Udayavni Special

ದೇವರು ಕರೆದೆಡೆ ಹೊರಟ ಪಿಚ್ಚೆ ಮೊದಲಿಯಾರ್‌


Team Udayavani, Mar 17, 2018, 2:00 AM IST

7.jpg

ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಮತ್ತು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಡಿ.ವಿ.ಜಿ. ಅವರ “ಜ್ಞಾಪಕ ಚಿತ್ರಶಾಲೆ’ಯ ಎಂಟು ಸಂಪುಟಗಳು ಇಂದು ಬೆಂಗಳೂರಿನ ಗೋಖಲೆ ಸಂಭಾಂಗಣದಲ್ಲಿ ಬಿಡುಗಡೆಯಾಗಲಿವೆ. ತನ್ನಿಮಿತ್ತ , ಮೊದಲನೇ ಸಂಪುಟದ ಆಯ್ದ ಲೇಖನ ನಿಮ್ಮ ಮುಂದೆ…

ಸುಮಾರು 35 ವರ್ಷಗಳ ಹಿಂದೆ ನಾನು ಒಂದು ಹಳೆಯ ಮನೆಯನ್ನು ದುರಸ್ತು ಮಾಡಿಸುತ್ತಿದ್ದೆ. ಮನೆಯ ಮುಂಭಾಗದ ಮಾಳಿಗೆ ಶಿಥಿಲವಾಗಿತ್ತು. ಅದನ್ನು ಕೀಳಿಸಿ ಸರಿಪಡಿಸುವ ಕೆಲಸವನ್ನು ಒಬ್ಬ ಒಟ್ಟು ಗುತ್ತಿಗೆದಾರನಿಗೆ ಒಪ್ಪಿಸಿದ್ದೆ. ಆ ಮನೆಯ ಕೆಲವು ಭಾಗಗಳು ಅತಂತ್ರವಾಗಿದ್ದರೂ, ತಲಬಾಗಲು ಭದ್ರ ವಾಗಿ ಲಕ್ಷಣವಾಗಿತ್ತು. ಅದು 50-60 ವರ್ಷಗಳ ಹಿಂದಿನಿಂದ ಬಂದಿ ದ್ದದ್ದು. ಆ ಬಾಗಿಲನ್ನು ಕದಲಿಸದೆ ಇದ್ದಂತೆಯೇ ಬಿಡಬೇಕೆಂದು ಆ ಕಂಟ್ರಾಕ್ಟದಾರನಿಗೂ ನನಗೂ ಒಪ್ಪಿಗೆಯಾಗಿತ್ತು. ಆದರೆ ಕೆಲಸದ ಅವಸರದಲ್ಲಿ ಆತನು ಆ ಬಾಗಿಲನ್ನೂ ಅದರ ಚೌಕಟ್ಟನ್ನೂ ಹೊರಕ್ಕೆ ತೆಗೆಯಬೇಕಾದ ಕಾರಣ ತೋರಿಬಂತು. ಹಾಗೆ ತೆಗೆದ ಮೇಲೆ ಅದನ್ನು ಹಿಂದಿದ್ದಂತೆಯೇ ಮರಳಿ ಕೂಡಿಸಿಕೊಡುವು ದಾಗಿ ಆತ ಭರವಸೆ ಕೊಟ್ಟಿದ್ದ. ಬಾಗಿಲನ್ನು ಪುನಃ ಸೇರಿಸಬೇಕಾದ ವೇಳೆ ಬಂದಾಗ ಕೆಲಸಗಾರರು ಬಾಗಿಲ ಚೌಕಟ್ಟನ್ನು ಅದರ ಸ್ಥಳದಲ್ಲಿ ನಿಲ್ಲಿಸಿ ಅದರ ಎರಡು ಪಕ್ಕಗಳಲ್ಲಿಯೂ ಗೋಡೆ ಕಟ್ಟುತ್ತಿದ್ದರು. ಗೋಡೆ ಒಂದು ಮೊಳದುದ್ದ ಎದ್ದಮೇಲೆ ನಾನು ಚೌಕಟ್ಟಿನೊಳಕ್ಕೆ ಅದರ ಹಳೆಯ ಕದಗಳು ಹಿಂದಿನಂತೆ ಹೊಂದಿ ಕೊಳ್ಳುತ್ತವೋ ಇಲ್ಲವೋ ನೋಡಬೇಕೆಂದೆ. ಕಂಟ್ರಾಕುrದಾರನು “ಹೊಂದಿಕೊಳ್ಳದೆ ಏನು ಮಾಡುತ್ತದೆ ಸ್ವಾಮಿ?’ ಎಂದು ಹೇಳಿ ಕೆಲಸವನ್ನು ಮುಂದೆ ಸಾಗಿಸಬೇಕೆಂದಿದ್ದ. ನಾನು ಅದಕ್ಕೆ ಒಪ್ಪದೆ ಅಡ್ಡಿಮಾಡಿದ ಮೇಲೆ ಕೆಲಸಗಾರರು ಆ ಎರಡು ಕದಗಳನ್ನೂ ತಂದು ಬಾಗಿಲುವಾಡದ ಕೂರುಗಳಿಗೆ ಸೇರಿಸಿದರು.

