“ಐ ಆ್ಯಮ್‌ ಆ್ಯಂಡ್‌ ಐ ವಿಲ್‌’ಕ್ಯಾನ್ಸರ್‌ಗೆ ಆತ್ಮವಿಶ್ವಾಸವೇ ಪ್ರತ್ಯಸ್ತ್ರ


Team Udayavani, Feb 4, 2020, 5:13 AM IST

Cancer-Awareness-Day

ಎಲ್ಲವೂ ಹಾಗೆಯೇ.ಶಿಥಿಲವಾದ ಗೋಡೆಯನ್ನು ಗಾಳಿಯೂ ಉರುಳಿಸಬಲ್ಲದು. ಅದಕ್ಕೆ ಕ್ಯಾನ್ಸರ್‌ ಎಂಬ ಭೀತಿ ತೊಲಗಿಸಲೂ ನಮಗೆ ಆತ್ಮವಿಶ್ವಾಸದ ಕಂದೀಲು ಬೇಕೇ ಬೇಕು. ಅದೊಂದಿದ್ದರೆ ಕತ್ತಲೆಯಲ್ಲೂ ನೂರಾರು ಮೈಲು ಸಾಗಬಹುದು. ಇಂದು ವಿಶ್ವ ಕ್ಯಾನ್ಸರ್‌ ದಿನ . ಕ್ಯಾನ್ಸರ್‌ ವಿರುದ್ಧ ಸಮರ ಸಾರಿದವರಿಗೆಲ್ಲ ಯುದ್ಧ ಗೆದ್ದು ಬರಲಿ ಎಂದು ಹಾರೈಸೋಣ.

ಕ್ಯಾನ್ಸರ್‌ ಇಂದು ಜಾಗತಿಕವಾಗಿ ವಯಸ್ಸಿನ ಎಲ್ಲೆ ಇಲ್ಲದೆ ಭವಿಷ್ಯವನ್ನು ಕಸಿದುಕೊಳ್ಳುತ್ತಿದೆ. ವಯಸ್ಸು, ಲಿಂಗ, ಜಾತಿ- ಮತ ಭೇದವಿಲ್ಲದೆ ಎಲ್ಲ ಸ್ತರದ ಜನರನ್ನೂ ಕಾಡುತ್ತಿದೆ.

ದೇಹದಲ್ಲಿ ಅಸಹಜವಾಗಿ ಉತ್ಪತ್ತಿಯಾಗುವ ಜೀವ ಕೋಶಗಳಿಂದಾಗಿ ಕ್ಯಾನ್ಸರ್‌ ಉಂಟಾಗುತ್ತದೆ. ಇದಕ್ಕೆ ಇಂಥದ್ದೇ ಕಾರಣ ಎಂದು ಖಚಿತವಾಗಿ ಹೇಳುವಂತಿಲ್ಲ. ಕ್ಯಾನ್ಸರ್‌ ಸಂಪೂರ್ಣವಾಗಿ ಗುಣವಾಗಬಹುದು ಇಲ್ಲವೇ ಜೀವನವನ್ನೇ ಬಲಿ ತೆಗೆದುಕೊಳ್ಳಬಹುದು. ಇದರ ವಿರುದ್ಧ ಹೋರಾಡುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಫೆ. 4 ಅನ್ನು ವಿಶ್ವ ಕ್ಯಾನ್ಸರ್‌ ದಿನವಾಗಿ ಆಚರಿಸುತ್ತಿದೆ.

