Udayavni Special

ಬ್ಯಾಂಕ್‌ಗಳ ಅವೈಜ್ಞಾನಿಕ ವಿಲೀನ…


Team Udayavani, Sep 4, 2019, 5:37 AM IST

q-24

ಬ್ಯಾಂಕ್‌ಗಳ ವಿಲೀನ ಮಾಡುವುದಾದರೂ ಕರಾವಳಿಯ ಬ್ಯಾಂಕುಗಳನ್ನು ವಿಲೀನಗೊಳಿಸಿ ಇಲ್ಲಿನ ಸ್ಥಳೀಯತೆಯನ್ನು ಕಾಪಾಡಿಕೊಳ್ಳುವ ಎಲ್ಲ ಅವಕಾಶಗಳೂ ಕೇಂದ್ರ ಸರಕಾರಕ್ಕೆ ಇತ್ತು. ಹಿಂದೆ ಇದ್ದ ಸರಕಾರಕ್ಕೂ ಈ ಪ್ರಕ್ರಿಯೆ ನಡೆಸುವ ಅವಕಾಶಗಳಿತ್ತು. ಇದೆಲ್ಲವನ್ನು ಹೈಕಮಾಂಡ್‌ಗೆ ಮನಗಾಣಿಸಬೇಕಾದ ನಾಯಕರಿಗೆ ಸ್ವಲಾಭ ಮುಖ್ಯವಾದರೆ ಸಮಷ್ಟಿ ಹಿತ ಗೌಣವಾಗುತ್ತದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಆ. 30ರಂದು ಹತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನಗೊಳಿಸುವುದಾಗಿ ಪ್ರಕಟಿಸಿದಾಗ ಒಂದಿಷ್ಟು ಪರ- ವಿರೋಧ ಅಭಿಪ್ರಾಯಗಳು ಪ್ರಕಟವಾಗಿವೆ. ಇದು ಸಹಜವೂ ಕೂಡ.

ಸ್ಥಾಪಕರ ಮನೋಧೋರಣೆ
ಈಗ ವಿಲೀನಗೊಂಡ ಬ್ಯಾಂಕ್‌ಗಳು ಕಳೆದ ಶತಮಾನದ ಆರಂಭದಲ್ಲಿ ಜನಿಸಿದವು. 1969ರಲ್ಲಿ ಮತ್ತು 1980ರಲ್ಲಿ ಇಂದಿರಾಗಾಂಧಿಯವರು ಈ ಬ್ಯಾಂಕ್‌ಗಳನ್ನು ಖಾಸಗಿ ವಲಯದಿಂದ ಸರಕಾರಿ ವಲಯದ ತೆಕ್ಕೆಗೆ ರಾಷ್ಟ್ರೀಕರಣದ ಮೂಲಕ ತೆಗೆದುಕೊಂಡರು. ಆಗ ಸಿಂಡಿಕೇಟ್ ಬ್ಯಾಂಕ್‌ ಸ್ಥಾಪಕ ಡಾ|ಟಿಎಂಎ ಪೈಯವರು ‘ಮಗಳು ಪ್ರಾಯಕ್ಕೆ ಬಂದ ಅನಂತರ ಒಬ್ಬ ಅಳಿಯನಿಗೆ ಮದುವೆ ಮಾಡಿಕೊಡಬೇಕು. ಭಾರತ ಸರಕಾರಕ್ಕಿಂತ ದೊಡ್ಡ ವರ ಇನ್ನಾರಿದ್ದಾರೆ?’ ಎಂದೂ ಹೇಳಿದ್ದರು.

ಆಗ ರಾಷ್ಟ್ರೀಕರಣದ ಹೆಸರು ಬಳಸಿದರೆ ಈಗ ಅಂತಾ ರಾಷ್ಟ್ರೀಕರಣದ ಹೆಸರು ಬಳಸಲಾಗುತ್ತಿದೆ. ಆಗ ಪಿಗ್ಮಿ, ರೈತರಿಗೆ ಸಾಲ ನೀಡುತ್ತಿದ್ದ ಬ್ಯಾಂಕ್‌ಗಳನ್ನೂ ಜನಸಾಮಾನ್ಯರತ್ತ ಕೊಂಡೊಯ್ಯುವ ಉದ್ದೇಶಕ್ಕಾಗಿ ರಾಷ್ಟ್ರೀಕರಣ ಮಾಡಲಾಯಿತೆಂದು ಹೇಳಲಾಯಿತು. ಈಗ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಒಡ್ಡಬೇಕೆಂದು ಅಂತಾ ರಾಷ್ಟ್ರೀಕರಣದ ಸಮರ್ಥನೆ ನೀಡಲಾಗುತ್ತಿದೆ. ಬ್ಯಾಂಕ್‌ ನೌಕರರು ಶಾಖೆಗಳ ಮುಚ್ಚುವಿಕೆ, ಉದ್ಯೋಗ ಕಳೆದುಕೊಳ್ಳುವಿಕೆಯ ಆತಂಕವನ್ನು ಮುಂದಿರಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ.

