ಕೋವಿಡ್ ಮಧ್ಯೆಯೇ ಮದುವೆ : ನಿಯಮ ಪಾಲಿಸಲು ಈ ನವ ಜೋಡಿ ಮಾಡಿದ್ರು ನ್ಯೂ ಐಡಿಯಾ..!
Team Udayavani, May 3, 2021, 9:31 AM IST
ಪಾಟ್ನಾ : ದೇಶದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಬಿಗಿ ಕೋವಿಡ್ ನಿಯಮಗಳನ್ನು ಜಾರಿ ಮಾಡಿವೆ. ಮದುವೆ ಸಮಾರಂಭ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಹೆಚ್ಚು ಜನ ಸೇರದಂತೆ ಎಚ್ಚರಿಗೆ ನೀಡಿವೆ. ಇದೇ ಹಿನ್ನೆಲೆಯಲ್ಲಿ ಜನರು ಕೂಡ ಕೋವಿಡ್ ನಿಯಮಗಳನ್ನು ಪಾಲಿಸುತ್ತಿದ್ದಾರೆ.
ಕೋವಿಡ್ ನಿಯಮದ ಮಧ್ಯೆಯೂ ಇಲ್ಲೊಂದು ವಿಶೇಷ ರೀತಿಯಲ್ಲಿ ಮದುವೆ ಸಮಾರಂಭ ನಡೆದಿದೆ. ಬಿಹಾರದ ತೇಗ್ರಾ ಉಪವಿಭಾಗದ ತೇಗ್ರಾ ಬಜಾರ್ನಲ್ಲಿ ಮದುವೆಯೊಂದು ನಡೆದಿದ್ದು, ಈ ಮದುವೆಯಲ್ಲಿ ವಧು-ವರ ಸಾಮಾಜಿಕ ಅಂತರ ಪಾಲನೆ ಮಾಡುವ ನಿಟ್ಟಿನಲ್ಲಿ ಕೋಲುಗಳನ್ನು ಬಳಸಿಕೊಂಡು ಪರಸ್ಪರ ಹಾರಗಳನ್ನು ಬದಲಿಸಿದ್ದಾರೆ. ಈ ಮದುವೆಯು ಏಪ್ರಿಲ್ 30ರ ರಾತ್ರಿ ನಡದಿದೆ ಎಂದು ಹೇಳಲಾಗುತ್ತಿದೆ.
ಬಿಹಾರದ ಅನುಮಂಡಲ್ ಕ್ಷೇತ್ರದ ತೆಗ್ರಾದ ಗಿರಿಧರಲಾಲ್ ಪುತ್ರ ಕೃತೇಶ್ ಕುಮಾರ್ ಮದುವೆ ಜ್ಯೋತಿ ಕುಮಾರಿ ಅವರನ್ನ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದ್ರು. ಕೋವಿಡ್ ನಿಯಮಗಳನ್ನ ಪಾಲಿಸಿದ್ದರಿಂದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಈ ಮದುವೆಯಲ್ಲಿ ಸಮಾರಂಭದಲ್ಲಿ ಸರ್ಕಾರ ಜಾರಿಗೊಳಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕುಟುಂಬಸ್ಥರು ಹಾಗು ವಧು, ವರ ಕೂಡ ಸಂಪೂರ್ಣವಾಗಿ ಅನುಸರಿಸಿದ್ದಾರೆ. ಈ ವಿಶೇಷ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಎಲ್ಲರಿಂದ ಮೆಚ್ಚುಗೆ ಗಳಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