ಮನುಷ್ಯನ ಜೀವಾಳವಾಗಿ ಉಳಿಯಿತೇಕೆ ರಾಜಕೀಯ?  


Team Udayavani, May 3, 2018, 6:00 AM IST

2.jpg

ರಾಜಕಾರಣಿಯೊಬ್ಬ ಗೆಲುವಿನ ದಾರಿಯಲ್ಲಿ ತನ್ನ ಕೌಟುಂಬಿಕ ಸುಖವನ್ನು ತ್ಯಾಗ ಮಾಡಬೇಕಾಗುವುದು ಕಣ್ಣಿಗೆ ಎದ್ದು ಕಾಣುವ ವಿಷಯ. ಸ್ವಂತ ಆರೋಗ್ಯವನ್ನೂ ಕಡೆಗಣಿಸಬೇಕಾಗುತ್ತದೆ. ಸಾವಿರಾರು ಕಿ.ಮೀ ಗಳಷ್ಟು ದೂರವನ್ನು ನಿರಂತರವಾಗಿ ಬಿಸಿಲು- ಬೇಗೆಯನ್ನದೆ ಪರಿಕ್ರಮಿಸಿದ ರಾಜಕಾರಣಿಗಳ ಉದಾಹರಣೆಗಳು ನಮ್ಮ ಮುಂದೆ ಇವೆ. ಟಿಕೆಟ್‌ ಪಡೆಯುವುದೊಂದು ಯುದ್ಧ. ಅದಕ್ಕಾಗಿ ಏನೇನು ಮಾಡಬೇಕಾಗುತ್ತದೆ? ಏನೇನು ಅನುಭವಿಸಬೇಕಾಗುತ್ತದೆ ಎನ್ನುವುದು ರಾಜಕಾರಣಿಗಳಿಗೇ ಗೊತ್ತು. ಕ್ಷಣಕ್ಷಣಕ್ಕೂ ಮೈ ಮನಗಳನ್ನು ಸುಡುವ ವಿಷಯಗಳು ಅವು. 

ಬೆರಗುಗಣ್ಣಿನ ಯುವತಿಯೊಬ್ಬಳು ರಾಜಕುಮಾರನೊಬ್ಬನನ್ನು ಭೇಟಿಯಾಗುತ್ತಾಳೆ. ಸ್ನೇಹ ಕ್ರಮೇಣ ಗಾಢ ಪ್ರೀತಿಯಾಗಿ ಪರಿವ ರ್ತನೆ ಗೊಳ್ಳುತ್ತದೆ. ವಿವಾಹವಾಗುತ್ತದೆ. ಎಲ್ಲವೂ ಕನಸಿನಂತೆ ಸುಂದರ. ಸುಖ ಸಂತೋಷ ತುಂಬಿದ ಜೀವನ ಅವಳದು. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಮನೆ. ಆದರೆ ಅವಳು ಮದುವೆಯಾಗಿ ಹೋಗಿದ್ದು ರಾಜ ಮನೆತನಕ್ಕೆ. ಬೆಚ್ಚನೆಯ ಜೀವನದ ಹೊರಗಡೆ ರಾಜಕೀಯ ಎನ್ನುವ ಕಠೊರ ಶಕ್ತಿ ಇದೆ ಎನ್ನುವುದು ಆಕೆಗೆ ನಿಧಾನವಾಗಿ ಗಮನಕ್ಕೆ ಬರಲಾರಂಭಿಸುತ್ತದೆ. ಆತನ ತಂದೆ ದೇಶದ, ವಿಶ್ವದ ಅಗ್ರಗಣ್ಯ ನಾಯಕ. ಆದರೂ ಆತ ರಾತ್ರಿಗಳಲ್ಲಿ ಅಶಾಂತ ಮನಸ್ಸು ಹೊತ್ತುಹಾಕುವುದನ್ನು ಆಕೆ ಕಂಡಿದ್ದಾಳೆ. ಉಕ್ಕಿನ ಮನುಷ್ಯನಾಗಿದ್ದರೂ ಆತ ಎದುರಿಸಬೇಕಾಗಿ ಬಂದ ತೀವ್ರ ತಲ್ಲಣ ಗಳನ್ನು, ಒತ್ತಡಗಳನ್ನು ಹತ್ತಿರದಿಂದ ಗಮನಿಸಿದ್ದಾಳೆ. ಮನುಷ್ಯರ ಗುಂಪುಗಳ ಮನಸ್ಸುಗಳೊಳಗೆ ಒಂದು ಕಠೊರತೆ ಮತ್ತು ಹಿಂಸೆಯ ಬೆಂಕಿ ಅಡಗಿರುತ್ತದೆ ಎಂದು ಆಕೆಗೆ ಕ್ರಮೇಣ ತಿಳಿಯ ಲಾರಂಭಿಸುತ್ತದೆ. ಅದೇ ಸಮಯದಲ್ಲಿ ಆತನಿಗೆ ರಾಜಕೀಯವನ್ನು ಬಿಟ್ಟು ಇರಲಾರದ ಅನಿರ್ವಾಯತೆ ಕೂಡ ಇರುವುದೂ ಆಕೆಗೆ ತಿಳಿಯುತ್ತ ಬರುತ್ತದೆ. ಆಕೆಗೆ ಅರ್ಥವಾಗುವುದೆಂದರೆ ರಾಜಕೀಯ ಬೇರೆ ವೃತ್ತಿಗಳ ಹಾಗೆ ಅಲ್ಲ. ಅದು ಹುಲಿ ಸವಾರಿಯ ಹಾಗೆ. ಪೌರುಷವೇನೋ ಹೌದು, ಆದರೆ ಒಮ್ಮೆ ಬೆನ್ನೇರಿದರೆ ಕೆಳಗಿಳಿಯ ಲಾಗುವುದೇ ಇಲ್ಲ. ಇಳಿದ ತಕ್ಷಣ ಹುಲಿ ತಿಂದುಕೊಂಡು ಹೋಗು ತ್ತದೆ. ಮೇಲಿದ್ದರೂ ಸಂಕಟವೇ. ಕೆಳಗಿಳಿದರೂ ಸಂಕಟವೇ.

ರಾಜಕೀಯ ಕ್ಷೇತ್ರವನ್ನು ತುಂಬಿಕೊಂಡಿರುವ ಕ್ರೌರ್ಯ, ಹಿಂಸೆ ಮತ್ತು ಕಾಠಿಣ್ಯತ್ಯೆ ಅವಳ ವೈಯಕ್ತಿಕ ಜೀವನದಲ್ಲಿಯೂ ಶೀಘ್ರ ಮುಖಾಮುಖೀಯಾಗುತ್ತವೆ. ರಾಜನಾಗಿದ್ದ ಆತನ ತಂದೆಯ ಹತ್ಯೆ ನಡೆದು ಹೋಗುತ್ತದೆ. ಈಗ ಜವಾಬ್ದಾರಿ ಮಗನದು. ಆತನಿಗೂ ಗೊತ್ತಿದೆ ರಾಜಕೀಯ ಕ್ಷೇತ್ರ ತೀವ್ರ ತಲ್ಲಣದ್ದು ಎಂಬುದು. ಒಮ್ಮೊಮ್ಮೆ ರಾಜಕೀಯದ ಒತ್ತಡದಲ್ಲಿ ಸಿಲುಕಿದ ತನ್ನ ತಂದೆ ಕಣ್ಣೀರು ಹಾಕಿದ್ದನ್ನೂ ಕಂಡವನು ಆತ. ಅವಳಿಗಂತೂ ಈಗ ರಾಜಕೀಯ ಮನುಷ್ಯನ ಮನಸ್ಸಿನ ಮೂಲದಲ್ಲೆಲ್ಲೋ ಇರುವ ಕ್ರೌರ್ಯವನ್ನು, ಅಧಿಕಾರದಾಹವನ್ನು, ಹಿಂಸಾಪ್ರವೃತ್ತಿಯನ್ನು ಪ್ರತಿನಿಧಿಸುವ 