ಅರಸು, ಟಿಎಪೈ, ಕಾಂಗ್ರೆಸ್‌ ಅನುಭವ
1974ರಲ್ಲಿ ಕರ್ನಾಟಕ ರಾಜ್ಯ ಸರಕಾರ ಡಿ.ದೇವರಾಜ ಅರಸು ಅವರ ನೇತೃತ್ವದಲ್ಲಿ ಭೂಮಸೂದೆ ಕಾಯಿದೆಯನ್ನು ಜಾರಿಗೊಳಿಸಿತು. ಇದರ ಪರಿಣಾಮ ಹಿಂದುಳಿದ ವರ್ಗದವರು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಾಧ್ಯವಾಯಿತು, ಕೆಲವು ಭೂಮಾಲಕ ವರ್ಗ ಹೊಟ್ಟೆಪಾಡಿಗಾಗಿ ಊರು ಬಿಟ್ಟು ಹೋಗಬೇಕಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದಿರಾಗಾಂಧಿಯವರ ಆಶಯದ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಿದ ಏಕೈಕ ಮುಖ್ಯಮಂತ್ರಿ ದೇವರಾಜ ಅರಸು. ಆದರೆ 1980ರಲ್ಲಿ ಅರಸು ಅವರು ಇಂದಿರಾ ಗಾಂಧಿಯವರ ಜತೆ ಮುನಿಸಿಕೊಳ್ಳಬೇಕಾಯಿತು ಮತ್ತು ಪಕ್ಷದಿಂದ ಹೊರಗೆ ಬಂದು ಸ್ವತಂತ್ರ ಪಕ್ಷವನ್ನು ರಚಿಸಿಕೊಳ್ಳಬೇಕಾಯಿತು. ಆಗ ಭೂಮಸೂದೆ ಫ‌ಲಾನುಭವಿ ಮತದಾರರು ದೇವರಾಜ ಅರಸು ಅವರ ಕೈ ಹಿಡಿಯದೆ ಇಂದಿರಾಗಾಂಧಿಯವರ ಕಾಂಗ್ರೆಸ್‌ ಕೈ ಹಿಡಿದರು. ಇಡೀ ದೇಶದ ಮುತ್ಸದ್ದಿ ಎನಿಸಿದ ಟಿ.ಎ.ಪೈಯವರು ಅದೆಷ್ಟು ಮಂದಿಗೆ ಸಿಂಡಿಕೇಟ್ ಬ್ಯಾಂಕ್‌ನಿಂದ ನೆರವಾದರು ಎಂದು ಹೇಳಲು ಅಸಾಧ್ಯ. 1980ರ ಚುನಾವಣೆಯಲ್ಲಿ ಟಿ.ಎ.ಪೈಯವರಿಗೂ ಅವರ ಫ‌ಲಾನುಭವಿಗಳು ಕೈಕೊಟ್ಟರು. ಈಗ 2019ರ ಕಾಲ. ಆಗ ಇಂದಿರಾಗಾಂಧಿಯವರಿಗೆ ಬೆಂಬಲ ಕೊಟ್ಟಿದ್ದ ಭೂಮಸೂದೆ ಕಾಯಿದೆ ಫ‌ಲಾನುಭವಿಗಳು, ಟಿ.ಎ.ಪೈಯವರಿಂದ ಉಪಕೃತರಾದ ಫ‌ಲಾನುಭವಿಗಳು ಕಾಂಗ್ರೆಸ್‌ ಪಕ್ಷಕ್ಕೆ ಕೈಕೊಟ್ಟು ಬಿಜೆಪಿ ಕಡೆ ವಾಲಿದ್ದಾರೆ. ಇತ್ತೀಚಿನ ದಶಕಗಳಲ್ಲಿ ರಾಜ್ಯ ಸರಕಾರವನ್ನು ಯಾರು ಆಳುತ್ತಾರೋ ಅವರಿಗೆ ಗಣ್ಯಾತಿಗಣ್ಯರು ಬೇರೆ ಬೇರೆ ವೇದಿಕೆಗಳ ಮೂಲಕ ಮಣೆ ಹಾಕಿ ಲಾಭ ಪಡೆದುಕೊಳ್ಳುವುದನ್ನು ನೋಡಬಹುದು.

