Udayavni Special

ಆರ್ಥಿಕ ಸೂಪರ್‌ ಪವರ್‌ ಆಗಲು ಇರುವ ಅಡ್ಡಿಗಳೇನು?

ಪಾಕಿಸ್ತಾನಕ್ಕೆ ತನ್ನ ಸೋಲಿಗಿಂತಲೂ ಭಾರತದ ಯಶಸ್ಸು ಹೆಚ್ಚು ಕಳವಳ ಹುಟ್ಟಿಸುತ್ತದೆ

Team Udayavani, Aug 20, 2019, 5:55 AM IST

w-47

ರ್ಷಗಳ ಹಿಂದೆ, ಅಂದರೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತುಸು ಉತ್ತಮವಾಗಿದ್ದ ವೇಳೆಯಲ್ಲಿ ಭಾರತೀಯ ಕ್ರಿಕೆಟ್ ತಂಡ ಪಾಕಿಸ್ತಾನದ ಪ್ರವಾಸ ಕೈಗೊಂಡಿತ್ತು. ಲಾಹೋರ್‌ನಲ್ಲಿ ಪಂದ್ಯವಿದ್ದ ದಿನ ಅನೇಕ ಭಾರತೀಯ ಕ್ರೀಡಾಭಿಮಾನಿಗಳು ನಮ್ಮ ತಂಡಕ್ಕೆ ಬೆಂಬಲ ಕೊಡಲು ಲಾಹೋರ್‌ಗೆ ತೆರಳಿದರು. ಆ ಸಮಯದಲ್ಲಿ ಭಾರತದ ಆರ್ಥಿಕತೆಯಂತೂ ದಾಪುಗಾಲಿಡುತ್ತಾ ಸಾಗಿತ್ತು. ಹೀಗಾಗಿ, ಭಾರತೀಯ ಕ್ರೀಡಾಭಿಮಾನಿಗಳಲ್ಲಿ ಅನೇಕ ಸಿರಿವಂತ ಉದ್ಯಮಿಗಳೂ ಇದ್ದರು. ಇವರಲ್ಲಿ ಅನೇಕರು ತಮ್ಮ ಖಾಸಗಿ ವಿಮಾನಗಳಲ್ಲಿ ಲಾಹೋರ್‌ಗೆ ತೆರಳಿದ್ದರು! ಈ ಘಟನೆಯ ಬಗ್ಗೆ ಅಂದು ನನ್ನ ಪಾಕಿಸ್ತಾನ ಸ್ನೇಹಿತೆಯೊಬ್ಬಳು ತನ್ನ ಅನುಭವ ಹಂಚಿಕೊಂಡಿದ್ದಳು. ಆ ಖಾಸಗಿ ವಿಮಾನಗಳು ತಮ್ಮ ನೆಲದಲ್ಲಿ ಇಳಿಯುತ್ತಿದ್ದಂತೆಯೇ, ಮೊದಲ ಬಾರಿಗೆ ಪಾಕಿಸ್ತಾನಿ ಅಧಿಕಾರ ಶಾಹಿಗೆ, ರಾಜಕಾರಣಿಗಳಿಗೆ ಮತ್ತು ಜನರಿಗೆ, ಭಾರತದ ಆರ್ಥಿಕತೆ ತಮಗಿಂತ ಎಷ್ಟು ಮುಂದೆ ಸಾಗಿಬಿಟ್ಟಿದೆ ಎಂದು ಅರಿವಾಯಿತಂತೆ. ಅಲ್ಲಿಯವರೆಗೂ ಕೇವಲ ಆರಬ್‌ನ ಕೋಟ್ಯಧಿಪತಿಗಳನ್ನು ಕಂಡಿದ್ದ ತಮಗೆ ಭಾರತದಿಂದ ಬಂದ ಸಿರಿವಂತರನ್ನು ಕಂಡು ಖುಷಿಯಾಯಿತು ಎಂದು ಆಕೆ ಹೇಳಿ ದಳಾದರೂ, ಆಕೆಯ ಧ್ವನಿಯಿಂದ ನನಗೆ ಒಂದು ವಿಷಯ ಸ್ಪಷ್ಟವಾಗಿ ಅರ್ಥವಾಗಿತ್ತು, ಬಹುತೇಕ ಪಾಕಿಸ್ತಾನಿಯರಿಗೆ ಇದರಿಂದ ಖುಷಿಯೇನೂ ಆಗಿರಲಿಲ್ಲ!

