ಗಾಂಧಿ ಕುಟುಂಬವ ಟೀಕಿಸುವ ಧೈರ್ಯ ಪತ್ರಕರ್ತರಿಗಿತ್ತೇ?

Team Udayavani, May 14, 2019, 5:50 AM IST

ಅಮೆರಿಕದ ಟೈಮ್‌ ವಾರಪತ್ರಿಕೆ ಮೋದಿಯನ್ನು ‘ಡಿವೈಡರ್‌ ಇನ್‌ ಚೀಫ್’ ಎಂದು ಕರೆಯುತ್ತಾ ಮುಖಪುಟ ಲೇಖನ ಪ್ರಕಟಿಸಿರುವುದು ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಲೇಖನ ಬರೆದವರು ಆತೀಶ್‌ ತಸೀರ್‌ ಎಂಬ ಪತ್ರಕರ್ತ. ಈತ ಪಾಕಿಸ್ತಾನಿ ರಾಜಕಾರಣಿ ಸಲ್ಮಾನ್‌ ತಸೀರ್‌ ಮತ್ತು ಭಾರತೀಯ ಪತ್ರಕರ್ತೆ ತವ್ಲೀನ್‌ ಸಿಂಗ್‌ ಅವರ ಮಗ. ಅತ್ತ ಆತೀಶ್‌ ತಸೀರ್‌ ಮೋದಿಯನ್ನು ವಿರೋಧಿಸಿ ಲೇಖನ ಪ್ರಕಟಿಸಿದರೆ, ಇತ್ತ ಅವರ ತಾಯಿ ತವ್ಲೀನ್‌ ಸಿಂಗ್‌ ಮೋದಿ ಪರ ಲೇಖನ ಬರೆದಿದ್ದಾರೆ…ಹಿಂದಿಯ ಅಮರ್‌ ಉಜಾಲಾ ಜಾಲತಾಣಕ್ಕೆ ತವ್ಲೀನ್‌ ಸಿಂಗ್‌ ಬರೆದ ಲೇಖನ ಇಲ್ಲಿದೆ…
ಗಾಂಧಿ ಪರಿವಾರದ ಆ ಪ್ರವಾಸದ ಬಗ್ಗೆ ನನಗಿನ್ನೂ ನೆನಪಿದೆ. ಆಗ ಆ ಪರಿವಾರದ ಜೊತೆಗೆ ಯಾರ್ಯಾರು ಇದ್ದರು ಎನ್ನುವುದೂ ನೆನಪಿದೆ. ಆ ದಿನ ಗಳಲ್ಲಿ ನಾವು ಪತ್ರಕರ್ತರು ದೇಶದ ಈ ಅತಿ ಶಕ್ತಿಶಾಲಿ ರಾಜಪರಿವಾರಕ್ಕೆ ಯಾವ ಪರಿ ಗುಲಾಮರಾಗಿದ್ದೇವೆಂದರೆ, ದೇಶದ ಯಾವುದೇ ಪತ್ರಿಕೆಯೂ ಆ ರಜಾ ಪ್ರವಾಸವನ್ನು ಟೀಕಿಸುವ ಧೈರ್ಯ ತೋರಿರಲಿಲ್ಲ.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣವೊಂದರಲ್ಲಿ ರಾಜೀವ್‌ ಗಾಂಧಿ ಕುರಿತು ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಯಿತು. ರಾಜೀವ್‌ ಗಾಂಧಿಯವರು ನೌಕಾ ಪಡೆಯ ಐಎನ್‌ಎಸ್‌ ವಿರಾಟ್ ಅನ್ನು ದುರುಪಯೋಗ ಮಾಡಿ ಕೊಂಡರು ಎಂದು ಮೋದಿ ಹೇಳಿದ್ದರು. ಅದೇ ದಿನವೇ ಪ್ರಿಯಾಂಕಾ ಗಾಂಧಿಯವರು ತಮ್ಮ ಭಾಷಣದಲ್ಲಿ ಮೋದಿಯನ್ನು ಟೀಕಿಸಿದರು. ‘ನರೇಂದ್ರ ಮೋದಿಯವರು ತಮ್ಮ ಪ್ರತಿಯೊಂದು ದೋಷವನ್ನೂ ನೆಹರು-ಗಾಂಧಿ ಪರಿವಾರದ ಮೇಲೆ ಹೊರಿಸುತ್ತಾರೆ’ ಎಂದರು ಪ್ರಿಯಾಂಕಾ.

