ಕಾಶ್ಮೀರಿ ಹಿಂದೂಗಳ ಬದುಕಿನಲ್ಲಿ ಮೂಡಿದ ಭರವಸೆಯ ಕಿರಣ

Team Udayavani, Aug 6, 2019, 3:00 AM IST

ಇಂದು ಕಾಶ್ಮೀರ ಪಂಡಿತ ಸಮುದಾಯದ ವ್ಯಕ್ತಿಯೊಬ್ಬ ತನ್ನ ಬೇರುಗಳನ್ನು ಹುಡುಕಿಕೊಂಡು ಪೂರ್ವಜರು ವಾಸವಾಗಿದ್ದ ಸ್ಥಳಕ್ಕೆ ಹೊರಟರೆ ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನು-ಬೆದರಿಕೆಗಳನ್ನು ಎದುರಿಸಬೇಕಾಗುತ್ತ ದೆ. ಒಂದು ಕಾಲದಲ್ಲಿ ನಮ್ಮದೇ ನೆರೆಹೊರೆಯಾಗಿದ್ದವರು ಇಂದು ನಮ್ಮನ್ನು ಶತ್ರುಗಳಂತೆ ಕಾಣುತ್ತಾರೆ. ಕಾರಣ ನಮ್ಮ ಜಮೀನು, ಆಸ್ತಿ -ಮನೆಗಳನ್ನು ಅವರು ವಶಪಡಿಸಿಕೊಂಡಿದ್ದಾರೆ. ಪಂಡಿತರೇನಾದರೂ ವಾಪಸ್ಸು ಬಂದರೆ ಹಿಂದಿರುಗಿ ಕೊಡಬೇಕಾಗಬಹುದೆಂಬ ಸ್ವಾರ್ಥ ಚಿಂತನೆ. ಕಾಶ್ಮೀರದ ಎಷ್ಟೋ ಮಂದಿರಗಳು ಮಸೀದಿಗಳಾಗಿವೆ. ಕಾಶ್ಮೀರದ ಶೈವ ಸಂಸ್ಕೃತಿಯ ಮೇರು ಶಿಖರ ಅಭಿನವ ಗುಪ್ತರು ತಮ್ಮ ಅಂತಿಮ ದಿನದಲ್ಲಿ ಪ್ರವೇಶಿಸಿ ಸಮಾಧಿಯಾದ “ಭೈರವ ಗುಹೆ’ ಯಾವುದೋ ಪೀರರ ಮಸೀದಿಯಾಗಿದೆ.

1980ರ ದಶಕದ ದ್ವಿತೀಯಾರ್ಧದ ದಿನಗಳು ಕಾಶ್ಮೀರ ಕಣಿವೆಯಲ್ಲಿ ವಾಸವಾಗಿದ್ದ ಪಂಡಿತ ಸಮುದಾಯದ ನಮಗೆ ಅತ್ಯಂತ ಕರಾಳವಾಗಿದ್ದವು. ದಶಕಗಳಿಂದ ವ್ಯವಸ್ಥಿತವಾಗಿ ನಡೆದುಬಂದ ದೌರ್ಜನ್ಯದ ಚರಮಘಟ್ಟ ತಲುಪುವ ಸಂದರ್ಭ ನಿರ್ಮಾಣವಾಗಿತ್ತು. ಜಮ್ಮು ಕಾಶ್ಮೀರ ಲಿಬರೇಶನ್‌ ಫ್ರಂಟ್‌ ಮತ್ತು ಇಸ್ಲಾಮಿಕ್‌ ಉಗ್ರವಾದದ ಅಟ್ಟಹಾಸ ದಿಂದಾಗಿ ಸುಮಾರು 6 ಲಕ್ಷ ಕಾಶ್ಮೀರಿ ಪಂಡಿತ ಸಮುದಾಯ ತಮ್ಮ ಮನೆ, ಉದ್ಯೋಗ, ವ್ಯವಹಾರ, ಆಸ್ತಿಪಾಸ್ತಿಗಳನ್ನು, ಮಂದಿರ, ಶ್ರದ್ಧಾಕೇಂದ್ರಗಳನ್ನೆಲ್ಲ ಬಿಟ್ಟು ಪ್ರಾಣ ಕೈಯಲ್ಲಿ ಹಿಡಿದು ಓಡಬೇಕಾಯಿತು.

