ಚುಪ್‌ ಬೈಠೊ ಅಂದ್ರ ಅಮಿತ್‌ ಸಾ ಹೆಡ್‌ ಮಾಸ್ಟ್ರು

ಸೈಲೆಂಟ್‌ ಆಗೋದ್ರಾ ರಾಜಾಹುಲಿ ಆ್ಯಂಡ್‌ ಟಗ್ರು

Team Udayavani, Jun 16, 2019, 8:44 AM IST

ಸಿಎಂ ಮೀಟಿಂಗ್‌ನ್ಯಾಗೆ ಪರಮೇಸ್ವರಣ್ಣೋರು ಫ‌ುಲ್ ಆ್ಯಕ್ಟೀವ್‌ ಅ್ಯಂಡ್‌ ಆವಾಜ್‌ ಅಂತೆ. ಆಫೀಸರ್ಗೆ ಚಳಿ ಬುಡ್ಸಿ ಇರಾವೇಸಾ ತೋರ್ಸಿದ್ರಂತೆ. ರೇವಣ್ಣೋರು ಡಿಪಾರ್ಟ್‌ಮೆಂಟ್ನಾಗೂ ಕೆಲ್ಸ ಸರಿಯಾಗ್‌ ಆಯ್ತಿಲ್ಲ, ರೋಡ್ಗಳೆಲ್ಲಾ ಕಿತ್ತೋಗವೆ, ಹಂಪ್ಸ್‌ ಅವೆ ಅಂತ ಬೋರ್ಡೆ ಹಾಕಿಲ್ಲಾ ಅಂತೆಲ್ಲಾ ರಾಂಗ್‌ ಆದ್ರಂತೆ. ಬೆಂಗ್ಳೂರ್‌ನಾಗೆ ಎಲಿವೇಟೆಡ್‌ ಕಾರಿಡಾರ್‌ ಟೆಂಡ್ರು ರೇವಣ್ಣೋರು ಡಿಪಾರ್ಟ್‌ಮೆಂಟ್ಗೆ ಕೊಟ್ಟಿದ್ಕೆ ಇಂಗೆಲ್ಲಾ ಮಾಂಜಾ ಕೊಡ್ತಾವ್ರೆ ಅಂತ ಪಸರ್‌ ಸಿಕ್ತಂತೆ. ಅದ್ಕೆ ರೇವಣ್ಣೋರು ಕೇಳ್ಳೋಗಂಟ ಕೇಳಿ, ಎಲ್ಲಾ ಸರಿ ಮಾಡ್ಸಿತೀವಿ ಬುಡಿ ಸಾ..ಅಂತೇಳಿದ್ರಂತೆ. ಆಮ್ಯಾಕೆ ಸೈಡ್‌ ಕರ್ಕೊಂಡ್‌ ಹೋಗಿ ತುಮ್ಕೂರ್‌ನಾಗೆ ಗೌಡ್ರು ಗೆದಿತಾರೆ..ಗೆದಿತಾರೆ…ಅಂದಿದ್ರಿ ಏನ್‌ ಯತ್ವಾಸ ಆಯ್ತು ಸಾ… ಅಂದೇಟ್ಗೆ ಪರಮೇಸ್ವರಣ್ಣೋರು ಫ‌ುಲ್ ಸೈಲೆಂಟ್ ಆಗೋದ್ರಂತೆ.

ಅಮಾಸೆ: ನಮ್‌ಸ್ಕಾರ ಸಾ….

ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ

ಅಮಾಸೆ: ಸಿಎಂ ಸಾಹೇಬ್ರು ಫ‌ುಲ್ ಬಿಜಿ ಇದ್ರು, ಗೌರ್ನ್ ಮೆಂಟ್ ಫ‌ುಲ್ ಆಕ್ಟೀವ್‌ ಇತ್ತಲ್ಲಾ ಸಾ… ಅದ್ಕೆ ಇದಾನ್‌ಸೌದಾನಾಗೇ ಸೆಟ್ಲ ಆಗೋಗಿದ್ದೆ

ಚೇರ್ಮನ್ರು: ನಿಂಗೇನ್ಲಾ ಅಲ್ಲಿ ಕೇಮು

ಅಮಾಸೆ: ಅಂಗಲ್ಲಾ ಸಾ…ಎಂಪಿ ಎಲೆಕ್ಸನ್‌ ರಿಸಲ್r ಬಂದ್‌ಮ್ಯಾಕೆ ಇನ್ನೇನ್‌ ಸಮ್ಮಿಸ್ರ ಸರ್ಕಾರ್ಕೆ ಹೊಗೆ ಪ್ರೋಗ್ರಾಂ, ಇವತ್ತೋ ನಾಳೇನೋ ಅಂತಿದ್ರಲ್ವೆ. ಅದ್ಕೆ ಒಸಿ ಇರೋ ಬರೋ ಕೆಲ್ಸ ಮಾಡ್ಕಂಡ್‌ ಬರೂಮಾ ಅಂತಾ ಹೋಗಿದ್ನಿ.

ಚೇರ್ಮನ್ರು: ಗೌರ್ನ್ಮೆಂಟ್‌ಗೆ ಏನೂ ಆಗಿಲ್ವಲ್ಲಾ

ಅಮಾಸೆ: ಹೌದು ಸಾ…ಎಂಪಿ ಎಲೆಕ್ಸನ್‌ ರಿಸಲ್rಗೆ ಎಲ್ಡ್ ದಿವ್ಸ ಬ್ಯಾಸರಾ ಮಾಡ್ಕಂಡಿದ್ರಂತೆ, ಅದ್ಕೆ ದೊಡ್‌ಗೌಡ್ರು ಅಯ್ಯೋ, ಸೋತ್ವಿ ಅಂತ ಸುಮ್ಕೆ ಕುಂತ್ರೆ ಆಯ್ತದಾ, ನಾನೂ ಸೋತ್‌ ಮ್ಯಾಗೆ ಸಿಎಂ ಆಗಿ, ಪಿಎಂ ಆಗಿದ್ದು ಹೋಗಿ ಇದಾನ್‌ಸೌದಾನಾಗೆ ಕೆಲ್ಸ ನೋಡಪ್ಪಾ ಅಂದ್ರಂತೆ. ಅದ್ಕೆ ಕುಮಾರಣ್ಣೋರು ಜೈ ಅಂತ ವೆಸ್ಟೆಂಡ್‌ ಬುಟ್ಬಿಟ್ಟು ಜೆಪಿ ನಗರ ಮನೇಕ್‌ ಶಿಫ್ಟ್ ಆಗಿ ಇದಾನ್‌ಸೌದಾನಾಗೆ ವಾರಪೂರ್ತಿ ಕುಂತಿದ್ರು

