Udayavni Special

ಒಂದು ಗುಂಗಿನ ಒಳಗೆ  ಒಂದಲ್ಲ; ನೂರಾರು ಸ್ವರಗಳು!


Team Udayavani, Jun 19, 2021, 10:43 PM IST

desiswara

ಅಲ್ಲಿ ನೂರಾರು ಕೊಠಡಿಗಳು. ಒಂದೊಂದು ಸಾಲಿನಲ್ಲೂ ಪ್ರತಿ ಹತ್ತು ಕೊಠಡಿಗಳನ್ನು ಕಾಣಬಹುದು. ಈ ಕೊಠಡಿಗಳಿಗೆ ಹತ್ತಿರದ ಊರಿನ ಹೆಸರುಗಳನ್ನು ಇಡಲಾಗಿದೆ. ಅಲ್ಲಲ್ಲಿ ಪುಟ್ಟ ಪುಟ್ಟ ಸಭಾಂಗಣಗಳು. ಎಲ್ಲ ಮೂಲೆಯಲ್ಲಿಯೂ ಒಬ್ಬೊಬ್ಬ ವಯಸ್ಸಾದವರು ಕುಳಿತಿದ್ದಾರೆ. ಅವರದ್ದೇ ಲೋಕದಲ್ಲಿದ್ದಾರೆ. ಕೆಲವರಿಗೆ ಕಣ್ಣು ಕಾಣದು, ಹಲವರಿಗೆ ಕಿವಿ ಕೇಳದು, ಇನ್ನು ಕೆಲವರು ನಡೆಯಲು ಕಷ್ಟ ಪಡುತಿಹರು, ಕೆಲವರಿಗೆ ಎಲ್ಲದ ರಲ್ಲೂ ಅನಾಸಕ್ತಿ. ಹೀಗೆ ಬದುಕಿನ ವಿಶ್ವರೂಪದರ್ಶನವಾಗಿತ್ತು.

ಸಂಗೀತ ಒಂದು ಧ್ಯಾನ. ಸ್ವರಗಳ ಸಂಭಾಷಣೆಯನ್ನು ಅರಿತು, ಅದನ್ನು ತನ್ನ ಧ್ವನಿಯಲ್ಲಿ ಅಥವಾ ಒಂದು ವಾದ್ಯದಿಂದ ಹೊರತರುವ ಪ್ರಕ್ರಿಯೆ ಒಂದು ಸುಂದರ ಅನುಭವ. ಇದನ್ನು ಅನುಭವಿಸಲಿಕ್ಕೆ  ಸ್ವರಗಳನ್ನು ವರ್ಷಗಟ್ಟಲೆ ಅರಿತು, ಕಲಿತು ಹೊರತರುವುದು ಮುಖ್ಯವಾದರೆ, ಸುಮ್ಮನೆ ಹಾಡುಗಳನ್ನು ಸಮಚಿತ್ತವಾಗಿ ಕೇಳಿಸಿಕೊಂಡರೂ ಸಾಕು ಅದು ಅನುಭವಕ್ಕೆ ಸಿಗುತ್ತದೆ. ಹೀಗೆ ಕೇಳುವಾಗ ಅದು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಿ, ಮನಸ್ಸು ನೆಮ್ಮದಿಯಿಂದಿರುತ್ತದೆ ಹಾಗೂ ಪ್ರತಿಕ್ಷಣವನ್ನೂ ಅನುಭವಿಸಲು ಸಿದ್ಧವಾಗುತ್ತದೆ.