ಬೆದರಿಕೆ, ಕೊಲೆ, ಕಿಡ್ನಾಪ್‌, ನಮ್ಮ ಸಹೋದರಿಯರ ಮೇಲೆ ಅತ್ಯಾಚಾರ…ನಾವು ನಮ್ಮದೇ ಜನ್ಮಭೂಮಿಯಲ್ಲಿ ಎದುರಿಸಿದ ದೌರ್ಜನ್ಯಗಳು ಒಂದೆರಡಲ್ಲ. 1989-90ರ ಈ ಘಟನೆಯನ್ನು “ಕಾಶ್ಮೀರಿ ಹಿಂದುಗಳ ಎಕ್ಸಾಡಸ್‌’ ಎಂದು ಇತಿಹಾಸ ಗುರುತಿಸುತ್ತದೆ. ನಮ್ಮೆಲ್ಲರ ಮನೆ ಜಮೀನು ಆಸ್ತಿಪಾಸ್ತಿಗಳ ಮೇಲೆ ಅಂದು ಪ್ರತ್ಯೇಕತಾವಾದಿಗಳು ಮತ್ತು ಇಸ್ಲಾಮಿಕ್‌ ತೀವ್ರವಾದಿಗಳು ಹಿಡಿ ತ ಸಾಧಿಸಿದರು. ಸರ್ಕಾ ರದ ಲೆಕ್ಕದ ಪ್ರಕಾರ, ವಲಸೆ ಬಂದದ್ದು 62 ಸಾವಿರ ಕಾಶ್ಮೀರಿ ಪಂಡಿತ ಕುಟುಂಬಗಳು. ಆದರೆ ಪ್ರಾಣ ಕಳೆದುಕೊಂಡವರೆಷ್ಟೋ?

ತಮ್ಮ ಪೂರ್ವಜರು ಬದುಕಿದ ಭೂಮಿಯನ್ನು ಬಿಟ್ಟಿರಲಾರದೇ ಅಲ್ಲೇ ಉಳಿ ದು, ಉಗ್ರರ ಅಟ್ಟಹಾಸಕ್ಕೆ ಪ್ರಾಣ ಕಳೆದುಕೊಂಡು ಅಲ್ಲಿಯೇ ಮಣ್ಣಾದವರೆಷ್ಟೋ ಮಂದಿ. ಇಂದಿಗೂ ಸದಾ ಭಯದ ನೆರಳಲ್ಲೇ ಕಾಶ್ಮೀರದಲ್ಲಿ ಬದುಕಿರುವ ಹಿಂದುಗಳ ಸಂಖ್ಯೆ ಸಾವಿರವನ್ನು ದಾಟುವುದಿಲ್ಲ. ಅನಿವಾರ್ಯವಾಗಿ ವಲಸೆ ಬಂದವರ ಲ್ಲಿ ಕೆಲವು ಪರಿವಾರಗಳು ದೇಶದ ವಿವಿಧ ಭಾಗಗಳಲ್ಲಿ ಹೊಸದಾಗಿ ಬದುಕು ಕಟ್ಟಿಕೊಂಡರೆ ಹೆಚ್ಚಿನ ಕುಟುಂಬಗಳು ದೆಹಲಿ ಮತ್ತು ಜಮ್ಮುವಿನ ನಿರಾಶ್ರಿತರ ಶಿಬಿರಗಳಲ್ಲಿ ವಾಸವಾಗಿವೆ. ಇಲ್ಲಿ ನೆಲೆಯಾದವರ ದಯನೀಯ ಸ್ಥಿತಿಯನ್ನು ನೋಡಿ ಯೇ ಅರಿಯಬೇಕು. ಯಾವ ಮಾನವ ಹಕ್ಕು ಹೋರಾಟಗಾರರಿಗೂ ನಿರಾಶ್ರಿತರ ಶಿಬಿರಗಳಲ್ಲಿ ಎರಡು ತಲೆಮಾರಿನಿಂದ ಶೋಚನೀಯ ಬದುಕು ನಡೆಸುತ್ತಿರುವವರು ಕಣ್ಣಿಗೆ ಬಿದ್ದಿಲ್ಲ ಎನ್ನುವುದು ವಾಸ್ತವ.

