ದೇಶದಲ್ಲಿದ್ದಾರೆ 45 ದಶಲಕ್ಷ ಹೊಸ ಯುವ ಮತದಾರರು 

Team Udayavani, Mar 7, 2019, 12:30 AM IST

ಚುನಾವಣೆ ಬಂದಾಗ ಬಣ್ಣದ ಕನಸುಗಳನ್ನು ನೀಡಿ ಬಳಿಕ ಮರೆತು ಬಿಡುವ ಪ್ರವೃತ್ತಿ ಅದು ಈ ವರ್ಷವೇ ಕೊನೆಯಾಗಲಿ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುವ ಮತ‌ವೇ ನಿರ್ಣಾಯಕವಾಗಿದೆ. ರಾಜಕೀಯ ಪಕ್ಷಗಳು ಯುವ ಸಂಪನ್ಮೂಲವನ್ನು ಸರಿಯಾಗಿ ಸಂಯೋಜಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ, ಪ್ರಣಾಳಿಕೆಯನ್ನು ರಚಿಸಬೇಕು. ಯುವ ಸಮುದಾಯವನ್ನು ನಿರ್ಲಕ್ಷಿಸಿದರೆ ಭಾರತ ಭಾರೀ ಪರಿಣಾಮವನ್ನು ಎದುರಿಸಬೇಕಾಗಬಹುದು.

ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳು ಶ್ರಮಿಸುತ್ತಿದ್ದು, ಕೆಲವು ರಾಜ್ಯಗಳಲ್ಲಿ ಮೈತ್ರಿಗಳು ಏರ್ಪ ಟ್ಟಿವೆ. ಚುನಾವಣೆಯ ಸಮಯದಲ್ಲಿ ಪರಸ್ಪರ ರಾಜಕೀಯ ಕೆಸರೆರಚಾಟಗಳು, ವೈಯಕ್ತಿಕ ನಿಂದನೆಗಳು ನಡೆಯುವುದು ಮಾಮೂಲು. ಆದರೆ ಈ ಬಾರಿ ಇವುಗಳನ್ನೇ ನಂಬಿಕೊಂಡರೆ ಮತದಾರರು ಭಿನ್ನವಾಗಿ ಪ್ರತಿಕ್ರಿಯಿಸಲಿದ್ದಾರೆ. ಅಭಿವೃದ್ಧಿ, ವಿಶೇಷ ಯೋಜನೆಗಳ ಜತೆಗೆ ಈ ಬಾರಿ ಶಿಕ್ಷಣ ಹಾಗೂ ಉದ್ಯೋಗದ ಕುರಿತಾ ಗಿಯೂ ರಾಜಕಾರಣಿಗಳು ತುಟಿ ಬಿಚ್ಚಲೇಬೇಕಾದ ಅನಿವಾರ್ಯತೆಯನ್ನು ಯುವಜನಾಂಗ ದೇಶದ ಮುಂದೆ ತೆರೆದಿಟ್ಟಿದೆ. 

ಭಾರತ ಯುವ ದೇಶವಾಗಿ ರೂಪುಗೊಳ್ಳುತ್ತಿದೆ. ಯುವ ಜನಾಂಗ ದೇಶದ ವಿತ್ತೀಯ ಬೆಳವಣಿಗೆಯ ಭಾಗವಾ ಗುತ್ತಿದ್ದಾರೆ ಎಂಬುದು ಸಂತಸದ ವಿಷಯವಾಗಿದೆ. ಆದರೆ ಯುವಕರ ಆಶೋತ್ತರಗಳು, ಅವರ ಬೇಡಿಕೆಯನ್ನು ಪೂರೈಸುವ ವಾತಾವರಣ ನಮ್ಮಲ್ಲಿ ಕ್ಲಪ್ತ ಸಮಯಕ್ಕೆ ಸೃಷ್ಟಿಯಾಗುತ್ತಿಲ್ಲ ಎಂಬುದು ಚಿಂತೆಯ ವಿಷಯ. ಯುವಕರ ಸಂಖ್ಯೆ ಹೆಚ್ಚುತ್ತಾ ಸಾಗಿದಂತೆ ಸರಕಾರ ಅವರಿಗೆ ಉತ್ತಮ ವೇದಿಕೆಯನ್ನು ಒದಗಿಸ ಬೇಕಿದೆ.  