ಕದಗಳನ್ನು ಮುಚ್ಚಹೋದಾಗ ಅವು ಹಿಂದಿನಂತೆ ಕೂಡಲಿಲ್ಲ. ಬಾಗಿಲ ಚೌಕಟ್ಟನ್ನು ನಿಲ್ಲಿಸುವುದರಲ್ಲಿ ಏನೋ ತಪ್ಪಿರಬೇಕೆಂದು ನಾನು ಅನುಮಾನಿಸಿದೆ. ಕಂಟ್ರಾಕುrದಾರನು “ಅದರಲ್ಲೇನೂ ತಪ್ಪಿಲ್ಲ; ಬಾಗಿಲ ರೆಕ್ಕೆಗಳಲ್ಲಿ ಹೆಚ್ಚು ಕಡಮೆ ಇರಬಹುದು. ಅದನ್ನು ಉಳಿ ಸವರಿಯೋ, ತೋಪಡಾ ಹಿಡಿದೋ ಸರಿಪಡಿಸಿ ದರಾಯಿತು’ ಎಂದ. ಆ ಸಲಹೆ ನಾನು ಒಪ್ಪಲಾರದ್ದು. ಆ ಬಾಗಿಲುಗಳು ಭಾರವಾದ ದಪ್ಪನೆಯ ತ್ಯಾಗದ ಮರದವು. ಒಳ್ಳೆಯ ಕೆತ್ತನೆಯ ಕೆಲಸದಿಂದ ಅಂದವಾಗಿದ್ದವು. 60-70 ವರ್ಷದಿಂದ ಸುಲಭವಾಗಿ ಕೆಲಸಮಾಡುತ್ತಿದ್ದ ಆ ವಸ್ತುವಿಗೆ ರೂಪ ವಿಕಾರ ಮಾಡಬೇಕೆಂಬುದು ನನಗೆ ಸರಿ ತೋರಲಿಲ್ಲ.

ಮಾತುಗಳು ಕೊಂಚ ಬಿರುಸಾಗಿ ನಡೆದವು. ಆ ಹೊತ್ತಿಗೆ ಸರಿಯಾಗಿ ಬೀದಿಯಲ್ಲಿ ಒಂದು ಸಣ್ಣ ಗುಂಪು ನೆರೆಯಿತು. ಆ ಗುಂಪಿನಲ್ಲಿ ಒಬ್ಬ ಮುದುಕ ನಗುಮುಖದಿಂದ ನಿಂತು ನೋಡುತ್ತಿದ್ದ. ನಾನು ಒಂದು ಕ್ಷಣ ಆತನನ್ನು ದೃಷ್ಟಿಸಿ ನೋಡಿ, ಆತನ ಬಳಿ ಹೋಗಿ – “ನೀವು ಪಿಚ್ಚೆ„ಮೊದಲಿಯಾರು ಅಲ್ಲವೆ?’ ಎಂದು ಕೇಳಿದೆ. ಆತ “ಹೌದು ಸ್ವಾಮಿ, ನಿಮಗೆ ಗುರ್ತು ತಿಳಿಯಿತೆ?’ ಎಂದು ಕೇಳಿದರು. ನಾನು-“ಸುಲಭವಾಗಿ ತಿಳಿಯ ಲಿಲ್ಲ, ಸ್ವಲ್ಪ ಯೋಚಿಸಿದ ಮೇಲೆ ತಿಳಿಯಿತು. ಬನ್ನಿ, ಈ ಬಾಗಿಲನ್ನು ಸ್ವಲ್ಪ$ನೋಡಿ’ ಎಂದು ಕರೆದೆ. ಆತ, “ಆಗಿನಿಂದ ನೋಡುತ್ತಿದ್ದೇನೆ ಸ್ವಾಮಿ’ ಎಂದು ಹೇಳಿ ಬಾಗಿಲವರೆಗೆ ಬಂದು ಕಂಟ್ರಾಕ್ಟ್ದಾರನ ಕಡೆ ತಿರುಗಿ, “ಒಂದು ದಾರ ಇದ್ದರೆ ಕೊಡಿ’ ಎಂದು ಕೇಳಿದರು. ದಾರ ತನ್ನ ಕೈಗೆ ಬಂದಕೂಡಲೆ ಮೊದಲಿಯಾರರು ಅದನ್ನು ಬಾಗಿಲುವಾಡದ ಎಡಗಡೆಯ ಕೆಳಮೂಲೆಯಿಂದ ಬಲಗಡೆಯ ಮೇಲ್ಮೂಲೆಗೆ ಅಳತೆ ಹಿಡಿದು, “ಮೇಸ್ತ್ರಿಗಳೇ, ಗುರ್ತು ಮಾಡಿಕೊಳ್ಳಿ’ ಎಂದರು. ಮೇಸ್ತ್ರಿ ಆಯಿತು ಎನ್ನುತ್ತಲೇ, ಮೊದಲಿಯಾರರು ಅದೇ ದಾರವನ್ನು ಬಲಗಡೆಯ ಕೆಳಮೂಲೆಯಿಂದ ಎಡಗಡೆಯ ಮೇಲ್ಮೂಲೆಗೆ ಹಿಡಿದು, “ಮೇಸ್ತ್ರಿಗಳೇ, ಈಗ ನೋಡಿ’ ಅಂದರು. ಆ ಎರಡು ಅಳತೆಗಳಿಗೂ ಒಂದು ಅರೆಕಾಲು ಅಂಗುಲದಷ್ಟು ವ್ಯತ್ಯಾಸ ಇತ್ತೆಂದು ಗೊತ್ತಾಯಿತು. ಕಂಟ್ರಾಕುrದಾರನು ಒಪ್ಪಿಕೊಂಡು ಹಳೆಯ ಗೋಡೆಕಟ್ಟನ್ನು ಕೀಳಿಸಿ ಪುನಃ ಆ ದ್ವಾರಬಂಧವನ್ನು ಅಲ್ಲಿರಿಸಿ ಗೋಡೆ ಕಟ್ಟಿಸಿದ. ಕದಗಳು ಆಗ ಸರಿಯಾಗಿ ಕುಳಿತವು. ಮೊದಲಿಯಾರರ ಕೆಲಸದ ಮರ್ಮಜ್ಞತೆ ಅಷ್ಟು ದೊಡ್ಡದು. ದೂರದ ನೋಟದಿಂದಲೇ ಅವರು ಚೌಕಟ್ಟಿನ ಸರಿಮಟ್ಟವನ್ನು ಅಳೆಯಬಲ್ಲವರಾಗಿದ್ದರು. ಅದು ಕಣ್ಣಿನ ಸೂಕ್ಷ್ಮ; ಬಹು ಕಾಲದ ಕೆಲಸದ ಅನುಭವದಿಂದ ಅವರಿಗೆ ಬಂದಿದ್ದದ್ದು. ಆತ್ಮ ಸಾಕ್ಷಿ ಬಿಟ್ಟು ನೂರು ವರ್ಷ ಕೆಲಸ ಮಾಡಿದ್ದರೂ ಆ ದೃಷ್ಟಿಸೂಕ್ಷ್ಮತೆ ಬರಲಾರದು. ಕಾರ್ಯಯೋಗ್ಯತೆ ಚೆನ್ನಾಗಿ ಬೆಳೆಯಬೇಕಾದರೆ ಕಾರ್ಯ ಮಾಡುವುದರಲ್ಲಿ ಪ್ರಾಮಾಣಿಕತೆ ಇರಬೇಕು.

