‘ಕೊರೋನ ನಂತರದ ಗ್ರಾಮ ಭಾರತ’ದೊಳಗೆ ನಿತ್ಯ ಸತ್ಯ

ಕೊರೋನ ನಂತರದ ಗ್ರಾಮ ಭಾರತ – ಪುಸ್ತಕದ ವಿಮರ್ಶೆ

Team Udayavani, Mar 7, 2021, 3:27 PM IST

7-7

ದೇರ್ಲ ಅವರೇ ಹೇಳುವ ಹಾಗೆ “ಬರೀ ಕನಸನ್ನಷ್ಟೇ ಅಲ್ಲ, ವಾಸ್ತವ ಬದುಕನ್ನೇ ಕೊರೋನಾ ಕಸಿದುಕೊಂಡಿದೆ. ಕೋವಿಡ್ ಇಡಿಯ ವ್ಯವಸ್ಥೆಯನ್ನು ಅಡಿಮೇಲಾಗಿ ಮಾಡಿ ಮಾನವನ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಮತ್ತವನ ಮನಸ್ಸನ್ನೂ.

‘ಕೊರೋನಾ ನಂತರದ ಗ್ರಾಮಭಾರತ’ ಹಲವು ಆಯಾಮಗಳಲ್ಲಿ ಹಳ್ಳಿ ಬದುಕನ್ನು ಪುಟ ಪುಟವಾಗಿ ತೆರೆದಿಡುತ್ತದೆ.

ನಾನು ಸಾಮಾನ್ಯವಾಗಿ ಪುಸ್ತಕಗಳ ಓದಿನ ಅನಿಸಿಕೆಯನ್ನು ಹಂಚಿಕೊಳ್ಳುವುದಿಲ್ಲ ಅಥವಾ ಬರೆಯುವುದಕ್ಕೆ ಮುಂದಾಗಿದ್ದು, ಮುಂದಾಗುವುದು ಬಹಳ ಕಡಿಮೆ. ಈ ಕೃತಿಯ ಕುರಿತಾಗಿ ನಾಲ್ಕಕ್ಷರ ಬರೆಯುವುದಕ್ಕೆ ಹೊರಟಿರುವ ಕಾರಣ, ಕೃತಿಕಾರ ನರೇಂದ್ರ ರೈ ದೇರ್ಲ ಅವರ ಬರಹಗಳಲ್ಲಿನ ನಾಳೆಯ ಭಾರತದ ಕನಸುಗಳು, ಗ್ರಾಮ ಭಾರತದ ಸೊಗಡು, ಹಳ್ಳಿಯ ಇನ್ನೊಂದು ಗಂಭೀರ ಮುಖ, ಹಳ್ಳಿ ಬದುಕಿನ ಸಮಸ್ಯೆ, ‘ನಗರಗಳು ಕುಲಕೆಟ್ಟ ವೇಗದಲ್ಲೇ ಗ್ರಾಮಗಳು ಬದಲಾದರೇ ಉಳಿಯುವುದೇನು..?’ ಎಂಬ ದೇರ್ಲ ಅವರೊಳಗಿನ ಆತಂಕ.

ಓದಿ :  ಹಸಿರುಗಳ ನಡುವೆ ಬಗೆದ ದಾರಿಯಲ್ಲಿ ಶೃಂಗೇರಿಗೆ ಏಕಾಂಗಿ ಪಯಣ..!

ಹಳ್ಳಿಗಳನ್ನು ಬಿಟ್ಟು ನಗರವೇ ಚೆಂದ ಅಂದ ಎಂದು ಹೋಗಿದ್ದ ಮಂದಿಯೆಲ್ಲಾ ಮೂಟೆ ಹೊತ್ತು ಮರಳಿ ಗೂಡಿಗೆ ಎಂಬಂತೆ ಮತ್ತದೇ ಹೊರಟಲ್ಲೇ ನೆಲೆ ಕಾಣಲು ಮುಖ ಮಾಡಿದ್ದು ಕೋವಿಡ್ ನಂತರದ ದಿನಮಾನಗಳು. ಮರಳಿ ಬಂದವರಿಗೆ ಹಳ್ಳಿ ನೀಡಿದ ಸ್ವಾಗತ ಮತ್ತು ಆಶ್ರಯ ಅಚ್ಚರಿಯೇ ಸರಿ.