ಮಾಯವಾಗುತ್ತಿರುವ ಕೃತಜ್ಞತೆ
ಮೇಲಿನ ಬೆಳವಣಿಗೆಗಳನ್ನು ನೋಡಿದರೆ ಜನರಿಗೆ ನಿನ್ನೆ ಮಾಡಿದ ಉಪಕಾರದ ಸ್ಮರಣೆ ಇಂದು ಇರುವುದಿಲ್ಲ ಎಂಬ ಸಿದ್ಧಾಂತ ಅಥವಾ ಸೂತ್ರಕ್ಕೆ ಬರಬಹುದು. ಹಿಂದೆಲ್ಲ ನಿನ್ನೆ ಮತ್ತು ಇಂದು ಎಂಬ ಶಬ್ದಕ್ಕೆ ಸ್ವಲ್ಪ ಕಾಲಮಾನದ ಅಂತರವಿತ್ತು. ಈಗ ಈ ಕಾಲದ ಅಂತರ ಕುಗ್ಗಿ ಹೋಗಿ ಈಗ ಮಾಡಿದ ಉಪಕಾರದ ಸ್ಮರಣೆ ಇನ್ನೊಂದು ಗಂಟೆಯಲ್ಲಿರುವುದಿಲ್ಲ ಎಂಬ ಮಟ್ಟಕ್ಕೆ ಮುಟ್ಟಿದ್ದೇವೆ. ಇದಕ್ಕಾಗಿಯೇ ರಾಜಕಾರಣಿಗಳು ಚುನಾವಣೆ ಬರುವ ಹೊತ್ತಿಗೆ ಕೆಲವು ಜನಪರ ಯೋಜನೆಗಳನ್ನು ಪ್ರಕಟಿಸುತ್ತಾರೆ. ಮೂರ್‍ನಾಲ್ಕು ವರ್ಷಗಳ ಹಿಂದೆ ಮಾಡಿದ ಅನಾಹುತಗಳನ್ನು ಜನರು ಮರೆಯುತ್ತಾರೆಂಬ ಅರಿವು ಅವರಿಗೆ ಚೆನ್ನಾಗಿದೆ. ಇಡೀ ಪರಿಸರಕ್ಕೆ ತೊಂದರೆಯಾಗುವ ಯೋಜನೆ ಇದ್ದರೂ ಕೇವಲ ಕೆಲವೇ ಕೆಲವು ಸಾವಿರ, ಲಕ್ಷ ರೂ. ಅನುದಾನ ಕೊಡುವುದಲ್ಲ, ಒಂದು ಪ್ಯಾಕೇಟ್ ಗೇರುಬೀಜವನ್ನು ಮನೆಗೆ ತಲುಪಿಸಿದರೂ ತಮಗಾಗುವ ಎಲ್ಲ ತೊಂದರೆಗಳನ್ನೂ ಆ ಕ್ಷಣಕ್ಕೆ ಮರೆತು ಬಿಡುವ ಜಾಯಮಾನವಿದೆ.