ಜಾಗೃತಿ
ಪ್ರತಿ ವರ್ಷ ಫೆ. 4ರಂದು ಕ್ಯಾನ್ಸರ್‌ ಜಾಗೃತಿ ಜಾಥಾ ಹಾಗೂ ಸಮ್ಮೇಳನ, ವಿಚಾರ ಸಂಕಿರಣಗಳನ್ನು ಆಯೋಜಿಸಿ ಕ್ಯಾನ್ಸರ್‌ ರೋಗ ಪೀಡಿತರಿಗೆ ಆತ್ಮವಿಶ್ವಾಸದ ಔಷಧವನ್ನು ಹಂಚಲಾಗುತ್ತದೆ. ಸುಮಾರು 150 ವಿಧಗಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ ರೋಗದ ಬಗೆಗಿನ ಅರಿವಿಗೆ ಈ ದಿನವನ್ನು ಮೀಸಲಾಗಿಡಲಾಗುತ್ತದೆ. 1933ರಿಂದ ಜಿನೇವಾ, ಸ್ವಿಟ್ಜರ್‌ಲ್ಯಾಂಡ್‌ಗಳಲ್ಲಿ “ಯೂನಿಯನ್‌ ಇಂಟರ್‌ನ್ಯಾಶನಲ್‌ ಕ್ಯಾನ್ಸರ್‌ ಕಂಟ್ರೋಲ್‌’ ಎಂಬ ಸಂಸ್ಥೆ ಕ್ಯಾನ್ಸರ್‌ ಬಗ್ಗೆ ಸಾಂಕೇತಿಕವಾಗಿ ಜಾಗೃತಿ ಮೂಡಿಸುತ್ತಿತ್ತು. 2000ನೇ ಇಸವಿಯ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಅಧಿಕೃತವಾಗಿ ಜಾಗತಿಕ ಮಟ್ಟದಲ್ಲಿ ಕ್ಯಾನ್ಸರ್‌ ಜಾಗೃತಿ ದಿನ ಆಚರಿಸಲಾಗುತ್ತದೆ.

ಕ್ಯಾನ್ಸರ್‌ ಲಕ್ಷಣಗಳು
ಸ್ತನದ ಗಾತ್ರ, ಬಣ್ಣ, ಸ್ವರೂಪದಲ್ಲಿ ಬದಲಾವಣೆ, ಮೊಲೆ ತೊಟ್ಟು ಒಳಮುಖವಾಗಿ ಮಡಚಿಕೊಂಡು ಅದರಿಂದ ರಕ್ತ ಅಥವಾ ಕೀವು ಸ್ರವಿಸಬಹುದು. ಆದ್ದರಿಂದ ಮಹಿಳೆಯರು ತಮ್ಮ ಸ್ತನದಲ್ಲಿ ಆಗುತ್ತಿರುವ ಎಲ್ಲ ಬದಲಾವಣೆಗಳನ್ನು ಗಮನಿಸುತ್ತಿದ್ದು ತೊಂದರೆ ಇದ್ದರೆ ಸಂಕೋಚ ಪಡದೇ ತಜ್ಞವೈದ್ಯರಿಂದ ತಪಾಸಣೆ, ಮ್ಯಾಮೋಗ್ರಫಿ, ಎಂಆರ್‌ಐ, ಅಲ್ಟ್ರಾಸೌಂಡ್‌ ಮುಂತಾದ ಪರೀಕ್ಷೆಗಳನ್ನೂ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲಿ ಸೆಂಟಿನಲ್‌ ನೋಡ್‌ ಬಯಾಪ್ಸಿ ಮಾಡಿಸಬೇಕು, ಕೀಮೋಥೆರಪಿ, ರೇಡಿಯೋಥೆರಪಿ, ಹಾರ್ಮೋನ್‌ ಥೆರಪಿ ಹಾಗೂ ಟಾರ್ಗೆಟ್‌ ಥೆರಪಿಯಂತಹ ಚಿಕಿತ್ಸೆಗೆ ಒಳಪಡಿಸಬಹುದು.

ದೇಹದ ಯಾವುದೆ ಭಾಗದಲ್ಲಿ ಗಂಟು, ಹೊಸ ನರಹುಲಿ ಅಥವಾ ಮಚ್ಚೆ ಕಂಡುಬರುವುದು. ಕಡಿಮೆಯಾಗದ ಕೆಮ್ಮು ಅಥವಾ ಗೊಗ್ಗರು ಧ್ವನಿ. ಮಲ ಅಥವಾ ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ, ಸತತ ಅಜೀರ್ಣ ಮತ್ತು ನಗುವಾಗ ನೋವು, ತೂಕದಲ್ಲಿನ ಬದಲಾವಣೆ, ಅಸಾ ಧಾರಣ ರಕ್ತಸ್ರಾವ ಮೊದ ಲಾದವುಗಳಿದ್ದರೆ ಚಿಕಿತ್ಸೆ ಪಡೆದುಕೊಳ್ಳಿ.

