ಬ್ಲ್ಯಾಕ್‌ ಫಂಗಸ್ ಗೆ  ಕಾರಣಗಳು ಹಲವು


Team Udayavani, May 28, 2021, 6:40 AM IST

ಬ್ಲ್ಯಾಕ್‌ ಫಂಗಸ್ ಗೆ  ಕಾರಣಗಳು ಹಲವು

ಕೋವಿಡ್ ಸೋಂಕು ಹೆಚ್ಚುತ್ತಿದ್ದಂತೆ ಬ್ಲ್ಯಾಕ್‌ ಫ‌ಂಗಸ್‌ ಕೂಡ ಹೆಚ್ಚುತ್ತಿದೆ. ಇದು ಕೊರೊನಾಕ್ಕಿಂತ ಹೆಚ್ಚು ಅಪಾಯಕಾರಿ, ಮರಣಾಂತಿಕ. ಇದು ಬಂತೆಂದರೆ ಕಣ್ಣು, ಮೂಗು, ಮೂಗಿನ ಹತ್ತಿರದ ಮಾಂಸ, ಮೂಳೆಯನ್ನು ತೆಗೆಯಬೇಕಾದ ಅಪಾಯವಿದೆ.

ಮಧುಮೇಹ ಅಧಿಕ ಇದ್ದವರಿಗೆ  ಬ್ಲ್ಯಾಕ್‌ ಫ‌ಂಗಸ್‌ (ಮ್ಯೂಕರ್‌ಮೈಕೋಸಿಸ್‌) ಬರುತ್ತದೆ. ಸ್ಟಿರಾಯ್ಡ ಔಷಧವನ್ನು ಕೊಟ್ಟಾಗ ಮಧುಮೇಹ ಹೆಚ್ಚಾಗುತ್ತದೆ. ಮಧುಮೇಹ ಇಲ್ಲದವರಿಗೆ ಕೊರೊನಾ ಬಂದರೆ ಮಧುಮೇಹ ಹೊಸದಾಗಿ ಅಂಟಿಕೊಳ್ಳುತ್ತದೆ. ಮಧುಮೇಹ ನಿಯಂತ್ರಣದಲ್ಲಿದ್ದ ವರಿಗೆ ಕೋವಿಡ್ ಬಂದರೆ ಒಮ್ಮೆಲೆ ಅಧಿಕ  ವಾಗುತ್ತದೆ. ಕೊರೊನಾ ನಿಯಂತ್ರಿಸಲು ಸ್ಟಿರಾಯ್ಡ ಕೊಡಬೇಕಾಗುತ್ತದೆ. ಆಗ ಮಧುಮೇಹ ಜಾಸ್ತಿಯಾಗುತ್ತದೆ. ಇಂತಹ ಸಂದರ್ಭಕ್ಕಾಗಿಯೇ ಮ್ಯೂಕರ್‌ ಮೈಕೋ ಸಿಸ್‌ ಫ‌ಂಗಸ್‌ ಕಾದು ಕುಳಿತಿರುತ್ತದೆ. ಇಂತಹವರನ್ನೇ ಫ‌ಂಗಸ್‌ ಆಶ್ರಯಿಸುತ್ತದೆ.

ಕೊರೊನಾ ಸೋಂಕು ಬಂದು ಉಸಿ ರಾಟದ ಸಮಸ್ಯೆಯಾದಾಗ ಸಹಜವಾಗಿ ಆಕ್ಸಿಜನ್‌ ಅಗತ್ಯವಾಗುತ್ತದೆ. ಆಕ್ಸಿಜನ್‌ ಬೇಡಿಕೆ ಹೆಚ್ಚಾದ ಕಾರಣ ಎಲ್ಲಿ ಆಕ್ಸಿಜನ್‌ ಸಿಗುತ್ತದೋ ಅಲ್ಲಿಂದ ತರುವ ಸ್ಥಿತಿ ಇದೆ. ಹೀಗಾಗಿ ಕೈಗಾರಿಕಾ ಆಕ್ಸಿಜನ್‌ ಕೂಡ ಬಳಕೆಯಾಗುತ್ತಿದೆ. ಕೈಗಾರಿಕಾ ಆಕ್ಸಿಜನ್‌ ಅಷ್ಟು ಶುದ್ಧ ಆಗಿರುವುದಿಲ್ಲ. ಇದರಲ್ಲಿ ಸ್ವಲ್ಪ ಮಿಶ್ರಣ ಇರುತ್ತದೆ. ಆಕ್ಸಿಜನ್‌ ಕಾನ್ಸಂಟ್ರೇಟರ್‌ ಬಳಕೆಯಾಗುತ್ತಿದೆ. ಇದು ವಿದೇಶಗಳಿಂದ ದೇಣಿಗೆಯಾಗಿಯೂ ಬರುತ್ತಿದೆ. ಆಕ್ಸಿಜನ್‌ ಅನ್ನು ನೇರವಾಗಿ ಕೊಡಲು ಆಗುವುದಿಲ್ಲ, ನೀರಿನ ಮೂಲ ಕವೇ ಕೊಡಬೇಕು. ಆಗ ಬಹಳ ಜಾಗರೂಕತೆಯಿಂದ ಶುದ್ಧ ನೀರನ್ನು ಬಳಸಬೇಕು. ಎಲ್ಲ ಕಡೆ ಶುದ್ಧ ನೀರು ಸಿಗುತ್ತದೆಯೆ? ಎಲ್ಲ ಮನೆಗಳಲ್ಲಿಯೂ, ಎಲ್ಲ ಆಸ್ಪತ್ರೆಗಳಲ್ಲಿಯೂ ಇದನ್ನು ನಿರೀಕ್ಷಿ ಸುವುದು ಕಷ್ಟಸಾಧ್ಯ. ಯಾವುದೋ ನಳ್ಳಿ ನೀರನ್ನು ಬಳಸಿದರೆ ಅಪಾಯವಿದೆ. ಆದ್ದರಿಂದ ಪರಿಶುದ್ಧ ನೀರನ್ನೇ ಉಪಯೋಗಿಸಬೇಕು.

