸುವ ಕಾಲ ನಮ್ಮ ಮುಂದಿದೆ. ಹಾಗಾಗಿ ಅವಿವಾಹಿತರಾಗಿಯೇ ಬದುಕುವ ಅಪಾಯವೂ ಕೃಷಿಯಲ್ಲಿ ತೊಡಗಿ ರುವ ವಿದ್ಯಾವಂತ ಯುವಕರನ್ನು ಕಾಡುತ್ತಿದೆ.

ಕೃಷಿ ಕ್ಷೇತ್ರದ ಭವಿಷ್ಯ, ಸರಕಾರದ ಪಾತ್ರ
ಮೊದಲನೆಯದಾಗಿ ಕೃಷಿ ಕುರಿತಂತೆ ವಿದ್ಯಾವಂತ ಯುವಕರನ್ನು ನಿರುತ್ಸಾಹಿಗಳನ್ನಾಗಿ ಮಾಡುವ ಪರಿಸರಕ್ಕೆ ಮಂಗಳ ಹಾಡಬೇಕು. ಸರಕಾರಿ ಅಥವಾ ಖಾಸಗಿ ಕ್ಷೇತ್ರಗಳಲ್ಲಿ ದುಡಿಯುವವರಷ್ಟೇ ಗೌರವದ ವಾತಾವರಣ ಇಲ್ಲಿಯೂ ಮೂಡಬೇಕು. ಒಟ್ಟಿನಲ್ಲಿ ನಮ್ಮ ಮನಃಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು.

ಕೃಷಿಯನ್ನು ಕೈಗೆತ್ತಿಕೊಳಕ್ಷೆು ಮುಂದೆ ಬರುವ ವಿದ್ಯಾವಂತ ಯುವಕರಿಗೆ ಸರಕಾರ ವಿಶೇಷ ಪ್ರೋತ್ಸಾಹದ ಯೋಜನೆಗಳನ್ನು ರೂಪಿಸಬೇಕು. ಉತ್ತೇಜನ ರೂಪದಲ್ಲಿ ಆರ್ಥಿಕ ಸಹಕಾರ ನೀಡಬೇಕು. ಪ್ರತೀ ತಿಂಗಳೂ ಈ ಪ್ರೋತ್ಸಾಹ ಧನವನ್ನು ಅರ್ಹ ವಿದ್ಯಾವಂತ ಯುವಕರ ಖಾತೆಗಳಿಗೆ ಜಮಾಯಿಸಬೇಕು.

ಪ್ರತಿ ಗ್ರಾಮದಲ್ಲೂ ಕೃಷಿ ಭವನ ನಿರ್ಮಾ ಣವಾಗಬೇಕು. ಕೃಷಿ ಭವನಕ್ಕೆ ಸಂಬಂಧಿಸಿ ದಂತೆ ಸ್ಥಳೀಯ ಕೃಷಿಕರ ಸಂಘಟನೆ ಸದಾ ಚಟುವಟಿಕೆಗಳಿಂದ ಕೂಡಿರಬೇಕು. ಅದರ ಉಸ್ತುವಾರಿಗೆ ಸರಕಾರವೇ ಒಬ್ಬ ಅಧಿಕಾರಿ ಯನ್ನು ನೇಮಿಸಬೇಕು. ಕೃಷಿಗೆ ಸಂಬಂಧಿಸಿದ ಅಂತರ್ಜಾಲದ ಮಾಹಿತಿ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪತ್ರಿಕೆಗಳು, ಪುಸ್ತಕಗಳು ಈ ಭವನದ ಮೂಲಕ ಕೃಷಿಕರಿಗೆ ಸುಲಭವಾಗಿ ಲಭಿಸುವಂತಾಗಬೇಕು.

