ಸುಳ್ಳು ಇತಿಹಾಸವನ್ನೇ ನಂಬಿ ಬದುಕುತ್ತಿದ್ದೇವೆ!


Team Udayavani, Sep 1, 2017, 3:23 AM IST

01-ANKANA-2.jpg

ಭಾರತೀಯ ಇತಿಹಾಸವನ್ನು ವಿಕೃತಗೊಳಿಸುವಲ್ಲಿ ಇಬ್ಬರ ಭೂಮಿಕೆ ದೊಡ್ಡದು. ಮೊದಲನೆಯವರು ವಿಲಿಯಂ ಜೋನ್ಸ್‌ ಮತ್ತು ಎರಡನೆಯವರು ಮ್ಯಾಕ್ಸ್‌ ಮುಲ್ಲರ್‌. ವ್ಯಂಗ್ಯವೆಂದರೆ ನಮ್ಮ ದೇಶದ ಒಂದು ದೊಡ್ಡ ವಿದ್ವಾಂಸರ ಗುಂಪು ಇವರಿಬ್ಬರನ್ನೂ “ಮಹಾಪುರುಷರ’ ಶ್ರೇಣಿಯಲ್ಲಿ ಕೂರಿಸಿಬಿಟ್ಟಿದೆ!

ಕಳೆದ ಸರಿಸುಮಾರು ಎರಡೂವರೆ ದಶಕಗಳಿಂದ ಭಾರತೀಯ ಇತಿಹಾಸವನ್ನು ಪುನಾರಚಿಸಬೇಕೆಂಬ ವಿಷಯವಾಗಿ ಚರ್ಚೆ ನಡೆಯುತ್ತಲೇ ಇದೆ. ಒಂದು ಸಂಗತಿಯಂತೂ ಸತ್ಯ. ಯಾವುದೇ ಎರಡು ರಾಷ್ಟ್ರಗಳು, ರಾಜ್ಯಗಳು ಅಥವಾ ಪಕ್ಷಗಳ ನಡುವೆ ನಡೆಯುವ ಸಂಘರ್ಷದಲ್ಲಿ ವಿಜಯಿಯಾದವನೇ ಕೊನೆಗೆ ತನ್ನ ಮನಸ್ಸಿಗೆ ತಕ್ಕ ಹಾಗೆ ಇತಿಹಾಸವನ್ನು ಬರೆಯುತ್ತಾನೆ. ಬಹುತೇಕ ಬಾರಿ ಇದೇ ಇತಿಹಾಸವೇ ಶತಮಾನಗಳ ಕಾಲ ಪ್ರಚಲಿತದಲ್ಲಿರುತ್ತದೆ. ಸೋತ ಪಕ್ಷದ ಎಷ್ಟೋ ಪೀಳಿಗೆಗಳು ಇದೇ ವಿಕೃತ ಇತಿಹಾಸವನ್ನು ಓದುತ್ತಾ, ಆತ್ಮವಿಶ್ವಾಸವಿಲ್ಲದ ಸಮಾಜದ ರೂಪದಲ್ಲಿ ಅರೆಬರೆ ವಿಕಸಿತವಾಗುತ್ತದೆ. 