ವಿಶೇಷ ಥೀಮ್‌
ವಿಶ್ವ ಕ್ಯಾನ್ಸರ್‌ ದಿನದಂದು ವಿಶೇಷ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ವರ್ಷ 20ನೇ ಜಾಗತಿಕ ಕ್ಯಾನ್ಸರ್‌ ಜಾಗೃತಿ ದಿನ ಆಚರಿಸಲಾಗುತ್ತಿದೆ. 2019-2021ರ ವರೆಗೆ (3 ವರ್ಷ) ಐ ಅಞ ಚnಛ ಐ ಡಿಜಿll   “ನನ್ನಿಂದ ಸಾಧ್ಯವಿದೆ ಮತ್ತು ನಾನು ಮಾಡುತ್ತೇನೆ’ ಎಂಬ ಘೋಷವಾಕ್ಯದಲ್ಲಿ ಆಚರಣೆ ನಡೆಸಲಾಗುತ್ತಿದೆ. ಮುನ್ನೆಚ್ಚರಿಕೆ, ಆತ್ಮವಿಶ್ವಾಸದ ಮದ್ದು ಕೆಲವು ಬಗೆಯ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದು.

30- 50
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಶೇ. 30-50ರಷ್ಟು ಕ್ಯಾನ್ಸರ್‌ ರೋಗಳನ್ನು ತಡೆಯಬಹುದಾಗಿದೆ. ತಂಬಾಕು ಮತ್ತು ಯುವಿ ಕಿರಣಗಳಿಂದ ಅಂತರಕಾಯ್ದುಕೊಳ್ಳಬೇಕು. ಒಂದು ಸಿಗರೇಟ್‌ನಲ್ಲಿ ಸುಮಾರು 7000 ರಾಸಾಯನಿಕಗಳಿವೆ ಎನ್ನಲಾಗುತ್ತಿದ್ದು, ಅವುಗಳಲ್ಲಿ 50 ರಾಸಾಯನಿಕಗಳು ಕ್ಯಾನ್ಸರ್‌ಗೆ ಕಾರಣ ವಾಗುತ್ತವೆ.

ನೋವೆ ಸೂಚನೆ ಅಲ್ಲ
ಕ್ಯಾನ್ಸರ್‌ ಇದೆ ಎಂದ ಮಾತ್ರಕ್ಕೆ ನೋವು ಇರಲೇಬೇಕೆಂದೇನೂ ಇಲ್ಲ. ರೋಗಿಗೆ ಯಾವ ಬಗೆಯ ಕ್ಯಾನ್ಸರ್‌ ಇದೆ ಎಂಬುದರ ಮೇಲೆ ನೋವು ಇದೆಯೇ ಇಲ್ಲವೇ, ರೋಗದ ತೀವ್ರತೆ ಮತ್ತು ರೋಗಿಯ ನೋವು ತಾಳಿಕೊಳ್ಳುವ ಗುಣದ ಮೇಲೆ ನಿರ್ಧರಿತವಾಗುತ್ತದೆ. ಕ್ಯಾನ್ಸರ್‌ ಬೆಳೆದು, ಮೂಳೆ, ಅಂಗ ಮತ್ತು ನರಗಳ ಮೇಲೆ ಒತ್ತಡ ಹೇರುವುದರಿಂದ ನೋವು ಉಂಟಾಗುತ್ತದೆ. ನೋವು ಕ್ಯಾನ್ಸರಿನ ಅವಿಭಾಜ್ಯ ಅಂಗವಾಗದು.