ಪಾಶ್ಚಾತ್ಯ ದೇಶಗಳಲ್ಲಿ ಸಂಗೀತದ‌ ಒಲವು ಹೆಚ್ಚು. ಅದರಲ್ಲೂ ಮನಸ್ಸಿನ ಮೇಲೆ ಸಂಗೀತದ ಅನುಕೂಲಗಳು ಹೆಚ್ಚು ಎಂದು ವಿಜ್ಞಾನ ತೋರಿಸಿ ಕೊಟ್ಟಿರುವುದರಿಂದ ಎಲ್ಲ ದೇಶಗಳಲ್ಲೂ ಸಣ್ಣ ವಯಸ್ಸಿಗೇ ಸಂಗೀತವನ್ನು ಪರಿಚಯಿಸಲಾಗುತ್ತದೆ. ಇದರಿಂದಾಗಿ ಇತ್ತೀಚೆಗೆ “ಮ್ಯೂಸಿಕ್‌ ಥೆರಪಿ’ಯೂ ಬಹುಬೇಡಿಕೆಯಲ್ಲಿದೆ. ಈ ಥೆರಪಿಗೆ ನಮ್ಮ ವಾಕ್‌ ಚಿಕಿತ್ಸೆಯ ಹಾಗೆ ವಯೋಮಿತಿಯಿಲ್ಲ. ಪುಟ್ಟ ಮಗುವಿನಿಂದ ಹಿಡಿದು, ದೊಡ್ಡವರ ತನಕ ಎಲ್ಲರೂ ಸಂಗೀತದ, ನಾದದ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ನಾನು ಕೆಲಸ ಮಾಡುತ್ತಿರುವ ಕ್ಲಿನಿಕ್‌ನಲ್ಲೂ ಈ ಥೆರಪಿಯೂ ಲಭ್ಯವಿರುವ ಕಾರಣ ನನಗೆ ಇದರ ಲಾಭವನ್ನು ಹತ್ತಿರದಿಂದ ನೋಡಲು ಅವಕಾಶ ಸಿಕ್ಕಿತು. ಸಂಗೀತವನ್ನು ಕೆಲವರು ಜೀವನ ಪರ್ಯಂತ ಅಭ್ಯಾಸ ಮಾಡುತ್ತಾರೆ. ಇದೊಂದು ಆಳವಾದ ಸಮುದ್ರದ ಹಾಗೆ. ಎಷ್ಟೇ ಈಜಿದರೂ, ಎಷ್ಟೇ ಆಳಕ್ಕೆ ಧುಮುಕಿದರೂ ಅದಕ್ಕೊಂದು ಕೊನೆಯೇ ಇಲ್ಲ ಎನ್ನುವ ಭಾವ ಕಾಡುತ್ತದೆ. ಇನ್ನೂ ಕಲಿಯಬೇಕು, ನನ್ನ ಮನಸ್ಸನ್ನು ಸಂಗೀತ ಸಾಗರದಲ್ಲಿ ಮುಳುಗಿಸಲೇಬೇಕು ಎಂಬ ಹಠ ಹೆಚ್ಚುತ್ತಲೇ ಹೋಗುತ್ತದೆ. ಈ ಸಂಗೀತದ ಬೇರೊಂದು ಮುಖ ನನಗೆ ಇತ್ತೀಚೆಗೆ ಅರ್ಥವಾದದ್ದು ಸಂಗೀತ ಥೆರಪಿಯ ನೋಡಲು ಹೋದಾಗ.

ಆಸ್ಟ್ರೇಲಿಯದಲ್ಲಿ ಬೇರೆ ದೇಶಗಳಿಂದ ಎಷ್ಟೋ ವರ್ಷಗಳ ಹಿಂದೆ ವಲಸೆ ಬಂದವರು ಹೆಚ್ಚು. ಹೀಗೆ ಬಂದವರೆಲ್ಲರೂ ಇಲ್ಲಿಯ ವ್ಯವಸ್ಥೆಗಳನ್ನು ನೋಡಿ ತಮ್ಮ ದೇಶಕ್ಕೆ ವಾಪಸ್ಸಾಗದೆ ಇಲ್ಲಿಯವ

ರಾಗಿಯೇ ಉಳಿದುಬಿಡುತ್ತಾರೆ. ಇಲ್ಲಿ ಇವರಿಗೆ ವಯಸ್ಸಾದಾಗ ಆರಾಮವಾಗಿ ಇರಲೆಂದೇ ಸರಕಾರ  ಬಹಳಷ್ಟು “ಏಜ್‌x ಕೇರ್‌’ಗಳನ್ನು ನಿರ್ಮಿಸಿದೆ. ಇದು ಯಶಸ್ವಿಯಾಗಿದೆ ಕೂಡ. ನಾನು ಮೊದಲನೇ ದಿನ ನಮ್ಮ ಮ್ಯೂಸಿಕ್‌ ಥೆರಪಿಸ್ಟಿನ ಜತೆ ಒಂದು ಏಜ್‌x ಕೇರ್‌ಗೆ ಹೋಗಿದ್ದು ಅದೊಂದು ಮರೆಯಲಾರದ ಅನುಭವ.

