
ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ಹೋರಾಟಗಾರರ ನೆನೆಹು
Team Udayavani, Aug 10, 2022, 6:40 AM IST

ಬರೀಂದ್ರ ಕುಮಾರ್ ಘೋಷ್ (1880-1959)
ಜಿತೇಂದ್ರನಾಥರ ಆಪ್ತ ವಲಯದಲ್ಲಿ ಕಾಣಸಿಗುವ ಮತ್ತೊಬ್ಬ ಕ್ರಾಂತಿಕಾರಿ ಎಂದರೆ ಬರೀಂದ್ರಕುಮಾರ್ ಘೋಷನ್ ಇವರನ್ನು ಬರೀನ್ ಘೋಷ್ ಎಂದು ಕರೆಯುತ್ತಿದ್ದರು. ಜಿತಿನ್ ಜತೆಗೂಡಿ ಕ್ರಾಂತಿಕಾರಿ ಗುಂಪುಗಳನ್ನು ಸಂಘಟಿಸುತ್ತಿದ್ದ ಬರೀನ್ ಅನುಶೀಲನಾ ಸಮಿತಿಯ ಸಹಾಯದಿಂದ ಜುಗಾಂತರ್ ವಾರ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಬಳಿಕ ಸಶಸ್ತ್ರ ಹೋರಾಟ ಚಟುವಟಿಕೆಗಳಿಗೆ ನಾಂದಿ ಹಾಡಿದರು. ಕೋಲ್ಕತ್ತಾ ಸೇರಿದಂತೆ ವಿವಿಧೆಡೆ ರಹಸ್ಯ ಶಸ್ತ್ರಾಸ್ತ್ರಗಳ ತಯಾರಿಕೆಗೆ ಮುಂದಾದರು. ಅಲಿಪೋರ್ ಸ್ಫೋಟ ಪ್ರಕರಣದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಯಿತು.
ಚಿತ್ತರಂಜನ್ದಾಸ್ ಅವರ ಹೋರಾಟದಿಂದ ಮರಣದಂಡನೆ ಜೀವಾವಧಿ ಶಿಕ್ಷೆಗೆ ಇಳಿಯಿತು. ಬರೀನ್ ಅವರು 12 ವರ್ಷ ಜೀವಾವಧಿ ಶಿಕ್ಷೆಯನ್ನು ಅಂಡಮಾನ್ ಸೆಲ್ಯೂಲಾರ್ ಜೈಲಿನಲ್ಲಿ ಕಳೆಯಬೇಕಾಯಿತು. ಬಳಿಕ ಅಲ್ಲಿಂದ ಮರಳಿದ ಅವರು ಅರವಿಂದ ಆಶ್ರಮದಲ್ಲಿ ಕೊನೆದಿನಗಳನ್ನು ಕಳೆದರು.
ಹೇಮಚಂದ್ರ ಕನುಂಗೋ (1857-1951)
ಮೊದಲ ಬಾರಿಗೆ ಫ್ರಾನ್ಸ್ಗೆ ತೆರಳಿ ಬಾಂಬ್ ತಯಾರಿಸುವುದು, ಸೈನಿಕ ತರಬೇತಿ ಪಡೆದು ಬಂದ ಕ್ರಾಂತಿಕಾರಿ ಹೇಮಚಂದ್ರ ಕನುಂಗೋ, ಬಂಗಾಳದ ರಾಷ್ಟ್ರೀಯವಾದಿ ಚಿಂತಕರಾಗಿದ್ದರು. ಕೊಲ್ಕತ್ತಾದಲ್ಲಿ ಅನುಶೀಲನಾ ಸಮಿತಿಯ ಸಹಾಯದಿಂದ ಬಾಂಬ್ ತಯಾರಿಕಾ ಘಟಕವನ್ನು ಸ್ಥಾಪಿಸಿದರು. ನಿತಿನ್, ಬರೀನ್, ಅರವಿಂದರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಇವರು ಅನೇಕ ಕ್ರಾಂತಿಕಾರಿಗಳಿಗೆ ಶಸ್ತ್ರಾಸ್ತ್ರ ಬಳಕೆ, ಸ್ಫೋಟಕಗಳ ತಯಾರಿಕೆಯ ತರಬೇತಿ ನೀಡುತ್ತಿದ್ದರು. ಅಲಿಪೊರ್ ಸ್ಫೋಟದ ಕೇಸಿನಲ್ಲಿ ಆರೋಪಿಯಾಗಿ ಕಂಡುಬರುತ್ತಾರೆ.