ನಿಯಂತ್ರಣ ಹೇಗೆ?
- ತರಕಾರಿ ಮತ್ತು ಹಣ್ಣನ್ನು ಹೆಚ್ಚು ಹೆಚ್ಚು ಸೇವಿಸಬೇಕು.
- ದಿನನಿತ್ಯದ ಆಹಾರ ಕ್ರಮದಲ್ಲಿ ಅವಶ್ಯವಿರುವ ಪೌಷ್ಟಿಕಾಂಶ ಮತ್ತು ವಿಟಮಿನ್‌ ಆಹಾರಗಳನ್ನು ಸೇವಿಸಿ.
- ಜಂಕ್‌ಫ‌ುಡ್‌ ಸೇವನೆಯಿಂದ ದೂರವಿರಿ.
- ತಂಬಾಕು ಸೇವನೆ, ಧೂಮಪಾನ , ಮದ್ಯಪಾನ ಬೇಡ.
- ನಿಯಮಿತವಾಗಿ ನಿದ್ದೆ ಮಾಡಿ.
- ಪ್ರತಿದಿನ ವ್ಯಾಯಾಮ ಹಾಗೂ ವಾಕಿಂಗ್‌ ಮಾಡುವಂತಹ ಅಭ್ಯಾಸವನ್ನು ರೂಢಿಸಿಕೊಳ್ಳಿ.
- ಮಹಿಳೆಯರು ನಿಗದಿತ ಸಮಯಕ್ಕೂ ಮುನ್ನವೇ ಮಕ್ಕಳಿಗೆ ಹಾಲೂಡಿಸುವ ಪ್ರಕ್ರಿಯೆಯನ್ನು ನಿಲ್ಲಿಸಬೇಡಿ.
- ಆರೋಗ್ಯದಲ್ಲಿ ಏರಿಳಿತವಾಗುತ್ತಿದ್ದರೆ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಿ.

ದ್ವಿಗುಣಗೊಳ್ಳುವ ಅಪಾಯ
2040ರ ವೇಳೆಗೆ ಭಾರತದಲ್ಲಿನ ಕ್ಯಾನ್ಸರ್‌ ಪ್ರಮಾಣ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ನೋಯ್ಡಾದ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಕ್ಯಾನ್ಸರ್‌ ಪ್ರಿವೆನÒನ್‌ ಆ್ಯಂಡ್‌ ರಿಸರ್ಚ್‌ನ “ಇಂಡಿಯಾ ಎಗೇನನ್ಸ್‌ ಕ್ಯಾನ್ಸರ್‌’ ಪ್ರಕಾರ ಭಾರತದಲ್ಲಿ 2.25 ಮಿಲಿಯನ್‌ (25 ಲಕ್ಷ) ಮಂದಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ಸಂಖ್ಯೆ 2040ರ ವೇಳೆಗೆ ದ್ವಿಗುಣಗೊಳ್ಳಲಿದೆ ಎಂದಿದೆ.

ಕ್ಯಾನ್ಸರ್‌ ನನ್ನ ಗುರುವಾಯಿತು. ನನ್ನ ಆರೋಗ್ಯ ಸಾಮರ್ಥ್ಯ ಸುಧಾರಣೆಗೆ ಇರಬಹುದಾದ ಎಲ್ಲ ಸಾಧ್ಯತೆಗಳನ್ನು ತಿಳಿಸಿತು. ಪ್ರಾಣಾಯಾಮ, ಯೋಗ ಕಲಿಯಲು ಪ್ರೇರೇಪಿಸಿತು. ಅದಕ್ಕಿಂತಲೂ ಹೆಚ್ಚಾಗಿ ನನ್ನೊಳಗೆ ಇದ್ದ ಆತ್ಮವಿಶ್ವಾಸವೆಂಬ ಅಂತಃಶಕ್ತಿಯನ್ನು ಅರಿಯುವ ಮಾರ್ಗವನ್ನು ತಿಳಿಸಿತು.
-ಮನೀಷಾ ಕೊಯಿರಾಲ, ಚಿತ್ರನಟಿ
ಕ್ಯಾನ್ಸರ್‌ ಗೆದ್ದ ಧೀರೆ

ಕ್ಯಾನ್ಸರ್‌ ಬಾಧಿತ ರಾಜ್ಯಗಳು
-ಗುಜರಾತ್‌
-ಕರ್ನಾಟಕ
-ಮಹಾರಾಷ್ಟ್ರ
-ತೆಲಂಗಾಣ
-ಪಶ್ಚಿಮಬಂಗಾಲ

ಪುರುಷರಲ್ಲಿ ಕ್ಯಾನ್ಸರ್‌
1. ತುಟಿ, ಬಾಯಿಯ ಕುಹರದ ಕ್ಯಾನ್ಸರ್‌
2. ಶ್ವಾಸಕೋಶ
3. ಹೊಟ್ಟೆ
4. ಕೊಲೊರೆಕೈಲ್‌ ಕ್ಯಾನ್ಸರ್‌
5. ಅನ್ನನಾಳದ ಕ್ಯಾನ್ಸರ್‌