1800ರ ಅವಧಿಯಲ್ಲಿ ಸರ್‌ ಥಾಮಸ್‌ ಮನ್ರೋ ಎಂಬ ಬ್ರಿಟಿಷ್‌ ಅಧಿಕಾರಿ ಜಮೀನ್ದಾರಿ ಪದ್ಧತಿಗೆ ಪರ್ಯಾಯವಾಗಿ ರೈತವಾರಿ ಪದ್ಧತಿಯನ್ನು ಜಾರಿಗೊಳಿಸಿದ. ಇದನ್ನು ಬಹಳ ಪಕ್ಕಾ ಎನ್ನಲು ಬರುವುದಿಲ್ಲವಾದರೂ ಭೂಮಸೂದೆ ಕಾಯಿದೆ ಸ್ವರೂಪದ ಬೀಜ ರೈತವಾರಿಯಲ್ಲಿತ್ತು ಎನ್ನುವುದನ್ನು ಅಲ್ಲಗಳೆಯಲಾಗದು. ಈತ ಹಾಕಿಕೊಟ್ಟ ಕಂದಾಯ ನಿಯಮಗಳನ್ನು ಇಂದಿಗೂ ಐಎಎಸ್‌ ಪರೀಕ್ಷೆ ಕುಳಿತುಕೊಳ್ಳುವವರು ಓದುತ್ತಾರೆ. ಮನ್ರೋ ಈಗ ಯಾರಿಗೆ ಬೇಕು? ಈತನಾದರೋ ಬಹಳ ವರ್ಷಗಳ ಹಿಂದಿನವ, ವಿದೇಶೀಯ ಎನ್ನಬಹುದಾದರೂ ಇಂದಿರಾ ಗಾಂಧಿ, ದೇವರಾಜ ಅರಸು, ಟಿ.ಎ.ಪೈಗಳು ಎಷ್ಟು ವರ್ಷ ಹಿಂದಿನವರು?

ಪ್ರತಿಭಟನೆ ಯಾವಾಗ ಇತ್ತು?
ಬ್ಯಾಂಕ್‌ ರಾಷ್ಟ್ರೀಕರಣ ಮಾಡುವಾಗ ಸ್ಥಾಪಕರಿಗೆ ಆದ ನೋವು ನೌಕರರ ಮೇಲೆ ಏನೂ ಪರಿಣಾಮ ಬೀರಲಿಲ್ಲ, ಆಗ ಪ್ರತಿಭಟನೆ ಮಾಡಲಿಲ್ಲ. ‘ಆಳುವ ವ್ಯಕ್ತಿಗಳು ತಮ್ಮ ಲಾಭಕ್ಕಾಗಿ ಸ್ವತಂತ್ರ ಉದ್ಯಮಗಳ ಮೇಲೆ ಅಂಕೆ, ಅಂಕುಶ ಹೇರಿದರು. ರಾಷ್ಟ್ರಸ್ವಾಮ್ಯವೇ ದಾರಿದ್ರ್ಯ ನಿರ್ಮೂಲನದ ಹಾದಿ ಎಂದು ಸಾರಿದರು. ಇದಕ್ಕೆ ಬೇಕಾಗಿ ಸುಳ್ಳು ಘೋಷಣೆಗಳಿಂದ ಜನಸಾಮಾನ್ಯರನ್ನು ಮಂಕುಗೊಳಿಸಿ ತಮ್ಮ ಗದ್ದುಗೆಯನ್ನು ಭದ್ರಪಡಿಸಿಕೊಂಡರು’ ಎಂದು ಡಾ|ಶಿವರಾಮ ಕಾರಂತರು ‘ಸ್ಮತಿ ಪಟಲದಿಂದ- 2’ ಕಾದಂಬರಿಯಲ್ಲಿ (ಪುಟ 105) ಉಲ್ಲೇಖೀಸಿರುವುದನ್ನು ಕಂಡಾಗ ಹಿಂದೆ ಮತ್ತು ಈಗ ಆಗುತ್ತಿರುವ ಬೆಳವಣಿಗೆಯಲ್ಲಿ ಅಡಕವಾದ ಸೂತ್ರ ಒಂದೇ ಎಂದು ಕಾಣುತ್ತದೆ. ಇತರೆಲ್ಲ ಕ್ಷೇತ್ರದವರಿಗಿಂತ ಹೆಚ್ಚು ವೇತನ ಪಡೆಯುವ ವರ್ಗ ಬ್ಯಾಂಕಿಂಗ್‌ ಕ್ಷೇತ್ರದವರು ಎಂಬ ಮಾತು ಇದ್ದ ಕಾಲವೊಂದಿತ್ತು. ಇವರೆಲ್ಲ 1960-70ರ ದಶಕದಲ್ಲಿ ಕೆಲಸಕ್ಕೆ ಸೇರುವಾಗ ಯಾರ್ಯಾರದೋ ಪ್ರಭಾವ ಬೀರಿ, ವಿನಂತಿ ಮಾಡಿ ಕೆಲಸಕ್ಕೆ ಸೇರಿದವರು. ಕೆಲಸಕ್ಕೆ ಸೇರಿದ ಅನಂತರ ಇತರರಿಗಿಂತ ಹೆಚ್ಚು ಸಂಬಳ ಪಡೆಯುತ್ತಿದ್ದರೂ ಸೌಲಭ್ಯ ಹೆಚ್ಚಿಸಿಕೊಳ್ಳಲಷ್ಟೆ ವರ್ಷಕ್ಕೆ ಕೆಲವು ಬಾರಿ ಹರಕೆಯ ಪ್ರತಿಭಟನೆ ಮಾಡುವುದನ್ನು ಕೈಬಿಟ್ಟವರಲ್ಲ. ಇವರು ಪ್ರತಿಭಟನೆ ಮಾಡುವಾಗ ಮಾತ್ರ ಕಾರ್ಮಿಕರು, ಉಳಿದ ಸಂದರ್ಭ ನೌಕರರು, ಉದ್ಯೋಗಿಗಳು, ಅಧಿಕಾರಿಗಳೆಂದೆನಿಸಿಕೊಳ್ಳುತ್ತಾರೆ.

