ಪಿಯುಸಿ ಬೇಗ ಆರಂಭಿಸಿ ಸಾಧಿಸಿದ್ದೇನು?


Team Udayavani, May 20, 2018, 6:00 AM IST

o-2.jpg

ಮೇ ತಿಂಗಳು ಅಪ್ಪಟ ಉರಿ ಬಿಸಿಲಿನ ಕಾಲ. ಹಲವು ಕಡೆ ತರಗತಿಗಳ ಒಳಗೆ ಕಿಕ್ಕಿರಿದು ಕುಳಿತುಕೊಳ್ಳುವಂತಹ ಪರಿಸ್ಥಿತಿ ಇದೆ. ನೀರಿನ ಸಮಸ್ಯೆಯೂ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯೂ ಇದೆ. ಈ ಬೇಗೆಯ ನಡುವೆ ಪಾಠ ಪ್ರವಚನಗಳನ್ನು ಕೇಳುವುದು ಎಷ್ಟು ಕಷ್ಟ ಎನ್ನುವುದನ್ನು ಕೂಡ ಆಲೋಚಿಸಬೇಕಿಲ್ಲವೆ? ನೂರು ದಿನ ರಜೆ ಸಿಕ್ಕರೆ ವಿದ್ಯಾರ್ಥಿಗಳು ಕಲಿತದ್ದನ್ನೆಲ್ಲಾ ಮರೆತಿರುತ್ತಾರೆ ಎನ್ನುವ ಸಮರ್ಥನೆ ಯನ್ನು ಪೂರ್ಣವಾಗಿ ಒಪ್ಪಲಾಗದು. 

ಈ ಬಾರಿ ದ್ವಿತೀಯ ಪಿಯುಸಿ ಸೇರಲಿದ್ದ ವಿದ್ಯಾರ್ಥಿನಿಯೊಬ್ಬಳು ಮೇ 2ಕ್ಕೆ ಕಾಲೇಜು ಆರಂಭವಾಗಿದ್ದರೂ ಕೂಡ ಕಾಲೇಜಿಗೆ ಹೋಗುತ್ತಿರಲಿಲ್ಲ. ಮನೆಯ ಬಳಿ ಸಿಕ್ಕಿದ್ದ ಅವಳನ್ನು ಯಾಕಮ್ಮಾ ಕಾಲೇಜಿಗೆ ಹೋಗುತ್ತಿಲ್ಲ ಎಂದು ವಿಚಾರಿಸಿದರೆ ಅಡ್ಮಿಷನ್‌ ಇನ್ನೂ ಆಗಿಲ್ಲ ಸರ್‌ ಅದಕ್ಕೆ ಎಂದಳು. ಏಕೆ ಎಂದರೆ ಹಣಕ್ಕೆ ತೊಂದರೆ ಯಾಗಿದೆ ಸರ್‌ ಎಂದಳು. ಸ್ವಲ್ಪ ದಿನ ರಿಕ್ವೆಸ್ಟ್‌ ಮಾಡಿ ಕೊಂಡು ಕಾಲೇಜಿಗೆ ಹೋಗು ಆಮೇಲೆ ಅದಷ್ಟು ಬೇಗನೇ ಅಡ್ಮಿಷನ್‌ ಮಾಡಿಕೊಳ್ಳಬಹುದು ಎನ್ನುತ್ತಿದ್ದಂತೆ ಅವಳ ಕಣ್ಣುಗಳು ನೀರಾಗಿದ್ದವು. ಇಲ್ಲ ಸರ್‌ ಒಂಥರಾ ಆಗುತ್ತೆ ಅಂದಳು.