ನಾನು ಪಾಕಿಸ್ತಾನದ ಬಗ್ಗೆ ಚೆನ್ನಾಗಿ ತಿಳಿದುಕೊಂಡವಳಾದ್ದರಿಂದ ಈ ಮಾತು ಹೇಳುತ್ತಿದ್ದೇನೆ. ಪಾಕಿಸ್ತಾನಿಯರಿಗೆ ತಮ್ಮ ದೇಶದ ವೈಫ‌ಲ್ಯಕ್ಕಿಂತಲೂ, ಭಾರತದ ಯಶಸ್ಸಿನ ಸಾಧ್ಯತೆಯು ಹೆಚ್ಚು ಕಳವಳಕ್ಕೆ ದೂಡುತ್ತದೆ. ಇಮ್ರಾನ್‌ ಖಾನ್‌ ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಫ್ಯಾಸಿ, ಹಿಂದೂ ಸರ್ವಾಧಿಕಾರಿ ಮೋದಿ ಸರ್ಕಾರ ಎಂಬೆಲ್ಲ ಪದಗಳನ್ನು ಬಳಸಿರುವುದನ್ನು ನೋಡಿದಾಗ, ಪಾಕಿಸ್ತಾನ ಕಾಶ್ಮೀರದ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿದೆ ಎಂದೆನಿಸದೇ ಇರದು. ಆದರೆ ಇದು ಸತ್ಯವಲ್ಲ. ಪಾಕ್‌ನ ಮಿಲಿಟರಿ ನಾಯಕರು ಮತ್ತು ಜಿಹಾದಿಗಳು ಹೇಳಿಕೊಳ್ಳುವಂತೆ, ಕಾಶ್ಮೀರವೆಂದಿಗೂ ಎರಡೂ ರಾಷ್ಟ್ರಗಳ ನಡುವಿನ ಬಿಕ್ಕಟ್ಟಿನ ಮೂಲ ಆಗಿಯೇ ಇಲ್ಲ! ಮೂಲ ಸಮಸ್ಯೆ ಇರುವುದು, ಭಾರತವೇನಾದರೂ ಬೃಹತ್‌ ಆರ್ಥಿಕ ಸೂಪರ್‌ ಪವರ್‌ ಆಗಿ, ಅತ್ತ ಪಾಕಿಸ್ತಾನ ದಿವಾಳಿಯೆದ್ದ ಅಣ್ವಸ್ತ ರಾಷ್ಟ್ರವಾಗಿಯೇ ಉಳಿದುಹೋದರೆ ಹೇಗೆ ಎಂಬ ಭಯದಲ್ಲಿ. ಏಕೆಂದರೆ ಭಾರತವನ್ನು ವಿಭಜಿಸಿ ಅತ್ಯಂತ ‘ಪವಿತ್ರ’ ರಾಷ್ಟ್ರವನ್ನು ಸೃಷ್ಟಿಸುತ್ತೇವೆ ಎಂದು ಅವರ ಪೂರ್ವಿಕರು ಮಾಡಿದ ಕೆಲಸಗಳೆಲ್ಲ ಅರ್ಥಹೀನವೆನಿಸಿಬಿಡುತ್ತದಲ್ಲವೇ?

ಭಾರತ ಈಗಾಗಲೇ ಆರ್ಥಿಕವಾಗಿ ಸದೃಢವಾಗಿದೆ. ಆದರೆ ನಾವು ಸಂಪತ್ತನ್ನು ಸೃಷ್ಟಿಸದೇ, ಸಂಪತ್ತಿನ ಹಂಚಿಕೆ ಮಾಡುವ ಆರ್ಥಿಕ ನೀತಿಗೆ ಹಿಂದಿರುಗದೇ ಹೋಗಿರುತ್ತಿದ್ದರೆ, ಮತ್ತಷ್ಟು ಶಕ್ತಿಶಾಲಿ ವಿತ್ತ ವ್ಯವಸ್ಥೆಯಾಗಿರುತ್ತಿದ್ದೆವು.