ಎಲ್ಲೋ ದೂರದ ಮಹಾ ನಗರಗಳಲ್ಲಿ ಬದುಕು ಕಂಡುಕೊಂಡು ಈ ಕೋವಿಡ್ ಎಂಬ ಕಾಯಿಲೆಗೆ ಹೆದರಿ ಹಳ್ಳಿಗೆ ಹಿಂತಿರುಗಿದಾಗ ಈ ಹಿಂದೆಲ್ಲಾ ಮದುವೆ ಮುಂಜಿಗೆಂದು ಬಂದು ಹೋಗುತ್ತಿದ್ದಾಗಿದ್ದ  ಆತಿಥ್ಯ, ಇಲ್ಲಿಯೇ ಹೊಸ ಬದುಕು ಕಾಣಬೇಕು ಎಂದು ಹೊರಟು ಬಂದಿರುವವರ ಬಗ್ಗೆ ಬದಲಾದ ಭಾವನೆಯ ಬಗೆಯನ್ನು ದೇರ್ಲ ಅವರು ಚೆನ್ನಾಗಿ ವಿವರಿಸಿದ್ದಾರೆ. ‘ಇಲ್ಲಿರುವವರಿಗೇ ಕಷ್ಟ, ಈಗ ಇವನೊಬ್ಬ ಮತ್ತೆ ವಕ್ಕರಿಸಿದ’ ಎಂಬುವುದು ಸಹಜವಾಗಿ ಹಳ್ಳಿ ಬದುಕನ್ನು ಕಂಡವರಿಗೆ ಒಪ್ಪಿಕೊಳ್ಳಲಾಗದ ವಾಸ್ತವದ ನಿಜ ಮುಖದ ಅಧ್ಯಯನ ದೇರ್ಲರದ್ದು.

ಸೆಗಣಿ, ಕೆಸರು, ಗಂಜಲ, ನಮ್ಮದು ಇಪ್ಪತ್ತನಾಲ್ಕು ಗಂಟೆ ಎ.ಸಿ ಹವೆ ಎಂದೆಲ್ಲಾ ಸಾಂಪ್ರದಾಯಿಕ ರೈತಾಪಿಗಳನ್ನು ಟೀಕಿಸಿ ನಗರದೆಡೆಗೆ ಮುಖ ಮಾಡಿ ಹೋದವರು ಈಗ ಹಳ್ಳಿಗೆ ಬಂದು, ಹಳ್ಳಿಯ ಪಡಸಾಲೆಯಲ್ಲಿ ಕೂತು ವರ್ಕ್ ಫ್ರಂ ಹೋಮ್ ಮಾಡಿ, ಉಳಿದ ಸಮಯದಲ್ಲಿ ಕೈ ಕಾಲು ಕೆಸರು ಮಾಡಿಕೊಂಡು ಕೃಷಿ ಮಾಡುತ್ತಿರುವಾಗ, ‘ನಮ್ಮದಾದದ್ದು ಆಯ್ತು ಬಿಡಿ, ನೀವು ಮಣ್ಣಿಗಿಳಿಯುವುದು ಬೇಡ’ ಅಂದ ಹಿರಿಯವರೇ ಮುಸಿ ಮುಸಿ ನಗುವಂತೆ ಕೋವಿಡ್ ಮಾಡಿ ಬಿಟ್ಟಿದೆ ಅಂತ ಲೇಖಕರು ಬಹಳ ಮಾರ್ಮಿಕವಾಗಿ ಹಳ್ಳಿ ಬದುಕಿನ ಗಟ್ಟಿತನವನ್ನು, ಹಳ್ಳಿ ಬದುಕಿನ ಬಗ್ಗೆ ಕೇವಲವಾಗಿ ಮಾತನಾಡುವವರಿಗೆ ಸತ್ಯದ ಕಹಿ ರಾಚಿ ಹೊಡೆಯುವಂತೆ ಹೇಳಿರುವುದು ನಮ್ಮನ್ನು ನನ್ನ ಕೃತಿ ಒಳಗೆ ಮತ್ತಷ್ಟು ಎಳೆದುಕೊಳ್ಳುತ್ತದೆ.

ಓದಿ : HDK ಮಾಡಿದ 5 ಕೋಟಿ ಡೀಲ್ ಆರೋಪದಿಂದ ನೊಂದು ದೂರು ವಾಪಸ್ ಪಡೆದಿದ್ದೇನೆ: ದಿನೇಶ್ ಕಲ್ಲಹಳ್ಳಿ