ಕ್ರೇತ್ರ ಎನ್ನುವ ಭಾವನೆ ಹೃದಯದೊಳಗೆಲ್ಲೊ ಹೂತುಹೋಗಿದೆ. ಅವಳು ಅಲವತ್ತುಕೊಳ್ಳುತ್ತಾಳೆ ರಾಜಕೀಯದ ಸಹವಾಸ ಬೇಡವೇ ಬೇಡ ಎಂದು. ಆದರೆ ಅನಿವಾರ್ಯತೆ. ರಾಜಕೀಯ ಕೇವಲ ಒಂದೇ ದಾರಿ ಇರುವ ಸುರಂಗವೆನ್ನುವುದು, ಅಲ್ಲಿ ಒಮ್ಮೆ ಹೊಕ್ಕವರಿಗೆ ಹೊರ ಬರಲು ಬೇರೆ ದಾರಿಯೇ ಇಲ್ಲವೆನ್ನುವುದು ಆತನಿಗೆ ತಿಳಿದಿದೆ. ಆದರೆ ಹುಲಿ ಏರಿ ಆಗಿದೆ. ದ್ವಂದ್ವದಲ್ಲಿ ಸಿಲುಕಿದ ಆತ ರಾಜಕೀಯ ಕಣಕ್ಕೆ ಅನಿವಾರ್ಯವಾಗಿ ಇಳಿದು ಬಿಡುತ್ತಾನೆ. ಅತ್ಯಂತ ಖಾಸಗಿ ವ್ಯಕ್ತಿಯಾಗಿದ್ದವ ಈಗ ಅನಿವಾರ್ಯವಾಗಿ ರಾಜ ಕೀಯದ ಬಹಿರಂಗದಲ್ಲಿ ತೊಡಗಿಕೊಳ್ಳುತ್ತಾನೆ. ಅನ್ಯ ಮಾರ್ಗ ವಿಲ್ಲದೇ ಆಕೆ ಪತಿಯ ಪಕ್ಕದಲ್ಲಿ ನಿಲ್ಲುತ್ತಾಳೆ. ಆದರೆ ಭಾವನೆಗಳನೆಲ್ಲ ಅಡಗಿಸಿಕೊಂಡು. ಬಾಹ್ಯ ಜಗತ್ತಿನ ಕಣ್ಣಿಗೆ ಅವಳಷ್ಟು ಸುಖೀ ಬೇರಾವ ಹೆಣ್ಣು ಮಗಳೂ ಇಲ್ಲ. ಆದರೆ ಆಕೆ ಸದಾ ಮೌನಿ. ಅವಳಿಗೆ ಭಯ. ಸದಾ ಚಿಂತೆ. ರಾಜಕೀಯದಲ್ಲಿ ಎಷ್ಟು ಹೊತ್ತಿಗೆ ಏನಾಗುತ್ತದೆ? ಯಾರು ಬಲ್ಲರು? ಅದು ಅಂತಹ ಸುಡು ಸುಡುವ ಕ್ಷೇತ್ರ ಎಂದು ಅಂತರಂಗ ಆಕೆಗೆ ಹೇಳುತ್ತಲೇ ಇರುತ್ತದೆ. ಅಂತರಂಗದ ಮಾತು ಶೀಘ್ರವೇ ನಿಜವಾಗಿಯೂ ಹೋಗುತ್ತದೆ. ಇನ್ನೂ ಭಯಾನಕ, ಭೀಭತ್ಸ ಘಟನೆಗಳು ಮುಂದೆ ಬರುತ್ತವೆ. ಅವು