45 ದಶಲಕ್ಷ ಯುವ ಜನತೆ: ಈ ವರ್ಷ 45 ದಶಲಕ್ಷ ಯುವ ಮತದಾರರು ಮೊದಲ ಬಾರಿ ಮತ ಚಲಾಯಿಸಲಿದ್ದಾರೆ. ಅವರ ಪ್ರತಿ ಮತ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. 2014ರ ಲೋಕಸಭಾ ಚುನಾವಣೆಯಲ್ಲಿ 24 ದಶಲಕ್ಷ ಯುವ ಮತದಾರರು ನಿರ್ಣಾಯಕರಾಗಿದ್ದರು. ಕಳೆದ ಚುನಾವಣೆಗಿಂತ ಈ ಬಾರಿ 21 ದಶಲಕ್ಷ ಮತದಾರರು ಹೆಚ್ಚಾಗಿದ್ದು, ಯುವಕರ ಧ್ವನಿ ಗಟ್ಟಿಗೊಳ್ಳುವ ಕಾಲ ಬಂದಿದೆ. ರಾಜಸ್ಥಾನ, ಬಿಹಾರ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಈ 5 ರಾಜ್ಯಗಳಲ್ಲಿ ಯುವ ಮತದಾರರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಶಿಕ್ಷಣ ಉದ್ಯೋಗ ಆದ್ಯತೆಯಾಗಲಿ: ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರ ಈ ಬಾರಿ ಅತೀ ಹೆಚ್ಚು ಆಕರ್ಷಣೆಯ ಕ್ಷೇತ್ರವಾಗಿದೆ. ಈ ಎರಡು ಕ್ಷೇತ್ರಗಳ ಮೇಲೆ 545 ಲೋಕಸಭಾ ಕ್ಷೇತ್ರಗಳ ಫ‌ಲಿತಾಂಶ ಅವಲಂಬಿತ ವಾಗ ಲಿದೆ. ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹಣಕಾಸಿನ ಕೊಡುಗೆ ನೀಡಬೇಕಾಗಿದೆ. ಶಿಕ್ಷಣ ಇಂದು ಅದರ ನಿರೀಕ್ಷೆಯ ಲ್ಲಿಯೂ ಇದೆ. ಕೌಶಲ ಅಭಿವೃದ್ಧಿಯೂ ಇಂದು ಹಿಂದುಳಿದ ಕ್ಷೇತ್ರವಾಗಿದೆ. ದುರದೃಷ್ಟ ಎಂದರೆ ದೇಶದ ಭವಿಷ್ಯ ನಿರ್ಧರಿಸುವ ಈ ಎರಡು ಕ್ಷೇತ್ರಗಳಿಗೆ ಅನುದಾನಗಳು ಸರಿಯಾಗಿ ಹಂಚಿಕೆಯಾಗುತ್ತಿಲ್ಲ. ಉನ್ನತ ಶಿಕ್ಷಣದ ಮೇಲೆ ಭಾರತದ ಖರ್ಚು ಮಾಡುತ್ತಿರುವ ಮೊತ್ತ ಜಿಡಿಪಿಯ ಶೇ. 0.73 ಮಾತ್ರ. 