ಈ ಕಾರಣಕ್ಕಾಗಿಯೇ ನಮ್ಮ ಪ್ರಧಾನಿ ಮೋದಿಯವರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ನನಗೆ ಅತಿ ಮುಖ್ಯವಾಗಿ ಕಂಡ ಅಂಶವೆಂದರೆ, ಅವರು ಭಾರತದ ಸಂಪತ್ತಿನ ‘ಸೃಷ್ಟಿಕರ್ತರಿಗೆ’ ಗೌರವ ಸಲ್ಲಿಸಿದ್ದು. ಉದ್ಯಮಿಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಮೋದಿ ಕರೆದರು. ಅವರ ಮಾತು ಸತ್ಯ. ಆದರೆ ಸಂಪತ್ತಿನ ಸೃಷ್ಟಿಗಿಂತಲೂ ಕಪ್ಪುಹಣದ ಹುಡುಕಾಟಕ್ಕೇ ಹೆಚ್ಚು ಆದ್ಯತೆ ಕೊಟ್ಟಿದ್ದರಿಂದಾಗಿ ತೆರಿಗೆ ಇನ್ಸ್ಪೆಕ್ಟರ್‌ಗಳು ದೇಶದ ಉದ್ಯಮಿಗಳನ್ನೆಲ್ಲ ಅಪರಾಧಿಗಳಂತೆ ನೋಡುತ್ತಿದ್ದಾರಲ್ಲ, ಇದಕ್ಕೇನೆನ್ನುವುದು?

ಯಾಕೆ ದೇಶದ ಆರ್ಥಿಕತೆಯು ಕುಂಟುತ್ತಾ ಸಾಗಿದೆ ಎನ್ನುವುದನ್ನು ಪ್ರಧಾನಮಂತ್ರಿಗಳು ಗಮನಿಸಿದ್ದಾರೆ ಎಂದೆನಿ ಸುತ್ತಿದೆ. ಎರಡನೇ ಅವಧಿಯಲ್ಲಿ ಗೆದ್ದ ಬಳಿಕ ಅವರು ನೀಡಿದ ಮೊದಲ ಸಂದರ್ಶನವೇ ಎಕನಾಮಿಕ್‌ ಟೈಮ್ಸ್‌ ಎಂಬ ವಿತ್ತ ಪತ್ರಿಕೆಗೆ. ಅದರಲ್ಲಿ ಅವರು, ಭಾರತೀಯ ಮಾರುಕಟ್ಟೆಯ ದೀರ್ಘ‌ಕಾಲಿಕ ಸಾಮರ್ಥ್ಯದ ಮೇಲೆ ನಂಬಿಕೆ ಬೆಳೆಯುವಂತೆ ಉದ್ಯಮಿಗಳನ್ನು ಪ್ರೋತ್ಸಾಹಿಸಲು ನಾನು ಬಯಸುತ್ತೇನೆ. ಪ್ರಾಮಾಣಿಕ ಉದ್ಯಮಗಳಿಗೆ ನಮ್ಮ ಕಡೆಯಿಂದ ಎಲ್ಲಾ ರೀತಿಯ ಬೆಂಬಲವನ್ನು ಕೊಡುವ ವಿಷಯದಲ್ಲಿ ನಾನು ಖಾತ್ರಿ ಕೊಡುತ್ತೇನೆ ಎಂದು ಹೇಳಿದ್ದಾರೆ ಮೋದಿ. ಆದರೆ ಈ ಬಗ್ಗೆ ತಾವು ಯೋಚಿಸುವುದಾಗಿಯೂ ಮೋದಿ ಕೊನೆಯಲ್ಲಿ ಹೇಳಿದ್ದಾರೆ. ಉದ್ಯಮಿಗಳಿಗೆ ಪ್ರಾಮಾಣಿಕ-ಅಪ್ರಾಮಾಣಿಕ ಎಂಬ ಮೊಹರು ಒತ್ತುವ ಅಧಿಕಾರಿಗಳಿದ್ದಾರಲ್ಲ, ಇವರಲ್ಲಿ ಅನೇಕರು ಸ್ವತಃ ಅಪ್ರಾಮಾಣಿಕರು, ಸುಲಿಗೆಕೋರರು, ಮತ್ತು ಉದ್ಯಮಿಗಳ ಪೀಡಕರಾಗಿರುತ್ತಾರೆ.