ಇತ್ತೀಚೆಗಿನ ಅಧ್ಯಯನವೊಂದರ ವರದಿಯ ಪ್ರಕಾರ ಬ್ಲ್ಯಾಕ್‌ ಫ‌ಂಗಸ್‌ ಕಾಣಿಸಿಕೊಳ್ಳಲು ಕೊರೊನಾ ಸೋಂಕಿನ ಪರೀಕ್ಷೆಯ ವೇಳೆ ಗಂಟಲ ದ್ರವ ಸಂಗ್ರಹಿ ಸಲು ಬಳಸಲಾಗುವ ನೈರ್ಮಲ್ಯ ಯುತ ವಾಗಿರದ ನಾಳಗಳೂ ಕಾರಣವಾಗುತ್ತಿ ರುವುದು ಸಾಬೀತಾಗಿದೆ. ಅಷ್ಟು ಮಾತ್ರ ವಲ್ಲದೆ ಬ್ಲ್ಯಾಕ್‌ ಫ‌ಂಗಸ್‌ನಿಂದ ಬಾಧಿತ ರಾಗಿರುವ ಶೇ.60ರಷ್ಟು ರೋಗಿಗಳಿಗೆ ಕೋವಿಡ್‌ ಚಿಕಿತ್ಸೆಯ ಸಂದರ್ಭದಲ್ಲಿ ಸ್ಟಿರಾಯ್ಡ ಅಥವಾ ಆಮ್ಲಜನಕವನ್ನು ನೀಡ ಲಾಗಿರಲಿಲ್ಲ ಎಂಬುದೂ ಅಧ್ಯಯನದ ವೇಳೆ ಬೆಳಕಿಗೆ ಬಂದಿದೆ. ಇವೆಲ್ಲವೂ ಗಂಟಲದ್ರವ ಸಂಗ್ರಹಕ್ಕೆ ಬಳಸಲಾಗುವ ನಾಳಗಳು ಕೂಡ ಬ್ಲ್ಯಾಕ್‌ಫ‌ಂಗಸ್‌ ಹರ ಡಲು ಕಾರಣವಾಗುತ್ತಿದೆ ಎಂಬ ಬಲವಾದ ಸಂಶಯ ಮೂಡುವಂತೆ ಮಾಡಿದೆ.

ಅಸುರಕ್ಷಿತ ಮತ್ತು ಅನೈರ್ಮಲ್ಯ ದಿಂದ ಕೂಡಿದ ಪ್ರದೇಶಗಳಲ್ಲಿ ಈ ನಾಳಗಳನ್ನು ತಯಾರಿಸಿದರೆ ಅಪಾಯ ಕಟ್ಟಿಟ್ಟಬುತ್ತಿಯೇ ಸರಿ. ದೇಶಾದ್ಯಂತ ಕೋವಿಡ್‌ ಪಸರಿಸು ತ್ತಿರುವ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಕೊರೊನಾ ಪರೀಕ್ಷೆಗೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ನಾಳಗಳ ತಯಾರಿಕೆ ವೇಳೆ ನೈರ್ಮಲ್ಯದತ್ತ ಗಮನ ಹರಿಸಬೇಕಿದೆಯಲ್ಲದೆ ಗಂಟಲ ದ್ರವ ಸಂಗ್ರಹದ ವೇಳೆ ನಾಳದ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವುದು ಬಲುಮುಖ್ಯ. ಗಂಟಲ ದ್ರವ ಸಂಗ್ರಹಿಸುವವರಿಗೂ ಸೂಕ್ತ ತರಬೇತಿಯನ್ನು ನೀಡುವುದು ಅತ್ಯಗತ್ಯವಾಗಿದೆ. ನಾಳವನ್ನು ಮೂಗಿಗೆ ಎರಡು ಸೆಂಟಿಮೀಟರ್‌ ಹಾಕಿದರೆ ಸಾಕು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಾಲ್ಕು ಸೆಂಟಿಮೀಟರ್‌ ಆಳದವರೆಗೆ ಹಾಕಿ ತಿರುಗಿಸಿ ದ್ರವ ಸಂಗ್ರಹಿಸಲಾಗುತ್ತಿದೆ. ಇವೆಲ್ಲವೂ ತೀರಾ ಅಪಾಯಕಾರಿ. ಇವೆಲ್ಲದರ ಬಗೆಗೆ ನಿಗಾ ವಹಿಸುವ ಜತೆಯಲ್ಲಿ ಹೆಚ್ಚಿನ ಅಧ್ಯಯನಗಳು ನಡೆಯಬೇಕು. ಇತ್ತ ಸರಕಾರ ಮತ್ತು ವೈದ್ಯಕೀಯ ತಜ್ಞರು ಗಂಭೀರ ಚಿಂತನೆ  ನಡೆಸುವ ಅಗತ್ಯವಿದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.