ನಿಜ ವಿಚಾರವೆಂದರೆ ಬಡ ಮನೆತನದ ಅವಳು ದ್ವಿತೀಯ ಪಿಯುಸಿ ಹೇಗೂ ಜೂನ್‌ 1ಅಥವಾ ಹೆಚ್ಚೆಂದರೆ ಮೇ 20ರ ಬಳಿಕ ಆರಂಭವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಹೇಗೂ ಮೂರು ತಿಂಗಳ ರಜೆ ಸಿಗುತ್ತದೆ ಎಂದುಕೊಂಡು ಹತ್ತಿರದ ನಗರದ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಆ ಮೂಲಕ ತನ್ನ ಫೀಸನ್ನು ತಾನೇ ಭರಿಸಿ ತನ್ನ ಹೆತ್ತವರ ಸಂಕಷ್ಟವನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶ ಅವಳದಾಗಿತ್ತು. ಆದರೆ ಇದೀಗ ಒಂದು ತಿಂಗಳ ಮೊದಲೇ ಕಾಲೇಜು ಆರಂಭ ಎಂದಿರುವು ದರಿಂದ ಅವಳು ಯೋಚನೆಗೆ ಬಿದ್ದಿದ್ದಾಳೆ. ತಂದೆ ತಾಯಿಯೂ ಹಣ ಹೊಂದಿಸಲು ಕಷ್ಟ ಪಡುತ್ತಿದ್ದಾರೆ. 

ಇದು ಅವಳೊಬ್ಬಳ ಕತೆಯಲ್ಲ. ಇದೇ ರೀತಿ ರಜೆಯಲ್ಲಿ ತಂಪು ಪಾನೀಯ ಘಟಕಗಳು, ಕ್ಯಾಟರಿಂಗ್‌, ಬಟ್ಟೆ ಅಂಗಡಿ, ದಿನಸಿ ಅಂಗಡಿ, ಬೇಕರಿ, ತೋಟ ನೋಡಿಕೊಳ್ಳುವಿಕೆ, ಮಕ್ಕಳ ಪಾಲನೆ ಸೇರಿದಂತೆ ಬೇರೆ ಬೇರೆ ಕೆಲಸಗಳಿಗೆ ಹೋಗಿ ದುಡಿದು ತಮ್ಮ ವಿದ್ಯಾಭ್ಯಾಸದ ಫೀಸ್‌ ಮತ್ತಿತರ ಶುಲ್ಕವನ್ನು ತುಂಬಲು ಅಗತ್ಯವಿರುವ ಹಣವನ್ನು ಸಂಪಾದಿ ಸುವ ಸಾವಿರಾರು ಮಕ್ಕಳು ನಮ್ಮ ನಡುವೆ ಇದ್ದಾರೆ. ದೂರದ ಬೆಂಗಳೂರು ಮೈಸೂರು ಗಳಿಗೂ ಕೂಡಾ ಪಾರ್ಟ್‌ ಟೈಂ ಕೆಲಸಕ್ಕಾಗಿ ಕಮಿಟ್‌ಮೆಂಟ್‌ ಆಧಾರದ ಮೇಲೆ ಸೇರಿಕೊಂಡ ವಿದ್ಯಾರ್ಥಿಗಳೂ ಇದ್ದಾರೆ. ಅವರೆಲ್ಲರಿಗೂ ಈ ಬಾರಿ ದ್ವಿತೀಯ ಪಿಯುಸಿ ತರಗತಿಗಳನ್ನು ಮೇ 2ರಿಂದಲೇ ಆರಂಭ ಮಾಡಿರುವುದು ನುಂಗಲಾರದ ತುತ್ತಾಗಿರುವುದು ಸತ್ಯ. ಎಷ್ಟೋ ಬಡ ವಿದ್ಯಾರ್ಥಿಗಳು ಇದೊಂದು ನಿರ್ಧಾರದಿಂದ ಬಹಳಷ್ಟು ತೊಂದರೆಗೆ ಒಳಗಾಗಿ ದ್ದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹೆತ್ತವರು ಕೂಡಾ ಅವಧಿಗೆ ಮುನ್ನ ತರಗತಿ ಆರಂಭವಾಗಿರುವುದರಿಂದ ಹಣ ಹೊಂದಿಸಲು ಇನ್ನಿಲ್ಲದ ಪರಿಪಾಟಲು ಪಡುತ್ತಿದ್ದಾರೆ. 

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಪ್ರಥಮ ಪಿಯುಸಿಯ ಪರೀಕ್ಷೆಗಳು ಫೆಬ್ರವರಿ 21ಕ್ಕೆ ಮುಗಿದಿದ್ದವು. ವಿದ್ಯಾರ್ಥಿಗಳಿಗೆ ಮೇ 2ರ ತನಕ ಬರೋಬ್ಬರಿ 69 ದಿನಗಳ ರಜೆ ಸಿಕ್ಕಿತ್ತು. ಕೇವಲ ಶೈಕ್ಷಣಿಕ ಬಿಡುವಿನ ದೃಷ್ಟಿಯಿಂದ ನೋಡಿದರೆ ಈ ರಜೆ ನಿಜಕ್ಕೂ ಸಾಕೆನಿಸುವಂಥದ್ದು. ಆದರೆ ಅದೊಂದೇ ಆಯಾಮದಿಂದ ಈ ವಿಚಾರ ವನ್ನು ಪರಿಗಣಿಸುವುದು ಎಷ್ಟು ಸರಿ? ವಿದ್ಯಾರ್ಥಿಗಳ ಅಥವಾ ಅವರ ಹೆತ್ತವರ ಅಭಿಪ್ರಾಯಗಳನ್ನು ಪಡೆಯದೇ ಈ ರೀತಿ ದಿಢೀರ್‌ ಎಂದು ತರಗತಿಗಳನ್ನು ಆರಂಭಿಸಿರುವುದು ಈಗ ಎಷ್ಟರಮಟ್ಟಿಗೆ ಪರಿಣಾಮ ಕಾರಿಯಾಗಿದೆ ಎನ್ನುವುದನ್ನು ಕೂಡಾ ನೋಡಬೇಕಾಗಿದೆ. ಎಷ್ಟು ಕಾಲೇ ಜುಗಳಲ್ಲಿ ತರಗತಿಗಳು ಸಮರ್ಪಕವಾಗಿ ನಡೆಯುತ್ತಿವೆ ಎಂದು ಯಾರಾದರೂ ಗಮನಿಸಿ ದ್ದೀರಾ? ಬಹುತೇಕ ವಿದ್ಯಾರ್ಥಿ ಗಳು ಮತ್ತು ಉಪನ್ಯಾಸಕರು ಮಾನಸಿಕವಾಗಿ ಈ ತರಗತಿಗಳಿಗೆ ಸಿದ್ಧವಿರಲೇ ಇಲ್ಲ ಎಂದ ಮೇಲೆ ಅದರ ಪ್ರಯೋಜನವೇನು? 