ನಮ್ಮ ನೆಲದಿಂದ ಹೊರದಬ್ಬಲ್ಪಟ್ಟು ಮೂರು ದಶಕಗಳು ಕಳೆದಿವೆ. ಈ ನಡುವೆ ಕಾಶ್ಮೀರಿ ಪಂಡಿತರನ್ನು ವಾಪಸ್ಸು ಕಣಿವೆಗೆ ಕಳುಹಿಸುವ ಮಾತುಗಳು ಆಗಾಗ ಕೇಳಿ ಬಂದಿವೆ. ಆದರೆ ಕೇಂದ್ರ ಸರ್ಕಾರದ ಮುಂದೆ ಪ್ರತಿಬಾರಿ ಇಂತಹ ಪ್ರಸ್ತಾಪ ಬಂದಾಗಲೆಲ್ಲ ಕಾಶ್ಮೀರ ಕಣಿವೆಯ ಪ್ರಬಲ ಹಿತಾಸಕ್ತಿಗಳು, ಸ್ವಾರ್ಥ ರಾಜಕಾರಣಿಗಳು ಮತ್ತು ಪ್ರತ್ಯೇಕತಾವಾದಿಗಳು ಒಂದಲ್ಲ ಒಂದು ಕ್ಯಾತೆ ತೆಗದು ಇದಕ್ಕೆ ಅಡ್ಡಗಾಲು ಹಾಕುತ್ತಾ ಬಂದವು. ಕಾಶ್ಮೀರಿ ಪಂಡಿತರ ಕಲ್ಯಾಣದ ಹೆಸರಿನಲ್ಲಿ ಘೋಷಣೆಯಾದ ಪ್ಯಾಕೇಜುಗಳು ಅವರಿಗೆ ತಲುಪಲೇ ಇಲ್ಲ.

ಇಂದು ಕಾಶ್ಮೀರ ಪಂಡಿತ ಸಮುದಾಯದ ವ್ಯಕ್ತಿಯೊಬ್ಬ ತನ್ನ ಬೇರುಗಳನ್ನು ಹುಡುಕಿಕೊಂಡು ಪೂರ್ವಜರು ವಾಸವಾಗಿದ್ದ ಸ್ಥಳಕ್ಕೆ ಹೊರಟರೆ ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನು-ಬೆದರಿಕೆಗಳನ್ನು ಎದುರಿಸಬೇಕಾಗಿದೆ. ಒಂದು ಕಾಲದಲ್ಲಿ ನಮ್ಮದೇ ನೆರೆಹೊರೆಯಾಗಿದ್ದವರು ಇಂದು ಶತ್ರುಗಳಂತೆ ಕಾಣುತ್ತಾರೆ. ಕಾರಣ ನಮ್ಮ ಜಮೀನು, ಆಸ್ತಿ ಮನೆಗಳನ್ನು ಅವರು ಕಬಾ ಮಾಡಿಕೊಂಡಿದ್ದಾರೆ. ಪಂಡಿತರೇನಾದರೂ ವಾಪಸ್ಸು ಬಂದರೆ ಹಿಂದಿರುಗಿ ಕೊಡಬೇಕಾಗಬಹುದೆಂಬ ಸ್ವಾರ್ಥ ಚಿಂತನೆ. ಕಾಶ್ಮೀರದ ಎಷ್ಟೋ ಮಂದಿರಗಳು ಮಸೀದಿಗಳಾಗಿವೆ. ಕಾಶ್ಮೀರದ ಶೈವ ಸಂಸ್ಕೃತಿಯ ಮೇರು ಶಿಖರ ಅಭಿನವ ಗುಪ್ತರು ತಮ್ಮ ಅಂತಿಮ ದಿನದಲ್ಲಿ ಪ್ರವೇಶಿಸಿ ಸಮಾಧಿಯಾದ “ಭೈರವ ಗುಹೆ’ ಯಾವುದೋ ಪೀರರ ಮಸೀದಿಯಾಗಿದೆ.