ಭಾರತದ ವಿಷಯದಲ್ಲೂ ಇದೇ ಆಗಿದೆ. ಆಂಗ್ಲ ಭಾಷೆಯ ಪ್ರಸಿದ್ಧ ಇತಿಹಾಸಕಾರ ಎಡ್ವರ್ಡ್‌ ಥಾಂಪ್ಸನ್‌ ಬಹಳ ಸ್ಪಷ್ಟ ಮಾತುಗಳಲ್ಲಿ ಈ ಸಂಗತಿಯನ್ನು ಸಾರಿದ್ದರು. “”ನಮ್ಮ(ಬ್ರಿಟಿಷ್‌) ಇತಿಹಾಸಕಾರರು ಭಾರತೀಯ ಇತಿಹಾಸಕ್ಕೆ ಒಂದು ವಿಶೇಷ ದೃಷ್ಟಿಕೋನವನ್ನು ಒದಗಿಸಿಕೊಟ್ಟಿದ್ದಾರೆ. ಈ ದೃಷ್ಟಿಕೋನವನ್ನು ಬದಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ಸಾಹಸಪೂರ್ಣ ಮತ್ತು ಸಶಕ್ತ ವಿಮಶಾì ಶಕ್ತಿಯ ಅಗತ್ಯವಿರುತ್ತದೆ. ಭಾರತೀಯ ಇತಿಹಾಸಕಾರರಿಗೆ ಇನ್ನೂ ಬಹಳ ವರ್ಷಗಳವರೆಗೆ ಆ ಶಕ್ತಿಯನ್ನು ಕೊಡಲು ಆಗುವುದಿಲ್ಲ” ಎಂದಿದ್ದರವರು.

ಥಾಂಪ್ಸನ್‌ ಮತ್ತು ಜಿ.ಟಿ. ಕರಾಟ್‌ ವಿರಚಿತ  “ದಿ ರೈಸ್‌ ಅಂಡ್ ಫ‌ುಲ್‌ಫಿಲ್ಮೆಂಟ್‌ ಆಫ್ ಬ್ರಿಟೀಷ್‌ ರೂಲ್‌ ಇನ್‌ ಇಂಡಿಯಾ’ ಪುಸ್ತಕದ ವಿಮರ್ಶೆ ಮಾಡುತ್ತಾ ಸರ್‌ ಫ್ರೆಡ್ರಿಕ್‌ ವೈಟ್‌ ಅವರು ಆಂಗ್ಲ ಪತ್ರಿಕೆ “ದಿ ಸ್ಪೆಕ್ಟೇಕ್ಟರ್‌ನಲ್ಲಿ’ ಒಂದು ಕುತೂಹಲಕರ ಅಂಶವನ್ನು ಗಮನಕ್ಕೆ ತಂದರು. ಭಾರತದ ಇತಿಹಾಸದ ಮೇಲೆ ಆಂಗ್ಲರು ಬರೆದ ಲೇಖನಗಳನ್ನು ಉಲ್ಲೇಖೀಸುತ್ತಾ ಅವರು, “”ಬಹುತೇಕ ಸಂದರ್ಭದಲ್ಲಿ ಭಾರತೀಯ ಇತಿಹಾಸವನ್ನು ಒಂದೋ ಬ್ರಿಟಿಷ್‌ ಆಡಳಿತವನ್ನು ಸಮರ್ಥಿಸಿಕೊಳ್ಳುವ ದೃಷ್ಟಿಕೋನದಲ್ಲಿ ಬರೆಯಲಾಗಿದೆ, ಇಲ್ಲವೇ ಕೆಲವೇ ಕೆಲವು ಜನರ ವೈಭವೀಕರಣಕ್ಕಾಗಿ ರಚಿಸಲಾಗಿದೆ….ಯಾವ ಮಟ್ಟಕ್ಕೆಂದರೆ, “ಕೇಂಬ್ರಿಜ್‌  ಹಿಸ್ಟರಿ’ಯಂಥ ಪ್ರಮಾಣಿತ ರಚನೆಗಳನ್ನು ಕೂಡ ನಿಷ್ಪಕ್ಷಪಾತಿ ಎನ್ನುವಂತಿಲ್ಲ. ಅಸಲಿಗೆ, ಈ ರಚನೆಗಳಲ್ಲೆಲ್ಲ ಅಧಿಕವಾಗಿ ಬ್ರಿಟಿಷ್‌ ಮೂಲಗಳನ್ನೇ ಬಳಸಿಕೊಳ್ಳಲಾಗುತ್ತಿರುವುದರಿಂದ, ನಿಷ್ಪಕ್ಷಪಾತ ಇತಿಹಾಸ ರಚನೆ ಸಂಭವವಲ್ಲ” ಎಂದಿದ್ದರು!