ಅವಳ ಜೀವನವನ್ನೇ ಬದಲಾಯಿಸಿಬಿಡುತ್ತವೆ. ಒಂದು ದಿನ ಎದೆ ನಡುಗಿಸುವ ಸುದ್ದಿ ಬರುತ್ತದೆ. ಏನೆಂದರೆ ಭಯಾನಕ ದಾಳಿಗೆ ಸಿಲುಕಿದ ಆತನ ಪ್ರಾಣಹಕ್ಕಿ ಹಾರಿಹೋಗಿದೆ. ಸರ್ವಸ್ವವೂ ಆಗಿದ್ದ ಪತಿ ಈಗ ಇಲ್ಲವೇ ಇಲ್ಲ…

ಈಗ ಆಕೆ ಸಂಪೂರ್ಣ ಏಕಾಂಗಿ. ಆಳವಾದ ಮೌನಕ್ಕೆ ಶರಣಾಗಿ ಹೋಗುತ್ತಾಳೆ. ಕಣ್ಣೀರು ಕೂಡ ಬತ್ತಿಹೋಗಿದೆ. ಆಕೆ ರಾಜ್ಯಭಾರದತ್ತ ತಲೆ ಹಾಕಿ ಮಲಗಲು ಕೂಡ ಇಷ್ಟಪಡುವುದಿಲ್ಲ. ಆದರೂ ಕೆಲವೇ ವರ್ಷಗಳಲ್ಲಿ ಆಕೆಗೆ ಅರ್ಥವಾಗಿ ಹೋಗುತ್ತದೆ. ರಾಜಕೀಯ ಅಷ್ಟು ಸುಲಭವಾಗಿ ಸುಮ್ಮನೆ ಬಿಡುವುದಿಲ್ಲ. ಯುದ್ಧ ಕ್ಷೇತ್ರ ಹೇಗಿರುತ್ತದೆಂದರೆ ಹತ್ತಿರದಲ್ಲಿ ಧ್ಯಾನಕ್ಕೆ ಕುಳಿತವರನ್ನು ಕೂಡ ಬಾಣಗಳು ಬಿಡುವುದಿಲ್ಲ. ರಾಜಕೀಯವೂ ಹಾಗೆಯೇ. ಸುಮ್ಮನೆ ಉಳಿಯುತ್ತೇನೆ ಎಂದು ಹೇಳಲಾಗುವುದಿಲ್ಲ. ರಾಜಕೀಯವೆಂದರೆ ರಣರಂಗದಲ್ಲಿ ರಚಿಸಲಾಗುವ ಪದ್ಮವ್ಯೂಹದ ಹಾಗೆ. ಹೊರಬರಲು ದಾರಿ ಇರುವುದೇ ಇಲ್ಲ. ಶಕ್ತಿ ಪ್ರಯೋಗಿಸಿಯೇ ದಾರಿ ಕಂಡುಕೊಳ್ಳಬೇಕಾಗುತ್ತದೆ. ಇದನ್ನು ಅರಿತ ಆಕೆ ಈಗ ಧೈರ್ಯದಿಂದ ಸ್ವತಃ ರಾಜಕೀಯಕ್ಕೆ ಧುಮುಕುತ್ತಾಳೆ. ಕಾದಾಡುತ್ತಾಳೆ. ರಣರಂಗ ದಲ್ಲಿ ಗೆದ್ದು ಬಿಡುತ್ತಾಳೆ. ಆಕೆಗೆ ದಕ್ಕಿದ್ದು ಕೇವಲ ರಾಜಕೀಯ ಗೆಲುವು, ಮನಸ್ಸಿನೊಳಗೆ ತುಂಬಿರುವುದು ವೈಯಕ್ತಿಕ ಸೋಲು. ನಿಜವಾಗಿಯೂ ಬೇಡವಾದದ್ದು ಅವಳನ್ನು ಬಿಡುವುದೇ ಇಲ್ಲ. ಬೇಕಾಗಿದ್ದು ಎಲ್ಲೋ ಹೊರಟು ಹೋಗಿದೆ.