ಜನ ಬೆಂಬಲ ಇದೆಯೆ?
ಯಾರು ಏನೇ ಪ್ರತಿಭಟನೆ ಮಾಡಿದರೂ ಸಾಮಾನ್ಯ ಜನರ ಬೆಂಬಲವಿಲ್ಲದಿದ್ದರೆ ಸರಕಾರಗಳು ಕ್ಯಾರೇ ಮಾಡುವುದಿಲ್ಲ ಎಂಬುದು ದಿಟ. ಜನಸಾಮಾನ್ಯ ಗ್ರಾಹಕರಿಗೆ ಬ್ಯಾಂಕ್‌ನಿಂದ ತೊಂದರೆಯಾಗುವವರೆಗೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ನೌಕರರಿಗೆ ಗ್ರಾಹಕರ ಮೇಲೆಯೂ, ಗ್ರಾಹಕರಿಗೆ ನೌಕರರ ಮೇಲೆಯೂ ಯಾವುದೇ ಭಾವನಾತ್ಮಕ ಸಂಬಂಧ ಈಗ ಉಳಿದಿಲ್ಲ. ಈಗ ಸ್ಥಳೀಯ ಜನರೂ ಬ್ಯಾಂಕ್‌ ನೌಕರರಾಗಿ ಸೇರಲು ಉತ್ಸುಕರಾಗದ ಕಾರಣ ದೂರದ ಕೇರಳ, ಬಿಹಾರದಿಂದ ಬ್ಯಾಂಕ್‌ ನೌಕರರಾಗಿ ಬರುತ್ತಿದ್ದಾರೆ.

ಪರಬ್ಯಾಂಕಿಗರ ಕರಾಮತ್ತು- ಸ್ಥಳೀಯತೆಗೆ ತಿಲಾಂಜಲಿ
ರಾಷ್ಟ್ರೀಕರಣವಾದ ಅನಂತರ ಯಾವುದೋ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಗಳು ಇನ್ನೊಂದು ಬ್ಯಾಂಕ್‌ಗೆ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಾಗಿ, ಇತ್ತೀಚಿಗೆ ವ್ಯವಸ್ಥಾಪಕ ನಿರ್ದೇಶಕರು, ಸಿಇಒ ಆಗಿ ವರ್ಗಾವಣೆಯಾಗಿ ಬಂದಾಗಲೇ ಆಯಾ ಬ್ಯಾಂಕ್‌ಗಳ ಸ್ಥಳೀಯತೆಗೆ ತಿಲಾಂಜಲಿ ಬಿಡಲಾಯಿತು. ಇದರ ಜತೆಗೆ ಪರಬ್ಯಾಂಕ್‌ ಅಧಿಕಾರಸ್ಥರು ಇಲ್ಲಿಗೆ ಬಂದು ಭ್ರಷ್ಟಾಚಾರದಲ್ಲಿ ತೊಡಗಿದ್ದೂ ಬ್ಯಾಂಕಿಂಗ್‌ ಕ್ಷೇತ್ರ ತಿರುವುಮುರುವು ಆಗಲು ಶುರುವಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗೆಂದ ಮಾತ್ರಕ್ಕೆ ಅದೇ ಬ್ಯಾಂಕ್‌ನಲ್ಲಿ ಉನ್ನತ ಸ್ಥಾನಕ್ಕೇರಿದವರು ಶೇ.100 ಸಾಚಾ ಎಂದು ಘೋಷಣೆ ಮಾಡುವಂತಿಲ್ಲ ಎನ್ನುವುದೂ ಸತ್ಯ. ಆದರೆ ಹೊರಗಿನಿಂದ ಬಂದವರು ಮೆಂದುಕೊಂಡು ಹೋದದ್ದು ಜಾಸ್ತಿ. ಹೊರಗಿನಿಂದ ಬರುವವರೂ ಮೇಲ್ಮಟ್ಟದಲ್ಲಿ ಸಾಕಷ್ಟು ಬಂಡವಾಳ ಹೂಡಿಕೆ ನಡೆಸಿಯೇ ಬಂದು ಇದೆಲ್ಲವನ್ನು ನಿಭಾಯಿಸುತ್ತಿದ್ದರು ಎನ್ನುವ ಸತ್ಯ ಎಲ್ಲರಿಗೆ ಗೊತ್ತಿದ್ದದ್ದೆ. ಆರಂಭದ ಲ್ಲಿಯೇ ಇದೆಲ್ಲವನ್ನೂ ನಿಯಂತ್ರಿಸಿದ್ದರೆ ಇಷ್ಟು ಬೇಗ ಬ್ಯಾಂಕಿಂಗ್‌ ಕ್ಷೇತ್ರ ಇಂತಹ ಮಟ್ಟಕ್ಕೆ ಇಳಿಯುತ್ತಿರಲಿಲ್ಲವೋ ಏನೋ?