ಪಿಚ್ಚೆ„ ಮೊದಲಿಯಾರರ ನಿಜವಾದ ಹೆಸರೇನೋ ಅವರು ಹೇಳುತ್ತಿರಲಿಲ್ಲ. ಪಿಚ್ಚೆ„ ಎಂದರೆ ತಮಿಳಿನಲ್ಲಿ ಭಿಕ್ಷೆ. ತಾವು ಶಿವನಿಂದ ಭಿಕ್ಷೆ ಪಡೆಯುತ್ತಿದ್ದವರೆಂದು ಅವರ ಭಾವನೆ. ಆದ್ದರಿಂದ ಅವರು ಶಿವಭಿಕ್ಷೆ ಮೊದಲಿಯಾರರು.

ಅವರು ಮಿತಭಾಷಿ. ತಮಿಳು, ತೆಲುಗು, ಕನ್ನಡ-ಈ ಮೂರು ಭಾಷೆಗಳಲ್ಲಿ ಚೆನ್ನಾಗಿ ಮಾತನಾಡುವರು, ಸರಸವಾಗಿ ಕೊಂಚ ಹಾಸ್ಯವಿಟ್ಟು ಮಾತನಾಡುವರು.

ಪಿಚ್ಚೆ„ ಮೊದಲಿಯಾರರು ಗಾರೆಯ ಕೆಲಸದಿಂದ ಜೀವನ ಮಾಡುತ್ತಿದ್ದವರು. ವಾಸ್ತುಶಿಲ್ಪ ವಿದ್ಯೆಯಲ್ಲಿ ಅವರಿಗೆ ಚೆನ್ನಾಗಿ ತಿಳಿಯದಿದ್ದ ಭಾಗವಾವುದೂ ಇರಲಿಲ್ಲ. ಬಡವನ ಮಣ್ಣು ಮಾಳಿಗೆಯಿಂದ ಹಣವಂತರ ಭಾರೀ ಬಂಗಲೆಯವರೆಗೂ ಎಂಥ ಮನೆ ಕಟ್ಟುವ ಕೆಲಸವನ್ನಾದರೂ ಸೊಗಸಾಗಿ ಮಾಡುವ ಸಾಮರ್ಥ್ಯ ಅವರಿಗಿತ್ತು. ಕೆಲಸಕ್ಕಿಟ್ಟುಕೊಂಡವರಿಗೆ ವೆಚ್ಚ ಕಡಮೆ ಮಾಡಿ ಅನುಕೂಲ ಹೆಚ್ಚು ಮಾಡಬೇಕೆಂಬುದು ಅವ‌ರ ಆಲೋಚನೆ. ಕಲ್ಲು, ಮಣ್ಣು, ಸುಣ್ಣ, ಗಾರೆ, ಇಟ್ಟಿಗೆ, ಮರ, ಕಬ್ಬಿಣ- ಈ ಎಲ್ಲ ಸಾಮಾನುಗಳ ಮಾಹಿತಿಯೂ ಅವರಿಗಿತ್ತು. ಗೋಡೆ ಕಟ್ಟುವುದು, ಹೆಂಚು ಹೊದಿಸುವುದು, ತಾರಸಿ ಹಾಕುವುದು, ನೆಲಕ್ಕೆ ಚದರಬಿಲ್ಲೆ ಹಾಸುವುದು, ನಯ ಗಾರೆ ಉಜ್ಜುವುದು-ಈ ಯಾವ ಕೆಲಸವನ್ನು ಬೇಕಾದರೂ ತೃಪ್ತಿಕರವಾಗಿ ಮಾಡಿ ಮುಗಿಸಲು ಅವರನ್ನು ಧಾರಾಳವಾಗಿ ನಂಬಬಹುದಾಗಿತ್ತು. ಮನೆಯ ಕೊಠಡಿಗಳ ಉದ್ದ ಅಗಲಗಳು, ಕಿಟಕಿ ಬಾಗಿಲುಗಳ ಅಳತೆಗಳು, ಅವುಗಳ ಸ್ಥಾನಗಳು-ಈ ಎಲ್ಲ ವಿವರಗಳನ್ನೂ ಕುರಿತು ಒಳ್ಳೊಳ್ಳೆಯ ಸಲಹೆ ಕೊಡುತ್ತಿದ್ದನಂತೆ. ಆದದ್ದರಿಂದ ಆತನನ್ನು ಬಹುಜನ ಅಪೇಕ್ಷಿಸುತ್ತಿದ್ದರು. ಆದರೆ ಈ ಕಾರಣದಿಂದ ತಮ್ಮ ಕೂಲಿಯ ದರವನ್ನೇನೂ ಹೆಚ್ಚಿಸಿರಲಿಲ್ಲ. ಆ ಕಸುಬಿನಲ್ಲಿ ಎಲ್ಲರಿಗೂ ಸಾಮಾನ್ಯವಾಗಿದ್ದ ಕೂಲಿಯ ದರದಿಂದಲೇ ತೃಪ್ತರಾಗಿದ್ದರು. 