ಮಹಿಳೆಯರಲ್ಲಿ ಕ್ಯಾನ್ಸರ್‌
1. ಸ್ತನ ಕ್ಯಾನ್ಸರ್‌
2. ತುಟಿ
3. ಗರ್ಭ ಕಂಠದ ಕ್ಯಾನ್ಸರ್‌
4. ಶ್ವಾಸ ಕೋಶ
5. ಕರುಳಿನ ಕ್ಯಾನ್ಸರ್‌

ಕ್ಯಾನ್ಸರ್‌ ಮತ್ತು ಅಪನಂಬಿಕೆಗಳು
ಹೆಚ್ಚಿನ ಕ್ಯಾನ್ಸರ್‌ಗಳನ್ನು ಆರಂಭಿಕ ಪತ್ತೆಯಿಂದ ಗುಣ ಪಡಿಸಲು ಸಾಧ್ಯ. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದರೆ ಅವರೂ ಸಾಮಾನ್ಯ ಜನರಂತೆ ಜೀವನ ನಡೆಸಬಹುದು.

ರೋಗಿಗೆ ಸಮಾಜದಿಂದ ನೈತಿಕ ಸ್ಥೈರ್ಯ ಅಗತ್ಯ. ಧನಾತ್ಮಕ ಚಿಂತನೆಯಿಂದ ಅರ್ಧ ರೋಗ ಜಯಿಸಲು ಸಾಧ್ಯವಿದೆ. ಬಡತನ, ಅನಕ್ಷರತೆ, ಅಜ್ಞಾನ, ಮೂಢನಂಬಿಕೆಗಳಿಂದ ತುಂಬಿರುವ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್‌ ರೋಗ ಎರಡನೇ ಅತೀ ದೊಡ್ಡ ರೋಗವಾಗಿ ಹೊರಹೊಮ್ಮಿರುವುದಂತೂ ಸತ್ಯ. (ಹೃದಯಾಘಾತ ಮಾರಣಾಂತಿಕ ಖಾಯಿಲೆಗಳಲ್ಲಿ ಜಾಗತಿಕವಾಗಿ ಮೊದಲನೇ ಸ್ಥಾನದಲ್ಲಿದೆ) ಕ್ಯಾನ್ಸರ್‌ ಸಾಂಕ್ರಮಿಕ ರೋಗವಲ್ಲದಿದ್ದರೂ, ಅನಾರೋಗ್ಯಕರ ಜೀವನ ಶೈಲಿ. ಒತ್ತಡದ ಬದುಕು, ವಿಪರೀತ ಪೈಪೋಟಿಯ ಜೀವನ ಪದ್ಧತಿ, ಬಿಡುವಿಲ್ಲದ ಅನಿಯಂತ್ರಿತ ಯಾಂತ್ರಿಕ ಬದುಕು, ತಂಬಾಕು ಉತ್ಪನ್ನಗಳ ದುರ್ಬಳಕೆ ಯಿಂದಾಗಿ ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಪ್ರತಿಯೊಬ್ಬ ವೈದ್ಯ ಮತ್ತು ಪ್ರಜೆಯೂ ತನ್ನ ಹೊಣೆಗಾರಿಕೆ ಅರಿತು ಕ್ಯಾನ್ಸರ್‌ ರೋಗದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅರಿವು ಮೂಡಿಸಿ ಕ್ಯಾನ್ಸರ್‌ ಪೀಡಿತರಿಗೆ ಸಕಾಲದಲ್ಲಿ ಸಾಂತ್ವನ ನೀಡಿ ಚಿಕಿತ್ಸೆ ದೊರಕಿಸಿ ನೀಡಿ ಮತ್ತು ಮಾನಸಿಕ ಧೈರ್ಯ ತುಂಬಿದಲ್ಲಿ ಇದನ್ನು ಜಯಿಸಬಹುದು. ಅದರಲ್ಲಿಯೇ ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರದ ಒಳಿತು ಮತ್ತು ಭವಿಷ್ಯ ಅಡಗಿದೆ.
-ಡಾ| ಮುರಲೀ ಮೋಹನ್‌ ಚೂಂತಾರು

