Udayavni Special

71 ನೇ ಗಣರಾಜ್ಯ ದಿನಾಚರಣೆ


Team Udayavani, Jan 26, 2020, 6:27 AM IST

ras-32

ಇಂದು ಗಣರಾಜ್ಯೋತ್ಸವ. ನಮಗೆಲ್ಲರಿಗೆ ಒಂದು ಹೆಮ್ಮೆಯ ದಿನ. ಈ ದಿನ ಬಂತೆಂದರೆ ಸಾಕು ಬೆಳಗ್ಗೆ ಬೇಗ ಎದ್ದು ದಿಲ್ಲಿಯ ರಾಜಪಥ್‌ನಲ್ಲಿ ನಡೆಯುವ ಆ ಸುಂದರ ಪರೇಡ್‌ ಹಾಗೂ ನಮ್ಮ ದೇಶದ ಸಂಸ್ಕೃತಿಯನ್ನು ಸಾರುವ ವಿವಿಧ ಕಾರ್ಯಕ್ರಮಗಳನ್ನು ನೋಡುವುದೇ ಹಬ್ಬ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದ ಹೆಮ್ಮೆಯ ದಿನ. ಈ ಬಾರಿಯ ಗಣರಾಜ್ಯೋತ್ಸವದ ಕೆಲವು ವಿಶೇಷಗಳನ್ನು ಇಲ್ಲಿ ನೀಡಿದ್ದೇವೆ.

ಮಹಿಳೆ ಮುನ್ನಡೆಸುವಳು
ಸೈನ್ಯದ ಕಾರ್ಪ್ಸ್ ಆಫ್ ಸಿಗ್ನಲ್ಸ್‌ ಹೊಂದಿರುವ ಮಹಿಳಾ ಸೈನ್ಯಾಧಿಕಾರಿ ಕ್ಯಾಪ್ಟನ್‌ ತಾನಿಯಾ ಶೇರ್‌ ಗಿಲ್‌ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಮೊದಲ ಮಹಿಳಾ ಪರೇಡ್‌ ಅಡ್ವಾಂಟೆಂಟ್‌ ಆಗಲಿದ್ದಾರೆ. ಪರೇಡ್‌ ಅಡ್ವಾಂಟೆಂಟ್‌ ಎಂದರೆ ಆ ಪರೇಡ್‌ ನ ಸಂಪೂರ್ಣ ಜವಾಬ್ದಾರಿ ಹೊತ್ತವರು, ಮುಂದಾಳತ್ವ ವಹಿಸುವವರು ಎಂದರ್ಥ.

ಕ್ಯಾಪ್ಟನ್‌ ತಾನಿಯಾ ಶೇರ್‌ ಗಿಲ್‌ ಚೆನ್ನೈನ ಆಫೀಸರ್‌ ಟ್ರೈನಿಂಗ್‌ ಅಕಾಡೆಮಿಯಿಂದ ಮಾರ್ಚ್‌ 2017ರಲ್ಲಿ ತರಬೇತಿ ಮುಗಿಸಿದವರಾಗಿದ್ದಾರೆ. ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಶನ್‌ ಪದವೀಧರೆಯಾಗಿದ್ದು, ಇವರ ಕುಟುಂಬದಲ್ಲಿ ತಂದೆ, ಅಜ್ಜ ಮತ್ತು ಮುತ್ತಜ್ಜ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ ವರ್ಷದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ, ಕ್ಯಾಪ್ಟನ್‌ ಭಾವನಾ ಕಸ್ತೂರಿ ಎಂಬವರು ಪುರುಷರ ಸಂಪೂರ್ಣ ತಂಡವನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಎನಿಸಿದ್ದರು.