ಇಷ್ಟೆಲ್ಲ ಅತ್ಯಾಚಾರ ಅನಾಚಾರ ನಡೆದದ್ದು ಪ್ರತ್ಯೇಕತಾವಾದಿಗಳು ಮತ್ತು ಜಮ್ಮು ಕಾಶ್ಮೀರ ರಾಜ್ಯದಲ್ಲಿ ಪಟ್ಟಭದ್ರರಾಗಿ ಕಳೆದ ಏಳು ದಶಕಗಳಿಂದ ಅಧಿಕಾರ ಅನುಭವಿಸುತ್ತಿರುವ ಕಾಶ್ಮೀರ ಕಣಿವೆಯ ಕೆಲವು ರಾಜಕೀಯ ಪರಿವಾರಗಳ ನೆರಳಿನಲ್ಲೇ. ಇವರ ಕೈಯಲ್ಲಿ ಸಿಕ್ಕಿ 370ನೇ ವಿಧಿ ದುರಪಯೋಗವಾಗುತ್ತಾ ಬಂದಿದೆ. ದೌರ್ಭಾಗ್ಯವೆಂದರೆ 370ನೇ ವಿಧಿಯನ್ನು ದೇಶದ ಇತರ ಭಾಗಗಳಲ್ಲಿ ಮತಬ್ಯಾಂಕ್‌ ರಾಜಕಾರಣಕ್ಕೆ ಬಳಸಿಕೊಂಡ ಕಾಂಗ್ರೆಸ್‌ ಮತ್ತಿತರ ತಥಾಕಥಿತ ಸೆಕ್ಯುಲರ್‌ ಪಕ್ಷಗಳು 370ನೇ ವಿಧಿ ಮತ್ತು ಆರ್ಟಿ ಕಲ್‌ 35ಎ ಕಾರ ಣ ದಿಂದ ನಡೆದಿರುವ ದೌರ್ಜನ್ಯವನ್ನು ಮಾತ್ರ ಚರ್ಚಿಸಲೂ ಸಿದ್ಧರಾಗಿಲ್ಲ.

ತನ್ನ ಪ್ರಣಾಳಿಕೆಯಲ್ಲಿ 370ನೇ ವಿಧಿಯನ್ನು ಕೊನೆಗೊಳಿಸುವ ಭರವಸೆ ನೀಡಿದ್ದ ಬಿಜೆಪಿ ದೃಢ ಹೆಜ್ಜೆಯನ್ನು ಇಟ್ಟಿದೆ. ಆರ್ಟಿಕಲ್‌ 370 ಮತ್ತು 35ಎ ಕೊನೆಗೊಳ್ಳುವುದರೊಂದಿಗೆ ಕಾಶ್ಮೀರ ಕಣಿವೆ ಪ್ರತ್ಯೇಕತಾವಾದ, ಇಸ್ಲಾಂ ಭಯೋತ್ಪಾದನೆ ಮತ್ತು ಕಾಶ್ಮೀರಿ ಕಣಿವೆಯ ಸ್ವಾರ್ಥ ರಾಜಕಾರಣಿ ಕುಟುಂಬಗಳ ಕಪಿಮುಷ್ಟಿಯಿಂದ ಜಮ್ಮು ಕಾಶ್ಮೀರ ಮುಕ್ತವಾಗುವ ಭರವಸೆ ಮೂಡಿದೆ. ತಮ್ಮ ಬೇರಿನಿಂದ ಕಡಿದುಕೊಂಡು ನಿರಾಶ್ರಿತರಾದ ಪಂಡಿತ ಸಮುದಾಯ ಮತ್ತೆ ತಮ್ಮ ಪೂರ್ವಜರ ಭೂಮಿಗೆ ಮರಳುವ ಕನಸು ಜಾಗೃತಗೊಂಡಿದೆ.

(ಕಾಶ್ಮೀರದಿಂದ ಬಲವಂತವಾಗಿ ಹೊರದಬ್ಬಲ್ಪಟ್ಟು ಬೆಂಗಳೂರಿನಲ್ಲಿ ನೆಲೆಗೊಂಡವರು)

* ದಿಲೀಪ್‌ ಕಾಚ್ರು, ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಿಂಡಿಕೇಟ್‌ ಬ್ಯಾಂಕ್‌ ಅಪಾರವಾದ ಜನ ಬೆಂಬಲವನ್ನು ಸಂಪಾದಿಸಿತ್ತು. ನಮ್ಮ ಬ್ಯಾಂಕ್‌ ಎಂಬ "ಫೀಲಿಂಗ್‌' ಅನ್ನು ಜನ ಹೊಂದಿದ್ದರು. ಆದರೆ ಈಗ ಬ್ಯಾಂಕ್‌ ತನ್ನ ಅಸ್ತಿತ್ವ...

  • ಕರುನಾಡಿನವರ ಅಸ್ಮಿತೆಯ, ಅಭಿಮಾನದ ಪ್ರತೀಕವಾಗಿರುವ ಸಿಂಡಿಕೇಟ್‌ ಬ್ಯಾಂಕನ್ನು ವಿಲೀನಗೊಳಿಸುವ ನಿರ್ಧಾರದ ವಿರುದ್ಧದ ಧ್ವನಿ ಬಲವಾಗುತ್ತಿದೆ. ವಿವಿಧ ಕ್ಷೇತ್ರಗಳ...

