ಪುಸ್ತಕ ವಿಮರ್ಶೆ : ಮುನ್ನುಡಿ, ಬೆನ್ನುಡಿ, ಚೆನ್ನುಡಿ


Team Udayavani, Jul 4, 2021, 6:20 PM IST

Book Review by parvathi g Aithal, Kugo

ಹೆಸರೇ ಸೂಚಿಸುವಂತೆ ಇದು ಹಲವು ಸಾಹಿತ್ಯ ಕೃತಿಗಳಿಗೆ ಬರೆದ ಮುನ್ನುಡಿ ಬೆನ್ನುಡಿಗಳ ಸಂಕಲನ. ಮುನ್ನುಡಿ ಬೆನ್ನುಡಿಗಳನ್ನು ಬರೆಯಲು ಕು.ಗೋ.ಅವರಿಗಿರುವ ಅರ್ಹತೆ ಹಿರಿಯ ಸಾಹಿತಿ ಎನ್ನುವುದು ಮಾತ್ರವಲ್ಲ, ಹೃದಯವಂತ ಸಾಹಿತಿ ಎನ್ನುವುದು ಕೂಡಾ ಆಗಿದೆ.

ಸಾಹಿತ್ಯಾಸಕ್ತರಿಗೆ ನಿಸ್ವಾರ್ಥ ಬುದ್ಧಿಯಿಂದ ತಾವು ಓದಿದ ಒಳ್ಳೆಯ ಕೃತಿಗಳನ್ನು ಸದಾ ಹಂಚುತ್ತಿರುವ  ಅವರಿಗೆ ದೊಡ್ಡ ಸಾಹಿತಿಗಳು ಸಣ್ಣ ಸಾಹಿತಿಗಳು, ಪ್ರಸಿದ್ಧರು, ಸಾಮಾನ್ಯರು, ಪ್ರಶಸ್ತಿಗಳನ್ನು ಪಡೆದವರು ಪಡೆಯದವರು ಎಂಬ ತಾರತಮ್ಯ ಭಾವವಿಲ್ಲ.

ಪತ್ರಿಕೆ ನಿಯತ ಕಾಲಿಕಗಳಲ್ಲಿ ಕಥೆ, ಕವಿತೆ, ಪ್ರಬಂಧಗಳನ್ನು ಬರೆದವರನ್ನು ಒಂದು ಪುಸ್ತಕ ಪ್ರಕಟಿಸಲು ಪ್ರೋತ್ಸಾಹವೀಯುವ ಅವರು ಅಂಥವರ ಕೃತಿಗಳಿಗೆ ಆಶೀರ್ವಾದ ರೂಪದಲ್ಲಿ ಮುನ್ನುಡಿ ಬೆನ್ನುಡಿಗಳನ್ನು ಬರೆದಿದ್ದಾರೆ. ಅಂಥವರು ತಮ್ಮ ಬರವಣಿಗೆಯನ್ನು ಮುಂದುವರಿಸಿ ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬುದೇ ಅವರ ಆಶಯ.

ಉದಯೋನ್ಮುಖ ಲೇಖಕ/ಲೇಖಕಿಯರ      ಕೃತಿಗಳ ಖಡಕ್ ವಿಮರ್ಶೆ ಮಾಡದೆ ಅವರನ್ನು ಮಾತೃಹೃದಯದಿಂದ ಹರಸಿ ನಲ್ನುಡಿಗಳನ್ನು ಬರೆದು ಅಗತ್ಯವಿದ್ದಲ್ಲಿ ನವಿರಾಗಿ ಸಲಹೆಗಳನ್ನು ಕೊಡುವುದಷ್ಟೇ ಅವರು ಮಾಡುವ ಕೆಲಸ. ಇದು  ಓರ್ವ ಸಹೃದಯಿ ವಿಮರ್ಶಕನ ಜವಾಬ್ದಾರಿಯೂ ಹೌದು. ಕು.ಗೋ.ಅವರಲ್ಲಿರುವ  ( ಮತ್ತು     ಬಿಗುಮುಖದ ಬುದ್ಧಿಜೀವಿ ಸಾಹಿತಿ ಗುರುಗುಂಟಿರಾಯರಲ್ಲಿಲ್ಲದ)  ಈ ಗುಣದಿಂದಾಗಿಯೇ ಅನೇಕರು ಮುನ್ನುಡಿಗಾಗಿ ಅವರ ಬಳಿ ಬರುತ್ತಾರೆ. ಹಲವರು ಅವರ ಬಳಿ ತಮ್ಮ ಎರಡು ಮೂರು ಕೃತಿಗಳಿಗೆ ಮುನ್ನುಡಿ ಬರೆಸಿಕೊಂಡಿದ್ದಾರೆ.

(ಕು.ಗೋ)

ಅವರ ಬಳಿ ತಮ್ಮ ಮೊದಲ ಕೃತಿಗೆ ಮುನ್ನುಡಿ ಬರೆಯಿಸಿಕೊಂಡ ಡಾ.ಕಾತ್ಯಾಯನಿ ಕುಂಜಿಬೆಟ್ಟು ಇವತ್ತು ಬಹಳಷ್ಟು ಕೃತಿಗಳನ್ನು ಪ್ರಕಟಿಸಿರುವ ಪ್ರಸಿದ್ಧ ಸಾಹಿತಿಯಾಗಿದ್ದಾರೆ. ಗೀತಾ ಕುಂದಾಪುರ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ.