ಪಥ ಸಂಚಲನ
ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಧನುಷ್‌ಗನ್‌ ಸಿಸ್ಟಂ ಮತ್ತು ಸೇನಾ ವಾಯು ರಕ್ಷಣೆಯ ಕಾಲಾಳುಪಡೆ, ಬಿಎಂಪಿ -2 ಕೆ ಯುದ್ಧ ವಾಹನಗಳು ರಾಜ್‌ಪಥ್‌ನಲ್ಲಿ ಪಥಸಂಚಲನ ನಡೆಸಲಿವೆ. ಬ ಕಾಪ್ಸ್‌ì ಆಫ್ ಸಿಗ್ನಲ್ಸ್‌, ಸಿಕ್ಖ್ ಲೈಟ್‌ ಕಾಲಾಳುಪಡೆ, ಕುಮಾವೂನ್‌ ರೆಜಿಮೆಂಟ್‌, ಗ್ರೆನೇಡಿಯರ್ಸ್‌, ಪ್ಯಾರಾಚೂಟ್‌ ರೆಜಿಮೆಂಟ್‌ ಸಹ ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಯಾವೆಲ್ಲ ರಾಜ್ಯಗಳಿಂದ
ಆಂಧ್ರಪ್ರದೇಶ, ಅಸ್ಸಾಂ. ಛತ್ತೀಸ್‌ಗಢ, ಗೋವಾ, ಗುಜರಾತ್‌, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮೇಘಾಲಯ, ಒಡಿಶಾ, ಪಂಜಾಬ್‌, ರಾಜಸ್ಥಾನ್‌, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ ಇದರ ಜತೆಗೆ ಕೇಂದ್ರ ಸರಕಾರದ ಹಡಗು ಮತ್ತು ಬಂದರು ಸಚಿವಾಲಯ, ಗೃಹ ನಿರ್ಮಾಣ ಮತ್ತು ನಗರಾಭಿವೃದ್ಧಿ ಸಚಿವಾಲಯ, ರಾಷ್ಟ್ರೀಯ ನೈಸರ್ಗಿಕ ವಿಪತ್ತು ನಿರ್ವಹಣಾ ಪಡೆ (ಗೃಹ ಸಚಿವಾಲಯ), ಹಣಕಾಸು ಸೇವೆಗಳ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆ, ಕೈಗಾರಿಕೆ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಗಳ ಸ್ತಬ್ಧಚಿತ್ರಗಳಿವೆ.

ವೇದದ ಉಲ್ಲೇಖ
“ಸತ್ಯಮೇವ ಜಯತೆ’ ವಾಕ್ಯವನ್ನು ಅಥರ್ವ ವೇದದ ಮುಂಡಕ ಉಪನಿಷತ್‌ನಿಂದ ಆಯ್ದುಕೊಳ್ಳಲಾಗಿದೆ. ಇದನ್ನು ಅಬಿದ್‌ ಅಲಿ ಅವರು 1911ರಲ್ಲಿ ಹಿಂದಿ ಭಾಷೆಗೆ ಪರಿವರ್ತಿಸಿದರು. ಭಾರತದ ಮೂಲ ಗುರಿ “ಸತ್ಯಮೇವ ಜಯತೆ’ ಆಗಿರಬೇಕೆಂದು ತೀರ್ಮಾನಿಸಿದ್ದು ಮದನ ಮೋಹನ ಮಾಳವೀಯ ಅವರು.

ರಾಜ್ಯದಿಂದ ಅನುಭವ ಮಂಟಪ
ಈ ಬಾರಿ ಪಥಸಂಚಲನದಲ್ಲಿ ಕರ್ನಾಟಕದಿಂದ ಜಗಜ್ಯೋತಿ ಬಸವೇಶ್ವರ ಅನುಭವ ಮಂಟಪ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ. ಭಾರತದ ಸಂವಿಧಾನಕ್ಕೆ 70 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ 12ನೆಯ ಶತಮಾನದ ಅನುಭವ ಮಂಟಪದ ಮಾದರಿಯೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಎಂಬಂತೆ ಈ ಬಾರಿ ಸ್ತಬ್ಧಚಿತ್ರದಲ್ಲಿ ಮೂಡಿ ಬರಲಿದೆ.

ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ 12ನೆಯ ಶತಮಾನದಲ್ಲಿ ಅನುಭವ ಮಂಟಪ ಅಸ್ತಿತ್ವಕ್ಕೆ ಬಂದಿತ್ತು. ಸಾಮಾಜಿಕ, ಧಾರ್ಮಿಕ, ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಮಾನವ ಸಮಾಜದ ಅಭಿವೃದ್ಧಿಗಾಗಿ ಆಧ್ಯಾತ್ಮಿಕ, ತಣ್ತೀವಶಾಸ್ತ್ರ ಆಧಾರದ ಮೇಲೆ ಬಸವೇಶ್ವರರು ಹಾಕಿಕೊಟ್ಟ ಸಮಾನತೆಯ ದೃಷ್ಟಿಕೋನ, ಸೋದರತೆ ಮತ್ತು ಸಹಭಾಗಿತ್ವದ ಹಾದಿ ಈಗಲೂ ಸ್ಮರಣೀಯ. ಸಮಾಜ ಸುಧಾರಕರಾಗಿ ಇಂದಿಗೆ ಒಂಬತ್ತು ಶತಮಾನದ ಹಿಂದೆಯೇ ಸಾಮಾಜಿಕ ದೃಷ್ಟಿಕೋನವುಳ್ಳ ಆ ಮಹಾನ್‌ ಮಾನವತಾವಾದಿಯ ಸಾಧನೆಯನ್ನು ಸ್ತಬ್ಧ ಚಿತ್ರದಲ್ಲಿ ಅಳವಡಿಸಲಾಗುತ್ತದೆ. ಈ ಮೂಲಕ ಜಗತ್ತಿನ ಗಮನ ಸೆಳೆಯಲಿದೆ.

ಈ ಬಾರಿಯ ಅತಿಥಿ
ಪರೇಡ್‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬ್ರೆಝಿಲ್‌ ಅಧ್ಯಕ್ಷ ಜೇರ್‌ ಮೆಸ್ಸಿಯಾಸ್‌ ಬೊಲ್ಸೊನಾರೊ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೊಲ್ಸೊನಾರೊ ಅವರು ನಾಲ್ಕು ದಿನಗಳ ಪ್ರವಾಸಕ್ಕಾಗಿ ಜ.24ರಂದು ಭಾರತಕ್ಕೆ ಆಗಮಿಸಿದ್ದು, ಅವರೊಂದಿಗೆ ಸಂಪುಟದ ಏಳು ಸಚಿವರೂ ಇದ್ದಾರೆ. ಭಾರತ-ಬ್ರೆಝಿಲ್‌ ನಡುವೆ 15 ಒಪ್ಪಂದಗಳು ಏರ್ಪಡಲಿವೆ. ಇದು ಬ್ರೆಜಿಲ್‌ ಅಧ್ಯಕ್ಷರ ಚೊಚ್ಚಲ ಭೇಟಿಯಾಗಿದೆ. 1996 ಹಾಗೂ 2004ರ ಗಣರಾಜ್ಯೋತ್ಸವ ಪರೇಡ್‌ ನಲ್ಲಿ ಅಂದಿನ ಬ್ರೆಝಿಲ್‌ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿದ್ದರು. 2018ರ ಅಕ್ಟೋಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಮೂಲಕ ಬೊಲ್ಸೊನಾರೊ ಬ್ರೆಝಿಲ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

12 ರಾಜ್ಯಗಳ ಸ್ತಬ್ಧ ಚಿತ್ರ
ಪರೇಡ್‌ನಲ್ಲಿ ಕರ್ನಾಟಕ ಸೇರಿ 12 ರಾಜ್ಯಗಳ ಸ್ತಬ್ಧಚಿತ್ರಗಳು ಆಯ್ಕೆಯಾಗಿವೆ. ಆದರೆ, ಕೇರಳ, ಪಶ್ಚಿಮಬಂಗಾಲ ಹಾಗೂ ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳ ಸ್ತಬ್ಧಚಿತ್ರವನ್ನು ರಕ್ಷಣಾ ಇಲಾಖೆ ತಿರಸ್ಕರಿಸಿದೆ.