ಕ್ಯಾನ್ಸರ್‌ ಬಗ್ಗೆ ತಿಳಿದಿರಬೇಕಾದ ಅಂಶಗಳಿವು
1.ಕ್ಯಾನ್ಸರ್‌ಗೆ ಚಿಕಿತ್ಸೆ ಇದೆ
ಹೆಚ್ಚಿನ ಎಲ್ಲ ಕ್ಯಾನ್ಸರ್‌ಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಚಿಕಿತ್ಸೆಯಿಂದ ಗುಣಪಡಿಸಬಹುದು. ಒಂದೆರಡು ಮೆದುಳಿನ ತೀವ್ರತರವಾದ ಕ್ಯಾನ್ಸರ್‌ಗಳು ಮಾತ್ರ ಅಪಾಯಕಾರಿ.
2. ಸಹಜೀವನಕ್ಕೆ ಸಮಸ್ಯೆ ಇಲ್ಲ
ಕ್ಯಾನ್ಸರ್‌ ಎಂಬುದು ಜೀವಕೋಶಗಳಲ್ಲಿ ಉಂಟಾ ಗುವ ಅನಿಯಂತ್ರಿತ ವಿಭಜನೆ. ಹಾಗಾಗಿ ಕ್ಯಾನ್ಸರ್‌ ರೋಗಿ ಯನ್ನು ಧಾರಾಳವಾಗಿ ಮುಟ್ಟಬಹುದು. ರೋಗಿ ಜತೆಗಿನ ಸಂಪರ್ಕದಿಂದ ಇದು ಹರಡದು.
3. ಯಾರಲ್ಲಿಯೂ ಕಾಣಿಸಿಕೊಳ್ಳಬಹುದು
ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ಧತಿ, ಮತ್ತು ಕಲುಷಿತ ವಾತಾವರಣ ದಿಂದಾಗಿ ಸಣ್ಣ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಯಾರಿಗೆ ಬೇಕಾದರೂ ಬರಬಹುದು. ಕೆಲವು ವಿರಳ ಕ್ಯಾನ್ಸರ್‌ಗಳು ಸಣ್ಣ ಮಕ್ಕಳಲ್ಲಿ ಮಾತ್ರ ಕಂಡು ಬರುತ್ತವೆ. ಉದಾಹರಣೆಗೆ ಲಿಂಪೋಮಾ, ಲ್ಯುಕೋಮಿಯಾ.
4. ಎಲ್ಲದಕ್ಕೂ ಶಸ್ತ್ರ ಚಿಕಿತ್ಸೆ ಬೇಡ
ಎಲ್ಲ ಕ್ಯಾನ್ಸರ್‌ ಖಾಯಿಲೆಗೆ ಶಸ್ತ್ರ ಚಿಕಿತ್ಸೆ
ಬೇಕಿಲ್ಲ. ಕೆಲವುಗಳಿಗೆ ಬರೀ ಕಿಮೋಥೆರಪಿ ಅಥವಾ ರೇಡಿಯೋಥೆರಫಿ ಮಾತ್ರ ನೀಡಲಾಗುತ್ತದೆ. ಯಾವ ಕ್ಯಾನ್ಸರ್‌ಗೆ ಯಾವ ಚಿಕಿತ್ಸೆ ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ. ಅಂಗಾಂಶಗಳ ಕ್ಯಾನ್ಸರ್‌, ಅದರ ಗಾತ್ರ ಅದರ ಚರಿತ್ರೆ ಮತ್ತು ಹರಡುವ ವೇಗ‌ ಇವುಗಳ ಮೇಲೆ ಅವಲಂಬಿತವಾಗಿ ಯಾವ ಚಿಕಿತ್ಸೆ ಎಂದು
ವೈದ್ಯರು ನಿರ್ಧರಿಸುತ್ತಾರೆ.
5. ಹೆಚ್ಚಿನವುಗಳಿಗೆ ಬಾಹ್ಯ ಅಂಶ ಕಾರಣ
ಹೆಚ್ಚಿನ ಎಲ್ಲ ಕ್ಯಾನ್ಸರ್‌ಗಳು ಬಾಹ್ಯ ಕಾರಣಗಳಾದ ಮದ್ಯಪಾನ, ಧೂಮಪಾನ ಮತ್ತು ಕಲುಷಿತ ವಾತಾ ವರಣದಿಂದ ಉಂಟಾಗುತ್ತದೆ. ಕೆಲವೊಂದು ಕ್ಯಾನ್ಸರ್‌ ಮಾತ್ರ ಆನುವಂಶಿಕವಾಗಿ ಮಕ್ಕಳಿಗೆ ಬರಬಹುದು.