ಚೇರ್ಮನ್ರು: ವಾರ ಪೂರ್ತಿ ಏನ್ಲಾ ಮಾಡ್ತಿದ್ರು

ಅಮಾಸೆ: ಡಿಸಿಗಳ್ನೆಲ್ಲಾ ಗುಡ್ಡೆ ಹಾಕ್ಕೊಂಡು, ಬರ ಇದ್ರೆ ಏನ್‌ ಮಾಡಿದ್ದೀರಿ, ಮುಂಗಾರ್‌ನ್ಯಾಗೆ ಮಳೆ ಬಂದ್ರೆ ರೈತ್ರಗೆ ಗೊಬ್ರ, ಬಿತ್ನೆ ಬೀಜ ಸ್ಟಾಕ್‌ ಇಟ್ಕೊಳಿ, ಗೌರ್ನ್ಮೆಂಟ್ ಇವಾಗ್‌ ಬೀಳ್ತದೆ, ನಾಳೆ ಬೀಳ್ತದೆ ಅಂತ ಕನ್‌ವರ್ ಬ್ಯಾಡಿ ನಿಮ್‌ ಕೇಮ್‌ ನೀವ್‌ ನೋಡ್ಕಳಿ, ಗೌರ್ನ್ಮೆಂಟ್ ನಾವ್‌ ಉಳ್ಸ್ಕೊಳ್ಳೋದ್‌ ಹೆಂಗೆ ಅಂತ ಗೊತೈತೆ ಅಂದ್ರಂತೆ. ಅದ್ಕೆ ಪರಮೇಸ್ವರಣ್ಣೋರು ಹೌದೌದು, ಸರಿಯಾಗ್‌ ಕೆಲ್ಸ ಮಾಡಿ, ಯಾರ್ಯಾರ್‌ ಏನೇನ್‌ ಹೇಳ್ಕಂಡ್‌ ತಿರ್‌ಗಾಡ್ತಿದೀರಿ ಎಲ್ಲಾ ನಂಗೊತ್ತದೆ ಅಂದ್ರತೆ

ಚೇರ್ಮನ್ರು:ಅಂಗಾರೆ ನೋ ಆಪರೇಸನ್‌ ಲೋಟಸ್ಸಾ

ಅಮಾಸೆ: ಹೆಡ್‌ ಮಾಸ್ಟ್ರೆ , ರಿಂಗ್‌ ಮಾಸ್ಟ್ರೆ ಅಮಿತ್‌ ಸಾ ಅಣ್ಣೋರು ಹೇಳ್‌ಬುಟ್ಟವ್ರಂತೆ. ಚುಪ್‌ ಚುಪ್‌ಕೆ ಜಾಕೆ ತುಮ್‌ ತಲಾಬ್‌ ಮೆ ನಹಿ ಡೂಬೋ, ಜಬ್‌ ಟೈಂ ಆತಾ ಹೈ ತೋ ತಬ್‌ ಜಾಗ್ತೀ ರೆಹ್ನಾ…ಅಬ್‌ ಚುಪ್‌ ಬೈಠೊ ಮೈ ಜಬ್‌ ಬೋಲೂಂಗಾ ತೋ ತಬ್‌ ಎಂಟ್ರಿ ದೋ ಅಂದವ್ರಂತೆ. ಅದ್ಕೆ ಎಲ್ರೂ ಗಪ್‌ಚುಪ್‌ ಆಗವ್ರಂತೆ.

ಚೇರ್ಮನ್ರು: ಅದೇನೋ ಎಂಪಿ ಎಲೆಕ್ಸನ್‌ ರಿಸಲ್r ಬಂದ್‌ಮ್ಯಾಕೆ ಆಪ್ರೇಸನ್‌ ಡೈಮಂಡ್‌ ರಾಕೆಟ್ ಆಯ್ತದೆ, ಟ್ವೆಂಟಿ ಫೋರ್‌ ಅವರ್ನಾಗೆ ಗೌರ್ನ್ಮೆಂಟ್ ಚಲೇಜಾವ್‌ ಆಯ್ತದೆ ಅಂತ ಹೇಳ್ತಿದ್ರು

ಅಮಾಸೆ: ಅಂಗೇ ಹೇಳ್ತಿದ್ರು, ಅಮಿತ್‌ ಶಾ ಸಾಹೇಬ್ರು ಪಾರ್ಲಿಮೆಂಟ್ ಸೆಷನ್‌ ಆಗಿ ಮೋದಿ ಸೆಟ್ಲ ಆದ್‌ಮ್ಯಾಗೆ ನೋಡುಮಾ ಅಂದ್ರಂತೆ. ಕುಮಾರಣ್ಣೋರು ಡೈರೆಕ್ಟ್ ಆರ್‌ಎಸ್‌ಎಸ್‌ ಲೀಡ್ರುಗ್ಳಗೆ ಹಲ್ವಾ ಕೊಟ್ಟವ್ರಂತೆ. ಅದ್ಕೆ ಯಾರೂ ತುಟಿಕ್‌ ಪಿಟಿಕ್‌ ಅಂತಿಲ್ಲ