ರಾಜಕಾರಣಿಗಳೇ ನಿರ್ಲಕ್ಷಿಸುವಂತಿಲ್ಲ: ಒಟ್ಟು ಮತದಾರರಲ್ಲಿ ಯುವಜನರು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ರಾಜಕೀಯ ಪಕ್ಷಗಳು ಆ ಕುರಿತು ಗಂಭೀರ ಚಿಂತನೆ ನಡೆಸಬೇಕಾಗಿದೆ. ಪ್ರಣಾಳಿಕೆಯಲ್ಲಿ   ಉದ್ಯೋಗ ರೂಪಿಸುವ ಕಾರ್ಯಕ್ರಮಗಳು ನಡೆಯಬೇಕಿದೆ. ನ್ಯಾಷನಲ್‌ ಸ್ಯಾಂಪಲ್‌ ಸರ್ವೇ ಆಫೀಸ್‌ (ಎನ್‌ಎಸ್‌ಎಸ್‌ಒ) ಪ್ರಕಾರ 45 ವರ್ಷಗಳಲ್ಲೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನಿರು ದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ.  ಇದಕ್ಕೆ ಉದ್ಯೋಗಗಳ ಸೃಷ್ಟಿ ಹಾಗೂ ಉನ್ನತ ಶಿಕ್ಷಣದತ್ತ ಹೆಚ್ಚು ಗಮನಹರಿಸಬೇಕಾಗಿದೆ. 

ಯುವ ಜನಾಂಗ ಲೆಕ್ಕ ಹೇಗೆ?: ಒಟ್ಟು ಸಂಖ್ಯೆಯಲ್ಲಿ ಯುವ ಜನಾಂಗದ‌ ಪಾಲು 2010ರಲ್ಲಿ ಶೇ. 35.11 ರಷ್ಟಿತ್ತು. ಇದು 1971ಕ್ಕೆ ಹೋಲಿಸಿದರೆ ಶೇ. 4.2 ಹೆಚ್ಚಾಗಿದೆ. 1971ರಲ್ಲಿ ಶೇ. 30.6 ರಷ್ಟಿತ್ತು. ಅಂದರೆ 168 ದಶಲಕ್ಷದಿಂದ 423 ದಶಲಕ್ಷಕ್ಕೆ ಹೆಚ್ಚಾಗಿದೆ. ಯುವ ಸಮುದಾಯ ಎಂದರೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆ ಬೇರೆ ಮಾನದಂಡದಿಂದ ಅಳೆಯಲಾಗುತ್ತಿದೆ. ಅಮೆರಿಕ ದಲ್ಲಿ 15ರಿಂದ 24 ವರ್ಷದವರನ್ನು ಯುವ ಜನರು ಎಂದು ಕರೆಯಲಾಗುತ್ತಿದೆ. ಭಾರತದಲ್ಲಿ 2003ರ ನ್ಯಾಶ ನಲ್‌ ಯೂತ್‌ ಪಾಲಿಸಿ ಪ್ರಕಾರ 13ರಿಂದ 35ರ ವಯೋ ಮಾನದವರನ್ನು ಯುವಕರು ಎಂದು ಕರೆಯ ಲಾಗುತ್ತದೆ. ಇದಾದ ಬಳಿಕ 2014ರಲ್ಲಿ ನ್ಯಾಶನಲ್‌ ಯೂತ್‌ ಪಾಲಿಸಿಯನ್ನು ಮರು ರಚಿಸಲಾಯಿತು. ಅದರ ಪ್ರಕಾರ 15ರಿಂದ 29ರ ವಯೋಮಾನದವರನ್ನು ಯುವಕರು ಎಂದು ಕರೆಯಲು ತೀರ್ಮಾನಿಸಲಾಗಿದೆ. ಆನಂತರ ಎನ್‌ಎಸ್‌ಎಸ್‌ಒ 15ರಿಂದ 34ರ ವಯೋ ಮಾನದವರನ್ನು ಯುವ ಸಮುದಾಯ ಎಂದು ಕರೆಯಲು ತೀರ್ಮಾನಿಸಿತು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಗಣತಿಯ ಸಂದರ್ಭ ನಿರ್ದಿಷ್ಟವಾಗಿ ಅಂಕಿಂಶ ನೀಡುವಲ್ಲಿ ಗೊಂದಲಗಳು ಇವೆ.