ಪಿಚ್ಚೆ„ ಮೊದಲಿಯಾರರ ಬಂಧುಗಳಲ್ಲಿ ಕೆಲವರು ದೊಡ್ಡ ದೊಡ್ಡ ಸರಕಾರಿ ಹುದ್ದೆಗಳಲ್ಲಿದ್ದರು. ಕೆಲವರು ವ್ಯಾಪಾರದಲ್ಲಿ ಹಣಮಾಡಿ ಹೆಸರುವಾಸಿಯಾಗಿದ್ದರು. ಆದರೆ ಪಿಚ್ಚೆ„ ಮೊದಲಿ ಯಾರರು ಆ ಜನದಲ್ಲಿ ಬಳಕೆ ಮಾಡಿಕೊಂಡಿರಲಿಲ್ಲ. ಅವರ ಹೆಸರನ್ನೆತ್ತುತ್ತಲೇ ಇರಲಿಲ್ಲ. ಅವರಿಗೆ ಹಲಸೂರಿನಲ್ಲಿ ಪಿತ್ರಾರ್ಜಿತ‌ ಒಂದು ಮನೆಯೂ ಕೊಂಚ ಜಮೀನೂ ಇದ್ದುವಂತೆ. ಬೆಂಗ ಳೂರಿಗೆ ಪ್ಲೇಗು ಬಂದ ಹೊಸದರಲ್ಲಿ-ಸುಮಾರು 1899- 1900ರಲ್ಲಿ- ಪ್ಲೇಗಿನ ಎರಡನೆಯ ಹೊಡೆತದಲ್ಲಿ, ಪಿಚ್ಚೆ„ ಮೊದಲಿ ಯಾರರಿಗೆ ಸಂಸಾರನಷ್ಟವಾಯಿತು. ಇದ್ದ ಇಬ್ಬರು ಮಕ್ಕಳೂ ಹೋದರು. ಆಮೇಲೆ ಒಂದು ವರ್ಷದೊಳಗಾಗಿ ಹೆಂಡತಿ ತೀರಿಕೊಂಡಳು. ಮೊದಲಿಯಾರರಿಗೆ ಪುನಃ ಸಂಸಾರ ಕಟ್ಟಿಕೊಳ್ಳುವ ಇಷ್ಟ ಬರಲಿಲ್ಲ. ಎರಡು ಮೂರು ವರ್ಷ ತಾವು ಒಬ್ಬರೇ ಇದ್ದುಕೊಂಡು ಕೂಲಿಗೆ ದುಡಿದು ಬದುಕಿದರು. ಆಮೇಲೆ ಏನಾಯಿತೋ ಏನೋ, ಒಂದು ದಿನ ತಮ್ಮ ಮನೆ ಆಸ್ತಿಗಳನ್ನು ತಮಗಿದ್ದ ಒಬ್ಬ ತಂಗಿಗೆ ದಾನವಾಗಿ ಕೊಟ್ಟುಬಿಟ್ಟರು. ತಮ್ಮ ಬಳಿ ಒಂದು 15 ರೂಪಾಯಿ ಮಾತ್ರ ಇಟ್ಟುಕೊಂಡು ದೇಶಸಂಚಾರ ಹೊರಟರು. ಅವರ ಸಾಮಾನು, ಮೈಮೇಲಿದ್ದ ಬಟ್ಟೆಗಳ ಜೊತೆಗೆ-ಒಂದು ಕಂಬಳಿ, ಒಂದೆರಡು ಹಳೆಯ ಧೋತ್ರಗಳು, ಎರಡು ಕರಣೆಗಳು, ಒಂದು ತೂಕದ ಗುಂಡು, ಒಂದು ರಸಮಟ್ಟ, ಒಂದು ಸಣ್ಣ ಮೂಲೆಮಟ್ಟ, ಒಂದು ಒಂದೂವರೆ ಮೊಳದ ಮಟ್ಟ ಕಟ್ಟಿಗೆ-ಇಷ್ಟನ್ನಿಟ್ಟುಕೊಂಡು ರೈಲಿನಲ್ಲಿ ಕುಳಿತು ಹೊರಟರು. 