ಆಧುನಿಕ ಕಾಲದಲ್ಲಿ ಭಾರತೀಯ ಇತಿಹಾಸವನ್ನು ವಿಕೃತಗೊಳಿಸುವ ಕೆಲಸಕ್ಕೆ ಬುನಾದಿ ಹಾಕಿದವರೆಂದರೆ ಸರ್‌ ವಿಲಿಯಂ ಜೋನ್ಸ್‌.  ಅವರೊಬ್ಬರೇ ಅಲ್ಲ, ಭಾರತೀಯ ಇತಿಹಾಸವನ್ನು ವಿಕೃತಗೊಳಿಸುವಲ್ಲಿ ಇಬ್ಬರ ಭೂಮಿಕೆ ದೊಡ್ಡದು. ಮೊದಲನೆಯವರು ಜೋನ್ಸ್‌ ಮತ್ತು ಎರಡನೆಯವರು ಮ್ಯಾಕ್ಸ್‌ಮುಲ್ಲರ್‌. ವ್ಯಂಗ್ಯವೆಂದರೆ ನಮ್ಮ ದೇಶದ ಒಂದು ದೊಡ್ಡ ವಿದ್ವಾಂಸರ ಗುಂಪು ಇವರಿಬ್ಬರನ್ನೂ “ಮಹಾಪುರುಷರ’ ಶ್ರೇಣಿಯಲ್ಲಿ ಕೂರಿಸಿಬಿಟ್ಟಿದೆ! ಅಂದಹಾಗೆ ಸರ್‌ ವಿಲಿಯಂ ಜೋನ್ಸ್‌ ಕಲ್ಕತ್ತಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರು. ಆ ನಗರದಲ್ಲಿ ರಾಯಲ್‌ ಏಶಿಯಾಟಿಕ್‌ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದವರು.

1793ರಲ್ಲಿ ಸರ್‌ ಜೋನ್ಸ್‌, ರಾಯಲ್‌ ಸೊಸೈಟಿಯಲ್ಲಿ ನಡೆದ ಸಭೆಯೊಂದರಲ್ಲಿ ಭಾರತೀಯ ಇತಿಹಾಸವನ್ನು ತಿರುಚುವುದಕ್ಕಾಗಿಯೇ ತಪ್ಪು ಸಂಗತಿಗಳನ್ನು ಆಧರಿಸಿದ ಕಾಲಕ್ರಮದ ಸಿದ್ಧಾಂತವನ್ನು ಎದುರಿಟ್ಟರು. ಗ್ರೀಕ್‌ ಇತಿಹಾಸವನ್ನೇ ಭಾರತೀಯ ಇತಿಹಾಸದ ಆಧಾರ ಮಾಡಿಬಿಟ್ಟರು ಜೋನ್ಸ್‌! ಅಷ್ಟಕ್ಕೇ ಸುಮ್ಮನಾಗದೆ ನಮ್ಮ ಪೌರಾಣಿಕ ಆಚರಣೆಗಳು ಮತ್ತು ಸಾಕ್ಷಗಳನ್ನು “ಮಿಥ್ಯೆ’ ಎಂದು ಘೋಷಿಸಿಬಿಟ್ಟರು. ಜೋನ್ಸ್‌ ಮಾಡಿದ ಭಾರತೀಯ ಇತಿಹಾಸದ ವರ್ಗೀಕರಣ ಮತ್ತು ಸ್ಥಾಪಿಸಿದ ಮಾನದಂಡವನ್ನೇ ಇಂದಿಗೂ ಎದುರಿಟ್ಟುಕೊಂಡು ನಾವು ದಡ್ಡಶಿಖಾಮಣಿಗಳಂತೆ ಮುಂದುವರಿಯುತ್ತಿದ್ದೇವೆ.