ಕೈತಪ್ಪಿದ ಅವಕಾಶ

ಬ್ಯಾಂಕ್‌ಗಳ ವಿಲೀನ ಮಾಡುವುದಾದರೂ ಕರಾವಳಿಯ ಬ್ಯಾಂಕುಗಳನ್ನು ವಿಲೀನಗೊಳಿಸಿ ಇಲ್ಲಿನ ಸ್ಥಳೀಯತೆಯನ್ನು ಕಾಪಾಡಿಕೊಳ್ಳುವ ಎಲ್ಲ ಅವಕಾಶಗಳೂ ಕೇಂದ್ರ ಸರಕಾರಕ್ಕೆ ಇತ್ತು. ಹಿಂದೆ ಇದ್ದ ಸರಕಾರಕ್ಕೂ ಈ ಪ್ರಕ್ರಿಯೆ ನಡೆಸುವ ಅವಕಾಶಗಳಿತ್ತು. ಇದೆಲ್ಲವನ್ನು ಹೈಕಮಾಂಡ್‌ಗೆ ಮನಗಾಣಿಸಬೇಕಾದ ನಾಯಕರಿಗೆ ಸ್ವಲಾಭ ಮುಖ್ಯವಾದರೆ ಸಮಷ್ಟಿ ಹಿತ ಗೌಣವಾಗುತ್ತದೆ. ಸ್ವಂತ ಲಾಭದ ಮೇಲೆ ಹದ್ದುಗಣ್ಣಿಟ್ಟಾಗ ಮೇಲೆ ಕುಳಿತವರನ್ನು ತೃಪ್ತಿಪಡಿಸುವ ಕಾಯಕಕ್ಕೇ ಸಾಮರ್ಥ್ಯ ವಿನಿಯೋಗವಾಗುತ್ತದೆ. ನಿಯಂತ್ರಣವಿಲ್ಲದ ಪ್ರಜಾಪ್ರಭುತ್ವದಲ್ಲಿ ಲಾಭಬುಡಕರು ಜಾಸ್ತಿಯಾಗುತ್ತಾರೆ, ನಿರಂಕುಶ ಪ್ರಭುತ್ವದಲ್ಲಿ ಪುಕ್ಕಲರು ಜಾಸ್ತಿಯಾಗುತ್ತಾರೆ.