ಪ್ರಯಾಣದ ರೀತಿ ಹೀಗೆ: ಬೆಂಗಳೂರಿನಿಂದ ಹೊರಟವರು, ಮಸಲಾ, ಜಾಲಾರ್‌ ಪೇಟೆಯಲ್ಲಿ ಇಳಿಯುವರು. ಅಲ್ಲಿ ಊರೊಳಕ್ಕೆ ಹೋಗಿ, ಕಟ್ಟಡದ ಕೆಲಸ ನಡೆಯುತ್ತಿರುವ ಕಡೆ ನಿಂತು, “ಕೂಲಿ ಕೆಲಸ ಏನಾದರೂ ಇದೆಯೆ?’ ಎಂದು ಕೇಳುವರು: ಅಲ್ಲಿ ಉಂಟೆಂದರೆ ಎರಡು ಮೂರು ದಿನ ಕೆಲಸ ಮಾಡಿ, ಹೋಟಲಿನಲ್ಲಿಯೋ ಸ್ವಯಂಪಾಕದಿಂದಲೋ ಊಟ ಮಾಡಿ, ಮೂರುನಾಲ್ಕು ರೂಪಾಯಿ ಮಿಗಿಸಿ ಸೊಂಟಕ್ಕೆ ಸಿಕ್ಕಿಸಿ ಅಲ್ಲಿಂದ ಮುಂದೆ ಹೊರಡುವರು. ರೈಲಿನಲ್ಲಿ ಕೂಡುವಾಗ ಸಾಮಾನ್ಯವಾಗಿ ಎಲ್ಲಿಗೆ ಹೋಗುವುದೆಂಬುದನ್ನು ಗೊತ್ತು ಮಾಡಿಕೊಂಡಿರುತ್ತಿರಲಿಲ್ಲ. ಜೊತೆಯಲ್ಲಿದ್ದ ಪ್ರಯಾಣಿಕರನ್ನು ವಿಚಾರಿಸಿಕೊಂಡು ಎಲ್ಲಿ ಅನುಕೂಲ ಇರಬಹುದೆಂದು ತನ್ನ ಮನಸ್ಸಿಗೆ ತೋಚಿದರೆ ಅಲ್ಲಿ ಇಳಿದುಬಿಡುವರು. ಅಲ್ಲಿ ದೇವಸ್ಥಾನವಿದ್ದರೆ ದೇವರ ದರ್ಶನ ಮಾಡುವರು. ಒಂದೆರಡು ದಿನ ನಿಲ್ಲಬೇಕೆಂದು ಮನಸ್ಸು ಬಂದರೆ ಅಲ್ಲಿಯೇ ಉಳಿಯು ವರು. ಇಲ್ಲದಿದ್ದರೆ ಮುಂದಕ್ಕೆ ಹೊರಡುವರು. ಅವರ ಮುಖ್ಯೋ ದ್ದೇಶವು ನಾನಾ ಪುಣ್ಯಕ್ಷೇತ್ರಗಳ ದರ್ಶನ. ಅದಕ್ಕೆ ಸಾಧಕವಾಗಿ ಮಾರ್ಗವಶಾತ್‌ ಆದಷ್ಟು ಕೂಲಿಯ ಸಂಪಾದನೆ. ಇದು ಅವರ “ಪ್ರೋಗ್ರಾಂ’. ಸೊಂಟದಲ್ಲಿ ಹಣ ಮುಗಿದಿದ್ದರೆ ಕೆಲಸಕ್ಕಾಗಿ ಇಳಿಯುವರು. ಹಣದ ಆವಶ್ಯಕತೆಯ ಒತ್ತಾಯ ವಿಲ್ಲದಿದ್ದರೆ ದೇವಾಲಯಗಳನ್ನು ಹುಡುಕಿಕೊಂಡು ಹೊರಡು ವರು. ಮೊದಲಿಯಾರರು ಹೀಗೆ ನಮ್ಮ ದೇಶದ ಎಲ್ಲ ಪ್ರಸಿದ್ಧ ದಿವ್ಯಕ್ಷೇತ್ರಗಳಿಗೂ ಯಾತ್ರೆ ಮಾಡಿದ್ದರು. ಕಾಶಿ ರಾಮೇಶ್ವರ ಗಳಿಗೆ ಮೂರು ಮೂರು ಸಲ ಹೋಗಿದ್ದರು. ಪ್ರಯಾಗ, ಪುರಿ, ಪಂಢರಾಪುರ, ಕಂಚಿ, ತಿರುಪತಿ, ಕಾಳಹಸ್ತಿ, ಪಳನಿ, ಮಧುರೆ, ಶ್ರೀರಂಗ, ಅಹೋಬಲ, ಭದ್ರಾಚಲ, ಶ್ರೀಶೈಲ- ಈ ಎಲ್ಲ ಕಡೆಗಳಿಗೂ ಹೋಗಿ ಒಂದೊಂದು ಕಡೆ ಮೂರು ಮೂರು 
ದಿನ, ಐದೈದು ದಿನ ಇದ್ದು ದೇವತಾ ಸೇವೆ ನಡಸಿ ಬಂದರು. ಅವರ ಈ ಯಾತ್ರೆಯ ಸಂಕ್ಷೇಪ ವರ್ಣನೆ ನಾನು ಅವರ ಬಾಯಿಂದಲೇ ಕೇಳಿದ್ದೇನೆ.