ಸಾಕಷ್ಟು ಬರೆದು ಪ್ರಕಟಿಸಿ ಸಾಹಿತ್ಯಕ್ಷೇತ್ರದಲ್ಲಿ ಗಮನಾರ್ಹರೆಂದು ಗುರುತಿಸಿಕೊಂಡಿರುವ ಪ್ರಬುದ್ಧ ಸಾಹಿತಿಗಳಾದ ಅಂಬ್ರಯ್ಯ ಮಠ, ಪ್ರದೀಪಕುಮಾರ್ ಹೆಬ್ರಿ, ಸುಮುಖಾನಂದ ಜಲವಳ್ಳಿ, ಅಂಶುಮಾಲಿ, ಶಾಂತರಾಜ ಐತಾಳ್   ಪರಮೇಶ್ವರಿ ಲೋಕೇಶ್ವರ್, ಜ್ಯೋತಿ ಮಹಾದೇವ್, ಸುಶೀಲಾದೇವಿ ಆರ್ ರಾವ್ ಮೊದಲಾದವರೂ ಕು.ಗೋ.ಅವರಿಂದ ಮುನ್ನುಡಿ ಬೆನ್ನುಡಿಗಳನ್ನು ಬರೆಸಿಕೊಂಡಿದ್ದಾರೆ.   ಅವರ ಯಾವುದೇ ಕೃತಿಗಳನ್ನೂ ವಿಮರ್ಶೆ ಮಾಡಲು ಹೋಗದೆ ಮುನ್ನುಡಿಯ ಉದ್ದೇಶ ವಿಮರ್ಶೆ ಮಾಡುವುದಲ್ಲ  ಬದಲಾಗಿ ಕೃತಿಗೆ ಶುಭ ಕೋರುವುದು ಎನ್ನುತ್ತಾರೆ ಕು.ಗೋ.ಅವರು.

ಆದರೂ ಸಾಧನೆ ಮಾಡಿದವರನ್ನು  ಮತ್ತು ಅವರು ಹಿಂದೆ ಮಾಡಿದ ಕೆಲಸಗಳ ಕುರಿತು ಒಳ್ಳೆಯ ಮಾತುಗಳಲ್ಲಿ ಪರಿಚಯಿಸುವ ಕೆಲಸವನ್ನು ಅವರು ಮಾಡುತ್ತಾರೆ. ಇದು ತುಂಬಾ ಮುಖ್ಯವೂ ಹೌದು. ಯಾಕೆಂದರೆ ಇಂದು ಇತರರ ಕೃತಿಗಳನ್ನು ಓದುವ ಅಥವಾ ಇತರರ ಬಗ್ಗೆ ತಿಳಿದುಕೊಳ್ಳುವ ವ್ಯವಧಾನ ಅನೇಕರಿಗೆ ಇಲ್ಲ. ಅಂಥವರು ಕು.ಗೋ.ಅವರ ಮುನ್ನುಡಿಯಿಂದ ಬಹಳಷ್ಟು ತಿಳಿದುಕೊಳ್ಳುವ ಅವಕಾಶವಿರುತ್ತದೆ.

ಇನ್ನೊಂದು ವಿಚಾರ ಏನೆಂದರೆ ಇಂದು ಮುನ್ನುಡಿ ಬರೆಯುವ ಹಲವಾರು ಸಾಹಿತಿಗಳು ಕೃತಿಯನ್ನು  ಪೂರ್ತಿಯಾಗಿ ಓದದೆಯೇ  ಜಾಳುಜಾಳಾಗಿ ಬರೆದು ಬಿಡುತ್ತಾರೆ. ಆದರೆ ಕು.ಗೋ.ಹಾಗಲ್ಲ. ಅವರು ಕೃತಿಯನ್ನು ಒಂದಕ್ಷರ ಬಿಡದೆ ಓದಿದ್ದಾರೆ ಅನ್ನುವುದು ಅವರ ಬರಹಗಳನ್ನು ಓದಿದರೆ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಬೇರೆ ಬೇರೆ ಕೃತಿಗಳಲ್ಲಿ ಹರಿದು ಹಂಚಿ ಹೋಗಿರುವ ಕು.ಗೋ.ಅವರ ಈ ಬರಹಗಳನ್ನು ಮಂಡ್ಯದ ಶ್ರೀರಾಮ ಪ್ರಕಾಶನದವರು ಸಂಕಲನರೂಪದಲ್ಲಿ ತಂದು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ.

ಡಾ. ಪಾರ್ವತಿ ಜಿ. ಐತಾಳ್

ಹಿರಿಯ ಸಾಹಿತಿಗಳು, ಅನುವಾದಕರು

ಇದನ್ನೂ ಓದಿ : ನಿನ್ನ ನೀ ಗೌರವಿಸದೇ… : ಸಕಾರಾತ್ಮಕ ಬದುಕಿಗೊಂದು ಕೈ ದೀವಿಗೆ  

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.