ಸತತ 12 ಬಾರಿ ರಾಜ್ಯ ಆಯ್ಕೆ
ಗಣರಾಜ್ಯೋತ್ಸವದ ಪರೇಡ್‌ ನಲ್ಲಿ ರಾಜ್ಯ ಸತತ 12ನೆಯ ಬಾರಿ ಆಯ್ಕೆಯಾಗುತ್ತಿದೆ. ಕರ್ನಾಟಕ ಸ್ತಬ್ಧಚಿತ್ರಕ್ಕೆ ಸತತವಾಗಿ ಪರೇಡ್‌ ನಲ್ಲಿ ಭಾಗವಹಿಸುವ ಅವಕಾಶ ಲಭಿಸುತ್ತಿದೆ.

ಆಯ್ಕೆ ಹೇಗೆ
ಐದು ಸುತ್ತುಗಳ ಸಭೆ ಬಳಿಕ ತಜ್ಞರ ಸಮಿತಿ ನೀಡಿರುವ ವರದಿ ಆಧರಿಸಿ ಪಥಸಂಚಲನದಲ್ಲಿ ಭಾಗವಹಿಸಲಿರುವ 22 ಸ್ತಬ್ಧಚಿತ್ರಗಳ ಸಂಭವನೀಯ ಪಟ್ಟಿಯನ್ನು ರಕ್ಷಣಾ ಸಚಿವಾಲಯ ಬಿಡುಗಡೆ ಮಾಡುತ್ತದೆ.

ಕೇರಳಕ್ಕಿಲ್ಲ ಅವಕಾಶ
ಕೇರಳದ ಸ್ತಬ್ಧಚಿತ್ರ ಸತತ ಎರಡನೇ ಬಾರಿಗೆ ತಿರಸ್ಕಾರಗೊಂಡಿದೆ. ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡುವ ತಜ್ಞರ ಸಮಿತಿಯು ಮೂರನೇ ಸುತ್ತಿನ ಸಭೆಯಲ್ಲಿ ಕೇರಳದ ಸ್ತಬ್ಧಚಿತ್ರದ ಪ್ರಸ್ತಾವವನ್ನು ತಿರಸ್ಕರಿಸಿದೆ. ಥೈಯಂ ಹಾಗೂ ಕಲಾಮಂಡಲ ಸಾಂಸ್ಕೃತಿಕ ಕಲೆಗಳನ್ನು ಆಧರಿಸಿದ ಸ್ತಬ್ಧಚಿತ್ರ ಪ್ರಸ್ತಾವವನ್ನು ಕೇರಳ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು.

ಮೊದಲ ಬಾರಿ ಮಹಿಳೆಯರಿಂದ ಬೈಕ್‌ ಸಾಹಸ
ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್) ಮಹಿಳಾ ಯೋಧರ ತಂಡ ಪರೇಡ್‌ನ‌ಲ್ಲಿ ಮೊತ್ತ ಮೊದಲ ಬಾರಿಗೆ ಬೈಕ್‌ ಸಾಹಸ ಪ್ರದರ್ಶಿಸಲಿದೆ. ತಂಡದಲ್ಲಿ ಒಟ್ಟು 65 ಮಂದಿ ಸದಸ್ಯಯರಿದ್ದು, 350 ಸಿಸಿಯ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ 90 ನಿಮಿಷಗಳ (ಒಂದೂವರೆ ಗಂಟೆ) ಕಾಲ ಪ್ರದರ್ಶನ ನೀಡಲಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ಪಡೆಯಲ್ಲಿ ನಿಯೋಜಿತರಾಗಿರುವ ಇನ್‌ಸ್ಪೆಕ್ಟರ್‌ ಸೀಮಾ ಅವರು ತಂಡ ಮುನ್ನಡೆಸಲಿದ್ದಾರೆ.