ಪಂಚ ರಾಜ್ಯದಲ್ಲಿ ಯುವಕರ ಪ್ರಾಬಲ್ಯ: ಪ್ರಸ್ತುತ ಲೋಕಸಭಾ ಕ್ಷೇತ್ರದ ಶೇ. 43ರಷ್ಟು ಸಂಸದರು ಯುವ ಪ್ರಾಬಲ್ಯವಿರುವ ರಾಜ್ಯಗಳಿಂದ ಚುನಾಯಿತರಾಗಿದ್ದಾರೆ. ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ರಾಜಸ್ಥಾನ ಕಾಂಗ್ರೆಸ್‌ ಪಾಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಮಾತ್ರ ತೃಣಮೂಲ ಕಾಂಗ್ರೆಸ್‌ ಆಡಳಿತವಿದ್ದು, ಅಲ್ಲಿಂದ ತೃಣಮೂಲ ಕಾಂಗ್ರೆಸ್‌ ಸಂಸ ದರೇ ಹೆಚ್ಚಿನ ಸಂಖ್ಯೆಯಲ್ಲಿ ಅಯ್ಕೆಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಶೇ. 17 ಮತ ಪಡೆಯಲು ಬಿಜೆಪಿ ಶಕ್ತವಾಗಿದೆ. ಈ ಅಂಶ ಸಹಜವಾಗಿ ಬಿಜೆಪಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಗಣತಿಯೊಂದರ ಪ್ರಕಾರ ದೇಶದ ಹಳ್ಳಿಯಲ್ಲಿ 55 ಶೇ. ಯುವಕರು ಹಾಗೂ 18 ಶೇ. ಯುವತಿಯರಿದ್ದಾರೆ. ಇನ್ನು ನಗರ ಪ್ರದೇಶದಲ್ಲಿ 56 ಶೇ. ಯುವಕರು ಹಾಗೂ 13 ಶೇ. ಯುವತಿಯರಿದ್ದಾರೆ.

ಉತ್ತರ ಪ್ರದೇಶವೇ ಉತ್ತರ: ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರನ್ನು ಹೊಂದಿರುವ ಉತ್ತರ ಪ್ರದೇಶ 2014ರಲ್ಲಿ ಬಿಜೆಪಿ ಪಾಲಾಗಿತ್ತು. ಯುಪಿಯಲ್ಲಿ ಚಲಾ ವಣೆ  ಯಾದ ಒಟ್ಟು ಮತಗಳಲ್ಲಿ ಶೇ. 43ರಷ್ಟು ಮತಗಳನ್ನು ಬಿಜೆಪಿ ಗೆದ್ದಿತ್ತು. ಆದರೆ ರಾಜ್ಯ ವಿಧಾನ ಸಭೆಯಲ್ಲಿ ಆ ಶೇಕಡಾವಾರು ತಲುಪಲು ಬಿಜೆಪಿ ವಿಫ‌ಲ ವಾಗಿತ್ತು. ಈ ಬಾರಿ ಎಸ್ಪಿ ಹಾಗೂ ಬಿಎಸ್ಪಿ ಮೈತ್ರಿಮಾಡಿ ಕೊಂಡ ಕಾರಣ ಜಿದ್ದಾಜಿದ್ದಿನ ಹೋರಾಟ ಕಾಣ  ಬಹುದು. ಆಶ್ಚರ್ಯ ಎಂದರೆ ರಾಜಸ್ಥಾನದಲ್ಲಿ ಬಿಜೆಪಿ ಎಲ್ಲಾ 25 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿತ್ತು. 

ಆದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರಕಾರ ರಚಿಸಿತು. ಪಶ್ಚಿಮ ಬಂಗಾಳದಲ್ಲಿ ಶೇ. 17 ಮತ ಪಡೆದಿದ್ದರೂ, ಕೇವಲ 2 ಕ್ಷೇತ್ರಗಳನ್ನು ಗೆಲ್ಲಲಷ್ಟೇ ಶಕ್ತವಾಗಿತ್ತು. ಈ ಎಲ್ಲ ರಾಜಕೀಯ ಏರಿ ಳಿತದಲ್ಲಿ ಯುವ ಮತಗಳೇ ನಿರ್ಣಾಯಕವಾಗಿವೆ. 