ಈ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಉದ್ಯಮಿಗಳನ್ನು ಸಾರ್ವಜನಿಕವಾಗಿ ಅಪಮಾನ ಮಾಡುವ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಈ ಅಧಿಕಾರಿ ವರ್ಗವು ಕ್ಷಣಿಕ ಜನಪ್ರಿಯತೆ ಗಾಗಿ, 15 ನಿಮಿಷದ ಖ್ಯಾತಿಗಾಗಿ..ಜನರನ್ನು ವಿಮಾನ ನಿಲ್ದಾಣ ಗಳಲ್ಲಿ ಅರೆÓr್ ಮಾಡುವುದೋ ಅಥವಾ ಟಿ.ವಿ. ರಿಪೋರ್ಟರ್‌ಗಳಿಗೆ ತಮ್ಮ ಎಲ್ಲಾ ಚಲನವಲನ ಕಾಣಿಸುವಂಥ ರೀತಿಯಲ್ಲಿ ತೆರಿಗೆ ದಾಳಿ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಈ ಅಧಿಕಾರಿಗಳು ನಮ್ಮ ವ್ಯವಸ್ಥೆಯಲ್ಲಿ ಏಕೆ ಕಪ್ಪು ಹಣ ಅಸ್ತಿತ್ವದಲ್ಲಿದೆ ಎನ್ನುವುದನ್ನೇ ತನಿಖೆ ಮಾಡುವುದಿಲ್ಲ. ಆ ವಿಚಾರದಲ್ಲಿ ಅವರು ತನಿಖೆಗೆ ಮಾಡಿದರೆಂದರೆ, ಸಮಸ್ಯೆ ಮೂಲವಿರುವುದು ದೇಶದ ಕೆಟ್ಟ ಕಾನೂನುಗಳಲ್ಲಿ, ಉಸಿರುಗಟ್ಟಿಸುವ ರೆಡ್‌ ಟೇಪ್‌ಗ್ಳಲ್ಲಿ ಮತ್ತು ಕಿರಿಕಿರಿ ಉಂಟು ಮಾಡುವ ನಿಯಮಗಳಲ್ಲಿ ಎನ್ನುವುದು ಅವರಿಗೆ ಅರ್ಥವಾಗುತ್ತದೆ. ಈಗಂತೂ ಪ್ರಧಾನಮಂತ್ರಿಯವರು ತಮಗೆ ಭಾರತದ ಸಂಪತ್ತಿನ ಸೃಷ್ಟಿಕರ್ತರ ಮೇಲೆ ಗೌರವವಿದೆ ಎಂದು ಸ್ಪಷ್ಟಪಡಿಸಿ ದ್ದಾರಾದ್ದರಿಂದ, ಅವರು ಮೇಲ್ಕಾಣಿಸಿದ ವಿಚಾರಗಳನ್ನು ಪರೀಕ್ಷಿಸುವುದಕ್ಕಾಗಿ ತಮ್ಮದೇ ಕಚೇರಿಯಲ್ಲೇ ಒಂದು ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಲು ಇದು ಸರಿಯಾದ ಸಮಯವಾಗಿದೆ.

ವ್ಯಾಪಾರ ಮಾಡುವ ವ್ಯಾಪಾರವನ್ನು ವ್ಯಾಪಾರಸ್ಥರಿಗೇ ಬಿಟ್ಟುಕೊಟ್ಟರೆ, ಭಾರತಕ್ಕೆ ಪ್ರಪಂಚದ ಅತಿ ಶ್ರೀಮಂತ ರಾಷ್ಟ್ರವಾಗಬಲ್ಲದು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದಾಗ, ಅವರು ಖಾಸಗಿ ರಂಗಕ್ಕೆ ಬಾಗಿಲು ತೆರೆದರು. ಆ ಆಹ್ಲಾದಕರ ಸಮಯದಲ್ಲೇ ಭಾರತದ ಸಿರಿವಂತರ ಖಾಸಗಿ ವಿಮಾನಗಳು ಲಾಹೋರ್‌ನ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಮಾಡಿ, ಪಾಕಿಸ್ತಾನಿಯರೆಲ್ಲರೂ ಈ ಭಾರತದ ಕಾಫಿರರು ಏನು ಮಾಡುತ್ತಿದ್ದಾರಪ್ಪ ಎಂದು ತಲೆಕೆಡಿಸಿ ಕೊಳ್ಳುವಂತೆ ಮಾಡಿದ್ದು.