ಭಾರತದ ಮೇಲೆ ಅಲೆಕ್ಸಾಂಡರ್‌ನ ಆಕ್ರಮಣದ ಸಮಯವನ್ನೇ ಆಧಾರವಾಗಿಟ್ಟುಕೊಂಡ ಜೋನ್ಸ್‌ ಭಾರತೀಯ ಇತಿಹಾಸದ ಕಾಲಗಣನೆ ರಚಿಸಿಬಿಟ್ಟರು. “ಅಲೆಕ್ಸಾಂಡರ್‌ನ ಆಕ್ರಮಣ ನಡೆದದ್ದು ಕ್ರಿಸ್ತಪೂರ್ವ 327-28ರಲ್ಲಿ, ಆಗ ಚಂದ್ರಗುಪ್ತ ಮೌರ್ಯ ಅಧಿಕಾರದಲ್ಲಿದ್ದ’ ಎನ್ನುತ್ತಾರೆ ಜೋನ್ಸ್‌. “ಗ್ರೀಕ್‌ ಲೇಖಕರು ತಮ್ಮ ಇತಿಹಾಸದಲ್ಲಿ ಯಾವ ಸ್ಯಾಂಡ್ರೋಕೋಟ್ಸ್‌ನ ಬಗ್ಗೆ ಮಾತನಾಡಿದ್ದರೋ ಆ ವ್ಯಕ್ತಿಯೇ ಚಂದ್ರಗುಪ್ತ ಮೌರ್ಯ. ಚಂದ್ರಗುಪ್ತ ಮೌರ್ಯ ಅಲೆಕ್ಸಾಂಡರ್‌ನ ನಂತರ ಇಡೀ ಭಾರತದ ಸಾಮ್ರಾಟನಾದ’ ಎಂಬುದು ಜೋನ್ಸ್‌ರ ಇನ್ನೊಂದು ವಾದ. ಜೋನ್ಸ್‌ ವಾದದ‌ ಮೂರನೇ ಮಹತ್ವಪೂರ್ಣ ಮಾನದಂಡವೆಂದರೆ ಗ್ರೀಕ್‌ ಲೇಖಕರು ವರ್ಣಿಸಿದ “ಪಾಲಿಗ್ರೋಥಾ’ ನಗರಿ ವಾಸ್ತವದಲ್ಲಿ ಚಂದ್ರಗುಪ್ತ ಮೌರ್ಯನ ರಾಜಧಾನಿ “ಪಾಟಲಿಪುತ್ರ’ ಆಗಿತ್ತು ಎನ್ನುವುದು.