ವಿವಿಧ ವಿಚಾರಗಳ ಬಗೆಗಿನ ಗೋಷ್ಠಿ ಗಳು ಇಂದು ಕಾಲೇಜು ಮತ್ತು ವಿಶ್ವವಿದ್ಯಾ ನಿಲಯಗಳಿಗಷ್ಟೇ ಸೀಮಿತವಾಗಿದೆ. ಸರಕಾರವೂ ಅದಕ್ಕೆ ಅಗತ್ಯ ಆರ್ಥಿಕ ಸಹಾಯ ನೀಡುತ್ತದೆ. ಗ್ರಾಮೀಣ ಮಟ್ಟದಲ್ಲೂ ಕೃಷಿ ಭವನಗಳು ಇಂಥ ಚಟುವಟಿಕೆಗಳಿಗೆ ನೆಲೆ ಕಲ್ಪಿಸಬೇಕು. ಪ್ರತೀ ವಾರ ಅಥವಾ ತಿಂಗಳಿಗೊಮ್ಮೆ ವಿವಿಧ ಕ್ಷೇತ್ರದ ತಜ್ಞರಿಂದ ಮಾಹಿತಿ, ಉಪನ್ಯಾಸ, ಕಾರ್ಯಾಗಾರ, ಸಂಕಿರಣ ಮೊದಲಾದ ಚಟುವಟಿಕೆಗಳು ನಡೆಯಬೇಕು. ಕೃಷಿಕರನ್ನು ಒಗ್ಗೂಡಿಸಿ ವರ್ಷಕ್ಕೊಮ್ಮೆಯಾದರೂ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಕೃಷಿ ಭವನಗಳು ಆಯೋಜಿಸಬೇಕು. ಇದರಿಂದ ಕೃಷಿ ಕಾಯಿದೆಗಳಂಥ ಸಂಕೀರ್ಣ ವಿಚಾರಗಳ ಬಗೆಗೆ ರೈತರಿಗೆ ಸೂಕ್ತ ಮಾಹಿತಿ ದೊರೆಯುತ್ತದೆ. ಗ್ರಾಮೀಣ ಭಾಗದ ಕೃಷಿಕರಿಗೂ ಇದರಿಂದ ಒಂದು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪರಿಸರ ನಿರ್ಮಾಣವಾಗುತ್ತದೆ.

ಕೃಷಿಕರಿಗೆ ಸರಕಾರವು ವಿವಿಧ ಸವಲತ್ತುಗಳನ್ನು ನೀಡುತ್ತಿದೆ. ಆದರೆ ಕೆಲವೇ ಕೃಷಿಕರು ಇದರ ಸದುಪಯೋಗ ಪಡೆಯುತ್ತಾರೆ. ಅನೇಕರಿಗೆ ಈ ಬಗ್ಗೆ ಅರಿವೇ ಇಲ್ಲ. ಇದ್ದರೂ ಆ ಸವಲತ್ತುಗಳನ್ನು ಪಡೆಯುವುದು ಅವರ ಪಾಲಿಗೆ ಗಗನ ಕುಸುಮ. ಕೃಷಿಕರಿಗೆ ನೀಡಲಾಗುತ್ತಿರುವ ಈ ಸವಲತ್ತುಗಳನ್ನು ಅರ್ಹರೆಲ್ಲರೂ ಪಡೆಯು ವಂತೆ ಸರಳ ವಿಧಾನವನ್ನು ಸರಕಾರವು ರೂಪಿ ಸಬೇಕು. ಕೃಷಿ ಭವನದ ಸಭೆಗಳಲ್ಲಿ ಈ ಬಗ್ಗೆ ಚರ್ಚೆಯಾಗಬೇಕು. ಅಲ್ಲಿಂದಲೇ ಅರ್ಜಿ ಸ್ವೀಕರಿಸುವ ಹಾಗೂ ಅದರ ಪ್ರಯೋಜನವನ್ನು ರೈತರಿಗೆ ತಲುಪಿಸುವ ಕೆಲಸವಾಗಬೇಕು.

ಈ ಯೋಚನೆಗಳು ಎಲ್ಲರಲ್ಲೂ ಹಲವು ವರ್ಷಗಳಿಂದ ಇರಬಹುದು. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?. ಕೃಷಿಕರ ಬಗ್ಗೆ ಈ ತೆರನಾದ ಕಾಳಜಿಗೆ ಯಾರು ಸ್ಪಂದಿಸಿಯಾರು? ಬರಿದೆ ಯುವಕರನ್ನು ದೂರಿ ಪ್ರಯೋಜನವಿಲ್ಲ. ನಮ್ಮನ್ನೂ ನಾವು ಆತ್ಮವಿಮರ್ಶೆ ಮಾಡಿ ಕೊಳ್ಳಬೇಕು. ಸರಕಾರ ಹಾಗೂ ಸಮಾಜ ಕೈಜೋಡಿಸಿದಾಗ ಮಾತ್ರ ನಿಜವಾದ ಅರ್ಥದಲ್ಲಿ ಸುಧಾರಣೆ ಸಾಧ್ಯವಲ್ಲವೇ?.

ಡಾ| ಶ್ರೀಕಾಂತ್‌ ಸಿದ್ದಾಪುರ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.