ಇದು ಸುಂದರ ವೈಯಕ್ತಿಕ ಜೀವನವನ್ನು ರಾಜಕೀಯ ಶಕ್ತಿಗಳು ಧ್ವಂಸಗೊಳಿಸಿದ ಒಂದು ಕಾಲ್ಪನಿಕ ಕಥೆ. ಆದರೆ ವಾಸ್ತವಿಕ ಕಥೆಗಳು ಜಗತ್ತಿನಾದ್ಯಂತ ಹರಡಿಕೊಂಡಿವೆ. ಸುಂದರ, ಸಜ್ಜನ, ಎಳೆಯ- ಹರೆಯದ ರಾಜಕಾರಣಿಗಳ, ಕುವರರ ಹತ್ಯೆಗಳು ಸಂಭವಿಸಿ ಹೋಗಿವೆ. ಯುದ್ಧದಲ್ಲಿ ಗಂಡನನ್ನು ಕಳೆದುಕೊಂಡ ರಜಪೂತ ಮಹಿಳೆಯರು ಸತಿ ಹೋದ ದುರಂತ ಕಥೆಗಳು ಇತಿಹಾಸದುದ್ದಕ್ಕೂ ಹರಡಿಕೊಂಡಿವೆ.  ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ಕೂಡ ರಕ್ತಪಾತಗಳು ರಾಜಕೀಯ ಸ್ಥಿತ್ಯಂತರಗಳ ಪ್ರಮುಖ ಭಾಗಗಳಾಗದಿದ್ದರೂ ಚುನಾವಣಾ ಸಂದರ್ಭದಲ್ಲಿಯ ರಾಜಕೀಯವನ್ನು ಗಮನಿಸಿದರೆ ಆ ಕ್ಷೇತ್ರದ ಮನಶಾಸ್ತ್ರದ ಹೊಳಹುಗಳು ಕಣ್ಣಂಚನ್ನು ಮುಟ್ಟುತ್ತವೆ. ರಾಜಕೀಯದ ಒಳ ಸ್ವರೂಪ ಅಲ್ಲಲ್ಲಿ ಕಾಣಿಸಿಕೊಳ್ಳುತ್ತದೆ. ಬಹುಶಃ ಅದರ ಕಠೊರತೆಯ, ಕ್ರೌರ್ಯದ, ಹಿಂಸೆಯ ಸ್ವರೂಪ ಅರ್ಥ ವಾಗುತ್ತದೆ. ರಾಜಕೀಯವೆಂದರೆ ಯುದ್ಧಕ್ಷೇತ್ರ. ಸಾಯಬೇಕು ಇಲ್ಲವೇ ಸಾಯಿಸಬೇಕು. ಸಾಯಿಸದಿದ್ದರೆ ಸ್ವತಃ ಸತ್ತ ಹಾಗೆಯೇ. ಏನು ಮಾಡಿಯಾದರೂ ಎದುರಾಳಿಯನ್ನು ಇಲ್ಲವಾಗಿಸುವುದೇ ಮುಖ್ಯ. ಪ್ರಜಾಪ್ರಭುತ್ವದಲ್ಲಿ ಶಸ್ತ್ರಾಸ್ತ್ರಗಳು ಲೋಹದ ರೂಪದಲ್ಲಿ ರುವುದಿಲ್ಲ. ದೈಹಿಕವಾದ ಸಾವು ಇರುವುದಿಲ್ಲ. ಆದರೆ ಉಳಿದಂತೆ ಯುದ್ಧ ಯುದ್ಧವೇ. ಯುದ್ಧದ ಇತರ ಎಲ್ಲಾ ಆಯಾಮಗಳೂ ಅದಕ್ಕಿವೆ. ಬಹುಶಃ ರಾಜಕೀಯ ವ್ಯಕ್ತಿಯೊಬ್ಬನಲ್ಲಿ ಅಡಗಿರುವ ಯುದ್ಧದ ಇನ್‌ಸ್ಟಿಂಕ್ಟ್ಗಳನ್ನು ಬೇಡುತ್ತದೆ.