10 ರಾಜ್ಯಗಳಲ್ಲಿ ಶೇ. 7ಕ್ಕಿಂತ ಹೆಚ್ಚು ಯುವ ಮತದಾರರು ಇದ್ದಾರೆ. ಈ ರಾಜ್ಯಗಳು 211 ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ. ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಪಕ್ಷ ಈ 10 ರಾಜ್ಯಗಳ ಮೇಲೆ ಹೆಚ್ಚು ಶ್ರಮ ಹಾಕಲೇಬೇಕಾಗಿದೆ. ಅಸ್ಸಾಂನಲ್ಲಿ ಅತೀ ಹೆಚ್ಚು ಶೇ. 13 ಯುವ ಮತದಾರರು ಇದ್ದಾರೆ. 

ಯಾರು ಯುವಜನತೆಯ ಮನವೊಲಿಸುತ್ತಾರೋ ಅವರು ಆ. 15ರಂದು ಕೆಂಪುಕೋಟೆಯಲ್ಲಿ ಭಾಷಣ ಮಾಡಲಿದ್ದಾರೆ.

ಕಾರ್ತಿಕ್‌ ಅಮೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಅಷ್ಟೂ ಬುದ್ಧಿ ಬೇಡ್ವೇನ್ರಿ ನಿಮ್ಗೆ? ಅವನು ಬೇಡ ಬೇಡ ಅಂದ್ರೂ ಒತ್ತಾಯ ಮಾಡಿ ತಿನ್ನಿಸಿದ್ರಂತಲ್ಲ; ಈಗ ಅವನಿಗೆ ಹೊಟ್ಟೆ ಅಪ್‌ಸೆಟ್‌ ಆದ್ರೆ ಏನ್ರೀ ಮಾಡೋದು? ಇವತ್ತು...

  • ಶಿಕಾರಿ ಎಂದೊಡನೆ ನೆನಪಾಗುವುದು ಯಾವುದೋ ಪ್ರಾಣಿ ಪಕ್ಷಿಯ ಬೇಟೆ. ಆದರೆ ಈ ಪುಸ್ತಕದಲ್ಲಿ ಇದು ಒಂದು ಪ್ರಾಣಿ ಪಕ್ಷಿಯ ಬೇಟೆಯಾಗಿರದೇ ಮನುಷ್ಯನಿಂದ ಮನುಷ್ಯನ ಬೇಟೆಯನ್ನು...

  • ಬೆಂಗಳೂರು: ದೇಶದ ಅತಿ ದೊಡ್ಡ ತಂತ್ರಜ್ಞಾನ ಮೇಳ "ಬೆಂಗಳೂರು ಟೆಕ್‌ ಸಮಿಟ್‌'ಗೆ ದಿನಗಣನೆ ಆರಂಭವಾಗಿದೆ. ನವೆಂಬರ್‌ 18ರಿಂದ 20ರವರೆಗೆ ಅರಮನೆ ಆವರಣದಲ್ಲಿ ನಡೆಯಲಿರುವ...

  • ಬೆಂಗಳೂರು/ಟಿ.ದಾಸರಹಳ್ಳಿ: ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಶುದ್ಧ ಕುಡಿವ ನೀರು ಪೂರೈಕೆ ಘಟಕ ಮಾಲೀಕನ ಪುತ್ರನ ಅಪಹರಣಕ್ಕೆ ವಿಫ‌ಲ ಯತ್ನ ನಡೆಸಿ, ಅವರ ಮನೆ ಮುಂದೆ ನಿಂತಿದ್ದ...

  • ಬೆಂಗಳೂರು: ಶಬರಿಮಲೆ ಯಾತ್ರೆ ಸಂಬಂಧ ರಾಜ್ಯದ ಭಕ್ತರು ಸಜ್ಜಾಗುತ್ತಿದ್ದು, ಕಳೆದ ವರ್ಷ ಇದ್ದ ಆತಂಕ ನಿವಾರಿಸಿ ರಾಜ್ಯದ ಯಾತ್ರಾರ್ಥಿಗಳಿಗೆ ಎಲ್ಲ ಸೌಕರ್ಯ ನೀಡಲು...