ಈ ಮೂರೂ ಮಾನದಂಡಗಳು ತಪ್ಪು ಎಂದು ಸಾಬೀತಾಗಿವೆ. ಪೌರಾಣಿಕ ಮತ್ತು ಅನ್ಯ ಐತಿಹಾಸಿಕ ಸಾಕ್ಷ್ಯಗಳ ಪ್ರಕಾರ ಚಂದ್ರಗುಪ್ತ ಮೌರ್ಯ ಕ್ರಿಸ್ತ ಪೂರ್ವ 1534ರಲ್ಲಿ ಭಾರತದ ಸಾಮ್ರಾಟನಾಗಿದ್ದ. ಸ್ಯಾಂಡ್ರೋಕೋಟ್ಸ್‌ ವಾಸ್ತವದಲ್ಲಿ ಸಮುದ್ರಗುಪ್ತನೇ ಹೊರತು ಚಂದ್ರಗುಪ್ತ ಮೌರ್ಯನಲ್ಲ. ಸಮುದ್ರಗುಪ್ತ ಕ್ರಿಸ್ತಪೂರ್ವ 305ರಲ್ಲಿ ಗ್ರೀಕ್‌ ಸೇನೆಯನ್ನು ಹೀನಾಯವಾಗಿ ಬಗ್ಗು ಬಡಿದಿದ್ದ. ಪಾಟಲಿಪುತ್ರ ಮೌರ್ಯವಂಶದ ರಾಜಧಾನಿ ಆಗಿರಲೇ ಇಲ್ಲ. ಭಾರತೀಯ ಪೌರಾಣಿಕ ಸಾಕ್ಷ್ಯಗಳ ಪ್ರಕಾರ, ಯಾವಾಗಿಂದ ಮಗಧ ರಾಜ್ಯದ ಸ್ಥಾಪನೆಯಾಯಿತೋ ಆಗಿನಿಂದ ಅದರ ರಾಜಧಾನಿ ಗಿರಿಬ್ರಜ್‌(ನಾವಿಂದು ಅದನ್ನು ರಾಜಗೃಹ ಎನ್ನುವ ಹೆಸರಿಂದ ಗುರುತಿಸುತ್ತೇವೆ) ಆಗಿತ್ತು. ಪಾಟಲೀಪುತ್ರದ ಸ್ಥಾಪನೆ ಮಾಡಿದವರು ಶಿಶುನಾಗ ವಂಶದ ರಾಜ ಅಜಾತಶತ್ರು. ಕಾರ್ಯತಂತ್ರದ ದೃಷ್ಟಿಯಿಂದಲೇ ಈ ನಗರದ ಸ್ಥಾಪನೆ ಮಾಡಲಾಗಿತ್ತು. 

ಇನ್ನು ಮ್ಯಾಕ್ಸ್‌ಮುಲ್ಲರ್‌ ವಿಷಯಕ್ಕೆ ಬರುವುದಾದರೆ ಬ್ರಿಟಿಷ್‌ ಸರ್ಕಾರದ ಕರ್ಮಚಾರಿಯಾಗಿದ್ದ ಆತ ನಮ್ಮ ವೈದಿಕ ಮಂತ್ರಗಳ ಅನುವಾದವನ್ನು ಸಮೂಹ ಗೀತೆಗಳ ರೂಪದಲ್ಲಿ ಮಾಡಿದ್ದಾನೆ. ಇದು ಭಾರತೀಯ ವೈದಿಕ ಸಾಹಿತ್ಯದ ಪ್ರತಿಷ್ಠೆಯನ್ನು ಸಮಾಪ್ತಿಗೊಳಿಸಲು ನಡೆಸಿದ ಯೋಜಿತ ಪ್ರಯತ್ನವಾಗಿತ್ತು. ವೈದಿಕ ಸಾಹಿತ್ಯ ಭಾರತೀಯ ಸಾಂಸ್ಕೃತಿಕ ಜೀವನದ ಬೆನ್ನೆಲುಬಾಗಿತ್ತು. ಭಾರತದಲ್ಲಿ ಬಹಳ ವರ್ಷಗಳವರೆಗೆ ಆಡಳಿತ ನಡೆಸುವುದಕ್ಕಾಗಿ ಈ ಬೆನ್ನೆಲುಬನ್ನು ಮುರಿಯುವುದು ಬ್ರಿಟಿಷರಿಗೆ ಅಗತ್ಯವಾಗಿತ್ತು! 