ಚೇರ್ಮನ್ರು: ಟಗ್ರು ಸಿದ್ರಾಮಣ್ಣೋರು ಸೈಲಂಟಾಗವ್ರಲ್ಲಾ ಯಾಕ್ಲಾ

ಅಮಾಸೆ:ದೊಡ್‌ಗೌಡ್ರು ಡೆಲ್ಲಿನ್ಯಾಗೆ ಪಿಟ್ಟಿಂಗ್‌ ಇಟ್ಟವ್ರಂತೆ. ರಾಹುಲ್ ಅಣ್ಣೋರ್ಗೆ ಡೈರೆಕ್ಟ್ ಟಾಕಿಂಗ್‌ ಮಾಡಿ, ನಿಮ್ಮೋರ್ಗೆ ಸಮ್ಮಿಸ್ರ ಸರ್ಕಾರ ಉಳೀಬೇಕಂತಾ ಇರಾದೆ ಇಲ್ಲಾ. ಸುಮ್ಕೆ ಸುಮ್ಕೆ ಕಾಟ ಕೊಡ್ತಾವ್ರೆ, ನಮ್ಕೂ ಬ್ಯಾಡಾ ಬುಡಿ ಸಾಕಾಗೈತೆ ಅಂದ್ರತೆ. ಅದ್ಕೆ ರಾಹುಲ್ ಅಣ್ಣೋರು ಐಸಾ ಮತ್‌ ಬೋಲಿಯೇ ಗೌಡಾಜಿ ಮೈ ಸಬ್‌ ಠೀಕ್‌ ಕರ್‌ತಾಹೂಂ ಅಂದ್ರಂತೆ. ರೋಷನ್‌ಬೇಗ್‌ ಸಾಹೇಬ್ರು ಸಿದ್ರಾಮಣ್ಣೋರ್‌ ಮ್ಯಾಗೆ ಪಿಟಿಷನ್‌ ಕೊಟ್ಟವ್ರಂತೆ. ಅದ್ಕೆ ಎಲ್ರೂ ಗುಮ್ಮಿದ್ರೆ ಕಷ್ಟ ಅಂತ ಸಿದ್ರಾಮಣ್ಣೋರು ಸುಮ್ನೆ ಅವ್ರಂತೆ

ಚೇರ್ಮನ್ರು: ಸಿದ್ರಾಮಣ್ಣೋರು ಅಷ್ಟು ಸಲೀಸಾಗಿ ಸುಮ್ಕಿರ್ತಾರಾ

ಅಮಾಸೆ: ಸುಚುವೇಸನ್‌ ಅಂಗೈತೆ. ಸ್ಟೇಟ್ ಲೀಡ್ರುಗ್ಳು , ಕೋ ಆರ್ಡಿನೇಸನ್‌ ಕಮಿಟಿಗೆ ಸೀನಿಯರ್‌ ಲೀಡರ್‌ ಖರ್ಗೆ ಅವ್ರ್ ಬರ್ಲಿ, ಲೆಜಿಸ್ಲೇಟೀವ್‌ ಪಾರ್ಟಿ ಪ್ರಸಿಡೆಂಟು ಸಿವ್‌ಕುಮಾರಣ್ಣೋರ್ಗೆ ಕೊಡ್ರಿ ಅಂತ ಹೈಕಮಾಂಡ್‌ಗೆ ಡಿಮ್ಯಾಂಡ್‌ ಇಟ್ಟವ್ರಂತೆ. ಆಗಾ ಸಿದ್ರಾಮಣ್ಣೋರು ಕೆಪಿಸಿಸಿ ಪ್ರಸಿಡೆಂಟ್ ಆಗ್‌ಬೇಕಾಯ್ತದಷ್ಟೆ

