ಏಷ್ಯನ್‌ ರಾಷ್ಟ್ರಗಳ ಮುತ್ತಿಕೊಂಡ ಕೋವಿಡ್‌


Team Udayavani, Jun 12, 2020, 7:30 AM IST

ಏಷ್ಯನ್‌ ರಾಷ್ಟ್ರಗಳ ಮುತ್ತಿಕೊಂಡ ಕೋವಿಡ್‌

ವರ್ಷದ ಆರಂಭಿಕ ತಿಂಗಳಲ್ಲಿ ಚೀನ ಹೊರತುಪಡಿಸಿ ಉಳಿದ ಏಷ್ಯನ್‌ ರಾಷ್ಟ್ರಗಳಲ್ಲಿ ಅಷ್ಟಾಗಿ ಕೋವಿಡ್‌ ಹಾವಳಿ ಇರಲಿಲ್ಲ. ಚೀನ ನಂತರ ಈ ವೈರಸ್‌ ಹೆಚ್ಚು ಹಾನಿ ಮಾಡಿದ್ದು ಐರೋಪ್ಯ ರಾಷ್ಟ್ರಗಳಿಗೆ, ನಂತರದಿಂದ ಕೋವಿಡ್‌-19 ಅಮೆರಿಕವನ್ನು ಥರಗುಟ್ಟಿಸಲಾರಂಭಿಸಿತು. ಆದರೆ, ಮೇ ತಿಂಗಳ ಆರಂಭದಿಂದ ಈ ವೈರಾಣು ಭಾರತ ಸೇರಿದಂತೆ, ಬಹುತೇಕ ಏಷ್ಯನ್‌ ರಾಷ್ಟ್ರಗಳನ್ನು ಹೆಚ್ಚು ಪೀಡಿಸಲಾರಂಭಿಸಿದೆ. ಹಾಗಿದ್ದರೆ, ಈ ಕ್ಲಿಷ್ಟ ಸಮಯದಲ್ಲಿ ಏಷ್ಯನ್‌ ರಾಷ್ಟ್ರಗಳು ಕೋವಿಡ್‌ ವಿರುದ್ಧ ಹೇಗೆ ಹೋರಾಡುತ್ತಿವೆ? ಮಾಹಿತಿ ಇಲ್ಲಿದೆ…

ಭಾರತದಲ್ಲಿ 50 ಲಕ್ಷ ದಾಟಿದ ಟೆಸ್ಟ್‌
ಭಾರತದಲ್ಲಿ ಎಪ್ರಿಲ್‌ 3ನೇ ವಾರದಿಂದ ಟೆಸ್ಟಿಂಗ್‌ ಪ್ರಕ್ರಿಯೆಗೆ ವೇಗ ದೊರೆಯಲಾರಂಭಿಸಿತು. ಈಗ ಪ್ರತಿನಿತ್ಯ ಏನಿಲ್ಲವೆಂದರೂ 1.43 ಲಕ್ಷ ಜನರನ್ನು ಪರೀಕ್ಷಿಸಲಾಗುತ್ತಿದೆ. ಆದರೆ ದೇಶದ ಜನಸಂಖ್ಯೆಯನ್ನು ಪರಿಗಣಿಸಿದಾಗ, ಈ ಪ್ರಮಾಣ ಏನೇನೂ ಸಾಲದು, ಈಗಿನದ್ದಕ್ಕಿಂತಲೂ ಕನಿಷ್ಠ 3 ಪಟ್ಟು ಹೆಚ್ಚು ಟೆಸ್ಟಿಂಗ್‌ಗಳನ್ನು ನಿತ್ಯ ನಡೆಸಬೇಕು ಎನ್ನುವ ಅಭಿಪ್ರಾಯವೂ ಇದೆ. ಭಾರತವು ಗುರುವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ 52 ಲಕ್ಷ ಜನರನ್ನು ಪರೀಕ್ಷಿಸಿದ್ದು, ತನ್ಮೂಲಕ ಏಷ್ಯಾದಲ್ಲೇ ಅತಿಹೆಚ್ಚು ಟೆಸ್ಟಿಂಗ್‌ಗಳನ್ನು ನಡೆಸಿದ ರಾಷ್ಟ್ರವಾಗಿದೆ. ಇನ್ನೊಂದೆಡೆ ಭಾರತಕ್ಕಿಂತಲೂ ಚೀನದಲ್ಲಿ ಹೆಚ್ಚು ಟೆಸ್ಟಿಂಗ್‌ಗಳು ನಡೆದಿವೆ ಎನ್ನಲಾಗುತ್ತದೆಯಾದರೂ, ಚೀನ ಈ ಬಗ್ಗೆ ಅಂಕಿಸಂಖ್ಯೆಯನ್ನು ಸರಿಯಾಗಿ ಬಿಡುಗಡೆಗೊಳಿಸುತ್ತಿಲ್ಲ.