ಮೊದಲ ವರ್ಗದಲ್ಲಿ ಕಮಾಯಿಸುವವರು ಹೆಚ್ಚಳವಾದರೆ, ಎರಡನೆಯದರಲ್ಲಿ ಪುಕ್ಕಲರ ಸಂಖ್ಯೆ ಜಾಸ್ತಿ ಇರುತ್ತದೆ. ಎರಡೂ ಅಧಿಪತ್ಯ ಅಪಾಯಕಾರಿ, ಎರಡೂ ಕಡೆ ಹುದ್ದೆ, ಅದರಿಂದ ಲಾಭದ ಮೇಲೆ ಕಣ್ಣಿರುತ್ತದೆ. ನಮಗೆ ಬೇಕಾದದ್ದು ನಿಯಂತ್ರಿತ ಪ್ರಭುತ್ವವೇ ವಿನಾ ಅನಿಯಂತ್ರಿತ ಪ್ರಭುತ್ವವೂ ಅಲ್ಲ, ನಿರಂಕುಶ ಪ್ರಭುತ್ವವೂ ಅಲ್ಲ. ಇದರ ಅನುಭವ ಸ್ವತಂತ್ರ ಭಾರತದ ಬೇರೆ ಬೇರೆ ಆಡಳಿತ ಪ್ರಭುಗಳನ್ನು ನೋಡಿದರೆ ತಿಳಿಯುತ್ತದೆ. ಇದು ಕೇವಲ ಸರಕಾರಗಳಿಗೆ ಮಾತ್ರ ಅನ್ವಯವಲ್ಲ, ಮನೆ ಯಜಮಾನಿಕೆಯಿಂದ ಹಿಡಿದು ಎಲ್ಲ ಸಂಸ್ಥೆಗಳಿಗೂ ಅನ್ವಯ.

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆ

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆ

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

Chamarajanagara covid case

ಚಾಮರಾಜನಗರದಲ್ಲಿ ಎರಡಂಕಿಗಿಳಿದ ಕೋವಿಡ್ ಕೇಸ್‌ಗಳು : ಇಂದು 93 ಪ್ರಕರಣಗಳು ದೃಢಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಹಂತ ಹಂತವಾಗಿ ಅನ್‌ಲಾಕ್‌ ಮಾಡಿ

ರಾಜ್ಯದಲ್ಲಿ ಹಂತ ಹಂತವಾಗಿ ಅನ್‌ಲಾಕ್‌ ಮಾಡಿ

ಸಾಹಿತ್ಯದ ಓದು ಬಾಲ್ಯದಿಂದಲೇ ಆರಂಭವಾಗಲಿ

ಸಾಹಿತ್ಯದ ಓದು ಬಾಲ್ಯದಿಂದಲೇ ಆರಂಭವಾಗಲಿ

ಇತ್ಯರ್ಥ ಕಾಣದ ಪ್ಯಾಲೆಸ್ತೀನ್‌ ಬಿಕ್ಕಟ್ಟಿಗೆ ಮತ್ತೆ ಕಿಚ್ಚು

ಇತ್ಯರ್ಥ ಕಾಣದ ಪ್ಯಾಲೆಸ್ತೀನ್‌ ಬಿಕ್ಕಟ್ಟಿಗೆ ಮತ್ತೆ ಕಿಚ್ಚು

ಮನೆಯೊಳಗೆ ಲಾಕ್‌ ಆದರೂ ಮನ ಆನ್‌ಲಾಕ್‌ ಆಗಿರಲಿ

ಮನೆಯೊಳಗೆ ಲಾಕ್‌ ಆದರೂ ಮನ ಆನ್‌ಲಾಕ್‌ ಆಗಿರಲಿ

ಆನೆಗೊಂದಿಯ ಅಂಜನಾದ್ರಿಯೇ ಹನುಮಂತನ ಜನ್ಮಸ್ಥಳ

ಆನೆಗೊಂದಿಯ ಅಂಜನಾದ್ರಿಯೇ ಹನುಮಂತನ ಜನ್ಮಸ್ಥಳ

MUST WATCH

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

udayavani youtube

ವಿಶಿಷ್ಟವಾಗಿ DRAGON FRUIT ಬೆಳೆದ ಕಾರ್ಕಳದ ರೈತನಿಗೆ ಭೇಷ್ ಎಂದ ಮಂಗಳೂರು ಕಮೀಷನರ್

udayavani youtube

ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಹೊಸ ಸೇರ್ಪಡೆ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

15-21

ಗುತ್ತಿಗೆದಾರರ ವಿರುದ್ಧ ಕ್ರಮ : ಹಾಲಪ್ಪ

15-20

ಪರಿಹಾರ ಮಧ್ಯವರ್ತಿಗಳ ಪಾಲಾಗದಂತೆ ಕ್ರಮ ಕೈಗೊಳ್ಳಿ

15-19

ಕೊರೋನಾ ತಡೆಗೆ ಗ್ರಾಂ ಪಂಚಾಯತ್ ಗಳತ್ತ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.