“ಅಪಾಚೆ’ಯುದ್ಧ ಹೆಲಿಕಾಪ್ಟರ್‌
ವಾಯುಪಡೆಗೆ ಹೊಸದಾಗಿ ಸೇರ್ಪಡೆಗೊಂಡಿರುವ “ಅಪಾಚೆ’ ಮತ್ತು “ಚಿನೂಕ್‌’ ಹೆಲಿಕಾಪ್ಟರ್‌ಗಳು ಈ ಬಾರಿಯ ಗಣರಾಜ್ಯೋತ್ಸವದ ಪಥ ಸಂಚಲನದ ಪ್ರಮುಖ ಆಕರ್ಷಣೆಯಾಗಿವೆ. ಅಪಾಚೆ ಅತ್ಯಾಧುನಿಕ ಬಹೂಪಯೋಗಿ ಯುದ್ಧ ಹೆಲಿಕಾಪ್ಟರ್‌ ಆಗಿದ್ದು, ದಾಳಿಗೆ ಪ್ರತಿ ದಾಳಿಮಾಡುವ ಹೆಲಿಕಾಪ್ಟರ್‌ಗಳಲ್ಲಿಯೇ ಅತ್ಯಂತ ಶಕ್ತಿಶಾಲಿಯಾಗಿದೆ. ಚಿನೂಕ್‌ ಅತಿ ಭಾರದ ಸರಕು, ಶಸ್ತ್ರಾಸ್ತ್ರಗಳನ್ನು ಒಯ್ಯುವ ಹೆಲಿಕಾಪ್ಟರ್‌ ಆಗಿದ್ದು, ಇತ್ತೀಚೆಗೆ ಸೇರ್ಪಡೆಗೊಂಡಿರುವ ಈ ಹೆಲಿಕಾಪ್ಟರ್‌ಗಳು ವಾಯುಪಡೆಗೆ ಬಲತುಂಬಿವೆ. ಇವುಗಳ ಜತೆಗೆ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌, ಲಘು ಯುದ್ಧ ಹೆಲಿಕಾಪ್ಟರ್‌ಗಳು, ಭೂಮಿಯಿಂದ ಗಗನಕ್ಕೆ ಚಿಮ್ಮಬಲ್ಲ ಆಕಾಶ್‌, ಅಸ್ತ್ರಕ್ಷಿಪಣಿಗಳ ಪ್ರದರ್ಶನವು ನಡೆಯಲಿದೆ.
ಮಿಗ್‌-17 ವಿ52 ಯುದ್ಧ ವಿಮಾನಗಳು, ಧ್ರುವ ಹೆಲಿಕಾಪ್ಟರ್‌ಗಳು ಇಂಗ್ಲೀಷ್‌ ‘Y’ ಅಕ್ಷರದ ಉಲ್ಟಾ ಮಾದರಿಯಲ್ಲಿ ಹಾರಾಡುವ ಮೂಲಕ ವೈನ್‌ಗಾÉಸ್‌ ಫಾರ್ಮೇಷನ್‌’ ಪ್ರದರ್ಶನ ನೀಡಲಿವೆ. ಐಎಎಫ್ ತುಕಡಿಯ ನೇತೃತ್ವವನ್ನು ಐಎಎಫ್ ಫ್ಲೈಟ್‌ ಲೆಫ್ಟಿನೆಂಟ್‌ ಶ್ರೀಕಾಂತ್‌ ಶರ್ಮಾ ವಹಿಸಲಿ¨ªಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮೃಗಾಲಯದಲ್ಲಿದ್ದ ಹುಲಿಯನ್ನೂ ಬಿಡದ ಮಹಾಮಾರಿ ಕೋವಿಡ್!

ಮೃಗಾಲಯದಲ್ಲಿದ್ದ ಹುಲಿಯನ್ನೂ ಬಿಡದ ಮಹಾಮಾರಿ ಕೋವಿಡ್!

ತಮಿಳುನಾಡಿನಲ್ಲಿ ಒಂದೇ ದಿನ 63 ಕೋವಿಡ್ 19 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ತಮಿಳುನಾಡಿನಲ್ಲಿ ಒಂದೇ ದಿನ 63 ಕೋವಿಡ್ 19 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಚೀನದಲ್ಲಿ ಎರಡನೇ ಹಂತದ ಸೋಂಕು? ; ಪತ್ತೆಯಾಯ್ತು 39 ಹೊಸ ಪ್ರಕರಣಗಳು

ಚೀನದಲ್ಲಿ ಎರಡನೇ ಹಂತದ ಸೋಂಕು? ; ಪತ್ತೆಯಾಯ್ತು 39 ಹೊಸ ಪ್ರಕರಣಗಳು

ಕೋವಿಡ್ 19 ವೈರಸ್: ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಸಾವು, ರೋಗಿಗಳ ಸಂಖ್ಯೆ ಇಳಿಮುಖ