ಮೊದಲಿಯಾರರ ಕಾರ್ಯನಿಯಮವನ್ನು ಕುರಿತು ಒಂದು ಮಾತು ಹೇಳದಿದ್ದರೆ ಅವರ ಸ್ವರೂಪವನ್ನು ತಿಳಿಸಿದಂತೆ ಆಗದು. ಕೆಲಸಕ್ಕೆ ಬರುವ ವೇಳೆ, ಕೆಲಸ ಮುಗಿಸುವ ವೇಳೆ, ಕೆಲಸ ನಡಸುವ ವೇಳೆ – ಈ ಮೂರು ಬಾಬುಗಳಲ್ಲಿಯೂ ಅವರು ತುಂಬಾ ಕಟ್ಟುನಿಟ್ಟಿನವರು. ಊರಿನಲ್ಲಿ ಗಡಿಯಾರ ಒಂದೂ ಇಲ್ಲದೆ ಇದ್ದರೆ ಪಿಚ್ಚೆ„ ಮೊದಲಿಯಾರರು ಕೆಲಸ ಹಿಡಿಯುವ ಅಥವಾ ಕೆಲಸ ಬಿಡುವ ಘಳಿಗೆಯಿಂದ ವೇಳೆ ಎಷ್ಟೆಂಬುದನ್ನು ತಿಳಿಯಬಹುದಾಗಿತ್ತು. ಅವರ ಜನ್ಮದೊಳಗಾಗಿ ಅವರನ್ನು “ಯಾಕೆ ಇಷ್ಟು ಹೊತ್ತಾಗಿ ಬಂದೆ?’ ಎಂದಾಗಲಿ, “ಏನು ಇಷ್ಟವಸರ?’ ಎಂದಾಗಲಿ ಯಾರೂ ಎಂದೂ ಕೇಳಿದ್ದಿಲ್ಲ.

ಕೈಗೆ ಕರಣೆ ತೆಗೆದುಕೊಂಡನೆಂದರೆ ಅದು ಸರಸರನೆ ಎಡೆಬಿಡದೆ ಆಡುತ್ತಿತ್ತು. ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕ ವಯಸ್ಸಿನವರಿಗೆ- “”ನೀವೂ ನಾನೂ ಒಂದೇ ಘಳಿಗೆ ಮೊದಲು ಮಾಡಿದೆವು. ಈಗ ಅರ್ಧ ದಿನದ ಕೆಲಸವಾಯಿತು. ನಿಮ್ಮ ಗೋಡೆ ಎಷ್ಟು ಬೆಳೆದಿದೆ, ನನ್ನದು ಎಷ್ಟು ಬೆಳೆದಿದೆ, ನೋಡಿಕೊಳ್ಳಿ” ಎನ್ನುವರು. ಮೊದಲಿಯಾರರು ನಿಲುಗಡೆ ಇಲ್ಲದೆ ಮತ್ತು ಹೆಚ್ಚು ಮಾತುಕತೆ ಇಲ್ಲದೆ ಕೆಲಸಮಾಡಿ, 12 ಘಂಟೆ ಯಾಯಿತೆಂದರೆ ಕರಣೆಯನ್ನು ಕೆಳಗಿಟ್ಟು ಕೈತೊಳೆದುಕೊಂಡು ಊಟದ ಬುಟ್ಟಿಯೊಡನೆ ಹೊರಟುಬಿಡುವರು.