6. ಲಸಿಕೆ ಸಂಶೋಧನೆ
ಈ ವರೆಗೆ ಕ್ಯಾನ್ಸರ್‌ಗೆ ಲಸಿಕೆ ಬಂದಿಲ್ಲ. ಈ ನಿಟ್ಟಿನಲ್ಲಿ ಸಂಶೋಧನೆ ನಡೆಯತ್ತಿದೆ. ಆರೋಗ್ಯ ಪೂರ್ಣವಾದ ಸಮತೋಲಿತ‌ ಆಹಾರ, ಉತ್ತಮ ವ್ಯಾಯಾಮ, ನೈಸರ್ಗಿಕ ಜೀವನ ಪದ್ಧತಿ, ಮದ್ಯಪಾನ, ಧೂಮಪಾನ ರಹಿತ ಜೀವನ ಶೈಲಿ ರೂಢಿಸಿಕೊಂಡು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡಲ್ಲಿ ಕ್ಯಾನ್ಸರ್‌ ರೋಗ ಬರುವ ಸಾಧ್ಯತೆ ಕಡಿಮೆ.
7.ಆರಂಭಿಕ ಹಂತದಲ್ಲಿ ತಿಳಿಯಬಹುದು
ಕೆಲವೊಂದು ಉದರದ ಕರುಳಿನ ಕ್ಯಾನ್ಸರ್‌, ಗರ್ಭಕೋಶದ ಕ್ಯಾನ್ಸರ್‌, ಸ್ತನದ ಕ್ಯಾನ್ಸರ್‌, ಮೆದೋಜಿರಕ ಗ್ರಂಥಿಯ ಕ್ಯಾನ್ಸರ್‌, ಯಕೃತ್ತಿನ ಕ್ಯಾನ್ಸರ್‌, ಬಾಯಿಯ ಕ್ಯಾನ್ಸರ್‌ಗಳ ಇರುವಿಕೆಯನ್ನು ರಕ್ತದ ಪರೀಕ್ಷೆ ಮಾಡಿ ಆರಂಭಿಕ ಹಂತದಲ್ಲಿಯೇ ಕಂಡುಹಿಡಿಯಬಹುದು. ವೃಷಣದ ಕ್ಯಾನ್ಸರ್‌, ಸ್ತನದ ಕ್ಯಾನ್ಸರ್‌ಗಳನ್ನು ಟ್ಯೂಮರ್‌ ಮಾರ್ಕರ್‌ ಎಂಬ ಕ್ಯಾನ್ಸರ್‌ ಮಾಹಿತಿ ಇರುವ ಜೀನ್‌ ಮುಖಾಂತರ ಪತ್ತೆ ಹಚ್ಚಬಹುದು. ಹೆತ್ತವರಲ್ಲಿ ಈ ರೀತಿ ಕ್ಯಾನ್ಸರ್‌ ಬಂದಿದ್ದಲ್ಲಿ, ಮಕ್ಕಳು ನಡು ವಯಸಿನಿಂದ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

-  ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasas

ಸೌರ ಯುಗಾದಿ; ಜೀವನೋತ್ಸಾಹ, ನವಚೈತನ್ಯ ತುಂಬುವ ಹಬ್ಬ ವಿಷು

PAK: ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಪಾಕ್!

PAK: ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಪಾಕ್!

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

1-qwewqew

ಮರಳಿ ಬಂದಿದೆ ಯುಗಾದಿ: ಹೊಸ ಸಂವತ್ಸರದ ಹುರುಪು, ನವ ಬೆಳಕಿನ ಆಶಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.