ವುಹಾನ್‌ನಲ್ಲಿ ನಿಜಕ್ಕೂ ಎಲ್ಲರ ಟೆಸ್ಟಿಂಗ್‌ ಆಯಿತೇ?
ಕೇವಲ 10 ದಿನದಲ್ಲಿ ವುಹಾನ್‌ನ ಪ್ರತಿಯೊಬ್ಬ ನಾಗರಿಕನ ಪರೀಕ್ಷೆ ಮಾಡುತ್ತೇವೆ ಎಂದು ಚೀನ ಘೋಷಿಸಿದಾಗ, ಜಗತ್ತಿಗೆ ಅಚ್ಚರಿಯಾಗಿತ್ತು. ಏಕೆಂದರೆ, ವುಹಾನ್‌ನ ಜನಸಂಖ್ಯೆ 1.11 ಕೋಟಿಯಷ್ಟಿದೆ. ಇಷ್ಟು ಕಡಿಮೆ ಅವಧಿಯಲ್ಲೇ ಅಷ್ಟೂ ಜನರ ಟೆಸ್ಟಿಂಗ್‌ ಸಾಧ್ಯವೇ ಎಂಬ ಪ್ರಶ್ನೆ ಹುಟ್ಟಿತ್ತು. ಆದರೆ, ಚೀನ ಜೂನ್‌ 3ರ ವೇಳೆಗೆ, ವುಹಾನ್‌ನ ಪ್ರತಿಯೊಬ್ಬ ವ್ಯಕ್ತಿಯ ಟೆಸ್ಟಿಂಗ್‌ ಮಾಡಿರುವುದಾಗಿ ಘೋಷಿಸಿತ್ತು. ಇದರಲ್ಲಿ ಕೇವಲ 300 ಪಾಸಿಟಿವ್‌ ಕೇಸುಗಳು ಪತ್ತೆಯಾಗಿದ್ದು, ಅವರೆಲ್ಲರೂ ರೋಗಲಕ್ಷಣವಿಲ್ಲದವರು ಎಂದು ಚೀನ ಹೇಳಿತು. ಆದರೆ, ಈ ವ್ಯಾಪಕ ಟೆಸ್ಟಿಂಗ್‌ ಆರಂಭವಾಗುವುದಕ್ಕೂ ಒಂದು ವಾರದ ಅವಧಿಯಲ್ಲಿ ಟೆಸ್ಟ್‌ ಮಾಡಿಸಿಕೊಂಡವರು, ಕೊರೊನಾದಿಂದ ಚೇತರಿಸಿಕೊಂಡವರು ಹಾಗೂ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಟೆಸ್ಟಿಂಗ್‌ಗಳನ್ನು ನಡೆಸಲಾಗಿಲ್ಲ ಎನ್ನಲಾಗುತ್ತದೆ. ಇನ್ನು, ಜನವರಿಯಲ್ಲಿ ಲಾಕ್‌ಡೌನ್‌ ಜಾರಿಯಾಗುವುದಕ್ಕೂ ಮುನ್ನವೇ ಊರು ಬಿಟ್ಟಿದ್ದ ವುಹಾನ್‌ ನಿವಾಸಿಗಳೂ ಈ ಟೆಸ್ಟಿಂಗ್‌ನಿಂದ ತಪ್ಪಿಸಿಕೊಂಡಿರುವ ಸಾಧ್ಯತೆ ಇರುತ್ತದೆ. ಚೀನದ ಮಾತನ್ನು ನಂಬುವುದೇ ಆದರೆ, ಏಷ್ಯಾದಲ್ಲಿ ಅತಿಹೆಚ್ಚು ಟೆಸ್ಟಿಂಗ್‌ಗಳನ್ನು ನಡೆಸಿದ ರಾಷ್ಟ್ರವಾಗಿ ಹಾಗೂ ಜಗತ್ತಿನಲ್ಲಿ 1 ಕೋಟಿಗೂ ಹೆಚ್ಚು ಟೆಸ್ಟ್‌ ನಡೆಸಿದ ರಾಷ್ಟ್ರಗಳಲ್ಲಿ ಅದು ಜಾಗಪಡೆಯುತ್ತದೆ. ಅಮೆರಿಕ ಇದುವರೆಗೂ 2 ಕೋಟಿ 26 ಲಕ್ಷ ಪರೀಕ್ಷೆಗಳನ್ನು ನಡೆಸಿದ್ದರೆ, ರಷ್ಯಾ 1 ಕೋಟಿ 38 ಲಕ್ಷ ಪರೀಕ್ಷೆಗಳನ್ನು ಕೈಗೊಂಡಿದೆ.

ಜನಸಂಖ್ಯೆಗೆ ಹೋಲಿಸಿದರೆ ಕಡಿಮೆಯೇ
98 ಲಕ್ಷ ಜನಸಂಖ್ಯೆಯಿರುವ ಯುಎಇ ತನ್ನ ಜನಸಂಖ್ಯೆಯ 25.66 ಪ್ರತಿಶತ ಜನರನ್ನು ಈಗಾಗಲೇ ಪರೀಕ್ಷಿಸಿದ್ದರೆ, 8 ಕೋಟಿ ಜನರಿರುವ ಟರ್ಕಿ ತನ್ನ ಒಟ್ಟು ಜನಸಂಖ್ಯೆಯಲ್ಲಿ 29.08 ಪ್ರತಿಶತ ಜನರನ್ನು ಪರೀಕ್ಷಿಸಿದೆ. ಇವಕ್ಕೆ ಹೋಲಿಸಿದರೆ ಭಾರತದ ಜನಸಂಖ್ಯೆ ಅಗಾಧವಾಗಿದ್ದು, ನಮ್ಮಲ್ಲಿ ಇದುವರೆಗೂ ಒಟ್ಟು 0.37 ಪ್ರತಿಶತ ಜನರನ್ನು ಪರೀಕ್ಷಿಸಲಾಗಿದೆ.

ತಪ್ಪು ಹೆಜ್ಜೆ ಇಡುತ್ತಿದೆಯೇ ಜಪಾನ್‌?
12 ಕೋಟಿ ಜನಸಂಖ್ಯೆಯಿರುವ ಜಪಾನ್‌ ಕೊರೊನಾ ವಿರುದ್ಧ ಹೋರಾಡುತ್ತಿರುವ ರೀತಿ ಅಚ್ಚರಿಹುಟ್ಟಿಸುವಂತಿದೆ. ಇಲ್ಲಿಯವರೆಗೂ ಆ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿಯಾಗಿಲ್ಲ. ಗುರುವಾರದವರೆಗೆ ಕೇವಲ 3 ಲಕ್ಷ 24 ಸಾವಿರ ಟೆಸ್ಟ್‌ಗಳನ್ನಷ್ಟೇ ಮಾಡಲಾಗಿದೆ. ಆ ರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆಯೂ ಕೇವಲ 17,251 ಇದ್ದರೆ, ಇದುವರೆಗೂ 919 ಜನ ಮೃತಪಟ್ಟಿದ್ದಾರೆ. ಹಾಗೆಂದು, ಅದು ಕೊರೊನಾ ಹೋರಾಟದಲ್ಲಿ ಯಶಸ್ವಿ ತಂತ್ರ ಅನುಸರಿಸುತ್ತಿದೆ ಎಂದು ಇದರರ್ಥವಲ್ಲ ಎಂದು ಪರಿಣತರು ಎಚ್ಚರಿಸುತ್ತಿದ್ದಾರೆ. “”ಜಪಾನ್‌ ಕೇವಲ ಹೆಚ್ಚು ಅಸ್ವಸ್ಥರಾದವರನ್ನಷ್ಟೇ ಪರೀಕ್ಷಿಸುತ್ತಿದೆ. ಸರಕಾರ‌ವು ವೈದ್ಯರಿಗೆ ಕೊಡಲಾದ ನಿರ್ದೇಶನವೇ ವಿಚಿತ್ರವಾಗಿದೆ. ರೋಗಿಯೊಬ್ಬನಲ್ಲಿ ನ್ಯೂಮೋನಿಯಾ ಲಕ್ಷಣ ಕಾಣಿಸಿಕೊಂಡರೆ ಮಾತ್ರ ಆತನಿಗೆ ಕೋವಿಡ್‌-19 ಟೆಸ್ಟ್‌ ಶಿಫಾರಸು ಮಾಡಿ ಎನ್ನುತ್ತದೆ ಸರಕಾರ‌. ಹೀಗಾಗಿ, ಬಹುತೇಕ ಸೋಂಕಿತರು ಅಧಿಕೃತವಾಗಿ ದಾಖಲಾಗುತ್ತಲೇ ಇಲ್ಲ. ಸೋಂಕಿತರ ಸಂಖ್ಯೆ ಜಪಾನ್‌ನಲ್ಲಿ 3-7 ಲಕ್ಷದವರೆಗಾದರೂ ಇರಬಹುದು” ಎನ್ನುತ್ತಾರೆ ಟೋಕಿಯೋದ ಕಿಟಾಸಟೋ ಸಾಂಕ್ರಾಮಿಕ ರೋಗ ಅಧ್ಯಯನ ಕೇಂದ್ರದ ಮುಖ್ಯಸ್ಥ ಕಾಟ್ಸುಮಿ ತ್ಸೋರಾ.

ಏಷ್ಯಾದ ಟಾಪ್‌ 10 ಸೋಂಕಿತ ದೇಶಗಳು
ದೇಶ ಸೋಂಕಿತರು ಜನಸಂಖ್ಯೆ
ಭಾರತ 2 ಲಕ್ಷ 87 ಸಾವಿರ 137 ಕೋಟಿ 92 ಲಕ್ಷ
ಇರಾನ್‌ 1 ಲಕ್ಷ 78 ಸಾವಿರ 8 ಕೋಟಿ 39 ಲಕ್ಷ
ಟರ್ಕಿ 1 ಲಕ್ಷ 73 ಸಾವಿರ 8 ಕೋಟಿ 42 ಲಕ್ಷ
ಪಾಕಿಸ್ಥಾನ 1 ಲಕ್ಷ 19 ಸಾವಿರ 22 ಕೋಟಿ
ಸೌದಿ 1 ಲಕ್ಷ 12 ಸಾವಿರ 3 ಕೋಟಿ 47 ಲಕ್ಷ
ಚೀನ 83 ಸಾವಿರ 143 ಕೋಟಿ 93 ಲಕ್ಷ
ಬಾಂಗ್ಲಾದೇಶ 78 ಸಾವಿರ 16 ಕೋಟಿ 45 ಲಕ್ಷ
ಕತಾರ್‌ 73 ಸಾವಿರ 28 ಲಕ್ಷ
ಯುಎಇ 40,507 98 ಲಕ್ಷ
ಸಿಂಗಾಪುರ 39,387 58 ಲಕ್ಷ

ಏಷ್ಯಾದಲ್ಲಿ ಏಳು ರಾಷ್ಟ್ರಗಳು ಇದುವರೆಗೂ 10 ಲಕ್ಷಕ್ಕಿಂತ ಹೆಚ್ಚು ಪರೀಕ್ಷೆಗಳನ್ನು ನಡೆಸಿವೆ…
ಭಾರತ 5,213,140
ಯುಎಇ 2,537,000
ಟರ್ಕಿ 2,451,700
ಇರಾನ್‌ 1,128,601
ದ.ಕೊರಿಯಾ 1,066,888
ಕಝಕಿಸ್ತಾನ 1,050,098
ಸೌದಿ ಅರೇಬಿಯಾ 1,019,812

(ಚೀನ ವುಹಾನ್‌ವೊಂದರಲ್ಲೇ 1 ಕೋಟಿಗೂ ಅಧಿಕ ಜನರನ್ನು ಪರೀಕ್ಷಿಸಿರುವುದಾಗಿ ಹೇಳುತ್ತದಾದರೂ, ಅದು ಸ್ಪಷ್ಟ ಅಂಕಿಸಂಖ್ಯೆಯನ್ನು ಹೇಳದ ಕಾರಣ, ಪಟ್ಟಿಯಿಂದ ಬಿಡಲಾಗಿದೆ)