ಅಲ್ಲಿ ನೂರಾರು ಕೊಠಡಿಗಳು. ಪ್ರತೀ ಹತ್ತು ಕೊಠಡಿಗಳನ್ನು ಒಂದೊಂದು ಸಾಲಲ್ಲಿ ಕಾಣಬಹುದು. ಈ ಕೊಠಡಿಗಳಿಗೆ ಹತ್ತಿರದ ಊರಿನ ಹೆಸರುಗಳನ್ನು ಇಡಲಾಗಿದೆ. ಅಲ್ಲಲ್ಲಿ ಪುಟ್ಟ ಪುಟ್ಟ ಸಭಾಂಗಣಗಳು. ಎಲ್ಲ ಮೂಲೆಯಲ್ಲಿಯೂ ಒಬ್ಬೊಬ್ಬ ವಯಸ್ಸಾದವರು ಕುಳಿತಿದ್ದಾರೆ. ಅವರದ್ದೇ ಲೋಕದಲ್ಲಿದ್ದಾರೆ. ಕೆಲವರಿಗೆ ಕಣ್ಣು ಕಾಣದು, ಹಲವರಿಗೆ ಕಿವಿ ಕೇಳದು, ಇನ್ನು ಕೆಲವರು ನಡೆಯಲು ಕಷ್ಟ ಪಡುತಿಹರು, ಕೆಲವರಿಗೆ ಎಲ್ಲದರಲ್ಲೂ ಅನಾಸಕ್ತಿ. ಹೀಗೆ ವಿಶ್ವರೂಪದರ್ಶನವಾಗಿತ್ತು.

ಇನ್ನು ಎಲ್ಲ ಕೊಠಡಿಯ ಬಾಗಿಲ ಮೇಲೆ ಅಲ್ಲಿಯ ನಿವಾಸಿಯ ಭಾವಚಿತ್ರ ಅಂಟಿಸಿದ್ದರು. ಜತೆಗೊಂದು ಪುಟ್ಟ ಪರಿಚಯ ಪತ್ರ. ಅದು ಅವರವರ ಧ್ವನಿಯಲ್ಲಿತ್ತು. ಒಟ್ಟಾರೆಯಾಗಿ ಅವರ ಪರಿಚಯ, ಅವರ ಇಷ್ಟ-ಕಷ್ಟ, ಹವ್ಯಾಸಗಳು, ಇಷ್ಟದ ಹಾಡುಗಳು ಎಲ್ಲವು ಇದ್ದವು. ಹಾಗಾಗಿ ಯಾರೇ ಹೊಸಬರು ಬಂದರೂ ಅವರಲ್ಲಿ ಹೊಸದಾಗಿ ಪರಿಚಯ ಕೇಳುವ ಪ್ರಮೇಯ ಬರುವುದಿಲ್ಲ. ಇನ್ನು ಕೊಠಡಿಯ ಒಳ ಹೋದರೆ, ಪ್ರತಿಯೊಬ್ಬರ ಜೀವನದ ಚಿತ್ರ ಅಲ್ಲಿ ದಾಖಲಾಗಿರುತ್ತದೆ. ಅಂದರೆ, ಅವರ ಕುಟುಂಬದವರ ಚಿತ್ರ, ಮೊಮ್ಮಕ್ಕಳು ಅಜ್ಜ  ಅಜ್ಜಿಗೆ ಪ್ರೀತಿಯಿಂದ ಬರೆದು ಕಳಿಸಿದ ಚಿತ್ರಗಳು, ಗೊಂಬೆಗಳು, ಹೀಗೆ ಕೊಠಡಿ ತುಂಬೆಲ್ಲ ಇಲ್ಲಿ ಯಾರು ವಾಸಿಸುತ್ತಿದ್ದಾರೆ ಅವರ ಜೀವನವನ್ನು ಜಗತ್ತಿಗೆ ಹೇಳ್ಳೋ ಚಿತ್ರಗಳು. ಇನ್ನು ಇಲ್ಲಿಯ ನಿವಾಸಿ ಕೊಠಡಿಯ ಮೂಲೆಯಲ್ಲೆಲ್ಲೋ ಮಲಗಿರುತ್ತಾರೆ, ಕುಳಿತು ಕನಸು ಕಾಣುತ್ತಿರುತ್ತಾರೆ ಅಥವಾ ಯಾರಧ್ದೋ ನಿರೀಕ್ಷೆಯಲ್ಲಿ ಚಡಪಡಿಸುತ್ತಿರುತ್ತಾರೆ.