ಚೇರ್ಮನ್ರು:ಕ್ಯಾಬಿನೆಟ್‌ಗೆ ಯಾಕ್ಲಾ ಇಂಡಿಪೆಂಡೆಟ್ಸ್‌ ತಕಂಡವ್ರೆ

ಅಮಾಸೆ:ಗೌರ್ನ್ಮೆಂಟ್ ಉಳೀಬೇಕಲ್ವೇ. ಒನ್‌ ನಾಟ್ ಫೈ ಎಂಎಲ್ಎ ಇಟ್ಕಂಡಿರೋ ಬಿಜೆಪಿಯೋರು ಇಬ್ರು ಇಂಡಿಪೆಂಡೆಂಟ್ಸ್‌ನೂ ಮಡಿಕಂಡು ನಮ್ದು ಒನ್‌ ನಾಟ್ ಸೆವೆನ್‌ ಆಗೋಯ್ತು, ಬಿಎಸ್‌ಪಿ ಮಹೇಶಣ್ಣೋರು ನಮ್‌ ಕಡ್ಕೆ ಬತ್ತಾರೆ. ಓನ್ಲಿ ಫೈವ್‌ ಅಷ್ಟೇ ಸಾಕು ಗೌರ್ನ್ಮೆಂಟ್ ಮಾಡ್ತಿವಿ ಅಂತಿ ದ್ರಂತೆ. ಅದ್ಕೆ ಇಬ್ರ ಇಂಡಿಪೆಂಡೆಟ್ಸ್‌ನಾ ಕ್ಯಾಚ್ ಹಾಕ್ಕಂಡವ್ರೆ

ಚೇರ್ಮನ್ರು: ಅವ್ರನಾ ಮಿನಿಸ್ಟರ್‌ ಮಾಡಿದ್ರೆ ಗೌರ್ನಮೆಂಟ್ ಸೇಫ್ ಆಗೋಯ್ತದಾ?

ಅಮಾಸೆ: ಟೆಂಪರ್ರವರಿಯಾಗಿ ಸೇಫ್ ಆಯ್ತದೆ. ಕಮ್ಲ ಪಕ್ಸದೋರ್ಗೆ ಅಸೆಂಬ್ಲಿ ಡಿಸಾಲ್ವ್ ಮಾಡಿ ಎಲೆಕ್ಸನ್‌ಗೆ ಹೋಗುಮಾ ಅಂತ ಆಸೆ, ಆದ್ರೆ ಮೂರೂ ಪಕ್ಸ ಎಂಎಲ್ಎಗ್ಳು ಅದ್ಕೆ ತಯಾರಿಲ್ಲ, ಹೆಂಗೋ ಯಾವ್ದೋ ಗೌರ್ನ್ಮೆಂಟ್ ಇರ್ಲಿ ಬುಡಿ, ಎಲೆಕ್ಸನ್‌ ಹೋದ್ರೆ ಯಾರ್‌ ಗೆಲ್ತಾರೋ, ಸೋಲ್ತಾರೋ, ಕೋಟಿ ಕೋಟಿ ದುಡ್‌ ಖರ್ಚ್‌ ಮಾಡೋರು ಯಾರು ಅಂತ ಯೋಚ್ನೆ. ಅದ್ಕೆ ಕುಮಾರಣ್ಣೋರ್ಗು ಲಕ್‌ ಕಂಟೀನ್ಯೂ ಆದಂಗೈತೆ