  • ಕರಾವಳಿಯಲ್ಲಿ ಹುಟ್ಟಿ ರಾಷ್ಟ್ರಮಟ್ಟಕ್ಕೆ ಬೆಳೆದ ಬ್ಯಾಂಕ್‌ಗಳ ಬಗ್ಗೆ ಇಲ್ಲಿನ ಜನರಿಗೆ ಅಪಾರ ಅಭಿಮಾನವಿದೆ. ಇವುಗಳನ್ನು ಬರೀ ಹಣಕಾಸು ಸಂಸ್ಥೆಗಳಾಗಿರದೆ ಬದುಕಿನ...

  • ಮಣಿಪಾಲ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ಮಂದಿರದ ಬಾಗಿಲು ಮತ್ತೆ ತೆರೆಯಲಾಗಿದೆ. ಮಂಡಲ ಪೂಜೆಗಾಗಿ ಬೆಟ್ಟ ಹತ್ತಿ ಬಂದ ಭಕ್ತರಿಗೆ ಇನ್ನೆರಡು ತಿಂಗಳ ಕಾಲ ಶಬರಿ ಗಿರಿ...

  • ಕರಾವಳಿಯಲ್ಲಿ ಹುಟ್ಟಿ ರಾಷ್ಟ್ರಮಟ್ಟಕ್ಕೆ ಬೆಳೆದ ಬ್ಯಾಂಕ್‌ಗಳ ಬಗ್ಗೆ ಇಲ್ಲಿನ ಜನರಿಗೆ ಅಪಾರ ಅಭಿಮಾನವಿದೆ. ಇವುಗಳನ್ನು ಬರೀ ಹಣಕಾಸು ವ್ಯವಹಾರಗಳನ್ನು ಮಾಡುವ...

ಹೊಸ ಸೇರ್ಪಡೆ

  • ಪುದುಚ್ಚೇರಿ: ಸಚಿವ ಸಂಪುಟದ ನಿರ್ಧಾರಗಳನ್ನು ರಾಜ್ಯಪಾಲರಾದ ಕಿರಣ್‌ ಬೇಡಿ ಅವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಟೀಕೆ ಮಾಡಿರುವ ಪುದುಚೇರಿ ಮುಖ್ಯಮಂತ್ರಿ...

  • ಇಂದೋರ್‌: ತಮ್ಮ ಮನೆ ಮಗನನ್ನೇ ಕೊಂದ ಪ್ರಕರಣದಲ್ಲಿ ಪೊಲೀಸರು ಒಂದೇ ಕುಟುಂಬದ ನಾಲ್ವರನ್ನು ಬಂಧಿಸಿರುವ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದೆ. 24 ವರ್ಷದ...

  • ಕಡಬ: ಪುತ್ತೂರಿನಿಂದ ನೆಟ್ಟಣಕ್ಕೆ ಸಂಚರಿಸುತ್ತಿದ್ದ ಲೋಕಲ್‌ ರೈಲಿನಲ್ಲಿ ಪುತ್ತೂರಿನಿಂದ ಎಡಮಂಗಲಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯ ಕುತ್ತಿಗೆ ಒತ್ತಿ ಹಿಡಿದು...

  • ಹೊಸದಿಲ್ಲಿ: ಮನವಿ ಪರಿಶೀಲಿಸ ಬೇಕೆಂಬ ಪಾಕಿಸ್ಥಾನದ ಬೇಡಿಕೆಯನ್ನು ತಳ್ಳಿ ಹಾಕಿರುವ ಇಂಟರ್‌ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ (ಐಟಿಎಫ್) ಭಾರತ ಮತ್ತು ಪಾಕಿಸ್ಥಾನ...

  • ಉಡುಪಿ/ಕುಂದಾಪುರ: ತನ್ನದೇ ಶೈಲಿಯ ಹಾಡುಗಳಿಂದ ಜನರನ್ನು ಮನರಂಜಿಸುತಿದ್ದ ಕುಂದಾಪುರದ "ಸ್ಟ್ರೀಟ್‌ ಸಿಂಗರ್‌' ವೈಕುಂಠ (32) ಸೋಮವಾರ ರಾತ್ರಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ...