11.50 ಕೋಟಿ ಮಂದಿಗೆ ತಲುಪಿದ ಆಯುಷ್ಮಾನ್‌ ಭಾರತ

Team Udayavani, Dec 13, 2019, 5:30 AM IST

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ಆಯುಷ್ಮಾನ್‌ ಭಾರತವನ್ನು ನಾಲ್ಕು ರಾಜ್ಯಗಳು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳು ಅಳವಡಿಸಿಕೊಂಡಿವೆ. ಈ ಕುರಿತಂತೆ ಈ ವರೆಗೆ ಯೋಜನೆಗೆ ದಾಖಲಾದ ಜನರ ಸಂಖ್ಯೆ ಮತ್ತು ವಿತರಿಸಲಾದ ಕಾರ್ಡ್‌ಗಳ ಸಮಗ್ರ ಮಾಹಿತಿ.

11.50 ಕೋಟಿ
ಆಯುಷ್ಮಾನ್‌ ಯೋಜನೆಗಳು ಉಳಿದ ರಾಜ್ಯದಲ್ಲಿ ಉತ್ತಮವಾಗಿ ಜಾರಿಯಾಗುತ್ತಿದೆ. ಈ ಯೋಜನೆಯಿಂದ ಈಗಾಗಲೇ 11.50 ಕೋಟಿ ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಸುಮಾರು 11,52,97,901 ಕೋಟಿ ಕಾರ್ಡ್‌ ವಿತರಿಸಲಾಗಿದೆ.

9,549 ಕೋಟಿ ರೂ.
ಯೋಜನೆಯಡಿ ಆಸ್ಪತ್ರೆಗೆ ದಾಖಲಾದ ಜನರಿಗೆ ಸುಮಾರು 9,549 ಕೋಟಿ.ರೂ. ಮೌಲ್ಯದ ಚಿಕಿತ್ಸೆಯನ್ನು ನೀಡಲಾಗಿದೆ.

ಎಲ್ಲಿ ಜಾರಿಯಾಗಿಲ್ಲ?
ದಿಲ್ಲಿ, ತೆಲಂಗಾಣ, ಒಡಿಶಾ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳಲ್ಲಿ ಯೋಜನೆ ಜಾರಿಯಾಗಿಲ್ಲ. ಉಳಿದ ರಾಜ್ಯಗಳಲ್ಲಿ ಲಕ್ಷಾಂತರ ಮಂದಿ ಯೋಜನೆ ಸದುಪಯೋಗ ಪಡೆದುಕೊಳ್ಳುತ್ತಿದ್ದರೆ, ಈ 4 ರಾಜ್ಯಗಳು ಹಲವು ಕಾರಣಕ್ಕೆ ಯೋಜನೆ ಜಾರಿಗೊಳಿಸಿಲ್ಲ.

1.20 ಲಕ್ಷ ಉದ್ಯೋಗ
ಈ ಆಯುಷ್ಮಾನ್‌ ಭಾರತ ಯೋಜನೆಯಡಿ 1.20 ಲಕ್ಷ ಮಂದಿ 2022ರ ವೇಳೆಗೆ ಉದ್ಯೋಗ ಪಡೆಯಲಿದ್ದಾರೆ ಎಂದು ಸರಕಾರ ಮಾಹಿತಿ ನೀಡಿದೆ. ಸರಕಾರದ ಮಹತ್ವಾ ಕಾಂಕ್ಷೆಯ ಈ ಯೋಜನೆ ವಿವಿಧ ರಾಜ್ಯಗಳಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಿದೆ. ಈ ಗುರಿಯನ್ನು ತಲುಪಲು ವರ್ಷದಿಂದ ವರ್ಷಕ್ಕೆ ಒಂದಷ್ಟು ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳಲು ಸರಕಾರ ಉದ್ದೇಶಿಸಿದೆ.

19 ಸಾವಿರ ಆಸ್ಪತ್ರೆ
ಯೋಜನೆಯಡಿ ಚಿಕಿತ್ಸೆ ನೀಡಲು ಸುಮಾರು 19,624 ಆಸ್ಪತ್ರೆಗಳನ್ನು ಆಯ್ಕೆ ಮಾಡಲಾ ಗಿದೆ. ಇದರಲ್ಲಿ ಶೇ. 60ರಷ್ಟು ದಾಖ ಲಾತಿಗಳು ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಶೇ.40ರಷ್ಟು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕರ್ನಾಟಕದಲ್ಲಿ ಹೇಗಿದೆ?
ರಾಜ್ಯದಲ್ಲಿ ಆಯುಷ್ಮಾನ್‌ ಭಾರತ, ಆರೋಗ್ಯ ಕರ್ನಾಟಕ ಯೋಜನೆಯನ್ನು ವಿಲೀನ ಮಾಡ ಲಾಗಿದೆ. ಈ ಕಾರಣಕ್ಕೆ ಹೆಚ್ಚು ಫ‌ಲಾನುಭವಿ ಗಳನ್ನು ಸಂಪಾದಿಸಿ ಕೊಂಡಿದೆ. ಆಯುಷ್ಮಾನ್‌ ಭಾರತ್‌ 97,82,691 ಕಾರ್ಡ್‌ಗಳನ್ನು ರಾಜ್ಯದಲ್ಲಿ ವಿತರಿಸಲಾಗಿದೆ. ಅದರಲ್ಲಿ ಸುಮಾರು 30.7 ಲಕ್ಷ ಜನರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

70.71 ಲಕ್ಷ
ಈ ಯೋಜನೆಯಡಿ ದೇಶಾದ್ಯಂತ ಹೆಸರು ನೋಂದಾಯಿಸಿದ ಸುಮಾರು 11.50 ಕೋಟಿ ಜನರಲ್ಲಿ ಅಂದಾಜು 70.71 ಲಕ್ಷ ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ರಾಜ್ಯದ ಆಸ್ಪತ್ರೆಗಳು
ರಾಜ್ಯದಲ್ಲಿ ಈ ಎರಡೂ ಯೋಜನೆಗೆ ಸುಮಾರು 405 ಸರಕಾರಿ ಆಸ್ಪತ್ರೆಗಳು ಮತ್ತು 371 ಖಾಸಗಿ ಆಸ್ಪತ್ರೆಗಳನ್ನು ಸೇರಿಸಲಾಗಿದೆ. ಇದರಲ್ಲಿ 11 ಮೆಡಿಕಲ್‌ ಕಾಲೇಜುಗಳು ಸೇರಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