ಪ್ರತಿದಿನ 2350 ಹಸುಳೆಗಳ ಸಾವು

ಬಗೆಹರಿಯದ ಶಿಶು ಮರಣ ಸಮಸ್ಯೆ

Team Udayavani, Jan 14, 2020, 6:06 AM IST

ಸಾಂದರ್ಭಿಕ ಚಿತ್ರ

ಪ್ರತಿದಿನ ದೇಶದಲ್ಲಿ ಒಂದು ವರ್ಷದೊಳಗಿನ 2,350 ಶಿಶುಗಳು ಸಾವಿಗೀಡಾಗುತ್ತಿವೆ. ಇದರಲ್ಲಿ ರಾಜಸ್ಥಾನ ಅಗ್ರ ಸ್ಥಾನದಲ್ಲಿದ್ದು, ಪ್ರತಿ ಸಾವಿರ ನವಜಾತ ಶಿಶುಗಳ ಪೈಕಿ 33 ಶಿಶುಗಳು ಹುಟ್ಟಿದ ಸಮಯದಲ್ಲೇ ಅಸುನೀಗುತ್ತಿವೆ. ಹಾಗಾದರೆ ಮರಣ ಪ್ರಮಾಣ ಏರಿಕೆಯಾಗಲು ಕಾರಣವೇನು? ದೇಶದ ಯಾವ ಭಾಗಗಳಲ್ಲಿ ಹೆಚ್ಚು ಮೊದಲಾದ ವಿಷಯಗಳ ಕುರಿತು ಮಾಹಿತಿ ಇಲ್ಲಿದೆ.

8 ಲಕ್ಷ ಶಿಶುಗಳ ಸಾವು
ಜಾಗತಿಕವಾಗಿ ಅತೀ ಹೆಚ್ಚು ಶಿಶುಗಳ ಮರಣ ದಾಖಲಾಗುತ್ತಿರುವ ದೇಶ ಭಾರತವಾಗಿದೆ. ಯುನಿಸೆಫ್ ಪ್ರಕಾರ 2017ರಲ್ಲಿ ದೇಶದಲ್ಲಿ 8,02,000 ಶಿಶುಗಳು ಸಾವನ್ನಪ್ಪಿವೆ.

ಶೇ. 78.9ರಷ್ಟು
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಕೇವಲ ಶೇ. 78.9ರಷ್ಟು ಶಿಶುಗಳು ಮಾತ್ರ ವೈದ್ಯಕೀಯ ಸೌಲಭ್ಯ ಮತ್ತು ಮಾರ್ಗದರ್ಶನದಲ್ಲಿ ಜನನ ವಾಗುತ್ತಿವೆ. ಶೇ. 21.1ರಷ್ಟು ಶಿಶುಗಳು ಸೌಲಭ್ಯ ವಂಚಿತ, ಅಸುರಕ್ಷತೆಯಲ್ಲಿ ಹುಟ್ಟುತ್ತಿರುವುದು ಮರಣ ಹೆಚ್ಚಳಕ್ಕೆ ಒಂದು ಕಾರಣ.

ಎಲ್ಲಿ ಹೆಚ್ಚು ?
ರಾಜಸ್ಥಾನದಲ್ಲಿ ಪ್ರತಿವರ್ಷ 1.65 ದಶಲಕ್ಷ ಶಿಶುಗಳ ಜನನವಾಗುತ್ತಿದ್ದು, 1,000 ದಲ್ಲಿ 38 ಶಿಶುಗಳು ಮರಣವಾಗುತ್ತಿವೆ. ವಾರ್ಷಿಕವಾಗಿ 62,843 ಮತ್ತು ಪ್ರತಿದಿನ ಸರಾಸರಿ 172 ಶಿಶುಗಳು ಸಾವನ್ನಪ್ಪುತ್ತಿವೆ. ಗುಜರಾತ್‌ನಲ್ಲಿ 1,000ಕ್ಕೆ 30 ಶಿಶುಗಳು ಅಸುನೀಗುತ್ತಿದ್ದು, ವರ್ಷಕ್ಕೆ ಸುಮಾರು 36,000 ಮತ್ತು ದಿನಕ್ಕೆ ಸರಾಸರಿ 98 ಶಿಶುಗಳು ಸಾಯುತ್ತಿವೆ.