ಮೇ ತಿಂಗಳು ಅಪ್ಪಟ ಉರಿ ಬಿಸಿಲಿನ ಕಾಲ. ಹಲವು ಕಡೆ ತರಗತಿಗಳ ಒಳಗೆ ಕಿಕ್ಕಿರಿದು ಕುಳಿತುಕೊಳ್ಳುವಂತಹ ಪರಿಸ್ಥಿತಿ ಇದೆ. ನೀರಿನ ಸಮಸ್ಯೆಯೂ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯೂ ಇದೆ. ಈ ಬೇಗೆಯ ನಡುವೆ ಪಾಠ ಪ್ರವಚನಗಳನ್ನು ಕೇಳುವುದು ಎಷ್ಟು ಕಷ್ಟ ಎನ್ನುವುದನ್ನು ಕೂಡ ಆಲೋಚಿಸಬೇಕಿಲ್ಲವೆ? ನೂರು ದಿನ ರಜೆ ಸಿಕ್ಕರೆ ವಿದ್ಯಾರ್ಥಿಗಳು ಕಲಿತದ್ದನ್ನೆಲ್ಲಾ ಮರೆತಿರುತ್ತಾರೆ ಎನ್ನುವ ಸಮರ್ಥನೆ ಯನ್ನು ಪೂರ್ಣವಾಗಿ ಒಪ್ಪಲಾಗದು. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಮಕ್ಕಳ ಕಲಿಕಾ ಮಟ್ಟ ಎಷ್ಟರ ಮಟ್ಟಿನದು ಎನ್ನುವ ವಾಸ್ತವವನ್ನು ಖುದ್ದಾಗಿ ಅರ್ಥ ಮಾಡಿಕೊಳ್ಳದ ಹೊರತು ನಗರದ ಎಸಿ ರೂಮುಗಳಲ್ಲಿ ಕುಳಿತುಕೊಂಡು ತೆಗೆದುಕೊಳ್ಳುವ ಇಂತಹ ನಿರ್ಧಾರಗಳ ಔಚಿತ್ಯ ಪ್ರಶ್ನಾರ್ಹ. ವಿದ್ಯಾರ್ಥಿ ಗಳ ಬಗೆಗೆ ಕಾಳಜಿ ಪ್ರದರ್ಶಿಸಿಸುವವರು ಮಧ್ಯಂತರ ರಜೆಗಳಲ್ಲಿ ನಿರ್ದಿಷ್ಠ ಸಮುದಾಯದ ವಿದ್ಯಾರ್ಥಿಳಿಗೆ ಮಾತ್ರ ವಿಶೇಷ ತರಗತಿಗಳನ್ನು ನಡೆಸುವ ಅವಶ್ಯಕತೆ ಏನು ಎನ್ನುವುದಕ್ಕೆ ಉತ್ತರಿ ಸಬೇಕಿದೆ. ಸಮಾನತೆ ಬೋಧಿಸಬೇಕಾದ ವಿದ್ಯಾಲಯಗಳಲ್ಲೇ ವಿದ್ಯಾರ್ಥಿಗಳ ನಡುವೆ ಅಂತರವನ್ನು ಸೃಷ್ಟಿಸುವ ಇಂತಹ ಯೋಜನೆಗಳು ಬೇಕೆ? 

ಮೇ ತಿಂಗಳು ಮದುವೆ ಉಪನಯನದಂತಹ ಹತ್ತು ಹಲವು ರೀತಿಯ ಸಮಾರಂಭಗಳ ಕಾಲ. ವಿದ್ಯಾರ್ಥಿಗಳ ಮನೆಯಲ್ಲಿ ಸಮಾರಂಭಗಳು ಇದ್ದಾಗ ಅವರು ಕಾಲೇಜಿಗೆ ಬರುವ ಸಾಧ್ಯತೆ ಗಳು ಅಷ್ಟಕಷ್ಟೆ ಇದ್ದವು. ಎಲ್ಲಾ ಕಾರ್ಯಕ್ರಮಗಳು ಮುಗಿದ ನಂತ ರವೇ ನಾವು ಕಾಲೇಜಿಗೆ ಹೋಗುವುದು, ಹೇಗೂ ಆರಂಭದ ದಿನಗಳಲ್ವಾ ತೊಂದರೆ ಇಲ್ಲ ಎನ್ನುವಂತಹ ಮನೋಭಾವದ ಅನೇಕರು ನಮ್ಮ ನಡುವೆಯೇ ಇದ್ದಾರೆ. ವಿದ್ಯಾಭ್ಯಾಸದ ಗಂಭೀರತೆಯ ಅರಿವಿಲ್ಲದೆ ಮಕ್ಕಳ ಕೋರಿಕೆಗೆ ಮಣಿಯುವ ಹೆತ್ತವರೂ ಇದ್ದಾರೆ. ಹೇಗೂ ಶೇ. 75 ಹಾಜರಾತಿ ಇದ್ದರೆ ಸಾಕಲ್ವಾ ಮುಂದೆ ಎಲ್ಲಾ ತರಗತಿಗಳಿಗೂ ಹಾಜರಾದರೆ ಆಯ್ತು, ಸರಿಯಾಗುತ್ತದೆ ಎಂದು ಕೊಳ್ಳುವ ವಿದ್ಯಾರ್ಥಿಗಳೂ ಇದ್ದಾರೆ.