ನಾನು ಒಂದು ಸಲ ಅವರನ್ನು- “ನೀವು ಊಟಕ್ಕೆ ಯಾಕೆ ದೂರ ಹೋಗುತ್ತೀರಿ? ಇಲ್ಲಿಯೇ ಮಾಡಬಹುದಲ್ಲ?’ ಬೇಕಾದರೆ ಒಂದು ಕೋಣೆ ಬಿಡುವು ಮಾಡಿಸುತ್ತೇನೆ ಎಂದೆ. ಮೊದಲಿಯಾರರು-“ಅದು ಬೇಡ ಸ್ವಾಮಿ. ನಾನು ಸ್ವಾಮಿಯ ಗುಡಿಯ ಹತ್ತಿರ ಹೋಗುತ್ತೇನೆ. ಅದೇನೂ ದೂರ ವಲ್ಲ. ಅಲ್ಲಿ ಕೊಳದಲ್ಲಿ ನೀರಿದೆ; ಸುತ್ತಮುತ್ತ ದೊಡ್ಡ ದೊಡ್ಡ ಮರಗಳಿವೆ; ಹೂ ಗಿಡಗಳಿವೆ. ಅಲ್ಲಿ ನೆರಳಿನಲ್ಲಿ ತಂಪಾಗಿ ಕುಳಿತು, ಒಂದು ಕ್ಷಣ ಶಿವಭಿಕ್ಷೆ ಊಟಮಾಡುತ್ತೇನೆ. ಕೊಂಚ ಹೊತ್ತು ಶಾಂತವಾಗಿ ಕುಳಿತಿದ್ದು ಇಲ್ಲಿಗೆ ಬರಬಹುದು’ ಎಂದರು.
ಇದವರ ಅಂತರಂಗ. ಅವರಿಗೆ ಬೇಕಾಗಿದ್ದದ್ದು ಮನಶಾÏಂತಿ. ಕೆಲಸ, ಕೂಲಿ, ಊಟ, ತೋಟ – ಇವೆಲ್ಲ ಆ ಮನಶಾÏಂತಿಗೋಸ್ಕರ. ಬೆಳಗ್ಗೆ ಹೇಗೆ ಹೊತ್ತಿಗೆ ಸರಿಯಾಗಿ ಬಂದರೋ, ಸಂಜೆ ಹಾಗೆಯೇ ಹೊತ್ತಾದ ಕೂಡಲೇ ಕೆಲಸ ನಿಲ್ಲಿಸಿಬಿಡುವರು. ಇನ್ನೂ ಕೆಲಸ ಮಾಡಿರೆಂದು ಒತ್ತಾಯಪಡಿಸಲು ಅವರು ಅವಕಾಶ ಕೊಡುತ್ತಿ ರಲಿಲ್ಲ. ಅವರು ನಿಯಮವನ್ನು ಕರಾರಾಗಿ ನಡಸುತ್ತಿದ್ದದ್ದರಿಂದ ಅವರನ್ನು ಕೆಲಸಕ್ಕೆ ಇಟ್ಟುಕೊಂಡವರೂ ಆ ನಿಯಮಕ್ಕೆ ಒಳಪಡಬೇಕಾಗಿತ್ತು. ಮೈಗಳ್ಳತನವಿಲ್ಲದೆಯೂ ತಕ್ಕ ಸಾಮರ್ಥ್ಯ ದಿಂದಲೂ ಕೆಲಸಮಾಡುವವರ ವಿಷಯದಲ್ಲಿ ನಮಗೆ ಗೌರವ ಹುಟ್ಟುವುದು ಸ್ವಾಭಾವಿಕ ತಾನೆ?
ಒಂದು ಸಲ ಅವರು ಕಟ್ಟುತ್ತಿದ್ದ ಮನೆಗೆ ದ್ವಾರಬಂಧ ಪ್ರತಿಷ್ಠೆಮಾಡಿದ ಸಂದರ್ಭದಲ್ಲಿ ಪಿಚ್ಚೆ„ ಮೊದಲಿಯಾರರು ಆ ಮನೆಯ ಯಜಮಾನನನ್ನು ಕುರಿತು- “ಏನು ಸ್ವಾಮಿ, ಈ ಮನೆಯ ಜನ ಯಾರಾದರೂ ಹೊಸ್ತಿಲಿಗೆ ಪೂಜೆ ಮಾಡುವ ಇಷ್ಟವಿದ್ದರೆ ಮಾಡಲಿ; ಇಲ್ಲದಿದ್ದರೆ ನನ್ನನ್ನು ಮಾಡೆಂದರೆ ನಾನು ಮಾಡುತ್ತೇನೆ. ಅರಿಶಿನ ಕುಂಕುಮ ತರಿಸಿ’ ಎಂದರು. ಆ ಯಜಮಾನನು- “ಅದೇಕೆ ಹಾಗೆ ಹೇಳುತ್ತೀರಿ? ನಾವು ಬ್ರಾಹ್ಮಣರಲ್ಲವೆ? ನಾವು ಪೂಜೆ ಮಾಡುವುದಿಲ್ಲವೆ?’ ಎಂದು ಕೇಳಿದ. ಅದಕ್ಕೆ ಉತ್ತರವಾಗಿ ಮೊದಲಿಯಾರರು-“ಅದು ಹೇಗೋ ಈ ಕಾಲದಲ್ಲಿ? ಎಲ್ಲಾ ವಿದ್ಯೆ ಕಲಿತವರು. ದೇವರಲ್ಲಿ ನಂಬಿಕೆ ಇದೆಯೋ ಇಲ್ಲವೋ! ಎಷ್ಟೋ ಮಂದಿ ಹೆಂಗಸರು ಅರಿಶಿನ ಕುಂಕುಮವನ್ನೇ ಇಟ್ಟುಕೊಳ್ಳುವುದಿಲ್ಲ’ ಎಂದುಬಿಟ್ಟರು. ಅಷ್ಟುಹೊತ್ತಿಗೆ ಆ ಮನೆಯ ಹೆಣ್ಣುಮಕ್ಕಳು ಬಂದು ಹೊಸ್ತಿಲಿಗೂ ಬಾಗಿಲ ಕಟ್ಟಿಗೂ ಅರಿಶಿನ ಕುಂಕುಮ ಪುಷ್ಪಾಕ್ಷತೆಗಳಿಂದ ಪೂಜೆ ಮಾಡಿದರು. ಮೊದಲಿಯಾರರು ಭಕ್ತಿಯಿಂದ ಕೈಮುಗಿದು – ಇದು ಮನೆಗೊಳ್ಳೆಯದು ಎಂದರು.

ನಾನು ಪ್ರಾರಂಭದಲ್ಲಿ ಹೇಳಿದ ಸಂಗತಿ ನಡೆದಾಗ್ಗೆ ಪಿಚ್ಚೆ„ ಮೊದಲಿಯಾರರಿಗೆ ವಯಸ್ಸು ಸುಮಾರು 70 ಆಗಿದ್ದಿರಬಹುದು. ಆಮೇಲೆ ಅವರನ್ನು ನಾನು ಪುನಃ ಕಂಡಿಲ್ಲ. ನಾಲ್ಕಾರು ಸಾರಿ ಹಲಸೂರಿನಲ್ಲಿಯೂ ಇತರ ಕಡೆಯೂ ವಿಚಾರಿಸಿದೆ. ಅವರ ವರ್ತಮಾನವೇನೂ ತಿಳಿದುಬರಲಿಲ್ಲ. ನಾನು ಅವರನ್ನು- “ಮೊದಲಿಯಾರರೇ, ತಿರುಗಿ ನಿಮ್ಮನ್ನು ನೋಡುವುದು ಯಾವಾಗ?’ ಎಂದು ಕೇಳಿದೆ. ಅವರು- “ಸ್ವಾಮಿ ಏರ್ಪಾಟು ಮಾಡಿದಾಗ. ಮೊನ್ನೆ ನಿಮ್ಮನ್ನು ನಾನು ನೋಡುತ್ತೇನೆಂದು ಉದ್ದೇಶಮಾಡಿ ಬಂದೆನೆ? ನೀವು ನನ್ನನ್ನು ಹುಡುಕಿದಿರಾ? ಸಂದರ್ಭ ಏನೋ ಹಾಗೆ ಸೇರಿಬಂತು. ಅದೇ ಋಣಾನುಬಂಧ, ದೇವರ ಆಜ್ಞೆ ಹೀಗೆಂದು’ ಉತ್ತರ ಹೇಳಿದರು. ನಾನು “ಇಲ್ಲಿಂದ ಮುಂದೆ ಯಾವ ಯಾತ್ರೆ?’ ಎಂದೆ. ದೇವರು ಕರಸಿಕೊಂಡ ಕಡೆಗೆ ಎಂದರು. 

ಈ ನನ್ನ ಅನುಭವ, ಪುಸ್ತಕಗಳಿಂದ ದೊರೆತ ಅನುಭವಕ್ಕಿಂತ ದೊಡ್ಡದು. ನನಗೆ ಮರೆಯಲಾಗದ್ದು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಧಾರವಾಡ: 2 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಧಾರವಾಡ: 2 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್: ಅಪಾಯ ಇನ್ನೂ ಹೆಚ್ಚಾಗಲಿದೆಯೇ?

ಕೋವಿಡ್: ಅಪಾಯ ಇನ್ನೂ ಹೆಚ್ಚಾಗಲಿದೆಯೇ?

ಭ್ರಾತೃತ್ವದ ಸಂದೇಶ ಸಾರುವ ಈದ್‌-ಉಲ್‌-ಫಿತರ್‌

ಭ್ರಾತೃತ್ವದ ಸಂದೇಶ ಸಾರುವ ಈದ್‌-ಉಲ್‌-ಫಿತರ್‌

1981: ಬಜ್ಪೆಯಲ್ಲಿ ತಪ್ಪಿದ್ದ ದುರಂತ

ಮಂಗಳೂರು ವಿಮಾನ ದುರಂತಕ್ಕೆ ಹತ್ತು ವರ್ಷ; 1981ರಲ್ಲಿ ಬಜ್ಪೆಯಲ್ಲಿ ತಪ್ಪಿದ್ದ ದುರಂತ

ಅರ್ಧ ಗಂಟೆ ಮೊದಲು ಮಾತಾಡಿದ್ದರು…

ಮಂಗಳೂರು ವಿಮಾನ ದುರಂತಕ್ಕೆ ಹತ್ತು ವರ್ಷ: ಅರ್ಧ ಗಂಟೆ ಮೊದಲು ಮಾತಾಡಿದ್ದರು…

ಬದುಕುಳಿದ ಎಂಟು ಮಹಾ ಅದೃಷ್ಟಶಾಲಿಗಳು

ಮಂಗಳೂರು ವಿಮಾನ ದುರಂತ@10: ಬದುಕುಳಿದ ಎಂಟು ಮಹಾ ಅದೃಷ್ಟಶಾಲಿಗಳು

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಡ್ರಾಪ್ ಬಾಕ್ಸ್‌ : ಹೆಡ್‌ಫೋನ್‌ಗಿಂತ ಒಳ್ಳೆಯ ಗೆಳೆಯನಿಲ್ಲ

ಡ್ರಾಪ್ ಬಾಕ್ಸ್‌ : ಹೆಡ್‌ಫೋನ್‌ಗಿಂತ ಒಳ್ಳೆಯ ಗೆಳೆಯನಿಲ್ಲ

ಮನೋರಂಜನೆ ಅಸ್ತ್ರವಾದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ನಾನು ನೋಡಿದಂತೆ ಸಿನೆಮಾ : ಮನೋರಂಜನೆ ಅಸ್ತ್ರವಾದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ನಾನು ನೋಡಿದಂತೆ ಸಿನೆಮಾ : ಸೈಕಲಾಜಿಕಲ್‌ ಥ್ರಿಲ್ಲಿಂಗ್‌ ರಾಕ್ಷಸನ್‌

ನಾನು ನೋಡಿದಂತೆ ಸಿನೆಮಾ : ಸೈಕಲಾಜಿಕಲ್‌ ಥ್ರಿಲ್ಲಿಂಗ್‌ ರಾಕ್ಷಸನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.