ಚೇರ್ಮನ್ರು: ಹೆಂಗೋ ಇನ್ನೊಂದ್‌ ಎಲೆಕ್ಸನ್‌ ಇಲ್ದೆ ಒಳ್ಳೆ ಕೆಲ್ಸ ಮಾಡಿದ್ರೆ ಸಾಕು ಬುಡ್ಲಾ

ಅಮಾಸೆ: ಅಲ್ವೇ, ಅದ್ಕೆ ದೊಡ್‌ಗೌಡ್ರು ಪಿಲಾನ್‌ ಮಾಡಿ ಬೇಸ್‌ಮೆಂಟ್ ಹಾಕವ್ರೆ, ಅವ್ರು ಹಾಕಿದ್‌ ಮ್ಯಾಗೆ ರೇವಣ್ಣೋರು ಟೈಂ ಟೈಂಗೆ ಪೂಜೆ, ಹೋಮ, ಹವ್ನ ನಡೆಸ್ತಾವ್ರೆ, ಕುಮಾರಣ್ಣೋರು ವೈಲೆಂಟ್ ಇಲ್ದೆ ಸೈಲಾಂಟಾಗಿ ಫ‌ುಲ್ ಆ್ಯಕ್ಟೀವ್‌ ಆಗಿ ಕೆಲ್ಸ ಮಾಡ್ತಾವ್ರೆ. ಇನ್ನೊಂದಷ್ಟ್ ದಿನ ಗೌರ್ನ್ಮೆಂಟ್ ಸೇಫ್ ಅಂತ ತೆನೆ ಹೈಕ್ಳು ಹೇಳ್ತಾವ್ರೆ. ನನ್‌ ಹೆಂಡ್ರು ತಲೆ ಮಾಂಸಾ ತತ್ತಾ ಅಂತೇಳಿದ್ಲು ಬತ್ತೀನಾ ಸಾ…..

•ಎಸ್‌.ಲಕ್ಷ್ಮಿನಾರಾಯಣ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಸೃಷ್ಟಿ, ಸ್ಥಿತಿ ಮತ್ತು ಲಯಗಳ ದೈವಸ್ವರೂಪವೇ ಬ್ರಹ್ಮ, ವಿಷ್ಣು ಮತ್ತು ಶಿವ. ಇವುಗಳಲ್ಲಿ ಲಯಕಾರಕನಾದ ಶಿವನ ಸ್ಮರಣೆಗೆ ವಿಶೇಷವಾದ ದಿನವಿದು. ಭಕ್ತರೆಲ್ಲ ಉಪವಾಸ,...

  • ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫೆಬ್ರವರಿ 24ರಿಂದ ಎರಡು ದಿನ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಮೊದಲ ದಿನ ಅವರು ಗುಜರಾತ್‌ನ ಅತಿದೊಡ್ಡ ನಗರವಾದ ಅಹಮದಾಬಾದ್‌ಗೆ...

  • ಲೇಖನ ಪ್ರಕಟವಾದ ಸಂಭ್ರಮ ಮಡಿಲ ಮಗು ಕಣ್ಣು ತೆರೆದಾಗ ಮೊದಲು ಅಮ್ಮನ ಮುಖ ನೋಡಿ ದಂತೆ ನಾನು ಓದಿದ ಮೊದಲ ಪತ್ರಿಕೆ ಉದಯವಾಣಿ. ಪತ್ರಿಕೆಯನ್ನು ಕೊಂಡು ಓದಲು ಶಕ್ತಿ...

  • ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳು ಕಂಡುಕೊಂಡಿರುವುದೇನೆಂದರೆ, ಹೆಚ್ಚು ಚಿಂತೆ ಮಾಡುವವರಲ್ಲಿ ಹೆಚ್ಚು ಖನ್ನತೆ ಸಂಬಂಧಿ ಸಮಸ್ಯೆಗಳು ಅಧಿಕವಾಗುತ್ತವೆ ಹಾಗು...

  • ತಂದೆ ತಾಯಂದಿರ ಯೋಚನಾ ಕ್ರಮವೇ ಮಕ್ಕಳ ಅಭಿರುಚಿ, ಆಸಕ್ತಿಯನ್ನು ರೂಪಿಸುತ್ತದೆ. ಮುಂದೆ ಅವರ ಭವಿಷ್ಯವನ್ನು ಕೂಡ. ಮಕ್ಕಳನ್ನು ಹೇಗೆ ಮತ್ತು ಯಾವುದಕ್ಕಾಗಿ ಬೆಳೆಸಬೇಕು...

ಹೊಸ ಸೇರ್ಪಡೆ