ನಾವು ಸಮೃದ್ಧತೆಯ ಹುಡುಕಾಟದಲ್ಲಿದ್ದೇವೆ ಎಂದು ಯಾವಾಗ ಅವರಿಗೆ ತಿಳಿಯಿತೋ, ಅದೇ ಸಮಯದಲ್ಲೇ ಆ ದೇಶದಲ್ಲಿ 26/11 ಮುಂಬೈ ದಾಳಿಯ ತಂತ್ರ ರಚನೆ ಆರಂಭ ವಾಯಿತು. ಹೀಗಾಗಿ, ದಾಳಿ ನಡೆದದ್ದು ದೇಶದ ವಾಣಿಜ್ಯ ನಗರಿಯ ಮೇಲೆ ಎನ್ನುವುದು ಕಾಕತಾಳೀಯವೇನೂ ಅಲ್ಲ. ಹಫೀಜ್‌ ಸಯೀದ್‌ ತನ್ನ ಉಗ್ರಪಡೆಯನ್ನು ಓಬೇರಾಯ್‌ ಮತ್ತು ತಾಜ್‌ನಂಥ ಹೋಟೆಲ್ಗಳ ಮೇಲೆ ದಾಳಿ ಮಾಡಲು ಕಳುಹಿಸಿದ್ದೂ ಕಾಕತಾಳೀಯವಲ್ಲ , ವಿದೇಶಿ ಪ್ರವಾಸಿಗರ ಮೇಲೆ ದಾಳಿ ಮಾಡಬೇಕು ಎಂದು ಉಗ್ರರಿಗೆ ಸೂಚನೆ ನೀಡಲಾಗಿದ್ದೂ ಕಾಕತಾಳೀಯವಲ್ಲ.

ಭಾರತೀಯ ಆರ್ಥಿಕತೆಯು ಜಡ ಸಮಾಜವಾದಿ ವ್ಯವಸ್ಥೆ ಯಡಿಯಲ್ಲಿ ಲೈಸೆನ್ಸ್ ರಾಜ್‌ನ ಅಂತ್ಯದವರೆಗೂ ಮಹಾನ್‌ ಕುಸಿತ ಕಂಡಿತ್ತು. ಆ ಸಮಯದಲ್ಲಿ ಪಾಕಿಸ್ತಾನವೇ ನಮ್ಮ ಮುಂದಿತ್ತು. ಅಂಥ ದುರಿತ ಕಾಲಕ್ಕೆ ಮತ್ತೆ ಭಾರತದ ಆರ್ಥಿಕತೆಯು ಹಿಂದಿರುಗಲಿ ಎಂದೇ ಪಾಕಿಸ್ತಾನದ ಮಿಲಿಟರಿ ಮಂದಿ ಆಶಿಸುತ್ತಾರೆ. ನನಗಿನ್ನೂ ನೆನಪಿದೆ, 1980ರಲ್ಲಿ ನಾನು ಮೊದಲ ಬಾರಿಗೆ ಲಾಹೋರ್‌ಗೆ ತೆರಳಿದ್ದೆ. ದೆಹಲಿಗೆ ಹೋಲಿಸಿದರೆ ಲಾಹೋರ್‌ ಆ ಪಾಟಿ ಸಮೃದ್ಧವಾಗಿ ಇದ್ದದ್ದನ್ನು ಕಂಡು ನನಗೆ ಆಘಾತವಾಗಿತ್ತು. ಆ ಸಮಾಜವಾದಿ ದಿನಗಳಲ್ಲಿ, ನಮ್ಮ ದೆಹಲಿಯು ರೈಸೀನಾ ಹಿಲ್ಗಳ ಕಾಲಡಿಯಿದ್ದ ಭವನಗಳ ಮೂಲಕವೇ ಉಲ್ಲೇಖೀಸಲ್ಪಡುತ್ತಿತ್ತು. ಆ ಭವನಗಳ ದುರ್ವಾಸನೆ, ಅಸಹ್ಯ ಬರಿಸುವ ಕಾರಿಡಾರ್‌ಗಳು ಮತ್ತು ಭಾರತದಿಂದ ಹೂಡಿಕೆದಾರರೆಲ್ಲ ದೂರ ಓಡುವಂತೆ ಮಾಡಲು ಪಣ ತೊಟ್ಟಂತಿದ್ದ ಅಧಿಕಾರಿಗಳೇ ದೆಹಲಿಯ ಗುರುತಾಗಿ ಬಿಟ್ಟಿದ್ದವು. ಅವು ಅಚ್ಛೇ ದಿನಕ್ಕೆ ಸಂಪೂರ್ಣ ತದ್ವಿರುದ್ಧವಾಗಿದ್ದ ದಿನಗಳಾಗಿದ್ದವು.