ಹೀಗೆಂದು ಅವರುಗಳನ್ನು ನಾವು ನಿರ್ಲಕ್ಷಿಸಲಾಗದು. ಉತ್ತಮ ಫ‌ಲಿತಾಂಶಕ್ಕೆ ಅವರ ಕೊಡಗೆಯೂ ಬೇಕಲ್ಲವೆ? ಕೆಲವೊಂದು ವಿಷಯಗಳಲ್ಲಿ ಆರಂಭದ ದಿನಗಳ ಫೌಂಡೇಶನ್‌ ಸರಿಯಾಗಿದ್ದರೆ ಮಾತ್ರ ಉಳಿದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಲು ಸಾಧ್ಯವಾಗುತ್ತದೆ. ಈ ಹೊತ್ತಿಗೂ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪೂರ್ಣ ಪ್ರಮಾಣದ ಹಾಜರಾತಿಯ ಕೊರತೆ ಎದ್ದು ಕಾಣಿಸುತ್ತಿದೆ. ಪರಿಸ್ಥಿತಿ ಹೀಗಿ ರುವುದರಿಂದ ಉಪನ್ಯಾಸಕರು ಕೂಡ ಪಾಠ ಮುಂದುವರಿಸು ವುದೋ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ. ಅಲ್ಲಲ್ಲಿ ಹೆಸರಿಗೆ ಮಾತ್ರ ತರಗತಿಗಳನ್ನು ನಡೆಸಿ ಮನೆಗೆ ಬಿಡುವ ವರದಿಗಳು ಕೇಳಿ ಬರುತ್ತಿವೆ. ಹಾಗಾದರೆ ಪಿಯುಸಿ ಬೇಗ ಆರಂಭಿಸಿ ಸಾಧಿಸಿದ್ದೇನು?

 ಅಂದ ಹಾಗೆ ಕಳೆದ ಬಾರಿ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ನಿರ್ದಿಷ್ಟ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಭಾಷಾ ವಿಷಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಷಯಗಳನ್ನು ಒಂದೇ ಮಾಧ್ಯಮದಲ್ಲಿ ಬರೆಯಬೇಕು ಎಂದು ಹೇಳಿ ವಿದ್ಯಾರ್ಥಿಗಳಲ್ಲಿ ಇನ್ನಿಲ್ಲದ ಗೊಂದಲ, ಹೆದರಿಕೆ ಹುಟ್ಟುಹಾಕಲಾಗಿತ್ತು. ವರ್ಷದ ಕೊನೆಯಲ್ಲಿ ಎರಡರಲ್ಲೂ ಬರೆಯುವ ಅವಕಾಶ ನೀಡಲಾಯಿತು. ಈ ಬಾರಿ ಮಾಧ್ಯಮ ಆಯ್ಕೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಪಿಯು ಮಂಡಳಿಯ ನಿಲುವೇನು ಎನ್ನುವುದನ್ನು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ತಿಳಿಸುವಂತಹ ಕಾರ್ಯ ಆರಂಭದಲ್ಲೇ ಆಗಬೇಕಿದೆ. ಪಠ್ಯಪುಸ್ತಕಗಳ ಕೊರತೆಯೂ ಕಾಡದಂತೆ ಎಚ್ಚರ ವಹಿಸಬೇಕಿದೆ.

ನರೇಂದ್ರ ಎಸ್‌ ಗಂಗೊಳ್ಳಿ 

ಟಾಪ್ ನ್ಯೂಸ್

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.