ಅಂದು “ಜೋಯನ’ (ಹೆಸರು ಬದಲಿಸಿದೆ) ಎಂಬವರನ್ನು  ನೋಡಲು ಹೋಗಿದ್ದೆವು. ಅವರಿಗೆ 87 ವರ್ಷ. ನಮ್ಮನ್ನು ನೋಡಿದ ತತ್‌ಕ್ಷಣ ಬಂದು “ನನಗೊಂದು ಸಹಾಯ ಮಾಡುತ್ತೀರ? ನಿಮ್ಮ ಬಳಿ ಇರುವ ಫೋನ್‌ ಕೊಡಿ, ನನ್ನ ಮೊಮ್ಮಗಳೊಡನೆ ಮಾತನಾಡಬೇಕು. ದಿನಾ ಇಷ್ಟೇ ಹೊತ್ತಿಗೆ ಫೋನ್‌ ಮಾಡುತ್ತಿದ್ದಳು. ಇಂದು ಮಾಡಿಲ್ಲ ಎಂದು ಚಡಪಡಿಸುತ್ತಿದ್ದರು. ನಾವು ಥೆರಪಿಗೆ ಹೋಗಿದ್ದ ಕಾರಣ, ಜೋಯಾನ ಅವರನ್ನು ಸಮಾಧಾನ ಪಡಿಸಿ, ಅವರಿಗಿಷ್ಟವಾದ ಹಾಡುಗಳನ್ನು ನುಡಿಸಿ ಹಾಡಲಾರಂಭಿಸಿದೆವು. ಯಾವುದೋ ಲೋಕದಲ್ಲಿರುವ ಹಾಗೆ ಅವರು ಐದು ನಿಮಿಷದಲ್ಲಿ ಚಡಪಡಿಕೆ ಎಲ್ಲವನ್ನು ಮರೆತು ಮಗುವಿನಂತೆ ಮುಗ್ಧತೆಯನ್ನು ತೋರುತ್ತ ನಮ್ಮೆದುರಿಗೆ ಕುಳಿತರು. ಹಾಡಿದ ಹಾಡು ಅವರನ್ನು ಅವರ ಹಳೆಯ ಜೀವನಕ್ಕೆ ಕರೆದುಕೊಂಡು ಹೋಗಿತ್ತು. ಕೆಲವು ಹಾಡುಗಳನ್ನು ಕೇಳಿ ನಕ್ಕರು. ಇನ್ನು ಕೆಲವಕ್ಕೆ ಜೋರಾಗಿ ಅತ್ತರು. ಇಷ್ಟಾಗುವಷ್ಟರಲ್ಲಿ ಅವರು ಮೆಲ್ಲನೆ ನಿದ್ದೆಗೆ ಜಾರಿದ್ದರು. ಮಗುವಿನಂತೆ ನಿದ್ದೆಯಲ್ಲಿ ನಗುತ್ತಿದ್ದರು. ನಿದ್ದೆಯಲ್ಲಿ ತನ್ನ ಕನಸನ್ನು ಬಾಯಿಬಿಟ್ಟು ಹೇಳತೊಡಗಿದ್ದರು. ಇನ್ನೇನು ಹೊರಡಬೇಕು ಎಂದುಕೊಂಡಿದ್ದ ನಾವು ಅವರ‌ ಕಥೆ ಕೇಳ್ಳೋಣ ಎಂದು ನಿಂತೆವು. ಅವರು ಹಾಡಿನ ಕೆಲವು ಸಾಲುಗಳನ್ನು ಹೇಳಿದರು, ತನ್ನ ಇನಿಯನ ನೆನಪು ಕೂಡ ಮಾಡಿಕೊಂಡರು. ಸಂಗೀತದ ಮಾಯೆ ಎಂದರೆ ಏನು? ಬದುಕಬೇಕೆಂಬ ಆತುರದಲ್ಲಿ ಎಲ್ಲೋ ಕಳೆದು ಹೋಗಿದ್ದ, ನಮ್ಮಲ್ಲೇ ಅಡಗಿಕೊಂಡ ಬಾಲ್ಯವನ್ನು, ಬಾಲಿಶತನವನ್ನು ಎಚ್ಚರಿಸುವುದೇ…?