ಇನ್ನು ಸಂಸ್ಕೃತದಿಂದ ಅನುವಾದ ಮಾಡಲು ಆತನಿಗೆ ಸಾಮಾನ್ಯ ಅನುವಾದಕರಿಗಿಂತ ಹೆಚ್ಚು ಹಣ ಕೊಡಲಾಯಿತು. 9 ಡಿಸೆಂಬರ್‌ 1867ರಲ್ಲಿ ಇದೇ ಮ್ಯಾಕ್ಸ್‌ಮುಲ್ಲರ್‌ ತನ್ನ ಪತ್ನಿಗೆ ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾನೆ: “”ವೇದಗಳ ಈ ಅನುವಾದಿತ ಆವೃತ್ತಿಯು ಪ್ರಕಟವಾಗುವ ಹೊತ್ತಿಗೆ ನಾನು ಜೀವಂತವಾಗಿರುವುದಿಲ್ಲ ಎನಿಸುತ್ತಿದೆ. ಆದರೆ ನನ್ನ ಕೆಲಸವು(ಅನುವಾದ) ಭಾರತ ಮತ್ತು ಇದರ ಲಕ್ಷಾಂತರ ಜನರ ಭವಿಷ್ಯದ ಮೇಲೆ ದೂರಗಾಮಿ ಪರಿಣಾಮ ಬೀರಲಿದೆ. ಈ ವೇದಗಳು ಭಾರತೀಯರ ಧರ್ಮಗ್ರಂಥಗಳ ಮೂಲ. ಕಳೆದ 3,000 ವರ್ಷಗಳಲ್ಲಿ ಇದರಿಂದ ಏನೆಲ್ಲ ಸೃಷ್ಟಿಯಾಗಿದೆಯೋ ಅದನ್ನೆಲ್ಲ ಬೇರು ಸಮೇತ ಕಿತ್ತೆಸೆಯಲು ಸಾಧ್ಯವಿದೆ.”

ಸತ್ಯ ನಮ್ಮ ಕಣ್ಮುಂದೆಯೇ ಇದೆ. ಇದರ ಹೊರತಾಗಿಯೂ ನಾವು ನಮ್ಮ ಇಂದಿನ ಮತ್ತು ಮುಂದಿನ ಪೀಳಿಗೆಗಳಿಗೆ ಯಾವ ರೀತಿಯ ಇತಿಹಾಸವನ್ನು ಓದಿಸಲು ಬಯಸುತ್ತಿದ್ದೇವೆ? ತಪ್ಪು ತಪ್ಪಾಗಿರುವ ಮತ್ತು ನಮ್ಮಲ್ಲಿ ಆತ್ಮಗೌರವದ ಬದಲು ಆತ್ಮವಂಚನೆಯನ್ನು, ಕೀಳರಿಮೆಯನ್ನು ತುಂಬುವ ಇತಿಹಾಸವನ್ನಾ?

(ಲೇಖಕರು ಆರ್‌ಎಸ್‌ಎಸ್‌ನ ಇಂದ್ರಪ್ರಸ್ಥ ವಿಶ್ವಸಂವಾದ ಕೇಂದ್ರದ ಕಾರ್ಯಕಾರಿ ಅಧಿಕಾರಿ. ನವಭಾರತ ಟೈಮ್ಸ್‌ನಲ್ಲಿ ಪ್ರಕಟಿತ ಲೇಖನದ ಅನುವಾದವಿದು)

ಅರುಣ್‌ ಆನಂದ್‌

ಟಾಪ್ ನ್ಯೂಸ್

arya-khan

ಆರ್ಯನ್ ಖಾನ್ ಗೆ ಜಾಮೀನು ನೀಡಿದ ಹೈಕೋರ್ಟ್: ಇಂದೂ ಜೈಲಿನಲ್ಲಿರಬೇಕು

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

syska bolt sw200 smartwatch

ಸಿಸ್ಕಾ ಬೋಲ್ಟ್ ಎಸ್‍ ಡಬ್ಲೂ 200 ವಾಚ್‍: ಅಗ್ಗದ ದರದಲ್ಲಿ ಅಧಿಕ ಪ್ರಯೋಜನ!