ರಾಜ್ಯದ ಸ್ಥಿತಿ ಏನು ?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ- ಅಂಶ (2017) ದ ಪ್ರಕಾರ ಪ್ರತಿವರ್ಷ ರಾಜ್ಯದಲ್ಲಿ 12 ಸಾವಿರ ಶಿಶುಗಳು ಮರಣ ಹೊಂದುತ್ತಿದ್ದು, ಜನಿಸಿದ 1,000 ಶಿಶುಗಳಲ್ಲಿ 31 ಶಿಶುಗಳು ಸಾಯುತ್ತಿವೆ. 2015ರಿಂದ 2019ರ ಅಕ್ಟೋಬರ್‌ ವರೆಗೆ 44,250 ಶಿಶುಗಳು ಸಾವನ್ನಪ್ಪಿವೆ.

ಅನಕ್ಷರತೆ ಮುಖ್ಯ ಕಾರಣ
ಯುನಿಸೆಫ್ ವರದಿಯ ಪ್ರಕಾರ, 20 ವರ್ಷಕ್ಕಿಂತ ಒಳಗೆ ಗರ್ಭ ಧರಿಸುವ ತಾಯಂದಿರು ಮತ್ತು ಶಿಶುಗಳ ಮರಣ ಪ್ರಮಾಣ ಹೆಚ್ಚಿದೆ ಎಂದು ಉಲ್ಲೇಖಿಸಿದ್ದು, ಅನ‌ಕ್ಷರತೆ ಮತ್ತು ಮಾಹಿತಿ ಕೊರತೆ ಈ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ ಎಂದು ವರದಿ ಹೇಳಿದೆ.

ಕಾರಣವೇನು ?
· ತಾಯಿಯಲ್ಲಿ ಶಿಕ್ಷಣದ ಕೊರತೆ
· ಅಪೌಷ್ಟಿಕತೆ (ಭಾರತೀಯ ಮಹಿಳೆಯರಲ್ಲಿ ಅರ್ಧಕ್ಕಿಂತ  ಹೆಚ್ಚು ಜನರು ರಕ್ತಹೀನತೆ ಹೊಂದಿದ್ದಾರೆ)
· ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧಾರಣೆ.
· ಸೌಲಭ್ಯಗಳ ಕೊರತೆ

ಮರಣ ಪ್ರಮಾಣ
(2014-17ರಲ್ಲಿ ಪ್ರತಿ ಸಾವಿರಕ್ಕೆ)
ಮಧ್ಯಪ್ರದೇಶ 47
ರಾಜಸ್ಥಾನ‌ 46
ಅಸ್ಸಾಂ 44
ಅರುಣಾಚಲ ಪ್ರದೇಶ 42
ಉತ್ತರ ಪ್ರದೇಶ 41
ಒಡಿಶಾ 41
ಮೇಘಾಲಯ 39
ಛತ್ತೀಸ್‌ಗಢ್‌ 38
ಗುಜರಾತ್‌ 35
ಕರ್ನಾಟಕ 31

ಶೇ. 33ರಷ್ಟು ಮರಣ
ದೇಶದಲ್ಲಿ ವಾರ್ಷಿಕವಾಗಿ ಸುಮಾರು 2.6 ಕೋಟಿ ಜನನ ವಾಗುತ್ತಿವೆ. ಸದ್ಯ ಶಿಶು ಮರಣದ ಪ್ರಮಾಣ (ಐಎಂಆರ್‌) 1,000 ಜನನಗಳಿಗೆ 33ರಷ್ಟಿದ್ದು, ದೈನಂದಿನ 2,350 ಶಿಶುಗಳು ಸಾಯುತ್ತಿವೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