ಸ್ಫೂರ್ತಿ,  ತಸ್ಮೇನಿಯಾ

ಟಾಪ್ ನ್ಯೂಸ್

ಹೆಂಡತಿ ಮನೆ ಮಾರಾಟ ಮಾಡಲು ಒಪ್ಪುತ್ತಿಲ್ಲವೆಂದು ಗಂಡ ಸೇರಿ ಐವರಿಂದ ಹಲ್ಲೆ : ಆರೋಪಿಗಳ ಬಂಧನ

ಮನೆ ಮಾರಾಟಕ್ಕೆ ಒಪ್ಪುದ ಮಹಿಳೆ : ಗಂಡ ಸೇರಿ ಐವರಿಂದ ಹಲ್ಲೆ ; ಆರೋಪಿಗಳು ಪೋಲೀಸರ ವಶಕ್ಕೆ

dhghfhgfgffdf

ಡಬಲ್ ಇಂಜಿನ್ ಸರ್ಕಾರದಿಂದ  ಕಲಬುರಗಿ ಜಿಲ್ಲೆಗೆ ಡಬಲ್ ದೋಖಾ : ಪ್ರಿಯಾಂಕ್ ಖರ್ಗೆ

ಟೋಕಿಯೊ ಒಲಿಂಪಿಕ್ಸ್; ಕುಸ್ತಿ ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ ದಹಿಯಾ, ಫೈನಲ್ ಗೆ ಲಗ್ಗೆ

ಟೋಕಿಯೊ ಒಲಿಂಪಿಕ್ಸ್; ಕುಸ್ತಿ ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ ದಹಿಯಾ, ಫೈನಲ್ ಗೆ ಲಗ್ಗೆ

ಸಂಪುಟ ರಚನೆ: ಕಲ್ಯಾಣ ಕರ್ನಾಟಕ ಮತ್ತೆ ಕಡೆಗಣನೆ

ಸಂಪುಟ ರಚನೆ: ಕಲ್ಯಾಣ ಕರ್ನಾಟಕ ಮತ್ತೆ ಕಡೆಗಣನೆ

ಉಡುಪಿ : ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿ ದುಡ್ಡು ಕಳೆದುಕೊಂಡ ಪ್ರೊಫೆಸ್ಸರ್

ಉಡುಪಿ : ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿ ದುಡ್ಡು ಕಳೆದುಕೊಂಡ ಪ್ರೊಫೆಸರ್

Cabinet expansion Of Karnataka

ಬೊಮ್ಮಾಯಿ ಸಂಪುಟ ರಚನೆ : 29 ಮಂದಿ ಸಚಿವರಾಗಿ ಪ್ರಮಾಣ

ಬೊಮ್ಮಾಯಿ ಸಂಪುಟದಲ್ಲೂ ಯಾದಗಿರಿ ಜಿಲ್ಲೆ ಮತ್ತೆ ಕಡೆಗಣನೆ : ಕಾರ್ಯಕರ್ತರಿಗೆ ನಿರಾಸೆ

ಬೊಮ್ಮಾಯಿ ಸಂಪುಟದಲ್ಲೂ ಯಾದಗಿರಿ ಜಿಲ್ಲೆ ಮತ್ತೆ ಕಡೆಗಣನೆ : ಕಾರ್ಯಕರ್ತರಿಗೆ ನಿರಾಸೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ಮುಕುಟಕ್ಕೆ ಶಾಂತಿ, ನೆಮ್ಮದಿ, ಅಭಿವೃದ್ಧಿಯ ಮಣಿ 

ದೇಶದ ಮುಕುಟಕ್ಕೆ ಶಾಂತಿ, ನೆಮ್ಮದಿ, ಅಭಿವೃದ್ಧಿಯ ಮಣಿ 

Untitled-2

ಆಕಾಶ ಅವಕಾಶ: ಕೆಎಸ್‌ಆರ್‌ಪಿ; 250 ಹುದ್ದೆ

Untitled-2

ಸಹಕಾರ ಚಳವಳಿಯ ಹರಿಕಾರ ಮೊಳಹಳ್ಳಿ ಶಿವರಾವ್‌

ನೀವು ಯಾರಿಗಾದರೂ ಧನ್ಯವಾದ ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ…

ನೀವು ಯಾರಿಗಾದರೂ ಧನ್ಯವಾದ ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ…

Untitled-1

ಸುಲಭ ಪಾವತಿ, ಸಬ್ಸಿಡಿ ನೀಡಿಕೆಗೆ ಬಂದಿದೆ ಇ-ರುಪೀ

MUST WATCH

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

udayavani youtube

50000 ರೂಪಾಯಿ ಕೊಡಿ, JOB ಕೊಡ್ತಿನಿ?

udayavani youtube

ಆಕ್ಟಿಂಗ್ ಎಲ್ಲಾ ನಿನಗೆ ಯಾಕೆ ಬೇರೆ ಒಳ್ಳೆಯ ಕೆಲಸ ಮಾಡು ಅಂದಿದ್ರು : ರಾಕೇಶ್ ಪೂಜಾರಿ

udayavani youtube

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ರಸ್ತೆ ಬಂದ್ ಮಾಡಿದರೂ ಜನ ಕ್ಯಾರೇ ಎನ್ನಲ್ಲ

udayavani youtube

ಕಿರುಕುಳ ನೀಡಲು ಮುಂದಾದ ವ್ಯಕ್ತಿಯ ಸ್ಕೂಟರ್ ಚರಂಡಿಗೆಸೆದ ಮಹಿಳೆ

ಹೊಸ ಸೇರ್ಪಡೆ

Tumkuru News

ಮಹಿಳೆ ಮೇಲೆ ಗಂಡ ಸೇರಿದಂತೆ ಐವರಿಂದ ಹಲ್ಲೆ: ಸಿ ಎಸ್ ಪುರ ಪೋಲಿಸರಿಂದ  5 ಜನರ ಬಂಧನ

kempegowda-international-airport

ಕೋವಿಡ್‌ 3ನೇ ಅಲೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ

Goa Cogress News

ಇಂದು ಗೋವಾಗೆ ದಿನೇಶ್ ಗುಂಡೂರಾವ್ : ನಾಳೆ ಕಾರ್ಯಕರ್ತರೊಂದಿಗೆ ಚರ್ಚೆ  

Ramanagar-Covid

ಕೋವಿಡ್‌ 3ನೇ ಅಲೆ: ಜನರ ನಿರ್ಲಕ್ಷ್ಯ

ಹೆಂಡತಿ ಮನೆ ಮಾರಾಟ ಮಾಡಲು ಒಪ್ಪುತ್ತಿಲ್ಲವೆಂದು ಗಂಡ ಸೇರಿ ಐವರಿಂದ ಹಲ್ಲೆ : ಆರೋಪಿಗಳ ಬಂಧನ

ಮನೆ ಮಾರಾಟಕ್ಕೆ ಒಪ್ಪುದ ಮಹಿಳೆ : ಗಂಡ ಸೇರಿ ಐವರಿಂದ ಹಲ್ಲೆ ; ಆರೋಪಿಗಳು ಪೋಲೀಸರ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.