ವಿಷವರ್ತುಲದಲ್ಲಿ ಸಿಲುಕಿದ ರಾಜಕಾರಣಿಗಳು ಯುದ್ಧಗೆಲ್ಲ ಬೇಕೆನ್ನುವ ಹಂಬಲದಲ್ಲಿ ಸ್ವತಃ ಅನುಭವಿಸುವ ಹಿಂಸೆಯನ್ನೂ ಗಮನಿಸಬೇಕು. ರಾಜಕಾರಣಿಯೊಬ್ಬ ಗೆಲುವಿನ ದಾರಿಯಲ್ಲಿ ತನ್ನ ಕೌಟುಂಬಿಕ ಸುಖವನ್ನು ತ್ಯಾಗ ಮಾಡಬೇಕಾಗುವುದು ಕಣ್ಣಿಗೆ ಎದ್ದು ಕಾಣುವ ವಿಷಯ. ಸ್ವಂತ ಆರೋಗ್ಯವನ್ನೂ ಕಡೆಗಣಿಸ ಬೇಕಾಗುತ್ತದೆ. ಸಾವಿರಾರು ಕಿ.ಮೀ ಗಳಷ್ಟು ದೂರವನ್ನು ನಿರಂತರ ವಾಗಿ ಬಿಸಿಲು- ಬೇಗೆಯನ್ನದೆ ಪರಿಕ್ರಮಿಸಿದ ರಾಜಕಾರಣಿಗಳ ಉದಾಹರಣೆಗಳು ನಮ್ಮ ಮುಂದೆ ಇವೆ. ಇನ್ನೂ ಕೆಲವು ವಿಷಯಗಳನ್ನು ಗಮನಿಸಬೇಕು. ಈಗಷ್ಟೇ ಟಿಕೆಟ್‌ ಹಂಚಿಕೆ ಮುಗಿದಿದೆ. ಟಿಕೆಟ್‌ ಪಡೆಯುವುದೊಂದು ಯುದ್ಧ. ಅದಕ್ಕಾಗಿ ಏನೇನು ಮಾಡಬೇಕಾಗುತ್ತದೆ? ಏನೇನು ಅನುಭವಿಸಬೇಕಾಗುತ್ತದೆ ಎನ್ನುವುದು ರಾಜಕಾರಣಿಗಳಿಗೇ ಗೊತ್ತು. ಕ್ಷಣಕ್ಷಣಕ್ಕೂ 
ಮೈ ಮನಗಳನ್ನು ಸುಡುವ ವಿಷಯಗಳು ಅವು. ಟಿಕೆಟ್‌ ಸಿಗುವುದು ಯುದ್ಧದ ಆರಂಭ ಮಾತ್ರ. ನಂತರ ಇರುವುದು ಪ್ರಮುಖ ಹೋರಾಟ. ಕೆಲವೇ ಕೆಲವು ದಿನಗಳಲ್ಲಿ ನೂರಾರು ಹಳ್ಳಿ- ಪಟ್ಟಣಗಳನ್ನು ಸುತ್ತಬೇಕು. ಸಭೆಗಳಲ್ಲಿ ಭಾಗವಹಿಸಬೇಕು. ಇಡೀ ದಿನ ಉಳಿದ ವೇಳೆಯಲ್ಲಿ ಟೆಲಿಫೋನಲ್ಲಿ ಮಾತುಕತೆ. ಸುತ್ತ- ಮುತ್ತಲೂ ಇರುವ ಗೆಳೆಯರಲ್ಲಿ ಎಷ್ಟು ಜನ ಮೀರ್‌ಜಾಫ‌ರ್‌ಗಳಿರುತ್ತಾರೆ ಎಂದೂ ಹೇಳಲಾಗುವುದಿಲ್ಲ. ಎಲ್ಲಿ ಮೋಸ ನಡೆ ಯುತ್ತದೆ ಹೇಳಲಾಗುವುದಿಲ್ಲ. ಏಕೆಂದರೆ ಬಹುಶಃ ಐತಿಹಾಸಿಕ ವಾಗಿಯೇ ಕುತಂತ್ರ, ಸುಳ್ಳುಗಾರಿಕೆ, ಮೋಸಗಾರಿಕೆ, ಕಪಟತನ, ವಂಚನೆ ರಾಜಕೀಯ ಕ್ಷೇತ್ರದಲ್ಲಿ ಕೇಳಿಬರುವ ಶಬ್ದಗಳು. ಒಂದು ಕೈಯಲ್ಲಿ ಬಂಗಾರ ತೋರಿಸಿ ಇನ್ನೊಂದು ಕೈಯಲ್ಲಿ ಚೂರಿ ಹಿಡಿದು ತನ್ನ ಚಿಕ್ಕಪ್ಪನನ್ನೇ ಕೊಂದು ಹಾಕಿದ ಅಲ್ಲಾವುದ್ದೀನ್‌ ಖೀಲ್ಜಿಯ ಕಥೆಯನ್ನು ಇತಿಹಾಸ ಹೇಳುತ್ತದೆ.