(ಲೇಖನ ಕೃಪೆ-ದ ಇಂಡಿಯನ್‌ ಎಕ್ಸ್‌ಪ್ರೆಸ್‌)

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಾಲಿನ್ಯ ನಿಯಂತ್ರಣ ಮಂಡಳಿ ಡಿಜಿಟಲ್ ಅಭಿಯಾನಕ್ಕೆ ಬಿಎಸ್ ವೈ ಮೆಚ್ಚುಗೆ

ಮಾಲಿನ್ಯ ನಿಯಂತ್ರಣ ಮಂಡಳಿ ಡಿಜಿಟಲ್ ಅಭಿಯಾನಕ್ಕೆ ಬಿಎಸ್ ವೈ ಮೆಚ್ಚುಗೆ

ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಲಾರಿ: ಅಪಾರ ನಷ್ಟ

ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಲಾರಿ: ಅಪಾರ ನಷ್ಟ

ಕೇರಳ ಗರ್ಭಿಣಿ ಆನೆ ಹತ್ಯೆ ಪ್ರಕರಣ: ಓರ್ವನ ಬಂಧನ

ಕೇರಳ ಗರ್ಭಿಣಿ ಆನೆ ಹತ್ಯೆ ಪ್ರಕರಣ: ಓರ್ವನ ಬಂಧನ

ಹಂಪಿಯಲ್ಲಿ 4.0 ತೀವ್ರತೆಯ ಭೂಕಂಪ..? ಜಿಲ್ಲಾಧಿಕಾರಿಗಳ ಸ್ಪಷ್ಟನೆ

ಹಂಪಿಯಲ್ಲಿ 4.0 ತೀವ್ರತೆಯ ಭೂಕಂಪ..? ಜಿಲ್ಲಾಧಿಕಾರಿಗಳ ಸ್ಪಷ್ಟನೆ

ಉಡುಪಿ ದೊಡ್ಡಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಸೀಲ್ ಡೌನ್

ಉಡುಪಿ ದೊಡ್ಡಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಸೀಲ್ ಡೌನ್

ಸಿದ್ದು ಸ್ವಾರ್ಥ ರಾಜಕಾರಣದಿಂದ 17 ಜನ ಶಾಸಕರು ಹೊರ ಬಂದಿದ್ದು: ಬಿ ಸಿ ಪಾಟೀಲ್

ಸಿದ್ದು ಸ್ವಾರ್ಥ ರಾಜಕಾರಣದಿಂದ 17 ಜನ ಶಾಸಕರು ಹೊರ ಬಂದಿದ್ದು: ಬಿ ಸಿ ಪಾಟೀಲ್

ಅತ್ಯುತ್ತಮ ನಾಯಕರೆಂದರೆ ಹೀಗೆ.. ಗಂಭೀರ್ ನಾಯಕತ್ವವನ್ನು ನೆನೆದ ಉತ್ತಪ್ಪ

ಅತ್ಯುತ್ತಮ ನಾಯಕರೆಂದರೆ ಹೀಗೆ.. ಗಂಭೀರ್ ನಾಯಕತ್ವವನ್ನು ನೆನೆದ ಉತ್ತಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾಗವತರಿಗೆ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿದ್ದ ಕಾಳಿಂಗ ನಾವಡರು ಅದ್ಭುತ ಸ್ನೇಹಜೀವಿ