ಇನ್ನು, ಸ್ವದೇಶೀಯತೆ. ಚೀನಾದಿಂದ ಆಮದಾಗುವ ಕಳೆಕೊಚ್ಚುವ ಯಂತ್ರ. ಯಂತ್ರದ ಬ್ಲೇಡ್ ನ ಫಿನಿಶಿಂಗ್ ಆಧಾರದಲ್ಲಿ ನಮ್ಮ ರೈತರನ್ನು ತಲುಪುವ ಮತ್ತು ಈಗೀಗ ನಮ್ಮ ರೈತರಿಗೆ ಬೇಕಾಗುವುದು ಕೂಡ ಅದೇ. ಆ ಯಂತ್ರದ  ಹರಿತವಾದ  ಬ್ಲೇಡ್. ಚೀನಾ ಕಂಪೆನಿಯ ಮಾಲಿಕತ್ವ. ವಾಸ್ತವಾಂಶವೆಂದರೇ, ಆ ಯಂತ್ರದ ಹರಿತವಾದ ಬ್ಲೇಡ್ ನಮ್ಮ ದೇಶದಿಂದಲೇ ಚೀನಾಗೆ ರಫ್ತಾದ ಕಬ್ಬಿಣದಿಂದಲೇ ತಯಾರಿಸಿದ್ದು. ಇದು, ವರ್ತಮಾನದ ಗಡಿಬಿಡಿಯ ಆರ್ಥಿಕ ಸ್ಥಿತಿ ಗತಿಯ ಹಪಹಪಿಯ ಸ್ವದೇಶಿಯತೆಯನ್ನು ಕಟುವಾಗಿ  ಟೀಕಿಸುವಂತೆ ಮಾಡುತ್ತದೆ. ಈ ಎಲ್ಲದರ ಆಚೆಯಲ್ಲಿ… ದೇರ್ಲರ ಆಳ, ವಿಸ್ತಾರ ನೋಟ ಅವರ

ಅಧ್ಯಯನ ಶೀಲತೆಯಲ್ಲಿ ಇಲ್ಲಿ ಕಾಣಸಿಗುವುದು ಭವಿಷ್ಯದ ಗ್ರಾಮ ಭಾರತ. ‘ಸಾಲ, ಬಡತನ, ಮಣ್ಣಿನ ಮನೆ, ಕಾಲಿನ ಕೆಸರು, ಗಂಜಲದ ವಾಸನೆ, ಬರಿಗಾಲ ಓಡಾಟ ಇವೆಲ್ಲಾ ಅವಮಾನವಲ್ಲ ಎಂಬ ಅರಿವು ಮೂಡಬೇಕು. ಶುದ್ಧ ನೀರು, ಸ್ವಚ್ಛ ಗಾಳಿ, ವಿಷವಿಲ್ಲದ ಹಾಲು, ತರಕಾರಿ, ಅನ್ನ, ನಿರ್ಮಲ ಸಂಪನ್ನ ಪ್ರೀತಿಯೇ ವರ್ತಮಾನದ ಬಹುದೊಡ್ಡ ಸುಖ ಎಂಬ ಅರಿವು ಬರಬೇಕು’ ಎಂಬ ಅವರ ಮಾತುಗಳಲ್ಲಿ ನಾಳೆಯ ಭಾರತದ ಶಿಖರದೆತ್ತರದ ಆಶಯಗಳಿವೆ ಎನ್ನುವುದು ಅಪ್ಪಟ ಸತ್ಯ. ಸರಳ ಜೀವನಕ್ಕೆ ಕೊರೋನ, ಹಳ್ಳಿಯಲ್ಲಿ ತೋರಿಸಿದ ಹಲವು ದಾರಿಗಳನ್ನು, ಹಳ್ಳಿಯ ಅವಕಾಶಗಳನ್ನು ‘ಯುಗಧರ್ಮವನ್ನು ಪಾಲಿಸುವುದು ಆಯಾಯ ಕಾಲದ ಧರ್ಮ’ ಎಂದು ಹೇಳಿ ಹಳೆಯ ತಲೆಮಾರಿನವರ ಬಾಯಿ ಮುಚ್ಚಿಸುವ ಹೊಸ ತಲೆಮಾರಿನವರಿಗೆ ಈ ಕೃತಿ ಅನೇಕ ಆಯಾಮಗಳಲ್ಲಿ ಕನ್ನಡಿ ಹಿಡಿದು ಇಲ್ಲೇ ಇದೆ. ನಿತ್ಯ ಸತ್ಯ ಎನ್ನುವುದನ್ನು ತೋರಿಸಿಕೊಟ್ಟಿದೆ. ಈ ಓದು ಖುಷಿ ಕೊಟ್ಟಿದೆ.

– ಶ್ರೀರಾಜ್ ವಕ್ವಾಡಿ

ಓದಿ : ಮಾ.8ರಂದು ರಾಜಕಾರಣಿಗಳ ಹೊಸ ಗುಟ್ಟು ಬಹಿರಂಗಪಡಿಸುತ್ತೇನೆ: ಮತ್ತೊಂದು ಬಾಂಬ್ ಸಿಡಿಸಿದ ಮಲಾಲಿ

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.