ಖುದೀರಾಮ್ ಬೋಸ್ (1889- 1908)
1908ರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ನೇಣುಗಂಬವನ್ನೇರಿದ ಯುವಕ ಖುದೀರಾಮ್ ಬೋಸ್. ಕಿಂಗ್ಸ್ ಪೋರ್ಡ್ ಎಂಬ ಬ್ರಿಟಿಷ್ ಅಧಿಕಾರಿ ಕ್ರಾಂತಿಕಾರಿಗಳು ಭೀಕರವಾದ ಶಿಕ್ಷೆಗಳನ್ನು ವಿಧಿಸುತ್ತಿದ್ದ. ಇವನ್ನು ಕೊಲ್ಲಬೇಕು ಎಂದು ಕ್ರಾಂತಿಕಾರಿ ತಂಡ ನಿರ್ಧರಿಸಿತು. ಖುದೀರಾಮ್, ಸತ್ಯೇಂದ್ರನಾಥ ಬೋಸ್ ಮತ್ತು ಪ್ರಫುಲ್ಚಾಕಿ ಮೂವರು ಮುಜಾಪುರದಲ್ಲಿ ಕಿಂಗ್ಸ್ಪೋರ್ಡ್ ಚಲನವಲಗಳನ್ನು ಗಮನಿಸತೊಡಗಿದರು. ಒಮ್ಮೆ ಕ್ಲಬ್ನಿಂದ ಹೊರಬಂದು ತನ್ನ ಕಾರಿನಲ್ಲಿ ತೆರಳುವಾಗ ಕ್ರಾಂತಿಕಾರರ ತಂಡ ಕಾರನ್ನು ಸ್ಫೋಟಿಸಿತು. ಆದರೆ ಆ ವಾಹದಲ್ಲಿ ಫೋರ್ಡ್ ಇರಲಿಲ್ಲ. ಇಬ್ಬರು ಯುವತಿಯರು ಸಾವಿಗೀಡಾಗಿದ್ದರು. ಈ ಮುಜಾಪುರ ಸ್ಫೋಟ ಬ್ರಿಟಿಷರ ನಿದ್ದೆಗೆಡಿಸಿತು. ಬಳಿಕ ಖುದೀರಾಮ್ನನ್ನು ಬಂಧಿಸಿ ನೇಣಿಗೇರಿಸಲಾಯಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ದೆಹಲಿ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿವಾಹಿತ ಮಹಿಳೆ ಮೇಲೆ ಗುಂಡಿನ ದಾಳಿ; ಮೃತ್ಯು

ರಸ್ತೆ ಬದಿ ನಿಂತಿದ್ದವರ ಮೇಲೆ ಸಾಮೂಹಿಕ ಗುಂಡಿನ ದಾಳಿ: 9 ಮಂದಿಗೆ ಗಾಯ

ಉದ್ದಿಮೆಗಳ ಖಾತಾ ಬದಲಾವಣೆ ಸಮಸ್ಯೆಗೆ ತ್ವರಿತ ಪರಿಹಾರ: ಅತಿಕ್

ದೊಡ್ಡ ಟ್ರೋಫಿ ಇನ್ನೂ ಒಂದಿದೆ: ಶಫಾಲಿ ವರ್ಮ

ಪಠಾಣ್ ಯಶಸ್ಸು; ಜೀವನವನ್ನು ಮತ್ತೆ ಸಿನಿಮಾಕ್ಕೆ ತಂದಿದ್ದಕ್ಕಾಗಿ ಧನ್ಯವಾದಗಳು ಎಂದ ಶಾರುಖ್