ಈಗ ಪ್ರಶ್ನೆ ಏನೆಂದರೆ, ನೆಹರೂ-ಗಾಂಧಿ ಪರಿವಾರದ ಊಳಿಗ ಮಾನ್ಯ ಗುಣವನ್ನು ದೇಶದ ಮತದಾರರಿಗೆ ನೆನಪಿಸಿಕೊಡುವುದು ಅವಶ್ಯಕವಲ್ಲವೇನು? ಭಾರತೀಯ ಪ್ರಜಾ ಪ್ರಭುತ್ವದಲ್ಲಿ ಒಂದು ಕಾಲವಿತ್ತು, ಆಗೆಲ್ಲ ಪ್ರಧಾನಮಂತ್ರಿಯ ಕುಟುಂಬವು ರಜೆ ಅನುಭವಿಸಲು ನೌಕಾಪಡೆಯ ಹಡಗುಗಳನ್ನು ಬಳಸಿಕೊಂಡು ಲಕ್ಷದ್ವೀಪಕ್ಕೆ ಹೋಗುತ್ತಿತ್ತು ಎಂದು ಜನರಿಗೆ ನೆನಪು ಮಾಡಿಕೊಡುವ ಅವಶ್ಯಕತೆ ಇಲ್ಲವೇನು? ಗಾಂಧಿ ಪರಿವಾರದ ಆ ಪ್ರವಾಸದ ಬಗ್ಗೆ ನನಗಿನ್ನೂ ನೆನಪಿದೆ. ಆಗ ಆ ಪರಿವಾರದ ಜೊತೆಗೆ ಯಾರ್ಯಾರು ಇದ್ದರು ಎನ್ನುವುದೂ ನೆನಪಿದೆ. ಆ ದಿನಗಳಲ್ಲಿ ನಾವು ಪತ್ರಕರ್ತರು ದೇಶದ ಅತಿ ಶಕ್ತಿಶಾಲಿ ರಾಜಪರಿವಾರಕ್ಕೆ ಎಷ್ಟು ಗುಲಾಮರಾಗಿದ್ದೆವೆಂದರೆ, ದೇಶದ ಯಾವುದೇ ಪತ್ರಿಕೆಯೂ ಆ ರಜಾ ಪ್ರವಾಸವನ್ನು ಟೀಕಿಸುವ ಧೈರ್ಯ ತೋರಿರಲಿಲ್ಲ. ನಾವು ಪತ್ರಕರ್ತರ ತಪ್ಪಂತೂ ಇತ್ತೇನೋ ಸರಿ, ಆದರೆ ಆ ಸಮಯದಲ್ಲಿ ಕೆಲವೇ ಕೆಲವರಿಗೆ ಮಾತ್ರ ಪ್ರಜಾಪ್ರಭುತ್ವದಲ್ಲಿನ ಸಾಮಂತವಾದದ ಈ ಕೆಟ್ಟ ಕಲಬೆರಿಕೆಯ ಬಗ್ಗೆ ಅರಿವಿತ್ತು.

ಒಳ್ಳೆಯ ಸಂಗತಿಯೆಂದರೆ, ಈಗ ದೇಶದ ರಾಜಕೀಯ ಬದಲಾ ಗಿದೆ ಮತ್ತು ಪ್ರಧಾನಮಂತ್ರಿ ನಿವಾಸದಲ್ಲಿ ಒಬ್ಬ ಚಾಯ್‌ವಾಲಾನ ಮಗ ವಿರಾಜಮಾನರಾಗಿದ್ದಾರೆ ಎನ್ನುವುದು (ಅವರೆಂದಿಗೂ ರಜೆ ತೆಗೆದುಕೊಂಡಿಲ್ಲ). ಮೋದಿಯವರು ಐಎನ್‌ಎಸ್‌ ವಿರಾಟ್‌ನ ಬಗ್ಗೆ ಮಾತನಾಡುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾಗಳಲ್ಲಿ ನೆಹರೂ ಅವರ ಚಿತ್ರಗಳೂ ಹರಿದಾಡಲಾರಂಭಿಸಿದವು. ಪಂಡಿತ್‌ ನೆಹರೂ ಅವರು ಕೆಲವೊಮ್ಮೆ ತಮ್ಮ ಮಗಳು ಮತ್ತು ಮೊಮ್ಮಕ್ಕಳನ್ನೂ ಸಹ ನೌಕಾಪಡೆಯ ಯುದ್ಧ ಹಡಗುಗಳಲ್ಲಿ ತಿರುಗಾಡಿಸಿದ್ದರು. ನನಗೆ ಕೆಲವರು ಎರಡು ಲೇಖನಗಳನ್ನು ಕಳುಹಿಸಿದ್ದಾರೆ, ಅದರಲ್ಲಿ ಒಂದರಲ್ಲಿ ಐಎನ್‌ಎಸ್‌ ವಿರಾಟ್‌ನ ವರ್ಣನೆಯಿದೆ ಮತ್ತು ಈ ರೀತಿಯ ಯುದ್ಧನೌಕೆಗಳಲ್ಲಿ ವಿದೇಶಿಯರ ಮೇಲೆ ಪ್ರತಿಬಂಧವಿದೆ ಎಂದೂ ಅದರಲ್ಲಿ ಹೇಳಲಾಗಿದೆ. ಆದರೆ ರಾಜೀವ್‌ ಗಾಂಧಿಯವರ ಅತಿಥಿಗಳಲ್ಲಿ ಸೋನಿಯಾರ ಇಟಾಲಿಯನ್‌ ಸಂಬಂಧಿಕರೂ ಇದ್ದರು ಮತ್ತು ಅವರು ಲಕ್ಷದ್ವೀಪದಲ್ಲಿ ರಜೆ ಕಳೆಯಲು ಹೋಗಿದ್ದರು. ಅಂದಿನ ಇನ್ನೊಂದು ಲೇಖನದಲ್ಲಿ, ರಜೆ/ಪ್ರವಾಸದ ಖರ್ಚು ವೆಚ್ಚಗಳ ಬಗ್ಗೆಯೂ ವಿಸ್ತಾರವಾಗಿ ಬರೆಯಲಾಗಿದೆ.

ಇವನ್ನೆಲ್ಲ ಓದಿ ನಾನು ಹೈರಾಣಾಗಿಬಿಟ್ಟೆ. ಆದರೆ ಇದೆಲ್ಲ ತಿಳಿದಿದ್ದರೂ ನನ್ನ ಬಹುತೇಕ ಪತ್ರಕರ್ತ ಬಂಧುಗಳಿಗೆ ಈಗಲೂ ಗುಲ ಾಮಗಿರಿಯ ಭಾವನೆಯಿದೆ ಅಥವಾ ನರೇಂದ್ರ ಮೋದಿಯವರ ಬಗ್ಗೆ ದ್ವೇಷವಿದೆ. ಸತ್ಯವೇನೆಂದರೆ ಗಾಂಧಿ ಪರಿವಾರದ ಈ ಊಳಿಗ ಮಾನ್ಯ ಗುಣದ ಬಗ್ಗೆ ಬರೆದವರ ಸಂಖ್ಯೆ ತುಂಬಾ ಕಡಿಮೆ. ಇದರ ಬದಲಾಗಿ, ಬಹಳಷ್ಟು ಪತ್ರಕರ್ತರು ‘ಮೋದಿ ತಮ್ಮ ತಪ್ಪುಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಗಾಂಧಿ ಪರಿವಾರದ ಮೇಲೆ ಕೆಸರೆರಚುತ್ತಿದ್ದಾರೆ’ ಎಂದು ಬರೆದಿದ್ದಾರೆ!

ಮೋದಿ ತಮ್ಮ ಸರ್ಕಾರದ ಕೊರತೆಗಳನ್ನು ಮುಚ್ಚಿಡಲು ಈ ವಿಷಯವನ್ನು ಕೈಗೆತ್ತಿಕೊಂಡರು ಎಂಬ ವಾದವನ್ನು ಒಂದು ಕ್ಷಣ ಒಪ್ಪಿಕೊಳ್ಳೋಣ. ಆದರೆ, ಇಂಥ ವಿಷಯಗಳ ಬಗ್ಗೆ ಹೆಚ್ಚು ಚರ್ಚೆ ಮಾಡಿದಷ್ಟೂ ಒಳ್ಳೆಯದಲ್ಲವೇನು? ಏಕೆಂದರೆ ಇದರಿಂದಾಗಿ ಪ್ರಜಾ ಪ್ರಭುತ್ವ ಬಲಿಷ್ಠವಾಗುತ್ತದೆ ಎನ್ನುವ ವಾದವನ್ನೂ ನಾವು ಸ್ವೀಕರಿಸ ಬೇಕಲ್ಲವೇ? ನನ್ನ ಪ್ರಕಾರ, ಯಾವಾಗೆಲ್ಲ ಲೋಕ ತಂತ್ರದಲ್ಲಿ ಫ್ಯೂಡಲಿ ಸಂನ ವಾಸನೆ ಬರಲಾರಂಭಿಸುತ್ತದೋ, ಆಗೆಲ್ಲ ಅದರತ್ತ ದೃಷ್ಟಿ ಹರಿಸು ವುದು ಒಳ್ಳೆಯದು. ನಾನು ಹೀಗೆ ಹೇಳುತ್ತಿರುವುದಕ್ಕೂ ಕಾರಣವಿದೆ. ಏಕೆಂದರೆ, ಆಗೆಲ್ಲ ನಾನು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ದಬ್ಟಾಳಿ ಕೆಯನ್ನು ನೋಡಿದ್ದೇನೆ. ನಮ್ಮ ಪ್ರಜಾಪ್ರಭುತ್ವ ಈಗಲೂ ಎಷ್ಟೊಂದು ದುರ್ಬಲವಾಗಿದೆಯೆಂದರೆ, 5 ವರ್ಷದ ಹಿಂದೆ ದೇಶದ ಪ್ರಧಾನ ಮಂತ್ರಿಗಳು ಸೋನಿಯಾ ಗಾಂಧಿಯವರ ಮುಂದೆ ತಲೆಬಾ ಗುತ್ತಿ ದ್ದರು. ಏಕೆಂದರೆ ಸೋನಿಯಾ ರಾಜಪರಿವಾರದ ಸೊಸೆಯ ಲ್ಲವೇ? ಈ ರಾಜಪರಿವಾರವು 1947ರಿಂದ ದೇಶವನ್ನು ತಮ್ಮ ಜಹಗೀರು ಎಂದು ಭಾವಿಸಿದೆ.

ಈ ರಾಜಪರಿವಾರದ ವಾರಸುದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಮುಖ್ಯ ಎದುರಾಳಿಯಾಗಿದ್ದಾರೆ. ರಾಹುಲ್ ಗಾಂಧಿಯವರಲ್ಲಿ ಎಷ್ಟು ಅಹಂಕಾರವಿದೆಯೆಂದರೆ, ಅವರು ತಿಂಗಳುಗಳಿಂದ ‘ಪ್ರಧಾನಮಂತ್ರಿ ಚೋರ್‌ ಹೈ’ ಎನ್ನುತ್ತಾ ಬಂದಿದ್ದಾರೆ. ಯಾವಾಗ ಮೋದಿ ‘ನಿಮ್ಮ ಅಪ್ಪ ಭ್ರಷ್ಟಾಚಾರಿ ನಂಬರ್‌ 1’ ಎಂದು ಎದುರೇಟು ಕೊಟ್ಟರೋ, ಆಗ ದೊಡ್ಡ ಗದ್ದಲವೆದ್ದುಬಿಟ್ಟಿತು. ಹೀಗೇಕೆ ಆಗುತ್ತಿದೆ ಎಂದು ನಾವು ಪ್ರಶ್ನಿಸಲೇಬೇಕಲ್ಲವೇ?

(ಕೃಪೆ: ಅಮರ್‌ ಉಜಾಲಾ)

•ತವ್ಲೀನ್‌ ಸಿಂಗ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