26post

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಇ-ಬೈಕ್ ಮೂಲಕ ಅಂಚೆ ವಿತರಣೆ

s-t-somashekhar

ಬೆಂಗಳೂರು ಉಸ್ತುವಾರಿ ಸಿಎಂ ಬೊಮ್ಮಾಯಿ ಬಳಿಯೇ ಇರಲಿ: ಸಚಿವ ಸೋಮಶೇಖರ್

ಹೂಡಿಕೆದಾರರಿಗೆ ಲಕ್ಷಾಂತರ ರೂ. ನಷ್ಟ; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,158 ಅಂಕ ಕುಸಿತ

ಹೂಡಿಕೆದಾರರಿಗೆ ಲಕ್ಷಾಂತರ ರೂ. ನಷ್ಟ; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,158 ಅಂಕ ಕುಸಿತ

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್: ಕಿವೀಸ್ ವಿರುದ್ಧ ಆಡುವುದು ಬಹುತೇಕ ಖಚಿತ

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್: ಕಿವೀಸ್ ವಿರುದ್ಧ ಆಡುವುದು ಬಹುತೇಕ ಖಚಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಹಾರಲಿವೆ ಜೆಟ್‌ ಏರ್‌ವೇಸ್‌ ವಿಮಾನಗಳು!

ಮತ್ತೆ ಹಾರಲಿವೆ ಜೆಟ್‌ ಏರ್‌ವೇಸ್‌ ವಿಮಾನಗಳು!

ಮಕ್ಕಳಿಗೆ ಲಸಿಕೆ ಸುರಕ್ಷಿತವೇ? ಅನುಮಾನಕ್ಕೆ ಪರಿಹಾರ

ಮಕ್ಕಳಿಗೆ ಲಸಿಕೆ ಸುರಕ್ಷಿತವೇ? ಅನುಮಾನಕ್ಕೆ ಪರಿಹಾರ

ಸಣ್ಣ ಯಶಸ್ಸೇ ದೊಡ್ಡ ಯಶಸ್ಸಿಗೆ ಪೂರ್ವ ತಯಾರಿ

ಸಣ್ಣ ಯಶಸ್ಸೇ ದೊಡ್ಡ ಯಶಸ್ಸಿಗೆ ಪೂರ್ವ ತಯಾರಿ

ಬ್ಯಾಂಕಿಂಗ್‌ ನೇಮಕಾತಿ: ಅರ್ಜಿ ಆಹ್ವಾನ

ಬ್ಯಾಂಕಿಂಗ್‌ ನೇಮಕಾತಿ: ಅರ್ಜಿ ಆಹ್ವಾನ

ಮೂರನೇ ಅಲೆಯಾಗಿ ಕಾಡಬಲ್ಲುದೇ ಹೊಸ ತಳಿ?

ಮೂರನೇ ಅಲೆಯಾಗಿ ಕಾಡಬಲ್ಲುದೇ ಹೊಸ ತಳಿ?

MUST WATCH

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

udayavani youtube

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ

udayavani youtube

ಎತ್ತಿನಭುಜ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ

ಹೊಸ ಸೇರ್ಪಡೆ

tiger swimming

2 ನಿಮಿಷದಲ್ಲಿ ಅರ್ಧ ಕಿ.ಮೀ. ಈಜಿದ ಹುಲಿರಾಯ!

27kannada

ಜೋಗ ಜಲಪಾತದ ಎದುರು ನಾಡಗೀತೆ: ಕನ್ನಡ ಮಾಸ ಆಚರಣೆಗೆ ಮುನ್ನುಡಿ

arya-khan

ಆರ್ಯನ್ ಖಾನ್ ಗೆ ಜಾಮೀನು ನೀಡಿದ ಹೈಕೋರ್ಟ್: ಇಂದೂ ಜೈಲಿನಲ್ಲಿರಬೇಕು

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

syska bolt sw200 smartwatch

ಸಿಸ್ಕಾ ಬೋಲ್ಟ್ ಎಸ್‍ ಡಬ್ಲೂ 200 ವಾಚ್‍: ಅಗ್ಗದ ದರದಲ್ಲಿ ಅಧಿಕ ಪ್ರಯೋಜನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.