ಕೋವಿಡ್ 19 ವೈರಸ್: ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಸಾವು, ರೋಗಿಗಳ ಸಂಖ್ಯೆ ಇಳಿಮುಖ

ಮಹಾರಾಷ್ಟ್ರ: ಒಂದು ಸಾವಿರ ದಾಟಿದ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ, 40 ಮಂದಿ ಸಾವು

ಮಹಾರಾಷ್ಟ್ರ: ಒಂದು ಸಾವಿರ ದಾಟಿದ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ, 40 ಮಂದಿ ಸಾವು

ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿ ಸಿಆರ್ ಪಿಎಫ್ ಯೋಧ ಹುತಾತ್ಮ, ಸೇನೆಯಿಂದ ಪ್ರತಿದಾಳಿ

ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿ ಸಿಆರ್ ಪಿಎಫ್ ಯೋಧ ಹುತಾತ್ಮ, ಸೇನೆಯಿಂದ ಪ್ರತಿದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ಆರೋಗ್ಯ ದಿನ

ವಿಶ್ವ ಆರೋಗ್ಯ ದಿನ: ಜಗತ್ತಿನ ಎಲ್ಲ ಜನರಿಗೆ ಸಮಾನವಾದ ಆರೋಗ್ಯ ಸೇವೆ ಒದಗಿಸುವುದು ಆದ್ಯತೆ

ಪರಿಸರಕ್ಕೆ ಕೋವಿಡ್ 19 ಉಪಕಾರ ; ಜಗತ್ತಿನಾದ್ಯಂತ ವಾಯುಮಾಲಿನ್ಯ ತೀವ್ರ ಇಳಿಕೆ

ಪರಿಸರಕ್ಕೆ ಕೋವಿಡ್ 19 ಉಪಕಾರ ; ಜಗತ್ತಿನಾದ್ಯಂತ ವಾಯುಮಾಲಿನ್ಯ ತೀವ್ರ ಇಳಿಕೆ

ಕೋವಿಡ್‌ 19 ಹಿರಿಯರಿಗಾಗಿ ಹೋರಾಡೋಣ

ಕೋವಿಡ್‌ 19 ಹಿರಿಯರಿಗಾಗಿ ಹೋರಾಡೋಣ

ಕೋವಿಡ್ 19 , ಜೈವಿಕ ಶಸ್ತ್ರಾಗಾರದ ನೂತನ ಅಸ್ತ್ರವೇ?

ಕೋವಿಡ್ 19 , ಜೈವಿಕ ಶಸ್ತ್ರಾಗಾರದ ನೂತನ ಅಸ್ತ್ರವೇ?

ಬನ್ನಿ ಕೈ ತೊಳೆದುಕೊಳ್ಳೋಣ…

ಬನ್ನಿ ಕೈ ತೊಳೆದುಕೊಳ್ಳೋಣ…

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

PCRಗಿಂತ ಆ್ಯಂಟಿ ಬಾಡಿ ರ್ಯಾಪಿಡ್ ಟೆಸ್ಟ್ ಯಾಕೆ ಬೆಸ್ಟ್?

ಕೋವಿಡ್ ವೈರಸ್ ಸೋಂಕು ಪತ್ತೆಯಲ್ಲಿ PCRಗಿಂತ ಆ್ಯಂಟಿ ಬಾಡಿ ರ್ಯಾಪಿಡ್ ಟೆಸ್ಟ್ ಯಾಕೆ ಬೆಸ್ಟ್?

ಸುತ್ತಲೂ ಹಬ್ಬಿದ ಕಾಡ್ಗಿಚ್ಚು ಚೆರ್ನೋಬಿಲ್‌ ಸುತ್ತ ವಿಕಿರಣ ಅಪಾಯ

ಸುತ್ತಲೂ ಹಬ್ಬಿದ ಕಾಡ್ಗಿಚ್ಚು ಚೆರ್ನೋಬಿಲ್‌ ಸುತ್ತ ವಿಕಿರಣ ಅಪಾಯ