ಟಾಪ್ ನ್ಯೂಸ್

baby

Sirsi ; ಆಕಸ್ಮಿಕವಾಗಿ ಬಾವಿಗೆ ಬಿದ್ದು 2 ವರ್ಷದ ಮಗು ಮೃತ್ಯು

1-sdsaas

Delhi; ಹುಡುಕಾಟದ ನಂತರ ಆಪ್ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದ ಇಡಿ

Mumbaiಮೂರು ಪಕ್ಷಗಳ ಸರಕಾರವಿದ್ದರೂ ಬಿಜೆಪಿಯ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಫಡ್ನವೀಸ್‌

Mumbaiಮೂರು ಪಕ್ಷಗಳ ಸರಕಾರವಿದ್ದರೂ ಬಿಜೆಪಿಯ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಫಡ್ನವೀಸ್‌

1-sadsad

Asian Games :ನೀರಜ್ ಚೋಪ್ರಾಗೆ ನಿರೀಕ್ಷಿತ ಚಿನ್ನ; ಪದಕಪಟ್ಟಿಯಲ್ಲಿ ಇತಿಹಾಸ

arrested

BMTC ಯಲ್ಲಿ ಭಾರಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಬಂಧನ

1-asddas

Pollution; ಭಾರತದ ಅತ್ಯಂತ ಕಲುಷಿತ ಗಾಳಿಯಿರುವ ನಗರ ಯಾವುದು? : ವಿಶ್ಲೇಷಣೆ

Gaming App Case:ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಗೆ ಜಾರಿ ನಿರ್ದೇಶನಾಲಯದ ಸಮನ್ಸ್‌ ಜಾರಿ

Gaming App Case:ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಗೆ ಜಾರಿ ನಿರ್ದೇಶನಾಲಯದ ಸಮನ್ಸ್‌ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

world animal day

World Animal Welfare Day: ಪ್ರಾಣಿಗಳ ಕ್ಷೇಮಕ್ಕಾಗಿ ಶ್ರಮಿಸುವ ಜಗತ್ತು ಸೃಷ್ಟಿಯಾಗಲಿ

malaria vaccine

Malaria : ಮಲೇರಿಯಾ ಲಸಿಕೆಗೆ ಡಬ್ಲ್ಯುಎಚ್‌ಒ ಅಸ್ತು

vande bharath modi

Vande Bharat: ವಂದೇ ಭಾರತ್‌ ರೈಲು ಸೇವೆ ದೇಶಾದ್ಯಂತ ವಿಸ್ತರಣೆ

9–old-age

Old Age: ವೃದ್ದಾಪ್ಯ ಶಾಪವೇ?

Sikh ಕೆನಡಾಕ್ಕೆ ಸಿಕ್ಖ್ ವಲಸೆ ನೂರಾರು ವರ್ಷಗಳ ಇತಿಹಾಸ

Sikh ಕೆನಡಾಕ್ಕೆ ಸಿಕ್ಖ್ ವಲಸೆ ನೂರಾರು ವರ್ಷಗಳ ಇತಿಹಾಸ

MUST WATCH

udayavani youtube

ಮತ್ತೆ ಸುದ್ದಿಯಲ್ಲಿದ್ದಾರೆ ರಶ್ಮಿ ಸಾಮಂತ್ ಏನಿದು

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

ಹೊಸ ಸೇರ್ಪಡೆ

Lokayukta

Sirsi ; ಪಂಚಾಯತ್ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

1-sadas

Uttara Kannada: ಜಿ.ಟಿ.ನಾಯ್ಕರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಅಭಿಮಾನಿಗಳ ಆಗ್ರಹ

1-ssadsa

Bantwal; ಕಾರು ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ

baby

Sirsi ; ಆಕಸ್ಮಿಕವಾಗಿ ಬಾವಿಗೆ ಬಿದ್ದು 2 ವರ್ಷದ ಮಗು ಮೃತ್ಯು

1-sdsaas

Delhi; ಹುಡುಕಾಟದ ನಂತರ ಆಪ್ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದ ಇಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.