 ಸಹಜವಾಗಿಯೇ ರಾಜಕೀಯ ಕ್ಷೇತ್ರದ ಮನಶಾಸ್ತ್ರದ ಕುರಿತು ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ತುಂಬ ಹೃದಯ ಕಲಕುವ ಪ್ರಶ್ನೆಗಳು ಅವು. ಏನೆಂದರೆ ನಿಜವಾಗಿಯೂ ರಾಜಕೀಯ ಸುಂದರ ವೈಯಕ್ತಿಕ ಬದುಕನ್ನು ಇರಗೊಡುವುದಿಲ್ಲವೇ? ಅದು ಕೇವಲ ಬದುಕಿನ ಕ್ರೌರ್ಯವನ್ನು, ಹಿಂಸೆಯನ್ನು ಸಂಕೇತಿಸುವ, ತುಂಬಿ ಕೊಂಡಿರುವ ಕ್ಷೇತ್ರವೇ? ಮೋಸಗಾರಿಕೆ ಇಲ್ಲದ, ಕುತಂತ್ರವಿಲ್ಲದ ರಾಜಕೀಯ ಇರುವುದೇ ಇಲ್ಲವೇ? ಅಲ್ಲಿ ಸೂಕ್ಷ್ಮಮನಸ್ಸಿನ ಭಾವನೆಗಳಿಗೆ ಸ್ಥಳವೇ ಇಲ್ಲವೇ ಅಥವಾ ಸಮಕಾಲಿನ ರಾಜಕೀಯ ಇಷ್ಟು ಕೆಟ್ಟು ಹೋಗಿದೆಯೇ? ಮುಖ್ಯ ಪ್ರಶ್ನೆ ಎಂದರೆ ಹೊರಗಿನಿಂದ ಕೆಲವೊಮ್ಮೆ ಥಳ ಥಳ ಹೊಳೆಯುವ ರಾಜಕೀಯ ವ್ಯಕ್ತಿಗಳ ಖಾಸಗಿ ಬದುಕುಗಳು ನಿಜವಾಗಿಯೂ ಒಳಗಿನಿಂದ ಕೇವಲ ದುರಂತ ಕಥೆ ಗಳಾಗಿರುತ್ತವೆಯೇ? ಇನ್ನೂ ಮಹತ್ವದ ಪ್ರಶ್ನೆಯೆಂದರೆ ಗುಂಪಿನಲ್ಲಿ ಮನುಷ್ಯ ತನ್ನೊಳಗಿನ ಮೃದುತ್ವ ಕಳೆದುಕೊಂಡು ಪ್ರಾಣಿಯಾಗಿ ಹೋಗುತ್ತಾನೆಯೇ? ಎಲ್ಲ ರೀತಿಯ ರಾಜಕೀಯದ ಒಳಗೂ ಹಿಂಸೆ ತುಂಬಿ ಕೊಂಡಿರುತ್ತದೆಯೇ? ರಾಜಕೀಯ ಕ್ಷೇತ್ರ ನಿಜಕ್ಕೂ ಮನುಷ್ಯನ ಒಳಗಿನ ಹಿಂಸೆಯನ್ನು ಪ್ರತಿನಿಧಿಸುವ ಕ್ಷೇತ್ರವೇ?
ಇನ್ನೂ ಒಂದು ಮಹತ್ವದ ಪ್ರಶ್ನೆ ಎಂದರೆ ಇತಿಹಾಸ ಮತ್ತು ಸಮಕಾಲಿನ ವಾಸ್ತವ ರಾಜಕೀಯದ ಕ್ಷೇತ್ರದ ಮನಶಾಸ್ತ್ರದ ಕುರಿತು ಎಷ್ಟೊಂದು ಪಾಠಗಳನ್ನು ಹೇಳಿದರೂ ಯಾಕೆ ರಾಜಕೀಯ ಮನು ಷ್ಯನ ಜೀವಾಳವಾಗಿಯೇ ಉಳಿದಿರುವುದು?

ಡಾ. ಆರ್‌.ಜಿ. ಹೆಗಡೆ

ಟಾಪ್ ನ್ಯೂಸ್

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.