ಭಾಗವತರಿಗೆ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿದ್ದ ಕಾಳಿಂಗ ನಾವಡರು ಅದ್ಭುತ ಸ್ನೇಹಜೀವಿ

ಕಾಳಿಂಗ ನಾವಡರು ಹೊಸತನದ ಹರಿಕಾರ, ಕಿರಿಯ ವಯಸ್ಸಿನಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿದ್ರು

ಕಾಳಿಂಗ ನಾವಡರು ಹೊಸತನದ ಹರಿಕಾರ, ಕಿರಿಯ ವಯಸ್ಸಿನಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿದ್ರು

40 ವರ್ಷದ ಹಿಂದಿನ ಕರಾಳ ನೆನಪು; ಭೀಕರ ರಸ್ತೆ ಅಪಘಾತದಲ್ಲಿ ಬದುಕಿ ಉಳಿದ್ದೇವು

40 ವರ್ಷದ ಹಿಂದಿನ ಕರಾಳ ನೆನಪು; ಭೀಕರ ರಸ್ತೆ ಅಪಘಾತದಲ್ಲಿ ಬದುಕಿದ್ದೇ ಪವಾಡ!

ಕೋವಿಡ್ ಸುತ್ತಮುತ್ತ: ವೈರಸ್ ಭೀತಿಯ ನಡುವೆಯೇ ಬದಲಾಗಲಿದೆ ಬದುಕಿನ ರೀತಿ

ಕೋವಿಡ್ ಸುತ್ತಮುತ್ತ: ವೈರಸ್ ಭೀತಿಯ ನಡುವೆಯೇ ಬದಲಾಗಲಿದೆ ಬದುಕಿನ ರೀತಿ

ಲಾಕ್ ಡೌನ್: ಪ್ರಕೃತಿ ನಿಯಮ ಪಾಲಿಸುವ ಹೂಗಿಡ ಎಂದಿನಂತೆ ಸಂಭ್ರಮದಿಂದ ಹೂ ಬಿಡುತ್ತಿದೆ…

ಲಾಕ್ ಡೌನ್: ಪ್ರಕೃತಿ ನಿಯಮ ಪಾಲಿಸುವ ಹೂಗಿಡ ಎಂದಿನಂತೆ ಸಂಭ್ರಮದಿಂದ ಹೂ ಬಿಡುತ್ತಿದೆ…

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

ಮಾಲಿನ್ಯ ನಿಯಂತ್ರಣ ಮಂಡಳಿ ಡಿಜಿಟಲ್ ಅಭಿಯಾನಕ್ಕೆ ಬಿಎಸ್ ವೈ ಮೆಚ್ಚುಗೆ

ಮಾಲಿನ್ಯ ನಿಯಂತ್ರಣ ಮಂಡಳಿ ಡಿಜಿಟಲ್ ಅಭಿಯಾನಕ್ಕೆ ಬಿಎಸ್ ವೈ ಮೆಚ್ಚುಗೆ

5-June-11

ಮುಂದುವರಿದ ಮಳೆ ಅಬ್ಬರ

5-June-10

ಬಿತ್ತನೆ ಬೀಜಗಳ ಕೊರತೆಯಿಲ್ಲ: ಮಲ್ಲಿಕಾರ್ಜುನ

“ಸಂರಕ್ಷಣೆ ಕೇವಲ ಮಾತಿಗೆ ಸೀಮಿತವಾಗಿರದಿರಲಿ’

“ಸಂರಕ್ಷಣೆ ಕೇವಲ ಮಾತಿಗೆ ಸೀಮಿತವಾಗಿರದಿರಲಿ’

5-June-09

ಬೀದರ: 4021 ಮಂದಿ ವರದಿ ಬಾಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.